ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಫಲಾನುಭವಿಗಳು ಮತ್ತು ಜನೌಷಧಿ ಕೇಂದ್ರಗಳ ಮಳಿಗೆ ಮಾಲಿಕರುಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು.

ಜನೌಷಧಿ ದಿನ ಕೇವಲ ಯೋಜನೆಯನ್ನು ಸಂಭ್ರಮಿಸುವ ದಿನವಷ್ಟೇ ಅಲ್ಲ, ಇದು ಯೋಜನೆಯ ಲಾಭ ಪಡೆದ ಲಕ್ಷಾಂತರ ಜನರೊಂದಿಗೆ ಸಂಪರ್ಕಿತವಾಗುವ ದಿನವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಪ್ರತಿಯೊಬ್ಬ ಭಾರತೀಯರ ಆರೋಗ್ಯಕ್ಕಾಗಿ ನಾವು ನಾಲ್ಕು ಗುರಿಗಳತ್ತ ಕಾರ್ಯೋನ್ಮುಖರಾಗಿದ್ದೇವೆ. ಮೊದಲನೆಯದು ಪ್ರತಿಯೊಬ್ಬ ಭಾರತೀಯನನ್ನೂ ಕಾಯಿಲೆಯಿಂದ ರಕ್ಷಿಸಬೇಕು, ಎರಡನೆಯದು ಕಾಯಿಲೆ ಬಂದಾಗ ಉತ್ತಮ ಮತ್ತು ಕೈಗೆಟಕುವ ದರದ ಚಿಕಿತ್ಸೆ ಸಿಗಬೇಕು, ಮೂರನೆಯದು ಚಿಕಿತ್ಸೆ ನೀಡಲು ಆಧುನಿಕ ಆಸ್ಪತ್ರೆಗಳು, ಅಗತ್ಯ ಸಂಖ್ಯೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಮತ್ತು ನಾಲ್ಕನೆಯ ಗುರಿ, ಅಭಿಯಾನದೋಪಾದಿಯಲ್ಲಿ ಕಾರ್ಯನಿರ್ವಹಿಸಿ ಸವಾಲುಗಳನ್ನು ಎದುರಿಸುವುದಾಗಿದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.

ಜನೌಷಧಿ ಯೋಜನೆ ದೇಶದಲ್ಲಿನ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸೆ ಒದಗಿಸುವ ಮಹತ್ವದ ಕೊಂಡಿಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

“ಈವರೆಗೆ ದೇಶದಾದ್ಯಂತ 6 ಸಾವಿರ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು, ತಮಗೆ ತೃಪ್ತಿ ತಂದಿದೆ ಎಂದು ಹೇಳಿದ ಪ್ರಧಾನಮಂತ್ರಿ ಈ ಜಾಲ ಬೆಳೆದಂತೆ ಇನ್ನೂ ಹೆಚ್ಚಿನ ಜನರಿಗೆ ಇದರ ಪ್ರಯೋಜನ ದೊರಕುತ್ತದೆ ಎಂದರು. ಇಂದು ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧಿ ಪಡೆದುಕೊಳ್ಳುತ್ತಿವೆ”, ಎಂದೂ ತಿಳಿಸಿದರು.

ಜನೌಷಧಿಯ ದರಗಳು ಮಾರುಕಟ್ಟೆ ದರಕ್ಕಿಂತ ಶೇ.50ರಿಂದ ಶೇ.90ರವರೆಗೆ ಕಡಿಮೆ ಇರುತ್ತವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಉದಾಹರಣೆಗೆ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಒಂದು ಔಷಧಿ ಆರೂವರೆ ಸಾವಿರಕ್ಕೆ ಮಾರುಕಟ್ಟೆಯಲ್ಲಿ ದೊರೆತರೆ, ಅದು ಜನೌಷಧ ಕೇಂದ್ರದಲ್ಲಿ ಕೇವಲ 800 ರೂ.ಗೆ ಲಭ್ಯ ಎಂದರು.

“ಈ ಹಿಂದಿಗೆ ಹೋಲಿಸಿದರೆ, ಚಿಕಿತ್ಸೆಯ ವೆಚ್ಚ ತಗ್ಗಿದೆ. ಈವರೆಗೆ ಬಡ ಮತ್ತು ಮಧ್ಯಮವರ್ಗದ ಭಾರತೀಯರಿಗೆ ದೇಶದಾದ್ಯಂತ ಜನೌಷಧ ಕೇಂದ್ರಗಳ ಖರೀದಿಯ ಮೂಲಕ 2200 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ತಮಗೆ ತಿಳಿಸಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.

ಪ್ರಧಾನಮಂತ್ರಿಯವರು ಜನೌಷಧಿ ಕೇಂದ್ರಗಳನ್ನು ನಡೆಸುತ್ತಿರುವ ಬಾಧ್ಯಸ್ಥರ ಪಾತ್ರವನ್ನೂ ಶ್ಲಾಘಿಸಿದರು. ಯೋಜನೆಯೊಂದಿಗೆ ಸಂಪರ್ಕಿತರಾಗಿರುವವರ ಕೊಡುಗೆಯನ್ನು ಗುರುತಿಸಿ ಜನೌಷಧಿ ಯೋಜನೆಗೆ ಸಂಬಂಧಿಸಿದಂತೆ ಪ್ರಶಸ್ತಿ ಪ್ರಕಟಿಸುವ ನಿರ್ಧಾರದ ಬಗ್ಗೆಯೂ ಅವರು ಘೋಷಿಸಿದರು.

ಜನೌಷಧಿ ಯೋಜನೆ ದಿವ್ಯಾಂಗರೂ ಸೇರಿದಂತೆ ಯುವಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಪ್ರಯೋಗಾಲಯಗಳಲ್ಲಿ ಜನೌಷಧಿ ಪರೀಕ್ಷೆಯಿಂದ ಹಿಡಿದು, ಕೊನೆಯ ಮೈಲಿನವರೆಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಅದರ ವಿತರಣೆ ಮಾಡುವವರೆಗೆ ವಿವಿಧ ಪ್ರಕ್ರಿಯೆಗಳಲ್ಲಿ ಸಾವಿರಾರು ಯುವಜನರು ತೊಡಗಿಕೊಂಡಿದ್ದಾರೆ ಎಂದರು.

“ದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಜನೌಷಧಿ ಯೋಜನೆಯನ್ನು ಹೆಚ್ಚು ಸಮರ್ಥಗೊಳಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ” ಎಂದೂ ಹೇಳಿದರು.

ಸುಮಾರು 90 ಲಕ್ಷ ಬಡ ರೋಗಿಗಳು ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಡಯಾಲಿಸಿಸ್ ಗಳನ್ನು ಉಚಿತವಾಗಿ ನಡೆಸಲಾಗಿದೆ ಸಾವಿರಕ್ಕೂ ಹೆಚ್ಚು ಅವಶ್ಯಕ ಔಷಧಗಳ ದರವನ್ನು ನಿಯಂತ್ರಿಸಲಾಗಿದ್ದು, 12,500 ಕೋಟಿ ರೂ. ಉಳಿತಾಯವಾಗಿದೆ ಎಂದರು. ಸ್ಟಂಟ್ಸ್ ಮತ್ತು ಮಂಡಿ ಚಿಪ್ಪು ಬದಲಾವಣೆಯ ವೆಚ್ಚ ಕಡಿತದಿಂದ ಲಕ್ಷಾಂತರ ರೋಗಿಗಳು ಹೊಸ ಜೀವನ ಪಡೆದಿದ್ದಾರೆ ಎಂದರು.

“2025ನೇ ವರ್ಷದ ಹೊತ್ತಿಗೆ ದೇಶವನ್ನು ಕ್ಷಯರೋಗ ಮುಕ್ತಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಈ ಯೋಜನೆಯಡಿ ಆಧುನಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ದೇಶದ ಪ್ರತಿ ಹಳ್ಳಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ದಿನಾಂಕದವರೆಗೆ 31 ಸಾವಿರಕ್ಕೂ ಹೆಚ್ಚು ಕೇಂದ್ರಗಳು ಪೂರ್ಣಗೊಂಡಿವೆ”, ಎಂದೂ ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರೋಗ್ಯದ ಬಗ್ಗೆ ಆಕೆಯ ಅಥವಾ ಆತನ ಬದ್ಧತೆಯನ್ನು ಅರಿತುಕೊಳ್ಳಬೇಕು ಎಂದು ಆಗ್ರಹಿಸಿದರು.

“ನಾವು ಸ್ವಚ್ಛತೆಗೆ, ಯೋಗಕ್ಕೆ, ಸಮತೋಲಿತ ಆಹಾರಕ್ಕೆ, ಕ್ರೀಡೆ ಮತ್ತು ಇತರ ವ್ಯಾಯಾಮಗಳಿಗೆ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಮಹತ್ವ ನೀಡಬೇಕು. ಸದೃಢತೆಯತ್ತ ನಮ್ಮ ಪ್ರಯತ್ನಗಳು ಆರೋಗ್ಯವಂತ ಭಾರತದ ಸಂಕಲ್ಪವನ್ನು ಸಾಬೀತು ಪಡಿಸುತ್ತವೆ ಎಂದೂ ಪ್ರಧಾನಮಂತ್ರಿ ತಿಳಿಸಿದರು.

 

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's crude steel output up 21.4% at 9.4 MT in June: Worldsteel

Media Coverage

India's crude steel output up 21.4% at 9.4 MT in June: Worldsteel
...

Nm on the go

Always be the first to hear from the PM. Get the App Now!
...
#NaMoAppAbhiyaan has turned into a Digital Jan Andolan.
August 03, 2021
ಶೇರ್
 
Comments

Within less than a month of its launch, #NaMoAppAbhiyaan is set to script history in digital volunteerism. Engagement is only increasing every single day. Come join, be a part of the Abhiyaan.