ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಬಿಹಾರದಲ್ಲಿ ಬಿಒಟಿ (ಟೋಲ್) ಅಂದರೆ 'ನಿರ್ಮಿಸಿ, ನಿರ್ವಹಿಸಿ ಮತ್ತು ಹಸ್ತಾಂತರಿಸಿ' ಮಾದರಿಯ ಅಡಿಯಲ್ಲಿ ₹3936.05 ಕೋಟಿ ವೆಚ್ಚದಲ್ಲಿ ಎನ್‌ ಎಚ್-31 ಮತ್ತು ಎನ್‌ ಎಚ್-231 ರಸ್ತೆಗಳ ಖಗಾರಿಯಾ-ಪೂರ್ನಿಯಾ ವಿಭಾಗವನ್ನು ಚತುಷ್ಪಥವಾಗಿ (143.529 ಕಿ.ಮೀ) ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ.

ಬಿಹಾರದ ಎನ್‌ ಎಚ್-31 ಮತ್ತು ಎನ್‌ ಎಚ್-231 ರ ಖಗಾರಿಯಾ-ಪೂರ್ನಿಯಾ ವಿಭಾಗದ ಪ್ರಸ್ತಾವಿತ ಮೇಲ್ದರ್ಜೆಗೇರಿಸುವಿಕೆಯು ಖಗಾರಿಯಾ, ಭಾಗಲ್ಪುರ್, ಕತಿಹಾರ್ ಮತ್ತು ಪೂರ್ನಿಯಾ ಜಿಲ್ಲೆಗಳ ಜನನಿಬಿಡ ಪ್ರದೇಶಗಳಲ್ಲಿನ ತೀವ್ರ ರಸ್ತೆ ವಿನ್ಯಾಸದ ದೋಷಗಳು, ಕಡಿದಾದ ತಿರುವುಗಳು ಮತ್ತು ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ನಿವಾರಿಸಲಿದೆ. ಈ ಪ್ರಸ್ತುತ ಯೋಜನೆಯ ಭಾಗವಾಗಿ ಪೂರ್ನಿಯಾ ನಗರಕ್ಕೆ 6.729 ಕಿ.ಮೀ ಉದ್ದದ ವಿಸ್ತರಿತ 'ಗ್ರೀನ್‌ಫೀಲ್ಡ್ ಬೈಪಾಸ್' ಅನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯು ವಾಹನಗಳ ಸರಾಸರಿ ಪ್ರಯಾಣದ ವೇಗವನ್ನು ಹೆಚ್ಚಿಸಲಿದೆ, ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳಷ್ಟು ಕಡಿಮೆ ಮಾಡಲಿದೆ ಮತ್ತು ಒಟ್ಟಾರೆ ರಸ್ತೆ ಸುರಕ್ಷತೆ, ಇಂಧನ ದಕ್ಷತೆಯನ್ನು ಸುಧಾರಿಸುವುದರ ಜೊತೆಗೆ ವಾಹನ ಚಾಲನಾ ವೆಚ್ಚವನ್ನು ತಗ್ಗಿಸಲಿದೆ. ಇದರಿಂದಾಗಿ ಪ್ರಾದೇಶಿಕ ಸುಲಭ ಸಂಚಾರ ಹೆಚ್ಚಾಗಲಿದ್ದು, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ.

ಈ ಯೋಜನೆಯು ಬಿಹಾರದಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ ಕೇಂದ್ರಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಮೇಲ್ದರ್ಜೆಗೇರಿಸಲಾದ ಈ ಕಾರಿಡಾರ್ 5 ಪಿಎಂ ಗತಿ-ಶಕ್ತಿ ಆರ್ಥಿಕ ಕೇಂದ್ರಗಳು (1 ಟೆಕ್ಸ್‌ ಟೈಲ್ ಕ್ಲಸ್ಟರ್, 2 ಮೆಗಾ ಫುಡ್ ಪಾರ್ಕ್, 2 ಮೀನುಗಾರಿಕೆ ಮತ್ತು ಸಮುದ್ರ ಆಹಾರ ಪಾರ್ಕ್) ಮತ್ತು 11 ಲಾಜಿಸ್ಟಿಕ್ ಕೇಂದ್ರಗಳೊಂದಿಗೆ (4 ಪ್ರಮುಖ ರೈಲು ನಿಲ್ದಾಣಗಳು, 1 ವಿಮಾನ ನಿಲ್ದಾಣ, 4 ರಾಷ್ಟ್ರೀಯ ಹೆದ್ದಾರಿಗಳು, 2 ರಾಜ್ಯ ಹೆದ್ದಾರಿಗಳು) ಸಂಪರ್ಕ ಹೊಂದುವ ಮೂಲಕ ವಿವಿಧ ಸಾರಿಗೆ ವ್ಯವಸ್ಥೆಗಳ ಸಂಯೋಜನೆಯನ್ನು ಬಲಪಡಿಸಲಿದೆ. ಇದು ಈ ಪ್ರದೇಶದಲ್ಲಿ ಪ್ರಯಾಣಿಕರ ಮತ್ತು ಸರಕುಗಳ ವೇಗದ ಸಂಚಾರವನ್ನು ಸುಗಮಗೊಳಿಸುತ್ತದೆ.

(ಕಾರಿಡಾರ್‌ನ ನಕ್ಷೆ):

ಅನುಬಂಧ - I: ಯೋಜನೆಯ ವಿವರಗಳು

ವೈಶಿಷ್ಟ್ಯ

ವಿವರಗಳು

ಯೋಜನೆಯ ಹೆಸರು

ಬಿಹಾರ ರಾಜ್ಯದಲ್ಲಿ ಬಿಒಟಿ (ಟೋಲ್) ಮಾದರಿಯ ಅಡಿಯಲ್ಲಿ ಎನ್‌ ಎಚ್-31 ಮತ್ತು ಎನ್‌ ಎಚ್-231 ರ ಖಗಾರಿಯಾ-ಪೂರ್ನಿಯಾ ವಿಭಾಗವನ್ನು ಚತುಷ್ಪಥಕ್ಕೆ (143.529 ಕಿ.ಮೀ) ಮೇಲ್ದರ್ಜೆಗೇರಿಸುವುದು

ಕಾರಿಡಾರ್ (ಸಂಪರ್ಕ ಮಾರ್ಗ)

ಪಾಟ್ನಾ - ಪೂರ್ನಿಯಾ

ಉದ್ದ (ಕಿ.ಮೀ)

143.529

ಒಟ್ಟು ಸಿವಿಲ್ ವೆಚ್ಚ (ಕೋಟಿ ರೂ.ಗಳಲ್ಲಿ)

2467.77

ಭೂಸ್ವಾಧೀನ ವೆಚ್ಚ (ಕೋಟಿ ರೂ.ಗಳಲ್ಲಿ)

290.16

ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.ಗಳಲ್ಲಿ)

3936.05

ಮಾದರಿ

ಬಿಒಟಿ (ಟೋಲ್) [ನಿರ್ಮಿಸಿ, ನಡೆಸಿ, ಹಸ್ತಾಂತರಿಸಿ]

ಬೈಪಾಸ್‌ಗಳು (ಪರ್ಯಾಯ ರಸ್ತೆಗಳು)

6.729 ಕಿ.ಮೀ ಉದ್ದದ ಗ್ರೀನ್‌ಫೀಲ್ಡ್ ಪೂರ್ನಿಯಾ ಬೈಪಾಸ್ ರಸ್ತೆ

ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು

ರಾಷ್ಟ್ರೀಯ ಹೆದ್ದಾರಿಗಳು – ಎನ್‌ ಎಚ್-27, ಎನ್‌ ಎಚ್-13, ಎನ್‌ ಎಚ್-131ಎ ಮತ್ತು ಎನ್‌ ಎಚ್-231


 

ರಾಜ್ಯ ಹೆದ್ದಾರಿಗಳು – ಎಸ್‌ ಎಚ್-95 ಮತ್ತು ಎಸ್‌ ಎಚ್-77

ಸಂಪರ್ಕ ಹೊಂದಲಿರುವ ಆರ್ಥಿಕ / ಸಾಮಾಜಿಕ / ಸಾರಿಗೆ ಕೇಂದ್ರಗಳು

ವಿಮಾನ ನಿಲ್ದಾಣ: ಪೂರ್ನಿಯಾ


 

ರೈಲು ನಿಲ್ದಾಣಗಳು: ಖಗಾರಿಯಾ, ಭಾಗಲ್ಪುರ, ಕತಿಹಾರ್, ಪೂರ್ನಿಯಾ


 

ಆರ್ಥಿಕ ಕೇಂದ್ರಗಳು: 01 ಟೆಕ್ಸ್‌ ಟೈಲ್ (ಜವಳಿ) ಕ್ಲಸ್ಟರ್, 02 ಮೆಗಾ ಫುಡ್ ಪಾರ್ಕ್, 02 ಮೀನುಗಾರಿಕೆ ಮತ್ತು ಸಮುದ್ರ ಆಹಾರ ಪಾರ್ಕ್

ಸಂಪರ್ಕ ಹೊಂದುವ ಪ್ರಮುಖ ನಗರಗಳು / ಪಟ್ಟಣಗಳು

ಖಗಾರಿಯಾ, ಭಾಗಲ್ಪುರ್, ಕತಿಹಾರ್, ಪೂರ್ನಿಯಾ

ಉದ್ಯೋಗ ಸೃಷ್ಟಿ ಸಾಮರ್ಥ್ಯ

32.59 ಲಕ್ಷ ಮಾನವ-ದಿನಗಳು (ನೇರ) ಮತ್ತು 40.55 ಲಕ್ಷ ಮಾನವ-ದಿನಗಳು (ಪರೋಕ್ಷ)

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI-ng the ante: PM Modi wants desi connect with global pay

Media Coverage

UPI-ng the ante: PM Modi wants desi connect with global pay
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the value and transformative power of knowledge
September 09, 2026

The Prime Minister, Shri Narendra Modi, shared a Sanskrit Subhashitam highlighting that wisdom teaches the art of living in harmony with society. He said that knowledge imparts wisdom and prosperity, fills the heart with joy and enhances one’s dignity.

The Prime Minister shared a Sanskrit Subhashitam-

“उपदिशति लोकवृत्तं वितरति वित्तं विनोदयति चित्तम्।

उत्तम्भयति महत्त्वं विद्या हृद्या सुराजसेवेव॥”

The Subhashitam conveys that wisdom teaches the art of living in harmony with society. It grants knowledge and prosperity, fills the heart with joy, and raises one's dignity. Thus, wisdom is as precious as service to righteous governance, beloved by the heart, and a force that uplifts life.

The Prime Minister wrote on X;

“उपदिशति लोकवृत्तं वितरति वित्तं विनोदयति चित्तम्।

उत्तम्भयति महत्त्वं विद्या हृद्या सुराजसेवेव॥”