ಕೆನಡಾದ ವಿದೇಶಾಂಗ ಸಚಿವರಾದ ಶ್ರೀಮತಿ ಅನಿತಾ ಆನಂದ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿಯವರು ವಿದೇಶಾಂಗ ಸಚಿವರಾದ ಶ್ರೀಮತಿ ಅನಿತಾ ಆನಂದ್ ಅವರನ್ನು ಸ್ವಾಗತಿಸಿ, ಉಭಯ ನಾಯಕರ ಭೇಟಿಯು ಭಾರತ ಹಾಗೂ ಕೆನಡಾದ ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ಆವೇಗವನ್ನು ನೀಡುವ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಈ ವರ್ಷದ ಜೂನ್‌ನಲ್ಲಿ ಜಿ-7 ಶೃಂಗಸಭೆಗಾಗಿ ಕೆನಡಾಕ್ಕೆ ತಾವು ನೀಡಿದ್ದ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಅವರು, ಆ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾರ್ಕ್ ಕಾರ್ನಿಯವರೊಂದಿಗಿನ ಅತ್ಯಂತ ಫಲಪ್ರದ ಸಭೆಯನ್ನೂ ಕೂಡ ಮೆಲುಕುಹಾಕಿದರು.
ವ್ಯಾಪಾರ, ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಉಭಯ ದೇಶದ ಜನರ ನಡುವಿನ ಸಂಬಂಧಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ವೃದ್ಧಿಯ ಮಹತ್ವವನ್ನು ಕೂಡಾ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.
ಪ್ರಧಾನಮಂತ್ರಿ ಮಾರ್ಕ್ ಕಾರ್ನಿಯವರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿ, ತಮ್ಮಿಬ್ಬರ ಮುಂಬರುವ ಭೇಟಿ ಕಾರ್ಯಕ್ರಮಗಳ ನಿರೀಕ್ಷಣೆಯಲ್ಲಿರುವುದಾಗಿ ಪ್ರಧಾನಮಂತ್ರಿ ಮೋದಿ ಅವರು ಸಂದೇಶ ರವಾನಿಸಿದ್ದಾರೆ.
Welcomed Canada’s Foreign Minister, Ms. Anita Anand. Discussed ways to strengthen cooperation in trade, technology, energy, agriculture and people-to-people exchanges for mutual growth and prosperity.@AnitaAnandMP pic.twitter.com/GCQfbJvBh4
— Narendra Modi (@narendramodi) October 13, 2025


