Subsidy on DAP fertiliser hiked by 140%
Farmers to get subsidy of Rs 1200 per bag of DAP instead of Rs 500
Farmers to get a bag of DAP for Rs 1200 instead of Rs 2400
Government to spend additional Rs 14,775 crore towards this subsidy
Farmer should get fertilisers at old rates despite international price rise: PM
Welfare of Farmers at the core of Government’s efforts: PM

ರಸಗೊಬ್ಬರ ದರ ಕುರಿತಂತೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದರು. ರಸಗೊಬ್ಬರ ದರದ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಪ್ರಾತ್ಯಕ್ಷಿಕೆಯನ್ನು ಅವರಿಗೆ ನೀಡಲಾಯಿತು.

ಫಾಸ್ಪರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿರುವುದರ ಪರಿಣಾಮವಾಗಿ ರಸಗೊಬ್ಬರಗಳ ದರ ಹೆಚ್ಚಳ ಕಂಡಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು. ಅಂತರಾಷ್ಟ್ರೀಯ ದರ ಏರಿಕೆಯ ನಡುವೆಯೂ ರೈತರು ಹಿಂದಿನ ದರದಲ್ಲೇ ರಸಗೊಬ್ಬರ ಪಡೆಯಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಡಿಎಪಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ 500 ರೂ.ಗಳಿಂದ 1200 ರೂ.ಗೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದು ಪ್ರತಿಶತ 140ರಷ್ಟು ಹೆಚ್ಚಳವಾಗಿದೆ. ಡಿಎಪಿಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದಾಗ್ಯೂ, ಅದನ್ನು ಹಳೆಯ ದರದಲ್ಲಿ ಅಂದರೆ 1200ರೂ.ಗೆ. ಮಾರಾಟ ಮಾಡಲು ನಿರ್ಧರಿಸಲಾಯಿತು ಮತ್ತು ಕೇಂದ್ರ ಸರ್ಕಾರ ಈ ದರ ಏರಿಕೆಯ ಸಂಪೂರ್ಣ ಹೊರೆಯನ್ನು ಹೊರಲು ನಿರ್ಧರಿಸಿತು. ಹಿಂದೆಂದೂ ಇಷ್ಟು ದೊಡ್ಡ  ಪ್ರಮಾಣದಲ್ಲಿ ಪ್ರತಿ ಚೀಲದ ಸಬ್ಸಿಡಿಯನ್ನು ಹೆಚ್ಚಿಸಲಾಗಿರಲಿಲ್ಲ. 

ಕಳೆದ ವರ್ಷ, ಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ 1700 ಇತ್ತು. ಇದರಲ್ಲಿ ಕೇಂದ್ರ ಸರ್ಕಾರ 500 ರೂ. ಸಹಾಯಧನ ನೀಡುತ್ತಿತ್ತು. ಹೀಗಾಗಿ ಕಂಪನಿಗಳು ರಸಗೊಬ್ಬರವನ್ನು ಪ್ರತಿ ಚೀಲಕ್ಕೆ 1200 ರೂ.ನಂತೆ ಮಾರಾಟ ಮಾಡುತ್ತಿದ್ದವು.

ಇತ್ತೀಚೆಗೆ, ಡಿಎಪಿಯಲ್ಲಿ ಬಳಸಲಾಗುವ ಫಾಸ್ಫರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯವಾಗಿ ಶೇ.60ರಿಂದ 70ರಷ್ಟು ಹೆಚ್ಚಳವಾಯಿತು. ಹೀಗಾಗಿ ಡಿಎಪಿಯ ವಾಸ್ತವ ದರ ಪ್ರತಿ ಚೀಲಕ್ಕೆ ಈಗ 2400 ರೂ. ಆಗಿದ್ದು, ರಸಗೊಬ್ಬರ ಕಂಪನಿಗಳನ್ನು ಅದನ್ನು ಸರ್ಕಾರದ 500 ರೂ. ಸಹಾಯಧನ ಕಡಿತದ ಬಳಿಕ 1900 ರೂ.ಗೆ ಮಾರಾಟ ಮಾಡಬೇಕಾಗಿತ್ತು. ಆದರೆ ಇಂದಿನ ನಿರ್ಧಾರದಿಂದಾಗಿ ರೈತರು ಡಿಎಪಿಯನ್ನು ಪ್ರತಿ ಚೀಲಕ್ಕೆ 1200 ರೂ.ಗೆ ಪಡೆಯಲಿದ್ದಾರೆ.

ಈ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ  ಮತ್ತು ರೈತರು ಬೆಲೆ ಏರಿಕೆಯ ಭೀತಿಯನ್ನು ಎದುರಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂ.ಗಳನ್ನು ಪ್ರತಿ ವರ್ಷ ರಾಸಾಯನಿಕ ಗೊಬ್ಬರಗಳ ಮೇಲಿನ ಸಹಾಯಧನಕ್ಕೆ ವೆಚ್ಚ ಮಾಡುತ್ತದೆ. ಡಿಎಪಿಯ ಸಹಾಯಧನ ಹೆಚ್ಚಳದೊಂದಿಗೆ ಭಾರತ ಸರ್ಕಾರವು ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು ಈ ಮುಂಗಾರು ಹಂಗಾಮಿನಲ್ಲಿ ಸಬ್ಸಿಡಿ ರೂಪದಲ್ಲಿ ವೆಚ್ಚ ಮಾಡುತ್ತದೆ.

ನೇರವಾಗಿ ರೈತರ ಖಾತೆಗಳಿಗೆ ಪಿ.ಎಂ. ಕಿಸಾನ್ ಅಡಿಯಲ್ಲಿ ಅಕ್ಷಯ ತೃತೀಯದ ದಿನ 20,667 ಕೋಟಿ ರೂ. ವರ್ಗಾವಣೆ ಮಾಡಿದ ಬಳಿಕ ಇದು ರೈತರ ಹಿತದೃಷ್ಟಿಯಿಂದ ಕೈಗೊಂಡಿರುವ ಎರಡನೇ ಪ್ರಮುಖ ನಿರ್ಧಾರವಾಗಿದೆ,

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s PC exports double in a year, US among top buyers

Media Coverage

India’s PC exports double in a year, US among top buyers
NM on the go

Nm on the go

Always be the first to hear from the PM. Get the App Now!
...
PM Congratulates India’s Men’s Junior Hockey Team on Bronze Medal at FIH Hockey Men’s Junior World Cup 2025
December 11, 2025

The Prime Minister, Shri Narendra Modi, today congratulated India’s Men’s Junior Hockey Team on scripting history at the FIH Hockey Men’s Junior World Cup 2025.

The Prime Minister lauded the young and spirited team for securing India’s first‑ever Bronze medal at this prestigious global tournament. He noted that this remarkable achievement reflects the talent, determination and resilience of India’s youth.

In a post on X, Shri Modi wrote:

“Congratulations to our Men's Junior Hockey Team on scripting history at the FIH Hockey Men’s Junior World Cup 2025! Our young and spirited team has secured India’s first-ever Bronze medal at this prestigious tournament. This incredible achievement inspires countless youngsters across the nation.”