"ಕೇಂದ್ರ ಸರಕಾರದಿಂದ 54,061.73 ಕೋಟಿ ರೂ.ಗಳ ಹಣಕಾಸು ಹಂಚಿಕೆ ಮತ್ತು ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಂದ 31,733.17 ಕೋಟಿ ರೂ. ಹಣಕಾಸು ಹಂಚಿಕೆ "
"11.20 ಲಕ್ಷ ಶಾಲೆಗಳಲ್ಲಿ ಓದುತ್ತಿರುವ 11.80 ಕೋಟಿ ಮಕ್ಕಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದಾರೆ "

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಡೆಯಿತು. ರಫ್ತು ಸಾಲ ಖಾತ್ರಿ ನಿಗಮ ನಿಯಮಿತ(ಇಸಿಜಿಸಿ)ವು ಆರಂಭಿಕ ಷೇರು ಬಿಡುಗಡೆ(ಐಪಿಒ) ಮೂಲಕ ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಭೆ ಇಂದು ಅನುಮೋದನೆ ನೀಡಿತು.

ಷೇರು ಮಾರುಕಟ್ಟೆಯಲ್ಲಿ ಇದುವರೆಗೆ ನೋಂದಣಿ ಆಗದ ಕೇಂದ್ರ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮ(ಸಿಪಿಎಸ್ಇ)ವಾಗಿರುವ ಇಸಿಜಿಸಿ, 2018ರ ಸೆಬಿ ನಿಯಂತ್ರಣಗಳ ಅಡಿ, ಇದೀಗ ನೋಂದಣಿಗೆ ಸಾರ್ವಜನಿಕರಿಂದ ಷೇರುಗಳನ್ನು ಕ್ರೋಡೀಕರಿಸಿದೆ.

ಭಾರತ ಸರ್ಕಾರದ ಸಂಪೂರ್ಣ ಒಡೆತನ ಹೊಂದಿರುವ ರಫ್ತು ಸಾಲ ಖಾತ್ರಿ ನಿಗಮ ನಿಯಮಿತವು, ರಫ್ತು ವಹಿವಾಟಿನಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಉದ್ದೇಶದಿಂದ ಸ್ಥಾಪನೆಯಾಗಿದೆ. ರಫ್ತುದಾರರಿಗೆ ಸಾಲ ಸೌಲಭ್ಯ, ಸಾಲ ಹಾನಿ (ರಿಸ್ಕ್) ವಿಮಾ ರಕ್ಷಣೆ ಮತ್ತು ಇತರೆ ಸಂಬಂಧಿತ ಸೇವೆಗಳನ್ನು ಇದು ಒದಗಿಸಲಿದೆ. ಈ ಕಂಪನಿಯು ಈಗಿರುವ 1 ಲಕ್ಷ ಕೋಟಿ ರೂಪಾಯಿ ಮೂಲ ಬಂಡವಾಳ ಬಾಧ್ಯತೆಯನ್ನು 2025-26ರ ಹೊತ್ತಿಗೆ ಗರಿಷ್ಠ 2.03 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಇಸಿಜಿಸಿಯ ಉದ್ದೇಶಿತ ಪ್ರಸ್ತಾವನೆಯು ಕಂಪನಿಯ ನೈಜ ಮಾರುಕಟ್ಟೆ ಮೌಲ್ಯವನ್ನು ಹೊರಹಾಕಲಿದೆ. ಜತೆಗೆ, ಕಂಪನಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಅವರ ಷೇರು ಬಂಡವಾಳ ಹಿಡಿತ ಹೆಚ್ಚಿಸಿ ಸಾರ್ವಜನಿಕ ಒಡೆತನವನ್ನು ಉತ್ತೇಜಿಸಲಿದೆ. ಇನ್ನೂ ವಿಶೇಷವಾಗಿ, ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಮೂಲಕ ಕಾರ್ಪೊರೇಟ್ ಆಡಳಿತವನ್ನು ಉತ್ತೇಜಿಸಲಿದೆ.

ಕಂಪನಿಯು ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗುವ ಪ್ರಸ್ತಾವನೆಯು ಇಸಿಜಿಸಿಗೆ ಮಾರುಕಟ್ಟೆಯಲ್ಲಿ ತಾಜಾ ಬಂಡವಾಳ ಕ್ರೋಡೀಕರಿಸಲು ಅನುವು ಮಾಡಿಕೊಡಲಿದೆ. ಆರಂಭಿಕ ಷೇರು ಬಿಡುಗಡೆ ಮೂಲಕ ಅಥವಾ ತರುವಾಯ ಸಾರ್ವಜನಿಕ ಷೇರು ಕ್ರೋಡೀಕರಣದ ಅನುಸರಣೆ (ಫಾಲೋ-ಆನ್ ಪಬ್ಲಿಕ್ ಆಫರ್) ಮೂಲಕ ತಾಜಾ ಬಂಡವಾಳ ಸಂಗ್ರಹಕ್ಕೆ ನೋಂದಣಿ ಪ್ರಸ್ತಾವನೆ ಅನುವು ಮಾಡಿಕೊಡಲಿದೆ. ಈ ಮೂಲಕ ಗರಿಷ್ಠ ಬಂಡವಾಳ ಹೊಂದುವ ಬಾಧ್ಯತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಲಿದೆ.

ಸಾರ್ವಜನಿಕ ವಲಯದ ಘಟಕಗಳ ಬಂಡವಾಳ ಹಿಂತೆಗೆತದಿಂದ ಬರುವ ವರಮಾನವನ್ನು ಸಾಮಾಜಿಕ ವಲಯದ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಲಾಗುತ್ತದೆ.

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
'After June 4, action against corrupt will intensify...': PM Modi in Bengal's Purulia

Media Coverage

'After June 4, action against corrupt will intensify...': PM Modi in Bengal's Purulia
NM on the go

Nm on the go

Always be the first to hear from the PM. Get the App Now!
...
PM Modi's interview to News Nation
May 20, 2024

In an interview during roadshow in Puri, Prime Minister Narendra Modi spoke to News Nation about the ongoing Lok Sabha elections. He added that 'Ab ki Baar, 400 Paar' is the vision of 140 crore Indians. He said that we have always respected our Freedom Heroes. He added that we built the largest Statue of Unity in Honour of Sardar Patel and Panch Teerth in Honour of Babasaheb Ambedkar. He added that we also aim to preserve the divinity of Lord Jagannath's Bhavya Mandir.