ಶೇರ್
 
Comments
ಕೈಗೆಟಕುವ ದರದ ಮತ್ತು ಮಧ್ಯಮ ಆದಾಯ ವಸತಿ ವಲಯದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆಯ ಮೇಲೆ ಆರ್ಥಇಕ ನೆರವು ನೀಡಲು ವಿಶೇಷ ಗವಾಕ್ಷಿ ಸ್ಥಾಪನೆಗೆ ಸಂಪುಟ ತನ್ನ ಅನುಮೋದನೆ ನೀಡಿದೆ.
ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಹಣ ಒದಗಿಸಲು ವಿಶೇಷ ಗವಾಕ್ಷಿಗೆ ಸಂಪುಟ ಸಮ್ಮತಿಸಿದ್ದು, ಸ್ಥಗಿತಗೊಂಡಿರುವ ಕೈಗೆಟಕುವ ದರದ ಮತ್ತು ಮಧ್ಯಮ ಆದಾಯ ವಸತಿ ವಲಯದಲ್ಲಿನ ಯೋಜನೆಗಳ ಪುನಶ್ಚೇತನಕ್ಕೆ ಸರ್ಕಾರ 10 ಸಾವಿರ ಕೋಟಿ ರೂಪಾಯಿಗಳನ್ನು ವಿಶೇಷ ಗವಾಕ್ಷಿಯ ಮೂಲಕ ಪೂರಣ ಮಾಡಲಿದೆ.

ಕೈಗೆಟುಕುವ ಮತ್ತು ಮಧ್ಯಮ-ಆದಾಯದ ವಸತಿ ವಲಯದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆಯ ಸಾಲ ಹಣಕಾಸು ಒದಗಿಸಲು ‘ವಿಶೇಷ ವಿಂಡೋ’ ನಿಧಿಯನ್ನು ಸ್ಥಾಪಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಅನುಮೋದನೆ ನೀಡಿದೆ.

ನಿಧಿಯ ಉದ್ದೇಶಗಳಿಗಾಗಿ, ಸರ್ಕಾರವು ಪ್ರಾಯೋಜಕರನಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರ್ಕಾರವು 10,000 ಕೋಟಿ ರೂ.ಗಳವರೆಗೆ ಪುನರ್ಧನ ಒದಗಿಸುತ್ತದೆ.

ಈ ನಿಧಿಯನ್ನು ಸೆಬಿಯಲ್ಲಿ ನೋಂದಾಯಿಸಲಾದ ವರ್ಗ -11 ಎಐಎಫ್ (ಪರ್ಯಾಯ ಹೂಡಿಕೆ ನಿಧಿ) ಸಾಲ ನಿಧಿಯಾಗಿ ಸ್ಥಾಪಿಸಲಾಗುವುದು ಮತ್ತು ವೃತ್ತಿಪರವಾಗಿ ನಡೆಸಲಾಗುವುದು.

ವಿಶೇಷ ವಿಂಡೋ ಅಡಿಯಲ್ಲಿ ಮೊದಲ ಎಐಎಫ್ಗಾಗಿ, ಎಸ್ಬಿಐಸಿಎಪಿ ವೆಂಚರ್ಸ್ ಲಿಮಿಟೆಡ್ ಅನ್ನು ಹೂಡಿಕೆ ವ್ಯವಸ್ಥಾಪಕರಾಗಿ ತೊಡಗಿಸಿಕೊಳ್ಳಬೇಕೆಂದು ಪ್ರಸ್ತಾಪಿಸಲಾಗಿದೆ.

ಅದು ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಹಣದ ಅಗತ್ಯವಿರುವ ಡೆವಲಪರ್ಗಳಿಗೆ ಈ ನಿಧಿಯು ಪರಿಹಾರವನ್ನು ಒದಗಿಸುತ್ತದೆ. ಇದರ ಪರಿಣಾಮವಾಗಿ ಮನೆ ಖರೀದಿದಾರರಿಗೆ ಮನೆಗಳ ವಿತರಣೆಯನ್ನು ಖಚಿತಪಡಿಸುತ್ತದೆ.

ರಿಯಲ್ ಎಸ್ಟೇಟ್ ಉದ್ಯಮವು ಇತರ ಹಲವಾರು ಉದ್ಯಮಗಳೊಂದಿಗೆ ಅಂತರ್ಗತ ಸಂಬಂಧ ಹೊಂದಿರುವುದರಿಂದ, ಈ ಕ್ಷೇತ್ರದ ಬೆಳವಣಿಗೆಯು ಭಾರತದ ಆರ್ಥಿಕತೆಯ ಇತರ ಪ್ರಮುಖ ಕ್ಷೇತ್ರಗಳಲ್ಲಿಯೂ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಹಿನ್ನೆಲೆ

ಸೆಪ್ಟೆಂಬರ್ 14, 2019 ರಂದು ಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿಗಾಗಿ ವಿಶೇಷ ವಿಂಡೋವನ್ನು ರಚಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದರು. ಈ ವಿಶೇಷ ವಿಂಡೋವು ನಿಂತು ಹೋಗಿರುವ ವಸತಿ ಯೋಜನೆಗಳಿಗೆ ಅಗತ್ಯ ಹಣಕಾಸು ನೆರವನ್ನು ಒದಗಿಸುತ್ತದೆ.

ನಂತರ, ವಸತಿ ಹಣಕಾಸು ಕಂಪನಿಗಳು, ಬ್ಯಾಂಕುಗಳು, ಎನ್ಬಿಎಫ್ಸಿಗಳು, ಹೂಡಿಕೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಗಳು ಸೇರಿದಂತೆ ವಸತಿ ಉದ್ಯಮದೊಂದಿಗೆ ಅಂತರ-ಸಚಿವಾಲಯ ಸಮಾಲೋಚನೆ ಮತ್ತು ಹಲವಾರು ಮಧ್ಯಸ್ಥಗಾರರ ಸಮಾಲೋಚನೆಗಳನ್ನು ನಡೆಸಲಾಯಿತು. ಮನೆ ಖರೀದಿದಾರರು, ಡೆವಲಪರ್ಸ್, ಸಾಲ ನೀಡುವವರು ಮತ್ತು ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶೇಷ ವಿಂಡೋ ಮೂಲಕ ಪರಿಹರಿಸಬಹುದೆಂದು ನಿರ್ಧರಿಸಲಾಯಿತು.

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
64 lakh have benefited from Ayushman so far

Media Coverage

64 lakh have benefited from Ayushman so far
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2019
December 05, 2019
ಶೇರ್
 
Comments

Impacting citizens & changing lives, Ayushman Bharat benefits around 64 lakh citizens across the nation

Testament to PM Narendra Modi’s huge popularity, PM Narendra Modi becomes most searched personality online, 2019 in India as per Yahoo India’s study

India is rapidly progressing through Modi Govt’s policies