| ಕ್ರಮ ಸಂ | ವಿವರಗಳು | |
|---|---|---|
| I. ತಂತ್ರಜ್ಞಾನ ಮತ್ತು ನಾವಿನ್ಯತೆ | ||
| 1. | ಭಾರತ-ಯುಕೆ ಸಂಪರ್ಕ ಮತ್ತು ನಾವಿನ್ಯತಾ ಕೇಂದ್ರದ ಸ್ಥಾಪನೆ. | |
| 2. | ಭಾರತ-ಯುಕೆ ಕೃತಕ ಬುದ್ಧಿಮತ್ತೆ (ಎಐ) ಜಂಟಿ ಕೇಂದ್ರ ಸ್ಥಾಪನೆ. | |
| 3. | ಯುಕೆ-ಭಾರತ ನಿರ್ಣಾಯಕ ಖನಿಜಗಳ ಸರಬರಾಜು ಸರಪಳಿ ವೀಕ್ಷಣಾಲಯದ ಎರಡನೇ ಹಂತದ ಉದ್ಘಾಟನೆ ಮತ್ತು ಐಐಟಿ-ಐಎಸ್‌ಎಂ ಧನ್ ಬಾದ್‌ನಲ್ಲಿ ಹೊಸ ಉಪಗ್ರಹ ಕ್ಯಾಂಪಸ್ ಸ್ಥಾಪನೆ. | |
| 4. | ಸ್ಥಿರ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಮತ್ತು ಹಸಿರು ತಂತ್ರಜ್ಞಾನ ಉತ್ತೇಜನಕ್ಕೆ ನಿರ್ಣಾಯಕ ಖನಿಜಗಳ ಉದ್ಯಮ ಗಿಲ್ಡ್ ಸ್ಥಾಪನೆ. | |
| II. ಶಿಕ್ಷಣ | ||
| 5. | ಬೆಂಗಳೂರಿನಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಆವರಣವನ್ನು ತೆರೆಯಲು ಉದ್ದೇಶ ಪತ್ರದ ಹಸ್ತಾಂತರ. | |
| 6. | GIFT (ಗುಜರಾತ್ ಅಂತಾರಾಷ್ಟ್ರೀಯ ಹಣಕಾಸು ತಂತ್ರಜ್ಞಾನ) ನಗರದಲ್ಲಿ ಸರ್ರೆ ವಿಶ್ವವಿದ್ಯಾಲಯದ ಕ್ಯಾಂಪಸ್ ತೆರೆಯಲು ತಾತ್ವಿಕ ಅನುಮೋದನೆ. | |
| III. ವ್ಯಾಪಾರ ಮತ್ತು ಹೂಡಿಕೆ | ||
| 7. | ಪುನಾರ್ ರಚಿಸಲಾದ ಭಾರತ-ಯುಕೆ ಸಿಇಒ ವೇದಿಕೆಯ ಉದ್ಘಾಟನಾ ಸಭೆ | |
| 8. | ಭಾರತ-ಯುಕೆ ಜಂಟಿ ಆರ್ಥಿಕ ವ್ಯಾಪಾರ ಸಮಿತಿ (JETCO) ಮರುಸ್ಥಾಪನೆ - ಇದು ಸಿಇಟಿಎ ಅನುಷ್ಠಾನವನ್ನು ಬೆಂಬಲಿಸುತ್ತದೆ ಮತ್ತು ಎರಡೂ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ. | |
| 9. | ಹವಾಮಾನ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ನವೀನ ಉದ್ಯಮಿಗಳನ್ನು ಬೆಂಬಲಿಸಲು ಯುಕೆ ಸರ್ಕಾರ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನಡುವಿನ ಒಪ್ಪಂದದ ಅಡಿಯಲ್ಲಿ ಒಂದು ಕಾರ್ಯತಂತ್ರದ ಉಪಕ್ರಮವಾದ ಹವಾಮಾನ ತಂತ್ರಜ್ಞಾನ ಸ್ಟಾರ್ಟ್ಅಪ್ ನಿಧಿಯಲ್ಲಿ ಹೊಸ ಜಂಟಿ ಹೂಡಿಕೆ. | |
| IV. ಹವಾಮಾನ, ಆರೋಗ್ಯ ಮತ್ತು ಸಂಶೋಧನೆ | ||
| 10. | ಜೈವಿಕ-ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮದ ಹಂತ III ರ ಉದ್ಘಾಟನೆ. | |
| 11. | ಕಡಲಾಚೆಯ ಪವನ ಕಾರ್ಯಪಡೆ ಸ್ಥಾಪನೆ. | |
| 12. | ಆರೋಗ್ಯ ಸಂಶೋಧನೆಯ ಕುರಿತು ICMR ಮತ್ತು NIHR, ಯುನೈಟೆಡ್ ಕಿಂಗ್‌ಡಮ್ ನಡುವಿನ ಉದ್ದೇಶ ಪತ್ರ (LoI). | |


