ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಶುಭ ಕೋರಿದ ಎಲ್ಲ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಭೂತಾನ್ ಪ್ರಧಾನಮಂತ್ರಿಯವರ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು; " Lyonchhen @PMBhutan ನಿಮ್ಮ ಸ್ವಾತಂತ್ರ್ಯೋತ್ಸವದ ಆಪ್ತ ಶುಭಾಶಯಕ್ಕಾಗಿ ಧನ್ಯವಾದಗಳು. ಎಲ್ಲ ಭಾರತೀಯರೂ ನಾವು ಭೂತಾನ್ ನೊಂದಿಗೆ ಹೊಂದಿರುವ ಅನನ್ಯ ಮತ್ತು ವಿಶ್ವಾಸಾರ್ಹ ಬಾಂಧವ್ಯವನ್ನು ಗೌರವಿಸುತ್ತೇವೆ." ಎಂದು ತಿಳಿಸಿದ್ದಾರೆ.

 

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;

"ನನ್ನ ಸ್ನೇಹಿತರಾದ @ScottMorrisonMP ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಕೂಡ ಹಂಚಿಕೆಯ ಮೌಲ್ಯಗಳು ಮತ್ತು ಜನ ಸಂಪರ್ಕ ಆಧಾರಿತ ಆಸ್ಟ್ರೇಲಿಯಾದೊಂದಿಗಿನ ತನ್ನ ವರ್ಧಿತ ಚೈತನ್ಯದಾಯಕ ಪಾಲುದಾರಿಕೆಯನ್ನು ಗೌರವಿಸುತ್ತದೆ.

 

ಪ್ರಧಾನಮಂತ್ರಿ ಮಹಿಂದ ರಾಜಪಕ್ಸ ಅವರ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು;

"ನಾನು ಮಹಿಂದ ರಾಜಪಕ್ಸ ಅವರ ಆತ್ಮೀಯ ಶುಭಾಶಯಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಭಾರತ ಮತ್ತು ಶ್ರೀಲಂಕಾ ಸಾವಿರಾರು ವರ್ಷಗಳಷ್ಟು ಹಳೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ನಾಗರಿಕ ನಂಟು ಹೊಂದಿದ್ದು, ಇದು ನಮ್ಮ ವಿಶೇಷ ಸ್ನೇಹ ಸಂಬಂಧಕ್ಕೆ ಅಡಿಪಾಯವಾಗಿದೆ.. @PresRajapaksa" ಎಂದು ತಿಳಿಸಿದ್ದಾರೆ.

 

ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರ ಟ್ವೀಟ್ ಗೆ ಸ್ಪಂದನೆಯಾಗಿ ಪ್ರಧಾನಮಂತ್ರಿಯವರು;

"ನಾನು ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರ ಶುಭಾಶಯ ಮತ್ತು ಶುಭ ಹಾರೈಕೆಗಾಗಿ ಧನ್ಯವಾದ ಸಲ್ಲಿಸುತ್ತೇನೆ. ಭಾರತ ಮತ್ತು ನೇಪಾಳದ ಜನತೆ ನಮ್ಮ ಹಂಚಿಕೆಯ ಸಂಸ್ಕೃತಿ, ಭಾಷೆ, ಧಾರ್ಮಿಕ ಮತ್ತು ಕೌಟುಂಬಿಕ ಬಾಂಧವ್ಯದಿಂದ ಬೆಸೆದುಕೊಂಡಿದ್ದಾರೆ.. @SherBDeuba" ಎಂದು ತಿಳಿಸಿದ್ದಾರೆ.

 

ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಲಿಹ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;

"ನಾನು ಅಧ್ಯಕ್ಷ @ibusolih ಅವರ ಶುಭಾಶಯಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಮಾಲ್ಡೀವ್ಸ್ ನಮ್ಮ ಅತ್ಯಂತ ಮಹತ್ವದ ಸಾಗರ ನೆರೆರಾಷ್ಟ್ರವಾಗಿದ್ದು, ನಮ್ಮ ಹಂಚಿಕೆಯ ಸುರಕ್ಷಿತ, ಸುಭದ್ರ, ಸಮಗ್ರ ಮತ್ತು ಸಮೃದ್ಧ ಭಾರತ- ಪೆಸಿಫಿಕ್ ವಲಯದ ದೃಷ್ಟಿಕೋನ ಮುಂದುವರಿಸುವ ನಮ್ಮ ಪಾಲುದಾರನಾಗಿದೆ." ಎಂದು ತಿಳಿಸಿದ್ದಾರೆ.

 

ಶ್ರೀಲಂಕಾದ ಅಧ್ಯಕ್ಷ ಶ್ರೀ ಲಂಕಾದ ಗೋತಾಬಾಯಿ ರಾಜಪಕ್ಸ ಅವರ ಟ್ವೀಟ್ ಗೆ ಸ್ಪಂದಿಸಿರುವ, ಪ್ರಧಾನಮಂತ್ರಿಯವರು;

"ನಾನು@GotabayaR ಅವರ ಶುಭಾಶಯಗಳಿಗೆ ಧನ್ಯವಾದ ಅರ್ಪಿಸುತ್ತೇನೆ, ಮತ್ತು ಭಾರತ-ಶ್ರೀಲಂಕಾ ಸಹಕಾರವನ್ನು ಎಲ್ಲ ಕ್ಷೇತ್ರಗಳಲ್ಲೂ ಮತ್ತಷ್ಟು ಬಲವರ್ಧಿಸಲು ಅವರೊಂದಿಗೆ ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ. "

 

ಮಾರಿಷಸ್ ಪ್ರಧಾನಮಂತ್ರಿ ಪ್ರವೀಂದ್ ಜಗ್ನೌತ್ ಅವರ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು;

"ಪ್ರಧಾನಮಂತ್ರಿ ಪ್ರವೀಂದ್ ಜುಗ್ನೌತ್ ಅವರಿಗೆ ಧನ್ಯವಾದಗಳು! ಭಾರತ ಮತ್ತು ಮಾರಿಷಸ್ ನಡುವಿನ ಶತಮಾನಗಳಷ್ಟು ಹಳೆಯ ಜನರ ನಡುವಿನ ಬಾಂಧವ್ಯದಿಂದಾಗಿ, ನಮ್ಮ ಎರಡೂ ದೇಶಗಳು ಒಂದೇ ಮೂಲ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಹಂಚಿಕೊಂಡಿವೆ. ಇದು ನಮ್ಮ ವಿಶೇಷ ಸ್ನೇಹಕ್ಕೆ ಅಡಿಪಾಯವನ್ನು ಒದಗಿಸುತ್ತದೆ. @JugnauthKumar " ಎಂದು ತಿಳಿಸಿದ್ದಾರೆ.

 

ಇಸ್ರೇಲ್ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಅವರ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು;

"ಧನ್ಯವಾದಗಳು, ಘನತೆವೆತ್ತ ಪ್ರಧಾನಮಂತ್ರಿ @naftalibennett ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. ನಮ್ಮ ಸರ್ಕಾರಗಳು ಮತ್ತು ಜನರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಭಾರತ-ಇಸ್ರೇಲ್ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ನಾನು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.." ಎಂದು ತಿಳಿಸಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics production rises 6-fold, exports jump 8-fold since 2014: Ashwini Vaishnaw

Media Coverage

India's electronics production rises 6-fold, exports jump 8-fold since 2014: Ashwini Vaishnaw
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಡಿಸೆಂಬರ್ 2025
December 28, 2025

PM Modi’s Governance - Shaping a Stronger, Smarter & Empowered India