ಶೇರ್
 
Comments
2018 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ” ದ ಆರಂಭವಾಯಿತು. ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ತಲುಪಿತು : ಪ್ರಧಾನಿ ಮೋದಿ #MannKiBaat
ನಮ್ಮ ಉತ್ಸವಗಳು 'ವೈವಿಧ್ಯದಲ್ಲಿ ಏಕತೆ' ಯನ್ನು ಮತ್ತು 'ಏಕ ಭಾರತ, ಶ್ರೇಷ್ಠ ಭಾರತ' ವನ್ನು ಪ್ರತಿಬಿಂಬಿಸುತ್ತವೆ : ಪ್ರಧಾನಿ ಮೋದಿ #MannKiBaat
ಕಳೆದ ವರ್ಷ UNESCO ಕುಂಭ ಮೇಳವನ್ನು Intangible cultural ಹೆರಿಟೇಜ್ ಆಫ್ ಹ್ಯುಮಾನಿಟಿ ಯ ಸೂಚ್ಯಂಕದಲ್ಲಿ ಗುರುತಿಸಿದೆ. ಇದರ ಜಾಗತಿಕ ಮಹತ್ವದ ಅಂದಾಜನ್ನು ಇದರಿಂದಲೇ ತಿಳಿಯಬಹುದು : #MannKiBaat ನಲ್ಲಿ ಪ್ರಧಾನಿ ಮೋದಿ
ಕುಂಭ್ ಸ್ವತಃ ಸ್ವಭಾವದಲ್ಲಿದೆ. ಇದು ದೈವಿಕ ಮತ್ತು ಸುಂದರವಾಗಿರುತ್ತದೆ: ಪ್ರಧಾನಿ ಮೋದಿ#MannKiBaat
ಈ ಸಮಯದಲ್ಲಿ, ಪ್ರತಿ ಭಕ್ತರಿಗೆ ಸಂಗಮದ ಪವಿತ್ರ ಸ್ನಾನದ ನಂತರ ಅಕ್ಷಯ್ ವಟ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತದೆ: ಪ್ರಧಾನಿ ಮೋದಿ#MannKiBaat
ಪುಜ್ಯಾ ಬಾಪುವಿನ ದಕ್ಷಿಣ ಆಫ್ರಿಕಾದೊಂದಿಗೆ ಸಂಪರ್ಕ ಅನನ್ಯ . ಇದು ದಕ್ಷಿಣ ಆಫ್ರಿಕಾದಲ್ಲಿತ್ತು, ಅಲ್ಲಿ ಮೋಹನ್ 'ಮಹಾತ್ಮ' ಆಗಿದ್ದರು: ಪ್ರಧಾನಿ ಮೋದಿ#MannKiBaat
ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ಒಬ್ಬರ ಚರ್ಮದ ಬಣ್ಣವನ್ನು ಆಧರಿಸಿ ಅವರು ತಾರತಮ್ಯವನ್ನು ವಿರೋಧಿಸಿದರು : ಪ್ರಧಾನಿ#MannKiBaat
ಸರ್ದಾರ್ ಪಟೇಲ್ ಅವರ ಜೀವನವನ್ನು ಭಾರತವನ್ನು ಒಗ್ಗೂಡಿಸುವ ಕಡೆಗೆ ಸಮರ್ಪಿಸಿದರು. ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಮೀಸಲಿಟ್ಟಿದ್ದರು: ಪ್ರಧಾನಿ ಮೋದಿ #MannKiBaat
ಗುರು ಗೋಬಿಂದ್ ಸಿಂಗ್ ಜಿ ಅವರು ಪಾಟ್ನಾದಲ್ಲಿ ಜನಿಸಿದರು, ಅವರ ಕರ್ಮಭೂಮಿ ಉತ್ತರ ಭಾರತವಾಗಿದ್ದು, ಅವರು ಮಹಾರಾಷ್ಟ್ರದ ನಂದೇಡ್ನಲ್ಲಿ ಅವರ ಜೀವನವನ್ನು ತ್ಯಾಗ ಮಾಡಿದರು: #MannKiBaat ನಲ್ಲಿ ಪ್ರಧಾನಿ ಮೋದಿ
ಗುರು ಗೋಬಿಂದ್ ಸಿಂಗ್ ಜಿ ಶಾಂತರು ಆದರೆ ಬಡವರ ಮತ್ತು ದುರ್ಬಲರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸಿದಾಗ, ಗುರು ಗೋಬಿಂದ್ ಸಿಂಗ್ ಜಿ ತಮ್ಮ ಧ್ವನಿಯನ್ನು ಎತ್ತಿದರು ಮತ್ತು ಬಡವರ ಜೊತೆ ದೃಢವಾಗಿ ನಿಂತರು: #MannKiBaatನಲ್ಲಿ ಪ್ರಧಾನಿ ಮೋದಿ
ದುರ್ಬಲ ವರ್ಗಗಳ ಜನರಿಗೆ ಹೋರಾಡುವ ಮೂಲಕ ಬಲವನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಗುರು ಗೋಬಿಂದ್ ಸಿಂಗ್ ಜಿ ಯಾವಾಗಲೂ ಹೇಳಿದ್ದಾರೆ: #MannKiBaatನಲ್ಲಿ ಪ್ರಧಾನಿ ಮೋದಿ

ನನ್ನ ಪ್ರಿಯ ದೇಶ ಬಾಂಧವರೇ, ನಮಸ್ಕಾರ. 2018 ನೇ ವರ್ಷದ ಕೊನೆಯ ಘಟ್ಟದಲ್ಲಿದ್ದೇವೆ. 2019 ಕ್ಕೆ ಪ್ರವೇಶಿಸಲಿದ್ದೇವೆ. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಗತಿಸಿದ ವರ್ಷದ ವಿಚಾರಗಳ ಚರ್ಚೆಯಾಗುತ್ತದೆ. ಅದೇ ವೇಳೆ ಮುಂಬರುವ ವರ್ಷದ ಸಂಕಲ್ಪಗಳ ಚರ್ಚೆ ಕೂಡಾ ಕೇಳಿ ಬರುತ್ತದೆ. ಅದು ವೈಯಕ್ತಿಕ ಜೀವನವಾಗಿರಲಿ, ಸಾಮಾಜಿಕ ಇಲ್ಲವೆ ರಾಷ್ಟ್ರೀಯ ಜೀವನವಾಗಿರಲಿ, ಎಲ್ಲರಿಗೂ ಹಿಂದಿರುಗಿ ನೋಡಲೇಬೇಕಾಗುತ್ತದೆ ಮತ್ತು ಮುಂದೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರದೃಷ್ಟಿಯಿಟ್ಟು ನೋಡಲೂ ಬೇಕಾಗುತ್ತದೆ. ನೋಡುವ ಪ್ರಯತ್ನವನ್ನೂ ಮಾಡಬೇಕಾಗುತ್ತದೆ. ಆಗಲೇ ಅನುಭವದ ಲಾಭವಾಗುತ್ತದೆ ಅಲ್ಲದೆ ಹೊಸದನ್ನು ಮಾಡುವ ಆತ್ಮ ವಿಶ್ವಾಸವೂ ಹುಟ್ಟುತ್ತದೆ. ನಮ್ಮ ವೈಯಕ್ತಿಕ ಜೀವನದ ಬದಲಾವಣೆಗಾಗಿ ಜೊತೆ ಜೊತೆಗೆ ದೇಶವನ್ನು ಮತ್ತು ನಮ್ಮ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಾವು ಹೇಗೆ ಕೈಜೋಡಿಸಬಹುದು ಎಂಬುದನ್ನು ಚಿಂತಿಸಬೇಕು. ನಿಮ್ಮೆಲ್ಲರಿಗೂ 2019 ರ ಶುಭಾಶಯಗಳು. ನೀವೆಲ್ಲರೂ 2018 ನೇ ವರ್ಷವನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಆಲೋಚಿಸಿರಬಹುದು. ಭಾರತ ಒಂದು ದೇಶವಾಗಿ, ತನ್ನ 130 ಕೋಟಿ ಜನತೆಯ ಸಾಮರ್ಥ್ಯ ರೂಪದಲ್ಲಿ, ಹೇಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ? ಇದನ್ನು ನೆನೆಯುವುದು ಕೂಡಾ ಮಹತ್ವಪೂರ್ಣ ಅಂಶವಾಗಿದೆ ಹಾಗೂ ನಾವೆಲ್ಲರೂ ಗೌರವ ಪಡುವ ವಿಷಯವಾಗಿದೆ.

2018 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮೆ ಯೋಜನೆ “ಆಯುಷ್ಮಾನ್ ಭಾರತ” ದ ಆರಂಭವಾಯಿತು. ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ತಲುಪಿತು. ಭಾರತ ದಾಖಲೆ ಪ್ರಮಾಣದಲ್ಲಿ ದೇಶವನ್ನು ಬಡತನ ಮುಕ್ತಗೊಳಿಸುವತ್ತ ದಾಪುಗಾಲಿಟ್ಟಿದೆ ಎಂದು ವಿಶ್ವದ ಪ್ರತಿಷ್ಠಿತ ಸಂಸ್ಥೆಗಳು ಮನ್ನಣೆ ನೀಡಿವೆ. ದೇಶಬಾಂಧವರ ಸಂಕಲ್ಪದಿಂದಾಗಿ ಸ್ವಚ್ಛತಾ ಆಂದೋಲನದ ವ್ಯಾಪ್ತಿ ಶೇಕಡಾ 95 ನ್ನೂ ದಾಟಿ ಮುಂದೆ ಸಾಗಿದೆ.

ಸ್ವಾತಂತ್ರ್ಯಾ ನಂತರ ಕೆಂಪು ಕೋಟೆಯಿಂದ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ 75 ನೇ ವರ್ಷಾಚರಣೆ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ದೇಶವನ್ನು ಏಕತೆಯ ಸೂತ್ರದಲ್ಲಿ ಪೋಣಿಸಿದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ವಿಶ್ವದ ಅತ್ಯಂತ ಎತ್ತರವಾದ ‘ಸ್ಟ್ಯಾಚ್ಯೂ ಆಫ್ ಯುನಿಟಿ’ ಸನ್ಮಾನಪೂರ್ವಕವಾಗಿ ದೇಶಕ್ಕೆ ಸಮರ್ಪಿಸಲಾಯಿತು. ವಿಶ್ವದಲ್ಲಿ ದೇಶದ ಹೆಸರು ಉತ್ತುಂಗಕ್ಕೇರಿತು. ದೇಶಕ್ಕೆ ಸಂಯುಕ್ತ ರಾಷ್ಟ್ರದ ಸರ್ವೊಚ್ಚ ಪರಿಸರ ಸನ್ಮಾನ ‘ಚಾಂಪಿಯನ್ಸ್ ಆಫ್ ದಿ ಅರ್ತ್ ಅವಾರ್ಡ್ಸ್’ ನೀಡಿ ಸನ್ಮಾನಿಸಲಾಯಿತು. ಸೌರ ಶಕ್ತಿ ಮತ್ತು ಹವಾಮಾನ ಬದಲಾವಣೆಯಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವದಲ್ಲಿ ಸ್ಥಾನ ದೊರೆಯುವಂತಾಯಿತು. ಭಾರತದಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದದ ಮೊದಲ ಮಹಾಸಭೆ ‘ಇಂಟರ್ನ್ಯಾ ಶನಲ್ ಸೋಲಾರ್ ಅಲೈನ್ಸ್’ ಆಯೋಜಿಸಲಾಯಿತು. ನಮ್ಮ ದೇಶದಲ್ಲಿ ಈಸ್ ಆಫ್ ಡುಯಿಂಗ್ ಬಿಸಿನೆಸ್ ರಾಂಕಿಂಗ್ (ವ್ಯಾಪಾರ ಕೈಗೊಳ್ಳುವಲ್ಲಿ ಸರಳತೆ) ನಲ್ಲಿ ಸಾಕಷ್ಟು ಮಹತ್ವದ ಸುಧಾರಣೆ ಯಾಗಿರುವುದು ಎಲ್ಲರ ಸಾಮೂಹಿಕ ಪ್ರಯತ್ನದಿಂದಲೇ. ದೇಶದ ಸುರಕ್ಷಾ ವ್ಯವಸ್ಥೆ ಗೆ ಇನ್ನಷ್ಟು ಪುಷ್ಟಿ ದೊರೆತಿದೆ. ಇದೇ ವರ್ಷ ನಮ್ಮ ದೇಶ ಸಫಲವಾಗಿ ನ್ಯುಕ್ಲಿಯರ್ ಟ್ರಯಾಡ್ ಪೂರ್ತಿಗೊಳಿಸಿದೆ. ಅಂದರೆ ಈಗ ನಾವು ನೆಲ, ಜಲ, ಆಕಾಶ ಮೂರರಲ್ಲೂ ಪರಮಾಣು ಶಕ್ತಿ ಸಂಪನ್ನರಾಗಿದ್ದೇವೆ. ದೇಶದ ಹೆಣ್ಣು ಮಕ್ಕಳು ನಾವಿಕಾ ಸಾಗರ ಪರಿಕ್ರಮಾ ಮೂಲಕ ಸಂಪೂರ್ಣ ವಿಶ್ವದ ಪರ್ಯಟನೆ ಮಾಡಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ.

ವಾರಣಾಸಿಯಲ್ಲಿ ಭಾರತದ ಮೊದಲ ಜಲಮಾರ್ಗವನ್ನು ಆರಂಭಿಸಲಾಯಿತು. ಇದರಿಂದ ವಾಟರ್ ವೇಸ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದಂತಾಯಿತು. ದೇಶದ ಅತ್ಯಂತ ದೊಡ್ಡ ರೇಲ್ ರೋಡ್ ಸೇತುವೆ ಬೋಗಿಬೀಲ್ ಬ್ರಿಜ್ ನ್ನು ಲೋಕಾರ್ಪಣೆ ಮಾಡಲಾಯಿತು. ಸಿಕ್ಕಿಂನ ಮೊದಲ ಮತ್ತು ದೇಶದ 100 ನೇ ಏರ್ಪೋ ರ್ಟ್ ಪಾಕ್ಯೋಂಗ್ ಆರಂಭಿಸಲಾಯಿತು.

19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಮತ್ತು ವಿಶ್ವಕಪ್ ಬ್ಲೈಂಡ್ ಕ್ರಿಕೆಟ್ ನಲ್ಲಿ ಭಾರತ ಜಯ ಸಾಧಿಸಿತು. ಈ ಬಾರಿ ಏಷ್ಯನ್ ಗೇಮ್ಸ್ ಗಳಲ್ಲಿ ಭಾರತ ಬಹು ದೊಡ್ಡ ಸಂಖ್ಯೆಯಲ್ಲಿ ಪದಕಗಳನ್ನು ಗಳಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ ಗಳಲ್ಲಿ ಕೂಡಾ ಭಾರತ ಉತ್ತಮ ಪ್ರದರ್ಶನ ನೀಡಿದೆ. ಅಂದ ಹಾಗೆ ನಾನು ಭಾರತೀಯರ ಸಾಧನೆಯ, ನಮ್ಮ ಸಾಮೂಹಿಕ ಪ್ರಯತ್ನಗಳ ಸಂಗತಿಗಳನ್ನು ಹೇಳುತ್ತಾ ಹೋದರೆ ನಮ್ಮ ಮನದ ಮಾತು ಸುದೀರ್ಘ ಸಮಯದವರೆಗೂ ಮುಂದುವರೆಯುತ್ತದೆ ಎಂದರೆ ಬಹುಶಃ 2019 ಬಂದೇ ಬಿಡುತ್ತದೆ. ಇದೆಲ್ಲವೂ 130 ಕೋಟಿ ದೇಶ ಬಾಂಧವರ ನಿರಂತರ ಪ್ರಯತ್ನದಿಂದಲೇ ಸಾಧ್ಯವಾಗಿದೆ. 2019 ರಲ್ಲೂ ಭಾರತದ ಪ್ರಗತಿ ಮತ್ತು ಉನ್ನತಿಯ ಈ ಯಾತ್ರೆ ಹೀಗೆ ಮುಂದುವರಿಯಲಿದೆ ಮತ್ತು ನಮ್ಮ ದೇಶ ಸದೃಢವಾಗಿ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂಬ ಭರವಸೆ ನನಗಿದೆ.

ಪ್ರಿಯ ದೇಶಬಾಂಧವರೆ, ಈ ಡಿಸೆಂಬರ್ ನಲ್ಲಿ ಕೆಲವರು ಗಣ್ಯರನ್ನು ಕಳೆದುಕೊಂಡಿದ್ದೇವೆ. ಡಿಸೆಂಬರ್ 19 ರಂದು ಚೆನ್ನೈ ನ ಡಾಕ್ಟರ್ ಜಯಾಚಂದ್ರನ್ ಅವರನ್ನು ಕಳೆದುಕೊಂಡೆವು. ಡಾಕ್ಟರ್ ಜಯಾಚಂದ್ರನ್ ಅವರನ್ನು ಜನರು “ಮಕ್ಕಳ್ ಮಾರುಥುವರ್” ಎಂದು ಕರೆಯುತ್ತಿದ್ದರು. ಏಕೆಂದರೆ ಅವರು ಜನರ ಮನದಲ್ಲಿ ನೆಲೆ ನಿಂತಿದ್ದರು. ಡಾಕ್ಟರ್ ಜಯಚಂದ್ರ ಅವರು ಬಡ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧೋಪಚಾರ ದೊರೆಯುವಂತೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದರು. ಅವರು ಜನರ ಶುಶ್ರೂಷೆಗೆ ಎಂದಿಗೂ ಸಿದ್ಧರಾಗಿರುತ್ತಿದ್ದರು ಎಂದು ಜನರು ಹೇಳುತ್ತಾರೆ. ತಮ್ಮ ಬಳಿ ತಪಾಸಣೆಗೆ ಬರುವ ವೃದ್ಧರಿಗೆ ಅವರು ಹೋಗಿ ಬರುವ ಖರ್ಚು ಕೂಡಾ ನೀಡುತ್ತಿದ್ದರಂತೆ. ನಾನು ದಿ ಬೆಟರ್ ಇಂಡಿಯಾ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಸಮಾಜಕ್ಕೆ ಪ್ರೇರಣೆ ನೀಡುವಂತಹ ಅನೇಕ ಇಂಥ ಕೆಲಸಗಳ ಬಗ್ಗೆ ಓದಿದ್ದೇನೆ. ಹೀಗೆಯೇ ಡಿಸೆಂಬರ್ 25 ರಂದು ಸೂಲಗಿತ್ತಿ ನರಸಮ್ಮ ನಿಧನರಾದ ಸುದ್ದಿ ತಿಳಿಯಿತು. ಸೂಲಗಿತ್ತಿ ನರಸಮ್ಮ ಗರ್ಭವತಿ ಮಾತೆಯರಿಗೆ – ಅಕ್ಕ ತಂಗಿಯರಿಗೆ ಪ್ರಸವ ಸಮಯದಲ್ಲಿ ಸಹಾಯ ಮಾಡುತ್ತಿದ್ದಳು. ಅವಳು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ದುರ್ಗಮ ಮಾರ್ಗದ ಗ್ರಾಮಗಳಲ್ಲಿ ಸಾವಿರಾರು ಮಾತೆಯರಿಗೆ – ಅಕ್ಕ ತಂಗಿಯರಿಗೆ ತನ್ನ ಸೇವೆಯನ್ನು ಒದಗಿಸಿದ್ದಾರೆ. ಈ ವರ್ಷಾರಂಭದಲ್ಲಿ ಅವರನ್ನು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಡಾಕ್ಟರ್ ಜಯಾಚಂದ್ರನ್ ಮತ್ತು ಸೂಲಗಿತ್ತಿ ನರಸಮ್ಮ ಅವರಂತಹ ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಹಳಷ್ಟು ಪ್ರೇರಣೆಯನ್ನು ನೀಡುವ ವ್ಯಕ್ತಿತ್ವಗಳಿವೆ. ನಾವು ಆರೋಗ್ಯ ರಕ್ಷಣೆ ಕುರಿತು ಮಾತನಾಡುತಿರುವಾಗ ಉತ್ತರ ಪ್ರದೇಶದ ಬಿಜನೌರ್ ನಲ್ಲಿ ವೈದ್ಯರ ಸಾಮಾಜಿಕ ಪ್ರಯತ್ನದ ಕುರಿತು ಹೇಳ ಬಯಸುತ್ತೇನೆ. ನಗರದ ಕೆಲ ಯುವ ವೈದ್ಯರು ಕ್ಯಾಂಪ್ ಗಳ ಮೂಲಕ ಬಡವರ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ನಮ್ಮ ಪಕ್ಷದ ಕೆಲ ಕಾರ್ಯಕರ್ತರು ನನಗೆ ತಿಳಿಸಿದರು. ಇಲ್ಲಿಯ ‘ಹಾರ್ಟ್ ಲಂಗ್ಸ್ ಕ್ರಿಟಿಕಲ್ ಸೆಂಟರ್’ ವತಿಯಿಂದ ಪ್ರತಿ ತಿಂಗಳು ಇಂಥ ಮೆಡಿಕಲ್ ಕ್ಯಾಂಪ್ ನಡೆಸಲಾಗುತ್ತದೆ. ಇಲ್ಲಿ ಹಲವಾರು ರೋಗಗಳಿಗೆ ಸಂಪೂರ್ಣ ಉಚಿತವಾಗಿ ತಪಾಸಣೆ ಮತ್ತು ಉಪಚಾರ ಕೂಡಾ ಮಾಡಲಾಗುತ್ತದೆ. ಇಂದು ಪ್ರತಿ ತಿಂಗಳೂ ಸಾವಿರಾರು ಬಡವರು ಈ ಕ್ಯಾಂಪ್ ಗಳ ಭವನ್ನು ಪಡೆಯುತ್ತಿದ್ದಾರೆ. ನಿಸ್ವಾರ್ಥ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಈ ವೈದ್ಯ ಮಿತ್ರರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಸಾಮೂಹಿಕ ಪ್ರಯತ್ನದಿಂದಲೇ ಸ್ವಚ್ಛ ಭಾರತ ಅಭಿಯಾನ ಒಂದು ಸಫಲ ಅಭಿಯಾನವಾಯಿತು ಎಂಬ ವಿಷಯವನ್ನು ಇಂದು ನಾನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೇನೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಜಬ್ಬಲ್ಪುಾರದಲ್ಲಿ ಒಂದೇ ಬಾರಿಗೆ 3 ಲಕ್ಷಕ್ಕಿಂತ ಹೆಚ್ಚು ಜನರು ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡರು ಎಂಬುದನ್ನು ಕೆಲ ಜನರು ನನಗೆ ತಿಳಿಸಿದರು. ಸ್ವಚ್ಛತೆಯ ಈ ಮಹಾ ಯಜ್ಞದಲ್ಲಿ ನಗರ ನಿಗಮ, ಸ್ವಯಂ ಸೇವಾ ಸಂಸ್ಥೆಗಳು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಜಬ್ಬಲ್ಪು ರದ ಜನತೆ, ಎಲ್ಲರೂ ನಾ ಮುಂದು ತಾ ಮುಂದು ಎನ್ನುವಂತೆ ಭಾಗವಹಿಸಿದರು. ನಾನು ಇದೀಗ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಕುರಿತು ಉಲ್ಲೇಖಿಸಿದ್ದೆ.ಅಲ್ಲಿ ನನಗೆ ಡಾ. ಜಯಚಂದ್ರನ್ ಅವರ ಬಗ್ಗೆ ತಿಳಿಯಿತು ಮತ್ತು ನನಗೆ ಸಮಯ ಸಿಕ್ಕಾಗಲೆಲ್ಲ ನಾನು ಖಂಡಿತ ದಿ ಬೆಟರ್ ಇಂಡಿಯಾ ಡಾಟ್ ಕಾಮ್ ಗೆ ಹೋಗಿ ಇಂಥ ಪ್ರೇರಣಾತ್ಮಕ ವಿಷಯಗಳ ಬಗ್ಗೆ ತಿಳಿಯಲು ಪ್ರಯತ್ನಿಸುತ್ತೇನೆ. ಇಂದು ಇಂಥ ಅಪರೂಪದ ಜನರ ಜೀವನದ ಮೂಲಕ ಪ್ರೇರೇಪಿಸಬಲ್ಲ ಬಹಳಷ್ಟು ಕಥೆಗಳನ್ನು ಪರಿಚಯಿಸುವಂತಹ ಅನೇಕ ವೆಬ್ ಸೈಟ್ ಪುಟಗಳಿವೆ ಎಂಬುದು ನನಗೆ ಸಂತಸವೆನಿಸುತ್ತದೆ. ಪಾಸಿಟಿವ್ ಇಂಡಿಯಾ ಡಾಟ್ ಕಾಮ್ ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಪಸರಿಸುವ ಮತ್ತು ಸಮಾಜವನ್ನು ಸಂವೇದನಶೀಲಗೊಳಿಸುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿ, ಯುವರ್ ಸ್ಟೋರಿ ಡಾಟ್ ಕಾಮ್ ನಲ್ಲಿ ಹೊಸ ಆವಿಷ್ಕಾರಿಗಳು ಮತ್ತು ಉದ್ಯಮಿಗಳ ಸಫಲತೆಯ ಕಥೆಗಳ ಕುರಿತು ಬಹಳ ಚೆನ್ನಾಗಿ ಹೇಳಲಾಗುತ್ತದೆ. ಹಾಗೇ ಸಂಸ್ಕೃತ ಭಾರತಿ ಡಾಟ್ ಇನ್ ಎಂಬ ಮಾಧ್ಯಮದ ಮೂಲಕ ಅತ್ಯಂತ ಸರಳವಾಗಿ ಮನೆಯಲ್ಲಿ ಕುಳಿತುಕೊಂಡೇ ಸಂಸ್ಕೃತ ಭಾಷೆಯನ್ನು ಕಲಿಯಬಹುದು. ನಾವು ಒಂದು ಕೆಲಸ ಮಾಡಬಹುದೇ – ಇಂತಹ ವೆಬ್ ಸೈಟ್ ಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳೋಣ. ಸಕಾರಾತ್ಮಕತೆಯನ್ನು ಒಂದಾಗಿ ಪಸರಿಸೋಣ. ಈ ಮೂಲಕ ಹೆಚ್ಚೆಚ್ಚು ಜನರು ಸಮಾಜದಲ್ಲಿ ಪರಿವರ್ತನೆಯನ್ನು ತರುವ ನಮ್ಮ ನಾಯಕರ ಕುರಿತು ತಿಳಿಯುವರು. ನಕಾರಾತ್ಮಕತೆ ಹಬ್ಬಿಸುವುದು ಬಹಳ ಸುಲಭ. ಆದರೆ ನಮ್ಮ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಬಹಳಷ್ಟು ಒಳ್ಳೇ ಕೆಲಸಗಳು ನಡೆಯುತ್ತಿವೆ ಮತ್ತು ಇವೆಲ್ಲವೂ 130 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದಲೇ ಆಗುತ್ತಿದೆ. ಎಲ್ಲ ಸಮಾಜಗಳಲ್ಲೂ ಕ್ರೀಡೆಗೆ ತನ್ನದೇ ಆದ ಮಹತ್ವವಿರುತ್ತದೆ. ಕ್ರೀಡೆಯಲ್ಲಿ ತೊಡಗಿದಾಗ ನೋಡುಗರ ಮನಸ್ಸು ಕೂಡಾ ಪ್ರಜ್ವಲಿತಗೊಳ್ಳುತ್ತದೆ. ಕ್ರೀಡಾಳುಗಳ ಹೆಸರು, ಸನ್ಮಾನ, ಪರಿಚಯ, ಮುಂತಾದವುಗಳನ್ನು ನಾವೂ ಅನುಭವಿಸುತ್ತೇವೆ. ಆದರೆ ಕೆಲವೊಮ್ಮೆ ಇವೆಲ್ಲವುಗಳ ಹೊರತಾಗಿ ಇನ್ನೂ ಎಷ್ಟೋ ವಿಷಯಗಳು ಕ್ರೀಡಾ ಜಗತ್ತಿಗೂ ಮಿಗಿಲಾದದ್ದು ಮತ್ತು ದೊಡ್ಡದಾದದ್ದಾಗಿರುತ್ತವೆ. ಕರಾಟೆ ಚ್ಯಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದ ಕಾಶ್ಮೀರದ ಓರ್ವ ಮಗಳ ಬಗ್ಗೆ ನಾನು ಹೇಳಬಯಸುತ್ತೇನೆ. ಹನಾಯ ನಿಸಾರ್ 12 ವರ್ಷದ ಬಾಲಕಿ. ಕಾಶ್ಮೀರದ ಅನಂತ್ ನಾಗ್ ನ ನಿವಾಸಿ. ಹನಾಯ ಬಹಳ ಶ್ರಮವಹಿಸಿ, ಏಕಾಗ್ರತೆಯಿಂದ ಕರಾಟೆ ಅಭ್ಯಾಸ ಮಾಡಿ, ಅದರ ಸೂಕ್ಷ್ಮತೆಗಳನ್ನು ಅರಿತು ತನ್ನನ್ನು ತಾನು ಸಾಬೀತು ಮಾಡಿ ತೋರಿಸಿದ್ದಾಳೆ. ಎಲ್ಲ ಭಾರತೀಯರ ಪರವಾಗಿ ಮಗಳ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಹನಾಯಳಿಗೆ ಶುಭಾಷಯಗಳು ಮತ್ತು ಆಶೀರ್ವಾದಗಳು.

ಹಾಗೆಯೇ 16 ರ ವಯೋಮಾನದ ಯುವತಿ ರಜನಿ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗಿದೆ. ನೀವು ಖಂಡಿತ ಓದಿರಬಹುದು. ರಜನಿ ಜ್ಯುನಿಯರ್ ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ರಜನಿ ಪದಕ ಗೆಲ್ಲುತ್ತಿದ್ದಂತೆಯೇ ಹತ್ತಿರದ ಒಂದು ಮಳಿಗೆಗೆ ಹೋಗಿ ಒಂದು ಗ್ಲಾಸ್ ಹಾಲನ್ನು ಕುಡಿದಳು. ನಂತರ ತನ್ನ ಪದಕವನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ಯಾಗ್ ನಲ್ಲಿ ಇಟ್ಟಳು. ಈಗ ನೀವು ರಜನಿ ಒಂದು ಗ್ಲಾಸ್ ಹಾಲು ಏಕೆ ಕುಡಿದಳು ಎಂದು ಯೋಚಿಸುತ್ತಿರಬಹುದು? ಪಾನಿಪತ್ ನ ಒಂದು ಸ್ಟಾಲ್ ನಲ್ಲಿ ಲಸ್ಸಿ ಮಾರುತ್ತಿರುವ ತನ್ನ ತಂದೆ ಜಸ್ಮೇರ್ ಸಿಂಗ್ ಅವರಿಗೆ ಗೌರವ ಸೂಚಿಸಲು ಅವಳು ಹೀಗೆ ಮಾಡಿದಳು. ತಾನು ಈ ಹಂತ ತಲುಪಲು ತನ್ನ ತಂದೆ ಬಹಳ ತ್ಯಾಗ ಮಾಡಿದ್ದಾರೆಂದು ಮತ್ತು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆಂದು ಅವಳು ಹೇಳಿದಳು. ಜಸ್ಮೇರ್ ಸಿಂಗ್ ಅವರು ಪ್ರತಿದಿನ ಬೆಳಿಗ್ಗೆ ರಜನಿ ಮತ್ತು ಅವಳ ಸೋದರ ಸೋದರಿಯರು ಏಳುವ ಮೊದಲೇ ಕೆಲಸಕ್ಕೆ ಹೋಗುತ್ತಾರೆ. ರಜನಿ ತನ್ನ ತಂದೆ ಬಳಿ ಬಾಕ್ಸಿಂಗ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ತಂದೆ ಅದಕ್ಕೆ ಬೇಕಾದ ಎಲ್ಲ ಅವಶ್ಯಕ ಸಾಧನಗಳನ್ನು ಒಗ್ಗೂಡಿಸಿ ಅವಳನ್ನು ಪ್ರೋತ್ಸಾಹಿಸಿದರು. ರಜನಿಗೆ ಬಾಕ್ಸಿಂಗ್ ಅಭ್ಯಾಸವನ್ನು ಹಳೆಯ ಗ್ಲೌಸ್ಗ್ಳನ್ನು ಬಳಸಿಯೇ ಆರಂಭಿಸಬೇಕಾಯಿತು. ಏಕೆಂದರೆ ಆ ದಿನಗಳಲ್ಲಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಇಷ್ಟೆಲ್ಲ ಅಡೆತಡೆಗಳ ನಡುವೆಯೂ ರಜನಿ ಧೈರ್ಯಗೆಡಲಿಲ್ಲ ಬಾಕ್ಸಿಂಗ್ ಕಲಿಕೆ ಮುಂದುವರಿಸಿದಳು. ಅವಳು ಸರ್ಬಿಯಾದಲ್ಲೂ ಒಂದು ಪದಕ ಗಳಿಸಿದ್ದಾಳೆ. ರಜನಿಗೆ ನಾನು ಶುಭಾಷಯ ಮತ್ತು ಆಶೀರ್ವಾದ ತಿಳಿಸುತ್ತೇನೆ. ರಜನಿಗೆ ಪ್ರೋತ್ಸಾಹಿಸಿದ ಮತ್ತು ಅವಳ ಉತ್ಸಾಹ ಹೆಚ್ಚಿಸಿದ ತಂದೆ ತಾಯಿ ಜಸ್ಮೇರ್ ಸಿಂಗ್ ಮತ್ತು ಉಷಾರಾಣಿ ಅವರನ್ನು ಅಭಿನಂದಿಸುತ್ತೇನೆ. ಇದೇ ತಿಂಗಳು ಪುಣೆಯ ಓರ್ವ 20ರ ವಯಸ್ಸಿನ ಯುವತಿ ವೇದಾಂಗಿ ಕುಲ್ಕರ್ಣಿ ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡಿದ ಎಲ್ಲರಿಗಿಂತ ವೇಗದ ಏಷಿಯನ್ ಆಗಿ ಹೊರಹೊಮ್ಮಿದ್ದಾಳೆ. ಅವಳು 159 ದಿನಗಳವರೆಗೆ ಪ್ರತಿನಿತ್ಯ 300 ಕಿಲೋಮೀಟರ್ ಸೈಕಲ್ ತುಳಿಯುತ್ತಿದ್ದಳು. 300 ಕಿಲೋಮೀಟರ್ ಸೈಕಲ್ ತುಳಿಯುವ ಕುರಿತು ನೀವು ಕಲ್ಪನೆ ಮಾಡಿಕೊಳ್ಳಬಹುದೇ! ಸೈಕಲ್ ತುಳಿಯುವ ಕುರಿತಾದ ಅವಳ ಹುಮ್ಮಸ್ಸು ನಿಜಕ್ಕೂ ಶ್ಲಾಘನೀಯವಾಗಿದೆ. ಇಂಥ ಸಾಧನೆಯ ಬಗ್ಗೆ ಕೇಳಿದಾಗ ನಮಗೆ ಪ್ರೇರಣೆ ದೊರೆಯುವುದಿಲ್ಲವೇ? ಅದರಲ್ಲೂ ವಿಶೇಷವಾಗಿ ನನ್ನ ಯುವ ಮಿತ್ರರು, ಇಂಥ ಘಟನೆಗಳ ಬಗ್ಗೆ ಕೇಳಿದಾಗ ತಾವೂ ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ಏನಾದರೂ ಸಾಧಿಸಬೇಕೆಂಬ ಪ್ರೇರಣೆಯನ್ನು ಪಡೆಯುತ್ತಾರೆ. ಸಂಕಲ್ಪ , ದೃಢ ಸಂಕಲ್ಪವಿದ್ದರೆ, ಅಡೆತಡೆಗಳು ತಾವಾಗೇ ದೂರವಾಗುತ್ತವೆ. ಸಂಕಷ್ಟಗಳು ಎಂದೂ ಅಡೆತಡೆಗಳಾಗುವುದಿಲ್ಲ. ಇಂಥ ಅನೇಕ ಉದಾಹರಣೆಗಳನ್ನು ಕೇಳುತ್ತಿದ್ದರೆ, ನಮ್ಮ ಜೀವನದಲ್ಲೂ ಪ್ರತಿಕ್ಷಣ ಹೊಸ ಪ್ರೇರಣೆ ಮೂಡುತ್ತದೆ.

ನನ್ನ ಪ್ರಿಯ ದೇಶಬಾಂಧವರೇ, ಜನವರಿಯಲ್ಲಿ ಉತ್ಸಾಹ ಮತ್ತು ಉಲ್ಲಾಸದಿಂದ ತುಂಬಿದ ಬಹಳಷ್ಟು ಹಬ್ಬಗಳು ಬರಲಿವೆ. ಉದಾಹರಣೆಗೆ ಲೊಹ್ರಿ, ಪೊಂಗಲ್, ಮಕರ ಸಂಕ್ರಾಂತಿ, ಉತ್ತರಾಯಣ, ಮಾಘ ಬಿಹು, ಮಾಘೀ ; ಈ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಂಪೂರ್ಣ ಭಾರತದಲ್ಲಿ ವಿಭಿನ್ನ ಪಾರಂಪರಿಕ ನೃತ್ಯಗಳ ರಂಗು ಕಾಣಸಿಗುತ್ತದೆ, ಇನ್ನೊಂದೆಡೆ ಫಸಲು ಕೈಗೆ ಬಂದ ಸಂತಸಕ್ಕೆ ಲೊಹ್ಡಿ ಬೆಳಗಿಸುತ್ತಾರೆ. ಇನ್ನೊಂದೆಡೆ ಆಕಾಶದಲ್ಲಿ ರಂಗುರಂಗಿನ ಗಾಳಿಪಟಗಳು ಹಾರುತ್ತಿರುವುದು ಕಾಣುತ್ತದೆ. ಎಷ್ಟೋ ಜಾತ್ರೆಗಳು ಮೈದಳೆಯುತ್ತವೆ. ಇನ್ನೊಂದೆಡೆ ಕ್ರೀಡೆಯ ಧೂಳು ಎದ್ದೇಳುತ್ತದೆ. ಮತ್ತೊಂದೆಡೆ ಪರಸ್ಪರ ಎಳ್ಳು ಬೆಲ್ಲ ಹಂಚಿಕೊಳ್ಳುತ್ತಾರೆ. ಜನರು ಒಬ್ಬರಿಗೊಬ್ಬರು ಎಳ್ಳು ಬೆಲ್ಲ ತೆಗೆದುಕೊಳ್ಳಿ ಮತ್ತು ಒಳ್ಳೊಳ್ಳೆ ಮಾತಾಡಿ ಎಂದು ಹಾರೈಸುತ್ತಾರೆ. ಈ ಎಲ್ಲ ಹಬ್ಬಗಳ ಹೆಸರುಗಳು ಬೇರೆ ಬೇರೆಯಾಗಿರಬಹುದು ಆದರೆ ಅವುಗಳೆಲ್ಲವನ್ನು ಆಚರಿಸುವವರ ಭಾವನೆಗಳು ಒಂದೇ ಆಗಿವೆ. ಈ ಉತ್ಸವಗಳು ಒಂದಲ್ಲಾ ಒಂದು ರೀತಿ ಫಸಲಿಗೆ ಮತ್ತು ಒಕ್ಕಲುತನಕ್ಕೆ ಸಂಬಂಧಿಸಿದ್ದಾಗಿದೆ. ರೈತರಿಗೆ ಸಂಬಂಧಿಸಿದ್ದು ಮತ್ತು ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ. ಗದ್ದೆ ಹೊಲಗಳಿಗೆ ಸಂಬಂಧಿಸಿದ್ದಾಗಿವೆ. ಇದೇ ಸಂದರ್ಭದಲ್ಲಿ ಸೂರ್ಯ ಉತ್ತರಾಭಿಮುಖವಾಗಿ ಮಕರ ರಾಶಿ ಪ್ರವೇಶಿಸುತ್ತಾನೆ. ಇದರ ನಂತರದಿಂದ ದಿನಗಳು ನಿಧಾನವಾಗಿ ದೀರ್ಘವಾಗುತ್ತವೆ ಮತ್ತು ಚಳಿಗಾಲದ ಬೆಳೆಯ ಕಟಾವು ಮಾಡಲಾಗುತ್ತದೆ. ನಮ್ಮ ಅನ್ನದಾತ ಕೃಷಿಕ ಸೋದರ ಸೋದರಿಯರಿಗೆ ಅನಂತ ಅನಂತ ಶುಭಾಷಯಗಳು. ವಿವಿಧತೆಯಲ್ಲಿ ಏಕತೆ, ಒಂದು ಭಾರತ ಶ್ರೇಷ್ಠ ಭಾರತ ಎಂಬ ಭಾವನೆಯ ಸುಗಂಧವನ್ನು ನಮ್ಮ ಹಬ್ಬಗಳು ತಮ್ಮಲ್ಲಿ ಹುದುಗಿಸಿಕೊಂಡಿವೆ. ನಮ್ಮ ಹಬ್ಬ ಹರಿದಿನಗಳು ಪ್ರಕೃತಿಯೊಂದಿಗೆ ಹೇಗೆ ಅತ್ಯಂತ ಹತ್ತಿರದ ಸಂಬಂಧ ಹೊಂದಿವೆ ಎಂಬುದನ್ನು ನಾವು ಕಾಣಬಹುದು. ಭಾರತೀಯ ಸಂಸ್ಕೃತಿಯಲ್ಲಿ ಸಮಾಜ ಮತ್ತು ಪ್ರಕೃತಿಯನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಇಲ್ಲಿ ವ್ಯಕ್ತಿ ಮತ್ತು ಸಮಷ್ಟಿ ಒಂದೇ ಆಗಿದೆ. ಪ್ರಕೃತಿಯೊಂದಿಗೆ ನಮ್ಮ ನಿಕಟ ಸಂಬಂಧಕ್ಕೆ ಒಂದು ಉತ್ತಮ ಉದಾಹರಣೆ ಹಬ್ಬಗಳನ್ನಾಧರಿಸಿದ ಕ್ಯಾಲೆಂಡರ್. ಇದರಲ್ಲಿ ವರ್ಷಪೂರ್ತಿ ಆಚರಿಸುವ ಹಬ್ಬ ಹರಿದಿನಗಳ ಜೊತೆಗೆ ಗ್ರಹ ನಕ್ಷತ್ರಗಳ ಲೆಕ್ಕಾಚಾರವನ್ನೂ ನೀಡಲಾಗಿರುತ್ತದೆ. ಈ ಪಾರಂಪರಿಕ ಕ್ಯಾಲೆಂಡರ್ ನಿಂದ ಪ್ರಾಕೃತಿಕ ಮತ್ತು ಖಗೋಳ ಶಾಸ್ತ್ರದ ಪ್ರಕಾರ ನಡೆಯುವ ಘಟನೆಗಳ ಜೊತೆ ನಮ್ಮ ಸಂಬಂಧ ಎಷ್ಟು ಪುರಾತನವಾದದ್ದು ಎಂಬುದು ತಿಳಿಯುತ್ತದೆ. ಚಂದ್ರ ಮತ್ತು ಸೂರ್ಯನ ಚಲನೆಯ ಆಧಾರದ ಮೇಲೆ ಚಾಂದ್ರಮಾನ ಮತ್ತು ಸೌರಮಾನ ಕ್ಯಾಲೆಂಡರ್ ಪ್ರಕಾರ ಹಬ್ಬ ಹರಿದಿನಗಳ ತಿಥಿ ನಿರ್ಧಾರವಾಗುತ್ತದೆ. ಯಾರು ಯಾವ ಕ್ಯಾಲೆಂಡರ್ ಅನುಸರಿಸುತ್ತಾರೆ ಎಂಬುದರ ಮೇಲೆ ಇದು ನಿರ್ಧರಿಸಿರುತ್ತದೆ. ಎಷ್ಟೋ ಪ್ರದೇಶಗಳಲ್ಲಿ ಗ್ರಹ ನಕ್ಷತ್ರಗಳ ಸ್ಥಿತಿಯನ್ನಾಧರಿಸಿ ಹಬ್ಬಗಳ ಆಚರಣೆ ಕೈಗೊಳ್ಳಲಾಗುತ್ತದೆ. ಗುಡಿ ಪಾಡ್ವಾ, ಚೇಟಿಚಂಡ್, ಉಗಾದಿ ಇವೆಲ್ಲವೂ ಚಾಂದ್ರಮಾನ ಕ್ಯಾಲೆಂಡರ್ ಅನುಸಾರ ಆಚರಿಸುವ ಹಬ್ಬಗಳು. ಅದೇ ರೀತಿ ತಮಿಳಿನ ಪುಥಾಂಡು, ವಿಶು, ವೈಶಾಖ, ಬೈಸಾಖಿ, ಪೊಯಿಲಾ ಬೈಸಾಖ್, ಬಿಹು ಈ ಎಲ್ಲ ಹಬ್ಬಗಳನ್ನು ಸೌರಮಾನ ಕ್ಯಾಲೆಂಡರ್ ಆಧರಿಸಿ ಆಚರಿಸಲಾಗುತ್ತದೆ. ನಮ್ಮ ಹಲವಾರು ಹಬ್ಬಗಳಲ್ಲಿ ನದಿಗಳು ಮತ್ತು ಜಲ ಸಂಪತ್ತನ್ನು ರಕ್ಷಿಸುವ ವಿಶಿಷ್ಟ ಭಾವ ಮಿಳಿತವಾಗಿದೆ. ಛಟ್ ಪರ್ವ, ನದಿಗಳು, ಕೆರೆ ತೊರೆಗಳಲ್ಲಿ ಸೂರ್ಯ ಉಪಾಸನೆಯ ವಿಶಿಷ್ಟ ಆಚರಣೆ ಹೊಂದಿವೆ. ಮಕರ ಸಂಕ್ರಾಂತಿಯಂದು ಲಕ್ಷಾಂತರ, ಕೋಟ್ಯಾಂತರ ಜನರು ನದಿಗಳಲ್ಲಿ ಮಿಂದೇಳುತ್ತಾರೆ. ನಮ್ಮ ಹಬ್ಬ ಹರಿದಿನಗಳು ನಮಗೆ ಸಾಮಾಜಿಕ ಮೌಲ್ಯಗಳ ಶಿಕ್ಷಣವನ್ನೂ ನೀಡುತ್ತವೆ. ಒಂದೆಡೆ ಇವುಗಳ ಪೌರಾಣಿಕ ಮಹತ್ವವಿದ್ದರೆ, ಇನ್ನೊಂದೆಡೆ ಜೀವನ ಪಾಠ, ಪರಸ್ಪರ ಸೋದರ ಭಾವದಿಂದ ಇರುವ ಪ್ರೇರಣೆಯನ್ನು ಅತ್ಯಂತ ಸರಳ ರೀತಿಯಲ್ಲಿ ಕಲಿಸುತ್ತವೆ. ನಿಮ್ಮೆಲ್ಲರಿಗೂ 2019 ರ ಹೊಸ ವರ್ಷದ ಶುಭಾಷಯಗಳು, ಮತ್ತು ಮುಂಬರುವ ಹಬ್ಬಗಳ ಸಂಪೂರ್ಣ ಆನಂದವನ್ನು ಪಡೆಯಿರಿ ಎಂದು ಹಾರೈಸುತ್ತೇನೆ. ಭಾರತದ ವಿವಿಧತೆ ಮತ್ತು ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಎಲ್ಲರೂ ನೋಡಲಿ ಎಂಬುದಕ್ಕಾಗಿ ಈ ಹಬ್ಬಗಳಲ್ಲಿ ತೆಗೆದುಕೊಂಡಂತಹ ಫೋಟೊಗಳನ್ನು ಎಲ್ಲರೊಂದಿಗೆ ಶೇರ್ ಮಾಡಿ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯಲ್ಲಿ ನಾವು ಹೆಮ್ಮೆ ಪಟ್ಟು, ಇಡೀ ಜಗತ್ತಿಗೆ ಅಭಿಮಾನದಿಂದ ತೋರಿಸಿಕೊಳ್ಳುವ ಎಷ್ಟೊಂದು ವಿಷಯಗಳಿವೆ. ಅವುಗಳಲ್ಲಿ ಒಂದು- ಕುಂಭಮೇಳ. ನೀವು ಕುಂಭ ಮೇಳದ ಬಗ್ಗೆ ಬಹಳಷ್ಟು ಕೇಳಿರಬಹುದು, ಚಲನಚಿತ್ರಗಳಲ್ಲಿ ಕೂಡ ಇದರ ಭವ್ಯತೆ ಮತ್ತು ವಿಶಾಲತೆಯ ಬಗ್ಗೆ ಬಹಳಷ್ಟು ನೋಡಿರಲೂ ಬಹುದು ಮತ್ತು ಅದು ಸತ್ಯ ಕೂಡ. ಕುಂಭ ಮೇಳದ ಸ್ವರೂಪ ಬೃಹತ್ತಾದುದು. ಎಷ್ಟು ದಿವ್ಯವೋ ಅಷ್ಟೇ ಭವ್ಯ. ದೇಶದಲ್ಲಿ ಮತ್ತು ಜಗತ್ತಿನೆಲ್ಲೆಡೆಯಿಂದ ಜನರು ಬರುತ್ತಾರೆ, ಬಂದು ಕುಂಭ ಮೇಳದಲ್ಲಿ ಭಾಗಿಯಾಗುತ್ತಾರೆ. ಕುಂಭಮೇಳದಲ್ಲಿ ಭಕ್ತಿ ಮತ್ತು ಶ್ರದ್ಧೆಯ ಜನಸಾಗರ ಉಕ್ಕಿ ಹರಿಯುತ್ತದೆ. ಒಂದೇ ಕಡೆ, ಒಂದೇ ಸಮಯದಲ್ಲಿ ದೇಶ ವಿದೇಶಗಳ ಲಕ್ಷಾಂತರ, ಕೋಟ್ಯಾಂತರ ಜನ ಸೇರುತ್ತಾರೆ. ಕುಂಭಮೇಳದ ಪರಂಪರೆಯು ನಮ್ಮ ಮಹಾನ್ ಸಾಂಸ್ಕೃತಿಕ ಪರಂಪರೆಯಿಂದ ಫಲಿತವವಾಗಿದೆ ಮತ್ತು ಮೂಡಿಬಂದಿದೆ. ಈ ಬಾರಿ ಜನವರಿ 15 ರಿಂದ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲ್ಪಡುವ ವಿಶ್ವ ಪ್ರಸಿದ್ಧ ಕುಂಭ ಮೇಳಕ್ಕೆ ನೀವೂ ಸಹ ಬಹುಶಃ ಬಹಳ ಉತ್ಸುಕತೆಯಿಂದ ಕಾಯುತ್ತಿರಬಹುದು. ಕುಂಭ ಮೇಳಕ್ಕೆ ಈಗಿಂದಲೇ ಸಾಧು ಸಂತರು ತಲುಪುವ ವಿಧಿಗಳು ಆರಂಭಗೊಂಡಿದೆ. ಕಳೆದ ವರ್ಷ UNESCO ಕುಂಭ ಮೇಳವನ್ನು Intangible cultural ಹೆರಿಟೇಜ್ ಆಫ್ ಹ್ಯುಮಾನಿಟಿ ಯ ಸೂಚ್ಯಂಕದಲ್ಲಿ ಗುರುತಿಸಿದೆ. ಇದರ ಜಾಗತಿಕ ಮಹತ್ವದ ಅಂದಾಜನ್ನು ಇದರಿಂದಲೇ ತಿಳಿಯಬಹುದು. ಕೆಲವು ದಿನಗಳ ಹಿಂದೆ ಹಲವು ದೇಶಗಳ ರಾಯಭಾರಿಗಳು ಕುಂಭಮೇಳದ ತಯಾರಿಯನ್ನು ವೀಕ್ಷಿಸಿದರು. ಅಲ್ಲಿ ಒಮ್ಮೆಲೇ ಹಲವು ದೇಶಗಳ ಧ್ವಜಗಳು ಹಾರಾಡಿದವು. ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾಗುವ ಈ ಕುಂಭ ಮೇಳದಲ್ಲಿ 150ಕ್ಕೂ ಹೆಚ್ಚು ದೇಶಗಳ ಜನರು ಆಗಮಿಸುವ ನಿರೀಕ್ಷೆ ಇದೆ ಕುಂಭಮೇಳದ ದಿವ್ಯತೆಯಿಂದ ಭಾರತದ ಭವ್ಯತೆ ಇಡೀ ಜಗತ್ತಿಗೆ ತನ್ನ ಬಣ್ಣವನ್ನು ಹರಡುತ್ತದೆ. ಕುಂಭ ಮೇಳವು ಆತ್ಮ ಶೋಧನೆಯ ಒಂದು ಮಾಧ್ಯಮವಾಗಿದೆ. ಅಲ್ಲಿ ಬರುವ ಪ್ರತಿವ್ಯಕ್ತಿಗೂ ವಿಭಿನ್ನ ರೀತಿಯ ಅನುಭವ ಆಗುತ್ತದೆ. ಸಾಂಸಾರಿಕ ವಿಷಯಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಯುವಕರಿಗೆ ಇದು ಒಂದು ದೊಡ್ಡ ಕಲಿಕೆಯ ಅನುಭವ ಆಗುತ್ತದೆ. ನಾನು ಸ್ವತಃ ಕೆಲವು ದಿನಗಳ ಹಿಂದೆ ಪ್ರಯಾಗ್ ರಾಜ್ ಗೆ ಹೋಗಿದ್ದೆ. ಕುಂಭ ಮೇಳದ ತಯಾರಿ ಬಹಳ ಜೋರಾಗಿ ನಡೆಯುತ್ತಿರುವುದನ್ನು ನೋಡಿದೆ . ಪ್ರಯಾಗ್ ರಾಜ್ ದ ಜನತೆ ಸಹ ಕುಂಭ ಮೇಳದ ಬಗ್ಗೆ ಬಹಳ ಉತ್ಸಾಹಿತರಾಗಿದ್ದಾರೆ. ಅಲ್ಲಿ ನಾನು ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದೆ. ಭಕ್ತರಿಗೆ ಇದರಿಂದ ಸಾಕಷ್ಟು ಸಹಾಯ ಆಗುತ್ತದೆ. ಈ ಸಾರಿ ಕುಂಭ ಮೇಳದಲ್ಲಿ ಸ್ವಚ್ಚತೆಯ ಬಗ್ಗೆ ಬಹಳಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಶ್ರದ್ಧೆಯ ಜೊತೆಜೊತೆಗೆ ಸ್ವಚ್ಚತೆ ಇದ್ದರೆ ಇದರ ಬಗ್ಗೆ ಒಳ್ಳೆಯ ಸಂದೇಶ ದೂರ ದೂರದವರೆಗೆ ತಲುಪುತ್ತದೆ. ಈ ಬಾರಿ ಪ್ರತಿ ಭಕ್ತನೂ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೇಲೆ ಅಕ್ಷಯ ಮರ ದ ಪುಣ್ಯ ದರ್ಶನವನ್ನೂ ಮಾಡಬಹುದು. ಜನರ ಭಕ್ತಿಯ ಸಂಕೇತವಾದ ಈ ಅಕ್ಷಯ ಮರ ಹಲವಾರು ವರ್ಷಗಳಿಂದ ಕೋಟೆಯ ಒಳಗಡೆಯೇ ಇತ್ತು ,ಭಕ್ತರು ಇದರ ದರ್ಶನವನ್ನು ಬಯಸಿದರು ದೊರಕುತ್ತಿರಲಿಲ್ಲ ಈಗ ಇದರ ದರ್ಶನ ಎಲ್ಲರಿಗೂ ಮುಕ್ತವಾಗಿದೆ. ಹೆಚ್ಹಿನ ಸಂಖ್ಯೆಯಲ್ಲಿ ಜನರು ಕುಂಭ ಮೇಳಕ್ಕೆ ಬರಲು ಪ್ರೇರಣೆ ಸಿಗುವಂತಾಗಲು ನೀವು ಕುಂಭ ಮೇಳಕ್ಕೆ ಹೋದಾಗ ಅದರ ಬೇರೆ ಬೇರೆ ಮಗ್ಗುಲುಗಳು ಮತ್ತು ಅವುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅವಶ್ಯವಾಗಿ ಹಂಚಿಕೊಳ್ಳಿ. ಆಧ್ಯಾತ್ಮಿಕವಾದ ಈ ಕುಂಭ ಮೇಳ ಭಾರತೀಯತೆಯ ದರ್ಶನದ ಮಹಾ ಕುಂಭವಾಗಲಿ,
ಶ್ರದ್ದೆಯ ಈ ಕುಂಭಮೇಳ ರಾಷ್ಟ್ರೀಯತೆಯ ಮಹಾ ಕುಂಭವಾಗಲಿ, ರಾಷ್ಟ್ರೀಯ ಏಕತೆಯ ಮಹಾಕುಂಭವಾಗಲಿ,
ಶ್ರಧ್ಧಾಳುಗಳ ಈ ಕುಂಭ ಅಂತರಾಷ್ಟ್ರೀಯ ಪ್ರವಾಸಿಗಳ ಮಹಾ ಕುಂಭವಾಗಲಿ,
ಕಲಾತ್ಮಕತೆಯ ಈ ಕುಂಭಮೇಳ, ಸೃಜನಶೀಲ ಶಕ್ತಿಯ ಮಹಾ ಕುಂಭವಾಗಲಿ.

ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ರ ಗಣತಂತ್ರ ದಿವಸದ ಸಮಾರಂಭದ ಕುರಿತು ನಮ್ಮೆಲ್ಲರ ಮನದಲ್ಲಿ ತುಂಬಾ ಉತ್ಸುಕತೆ ಇರುತ್ತದೆ. ಆ ದಿನ ನಾವು, ನಮಗೆ ನಮ್ಮ ಸಂವಿಧಾನವನ್ನು ಕೊಟ್ಟ ಮಹಾ ಪುರುಷರನ್ನು ನೆನಪಿಸಿಕೊಳ್ಳುತ್ತೇವೆ. ಈ ವರ್ಷ ನಾವು ಪೂಜ್ಯ ಬಾಪೂ ರವರ 150 ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಶ್ರೀ ಸಿರಿಲ್ ರಾಮಾಫೋಸ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬರುತ್ತಿರುವುದು ನಮ್ಮ ಸೌಭಾಗ್ಯ. ಪೂಜ್ಯ ಬಾಪೂ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ. ಈ ದಕ್ಷಿಣ ಆಫ್ರಿಕಾದಿಂದಲೇ ಮೋಹನ್ ‘ಮಹಾತ್ಮ’ ನಾದರು. ದಕ್ಷಿಣ ಆಫ್ರಿಕಾದಲ್ಲಿಯೇ ಮಹಾತ್ಮಾ ಗಾಂಧಿಯವರು ತಮ್ಮ ಮೊದಲ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ವರ್ಣಬೇಧ ನೀತಿಯ ವಿರುದ್ಧ ಸಿಡಿದು ನಿಂತಿದ್ದರು. ಅವರು ಫೀನಿಕ್ಸ್ ಮತ್ತು ಟಾಲ್ ಸ್ಟಾಯ್ ಫಾರ್ಮ್ಸ್ ಗಳನ್ನು ಸ್ಥಾಪನೆ ಮಾಡಿದ್ದರು. ಅಲ್ಲಿಂದಲೇ ಇದೇ ವಿಶ್ವದಲ್ಲಿ ಶಾಂತಿ, ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿದರು. 2018 ನ್ನು ನೆಲ್ಸನ್ ಮಂಡೇಲಾ ಅವರ ಜನ್ಮ ಶತಾಬ್ದಿಯ ರೂಪದಲ್ಲಿ ಆಚರಿಸಲಾಗುತ್ತಿದೆ. ಅವರು ‘ಮಡೀಬಾ’ ಎನ್ನುವ ಹೆಸರಿನಿದ ಸಹ ಗುರುತಿಸಿಸಲ್ಪಡುತ್ತಾರೆ. ನೆಲ್ಸನ್ ಮಂಡೇಲಾ ಅವರು ಇಡೀ ವಿಶ್ವದಲ್ಲಿ ವರ್ಣ ಬೇಧ ನೀತಿಯ ವಿರುದ್ಧದ ಸಂಘರ್ಷದಲ್ಲಿ ಒಂದು ಮಾದರಿ ಆಗಿದ್ದರು ಎಂಬುದು ನಮಗೆಲ್ಲರಿಗೂ ಗೊತ್ತು. ಮಂಡೇಲಾ ಅವರಿಗೆ ಪ್ರೆರಣಾದಾಯಕರಾಗಿದ್ದವರು ಯಾರು? ಅವರಿಗೆ ಅಷ್ಟೊಂದು ವರ್ಷ ಜೈಲುವಾಸ ಅನುಭವಿಸಲು ಸಹನಶಕ್ತಿ ಮತ್ತು ಪ್ರೇರಣೆ ಪೂಜ್ಯಬಾಪೂರವರಿಂದಲೇ ಸಿಕ್ಕಿತ್ತು. ಮಂಡೇಲರವರು “ಮಹಾತ್ಮಾ ಅವರು ನಮ್ಮ ಇತಿಹಾಸದ ಅವಿಚ್ಚಿನ್ನ ಅಂಗವಾಗಿದ್ದಾರೆ. ಏಕೆಂದರೆ, ಇಲ್ಲಿಯೇ ಅವರು ಸತ್ಯದೊಂದಿಗೆ ತಮ್ಮ ಮೊದಲ ಪ್ರಯೋಗವನ್ನು ಮಾಡಿದ್ದರು, ಇಲ್ಲಿಯೇ ಅವರು ನ್ಯಾಯಕ್ಕಾಗಿ ತಮ್ಮ ಧ್ರುಡತೆಯ ಒಂದು ವಿಲಕ್ಷಣವಾದ ಪ್ರದರ್ಶನ ನೀಡಿದ್ದರು, ಇಲ್ಲಿಯೇ ಅವರು ತಮ್ಮ ಸತ್ಯಾಗ್ರಹದ ರೂಪು ರೇಷೆ ಮತ್ತು ಸಂಘರ್ಷದ ವಿಧಾನವನ್ನು ವಿಕಸಿತಗೊಳಿಸಿದ್ದರು” ಎಂದು ಬಾಪೂ ಅವರ ಬಗ್ಗೆ ಹೇಳಿದ್ದರು. ಅವರು ಬಾಪೂ ಅವರನ್ನು ಅದರ್ಶ ವ್ಯಕ್ತಿಯಾಗಿ ಪರಿಗಣಿಸಿದ್ದರು ಬಾಪೂ ಮತ್ತು ಮಂಡೇಲಾ ಇವರಿಬ್ಬರೂ ಇಡೀ ವಿಶ್ವಕ್ಕೆ ಬರೀ ಪ್ರೆರಣಾದಾಯಕರು ಮಾತ್ರವಲ್ಲದೆ ಅವರ ಆದರ್ಶ, ಪ್ರೇಮ ಮತ್ತು ಕರುಣೆ ತುಂಬಿದ ಸಮಾಜದ ನಿರ್ಮಾಣಕ್ಕೆ ಸಹ ಯಾವಾಗಲೋ ನಮ್ಮನ್ನು ಪ್ರೋತ್ಸಾಹಿಸುತ್ತಿರುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಮುಂಚೆ ನರ್ಮದಾ ತೀರದ ಕೆವಡಿಯದಲ್ಲಿ DGP conference ನಡೆಯಿತು. ಎಲ್ಲಿ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ statue of liberty ಎಲ್ಲಿ ಇದೆಯೋ, ಅಲ್ಲಿ ದೇಶದ ವರಿಷ್ಠ ಪೋಲಿಸ್ ಅಧಿಕಾರಿಗಳ ಜೊತೆ ಸಾರ್ಥಕವಾದ ಚರ್ಚೆ ನಡೆಯಿತು. ದೇಶ ಮತ್ತು ದೇಶವಾಸಿಗಳಿಗೆ ಸುರಕ್ಷತೆಯನ್ನು ಹೆಚ್ಚು ಬಲ ಪಡಿಸುವ ಸಲುವಾಗಿ ಯಾವ ರೀತಿಯ ಹೆಜ್ಜೆ ಇಡಬೇಕು ಎನ್ನುವುದರ ಬಗ್ಗೆ ದೀರ್ಘವಾಗಿ ಮಾತುಕತೆಗಳು ನಡೆದವು. ಅದೇ ಕಾರಣದಿಂದ ನಾನು ದೇಶದ ಏಕತೆಗಾಗಿ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರದಾನಮಾಡಲು ಪ್ರಾರಂಭಿಸುವ ಬಗ್ಗೆ ಘೋಷಣೆ ಸಹಾ ಮಾಡಿದ್ದೆ. ಯಾವುದಾದರೊಂದು ರೂಪದಲ್ಲಿ ರಾಷ್ಟ್ರೀಯ ಏಕತೆಗಾಗಿ ತಮ್ಮ ಕೊಡುಗೆಯನ್ನು ಯಾರು ನೀಡಿರುತ್ತಾರೋ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಸರ್ದಾರ್ ಪಟೇಲರು ತಮ್ಮ ಇಡೀ ಜೀವನವನ್ನು ದೇಶದ ಏಕತೆಗಾಗಿ ಸಮರ್ಪಿಸಿಕೊಂಡಿದ್ದರು. ಅವರು ಯಾವಾಗಲೂ ಭಾರತದ ಅಖಂಡತೆಯನ್ನು ಕಾಪಾಡುವುದರಲ್ಲಿ ತೊಡಗಿಸಿಕೊಂಡಿದ್ದರು. ಭಾರತದ ಶಕ್ತಿ ಇಲ್ಲಿಯ ವಿವಿಧತೆಯಲ್ಲಿಯೇ ಅಡಗಿದೆ ಎಂದು ಸರದಾರರು ನಂಬಿದ್ದರು. ಸರ್ದಾರ್ ಪಟೇಲರ ಈ ಭಾವನೆಯನ್ನು ಗೌರವಿಸುತ್ತಾ ಏಕತೆಗಾಗಿ ಇರುವ ಈ ಪ್ರಶಸ್ತಿಯ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೆದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ, 13 ಜನವರಿ ಗುರು ಗೋವಿಂದ ಸಿಂಗ ರ ಜಯಂತಿಯ ಪುಣ್ಯ ದಿನ. ಗುರು ಗೋವಿಂದ ಸಿಂಗರು ಜನಿಸಿದ್ದು ಪಟ್ನಾದಲ್ಲಿ. ಜೀವನದ ಅಧಿಕ ಸಮಯದವರೆಗೆ ಅವರ ಕರ್ಮ ಭೂಮಿ ಉತ್ತರ ಭಾರತವಾಗಿತ್ತು ಮತ್ತು ಮಹಾರಾಷ್ಟ್ರದ ನಾಂದೇಡ್ ನಲ್ಲಿ ಅವರು ತಮ್ಮ ಕೊನೆಯುಸಿರೆಳೆದರು. ಜನ್ಮಸ್ಥಳ ಪಟ್ನಾ, ಕರ್ಮ ಭೂಮಿ ಉತ್ತರ ಭಾರತ ಮತ್ತು ಜೀವನದ ಕೊನೆಯ ಕ್ಷಣಗಳು ನಾಂದೇಡ್ ನಲ್ಲಿ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಇಡೀ ಭಾರತ ದೇಶಕ್ಕೆ ಅವರ ಆಶೀರ್ವಾದ ಲಭಿಸಿತು. ಅವರ ಜೀವನ ಕಾಲವನ್ನು ನೋಡಿದರೆ ಅದರಲ್ಲಿ ಇಡೀ ಭಾರತದ ನೋಟ ಸಿಗುತ್ತದೆ. ತಮ್ಮ ತಂದೆ ಗುರು ತೇಜ್ ಬಹದ್ದೂರ್ ರು ಹುತಾತ್ಮರಾದ ಮೇಲೆ ಗುರು ಗೋವಿಂದ ಸಿಂಗ ರು 9 ನೇ ವರ್ಷದ ಸಣ್ಣ ವಯಸ್ಸಿನಲ್ಲಿಯೇ ಗುರುವಿಯ ಪದವಿ ಪಡೆದವರು. ಗುರು ಗೋವಿಂದ ಸಿಂಗರಿಗೆ ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಹಸ ಸಿಖ್ ಗುರುಗಳ ಪರಂಪರೆಯಿಂದಲೇ ಬಂದಿತ್ತು. ಅವರು ಶಾಂತ ಹಾಗೂ ಸರಳ ವ್ಯಕ್ತಿತ್ವದ ಧಣಿಯಾಗಿದ್ದರು. ಆದರೆ ಯಾವಾಗ ಬಡವರು ಮತ್ತು ದುರ್ಬಲರ ಧ್ವನಿಯನ್ನು ದಮನ ಮಾಡುವ ಪ್ರಯತ್ನ ಆಗುತ್ತಿತ್ತೋ, ಅವರೊಂದಿಗೆ ಅನ್ಯಾಯವಾಗುತ್ತಿತ್ತೋ ಆಗೆಲ್ಲಾ ಗುರು ಗೋವಿಂದ ಸಿಂಗರು ಬಡವರು ಮತ್ತು ದುರ್ಬಲರಿಗಾಗಿ ಧ್ರುದತೆಯಿಂದ ತಮ್ಮ ಧ್ವನಿ ಎತ್ತಿದ್ದರು ಮತ್ತು ಆದ್ದರಿಂದ
ಲಕ್ಷ ಲಕ್ಷ ಜನರೊಂದಿಗೆ ಒಬ್ಬನೇ ಹೋರಾಡುವೆನು
ಹದ್ದಿನಿಂದ ಹಕ್ಕಿಗಳನ್ನು ರಕ್ಷಿಸಬಲ್ಲೆನು
ಅದರಿಂದಲೇ ಗೋವಿಂದ ಸಿಂಹ ಎಂದು ಕರೆಸಿಕೊಳ್ಳುವೆನು

ದುರ್ಬಲರ ವಿರುದ್ಧ ಹೋರಾಡಿ ಶಕ್ತಿಯ ಪ್ರದರ್ಶನ ಮಾಡಲಾಗದು ಎಂದು ಅವರು ಹೇಳುತ್ತಿದ್ದರು. ಮಾನವನ ದುಃಖ ಗಳನ್ನೂ ದೂರಮಾಡುವುದು ಎಲ್ಲಕ್ಕಿಂತ ದೊಡ್ಡ ಸೇವೆ ಎಂದು ಶ್ರೀ ಗೋವಿಂದ ಸಿಂಗರು ಹೇಳುತ್ತಿದ್ದರು. ಅವರು ಶೌರ್ಯ, ವೀರತ್ವ, ತ್ಯಾಗ, ಧರ್ಮಪರಾಯಣತೆ, ಇವುಗಳಿಂದ ತುಂಬಿದ್ದ ದಿವ್ಯ ಪುರುಷರಾಗಿದ್ದರು. ಇವರಿಗೆ ಶಾಸ್ತ್ರ, ಶಸ್ತ್ರ, ಎರಡರ ಬಗ್ಗೆಯೂ ಅಲೌಕಿಕ ಜ್ನಾನವಿತ್ತು. ಅವರೊಬ್ಬ ಗುರಿಕಾರರಾಗಿದ್ದರು. ಜೊತೆಗೆ ಗುರುಮುಖಿ, ಬೃಜ್ ಭಾಷೆ, ಸಂಸ್ಕೃತ, ಪಾರ್ಸಿ, ಹಿಂದಿ ಮತ್ತು ಉರ್ದು ಸಹಿತ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ನಾನು ಮತ್ತೊಮ್ಮೆ ಗುರು ಗೋವಿಂದ ಸಿಂಗರಿಗೆ ವಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗದ ಬಹಳಷ್ಟು ಒಳ್ಳೆಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಂತಹದೇ ಒಂದು ಪ್ರಯತ್ನ FSSAI ಅಂದರೆ Food Safety and Standard Authority of India ದ ಮುಖಾಂತರ ನಡೆಯುತ್ತಿದೆ. ಮಹಾತ್ಮಾ ಗಾಂಧಿಯವರ 150- ನೇ ವರ್ಷಾಚರಣೆಯ ಅಂಗವಾಗಿ ದೇಶದೆಲ್ಲೆಡೆ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಸರಣಿಯಲ್ಲಿ FSSAI ಸೇಫ್ ಮತ್ತು healthy ಡಯಟ್ ಹ್ಯಾಬಿಟ್ – ಆಹಾರದ ಒಳ್ಳೆಯ ಅಭ್ಯಾಸಗಳಿಗೆ ಆದ್ಯತೆ ನೀಡುವುದರಲ್ಲಿ ತೊಡಗಿಕೊಂಡಿದೆ. ‘Eat Right India” ಅಭಿಯಾನದ ಅಡಿಯಲ್ಲಿ ದೇಶದೆಲ್ಲೆಡೆ ಸ್ವಸ್ಥ ಭಾರತ ಯಾತ್ರೆಗಳನ್ನು ನಡೆಸಲಾಗುತ್ತಿದೆ. ಈ ಅಭಿಯಾನವು ಜನವರಿ 27 ರ ವರೆಗೆ ನಡೆಯುತ್ತದೆ. ಕೆಲವೊಮ್ಮೆ ಸಹಕಾರಿ ಸಂಘಟನೆಗಳು ಒಂದು ನಿರ್ವಾಹಕದ ರೀತಿಯಲ್ಲಿ ಇರುತ್ತದೆ. ಆದರೆ FSSAI ಇದರಿಂದ ಮುಂದಕ್ಕೆ ಹೋಗಿ ಜನ ಜಾಗೃತಿ ಮತ್ತು ಲೋಕ ಶಿಕ್ಷಣದ ಕೆಲಸ ಮಾಡುತ್ತಿದೆ. ಎಂದು ಭಾರತ ಸ್ವಚ್ಚವಾಗುತ್ತದೋ, ಆರೋಗ್ಯಪೂರ್ಣವಾಗುತ್ತದೆಯೋ ಆಗ ಭಾರತ ಸಮೃದ್ಧವೂ ಆಗುತ್ತದೆ. ಒಳ್ಳೆಯ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಎಲ್ಲಕ್ಕಿಂತ ಮುಖ್ಯ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಿಗೆ FSSAI ಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬನ್ನಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಎನ್ನುವುದು ನಿಮ್ಮಲ್ಲಿ ನನ್ನ ಪ್ರಾರ್ಥನೆ. ನೀವೂ ಕೂಡ ಇದರಲ್ಲಿ ಭಾಗವಹಿಸಿ ಮತ್ತು ಮುಖ್ಯವಾಗಿ ಮಕ್ಕಳಿಗೆ ಇದನ್ನೆಲ್ಲಾ ತೋರಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಆಹಾರದ ಮಹತ್ವದ ಬಗ್ಗೆ ಶಿಕ್ಷಣವು ಬಾಲ್ಯದಿಂದಲೇ ಅವಶ್ಯಕವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, 2018 ರಲ್ಲಿ ಇದು ಕೊನೆಯ ಕಾರ್ಯಕ್ರಮ. 2019 ರಲ್ಲಿ ನಾವು ಮತ್ತೆ ಸಿಗೋಣ, ಮತ್ತೆ ಮನದ ಮಾತುಗಳನ್ನು ಆಡೋಣ. ವ್ಯಕ್ತಿಯ ಜೀವನವಿರಲಿ, ದೇಶದ ಜೀವನವಿರಲಿ, ಸಮಾಜದ ಜೀವನವಿರಲಿ, ಇದಕ್ಕೆಲ್ಲ ಪ್ರೇರಣೆ ಪ್ರಗತಿಯ ಆಧಾರವಾಗಿರುತ್ತದೆ. ಬನ್ನಿ, ಹೊಸ ಪ್ರೇರಣೆಯೇ, ಹೊಸ ಆಶಾಭಾವ, ಹೊಸ ಸಂಕಲ್ಪ, ಹೊಸ ಸಿದ್ಧಿ, ಹೊಸ ಎತ್ತರ, ಇವೆಲ್ಲದರ ಜೊತೆ ಮುಂದೆ ಸಾಗೋಣ ಬೆಳೆಯುತ್ತಾ ಸಾಗೋಣ, ನಾವೂ ಬದಲಾಗೋಣ, ದೇಶವನ್ನೂ ಬದಲಾಯಿಸೋಣ.

ಅನಂತಾನಂತ ಧನ್ಯವಾದಗಳು.

 

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Rejuvenation of Ganga should be shining example of cooperative federalism: PM Modi

Media Coverage

Rejuvenation of Ganga should be shining example of cooperative federalism: PM Modi
...

Nm on the go

Always be the first to hear from the PM. Get the App Now!
...
ಶೇರ್
 
Comments
I am a sevak, have come here to give account of BJP's achievements before people of Jharkhand, says PM Modi in Dumka
Opposition built palaces for themselves and their families when in power; they are not worried about people’s troubles: PM Modi in Jharkhand
Congress, allies have raised storm over citizenship law, they are behind unrest and arson: PM Modi in Dumka

The campaigning in Jharkhand has gained momentum as Prime Minister Shri Narendra Modi addressed a mega rally in Dumka today. Accusing Congress and the JMM, PM Modi said, “They do not have any roadmap for development of Jharkhand, nor do they have done anything in the past. But we understand your problems and work towards solving them.”

Hitting out at the opposition parties, he said, “The ones whom people of Jharkhand had trusted just worked for their own good. Those people had to be punished by you, but they are still not reformed. They have just been filling their treasury.”

Talking about the Citizenship Amendment Act, PM Modi said that to give respect to the minority communities from Pakistan, Afghanistan, & Bangladesh, who fled to India & were forced to live as refugees, both houses of parliament passed the Citizenship Amendment bill. “Congress and their allies are creating a ruckus. They are doing arson because they did not get their way. Those who are creating violence can be identified by their clothes itself. The work that has been done on Pakistan's money is now being done by Congress,” he said.

The Prime Minister outlined the progress and development successes of the Jharkhand. He said, “Before 2014, the Chief Minister of the state used to claim the construction of 30-35 thousand houses and described it as their achievement. But now we are moving forward with the resolve that every poor person in the country should have their own house.”

Addressing a poll meeting in Dumka, PM Modi said, "The BJP governments at the Centre and the state would continue to protect Jharkhand's 'jal', 'jungle' and 'jameen', no matter what the opposition parties say."

“In Jharkhand, the institutes of higher education, engineering and medical studies like IIT, AIIMS were opened, this is also done by BJP,” asserted PM Modi in Jharkhand's Dumka district. Also, the PM urged citizens of Jharkhand to come out and vote in large numbers.