ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ), 2026-27ರ ಮಾರುಕಟ್ಟೆ ಋತುವಿಗಾಗಿ 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂ ಎಸ್‌ ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ.

ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಎಂ ಎಸ್‌ ಪಿ ಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಂ ಎಸ್‌ ಪಿ ಯಲ್ಲಿ ಅತ್ಯಧಿಕ ಸಂಪೂರ್ಣ ಹೆಚ್ಚಳವನ್ನು ಸೂರ್ಯಕಾಂತಿ ಬೀಜಕ್ಕೆ (ಕ್ವಿಂಟಲ್‌ ಗೆ ₹622), ನಂತರದಲ್ಲಿ ಹತ್ತಿ (ಕ್ವಿಂಟಲ್‌ ಗೆ ₹557), ಗುರೆಳ್ಳು/ಹುಚ್ಚೆಳ್ಳು (ಕ್ವಿಂಟಲ್‌ ಗೆ ₹515) ಮತ್ತು ಎಳ್ಳಿಗೆ (ಕ್ವಿಂಟಲ್‌ ಗೆ ₹500) ಶಿಫಾರಸು ಮಾಡಲಾಗಿದೆ.

2026-27 ಮಾರುಕಟ್ಟೆ ಋತುವಿಗಾಗಿ ಎಲ್ಲಾ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳು:

(ರೂ. ಪ್ರತಿ ಕ್ವಿಂಟಲ್‌ ಗೆ)

ಕ್ರಮ ಸಂಖ್ಯೆ

ಬೆಳೆಗಳು

ಎಂ ಎಸ್‌ ಪಿ 2026-27

ವೆಚ್ಚ* KMS 2026-27

ವೆಚ್ಚದ ಮೇಲಿನ ಲಾಭಾಂಶ (%)

ಎಂ ಎಸ್‌ ಪಿ

2026-27ರಲ್ಲಿ ಎಂ ಎಸ್‌ ಪಿ ಹೆಚ್ಚಳ

 

ಧಾನ್ಯಗಳು

     

2025-26

2013-14

2025-26 ಕ್ಕಿಂತ ಹೆಚ್ಚಳ

2013-14 ಕ್ಕಿಂತ ಹೆಚ್ಚಳ

1.

ಭತ್ತ (ಸಾಮಾನ್ಯ)

2441

1627

50

2369

1310

72

1131 (86%)

 

ಗ್ರೇಡ್ A^

2461

-

-

2389

1345

72

1116 (83%)

2.

ಜೋಳ (ಹೈಬ್ರಿಡ್)

4023

2682

50

3699

1500

324

2523 (168%)

 

ಮಾಲ್ದಂಡಿ ^

4073

-

-

3749

1520

324

2553 (168%)

3.

ಸಜ್ಜೆ

2900

1858

56

2775

1250

125

1650 (132%)

4.

ರಾಗಿ

5205

3470

50

4886

1500

319

3705 (247%)

5.

ಮೆಕ್ಕೆಜೋಳ

2410

1544

56

2400

1310

10

1100 (84%)

 

ಬೇಳೆಕಾಳುಗಳು

             

6.

ತೊಗರಿ

8450

5496

54

8000

4300

450

4150 (97%)

7.

ಹೆಸರು ಕಾಳು

8780

5438

61

8768

4500

12

4280 (95%)

8.

ಉದ್ದಿನ ಕಾಳು

8200

5418

51

7800

4300

400

3900 (91%)

 

ಎಣ್ಣೆಕಾಳುಗಳು

             

9.

ಶೇಂಗಾ/ನೆಲಗಡಲೆ

7517

5011

50

7263

4000

254

3517 (88%)

10.

ಸೂರ್ಯಕಾಂತಿ ಬೀಜ

8343

5562

50

7721

3700

622

4643 (125%)

11.

ಸೋಯಾಬೀನ್ (ಹಳದಿ)

5708

3805

50

5328

2560

380

3148 (123%)

12.

ಎಳ್ಳು

10346

6897

50

9846

4500

500

5846 (130%)

13.

ಹುಚ್ಚೆಳ್ಳು

10052

6701

50

9537

3500

515

6552 (187%)

 

ವಾಣಿಜ್ಯ ಬೆಳೆಗಳು

             

14.

ಹತ್ತಿ (ಮಧ್ಯಮ ಉದ್ದದ ಎಳೆ)

8267

5511

50

7710

3700

557

4567 (123%)

 

ಹತ್ತಿ (ಉದ್ದನೆಯ ಎಳೆ) ^

8667

-

-

8110

4000

557

4667 (117%)

*ವೆಚ್ಚವು ಬಾಡಿಗೆ ಮಾನವ ಶ್ರಮ, ಎತ್ತುಗಳ ಶ್ರಮ/ಯಂತ್ರದ ಶ್ರಮ, ಗುತ್ತಿಗೆಗೆ ಪಡೆದ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್‌ ಗಳ ಚಾಲನೆಗೆ ಡೀಸೆಲ್/ವಿದ್ಯುತ್ ಮುಂತಾದ ವಸ್ತುಗಳ ಬಳಕೆಗೆ ತಗುಲುವ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಮತ್ತು ಕುಟುಂಬದ ಶ್ರಮದ ಅಂದಾಜು ಮೌಲ್ಯವನ್ನು ಒಳಗೊಂಡಿರುತ್ತದೆ.

^ ಭತ್ತ (ಗ್ರೇಡ್ A), ಜೋಳ (ಮಾಲ್ದಂಡಿ) ಮತ್ತು ಹತ್ತಿ (ಉದ್ದನೆಯ ಎಳೆ) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಕಲಿಸಲಾಗಿಲ್ಲ.

2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಎಂ ಎಸ್‌ ಪಿ ಹೆಚ್ಚಳವು, ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂ ಎಸ್‌ ಪಿ ಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ. ರೈತರಿಗೆ ಅವರ ಉತ್ಪಾದನಾ ವೆಚ್ಚದ ಮೇಲಿನ ನಿರೀಕ್ಷಿತ ಲಾಭಾಂಶವು ಹೆಸರು ಕಾಳು (61%), ನಂತರ ಸಜ್ಜೆ (56%), ಮೆಕ್ಕೆಜೋಳ (56%) ಮತ್ತು ತೊಗರಿ (54%) ವಿಷಯದಲ್ಲಿ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರಿಗೆ ಅವರ ವೆಚ್ಚದ ಮೇಲಿನ ಲಾಭಾಂಶವು 50% ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ಧಾನ್ಯಗಳ ಹೊರತಾಗಿ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳು ಹಾಗೂ ಪೌಷ್ಟಿಕ ಧಾನ್ಯಗಳು/ಶ್ರೀ ಅನ್ನದ ಬೆಳೆಗಳಿಗೆ ಹೆಚ್ಚಿನ ಎಂ ಎಸ್‌ ಪಿ ನೀಡುವ ಮೂಲಕ ಅವುಗಳ ಕೃಷಿಯನ್ನು ಉತ್ತೇಜಿಸುತ್ತಿದೆ.

  • 2014-15 ರಿಂದ 2025-26 ರ ಅವಧಿಯಲ್ಲಿ, ಭತ್ತದ ಖರೀದಿಯು 8418 ಎಲ್‌ ಎಂ ಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ಭತ್ತದ ಖರೀದಿಯು 4590 ಎಲ್‌ ಎಂ ಟಿ ಆಗಿತ್ತು.
  • 2014-15 ರಿಂದ 2025-26 ರ ಅವಧಿಯಲ್ಲಿ, 14 ಮುಂಗಾರು ಬೆಳೆಗಳ ಖರೀದಿಯು 8746 ಎಲ್‌ ಎಂ ಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ಖರೀದಿಯು 4679 ಎಲ್‌ ಎಂ ಟಿ ಆಗಿತ್ತು.
  • 2014-15 ರಿಂದ 2025-26 ರ ಅವಧಿಯಲ್ಲಿ, ಭತ್ತ ಬೆಳೆಯುವ ರೈತರಿಗೆ ಪಾವತಿಸಿದ ಎಂ ಎಸ್‌ ಪಿ ಮೊತ್ತವು ರೂ. 16.08 ಲಕ್ಷ ಕೋಟಿ ಆಗಿತ್ತು, 2004-05 ರಿಂದ 2013-14 ರ ಅವಧಿಯಲ್ಲಿ ರೈತರಿಗೆ ಪಾವತಿಸಿದ ಮೊತ್ತವು ರೂ. 4.44 ಲಕ್ಷ ಕೋಟಿ ಆಗಿತ್ತು.
  • 2014-15 ರಿಂದ 2025-26 ರ ಅವಧಿಯಲ್ಲಿ, 14 ಮುಂಗಾರು ಬೆಳೆಗಳನ್ನು ಬೆಳೆಯುವ ರೈತರಿಗೆ ಪಾವತಿಸಿದ ಎಂ ಎಸ್‌ ಪಿ ಮೊತ್ತವು ರೂ. 18.99 ಲಕ್ಷ ಕೋಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ರೈತರಿಗೆ ಪಾವತಿಸಿದ ಎಂ ಎಸ್‌ ಪಿ ಮೊತ್ತವು ರೂ. 4.75 ಲಕ್ಷ ಕೋಟಿ ಆಗಿತ್ತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's 1 Trillion Retail Moment: Dawn of Retail Revenue Intelligence

Media Coverage

India's 1 Trillion Retail Moment: Dawn of Retail Revenue Intelligence
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜೂನ್ 2026
June 27, 2026

Appreciation for PM Modi's Development-Focused and People-Centric Governance