ರೋಲ್ಸ್-ರಾಯ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಶ್ರೀ ತುಫಾನ್ ಎರ್ಗಿನ್‌ಬಿಲ್ಗಿಕ್ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
“ಭಾರತದಲ್ಲಿ ತನ್ನ ಉದ್ಯಮ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ನಮ್ಮ ನಾವೀನ್ಯ ಹೊಂದಿರುವ ಚುರುಕಾದ ಯುವ ಜನತೆಯೊಂದಿಗೆ ಸಹಭಾಗಿತ್ವ ಹೊಂದಲು ರೋಲ್ಸ್-ರಾಯ್ಸ್ ತೋರಿಸಿರುವ ಉತ್ಸಾಹವನ್ನು ನಾವು ಸ್ವಾಗತಿಸುತ್ತೇವೆ,” ಎಂದು ಪ್ರಧಾನಮಂತ್ರಿ ಭೇಟಿಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ;
“ಇಂದು ರೋಲ್ಸ್-ರಾಯ್ಸ್ ಸಿಇಒ ಶ್ರೀ ತುಫಾನ್ ಎರ್ಗಿನ್‌ಬಿಲ್ಗಿಕ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ನಮ್ಮ ನವೀನ ಹಾಗೂ ಚುರುಕಾದ ಯುವಜನತೆಯೊಂದಿಗೆ ಸಹಭಾಗಿತ್ವ ಸಾಧಿಸಲು ರೋಲ್ಸ್-ರಾಯ್ಸ್ ತೋರಿಸಿರುವ ಆಸಕ್ತಿಯನ್ನು ನಾವು ಸ್ವಾಗತಿಸುತ್ತೇವೆ.”
It was wonderful meeting Mr. Tufan Erginbilgic, CEO of Rolls-Royce earlier today.
— Narendra Modi (@narendramodi) February 11, 2026
We welcome Rolls-Royce’s enthusiasm towards scaling up its activities in India and partnering with our innovative and dynamic youth. https://t.co/ZWj3EcQR7c


