ದೇಶದ ಒಟ್ಟಾರೆ ಅಭಿವೃದ್ಧಿಗಾಗಿ ಕ್ರೀಡಾ ಶಕ್ತಿಯನ್ನು ಬಳಸಿಕೊಳ್ಳುವ ದೃಷ್ಟಿಕೋನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಕ್ರೀಡಾ ನೀತಿ (ಎನ್ ಎಸ್ ಪಿ) 2025ಕ್ಕೆ ಅನುಮೋದನೆ ನೀಡಿದೆ. ಇದು ದೇಶದ ಕ್ರೀಡಾ ಕ್ಷೇತ್ರವನ್ನು ಮರುರೂಪಿಸುವ ಮತ್ತು ಕ್ರೀಡೆಗಳ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ವದ ಉಪಕ್ರಮವಾಗಿದೆ.

ಹೊಸ ನೀತಿಯು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕ್ರೀಡಾ ನೀತಿ, 2001 ಅನ್ನು ರದ್ದುಗೊಳಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಮತ್ತು 2036 ರ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೇಷ್ಠತೆಗಾಗಿ ಪ್ರಬಲ ಸ್ಪರ್ಧಿಯಾಗಿ ಸ್ಥಾಪಿಸಲು ದೂರದೃಷ್ಟಿಯ ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುತ್ತದೆ.

ಕೇಂದ್ರ ಸಚಿವಾಲಯಗಳು, ನೀತಿ ಆಯೋಗ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್ ಎಸ್ ಎಫ್), ಕ್ರೀಡಾಪಟುಗಳು, ವಲಯತಜ್ಞರು ಮತ್ತು ಸಾರ್ವಜನಿಕ ಪಾಲುದಾರರನ್ನು ಒಳಗೊಂಡ ವ್ಯಾಪಕ ಸಮಾಲೋಚನೆಗಳ ನಂತರ ಎನ್ ಎಸ್ ಪಿ 2025 ರೂಪಿಸಲಾಗಿದೆ. ಈ ನೀತಿಯು ಐದು ಪ್ರಮುಖ ಸ್ತಂಭಗಳನ್ನು ಆಧರಿಸಿದೆ.

1. ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠತೆ

ಈ ಸ್ತಂಭವು ಕೆಳಕಂಡ ಗುರಿಗಳನ್ನು ಹೊಂದಿದೆ:

  • ಪ್ರತಿಭೆಯನ್ನು ಮೊದಲೇ ಗುರುತಿಸುವುದು ಮತ್ತು ಪೋಷಿಸುವ ಕಾರ್ಯವಿಧಾನಗಳು ಸೇರಿದಂತೆ, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಕ್ರೀಡಾ ಕಾರ್ಯಕ್ರಮಗಳನ್ನು ಬಲಪಡಿಸುವುದು.
  • ಸ್ಪರ್ಧಾತ್ಮಕ ಲೀಗ್ ಗಳು ಮತ್ತು ಸ್ಪರ್ಧೆಗಳ ಸ್ಥಾಪನೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
  • ತರಬೇತಿ ಮತ್ತು ಸಮಗ್ರ ಕ್ರೀಡಾಪಟು ಬೆಂಬಲಕ್ಕಾಗಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ನಿರ್ಮಿಸುವುದು.
  • ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಾಮರ್ಥ್ಯ ಮತ್ತು ಆಡಳಿತವನ್ನು ಸುಧಾರಿಸುವುದು.
  • ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕ್ರೀಡಾ ವಿಜ್ಞಾನ, ಔಷಧ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
  • ತರಬೇತುದಾರರು, ತಾಂತ್ರಿಕ ಅಧಿಕಾರಿಗಳು ಮತ್ತು ಬೆಂಬಲ ಸಿಬ್ಬಂದಿ ಸೇರಿದಂತೆ ಕ್ರೀಡಾ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವುದು.

 

2. ಆರ್ಥಿಕ ಅಭಿವೃದ್ಧಿಗಾಗಿ ಕ್ರೀಡೆ

ಎನ್ ಎಸ್ ಪಿ 2025 ಕ್ರೀಡೆಗಳ ಆರ್ಥಿಕ ಸಾಮರ್ಥ್ಯವನ್ನು ಗುರುತಿಸುತ್ತದೆ ಮತ್ತು ಕೆಕಳಕಂಡ ಗುರಿಗಳನ್ನು ಹೊಂದಿದೆ:

  • ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಭಾರತಕ್ಕೆ ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಕರ್ಷಿಸುವುದು.
  • ಕ್ರೀಡಾ ಸಾಮಗಗ್ರಿಗಳ ತಯಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಈ ವಲಯದಲ್ಲಿ ನವೋದ್ಯಮಗಳು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು.
  • ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ), ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್) ಮತ್ತು ನವೀನ ಹಣಕಾಸು ಉಪಕ್ರಮಗಳ ಮೂಲಕ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.

 

3. ಸಾಮಾಜಿಕ ಅಭಿವೃದ್ಧಿಗಾಗಿ ಕ್ರೀಡೆ

ಸಾಮಾಜಿಕ ಸೇರ್ಪಡೆಯನ್ನು ಮುನ್ನಡೆಸುವಲ್ಲಿ ಕ್ರೀಡೆಗಳ ಪಾತ್ರವನ್ನು ನೀತಿಯು ಒತ್ತಿಹೇಳುತ್ತದೆ:

  • ಕೇಂದ್ರೀಕೃತ ಕಾರ್ಯಕ್ರಮಗಳ ಮೂಲಕ ಮಹಿಳೆಯರು, ಆರ್ಥಿಕವಾಗಿ ದುರ್ಬಲ ವರ್ಗಗಳು, ಬುಡಕಟ್ಟು ಸಮುದಾಯಗಳು ಮತ್ತು ವಿಕಲಚೇತನ ವ್ಯಕ್ತಿಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.
  • ದೇಶೀಯ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಉತ್ತೇಜಿಸುವುದು.
  • ಶಿಕ್ಷಣದಲ್ಲಿ ಸಂಯೋಜಿಸುವ ಮೂಲಕ, ಸ್ವಯಂಸೇವೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ದ್ವಿ-ವೃತ್ತಿ ಮಾರ್ಗಗಳನ್ನು ಸುಗಮಗೊಳಿಸುವ ಮೂಲಕ ಕ್ರೀಡೆಗಳನ್ನು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯಾಗಿ ಸ್ಥಾಪಿಸುವುದು.
  • ಕ್ರೀಡೆಗಳ ಮೂಲಕ ಭಾರತೀಯ ವಲಸೆಗಾರರನ್ನು ತೊಡಗಿಸಿಕೊಳ್ಳುವುದು.

 

4. ಜನಾಂದೋಲನವಾಗಿ ಕ್ರೀಡೆ

ಕ್ರೀಡೆಯನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಮಾಡುವಲ್ಲಿ ನೀತಿಯು ಈ ಕೆಳಗಿನ ಗುರಿಗಳನ್ನು ಹೊಂದಿದೆ:

  • ರಾಷ್ಟ್ರವ್ಯಾಪಿ ಅಭಿಯಾನಗಳು ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳ ಮೂಲಕ ಸಾಮೂಹಿಕ ಭಾಗವಹಿಸುವಿಕೆ ಮತ್ತು ಫಿಟ್ನೆಸ್ ಸಂಸ್ಕೃತಿಯನ್ನು ಹೆಚ್ಚಿಸುವುದು.
  • ಶಾಲೆಗಳು, ಕಾಲೇಜುಗಳು ಮತ್ತು ಕೆಲಸದ ಸ್ಥಳಗಳಿಗೆ ಫಿಟ್ನೆಸ್ ಸೂಚ್ಯಂಕಗಳನ್ನು ಪರಿಚಯಿಸುವುದು.
  • ಕ್ರೀಡಾ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಹೆಚ್ಚಿಸುವುದು.

 

5. ಶಿಕ್ಷಣದೊಂದಿಗೆ ಏಕೀಕರಣ (ಎನ್ ಇ ಪಿ 2020)

ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ, ಎನ್ ಎಸ್ ಪಿ 2025 ಈ ಕೆಳಗಿನವುಗಳನ್ನು ಪ್ರಸ್ತಾಪಿಸುತ್ತದೆ:

  • ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಗಳನ್ನು ಸಂಯೋಜಿಸುವುದು.
  • ಕ್ರೀಡಾ ಶಿಕ್ಷಣ ಮತ್ತು ಜಾಗೃತಿಯನ್ನು ಉತ್ತೇಜಿಸಲು ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡುವುದು.

 

6. ಕಾರ್ಯತಂತ್ರದ ಚೌಕಟ್ಟು

ತನ್ನ ಉದ್ದೇಶಗಳನ್ನು ಸಾಧಿಸಲು, ಎನ್ ಎಸ್ ಪಿ 2025 ಸಮಗ್ರ ಅನುಷ್ಠಾನ ತಂತ್ರವನ್ನು ರೂಪಿಸುತ್ತದೆ, ಅದು ಇವುಗಳನ್ನು ಒಳಗೊಂಡಿದೆ:

  • ಆಡಳಿತ: ಕಾನೂನು ಚೌಕಟ್ಟು ಸೇರಿದಂತೆ ಕ್ರೀಡಾ ಆಡಳಿತಕ್ಕಾಗಿ ಬಲವಾದ ನಿಯಂತ್ರಕ ಚೌಕಟ್ಟನ್ನು ಸ್ಥಾಪಿಸುವುದು.
  • ಖಾಸಗಿ ವಲಯದ ಹಣಕಾಸು ಮತ್ತು ಬೆಂಬಲ: ನವೀನ ಹಣಕಾಸು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪಿಪಿಪಿ ಮತ್ತು ಸಿ ಎಸ್ ಆರ್ ಮೂಲಕ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಒಳಗೊಳ್ಳುವುದು.
  • ತಂತ್ರಜ್ಞಾನ ಮತ್ತು ನಾವೀನ್ಯತೆ: ಕಾರ್ಯಕ್ಷಮತೆ ಟ್ರ್ಯಾಕಿಂಗ್, ಸಂಶೋಧನೆ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕಾಗಿ ಎಐ ಮತ್ತು ಡೇಟಾ ವಿಶ್ಲೇಷಣೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು.
  • ರಾಷ್ಟ್ರೀಯ ಮೇಲ್ವಿಚಾರಣಾ ಚೌಕಟ್ಟು: ಉತ್ತಮವಾಗಿ ವ್ಯಾಖ್ಯಾನಿಸಲಾದ ಮಾನದಂಡಗಳು, ಪ್ರಮುಖ ಕಾರ್ಯಕ್ಷಮತೆ ಸೂಚಕಗಳು (ಕೆಪಿಐ) ಮತ್ತು ಸಮಯ ನಿಗದಿಪಡಿಸಿದ ಗುರಿಗಳೊಂದಿಗೆ ರಾಷ್ಟ್ರೀಯ ಚೌಕಟ್ಟನ್ನು ರಚಿಸುವುದು.
  • ರಾಜ್ಯಗಳಿಗೆ ಮಾದರಿ ನೀತಿ: ಎನ್ ಎಸ್ ಪಿ 2025 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ, ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ತಮ್ಮ ನೀತಿಗಳನ್ನು ಪರಿಷ್ಕರಿಸಲು ಅಥವಾ ರೂಪಿಸಲು ಅವುಗಳನ್ನು ಪ್ರೋತ್ಸಾಹಿಸುತ್ತದೆ.
  • ಸಂಪೂರ್ಣ ಸರ್ಕಾರಿ ವಿಧಾನ: ಸಮಗ್ರ ಪರಿಣಾಮವನ್ನು ಸಾಧಿಸಲು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಚಟುವಟಿಕೆಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಕ್ರೀಡಾ ಉತ್ತೇಜನವನ್ನು ಸಂಯೋಜಿಸಲು ನೀತಿಯು ಕರೆ ನೀಡುತ್ತದೆ.

 

ತನ್ನ ರಚನಾತ್ಮಕ ದೃಷ್ಟಿಕೋನ ಮತ್ತು ದೂರದೃಷ್ಟಿಯ ಕಾರ್ಯತಂತ್ರದೊಂದಿಗೆ, ರಾಷ್ಟ್ರೀಯ ಕ್ರೀಡಾ ನೀತಿ 2025 ಭಾರತವನ್ನು ಜಾಗತಿಕವಾಗಿ ಪ್ರಮುಖ ಕ್ರೀಡಾ ರಾಷ್ಟ್ರವಾಗಲು ಪರಿವರ್ತನಾ ಹಾದಿಯಲ್ಲಿ ಇರಿಸುತ್ತದೆ, ಜೊತೆಗೆ ಆರೋಗ್ಯವಂತ, ಹೆಚ್ಚು ತೊಡಗಿಸಿಕೊಂಡ ಮತ್ತು ಸಬಲೀಕೃತ ನಾಗರಿಕರನ್ನು ಸೃಷ್ಟಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rabi acreage tops normal levels for most crops till January 9, shows data

Media Coverage

Rabi acreage tops normal levels for most crops till January 9, shows data
NM on the go

Nm on the go

Always be the first to hear from the PM. Get the App Now!
...
Diplomatic Advisor to President of France meets the Prime Minister
January 13, 2026

Diplomatic Advisor to President of France, Mr. Emmanuel Bonne met the Prime Minister, Shri Narendra Modi today in New Delhi.

In a post on X, Shri Modi wrote:

“Delighted to meet Emmanuel Bonne, Diplomatic Advisor to President Macron.

Reaffirmed the strong and trusted India–France Strategic Partnership, marked by close cooperation across multiple domains. Encouraging to see our collaboration expanding into innovation, technology and education, especially as we mark the India–France Year of Innovation. Also exchanged perspectives on key regional and global issues. Look forward to welcoming President Macron to India soon.

@EmmanuelMacron”