ಶೇರ್
 
Comments
ಬಹು ರಾಜ್ಯ ಸಹಕಾರ ಸಂಘಗಳ (ಎಂ ಎಸ್‌ ಸಿ ಎಸ್‌) ಕಾಯಿದೆ, 2002 ರ ಅಡಿಯಲ್ಲಿ ನೋಂದಾಯಿಸಲಾಗುವುದು
ಪಿ ಎ ಸಿ ಎಸ್‌ ನಿಂದ ಅಪೆಕ್ಸ್ ವರೆಗೆ: ಪ್ರಾಥಮಿಕ ಸಂಘಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಒಕ್ಕೂಟಗಳು, ಬಹು ರಾಜ್ಯ ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು (ಎಫ್‌ ಪಿ ಒ) ಸೇರಿದಂತೆ ಪ್ರಾಥಮಿಕದಿಂದ ರಾಷ್ಟ್ರ ಮಟ್ಟದ ಸಹಕಾರ ಸಂಘಗಳು ಅದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಅದರ ಉಪನಿಯಮಗಳ ಪ್ರಕಾರ ಸಂಘದ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ
ಸಂಬಂಧಿತ ಕೇಂದ್ರ ಸಚಿವಾಲಯಗಳ ಬೆಂಬಲದೊಂದಿಗೆ ಸಾವಯವ ಉತ್ಪನ್ನಗಳ ಸಮೂಹ ಸಂಸ್ಥೆ ಅಥವಾ ಒಟ್ಟುಗೂಡಿಸುವಿಕೆ, ಖರೀದಿ, ಪ್ರಮಾಣೀಕರಣ, ಪರೀಕ್ಷೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ
ಸಹಕಾರಿಗಳ ಅಭಿವೃದ್ಧಿ ಮಾದರಿಯ ಮೂಲಕ “ಸಹಕಾರ್-ಸೇ- ಸಮೃದ್ಧಿ” ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಬಹು ರಾಜ್ಯ ಸಹಕಾರ ಸಂಘಗಳ (ಎಂ ಎಸ್‌ ಸಿ ಎಸ್‌) ಕಾಯ್ದೆ, 2002 ರ ಅಡಿಯಲ್ಲಿ ಸಾವಯವ ಉತ್ಪನ್ನಗಳಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರ ಸಂಘವನ್ನು ಸ್ಥಾಪಿಸುವ ಮತ್ತು ಉತ್ತೇಜಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಸಚಿವಾಲಯಗಳು ವಿಶೇಷವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯಗಳು 'ಸರ್ಕಾರದ ಸಂಪೂರ್ಣ ವಿಧಾನ' ದ ಮೂಲಕ ತಮ್ಮ ನೀತಿಗಳು, ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಈ ಸಹಕಾರ ಸಂಘಕ್ಕೆ ಬೆಂಬಲ ನೀಡುತ್ತವೆ.

“ಸಹಕಾರ್-ಸೇ-ಸಮೃದ್ಧಿ”ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಕಾರಿಗಳ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಅವುಗಳನ್ನು ಯಶಸ್ವಿ ಮತ್ತು ವೈವಿಧ್ಯಮಯ ವ್ಯಾಪಾರ ಉದ್ಯಮಗಳಾಗಿ ಪರಿವರ್ತಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಪ್ರಧಾನಮಂತ್ರಿಯವರು ಸೂಚಿಸಿದ್ದಾರೆ. ಆದ್ದರಿಂದ ಸಹಕಾರಿ ಸಂಸ್ಥೆಗಳು ತಮ್ಮ ತುಲನಾತ್ಮಕ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಲು ಜಾಗತಿಕವಾಗಿ ಯೋಚಿಸುವುದು ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ.

ಆದ್ದರಿಂದ, ಸಾವಯವ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸುವ ಸಮೂಹ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರಿ ವಲಯದಿಂದ ಸಾವಯವ ಉತ್ಪನ್ನಗಳಿಗೆ ಒತ್ತು ನೀಡಲು ಎಂ ಎಸ್‌ ಸಿ ಎಸ್‌ ಕಾಯಿದೆ, 2002 ರ ಎರಡನೇ ಶೆಡ್ಯೂಲ್ ಅಡಿಯಲ್ಲಿ ರಾಷ್ಟ್ರೀಯ ಮಟ್ಟದ ಸಹಕಾರ ಸಂಘವನ್ನು ನೋಂದಾಯಿಸುವ ಅವಶ್ಯಕತೆಯಿದೆ.

ಪಿ ಎ ಸಿ ಎಸ್‌ ನಿಂದ ಅಪೆಕ್ಸ್‌ ವರೆಗೆ: ಪ್ರಾಥಮಿಕ ಸಂಘಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಒಕ್ಕೂಟಗಳು, ಬಹು ರಾಜ್ಯ ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು (ಎಫ್‌ ಪಿ ಒ) ಸೇರಿದಂತೆ ಪ್ರಾಥಮಿಕ ಸಂಘದಿಂದ ರಾಷ್ಟ್ರೀಯ ಮಟ್ಟದ ಸಹಕಾರ ಸಂಘಗಳು ಅದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಅದರ ಉಪನಿಯಮಗಳ ಪ್ರಕಾರ ಸಂಘದ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ.

ಸಹಕಾರ ಸಂಘವು ಪ್ರಮಾಣೀಕೃತ ಮತ್ತು ಅಧಿಕೃತ ಸಾವಯವ ಉತ್ಪನ್ನಗಳನ್ನು ಒದಗಿಸುವ ಮೂಲಕ ಸಾವಯವ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ಮತ್ತು ಬಳಕೆಯ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಸೊಸೈಟಿಯು ಸಹಕಾರಿ ಸಂಸ್ಥೆಗಳಿಗೆ ಮತ್ತು ಅಂತಿಮವಾಗಿ ಅವುಗಳ ರೈತ ಸದಸ್ಯರಿಗೆ ಕೈಗೆಟಕುವ ದರದಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಸುಗಮಗೊಳಿಸುವ ಮೂಲಕ ಒಗ್ಗೂಡಿಸುವಿಕೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯ ಮೂಲಕ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ.

ಸಹಕಾರ ಸಂಘವು ಒಟ್ಟುಗೂಡಿಸುವಿಕೆ, ಪ್ರಮಾಣೀಕರಣ, ಪರೀಕ್ಷೆ, ಖರೀದಿ, ಸಂಗ್ರಹಣೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಲೇಬಲಿಂಗ್, ಪ್ಯಾಕೇಜಿಂಗ್, ಲಾಜಿಸ್ಟಿಕ್ ಸೌಲಭ್ಯಗಳು, ಸಾವಯವ ಉತ್ಪನ್ನಗಳ ಮಾರುಕಟ್ಟೆ ಮತ್ತು ಸಾವಯವ ಕೃಷಿಕರಿಗೆ ಪ್ರಾಥಮಿಕ ಕೃಷಿ ಸಾಲ ಸೇರಿದಂತೆ ಸದಸ್ಯ ಸಹಕಾರ ಸಂಘಗಳ ಮೂಲಕ ಆರ್ಥಿಕ ಸಹಾಯವನ್ನು ನೀಡಲು ಸಾಂಸ್ಥಿಕ ಬೆಂಬಲವನ್ನು ನೀಡುತ್ತದೆ. ಸೊಸೈಟಿಗಳು/ರೈತ ಉತ್ಪಾದಕ ಸಂಸ್ಥೆಗಳು (ಎಫ್‌ ಪಿ ಒ ಗಳು) ಮತ್ತು ಸರ್ಕಾರದ ವಿವಿಧ ಯೋಜನೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಸಾವಯವ ಉತ್ಪನ್ನಗಳ ಎಲ್ಲಾ ಪ್ರಚಾರ ಮತ್ತು ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಪರೀಕ್ಷೆ ಮತ್ತು ಪ್ರಮಾಣೀಕರಣದ ವೆಚ್ಚವನ್ನು ತಗ್ಗಿಸಲು ಸಂಘವು ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಪೂರೈಸುವ ಮಾನ್ಯತೆ ಪಡೆದ ಸಾವಯವ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಪ್ರಮಾಣೀಕರಣ ಸಂಸ್ಥೆಗಳನ್ನು ಇದು ನೋಂದಾವಣೆ ಮಾಡುತ್ತದೆ.

ಸಂಘವು ಸಹಕಾರಿಗಳು ಮತ್ತು ಸಂಬಂಧಿತ ಘಟಕಗಳು ಸದಸ್ಯ ಸಹಕಾರಿಗಳ ಮೂಲಕ ಉತ್ಪಾದಿಸುವ ಸಾವಯವ ಉತ್ಪನ್ನಗಳ ಸಂಪೂರ್ಣ ಪೂರೈಕೆ ಸರಪಳಿಯನ್ನು ನಿರ್ವಹಿಸುತ್ತದೆ, ಇದು ರಫ್ತು ಮಾರುಕಟ್ಟೆಗಾಗಿ ಎಂ ಎಸ್‌ ಸಿ ಎಸ್‌ ಕಾಯಿದೆ, 2002 ರ ಅಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಸಹಕಾರ ರಫ್ತು ಸಂಘದ ಸೇವೆಗಳನ್ನು ಬಳಸಿಕೊಳ್ಳುತ್ತದೆ ಮತ್ತು ಆ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳ ಬೇಡಿಕೆ ಮತ್ತು ವಿತರಣೆಯನ್ನು ಹೆಚ್ಚಿಸುತ್ತದೆ. ಸಾವಯವ ಉತ್ಪಾದಕರ ತಾಂತ್ರಿಕ ಮಾರ್ಗದರ್ಶನ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಸಾವಯವ ಉತ್ಪನ್ನಗಳಿಗೆ ಮೀಸಲಾದ ಮಾರುಕಟ್ಟೆ ಗುಪ್ತಚರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಇದು ಅನುಕೂಲವಾಗುತ್ತದೆ. ಸಾವಯವ ಕೃಷಿಯನ್ನು ಉತ್ತೇಜಿಸುತ್ತಲೇ, ನಿಯಮಿತ ಸಾಮೂಹಿಕ ಕೃಷಿ ಮತ್ತು ಸಾವಯವ ಕೃಷಿ ನಡುವೆ ಸಮತೋಲಿತ ವಿಧಾನವನ್ನು ನಿರ್ವಹಿಸಲಾಗುತ್ತದೆ.

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
India’s blue economy sets sail to unlock a sea of opportunities!

Media Coverage

India’s blue economy sets sail to unlock a sea of opportunities!
...

Nm on the go

Always be the first to hear from the PM. Get the App Now!
...
PM Modi's telephonic conversation with Crown Prince and PM of Saudi Arabia
June 08, 2023
ಶೇರ್
 
Comments
Prime Minister Narendra Modi holds telephone conversation with Crown Prince and Prime Minister of Saudi Arabia.
The leaders review a number of bilateral, multilateral and global issues.
PM thanks Crown Prince Mohammed bin Salman for Saudi Arabia's support during evacuation of Indian nationals from Sudan via Jeddah.
PM conveys his best wishes for the upcoming Haj pilgrimage.
Crown Prince Mohammed bin Salman conveys his full support to India’s ongoing G20 Presidency.

Prime Minister Narendra Modi had a telephone conversation today with Crown Prince and Prime Minister of Saudi Arabia, HRH Prince Mohammed bin Salman bin Abdulaziz Al Saud.

The leaders reviewed a number of issues of bilateral cooperation and exchanged views on various multilateral and global issues of mutual interest.

PM thanked Crown Prince Mohammed bin Salman for Saudi Arabia's excellent support during evacuation of Indian nationals from Sudan via Jeddah in April 2023. He also conveyed his best wishes for the upcoming Haj pilgrimage.

Crown Prince Mohammed bin Salman conveyed his full support to India’s initiatives as part of its ongoing G20 Presidency and that he looks forward to his visit to India.

The two leaders agreed to remain in touch.