ಆಂತ್ರೊಪಿಕ್ ಸಂಸ್ಥೆಯ ಸಿಇಒ ಶ್ರೀ ಡೇರಿಯೊ ಅಮೋಡೆ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. ಸಭೆಯಲ್ಲಿ, ಭಾರತದಲ್ಲಿ ಆಂಥ್ರೊಪಿಕ್ ಸಂಸ್ಥೆಯ ಕಾರ್ಯಾಚರಣೆ ವಿಸ್ತರಣೆ ಮತ್ತು ಜೂನ್ ನಿಂದ ದೇಶದಲ್ಲಿ ಐದು ಪಟ್ಟು ಹೆಚ್ಚಳ ಕಂಡಿರುವ ಕ್ಲೌಡ್ ಕೋಡ್ ಸೇರಿದಂತೆ ಅದರ ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳ ಹೆಚ್ಚುತ್ತಿರುವ ಅಳವಡಿಕೆಯ ಕುರಿತು ಚರ್ಚೆಗಳು ಹಾಗೂ ಮಾತುಕತೆ ಕೇಂದ್ರೀಕರಿಸಿದವು.
ಭಾರತದ ವೈವಿದ್ಯಮಯ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಮಾನವ ಕೇಂದ್ರಿತ ಮತ್ತು ಜವಾಬ್ದಾರಿಯುತ ಎಐ ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಅದರ ಪ್ರತಿಭಾನ್ವಿತ ಯುವಕರ ಅಗಾಧ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಅವರು ವಿವರಿಸಿದರು. ಆಂಥ್ರೊಪಿಕ್ ನ ವಿಸ್ತರಣೆಯನ್ನು ಪ್ರಧಾನಮಂತ್ರಿ ಅವರು ಸ್ವಾಗತಿಸಿದರು ಮತ್ತು ಈ ಪಾಲುದಾರಿಕೆಯು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಕೃಷಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಎಐ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಐ ನೀತಿಗೆ ಭಾರತದ ಪೂರ್ವಭಾವಿ ವಿಧಾನ ಮತ್ತು ಸಮಗ್ರ ಬೆಳವಣಿಗೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ಭಾರತದ ಕಾಳಜಿ ಮತ್ತು ಗಮನವನ್ನು ಶ್ರೀ ಅಮೋಡೆ ಶ್ಲಾಘಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ತಾಣದ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;
"ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು. ಭಾರತದ ಕ್ರಿಯಾಶೀಲ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಪ್ರತಿಭಾನ್ವಿತ ಯುವಕರು ಮಾನವ ಕೇಂದ್ರಿತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ. ನಾವು ಆಂಥ್ರೊಪಿಕ್ ನ ವಿಸ್ತರಣೆಯನ್ನು ಸ್ವಾಗತಿಸುತ್ತೇವೆ ಮತ್ತು ಪ್ರಮುಖ ವಲಯಗಳಲ್ಲಿ ಉತ್ತಮ ಬೆಳವಣಿಗೆಗಾಗಿ ಎಐ ಅನ್ನು ಬಳಸಿಕೊಳ್ಳಲು, ಈ ಮೂಲಕ ಒಟ್ಟಾಗಿ ಕೆಲಸ ಮಾಡಲು ಸಮಯಾವಕಾಶ ಎದುರು ನೋಡುತ್ತಿದ್ದೇವೆ."
@DarioAmodei”
Glad to meet you. India’s vibrant tech ecosystem and talented youth are driving AI innovation that is human-centric and responsible. We welcome Anthropic’s expansion and look forward to working together to harness AI for growth across key sectors.@DarioAmodei https://t.co/XgsZb70uyJ
— Narendra Modi (@narendramodi) October 11, 2025


