ಎನ್ ಪಿ ಕೆ ಎಸ್ ಶ್ರೇಣಿಗಳು ಸೇರಿದಂತೆ ಅಧಿಸೂಚಿತ ಪಿ & ಕೆ ರಸಗೊಬ್ಬರಗಳು ರೈತರಿಗೆ ಸಬ್ಸಿಡಿಯೊಂದಿಗೆ, ಕೈಗೆಟುಕುವ ಮತ್ತು ಸಮಂಜಸವಾದ ದರದಲ್ಲಿ ಲಭ್ಯವಿರುತ್ತವೆ
ಸಿಂಗಲ್ ಸೂಪರ್ ಫಾಸ್ಫೇಟ್ (ಎಸ್ ಎಸ್ ಪಿ) ಮೇಲಿನ ಸರಕು ಸಬ್ಸಿಡಿಯನ್ನು ಖಾರಿಫ್ 2025 ರವರೆಗೆ ವಿಸ್ತರಿಸಲಾಗಿದೆ
ಅಧಿಸೂಚಿತ ಪಿ & ಕೆ ರಸಗೊಬ್ಬರಗಳಿಗೆ ಸಬ್ಸಿಡಿ ದರಗಳಿಗೆ ಅನುಮೋದನೆ ನೀಡಿಕೆ ಕೃಷಿ ವಲಯ ಮತ್ತು ಭಾರತೀಯ ರೈತರಿಗೆ ಸರ್ಕಾರವು ನೀಡಿರುವ ಪ್ರಾಮುಖ್ಯತೆಗೆ ಮತ್ತೊಂದು ಉದಾಹರಣೆಯಾಗಿದೆ
ಪಿ & ಕೆ ರಸಗೊಬ್ಬರಗಳಿಗೆ ಸಬ್ಸಿಡಿ ನೀಡುವುದು ರೈತರು ಅಗತ್ಯವಿರುವ ಪೋಷಕಾಂಶಗಳನ್ನು ನ್ಯಾಯಯುತ ಬೆಲೆಯಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಆರೋಗ್ಯಕರ ಮಣ್ಣು ಆರೋಗ್ಯಕರ ಫಸಲಿಗೆ ಕಾರಣವಾಗುತ್ತದೆ ಮತ್ತು ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ
ದೇಶಾದ್ಯಂತ ಪಿ & ಕೆ ರಸಗೊಬ್ಬರಗಳ ಕೈಗೆಟುಕುವ, ಸಬ್ಸಿಡಿ ಮತ್ತು ಸಮಂಜಸವಾದ ದರಗಳನ್ನು ಖಚಿತಪಡಿಸಿಕೊಳ್ಳಲು ಖಾರಿಫ್ 2025 ಕ್ಕೆ 37,216.15 ಕೋಟಿ ರೂ.ಗಳ ಎನ್ಬಿಎಸ್ ಸಬ್ಸಿಡಿಗೆ ಸಂಪುಟ ಅನುಮೋದನೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2025ರ ಖಾರಿಫ್ ಋತುವಿಗೆ (01.04.2025 ರಿಂದ 30.09.2025 ರವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ದರಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
 

2024ರ ಖಾರಿಫ್ ಋತುವಿಗೆ ಬಜೆಟ್ ಅವಶ್ಯಕತೆ ಸುಮಾರು 37,216.15 ಕೋಟಿ ರೂ. ಇದು 2024-25ರ ರಬಿ ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 13,000 ಕೋಟಿ ರೂ.ಗಳಷ್ಟು ಹೆಚ್ಚು.

ಪ್ರಯೋಜನಗಳು:

• ರೈತರಿಗೆ ಸಬ್ಸಿಡಿ ದರದಲ್ಲಿ, ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ.
• ರಸಗೊಬ್ಬರಗಳು ಮತ್ತು ಒಳಸುರಿಗಳ  ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ &ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುತ್ತದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಖಾರಿಫ್ 2025 ರ ಅನುಮೋದಿತ ದರಗಳ ಆಧಾರದ ಮೇಲೆ (01.04.2025 ರಿಂದ 30.09.2025 ರವರೆಗೆ ಅನ್ವಯಿಸುತ್ತದೆ) ಎನ್ಪಿಕೆಎಸ್ ದರ್ಜೆಗಳು/ಶ್ರೇಣಿಗಳು  ಸೇರಿದಂತೆ ಪಿ &ಕೆ ರಸಗೊಬ್ಬರಗಳ ಮೇಲೆ ಸಬ್ಸಿಡಿಯನ್ನು ನೀಡಲಾಗುವುದು.

ಹಿನ್ನೆಲೆ:

ಸರ್ಕಾರವು ರಸಗೊಬ್ಬರ ತಯಾರಕರು / ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ 28 ದರ್ಜೆಯ ಪಿ & ಕೆ ರಸಗೊಬ್ಬರಗಳನ್ನು ಒದಗಿಸುತ್ತಿದೆ. ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಎನ್ಬಿಎಸ್ ಯೋಜನೆಯಿಂದ ನಿಯಂತ್ರಿಸಲಾಗುತ್ತದೆ. ತನ್ನ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಪಿ & ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ರಸಗೊಬ್ಬರಗಳು ಮತ್ತು ಒಳಸುರಿಗಳಾದ ಯೂರಿಯಾ, ಡಿಎಪಿ, ಎಂಒಪಿ ಮತ್ತು ಗಂಧಕದ (ಸಲ್ಫರಿನ) ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಎನ್ ಪಿ ಕೆ ಎಸ್ ಶ್ರೇಣಿಗಳು ಸೇರಿದಂತೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ 01.04.25 ರಿಂದ 30.09.25 ರವರೆಗೆ ಜಾರಿಗೆ ಬರುವಂತೆ ಖಾರಿಫ್ 2025 ರ ಎನ್ ಬಿ ಎಸ್ ದರಗಳನ್ನು ಅನುಮೋದಿಸಲು ಸರ್ಕಾರ ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುವುದು, ಇದರಿಂದ ರಸಗೊಬ್ಬರಗಳು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತವೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre's Nasha Mukt Bharat campaign reaches 34.54 crore people

Media Coverage

Centre's Nasha Mukt Bharat campaign reaches 34.54 crore people
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam emphasizing on harmony and mutual understanding
September 15, 2026

The Prime Minister, Shri Narendra Modi has shared a Sanskrit Subhashitam highlighting the timeless wisdom of harmony, mutual understanding and affection:

"सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥"

It calls upon people to cultivate a common heart and a shared mind, free from hatred, and to care for and cherish one another with the same affection and tenderness with which a cow nurtures her newborn calf.

The Prime Minister posted on X:

सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥