ಶೇರ್
 
Comments

1. ಪ್ರಧಾನಮಂತ್ರಿ ಥೆರೇಸಾ ಮೇ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್ಡಮ್ (ಯುಕೆ)ಗೆ ಸರ್ಕಾರದ ಅತಿಥಿಯಾಗಿ 18, ಏಪ್ರಿಲ್ 2018ರಂದು ಭೇಟಿ ನೀಡಿದ್ದರು. ಇಬ್ಬರೂ ನಾಯಕರು ವಿಸ್ತೃತ ಶ್ರೇಣಿಯ ಮತ್ತು ರಚನಾತ್ಮಕ ಚರ್ಚೆ ನಡೆಸಿದರು ಮತ್ತು ತಮ್ಮ ವ್ಯೂಹಾತ್ಮಕ ಪಾಲುದಾರಿಕೆ ಹಾಗೂ ಒಮ್ಮುಖವಾಗುತ್ತಿರುವ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಒತ್ತಿ ಹೇಳಿದರು. ಪ್ರಧಾನಿ ಮೋದಿ ಅವರು 19-20 ಏಪ್ರಿಲ್ 2018ರಂದು ಲಂಡನ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆಯಲ್ಲಿ ಸಹ ಭಾಗಿಯಾಗಲಿದ್ದಾರೆ.

2. ಯು.ಕೆ. ಮತ್ತು ಭಾರತ ವಿಶ್ವದ ಹಳೆಯ ಮತ್ತು ಬೃಹತ್ ಪ್ರಜಾಪ್ರಭುತ್ವವಾಗಿ ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹಂಚಿಕೆಯ ಮೌಲ್ಯಗಳು, ಸಮಾನ ಕಾನೂನು ಮತ್ತು ಸಂಸ್ಥೆಗಳ ಆಧಾರದಲ್ಲಿ ಪುನಶ್ಚೇತನಗೊಳಿಸುವ ಸ್ವಾಭಾವಿಕ ಆಕಾಂಕ್ಷೆಯನ್ನು ಹೊಂದಿದೆ. ನಾವು ಕಾಮನ್ವೆಲ್ತ್ ನ ಬದ್ಧತೆಯ ಸದಸ್ಯರಾಗಿದ್ದೇವೆ. ನಾವು ಜಾಗತಿಕ ದೃಷ್ಟಿಕೋನವನ್ನು ಹಂಚಿಕೊಂಡಿದ್ದೇವೆ ಮತ್ತು ಏಕಪಕ್ಷೀಯ ಕ್ರಮಗಳನ್ನು ವಿರೋಧಿಸುವ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಬದ್ಧರಾಗಿದ್ದೇವೆ. ಅದು ಆ ವ್ಯವಸ್ಥೆಯನ್ನು ಬಲವಂತವಾಗಿ ಅಥವಾ ತಿದ್ದುಪಡಿ ಮೂಲಕ ಬದಲಾಯಿಸುವುದನ್ನು ಬಯಸುತ್ತದೆ. ನಾವು ನಮ್ಮ ರಾಷ್ಟ್ರಗಳ ನಡುವೆ ಅಸಂಖ್ಯಾತ ಸಿಬ್ಬಂದಿ ಮತ್ತು ವೃತ್ತಿಪರರ ಬಾಂಧವ್ಯದ ಜೀವಂತ ಸೇತುವೆಯನ್ನು ಹಂಚಿಕೊಂಡಿದ್ದೇವೆ.

3. ಯು.ಕೆ. ಮತ್ತು ಭಾರತ ಒಗ್ಗೂಡಿ ಆಪ್ತವಾಗಿ ಮತ್ತು ಇತರ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳೊಂದಿಗೆ, ಕಾಮನ್ವೆಲ್ತ್ ಸಚಿವಾಲಯ ಮತ್ತು ಇತರ ಪಾಲುದಾರಿಕೆ ಸಂಸ್ಥೆಗಳೊಂದಿಗೆ ಜೊತೆಗೂಡಿ ಹಂಚಿಕೆಯ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತದೆ. ನಾವು ಕಾಮನ್ವೆಲ್ತ್ ಅನ್ನು ಪುನಶ್ಚೇತನಗೊಳಿಸುವ ಬದ್ಧತೆಯನ್ನು ಹೊಂದಿದ್ದೇವೆ, ವಿಶೇಷವಾಗಿ ಸಣ್ಣ ಮತ್ತು ದುರ್ಬಲ ರಾಷ್ಟ್ರಗಳಿಗೆ ಅದರ ಪ್ರಸ್ತುತತೆ ಮತ್ತು ಕಾಮನ್ವೆಲ್ತ್ ಜನಸಂಖ್ಯೆಯ ಶೇ.60ರಷ್ಟು ಭಾಗವನ್ನು ಹೊಂದಿರುವ ನಮ್ಮ ಯುವಜನರಿಗೆ ಖಾತರಿ ನೀಡುತ್ತೇವೆ. ಕಾಮನ್ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆ, ಈ ಸವಾಲುಗಳನ್ನು ನಿವಾರಿಸಲು ಒಂದು ಉತ್ತಮ ಅವಕಾಶವನ್ನು ನೀಡಿದೆ, ಏಕೆಂದರೆ ನಾವು ಎಲ್ಲರೂ ಒಂದೇ ವೇದಿಕೆಯಡಿ ಶೃಂಗಸಭೆಯಲ್ಲಿ ಅಧಿಕೃತ ಧ್ಯೇಯವಾಕ್ಯವಾದ “ಸಮಾನ ಭವಿಷ್ಯದೆಡೆಗೆ”ರಲ್ಲಿ ಒಗ್ಗೂಡಿದ್ದೇವೆ. ನಿರ್ದಿಷ್ಟವಾಗಿ ಯುನೈಟೆಡ್ ಕಿಂಗ್ಡಮ್ ಮತ್ತು ಭಾರತ ಎಲ್ಲ ಕಾಮನ್ವೆಲ್ತ್ ನಾಗರಿಕರಿಗೆ ಕೆಳಗಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚಿನ ಸುಸ್ಥಿರತೆ, ಪ್ರಗತಿ, ಸುರಕ್ಷೆ ಮತ್ತು ಭವ್ಯ ಭವಿಷ್ಯಕ್ಕಾಗಿ ಬದ್ಧತೆಯನ್ನು ರೂಪಿಸುತ್ತದೆ.:

ಕಾಮನ್ವೆಲ್ತ್ ಮೂಲಕ ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಸಂಘಟಿತ ಜಾಗತಿಕ ಕ್ರಮವನ್ನು ಉತ್ತೇಜಿಸುವುದರ ಜೊತೆಗೆ ಭಾರತವು, ವಿಶ್ವ ಪರಿಸರ ದಿನ 2018ರ ಆತಿಥ್ಯ ರಾಷ್ಟ್ರವಾಗಿ, ತನ್ನ ಪಾತ್ರವನ್ನು ನಿಭಾಯಿಸುತ್ತದೆ.

ಸೈಬರ್ ಭದ್ರತೆ ಸಾಮರ್ಥ್ಯ ಹೆಚ್ಚಿಸಲು ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳಿಗೆ ನೆರವಾಗಲು ಪ್ರಾಯೋಗಿಕ ಬೆಂಬಲ ಒದಗಿಸುತ್ತದೆ.
ತಾಂತ್ರಿಕ ನೆರವು ಒದಗಿಸುವ ಮೂಲಕ ಮತ್ತು ಕಾಮನ್ವೆಲ್ತ್ ನ ಸಣ್ಣ ರಾಷ್ಟ್ರಗಳಿಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಓ)ಯ ವಾಣಿಜ್ಯ ಅವಕಾಶ ಒಪ್ಪಂದದ ಅನುಷ್ಠಾನಕ್ಕೆ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳಿಗೆ ನೆರವಾಗುವುದು.
ತಂತ್ರಜ್ಞಾನ ಪಾಲುದಾರಿಕೆ

4. ಯುಕೆ – ಭಾರತ ತಂತ್ರಜ್ಞಾನ ಪಾಲುದಾರಿಕೆ ನಮ್ಮ ಜಂಟಿದೃಷ್ಟಿ ಮತ್ತು ನಮ್ಮ ಪ್ರಗತಿಗೆ ಮತ್ತು ಇಂದಿನ ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಕೇಂದ್ರಬಿಂದುವಾಗಿದೆ, ನಮ್ಮ ರಾಷ್ಟ್ರಗಳು ತಂತ್ರಜ್ಞಾನ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿವೆ. ನಾವು ಜ್ಞಾನ, ಸಂಶೋಧನಾ ಸಹಯೋಗ, ನಾವಿನ್ಯತೆಯನ್ನು ಹಂಚಿಕೊಳ್ಳುತ್ತೇವೆ ಮತ್ತು ನಮ್ಮ ವಿಶ್ವದರ್ಜೆಯ ನಾವಿನ್ಯತೆ ಘಟಕಗಳ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸುತ್ತಿದ್ದೇವೆ. ನಾವು ಉನ್ನತ ಮೌಲ್ಯದ ಉದ್ಯೋಗ ಸೃಷ್ಟಿ, ಹೆಚ್ಚಿನ ಉತ್ಪಾದನೆ, ವಾಣಿಜ್ಯ ಮತ್ತು ಹೂಡಿಕೆ ಉತ್ತೇಜನ ಮತ್ತು ಹಂಚಿಕೆಯ ಸವಾಲುಗಳನ್ನು ಎದುರಿಸಲು ನಮ್ಮ ಪೂರಕ ತಾಂತ್ರಿಕ ಬಲವನ್ನು ನಿಯೋಜಿಸುತ್ತಿದ್ದೇವೆ.

5. ಜಾಗತಿಕ ಸವಾಲುಗಳನ್ನು ಎದುರಿಸಲು, ಕೃತಕ ಬುದ್ಧಿಮತ್ತೆಯ ಸಾಮರ್ಥ್ಯದ ಸಾಕಾರಕ್ಕೆ (ಎ.ಐ.), ಡಿಜಿಟಲ್ ಆರ್ಥಿಕತೆ, ಆರೋಗ್ಯ ತಾಂತ್ರಿಕತೆ, ಸೈಬರ್ ಭದ್ರತೆಯಂಥ ಜಾಗತಿಕ ಸವಾಲುಗಳನ್ನು ಎದುರಿಸಲು ಭವಿಷ್ಯದ ತಂತ್ರಜ್ಞಾನದ ಸಹಯೋಗವನ್ನು ಎರಡೂ ಕಡೆಯವರು ಉನ್ನತೀಕರಿಸುತ್ತಿದ್ದೇವೆ ಮತ್ತು ಶುದ್ಧ ವೃದ್ಧಿ, ಸ್ಮಾರ್ಟ್ ನಗರೀಕರಣ ಮತ್ತು ಭವಿಷ್ಯದ ಸಾರಿಗೆಯನ್ನು ಉತ್ತೇಜಿಸುತ್ತಿದ್ದೇವೆ – ಜೊತೆಗೆ ನಮ್ಮ ಯುವಜನರ ಸಾಮರ್ಥ್ಯ ಮತ್ತು ಭವಿಷ್ಯದ ಕೌಶಲ ಅಭಿವೃದ್ಧಿಪಡಿಸುತ್ತಿದ್ದೇವೆ.

6. ಭಾರತ ಸರ್ಕಾರವು ನಮ್ಮ ಬೆಳೆಯುತ್ತಿರುವ ದ್ವಿಪಕ್ಷೀಯ ತಂತ್ರಜ್ಞಾನ ಪಾಲುದಾರಿಕೆಯ ಭಾಗವಾಗಿ ಭಾರತದಲ್ಲಿ ಯುಕೆ-ಇಂಡಿಯಾ ಟೆಕ್ ಹಬ್ ಸ್ಥಾಪಿಸುವ ಯುಕೆ ಉಪಕ್ರಮವನ್ನು ಸ್ವಾಗತಿಸುತ್ತದೆ. ಟೆಕ್ ಹಬ್ ಹೂಡಿಕೆ ಮತ್ತು ರಫ್ತು ಅವಕಾಶಗಳನ್ನು ಸೃಷ್ಟಿಸಲು ಹೈಟೆಕ್ ಕಂಪೆನಿಗಳನ್ನು ಒಗ್ಗೂಡಿಸುತ್ತದೆ ಮತ್ತು ಭಾರತದ ಅತ್ಯುತ್ತಮ ಜಿಲ್ಲೆಗಳ ಕಾರ್ಯಕ್ರಮದ ಅಡಿಯಲ್ಲಿ ಭವಿಷ್ಯದ ಸಾರಿಗೆ, ಮುಂದುವರಿದ ಉತ್ಪಾದನೆ ಮತ್ತು ಆರೋಗ್ಯ ಸೇವೆ ಎಐ ಸೇರಿದಂತೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಮುಂಗಡ ನೀತಿ ಸಹಯೋಗವನ್ನು ಹಂಚಿಕೊಳ್ಳಲು ಹೊಸ ವೇದಿಕೆಯನ್ನು ಒದಗಿಸುತ್ತದೆ.ನಾವು ಜಂಟಿಯಾಗಿ ನಾವಿನ್ಯ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಕೈಗೊಳ್ಳಲು ಯು.ಕೆ. ಪ್ರಾದೇಶಿಕ ಮತ್ತು ಭಾರತದ ರಾಜ್ಯಮಟ್ಟದಲ್ಲಿ ತಂತ್ರಜ್ಞಾನ ಘಟಕಗಳ ನಡುವೆ ಹೊಸದಾಗಿ ಸರಣಿ ಪಾಲುದಾರಿಕೆಯನ್ನು ಸ್ಥಾಪಿಸಲಿದ್ದೇವೆ. ಎರಡೂ ಸರ್ಕಾರಗಳ ಬೆಂಬಲದೊಂದಿಗೆ ಭಾರತ – ಯುಕೆ ಟೆಕ್ ಸಿಇಓ ಸಹಯೋಗವನ್ನೂ ನಾವು ಘೋಷಿಸಿದ್ದೇವೆ; ಕೈಗಾರಿಕಾ ನೇತೃತ್ವದ ಅಪ್ರೆಂಟಿಸ್ ಶಿಪ್ ಯೋಜನೆ ಸೇರಿದಂತೆ ಕೌಶಲ ಮತ್ತು ಹೊಸ ತಂತ್ರಜ್ಞಾನದ ಮೇಲೆ ಗಮನವಿಟ್ಟು ಯುಕೆ/ನಾಸ್ಕಾಮ್ ಟೆಕ್ ಎಂ.ಓ.ಯು.ಗೂ ನಾವು ಅಂಕಿತ ಹಾಕಿದ್ದೇವೆ; ಮತ್ತು ಭಾರತದಲ್ಲಿ ಫಿನ್ ಟೆಕ್ ಮತ್ತು ವಿಶಾಲ ಉದ್ಯಮಶೀಲತೆ ಉತ್ತೇಜಿಸಲು ಹೊಸ ಯುಕೆ ಫಿನ್ ಟೆಕ್ ರಾಕೆಟ್ ಶಿಪ್ ಪ್ರಶಸ್ತಿಯನ್ನೂ ಆರಂಭಿಸಿದ್ದೇವೆ.

7. ಎರಡೂ ಕಡೆಯವರು ಆದ್ಯತೆಯ ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಟಿಷ್ ಮತ್ತು ಭಾರತದ ವಿಜ್ಞಾನದ ಉತ್ತಮ ಪ್ರತಿಭಾವಂತರನ್ನು ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ನಿಯುಕ್ತಿಗೊಳಿಸುತ್ತಿವೆ. ಯು.ಕೆ. ಭಾರತದ ಎರಡನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಸಂಶೋಧನಾ ಮತ್ತು ನಾವಿನ್ಯತೆಯ ಪಾಲುದಾರನಾಗಿದೆ. 2008ರಿಂದ ಯುಕೆ – ಭಾರತ – ನ್ಯೂಟೌನ್ – ಭಾಬಾ ಕಾರ್ಯಕ್ರಮವು 2021ರ ಹೊತ್ತಿಗೆ 400 ದಶಲಕ್ಷ ಪೌಂಡ್ ಗಳ ಜಂಟಿ ಸಂಶೋಧನೆ ಮತ್ತು ನಾವಿನ್ಯತೆ ಪ್ರಶಸ್ತಿಯನ್ನೂ ಎತ್ತಿ ಹಿಡಿದಿದೆ. ಯುಕೆ ಮತ್ತು ಭಾರತವನ್ನು ಜೀವಿನಸಲು ಸುರಕ್ಷಿತ ಮತ್ತು ಆರೋಗ್ಯಪೂರ್ಣ ತಾಣವಾಗಿಸಲು ಎ.ಐ. ಮತ್ತು ಡಿಜಿಟಲ್ ಆರೋಗ್ಯ ತಂತ್ರಜ್ಞಾನವನ್ನು ಹೆಚ್ಚಿಸುವ ಮೂಲಕ ನಾವು ಆರೋಗ್ಯದಲ್ಲಿ ನಮ್ಮ ಜಂಟಿ ಕಾರ್ಯಕಾರಿ ಬಾಂಧವ್ಯವನ್ನು ಆಳಗೊಳಿಸಿದ್ದೇವೆ.

ವಾಣಿಜ್ಯ, ಹೂಡಿಕೆ ಮತ್ತು ಹಣಕಾಸು

8. ಯುಕೆ ಸ್ವತಂತ್ರ ವಾಣಿಜ್ಯ ನೀತಿಯ ಜವಾಬ್ದಾರಿ ಹೊತ್ತಿರುವ ಹಿನ್ನೆಲೆಯಲ್ಲಿ, ಎರಡೂ ಕಡೆಗಳಿಂದ ಹೂಡಿಕೆಗೆ ಅವಕಾಶ ನೀಡಲುಮತ್ತು ಹಂಚಿಕೆಯ ಪೂರಕ ಬಲದ ಸಹಯೋಗವನ್ನು ತೀವ್ರಗೊಳಿಸಲು ಹೊಸ ವಾಣಿಜ್ಯ ಒಪ್ಪಂದಗಳನ್ನು ಅಭಿವೃದ್ಧಿಪಡಿಸಲು ಚೈತನ್ಯಶೀಲ ನವ ಭಾರತ – ಯುಕೆ ವಾಣಿಜ್ಯ ಪಾಲುದಾರಿಕೆಯನ್ನು ರೂಪಿಸಲು ನಾಯಕರುಒಪ್ಪಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಯುಕೆ – ಭಾರತ ಜಂಟಿ ವಾಣಿಜ್ಯ ಪರಾಮರ್ಶೆಯ ಶಿಫಾರಸುಗಳ ಮೇಲೆ ನಾವು, ವಾಣಿಜ್ಯದ ಅಡೆತಡೆ ತಗ್ಗಿಸಲು, ಎರಡೂ ರಾಷ್ಟ್ರಗಳಲ್ಲಿ ವಾಣಿಜ್ಯ ನಡೆಸುವುದನ್ನು ಸುಲಭಗೊಳಿಸಲು ಮತ್ತು ಇ.ಯು.ನಿಂದ ಯುಕೆ ಹೊರಬಂದ ತರುವಾಯ ಬಲವಾದ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ರೂಪಿಸಲು ಘಟಕ ಆಧಾರಿತ ಮಾರ್ಗಸೂಚಿಯಲ್ಲಿ ಒಗ್ಗೂಡಿ ಶ್ರಮಿಸಲಿದ್ದೇವೆ. ಇ.ಯು.ನಿಂದ ಯುಕೆ ಹೊರಬಂದ ನಂತರ ಇ.ಯು- ಭಾರತ ಒಪ್ಪಂದಗಳ ಅನುಷ್ಠಾನದ ಅವಧಿಯಲ್ಲಿ ನಾವು ಯು.ಕೆ.ಗೆ ಮುಂದುವರಿದ ಅರ್ಜಿಗಳ ಖಾತ್ರಿ ಒದಗಿಸುತ್ತೇವೆ ಮತ್ತು ಇಯು – ಭಾರತ ಒಪ್ಪಂದಗಳಾಚೆಯ ಅವಧಿಗೆ ಸೂಕ್ತವಾದ ಯಥಾವತ್ ಒಪ್ಪಂದಗಳನ್ನು ಅಳವಡಿಸುತ್ತೇವೆ.

9. ಸುಸ್ಥಿರ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲು, ನಿಯಮಾಧಾರಿತ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆ ಮತ್ತು ಮುಕ್ತ, ನ್ಯಾಯಸಮ್ಮತ ಹಾಗೂ ಮುಕ್ತ ವಾಣಿಜ್ಯದ ಪಾತ್ರ ಮಹತ್ವವಾದ್ದು ಎಂಬುದನ್ನು ನಾಯಕರು ಪುನರುಚ್ಚರಿಸಿದ್ದಾರೆ. ಡಬ್ಲ್ಯುಟಿಓನ ಎಲ್ಲ ಸದಸ್ಯರೊಂದಿಗೆ ಒಗ್ಗೂಡಿ ಕೆಲಸ ಮಾಡುವ ಬದ್ಧತೆಯನ್ನು ಮತ್ತು ಜಾಗತಿಕ ನಿಯಮಾಧಾರಿತ ವ್ಯವಸ್ಥೆ ಮತ್ತು ಡಬ್ಲ್ಯುಟಿಓದ ಪಾತ್ರವನ್ನು ಆಧರಿಸಿ ವಾಣಿಜ್ಯ ಕುರಿತ ಜಂಟಿ ಕಾರ್ಯಗುಂಪಿನ ಸಂವಾದವನ್ನು ಮುಂದುವರಿಸಲು ಹಂಚಿಕೆಯ ಬೆಂಬಲ ನೀಡುವ ಜಾಗತಿಕ ನಿಯಮ-ಆಧಾರಿತ ವ್ಯವಸ್ಥೆ ಮುಂದೆ ತೆಗೆದುಕೊಂಡು ಹೋಗುವ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ.

10. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡುವ ಜಿ20ರಲ್ಲಿ ಯು.ಕೆ. ಅತಿ ದೊಡ್ಡ ಹೂಡಿಕೆದಾರನಾಗಿದ್ದರೆ, ಭಾರತ ಕೂಡ ಯುಕೆಯಲ್ಲಿ ನಾಲ್ಕನೇ ಅತಿ ದೊಡ್ಡ ಸಂಖ್ಯೆಯ ಹೂಡಿಕೆಯ ಯೋಜನೆಯನ್ನು ಹೊಂದಿದೆ. ನಮ್ಮ ಪರಸ್ಪರ ಆದ್ಯತೆಯ ತಿಳಿವಳಿಕೆ ಸುಧಾರಿಸಲು ಮತ್ತು ಸಹಕಾರದ ಭವಿಷ್ಯದ ಅವಖಾಸಗಳ ಪರಾಮರ್ಶಿಸಲು ನಾವು ಹೂಡಿಕೆಯ ಮೇಲೆ ಹೊಸ ಮಾತುಕತೆ ಆರಂಭಿಸಲಿದ್ದೇವೆ.

11. ಭಾರತೀಯ ಹೂಡಿಕೆಗಾಗಿ ಒಂದು ಪರಸ್ಪರ ವೇಗದ ಯಾಂತ್ರಿಕ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಭಾರತೀಯ ವ್ಯವಹಾರಗಳಿಗೆ ಹೆಚ್ಚಿನ ಬೆಂಬಲವನ್ನು ಒದಗಿಸುವ ಯುಕೆಯ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ. ತಾಂತ್ರಿಕ ಸಹಕಾರದ ಕಾರ್ಯಕ್ರಮ ನಿಯಂತ್ರಣ ಪರಿಸರವನ್ನು ಸುಧಾರಿಸಲು ನೆರವಾಗುತ್ತದೆ. ಭಾರತ ಮತ್ತು ಯುಕೆಯ ಹಂಚಿಕೆಯ ಸಮೃದ್ಧಿಯ ಸಾಧನೆಗಾಗಿ ಇಂದು ಸಭೆ ಸೇರಿದ್ದ ಯು.ಕೆ. – ಭಾರತ ಸಿಇಓ ವೇದಿಕೆ ಪ್ರಸ್ತಾಪಿಸುವ ವಾಣಿಜ್ಯ ಬಾಧ್ಯಸ್ಥರ ಉಪಕ್ರಮಗಳಿಗೆ ಎರಡೂ ಕಡೆಯವರು ಬೆಂಬಲ ನೀಡುತ್ತಾರೆ.

12. ಜಾಗತಿಕ ಹಣಕಾಸು ಮತ್ತ ಹೂಡಿಕೆಯಲ್ಲಿ ಲಂಡನ್ ನಗರ ನಿರ್ವಹಿಸಿದ ಪ್ರಮುಖ ಪಾತ್ರವನ್ನು ಎರಡೂ ಕಡೆಯವರು ಸ್ವಾಗತಿಸಿದರು. ಮೂರರಷ್ಟು ಹಸಿರು ಬಾಂಡ್ ನೊಂದಿಗೆ ಲಂಡನ್ ಶೇರು ಪೇಟೆಯಲ್ಲಿ ಬಿಡುಗಡೆ ಮಾಡಿರುವ ರೂಪಾಯಿ ಮೌಲ್ಯದ “ಮಸಾಲಾ ಬಾಂಡ್’ ಸುಮಾರು ಶೇ.75ರಷ್ಟು ಜಾಗತಿಕ ಮೌಲ್ಯದ್ದಾಗಿದೆ.

13. ಹಸಿರು ವೃದ್ಧಿಯ ಈಕ್ವಿಟಿ ಫಂಡ್ (ಜಿಜಿಇ.ಎಫ್), ಭಾರತ ಮತ್ತು ಯುಕೆ ಸರ್ಕಾರದ ಜಂಟಿ ಉಪಕ್ರಮವಾಗಿದ್ದು, ಭಾರತದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಡಿ, ಯುಕೆ ತ್ವರಿತವಾಗಿ ಬೆಳೆಯುತ್ತಿರುವ ಭಾರತೀಯ ನವೀಕರಿಸಬಹುದಾದ ಇಂಧನ ವಲಯಕ್ಕೆ ಹಣಕಾಸು ನೆರವು ಒದಗಿಸುತ್ತದೆ. ಎರಡೂ ಕಡೆಯಿಂದ 120 ದಶಲಕ್ಷ ಪೌಂಡ್ ಗಳ ಬದ್ಧತೆಯೊಂದಿಗೆ, ಸಾಂಸ್ಥಿಕ ಹೂಡಿಕೆದಾರರಿಂದ ಜಿಜಿಇಎಫ್ 500 ದಶಲಕ್ಷ ಪೌಂಡ್ ಗಳಿಗೆ ಏರಿಕೆ ಆಗುವ ನಿರೀಕ್ಷೆ ಇದೆ. 2022ರ ಹೊತ್ತಿಗೆ ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು 175 ಜಿ.ಡಬ್ಲ್ಯು. ತಲುಪಿಸುವ ಭಾರತದ ತ್ವರಿತ ಗುರಿ ಸಾಧನೆಗೆ ಜಿಜಿಇಎಫ್ ನೆರವಾಗಲಿದೆ ಮತ್ತು ಇತರ ಪೂರಕ ವಲಯಗಳಲ್ಲಿ ಅಂದರೆ, ಶುದ್ಧ ಸಾರಿಗೆ, ಜಲ ಮತ್ತು ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದೆ. ನಾವು ಇಂಧನ ಮತ್ತು ಮೂಲಸೌಕರ್ಯ ನೀತಿಯ ಮೇಲಿನ ಭವಿಷ್ಯದ ಸಹಕಾರವನ್ನು ಎದಿರು ನೋಡುತ್ತಿದ್ದೇವೆ ಮತ್ತು ಸ್ಮಾರ್ಟ್ ನಗರೀಕರಣದಲ್ಲಿ ಒಗ್ಗೂಡಿ ಶ್ರಮಿಸಲು ಸಮ್ಮತಿಸಿದ್ದೇವೆ.

14. ನಮ್ಮ ಎರಡೂ ರಾಷ್ಟ್ರಗಳ ನಡುವೆ ಉದ್ದೇಶಿತ ಹೊಸ ನಿಯಂತ್ರಣ ಸಹಕಾರ ಒಪ್ಪಂದ ಸೇರಿದಂತೆ ಫಿನ್ ಟೆಕ್ ಮಾತುಕತೆ ಸ್ಥಾಪಿಸುವುದನ್ನು ನಾವು ಸ್ವಾಗತಿಸಿದ್ದೇವೆ. ನಮ್ಮ ಹಣಕಾಸು ಸೇವೆಯ ಸಹಯೋಗ ತಾಂತ್ರಿಕ ಸಹಕಾರದ ಕಾರ್ಯಕ್ರಮದಿಂದ ಹೆಚ್ಚಳವಾಗಿದ್ದು, ದಿವಾಳಿ, ಪಿಂಚಣಿ ಮತ್ತು ವಿಮೆಯಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ನೆರವಾಗಲಿದೆ. ಈ ಕ್ಷೇತ್ರದಲ್ಲಿನ ಮುಂದುವರಿದ ಸಹಯೋಗವನ್ನು ಹಣಕಾಸು ಸಚಿವರು ಈ ವರ್ಷದ ಕೊನೆಯಲ್ಲಿ ನಡೆಯುವ 10ನೇ ಸುತ್ತಿನ ಆರ್ಥಿಕ ಮತ್ತು ಹಣಕಾಸು ಮಾತುಕತೆಯ ವೇಳೆ ನಿರ್ಧರಿಸುತ್ತಾರೆ.

15. ಭಾರತ ಮತ್ತು ಯುಕೆ ಇಂದಿನ ಜಾಗತಿಕ ವಿಶ್ವದಲ್ಲಿ ಸಂಪರ್ಕದ ಮಹತ್ವವನ್ನು ದೃಢಪಡಿಸುತ್ತದೆ. ಸಂಪರ್ಕದ ಉಪಕ್ರಮಗಳು ಉತ್ತಮ ಆಡಳಿತದ, ನೆಲದ ಕಾನೂನಿನ, ಮುಕ್ತ ಮತ್ತು ಪಾರದರ್ಶಕತೆಯ ಪ್ರಮುಖ ನೀತಿಗಳ ಆಧಾರದಲ್ಲಿ ಇರಬೇಕು; ಸಾಮಾಜಿಕ ಮತ್ತು ಪರಿಸರಾತ್ಮಕ ಗುಣಮಟ್ಟ, ಹಣಕಾಸು ಹೊಣೆಗಾರಿಕೆಯ ನೀತಿಗಳು, ಹೊಣೆಗಾರಿಕೆಯ ಸಾಲ – ನೆರವು ನೀತಿಗಳನ್ನು ಪಾಲಿಸಬೇಕು; ಮತ್ತು ಅಂತಾರಾಷ್ಟ್ರೀಯ ಕಟ್ಟುಪಾಡುಗಳು, ಮಾನದಂಡಗಳು, ಉತ್ತಮ ಅಭ್ಯಾಸಗಳನ್ನು ಗೌರವಿಸುವ ರೀತಿಯಲ್ಲಿ ಮತ್ತು ಸ್ಪಷ್ಟವಾದ ಪ್ರಯೋಜನಗಳನ್ನು ನೀಡಬೇಕು ಎಂದು ಅವು ಒತ್ತಿ ಹೇಳಿವೆ.

ಜವಾಬ್ದಾರಿಯುತ ಜಾಗತಿಕ ನಾಯಕತ್ವ

16. ಹವಾಮಾನ ಬದಲಾವಣೆ ವಿರುದ್ಧ ಹೋರಾಟದ ನೇತೃತ್ವದ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಹವಾಮಾನ ಬದಲಾವಣೆ ಎದುರಿಸುವುದು ಮತ್ತು ಸುರಕ್ಷಿತ, ಕೈಗೆಟಕುವ ದರದ ಮತ್ತು ಸುಸ್ಥಿರ ಇಂಧನ ಪೂರೈಕೆ ಪ್ರಮುಖ ಹಂಚಿಕೆಯ ಆದ್ಯತೆಗಳಾಗಿವೆ ಎಂಬುದನ್ನು ಎರಡೂ ಕಡೆಯವರು ಉಲ್ಲೇಖಿಸಿದರು, ಮತ್ತು ತಾಂತ್ರಿಕ ನಾವಿನ್ಯತೆ, ಜ್ಞಾನ ಹಂಚಿಕೆ, ಸಾಮರ್ಥ್ಯವರ್ಧನೆ, ವಾಣಿಜ್ಯ ಮತ್ತು ಹೂಡಿಕೆ ಹಾಗೂ ಯೋಜನೆ ಸ್ಥಾಪನೆಯ ಮೂಲಕ ಶುದ್ಧ ಇಂಧನ ಯೋಜನೆಗಳ ನಿಯೋಜನೆ ಮತ್ತು ಅಭಿವೃದ್ಧಿಯ ವೆಚ್ಚ ತಗ್ಗಿಸುವ ಸಹಕಾರಕ್ಕೆ ಸಮ್ಮತಿಸಿದರು.

17. ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ) ಸ್ಥಾಪನೆಗಾಗಿ ಭಾರತ ಕೈಗೊಂಡ ಸಕಾರಾತ್ಮಕ ಕ್ರಮಗಳನ್ನು ಯುನೈಟೆಡ್ ಕಿಂಗ್ಡಮ್ ಸ್ವಾಗತಿಸಿತು. ಕಾಮನ್ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆಯ ವಾರದ ಅಂಗವಾಗಿ ಎರಡೂ ಸರ್ಕಾರಗಳ ಬೆಂಬಲದೊಂದಿಗೆ ಐ.ಎಸ್.ಎ ಮತ್ತು ಲಂಡನ್ ಶೇರುಪೇಟೆ (ಎಲ್.ಎಸ್.ಇ.) ಜಂಟಿಯಾಗಿ ಆಯೋಜಿಸಿದ್ದ ಯಶಸ್ವೀ ಕಾರ್ಯಕ್ರಮವನ್ನು ನಾಯಕರು ಉಲ್ಲೇಖಿಸಿದರು. ಯು,ಕೆ. ಸಹಯೋಗದಲ್ಲಿ ಸೇರುವುದನ್ನು ಈ ಕಾರ್ಯಕ್ರಮ ಸಂಕೇತಿಸಿತು ಮತ್ತು ಯುಕೆ ಮತ್ತು ಐಎಸ್.ಎ. ನಡುವೆ ಸೌರ ಹಣಕಾಸು ನೆರವು, ಮುಂದಿನ ಪೀಳಿಗೆಯ ಸೌರ ತಂತ್ರಜ್ಞಾನ ಅಭಿವೃದ್ಧಿ ಮತ್ತು ಯುಕೆಯ ಸೌರ ವಾಣಿಜ್ಯ ತಜ್ಞತೆಯನ್ನು ಐ.ಎಸ್.ಎ. ಉದ್ದೇಶದ ಈಡೇರಿಕೆಗೆ ಬೆಂಬಲ ನೀಡುವ ಸಹಯೋಗವನ್ನು ಪ್ರದರ್ಶಿಸಿತು. ಈ ಕಾರ್ಯಕ್ರಮ ಉದ್ದೇಶಿತ ಐ.ಎಸ್.ಎ.ದೇಶಗಳಲ್ಲಿ 2030 ರ ಹೊತ್ತಿಗೆ 1,000 ಶತಕೋಟಿ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಸೌರ ಇಂಧನದಲ್ಲಿ ಹೂಡಿಕೆ ಮಾಡುವ ಐ.ಎಸ್.ಎ.ಯ ಗುರಿಗಳನ್ನು ಹೆಚ್ಚಿಸುವಲ್ಲಿ ಎಲ್ಎಸ್ಇಯ ಪಾತ್ರವನ್ನು ಒತ್ತಿ ಹೇಳಿತು.

18. ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದಲ್ಲಿಮತ್ತು ಅಂತಾರಾಷ್ಟ್ರೀಯ ರೂಢಿಗಳನ್ನು, ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಒಪ್ಪಿಕೊಂಡಿರುವ ನಿಯಮಗಳನ್ನು ಆಧರಿಸಿದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ನಮ್ಮ ಉದ್ದೇಶವನ್ನು ಹಂಚಿಕೊಳ್ಳುವ ಎಲ್ಲರೊಂದಿಗೆ ನಾವು ನಿಕಟವಾಗಿ ಕೆಲಸ ಮಾಡುವ ಆಸೆಯನ್ನು ಹಂಚಿಕೊಳ್ಳುತ್ತೇವೆ. ಅಸ್ಥಿರ ಜಗತ್ತಿನಲ್ಲಿ ಯುಕೆ ಮತ್ತು ಭಾರತ ಒಟ್ಟಾಗಿ ಉತ್ತಮ ಶಕ್ತಿಯಾಗಿವೆ. ನಾವು ನಮ್ಮ ಅನುಭವ ಮತ್ತು ಜ್ಞಾನವನ್ನು ಜಾಗತಿಕ ಸವಾಲುಗಳನ್ನು ಎದುರಿಸಲು ಹಂಚಿಕೊಳ್ಳುತ್ತೇವೆ. ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಯುಕೆಯ ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು 10 ದಶಲಕ್ಷ ಪೌಂಡ್ ಗಳ ದ್ವಿಪಕ್ಷೀಯ ಸಂಶೋಧನಾ ಉಪಕ್ರಮ ಆರಂಭಿಸಲು ಉದ್ದೇಶಿಸಿವೆ, ಇದು ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ವೆಚ್ಚದ ದೃಷ್ಟಿಕೋನಕ್ಕೆ ಗಮನ ಹರಿಸುತ್ತದೆ. ಯುಕೆಯ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನ ಸಂಶೋಧನಾ ಮಂಡಳಿ ಮತ್ತು ಡಿಬಿಟಿಗಳು ವಿಶ್ವದ ಸಣ್ಣ ಮತ್ತು ಅತಿಸಣ್ಣ ರೈತರ ಜೀವನವನ್ನು ಸುಧಾರಿಸಲು ಜೈವಿಕ ಸಂಶೋಧನೆ ಮತ್ತು ದತ್ತಾಂಶವನ್ನು ಬಳಸಿಕೊಳ್ಳುವಂತಹ ಉತ್ತಮ ಕೃಷಿಯ ಮುಕ್ತ ಮೂಲದ ದತ್ತಾಂಶ ವೇದಿಕೆ. ‘ರೈತರ ವಲಯ (Farmer Zone)’ ಉಪಕ್ರಮವನ್ನು ಮುನ್ನಡೆಸಲಿವೆ.ಸಮರ್ಥನೀಯ ಭೂಮಿಯ ಉಪಕ್ರಮದ ಕಡೆಗೆ, ಇದು ಸಮರ್ಥನೀಯ ಮತ್ತು ಚೇತರಿಸಿಕೊಳ್ಳುವ ಮಾನವ ಅಭಿವೃದ್ಧಿಗಾಗಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಆದ್ಯತೆ ನೀಡುವ ಯುಕೆಯ ಸ್ವಾಭಾವಿಕ ಪರಿಸರಾತ್ಮಕ ಸಂಶೋಧನಾ ಮಂಡಳಿ (ಎನ್.ಇ.ಆರ್.ಸಿ.)ಯಲ್ಲಿ ಡಿಬಿಟಿ ಪಾಲುದಾರನಾಗಿದೆ.

19. 2030ರ ಹೊತ್ತಿಗೆ ಕಡು ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತ್ವರಿತ ಪ್ರಗತಿಗಾಗಿ ನಾವು ಜಾಗತಿಕ ಅಭಿವೃದ್ಧಿಯ ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತೇವೆ. ಹೆಚ್ಚು ಸಮೃದ್ಧ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಹೆಚ್ಚಿಸಲಾದ ಹಣಕಾಸು ನೆರವು, ಹೊಸ ಮಾರುಕಟ್ಟೆಗಳು, ವಾಣಿಜ್ಯ, ಹೂಡಿಕೆ, ಸಂಪರ್ಕದ ಲಾಭವನ್ನು ಖಾತ್ರಿಪಡಿಸುತ್ತೇವೆ ಮತ್ತು ಆರ್ಥಿಕ ಏಕೀಕರಣ ಲಾಭವನ್ನು ಎಷ್ಟು ಸಾಧ್ಯವೋ ಅಷ್ಟು ರಾಷ್ಟ್ರಗಳು – ಬಡವರು ಮತ್ತು ಕಡುಬಡವರು – ಪಡೆಯಬೇಕೆಂದು ಬಯಸುತ್ತೇವೆ.

ರಕ್ಷಣೆ ಮತ್ತು ಸೈಬರ್ ಭದ್ರತೆ

20. ನಮ್ಮ ಪಾಲುದಾರಿಕೆಯಲ್ಲಿ ರಕ್ಷಣೆ ಮತ್ತು ಸುರಕ್ಷತೆ ಒಂದು ಮೂಲೆಗಲ್ಲಾಗಬೇಕು ಎಂದು 2015ರಲ್ಲಿ ನಾವು ಹೊಸ ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆ ಪಾಲುದಾರಿಕೆ (ಡಿಐಎಸ್ಪಿ) ಸಂಕಲ್ಪ ಮಾಡಿದ್ದೇವೆ. ನಾವು ಎದುರಿಸುತ್ತಿರುವ ಭೀತಿಯ ಸ್ವರೂಪ ನಿರಂತರವಾಗಿ ಬದಲಾಗುತ್ತಿದೆ – ಹೀಗಾಗಿ ನಾವು ನಮ್ಮ ಸ್ಪಂದನೆಯನ್ನು ನಾವಿನ್ಯ ಮತ್ತು ಚುರುಕುಮತಿಗೊಳಿಸಬೇಕು. ಈ ಭೀತಿಗಳನ್ನು ಎದುರಿಸುವಂಥ ತಂತ್ರಜ್ಞಾನವನ್ನು ವಿನ್ಯಾಸಮಾಡಿ, ಸೃಷ್ಟಿಸಿ ಮತ್ತು ಉತ್ಪಾದಿಸಬೇಕು. ಮತ್ತು ನಮ್ಮ ಭದ್ರತೆ ಮತ್ತು ಸೇನಾ ಪಡೆಗಳು ತಂತ್ರಜ್ಞಾನ, ಸಾಮರ್ಥ್ಯ ಮತ್ತು ಸಾಧನಗಳನ್ನು ವಿನಿಮಯ ಮಾಡಿಕೊಳ್ಳಬೇಕು.

21. ಸುರಕ್ಷಿತ, ಮುಕ್ತ, ಸಮಗ್ರ ಮತ್ತು ಸಮೃದ್ಧ ಭಾರತ – ಪೆಸಿಫಿಕ್ ಭಾರತ, ಯುಕೆ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಇಚ್ಛೆಯಾಗಿದೆ. ಕಡಲ್ಗಳ್ಳತನದ ಭೀತಿ ಎದುರಿಸಲು, ಪಥದರ್ಶಕದ ಸ್ವಾತಂತ್ರ ರಕ್ಷಣೆ ಮತ್ತು ಮುಕ್ತ ಪ್ರವೇಶ ಹಾಗೂ ವಲಯದ ಸಾಗರ ಕ್ಷೇತ್ರದ ಅರಿವಿಗಾಗಿ ಯುಕೆ ಮತ್ತು ಭಾರತ ಒಗ್ಗೂಡಿ ಶ್ರಮಿಸಲಿವೆ.

22. ಮುಕ್ತ, ಶಾಂತಿಯುತ ಮತ್ತು ಸುರಕ್ಷಿತ ಸೈಬರ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಹೊಣೆಗಾರಿಕೆಯಲ್ಲಿ ರಾಷ್ಟ್ರಗಳ ವರ್ತನೆ ಗುರುತಿಸುವ ಚೌಕಟ್ಟಿನ ಮೂಲಕ ಸೈಬರ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನಾವು ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ.

ಭಯೋತ್ಪಾದನೆ – ನಿಗ್ರಹ

23. ಇಬ್ಬರೂ ನಾಯಕರು, ಭಯೋತ್ಪಾದನೆ ಮತ್ತು ಭಾರತ ಮತ್ತು ಯುಕೆಯಲ್ಲಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳು ಸೇರಿದಂತೆ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನೂ ಬಲವಾಗಿ ಖಂಡಿಸುವ ತಮ್ಮ ನಿಲುವನ್ನು ಪುನರುಚ್ಚರಿಸಿದರು. ಭಯೋತ್ಪಾದನೆಯನ್ನು ಯಾವುದೇ ಕಾರಣದ ಮೇಲೆ ಸಮರ್ಥಿಸಲು ಸಾಧ್ಯವೇ ಇಲ್ಲ ಮತ್ತು ಇದನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಮತ್ತು ಸಿದ್ಧಾಂತದ ಜೊತೆ ಸೇರಿಸುವುದು ಸಲ್ಲ ಎಂದು ಇಬ್ಬರೂ ನಾಯಕರು ಪ್ರತಿಪಾದಿಸಿದರು.

24. ಭಯೋತ್ಪಾದನೆ ಮತ್ತು ವಿಧ್ವಂಸಕ ಸಂಘಟನೆಗಳಿಗೆ ತೀವ್ರಗಾಮಿತ್ವ, ನೇಮಕ ಮತ್ತು ಮುಗ್ಧ ಜನರ ಮೇಲೆ ದಾಳಿ ನಡೆಸಲು ಜಾಗ ನೀಡುವುದನ್ನು ನಿರಾಕರಿಸಬೇಕು ಎಂದು ಇಬ್ಬರೂ ನಾಯಕರು ಸಮ್ಮತಿಸಿದರು; ಇದಕ್ಕಾಗಿ ಎಲ್ಲ ರಾಷ್ಟ್ರಗಳೂ ವಿದೇಶೀ ಭಯೋತ್ಪಾದಕ ಹೋರಾಟಗಾರರೂ ಸೇರಿ ಭಯೋತ್ಪಾದಕರ ಜಾಲ, ಅವರ ಹಣಕಾಸು ಮತ್ತು ಭಯೋತ್ಪಾದಕರ ಓಡಾಟ ತಡೆಯಲು ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

25. ನಮ್ಮ ನಾಗರಿಕರನ್ನು ರಕ್ಷಿಸಲು ಲಷ್ಕರ್ -ಇ- ತೋಯ್ಬಾ, ಜೈಶ್ -ಇ-ಮೊಹಮ್ಮದ್, ಹಿಜ್ಬ್-ಉಲ್-ಮುಜಾಹಿದೀನ್, ಹಖ್ಕಾನಿ ಜಾಲ, ಅಲ್ ಖೈದಾ, ಐಸಿಸ್ (ಡಾ ಇಷ್) ಮತ್ತು ಅವುಗಳ ಅಂಗಸಂಸ್ಥೆಗಳು ಸೇರಿದಂತೆ ಜಾಗತಿಕವಾಗಿ ನಿಷೇಧಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಣಾಯಕ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಳ್ಳಲು ಮತ್ತು ಅವು ಪೋಷಿಸುತ್ತಿರುವ ಆನ್ ಲೈನ್ ಮೂಲಭೂತೀಕರಣ ಮತ್ತು ಹಿಂಸಾತ್ಮಕ ವಿಧ್ವಂಸಕತೆ ವಿರುದ್ಧ ಕ್ರಮಕ್ಕೆ ಸಹಕಾರ ಬಲಪಡಿಸಲು ನಾಯಕರು ಒಪ್ಪಿಕೊಂಡರು.

26. ಸ್ಯಾಲಿಸ್ಬರಿಯಲ್ಲಿನ ದಿಗ್ಭ್ರಮೆಗೊಳಿಸುವ ದಾಳಿಯ ಹಿನ್ನೆಲೆಯಲ್ಲಿ, ಯುಕೆ ಮತ್ತು ಭಾರತವು ರಾಸಾಯನಿಕ ಶಸ್ತ್ರಾಸ್ತ್ರಗಳ ಹರಡುವಿಕೆ ಮತ್ತು ಬಳಕೆಗೆ ವಿರುದ್ಧವಾಗಿ ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ತಡೆ ವ್ಯವಸ್ಥೆ ಬಲಪಡಿಸುವಲ್ಲಿ ತಮ್ಮ ಹಂಚಿಕೆಯ ಆಸಕ್ತಿಯನ್ನು ಪುನರುಚ್ಚರಿಸಿದವು. ಸಿರಿಯಾದ ಅರಬ್ ಗಣರಾಜ್ಯದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಮುಂದುವರಿಸಿರುವ ಕುರಿತ ವರದಿಗಳ ಕುರಿತಂತೆ ತಮ್ಮ ಆಳವಾದ ಕಳವಳವನ್ನು ಅವರು ಹಂಚಿಕೊಂಡರು. ಯಾವುದೇ ಸಂದರ್ಭದಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ವ್ಯಕ್ತಿಯಿಂದ, ಯಾವುದೇ ಸನ್ನಿವೇಶದಲ್ಲಿ ರಾಸಾಯನಿಕ ಅಸ್ತ್ರ ಬಳಕೆಯನ್ನು ಅವರು ವಿರೋಧಿಸಿದರು ಮತ್ತು ರಾಸಾಯನಿಕ ಅಸ್ತ್ರ ಸಮಾವೇಶದ ಸಮರ್ಥ ಜಾರಿಯನ್ನು ಬಲಪಡಿಸುವ ತಮ್ಮ ಬದ್ಧತೆ ವ್ಯಕ್ತಪಡಿಸಿದರು. ತುರ್ತು ತನಿಖೆಯ ಅಗತ್ಯ ಪ್ರತಿಪಾದಿಸಿದ ಅವರು, ರಾಸಾಯನಿಕ ಶಸ್ತ್ರಾಸ್ತ್ರಗಳ ಯಾವುದೇ ಬಳಕೆಯ ಕುರಿತು ಎಲ್ಲಾ ತನಿಖೆಗಳ ನೀತಿ ಸಮಾವೇಶದ ನಿಬಂಧನೆಗೆ ಅನುಗುಣವಾಗಿ ಕಟ್ಟುನಿಟ್ಟಾಗಿರಬೇಕು ಎಂದು ಪ್ರತಿಪಾದಿಸಿದರು.

ಶಿಕ್ಷಣ ಮತ್ತು ಜನರೊಂದಿಗಿನ ಸಂಪರ್ಕ

27. ನಮ್ಮ ಎರಡೂ ದೇಶಗಳ ಸಮೃದ್ಧಿಯನ್ನು ಹೆಚ್ಚಿಸುವ ಕೌಶಲ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ವಿಷಯ ಮತ್ತು ವಲಯಗಳಲ್ಲಿ ವಿಶೇಷವಾಗಿ ಯುಕೆಯಲ್ಲಿ ಅಧ್ಯಯನ ಮತ್ತು ಕೆಲಸ ಮಾಡಲು ನಾವು ಅತ್ಯುತ್ತಮ ಮತ್ತು ಪ್ರಕಾಶಮಾನವಾದ ಅವಕಾಶವನ್ನು ಸ್ವಾಗತಿಸುತ್ತೇವೆ.

28. 2017ರ ಭಾರತ – ಯುಕೆ ಸಾಂಸ್ಕೃತಿಕ ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕಾಗಿ ಇಬ್ಬರೂ ನಾಯಕರು ಪ್ರಶಂಸೆ ವ್ಯಕ್ತಪಡಿಸಿದರು. ವರ್ಷವಿಡೀ ನಡೆದ ಕಾರ್ಯಕ್ರಮ ಅಭೂತಪೂರ್ವವಾದ ಮಟ್ಟದ ಸಾಂಸ್ಕೃತಿಕ ವಿನಿಮಯ ಕಂಡಿದ್ದು, ಎರಡೂ ದೇಶಗಳಲ್ಲಿ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಪ್ರದರ್ಶಿಸಿವೆ ಮತ್ತು ಇದು ಭಾರತ ಮತ್ತು ಯುಕೆಯ ಹಿಂದಿರುವ ಆಳವಾದ ಸಾಂಸ್ಕೃತಿಕ ಬಾಂಧವ್ಯದ ಸೂಕ್ತ ಸಂಭ್ರಮಾಚರಣೆಯಾಗಿದೆ.

29. ಭಾರತದಲ್ಲಿ ಬ್ರಿಟಿಷ್ ಕೌನ್ಸಿಲ್ ನ 70ನೇ ವರ್ಷಾಚರಣೆಯನ್ನು ಮತ್ತು ಶಿಕ್ಷಕರಿಗೆ ತರಬೇತಿ ನೀಡುವ, ಯುವಕರಿಗೆ ಕೌಶಲ ಒದಗಿಸುವ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಬೆಂಬಲಿಸುವ ಅದರ ಕಾರ್ಯವನ್ನು ನಾಯಕರು ಸ್ವಾಗತಿಸಿದರು.

30. ಭಾರತ ಮತ್ತು ಯುಕೆಯ ಮುಂದಿನ ಪೀಳಿಗೆಯು ಹೆಚ್ಚು ದೃಢವಾದ ಮತ್ತು ಬಲವಾದ ಕಾರ್ಯಕ್ರಮ ಮತ್ತು ವಿನಿಮಯವನ್ನು ಹೊಂದಿರುವ ಮಹಾನ್ ಆಶಾಭಾವನೆ ನೀಡುವ ಎರಡು ದೇಶಗಳ ಜನರ ನಡುವಿನ ಜೀವಂತ ಸೇತುವೆ ಇದಾಗಿದೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಈ ಜೀವಂತ ಸೇತುವೆಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ನಾಯಕರು ಸಮ್ಮತಿಸಿದರು.

ಪರಿಸಮಾಪ್ತಿ

31. ಮುಂಬರುವ ವರ್ಷಗಳಲ್ಲಿ ನಮ್ಮ ವಿಶೇಷ ಸಂಬಂಧ ವಿಕಸನಗೊಳ್ಳುವುದನ್ನು ಮತ್ತು ಸುಧಾರಿಸಲು ನೋಡುತ್ತಿರುವ ಈ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಗತ್ತಿನಾದ್ಯಂತ ಮತ್ತು ಶತಮಾನದವರೆಗೆ ವಿಸ್ತರಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ನಾವು ನಮ್ಮ ವಾಣಿಜ್ಯ, ಸಂಸ್ಕೃತಿ ಮತ್ತು ಬೌದ್ಧಿಕ ನಾಯಕರುಗಳಿಗೆ ಕುಟುಂಬದಿಂದ ಹಣಕಾಸಿನವರೆಗೆ, ವಾಣಿಜ್ಯದಿಂದ ಬಾಲಿವುಡ್ ವರೆಗೆ, ಕ್ರೀಡೆಯಿಂದ ವಿಜ್ಞಾನದವರೆಗೆ, ಈಗಾಗಲೇ ಭಾರತ ಮತ್ತು ಯುಕೆ ನಡುವೆ ಬೆಸೆದಿರುವ ಲಕ್ಷಾಂತರ ಸಂವಾದಗಳ ಅನ್ವೇಷಣೆಗೆ ಪ್ರೋತ್ಸಾಹ ನೀಡುತ್ತೇವೆ. –ಇದರಿಂದ ಲಕ್ಷಾಂತರ ಬ್ರಿಟಿಷ್ ಮತ್ತು ಭಾರತೀಯರು ವಿನಿಮಯ ಮತ್ತು ಕಲಿಕೆಯಪ್ರಯಾಣ ಮತ್ತು ವ್ಯಾಪಾರ ಒಗ್ಗೂಡಲಿದೆ.

32. ಪ್ರಧಾನಮಂತ್ರಿ ಮೋದಿ ಅವರು ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಲಾದ ಆಪ್ತವಾದ ಆತಿಥ್ಯಕ್ಕೆ ಯುನೈಟೆಡ್ ಕಿಂಗ್ಡಮ್ ಸರ್ಕಾರ ಮತ್ತು ಪ್ರಧಾನಿ ಥೆರೇಸಾ ಮೇ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದಲ್ಲಿ ಥೆರೇಸಾ ಅವರನ್ನು ಸ್ವಾಗತಿಸಲು ಎದಿರು ನೋಡುತ್ತಿರುವುದಾಗಿ ಹೇಳಿದರು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Rs 1,780 Cr & Counting: How PM Modi’s Constituency Varanasi is Scaling New Heights of Development

Media Coverage

Rs 1,780 Cr & Counting: How PM Modi’s Constituency Varanasi is Scaling New Heights of Development
...

Nm on the go

Always be the first to hear from the PM. Get the App Now!
...
PM congratulates boxer, Lovlina Borgohain for winning gold medal at Boxing World Championships
March 26, 2023
ಶೇರ್
 
Comments

The Prime Minister, Shri Narendra Modi has congratulated boxer, Lovlina Borgohain for winning gold medal at Boxing World Championships.

In a tweet Prime Minister said;

“Congratulations @LovlinaBorgohai for her stupendous feat at the Boxing World Championships. She showed great skill. India is delighted by her winning the Gold medal.”