“We have to transform India’s economy. On one hand manufacturing sector is to be enhanced, while on the other side, we have to make sure it directly benefits the youth. They must get jobs so that lives of poorest of the poor stands transformed and they come out of the poverty line. Enhancing their purchasing power would increase the number of manufacturers, manufacturing growth, employment opportunities and expand the market.” –Narendra Modi
The cloth industry in Varanasi was badly hit due to lack of basic facilities. It was only after Prime Minister Narendra Modi’s efforts that the weaver community in the region have a reason to rejoice. The Centre has allotted a corpus of Rs. 347 crore for revamping the cloth and handicraft industries in Varanasi.
The impact of Centre’s ‘Make in India’ and ‘Skill India’ is clearly visible in Varanasi. A dedicated textile facilitation centre has been developed worth Rs. 305 crores for technical advancement and other facilities for the handicraft and weaver industries. Also, common facilitation centres have been set up to further aid the weavers.
A branch of National Institute of Fashion Technology and a regional silk technological research station have come up. Alongside, with a corpus of Rs. 31 crore, a scheme has been initiated for overall development of handicraft industry.
The cloth industry offers maximum opportunities in the manufacturing sector. Employment opportunities are set to grow in the region under Prime Minister Modi’s ‘Make In India’ initiative.
ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
January 04, 2026
Share
ಭಾರತದ ಅಭಿವೃದ್ಧಿಯ ಯಶೋಗಾಥೆ ಮತ್ತು ವಾಲಿಬಾಲ್ ಆಟದ ನಡುವೆ ಅನೇಕ ಹೋಲಿಕೆಗಳಿವೆ. ಯಾವುದೇ ಗೆಲುವನ್ನು ಒಂಟಿಯಾಗಿ ಸಾಧಿಸಲು ಸಾಧ್ಯವಿಲ್ಲ; ನಮ್ಮ ಸಮನ್ವಯ, ನಮ್ಮ ನಂಬಿಕೆ ಮತ್ತು ನಮ್ಮ ತಂಡದ ಸನ್ನದ್ಧತೆಯ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿದೆ ಎಂದು ವಾಲಿಬಾಲ್ ನಮಗೆ ಕಲಿಸುತ್ತದೆ: ಪ್ರಧಾನಮಂತ್ರಿ
ಪ್ರತಿಯೊಬ್ಬರಿಗೂ ತಮ್ಮದೇ ಆದ ಪಾತ್ರವಿದೆ, ತಮ್ಮದೇ ಆದ ಜವಾಬ್ದಾರಿ ಇದೆ ಮತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪರಿಪೂರ್ಣತೆಯಿಂದ ಪೂರೈಸಿದಾಗ ಮಾತ್ರ ನಾವು ಯಶಸ್ವಿಯಾಗುತ್ತೇವೆ; ನಮ್ಮ ರಾಷ್ಟ್ರವೂ ಅದೇ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ: ಪ್ರಧಾನಮಂತ್ರಿ
2014ರಿಂದ, ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರದರ್ಶನವು ಸ್ಥಿರವಾಗಿ ಸುಧಾರಿಸುತ್ತಿದೆ, ʻಜೆನ್-ಝಡ್ʼ ತಲೆಮಾರಿನವರು ಆಟದ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನೋಡಿದಾಗ ನಮಗೆ ಅಪಾರ ಹೆಮ್ಮೆ ಎನಿಸುತ್ತದೆ: ಪ್ರಧಾನಮಂತ್ರಿ
2030ರ ʻಕಾಮನ್ವೆಲ್ತ್ ಕ್ರೀಡಾಕೂಟʼ ಭಾರತದಲ್ಲಿ ನಡೆಯಲಿದ್ದು, 2036ರ ʻಒಲಿಂಪಿಕ್ಸ್ʼಗೂ ಆತಿಥ್ಯ ವಹಿಸಲು ದೇಶವು ಬಲವಾದ ಪ್ರಯತ್ನಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ
ಹರ್ ಹರ್ ಮಹಾದೇವ್!
ಉತ್ತರ ಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜಿ, ಉತ್ತರ ಪ್ರದೇಶದ ಸಚಿವರಾದ ಸಹೋದರ ರವೀಂದ್ರ ಜೈಸ್ವಾಲ್ ಜಿ, ದಯಾಶಂಕರ್ ಜಿ, ಗಿರೀಶ್ ಯಾದವ್ ಜಿ, ಬನಾರಸ್ ಮೇಯರ್ ಅಶೋಕ್ ತಿವಾರಿ ಜಿ, ಇತರೆ ಜನಪ್ರತಿನಿಧಿಗಳೆ, ವಾಲಿಬಾಲ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳೆ, ದೇಶಾದ್ಯಂತ ಬಂದಿರುವ ಆಟಗಾರರೆ ಮತ್ತು ಕಾಶಿಯ ನನ್ನ ಕುಟುಂಬ ಸದಸ್ಯರೆಲ್ಲರಿಗೂ ನಮಸ್ಕಾರ.
ಕಾಶಿಯ ಸಂಸದನಾಗಿ ಎಲ್ಲಾ ಆಟಗಾರರನ್ನು ಸ್ವಾಗತಿಸಲು ಮತ್ತು ಅಭಿನಂದಿಸಲು ನನಗೆ ಅಪಾರ ಸಂತೋಷವಾಗಿದೆ. ಇಂದು ಕಾಶಿಯಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉದ್ಘಾಟನೆಯಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಅಪಾರ ಕಠಿಣ ಪರಿಶ್ರಮದ ನಂತರ ಈ ರಾಷ್ಟ್ರೀಯ ಪಂದ್ಯಾವಳಿಗೆ ತಲುಪಿದ್ದೀರಿ. ಮುಂಬರುವ ದಿನಗಳಲ್ಲಿ ಕಾಶಿಯ ಮೈದಾನದಲ್ಲಿ ನಿಮ್ಮ ಪ್ರಯತ್ನಗಳನ್ನು ಪರೀಕ್ಷಿಸಲಾಗುವುದು. ದೇಶದ 28 ರಾಜ್ಯಗಳ ತಂಡಗಳು ಇಲ್ಲಿ ಒಟ್ಟುಗೂಡಿವೆ ಎಂಬುದು ನನಗೆ ತಿಳಿದಿದೆ. ಇದು ಏಕ ಭಾರತ, ಶ್ರೇಷ್ಠ ಭಾರತ(ಒಂದು ಭಾರತ, ಶ್ರೇಷ್ಠ ಭಾರತ)ದ ಸುಂದರ ಚಿತ್ರಣವನ್ನು ನೀಡುತ್ತದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ಇಲ್ಲಿ ಬನಾರಸ್‌ನಲ್ಲಿ "ನೀವು ನಿಜವಾಗಿಯೂ ಬನಾರಸ್ ತಿಳಿದುಕೊಳ್ಳಬೇಕೆಂದರೆ ನೀವು ಬನಾರಸ್‌ಗೇ ಬರಬೇಕು" ಎಂದು ಹೆಚ್ಚಾಗಿ ಹೇಳಲಾಗುತ್ತದೆ. ನೀವೆಲ್ಲರೂ ಇಲ್ಲಿಗೆ ಬಂದಿದ್ದೀರಿ, ಈಗ ನೀವು ಬನಾರಸ್ ಅನ್ನು ತಿಳಿದುಕೊಳ್ಳುವಿರಿ. ನಮ್ಮ ಬನಾರಸ್ ಕ್ರೀಡಾ ಪ್ರಿಯರ ನಗರ. ಕುಸ್ತಿ, ಕುಸ್ತಿ ಅಖಾಡಗಳು, ಬಾಕ್ಸಿಂಗ್, ದೋಣಿ ರೇಸ್‌ಗಳು, ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳು ಇಲ್ಲಿ ಬಹಳ ಜನಪ್ರಿಯವಾಗಿವೆ. ಬನಾರಸ್ ಹಲವಾರು ರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರಿಸಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಯುಪಿ ಕಾಲೇಜು ಮತ್ತು ಕಾಶಿ ವಿದ್ಯಾಪೀಠದ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಕಾಶಿ ಸಾವಿರಾರು ವರ್ಷಗಳಿಂದ, ಜ್ಞಾನ ಮತ್ತು ಕಲೆಯ ಅನ್ವೇಷಣೆಯಲ್ಲಿ ಇಲ್ಲಿಗೆ ಬರುವ ಎಲ್ಲರನ್ನು ಸ್ವಾಗತಿಸಿದೆ. ಅದಕ್ಕಾಗಿಯೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಸಮಯದಲ್ಲಿ, ಬನಾರಸ್‌ನ ಉತ್ಸಾಹವು ಹೆಚ್ಚಾಗಿರುತ್ತದೆ ಎಂಬ ವಿಶ್ವಾಸ ನನಗಿದೆ. ನಿಮ್ಮನ್ನು ಹುರಿದುಂಬಿಸುವ ಪ್ರೇಕ್ಷಕರನ್ನು ನೀವು ಕಾಣಬಹುದು ಮತ್ತು ಕಾಶಿಯ ಆತಿಥ್ಯ ಸಂಪ್ರದಾಯಗಳನ್ನು ಸಹ ನೀವು ಅನುಭವಿಸುವಿರಿ.
ಸ್ನೇಹಿತರೆ,
ವಾಲಿಬಾಲ್ ಕೇವಲ ಸಾಮಾನ್ಯ ಕ್ರೀಡೆಯಲ್ಲ. ನೆಟ್‌ನ ಎರಡೂ ಬದಿಗಳಲ್ಲಿ, ಇದು ಸಮತೋಲನದ ಆಟ, ಸಹಕಾರದ ಆಟ, ಇದು ದೃಢನಿಶ್ಚಯವನ್ನು ಪ್ರತಿಬಿಂಬಿಸುತ್ತದೆ. ವಾಲಿಬಾಲ್‌ನ ಸಾರವೆಂದರೆ ಚೆಂಡನ್ನು ಯಾವಾಗಲೂ ಮೇಲಕ್ಕೆ ಎತ್ತಬೇಕು, ಏನೇ ಇರಲಿ. ವಾಲಿಬಾಲ್ ನಮ್ಮನ್ನು ತಂಡದ ಮನೋಭಾವದೊಂದಿಗೆ ಸಂಪರ್ಕಿಸುತ್ತದೆ. ಪ್ರತಿಯೊಬ್ಬ ವಾಲಿಬಾಲ್ ಆಟಗಾರನ ಮಂತ್ರ ತಂಡ ಮೊದಲು ಎಂಬುದು. ಪ್ರತಿಯೊಬ್ಬ ಆಟಗಾರನು ವಿಭಿನ್ನ ಕೌಶಲ್ಯಗಳನ್ನು ಹೊಂದಿರಬಹುದು, ಆದರೆ ಎಲ್ಲರೂ ತಮ್ಮ ತಂಡದ ಗೆಲುವಿಗಾಗಿ ಆಡುತ್ತಾರೆ. ಭಾರತದ ಅಭಿವೃದ್ಧಿ ಕಥೆ ಮತ್ತು ವಾಲಿಬಾಲ್ ಆಟದ ನಡುವೆ ನಾನು ಅನೇಕ ಸಮಾನಾಂತರಗಳನ್ನು ನೋಡುತ್ತೇನೆ. ಯಾವುದೇ ಗೆಲುವು ಎಂದಿಗೂ ಏಕಾಂಗಿಯಾಗಿ ಸಾಧಿಸಲಾಗುವುದಿಲ್ಲ ಎಂದು ವಾಲಿಬಾಲ್ ನಮಗೆ ಕಲಿಸುತ್ತದೆ. ನಮ್ಮ ಯಶಸ್ಸು ನಮ್ಮ ಸಮನ್ವಯ, ನಮ್ಮ ನಂಬಿಕೆ ಮತ್ತು ನಮ್ಮ ತಂಡದ ಸಿದ್ಧತೆಯನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಪಾತ್ರ, ಅವರ ಸ್ವಂತ ಜವಾಬ್ದಾರಿ ಇದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ಪೂರೈಸಿದಾಗ ಮಾತ್ರ ನಾವು ಯಶಸ್ವಿಯಾಗುತ್ತೇವೆ.
ನಮ್ಮ ರಾಷ್ಟ್ರವೂ ಅದೇ ರೀತಿ ಪ್ರಗತಿ ಸಾಧಿಸುತ್ತಿದೆ. ಸ್ವಚ್ಛತೆಯಿಂದ ಡಿಜಿಟಲ್ ಪಾವತಿಗಳವರೆಗೆ, ಒಬ್ಬರ ತಾಯಿಯ ಹೆಸರಿನಲ್ಲಿ ಸಸಿ ನೆಡುವುದರಿಂದ ಹಿಡಿದು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿಯಾನದವರೆಗೆ - ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮುದಾಯ, ಪ್ರತಿಯೊಂದು ರಾಜ್ಯವು ಸಾಮೂಹಿಕ ಪ್ರಜ್ಞೆಯೊಂದಿಗೆ, ಭಾರತ ಮೊದಲು ಎಂಬ ಮನೋಭಾವದೊಂದಿಗೆ, ರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ನಾವು ಮುಂದುವರಿಯುತ್ತಿದ್ದೇವೆ.
ಸ್ನೇಹಿತರೆ,
ಇಂದು ಭಾರತದ ಬೆಳವಣಿಗೆ ಮತ್ತು ನಮ್ಮ ಆರ್ಥಿಕತೆಯನ್ನು ವಿಶ್ವಾದ್ಯಂತ ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ. ಆದರೆ ಒಂದು ರಾಷ್ಟ್ರ ಅಭಿವೃದ್ಧಿ ಹೊಂದಿದಾಗ, ಪ್ರಗತಿ ಎಂದಿಗೂ ಆರ್ಥಿಕ ರಂಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಆ ಆತ್ಮವಿಶ್ವಾಸವು ಕ್ರೀಡಾ ಕ್ಷೇತ್ರದ ಮೇಲೂ ಹೊಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಕ್ರೀಡೆಯಲ್ಲೂ ನಾವು ಇದನ್ನೇ ನೋಡುತ್ತಿದ್ದೇವೆ. 2014ರಿಂದ, ವಿವಿಧ ವಿಭಾಗಗಳಲ್ಲಿ ಭಾರತದ ಸಾಧನೆ ಸ್ಥಿರವಾಗಿ ಸುಧಾರಿಸಿದೆ. ಜೆನ್-ಝಡ್ ಕ್ರೀಡಾಪಟುಗಳು ಆಟದ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನೋಡಿದಾಗ ನಮಗೆ ಅಪಾರ ಹೆಮ್ಮೆ ಅನಿಸುತ್ತದೆ.
ಸ್ನೇಹಿತರೆ,
ಸರ್ಕಾರ ಮತ್ತು ಸಮಾಜ ಎರಡೂ ಕ್ರೀಡೆಗಳ ಬಗ್ಗೆ ಅಸಡ್ಡೆ ತೋರುತ್ತಿದ್ದ ಕಾಲವಿತ್ತು. ಇದರಿಂದಾಗಿ ಆಟಗಾರರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಯ ಹೊಂದಿದ್ದರು, ಕೆಲವೇ ಯುವಕರು ಕ್ರೀಡೆಗಳನ್ನು ವೃತ್ತಿಯಾಗಿ ಆರಿಸಿಕೊಂಡರು. ಆದರೆ ಕಳೆದ ದಶಕದಲ್ಲಿ, ಸರ್ಕಾರ ಮತ್ತು ಸಮಾಜದ ಮನಸ್ಥಿತಿಯಲ್ಲಿ ಪರಿವರ್ತನೆಯನ್ನು ನಾವು ಕಂಡಿದ್ದೇವೆ. ಸರ್ಕಾರವು ಕ್ರೀಡಾ ಬಜೆಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇಂದು ಭಾರತದ ಕ್ರೀಡಾ ಮಾದರಿಯು ಕ್ರೀಡಾಪಟು ಕೇಂದ್ರಿತವಾಗಿದೆ. ಪ್ರತಿಭೆ ಗುರುತಿಸುವಿಕೆ, ವೈಜ್ಞಾನಿಕ ತರಬೇತಿ, ಪೋಷಣೆಯಿಂದ ಪಾರದರ್ಶಕ ಆಯ್ಕೆಯವರೆಗೆ ಪ್ರತಿ ಹಂತದಲ್ಲೂ, ಕ್ರೀಡಾಪಟುಗಳ ಹಿತಾಸಕ್ತಿಗಳನ್ನು ಪ್ರಮುಖವಾಗಿ ಇರಿಸಲಾಗಿದೆ.
ಸ್ನೇಹಿತರೆ,
ಇಂದು ರಾಷ್ಟ್ರವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸವಾರಿ ಮಾಡುತ್ತಿದೆ. ಪ್ರತಿಯೊಂದು ವಲಯ, ಪ್ರತಿಯೊಂದು ಅಭಿವೃದ್ಧಿ ತಾಣವು ಈ ಸುಧಾರಣಾ ಎಕ್ಸ್‌ಪ್ರೆಸ್‌ಗೆ ಸಂಪರ್ಕ ಹೊಂದಿದೆ, ಕ್ರೀಡೆಗಳು ಅವುಗಳಲ್ಲಿ ಒಂದಾಗಿದೆ. ಕ್ರೀಡಾ ವಲಯದಲ್ಲೂ ಪ್ರಮುಖ ಸುಧಾರಣೆಗಳನ್ನು ಪರಿಚಯಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಮತ್ತು ಖೇಲೋ ಭಾರತ್ ನೀತಿ-2025ರಂತಹ ನಿಬಂಧನೆಗಳು ನಿಜವಾದ ಪ್ರತಿಭೆಗಳಿಗೆ ಅವಕಾಶಗಳು ಸಿಗುವುದನ್ನು, ಕ್ರೀಡಾ ಸಂಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಾಗುವುದನ್ನು ಮತ್ತು ದೇಶದ ಯುವಕರು ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ಏಕಕಾಲದಲ್ಲಿ ಮುನ್ನಡೆಯುವುದನ್ನು ಖಚಿತಪಡಿಸುತ್ತದೆ.
ಸ್ನೇಹಿತರೆ,
ಟಾಪ್ಸ್-TOPS(ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ)ನಂತಹ ಉಪಕ್ರಮಗಳ ಮೂಲಕ ಭಾರತದ ಕ್ರೀಡಾ ಪರಿಸರ ವ್ಯವಸ್ಥೆ ರೂಪಾಂತರಗೊಳ್ಳುತ್ತಿದೆ. ಒಂದೆಡೆ, ನಾವು ಬಲವಾದ ಮೂಲಸೌಕರ್ಯ ಮತ್ತು ಹಣಕಾಸಿನ ಕಾರ್ಯವಿಧಾನಗಳನ್ನು ನಿರ್ಮಿಸುತ್ತಿದ್ದೇವೆ. ಮತ್ತೊಂದೆಡೆ, ನಮ್ಮ ಯುವಕರಿಗೆ ವಿಶ್ವ ದರ್ಜೆಯ ಮಾನ್ಯತೆ ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಕಳೆದ ದಶಕದಲ್ಲಿ ಭಾರತವು 20ಕ್ಕೂ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂಬುದನ್ನು ನೀವು ಗಮನಿಸಿರಬೇಕು. ಉದಾಹರಣೆಗೆ ಫಿಫಾ ಅಂಡರ್-17 ವಿಶ್ವಕಪ್, ಹಾಕಿ ವಿಶ್ವಕಪ್ ಮತ್ತು ಪ್ರಮುಖ ಚೆಸ್ ಪಂದ್ಯಾವಳಿಗಳು. 2030ರ ಕಾಮನ್‌ವೆಲ್ತ್ ಕ್ರೀಡಾಕೂಟಗಳು ಭಾರತದಲ್ಲಿ ನಡೆಯಲಿವೆ, 2036ರ ಒಲಿಂಪಿಕ್ಸ್ ಆಯೋಜಿಸಲು ರಾಷ್ಟ್ರವು ಪೂರ್ಣ ಶಕ್ತಿಯಿಂದ ತಯಾರಿ ನಡೆಸುತ್ತಿದೆ. ಇದೆಲ್ಲದರ ಹಿಂದಿನ ಪ್ರಯತ್ನವೆಂದರೆ, ಹೆಚ್ಚು ಹೆಚ್ಚು ಆಟಗಾರರು ಆಡಲು ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ಸ್ನೇಹಿತರೆ,
ಶಾಲಾ ಮಟ್ಟದ ಆಟಗಾರರಿಗೆ ಒಲಿಂಪಿಕ್ ಕ್ರೀಡೆಗಳಿಗೆ ಮಾನ್ಯತೆ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ. ಖೇಲೋ ಇಂಡಿಯಾ ಉಪಕ್ರಮದಿಂದಾಗಿ, ನೂರಾರು ಯುವಕರು ರಾಷ್ಟ್ರೀಯ ವೇದಿಕೆಗೆ ಏರುವ ಅವಕಾಶ ಪಡೆದಿದ್ದಾರೆ. ಕೆಲವೇ ದಿನಗಳ ಹಿಂದೆ, ಸಂಸದ್ ಖೇಲ್ ಮಹೋತ್ಸವ ಮುಕ್ತಾಯವಾಯಿತು, ಇದರಲ್ಲಿ ಸುಮಾರು 1 ಕೋಟಿ ಯುವಕರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕಾಶಿಯ ಸಂಸದನಾಗಿ ಈ ಮಹೋತ್ಸವದ ಸಮಯದಲ್ಲಿ, ನನ್ನ ಕಾಶಿಯ ಸುಮಾರು 3 ಲಕ್ಷ ಯುವಕರು ಮೈದಾನದಲ್ಲಿ ತಮ್ಮ ಶಕ್ತಿ ಮತ್ತು ಕೌಶಲ್ಯ ಪ್ರದರ್ಶಿಸಿದರು ಎಂಬುದನ್ನು ನಾನು ಹೆಮ್ಮೆಯಿಂದ ಹಂಚಿಕೊಳ್ಳುತ್ತೇನೆ.
ಸ್ನೇಹಿತರೆ,
ಕ್ರೀಡಾ ಮೂಲಸೌಕರ್ಯದಲ್ಲಿನ ಬದಲಾವಣೆಗಳು ಕಾಶಿಗೆ ಪ್ರಯೋಜನ ನೀಡುತ್ತಿವೆ. ಇಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ, ವಿವಿಧ ಕ್ರೀಡೆಗಳಿಗೆ ಕ್ರೀಡಾಂಗಣಗಳು ಬರುತ್ತಿವೆ, ಹೊಸ ಕ್ರೀಡಾ ಸಂಕೀರ್ಣಗಳು ಹತ್ತಿರದ ಜಿಲ್ಲೆಗಳ ಆಟಗಾರರಿಗೆ ತರಬೇತಿ ಅವಕಾಶಗಳನ್ನು ನೀಡುತ್ತಿವೆ. ನೀವು ಇಂದು ನಿಂತಿರುವ ಸಿಗ್ರಾ ಕ್ರೀಡಾಂಗಣವು ಈಗ ಅನೇಕ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.
ಸ್ನೇಹಿತರೆ,
ಕಾಶಿ ಪ್ರಮುಖ ಕಾರ್ಯಕ್ರಮಗಳಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಈ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಮೂಲಕ ಭಾರತದ ಕ್ರೀಡಾ ನಕ್ಷೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದು ಕಾಶಿಗೆ ಬಹಳ ಮಹತ್ವದ್ದಾಗಿದೆ. ಇದಕ್ಕೂ ಮುಂಚೆಯೇ, ಇಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಸ್ಥಳೀಯ ಜನರು ಮತ್ತು ಸ್ಥಳೀಯ ಆರ್ಥಿಕತೆಗೆ ಪ್ರದರ್ಶನ ನೀಡಲು ಉತ್ತಮ ಅವಕಾಶಗಳನ್ನು ನೀಡುತ್ತದೆ. ಉದಾಹರಣೆಗೆ, ಬನಾರಸ್ ಪ್ರಮುಖ ಜಿ-20 ಸಭೆಗಳು, ಕಾಶಿ ತಮಿಳು ಸಂಗಮ ಮತ್ತು ಕಾಶಿ ತೆಲುಗು ಸಂಗಮದಂತಹ ಸಾಂಸ್ಕೃತಿಕ ಉತ್ಸವಗಳು, ಭಾರತೀಯ ವಲಸಿಗರ ಸಮ್ಮೇಳನಗಳನ್ನು ಆಯೋಜಿಸಿದೆ. ಕಾಶಿಯನ್ನು ಶಾಂಘೈ ಸಹಕಾರ ಸಂಸ್ಥೆಯ ಸಾಂಸ್ಕೃತಿಕ ರಾಜಧಾನಿಯಾಗಿಯೂ ಗುರುತಿಸಲಾಗಿದೆ. ಇಂದು ಈ ಚಾಂಪಿಯನ್‌ಶಿಪ್ ಅನ್ನು ಈ ಸಾಧನೆಗಳಿಗೆ ಮತ್ತೊಂದು ಆಭರಣವಾಗಿ ಸೇರಿಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಮೂಲಕ, ಕಾಶಿ ಅಂತಹ ಭವ್ಯ ವೇದಿಕೆಗಳಿಗೆ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ.
ಸ್ನೇಹಿತರೆ,
ಈ ಸಮಯದಲ್ಲಿ ಬನಾರಸ್ ಆಹ್ಲಾದಕರ ಚಳಿಗಾಲ ಅನುಭವಿಸುತ್ತಿದೆ. ಈ ಋತುವಿನಲ್ಲಿ, ನೀವು ಕೆಲವು ಅತ್ಯುತ್ತಮ ಖಾದ್ಯಗಳನ್ನು ಸವಿಯಬಹುದು. ಸಮಯ ಅನುಮತಿ ನೀಡಿದರೆ, ಮಲೈಯೊವನ್ನು ಆನಂದಿಸಿ. ಬಾಬಾ ವಿಶ್ವನಾಥರ ಆಶೀರ್ವಾದ ಪಡೆಯಿರಿ, ಗಂಗಾ ನದಿಯಲ್ಲಿ ದೋಣಿ ವಿಹಾರ ಮಾಡಿ. ಈ ಅನುಭವಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಎಲ್ಲಕ್ಕಿಂತ ಹೆಚ್ಚಾಗಿ, ಈ ಪಂದ್ಯಾವಳಿಯಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ. ಕಾಶಿಯ ಮಣ್ಣಿನಿಂದ, ಪ್ರತಿಯೊಂದು ಶಿಖರ, ಪ್ರತಿಯೊಂದು ಬ್ಲಾಕ್ ಮತ್ತು ಪ್ರತಿಯೊಂದು ಹಂತವು ಭಾರತದ ಕ್ರೀಡಾ ಆಕಾಂಕ್ಷೆಗಳನ್ನು ಹೊಸ ಎತ್ತರಕ್ಕೆ ಏರಿಸಲಿ. ಈ ನಿರೀಕ್ಷೆಯೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.