ಭಾರತದಲ್ಲಿ ಆಹಾರ ಬ್ಯಾಂಕ್ ಸಂಸ್ಥಾಪಕಿ ಸ್ನೇಹ ಮೋಹನ್ ದಾಸ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಮಹಿಳಾ ದಿನಾಚರಣೆಯಂದು ‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನದಲ್ಲಿ ಅವರು ತಮ್ಮ ಸ್ಫೂರ್ತಿದಾಯಕ ಜೀವನ ಕತೆಯನ್ನು ಎಲ್ಲರೊಂದಿಗೂ ಹಂಚಿಕೊಂಡರು. ತಾಯಿಯಿಂದ ಸ್ಫೂರ್ತಿ ಪಡೆದ ಅವರು, ನಿರ್ಗತಿಕರಿಗೆ ಆಹಾರ ನೀಡುವ ಹವ್ಯಾಸವನ್ನು ಬೆಳೆಸಿಕೊಂಡ ಸ್ನೇಹ, ಭಾರತ ಆಹಾರ ಬ್ಯಾಂಕ್ ಉಪಕ್ರಮವನ್ನು ಆರಂಭಿಸಿದರು.
ಸ್ನೇಹ ತಮ್ಮ ಸ್ವಯಂ ಸೇವಕರ ತಂಡದೊಂದಿಗೆ ಹಸಿವೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಭಾರತ -ಆಹಾರ ಬ್ಯಾಂಕ್ ಸುಮಾರು 20 ಶಾಖೆಗಳನ್ನು ಹೊಂದಿದ್ದು, ತಮ್ಮ ಕೆಲಸದ ಮೂಲಕ ಹಲವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಆಹಾರ ಬ್ಯಾಂಕ್ – ಭಾರತ ಸಂಘಟನೆಯಿಂದ ಸಾಮೂಹಿಕ ಅಡುಗೆ ಮಾಡುವುದು, ಅಡುಗೆ ಮ್ಯಾರಥಾನ್, ಎದೆಹಾಲು ಉಣಿಸುವ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಸ್ನೇಹ ಹೇಳಿದರು.
ನಾಗರಿಕರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಮುಂದೆ ಬಂದು ತಮ್ಮ ಜೊತೆ ಕೈಜೋಡಿಸಬೇಕು ಎಂದು ಸ್ನೇಹ ಆಗ್ರಹಿಸಿದರು. ಪ್ರತಿಯೊಬ್ಬರೂ ಕನಿಷ್ಠ ಅಗತ್ಯವಿರುವ ಒಬ್ಬರಿಗಾದರೂ ಆಹಾರವನ್ನು ನೀಡಬೇಕು ಮತ್ತು ಆ ಮೂಲಕ ಹಸಿವು ರಹಿತ ವಿಶ್ವವನ್ನು ನಿರ್ಮಿಸಲು ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
You heard of food for thought. Now, it is time for action and a better future for our poor.
— Narendra Modi (@narendramodi) March 8, 2020
Hello, I am @snehamohandoss. Inspired by my mother, who instilled the habit of feeding the homeless, I started this initiative called Foodbank India. #SheInspiresUs pic.twitter.com/yHBb3ZaI8n


