ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಾಮಾನ್ಯ ಮನುಷ್ಯರಾಗಿದ್ದಾರೆ ಮತ್ತು ಸರಳ ಕುಟುಂಬದಿಂದ ಬಂದಿದ್ದಾರೆ. ಅವರು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಗಳಿಸಿರುವ ಕೀರ್ತಿ ಪ್ರತಿಯೊಬ್ಬ ಜನ ಸಾಮಾನ್ಯರಿಗೂ, ಮುಖ್ಯವಾಗಿ ಮಧ್ಯಮ ವರ್ಗದ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಯಾರಿಗೆ ತಮ್ಮ ವಂಶಾವಳಿ ಖ್ಯಾತಿಯ ಬೆಂಬಲವಿಲ್ಲವೋ, ಯಾರು ತಮ್ಮ ಸ್ವಂತ ಪ್ರತಿಭೆಯಿಂದ ಮತ್ತು ಪರಿಶ್ರಮದಿಂದ ಜೀವನದಲ್ಲಿ ಉತ್ತಮ ಸ್ಥಾನ ತಲುಪಿದ್ದಾರೋ, ಅವರೆಲ್ಲರೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಲ್ಲಿ ತಮ್ಮ ಪ್ರತಿಬಿಂಬವನ್ನು ಕಾಣುತ್ತಿದ್ದಾರೆ. ಅವರು ಅಸಮಾನ್ಯ ಸಾಧನೆಗಳನ್ನು ಮಾಡಿ ತೋರಿಸುವು ಒಂದು ದೀರ್ಘ ಪ್ರಯಾಣ ಹೊರಟಿರುವ ಸಾಮಾನ್ಯ ವ್ಯಕ್ತಿಯಾಗಿದ್ದಾರೆ: ಇದೇ ರೀತಿಯಲ್ಲಿ ಕೋಟಿಗಟ್ಟಲೆ ಜನರು ಒಂದು ಪರೀಕ್ಷೆ ಪಾಸಾದಲ್ಲಿ ಜೀವನದಲ್ಲಿ ತಮಗೆ ಸಿಗುವ ಎಲ್ಲಾ ಅವಕಾಶಗಳನ್ನೂ ಬಾಚಿಕೊಳ್ಳಬಹುದಾಗಿದೆ.
ಸಾರ್ವಜನಿಕ ಅಥವಾ ಖಾಸಗಿ ರಂಗದ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಧ್ಯಮ ವರ್ಗದವರಾಗಿರಲಿ ಅಥವಾ ಸ್ವಂತ ಉದ್ಯೋಗ ನಡೆಸುತ್ತಿರುವ ಮಹಿಳೆಯಾಗಿರಲಿ, ಇಂದು ಅವರುಗಳು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಸವಾಲುಗಳು ಕಡಿಮೆಯಾಗಿವೆ. ಈ ಹಿಂದೆ ಮಹಿಲೆಯರು ತಮ್ಮ ಸಾಮಾಜಿಕ ಆರ್ಥಿಕ ಸ್ಥಾನ-ಮಾನಗಳಿಗೆ ಅನುಗುಣವಾಗಿ ತಮ್ಮ ಆಸೆ-ಆಕಾಂಕ್ಷೆಗಳನ್ನು ಸೀಮಿತಗೊಳಿಸುತ್ತಿದ್ದರು. ಎಷ್ಟೆಂದರೂ, ಉನ್ನತ ಸ್ಥಾನ ತಲುಪುವುದಕ್ಕಾಗಿ ಲಂಚ ನೀಡಬೇಕಾಗುತ್ತದೆ ಎಂಬ ಅಘೋಷಿತ ಡೀಲ್ ಗಳಿದ್ದವು ಮತ್ತು ಬೃಷ್ಠಾಚಾರ ಅಧಿಕವಾಗಿತ್ತು.ಈಗ ಇಂತಹ ಎಲ್ಲಾ ಸಂಕಷ್ಟಗಳು ದೂರವಾಗಿವೆ ಹಾಗೂ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ವಿಯಾಗುವುದಕ್ಕೆ ಯಾವುದೇ ಅಡ್ಡಿಗಳಿಲ್ಲವಾಗಿದೆ.
ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸುವುದು, ರಿಯಲ್ ಎಸ್ಟೇಟ್ (ನಿಯಮಾವಳಿ ಮತ್ತು ಅಭಿವೃದ್ಧಿ) ಕಾಯಿದೆ 2016 ಹಾಗೂ ದಿವಾಳಿತನ ಮತ್ತು ಬ್ಯಾಂಕ್ ರಪ್ಟ್ ಸೀ ನೀತಿ ಸಂಹಿತೆ 2016 ಅನುಷ್ಠಾನಗೊಳಿಸಿರುವ ಕಾರಣದಿಂದಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆ ಸಂಸ್ಕೃತಿಯನ್ನು ದೇಶದಲ್ಲಿ ಅನುಷ್ಠಾನಗೊಳಿಸಲು ಪ್ರಧಾನಮಂತ್ರಿಯವರು ಧೃಡ ಸಂಕಲ್ಪ ಮಾಡಿದ್ದಾರೆ. ಇದರಿಂದಾಗಿ ವಿದ್ಯುಚ್ಛಕ್ತಿ ಕನೆಕ್ಷನ್ ಮತ್ತು ನೀರಿನ ಕನೆಕ್ಷನ್ ಪಡೆಯುವುದಕ್ಕಾಗಿ ಲಂಚ ನೀಡದೆಯೇ ಹಾಗೂ ಯಾವುದೇ ಕಿರಿಕಿರಿ ಇಲ್ಲದೆಯೇ ಕ್ಲೀಯರೆನ್ಸ್ ಗಳು ಮತ್ತು ಅನುಮತಿಗಳನ್ನು ಪಡೆಯುವುದು ಸಾಧ್ಯವಾಗಿದೆ. ಈ ಕಾರ್ಯಗಳನ್ನು ಇನ್ನಷ್ಟು ಸರಳಗೊಳಿಸುವುದಕ್ಕಾಗಿ ಹಿಂದಿನ ವ್ಯವಸ್ಥೆಯನ್ನು ತೆಗೆದು ಹಾಕಿ ಸಿಂಗಲ್ ವಿಂಡೋ ಆಟೋಮೇಟೆಡ್ ಸಿಸ್ಟಮ್ ಗಳನ್ನು ಜಾರಿಗೆ ತರಲಾಯಿತು. ಮಾನವರ ಕನಿಷ್ಠ ಹಸ್ತಕ್ಷೇಪ ಮತ್ತು ಗರಿಷ್ಠ ಟೆಕ್ನಾಲಜಿ ಉಪಯೋಗದ ಕಾರಣದಿಂದಾಗಿ ಭಾರತ ನಿರ್ಮಾಣದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಪಾರದರ್ಶಕತೆ ತರುವುದು ಸಾಧ್ಯವಾಗಿದೆ.
ದಶಕಗಳ ವರೆಗೆ ಭಾರತ ಯುಪಿಎ ಅಧಿಕಾರ ಅವಧಿಯಲ್ಲಿ ಬೃಷ್ಟಾಚಾರ, ಹಗರಣಗಳು, ಹಣದ ದುರುಪಯೋಗ, ಹಾಗೂ ಸಂಪತ್ತುಗಳ ವಿತರಣೆಯಲ್ಲಿ ಪಕ್ಷಪಾತಗಳನ್ನು ಕಂಡಿತು. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತವನ್ನು ತಾತ್ಸಾರ ಭಾವನೆಯಿಂದ ನೋಡುವುದು ಪ್ರಾರಂಭವಾಯಿತು. ಕಳೆದ 5 ವರ್ಷಗಳಲ್ಲಿ ವಿದೇಶಗಳಲ್ಲಿ ಭಾರತ ಘನತೆ ಮತ್ತು ಪ್ರತಿಷ್ಟೆಗಳಿಗೆ ಗೌರವ ಸಿಗುವ ರೀತಿಯಲ್ಲಿ ಪರಿಸ್ಥಿತಿ ಬದಲಾಯಿಸಲಾಗಿದೆ. ಪ್ರಧಾನಮಂತ್ರಿಯವರು ಭಾರತದ ಜಾಗತಿಕ ರಾಯಭಾರಿಯಾಗಿ ಪಾತ್ರ ವಹಿಸಿದರು. ವಿದೇಶಿಯರು ಮತ್ತು ವಿದೇಶಗಳಲ್ಲಿರುವ ಭಾರತೀಯರು ಕೂಡಾ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು ಮತ್ತು ಅವರ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿದರು. 2018 ರಲ್ಲಿ ದೇವೋಸ್ ನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಶ್ರೀ ನರೇಂದ್ರ ಮೋದಿಯವರು ಹಿಂದಿಯಲ್ಲಿ ಭಾಷಣ ನೀಡಿದರು. ಅವರು ಹಿಂದಿಯನ್ನು ವಿಶ್ವಕ್ಕೆ ಕೊಂಡೊಯ್ದರು. ವಿಶ್ವದ ಅರ್ಥಶಾಸ್ತ್ರಜ್ಞರೊಂದಿಗೆ ಹಿಂದಿಯಲ್ಲಿ ಮಾತನಾಡಿದರು. ಇದೇ ಸಭೆಯಲ್ಲಿ ಅವರು ನಾಗರಿಕತೆಗೆ ಉಂಟಾಗಿರುವ ಮೂರು ಇತಿ ದೊಡ್ಡ ಭೀತಿಯ ಬಗ್ಗೆ ಹೇಳಿದರು. ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ಜಾಗತೀಕರಣಗಳಿಂದ ಉಂಟಾಗಿರುವ ದುಷ್ಪರಿಣಾಮಗಳನ್ನು ತಕ್ಷಣವೇ ಸರಿಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ CRPF ಸೈನಿಕರ ಮೇಲೆ ಭಯೋತ್ಪಾದಕರು ಮಾಡಿರುವ ದಾಳಿಯ ವಿರುದ್ಧ ಭಾರತಕ್ಕೆ ಹಿಂದೆಂದೂ ಕಂಡಿರದ ಜಾಗತಿಕ ಮತ್ತು ರಾಜತಾಂತ್ರಿಕ ಬೆಂಬಲ ದೊರಕಿತು. ಭಯೋತ್ಪಾದನೆ ವಿರುದ್ಧ ಜಾಗತಿಕ ಮುಖಂಡರು ಭಾರತದ ಜೊತೆಗೆ ಪ್ರಬಲವಾಗಿ ನಿಂತುಕೊಂಡರು. ಪುಲ್ವಾಮಾದಲ್ಲಿ ಮೃತರಾದ ಸೈನಿಕರಿಗಾಗಿ ವಿಶ್ವದಾದ್ಯಂತ ಅನೇಕ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಭಾರತ ಉತ್ತಮ ಆಡಳಿತದ ಹೊಸ ಆಶಾಕಿರಣ ಮತ್ತು ಪ್ರಬಲ ಮುಖಂಡತ್ವಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ. ಇಂದು ಭಾರತದ ಮಧ್ಯಮ ವರ್ಗದವರು ಜಾಗತಿಕವಾಗಿ ಕನಸು ಕಾಣುವುದು ಸಾಧ್ಯವಾಗಿದೆ..ಏಕೆಂದರೆ, ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಾವು ಜಾಗತಿಕವಾಗಿ ಹೊಸ ಮುಖಂಡತ್ವವನ್ನು ಪಡೆದಿದ್ದೇವೆ. ಇವರು ಮಾಡುವ ಪ್ರತಿಯೊಂದು ಭಾ,ಣದಲ್ಲೂ ಕಾಷ್ಟ್ರೀಯ ಸ್ಪೂರ್ತಿ ಎದ್ದು ಕಾಣುತ್ತಿದೆ. ಇದರಿಂದಾಗಿ ಇವರ ಭಾಷಣಗಳನ್ನು ಕೇಳುವ ಮತ್ತು ಸ್ವತಃ ಭೇಟಿ ಮಾಡಲು ಇಚ್ಛೆ ಹೊಂದಿರುವವರ ಸಂಖ್ಯೆ ಹೆಚ್ಚಿತು.
ವಿಶ್ವದ ಅತ್ಯಂತ ಪ್ರಾಚೀನ ನಗರ ವಾರಣಾಸಿ ಈ ಹಿಂದೆ ಕೇವಲ ದೇವಾಲಯ ಪಟ್ಟಣ ಎಂಬದಕ್ಕೆ ಮಾತ್ರವೇ ಖ್ಯಾತಿಯಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ ಮಾತ್ರವಲ್ಲದೇ, ಈ ನಗರವನ್ನು ಉಜ್ಜೀವನಗೊಳಿಸುತ್ತಾ ಮತ್ತೆ ಇದನ್ನು ಜಾಗತಿಕ ನಕಾಶೆಯಲ್ಲಿ ಬರುವಂತೆ ಮಾಡಲು ವಾರಣಾಸಿಯಲ್ಲಿ ಅನೇಕ ಪ್ರೋಗ್ರಾಮ್ ಗಳನ್ನು ಪ್ರಾರಂಭಿಸುತ್ತಿದ್ದಾರೆ. ನಮಾಮಿ ಗಂಗೆ ಯೋಜನೆ ಅಡಿಯಲ್ಲಿ ಭಾರತದ ಪವಿತ್ರ ನದಿ ಗಂಗಾವನ್ನು ಸ್ವಚ್ಛ ಮಾಡಲಾಗುತ್ತಿದೆ. ಭಾರತದ ಸಾಂಸ್ಕೃತಿಕ ವೈಭವ ಮತ್ತು ಪರಂಪರೆಯ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುವುದಕ್ಕಾಗಿ ಜಾಗತಿಕ ಮುಖಂಡರನ್ನು ವಾರಣಾಸಿಗೆ ಕರೆ ತರಲು ಕೂಡಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ವೈಭವದಿಂದ ಆಚರಿಸಲಾಗುತ್ತಿದೆ. ರಾಮಾಯಣ ಪುರಾಣ ಪ್ರಕಾರ 14 ವರ್ಷ ಅರಣ್ಯವಾಸವನ್ನು ಪೂರ್ತಿಗೊಳಿಸಿದ ಬಳಿಕ ಭಗವಂತನಾದ ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಗೆ ಹಿಂತಿರುಗಿ ಬರುವ ಶುಭ ಸಂದರ್ಭಕ್ಕಾಗಿಯೇ ಈ ಹಬ್ಬವನ್ನು ಆಚರಿಸಲಾಗುತ್ತಿದೆ. 2019 ರಲ್ಲಿ ಪ್ರಯಾಗ್ ರಾಜ್ ನಲ್ಲಿ ಏರ್ಪಡಿಸಲಾಗಿದ್ದ ಕುಂಭ ಮೇಳದಲ್ಲಿ ಭಾಗವಹಿಸಲು ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಬಂದಿದ್ದರು ಹಾಗೂ ಈ ಜಾತ್ರೆ ಜಾಗತಿಕ ಖ್ಯಾತಿಯನ್ನು ಪಡೆದಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಮೇಳಕ್ಕೆ ಜನರು ಸೇರಿದ್ದರು ಎಂದು ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ಇದು ದಾಖಲಾಗಿದೆ. ಈ ದಿನದಂದು ದೇಶ ತನ್ನ ವೈಭವ ಮತ್ತು ಪರಂಪರೆಯನ್ನು ಅತ್ಯಂತ ಉತ್ಸಾಹದಿಂದ ಜಗತ್ತಿಗೆ ತೋರಿಸಿದೆ.
ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವಯಂ ಪ್ರೇರಿತ ವ್ಯಕ್ತಿಯಾಗಿದ್ದಾರೆ. ತಾವು ಅಧಿಕಾರಕ್ಕೆ ಬಂದ ತಕ್ಷಣವೇ ಎಲ್ಲಾ ವೈಪರೀತ್ಯಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಾ ಆತ್ಮವಿಶ್ವಾಸ ಮತ್ತು ಧೃಡ-ಸಂಕಲ್ಪಗಳಿಂದ ಎಲ್ಲವನ್ನೂ ಸಾಧಿಸಬಹುದಾಗಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.




