ರಕ್ಷಣಾ ಮಂತ್ರಿ ಕಚೇರಿಯ ಟ್ವೀಟ್ನಲ್ಲಿ, ರಕ್ಷಣಾ ಸಚಿವಾಲಯವು ಮಾರ್ಚ್ 30, 2023 ರಂದು 19,600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತೀಯ ನೌಕಾಪಡೆಗೆ 11 ಅತ್ಯಾಧುನಿಕ ಕರಾವಳಿ ಗಸ್ತು ಹಡಗುಗಳು ಮತ್ತು 6 ಅತ್ಯಾಧುನಿಕ ಕ್ಷಿಪಣಿ ಹಡಗುಗಳನ್ನು ಹೊಂದಲು ರಕ್ಷಣಾ ಸಚಿವಾಲಯವು ಭಾರತೀಯ ಹಡಗು ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ತಿಳಿಸಿದೆ.
ರಕ್ಷಣಾ ಮಂತ್ರಿಯವರ ಕಚೇರಿಯ ಟ್ವೀಟ್ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿರುವರು:
"ಇದು ಭಾರತೀಯ ನೌಕಾಪಡೆಯನ್ನು ಬಲಪಡಿಸುತ್ತದೆ ಮತ್ತು ನಮ್ಮ ಆತ್ಮನಿರ್ಭರದ ನಮ್ಮ ಧ್ಯೇಯದೆಡೆಗೆ ವೇಗವನ್ನು ನೀಡುತ್ತದೆ"
This will strengthen the Indian Navy and add momentum to our aim of Aatmanirbharta. https://t.co/MRETNEWhjI
— Narendra Modi (@narendramodi) March 31, 2023


