"ಇಂದಿನ ನೇಮಕಾತಿಯು 9 ಸಾವಿರ ಕುಟುಂಬಗಳಿಗೆ ಸಂತೋಷ ತರಲಿದೆ ಮತ್ತು ಉತ್ತರ ಪ್ರದೇಶದಲ್ಲಿ ಭದ್ರತೆಯ ಭಾವವನ್ನು ಹೆಚ್ಚಿಸುತ್ತದೆ"
"ಭದ್ರತೆ ಮತ್ತು ಉದ್ಯೋಗ ಇವೆರಡರ ಸಂಯೋಜಿತ ಶಕ್ತಿಯು ಉತ್ತರ ಪ್ರದೇಶದ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ"
"2017 ರಿಂದ ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ 1.5 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿಗಳು ನಡೆದಿದ್ದು, ಉದ್ಯೋಗ ಮತ್ತು ಭದ್ರತೆ ಎರಡೂ ಸುಧಾರಿಸಿವೆ"
"ನೀವು ಪೊಲೀಸ್‌ ಸೇವೆಗೆ ಬಂದಾಗ, ನಿಮ್ಮ ಕೈಗೆ 'ದಂಡ' ಸಿಗುತ್ತದೆ, ಆದರೆ ದೇವರು ನಿಮಗೆ ಹೃದಯವನ್ನೂ ಕೊಟ್ಟಿದ್ದಾನೆ. ನೀವು ಸಂವೇದನಾಶೀಲರಾಗಿರಬೇಕು ಮತ್ತು ವ್ಯವಸ್ಥೆಯನ್ನು ಸಂವೇದನಾಶೀಲಗೊಳಿಸಬೇಕು"
"ನೀವು ಜನರ ಸೇವೆ ಮತ್ತು ಶಕ್ತಿ ಎರಡರ ಪ್ರತಿಬಿಂಬವಾಗಬಹುದು"

ಇತ್ತೀಚಿನ ದಿನಗಳಲ್ಲಿ “ಉದ್ಯೋಗ ಮೇಳ” ಕಾರ್ಯಕ್ರಮಗಳು ತಮಗೆ ವಿಶೇಷವಾಗಿವೆ. ಕಳೆದ ಹಲವಾರು ತಿಂಗಳುಗಳಲ್ಲಿ ಒಂದಲ್ಲಾ ಒಂದು ವಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸಹಸ್ರಾರು ಯುವ ಜನರಿಗೆ ಪ್ರಮುಖ ಹುದ್ದೆಗಳಿಗಾಗಿ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. ಇದಕ್ಕೆ ತಾವು ಸಾಕ್ಷಿಯಾಗುತ್ತಿರುವುದು ತಮ್ಮ ಅದೃಷ್ಟ. ಈ ಪ್ರತಿಭಾವಂತ ಯುವ ಸಮೂಹ ಸರ್ಕಾರಿ ವ್ಯವಸ್ಥೆಯಲ್ಲಿ ಹೊಸ ಆಲೋಚನೆಗಳನ್ನು ತರುತ್ತಿದ್ದಾರೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದ್ದಾರೆ.

ಸ್ನೇಹಿತರೇ,

ಇಂದು ಉತ್ತರ ಪ್ರದೇಶದಲ್ಲಿ ಆಯೋಜಿಸಲಾಗಿರುವ ಉದ್ಯೋಗ ಮೇಳಕ್ಕೆ ವಿಶೇಷ ಮಹತ್ವವಿದೆ. ಈ ಉದ್ಯೋಗ ಮೇಳದಿಂದ 9000 ಕುಟುಂಬಗಳಿಗೆ ಸಂತಸವನ್ನಷ್ಟೇ ತರುವುದಿಲ್ಲ, ಆದರೆ ಉತ್ತರ ಪ್ರದೇಶದಲ್ಲಿ ಭದ್ರತೆಯ ಪ್ರಜ್ಞೆಯನ್ನು ಬಲಗೊಳಿಸಿದೆ. ಈ ಹೊಸ ನೇಮಕಾತಿಯಿಂದ ಉತ್ತರ ಪ್ರದೇಶದ ಪೊಲೀಸ್ ಪಡೆ ಹೆಚ್ಚು ಸಬಲೀಕರಣಗೊಳ್ಳಲಿದೆ ಮತ್ತು ಇನ್ನಷ್ಟು ಉತ್ತಮವಾಗಲಿದೆ.  ಇಂದು  ನೇಮಕಾತಿ ಪತ್ರ ಪಡೆದುಕೊಂಡ ಯುವ ಜನಾಂಗಕ್ಕೆ ಹೃದಯ ತುಂಬಿದ ಅಭಿನಂದನೆಗಳು, ಇವರು ಹೊಸ ಆರಂಭ ಮತ್ತು ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಿದ್ದಾರೆ. 2017 ರಿಂದ ಈ ವರೆಗೆ ಉತ್ತರ ಪ್ರದೇಶದ ಪೊಲೀಸ್ ಒಂದೇ ಇಲಾಖೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ನೇಮಕಾತಿ ಮಾಡಲಾಗಿದೆ. ಆದರೆ ಬಿಜೆಪಿ ಆಡಳಿತದಲ್ಲಿ ಉದ್ಯೋಗ ಮತ್ತು ಭದ್ರತೆ ಎರಡರಲ್ಲೂ ಹೆಚ್ಚಳವಾಗಿದೆ.

ಸ್ನೇಹಿತರೇ,

ಉತ್ತರ ಪ್ರದೇಶ ಮಾಫಿಯಾಗಳಿಗೆ ಹೆಸರುವಾಸಿಯಾದ ಕಾಲವೊಂದಿತ್ತು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆ ಅತಿರೇಕದಲ್ಲಿತ್ತು. ಅಭಿವೃದ್ಧಿಯತ್ತ ಸಾಗುತ್ತಿರುವ ರಾಜ್ಯಗಳ ಪೈಕಿ ಇದು ಎಣಿಕೆಯ ಸ್ಥಾನದಲ್ಲಿತ್ತು. ಬಿಜೆಪಿ ಸರ್ಕಾರ ಜನರಲ್ಲಿ ಭದ್ರತೆಯ ಪ್ರಜ್ಞೆಯನ್ನು ಬಲಗೊಳಿಸಿದೆ. ನಮಗೆಲ್ಲಾ ಗೊತ್ತಿದೆ, ಎಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಲವಾಗಿರುತ್ತದೆಯೋ ಅಂತಹ ಕಡೆಗಳಲ್ಲಿ ಹೆಚ್ಚಿನ ಉದ್ಯೋಗವಕಾಶಗಳ ಸಾಧ್ಯತೆಗಳಿವೆ. ವ್ಯಾಪರಕ್ಕಾಗಿ ಸುರಕ್ಷಿತ ಪರಿಸರವಿರುವ ಪ್ರದೇಶದಲ್ಲಿ ಹೂಡಿಕೆಯಲ್ಲಿ ಏರಿಕೆಯಾಗಲಿದೆ.  ಈಗ ನೀವು ನೋಡಿ ಭಾರತದ ನಾಗರಿಕರಿಗಾಗಿ ಅಸಂಖ್ಯಾತ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳಿವೆ. ಉತ್ತರ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಅವಕಾಶಗಳಿವೆ ಮತ್ತು ಪ್ರತಿಯೊಬ್ಬರೂ ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಕಾನೂನು ಮತ್ತು ಸುವಸ್ಥೆ ಬಲಿಷ್ಠವಾಗಿದ್ದಾಗ, ಇಂತಹ ಸುದ್ದಿಗಳು ದೇಶದ ಪ್ರತಿಯೊಂದು ಮೂಲೆಗಳಿಗೆ ತಲುಪಿ, ಉತ್ತರ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ರೀತಿಯಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ವಿವಿಧ ರೀತಿಯ ಉದ್ಯೋಗಾವಕಾಶಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆಧುನಿಕ ಎಕ್ಸ್ ಪ್ರೆಸ್ ಹೆದ್ದಾರಿಗಳು, ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಮೀಸಲಾದ ಸರಕು ಸಾಗಾಣೆ ಕಾರಿಡಾರ್, ಹೊಸ ರಕ್ಷಣಾ ಕಾರಿಡಾರ್, ಹೊಸ ಮೊಬೈಲ್ ಉತ್ಪಾದನಾ ಘಟಕಗಳು, ಆಧುನಿಕ ಜಲ ಮಾರ್ಗಗಳ ನಿರ್ಮಾಣದಿಂದ ಉತ್ತರಪ್ರದೇಶದಲ್ಲಿ ಆಧುನಿಕ ಮೂಲ ಸೌಕರ್ಯ ನಿರ್ಮಾಣದಿಂದ ರಾಜ್ಯದ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಹಲವಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೇ,

ಇಂದು ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಎಕ್ಸ್ ಪ್ರೆಸ್ ಹೆದ್ದಾರಿಗಳಿವೆ. ಇಲ್ಲಿ ಎಕ್ಸ್ ಪ್ರೆಸ್ ಹೆದ್ದಾರಿಗಳು ನಿರಂತರವಾಗಿ ವಿಸ್ತರಣೆಯಾಗುತ್ತಿವೆ. ಇತ್ತೀಚೆಗೆ ಕುಟುಂಬವೊಂದು ತಮ್ಮನ್ನು ಭೇಟಿಯಾಗಲು ಆಗಮಿಸಿತ್ತು. ಅವರೊಂದಿಗೆ ಮಗಳಿದ್ದಳು. ನಾನು ಕೇಳಿದೆ “ನೀವು ಉತ್ತರ ಪ್ರದೇಶದಿಂದ ಬಂದವರೇ?” “ಇಲ್ಲ, ನಾವು ಎಕ್ಸ್ ಪ್ರೆಸ್ ಪ್ರದೇಶದವರು” ಎಂದರು.  ನೋಡಿ ಇದು ಉತ್ತರ ಪ್ರದೇಶದ ಗುರುತಾಗಿದೆ. ಹೊಸ ರಸ್ತೆಗಳನ್ನು ನಿರ್ಮಿಸಿ ಪ್ರತಿಯೊಂದು ನಗರಗಳನ್ನು ಎಕ್ಸ್ ಪ್ರೆಸ್ ಹೆದ್ದಾರಿಗಳು ಸಂಪರ್ಕಿಸುತ್ತಿವೆ.  ಇಂತಹ ಅಭಿವೃದ್ಧಿ ಯೋಜನೆಗಳು ಉದ್ಯೋಗಾವಕಾಶಗಳನ್ನಷ್ಟೇ ಸೃಷ್ಟಿಸುವುದಿಲ್ಲ, ಆದರೆ ಇದು ಉತ್ತರ ಪ್ರದೇಶಕ್ಕೆ ಇತರೆ ಯೋಜನೆಗಳಿಗೆ ದಾರಿ ಮಾಡಿಕೊಡುತ್ತವೆ. ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮ ಕೈಗಾರಿಕೆಯನ್ನು ಉತ್ತೇಜಿಸಿದೆ ಮತ್ತು ಹೊಸ ಸೌಲಭ್ಯಗಳನ್ನು ಕಲ್ಪಿಸಿದ್ದು, ಇದರಿಂದ ಉದ್ಯೋಗಗಳು ಗಣನೀಯವಾಗಿ ಏರಿಕೆಯಾಗಿವೆ. ಕೆಲವು ದಿನಗಳ ಹಿಂದೆ ಅಂದರೆ ಕ್ರಿಸ್ ಮಸ್ ಸಂದರ್ಭದಲ್ಲಿ ಗೋವಾಗೆ ಭೇಟಿ ನೀಡಿದ್ದೆ. ಗೋವಾ ಸಂಪೂರ್ಣವಾಗಿ ಮುಂಗಡ ಕಾಯ್ದಿರಿಸಲಾಗಿತ್ತು. ಈ ಬಾರಿ ಹೊಸ ಅಂಕಿಅಂಶಗಳ ಪ್ರಕಾರ ಗೋವಾಗಿಂತ ಕಾಶಿಯಲ್ಲಿ ಹೆಚ್ಚು ಮುಂಗಡ ಕಾಯ್ದಿರಿಸಲಾಗಿತ್ತು. ಕಾಶಿ ಸಂಸದನಾಗಿ ನಾನು ಹರ್ಷಗೊಂಡಿದ್ದೇನೆ. ಕೆಲವು ದಿನಗಳ ಹಿಂದೆ ಜಾಗತಿಕ ಹೂಡಿಕೆದಾರರ ಶೃಂಗ ಸಭೆಯಲ್ಲಿ ಹೂಡಿಕೆದಾರರ ಅಮಿತೋತ್ಸಾಹವನ್ನು ನೋಡಿದ್ದೇನೆ. ಇದರ ಹೂಡಿಕೆ ಮೊತ್ತ ಸಹಸ್ರಾರು ಕೋಟಿ ರೂಪಾಯಿಗಳಾಗಿವೆ. ಇಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ.

ಸ್ನೇಹಿತರೇ,

ಭದ್ರತೆ ಮತ್ತು ಉದ್ಯೋಗದ ಸಂಯೋಜಿತ ಶಕ್ತಿಯು ಉತ್ತರ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡಿದೆ. 10 ಲಕ್ಷ ರೂಪಾಯಿವರೆಗೆ ಯಾವುದೇ ಖಾತರಿ ಇಲ್ಲದೇ ಸಾಲ ನೀಡುವ ಮುದ್ರಾ ಯೋಜನೆಯಿಂದ ಲಕ್ಷಾಂತರ ಹಾರುವ ಯುವ ಸಮೂಹಕ್ಕೆ ರೆಕ್ಕೆ ದೊರೆತಂತಾಗಿದ್ದು, ಉತ್ತರ ಪ್ರದೇಶದ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದಂತಾಗಿದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಯುವ ಸಮೂಹ ತಮ್ಮ ಕೌಶಲ್ಯಗಳನ್ನು ಪ್ರಮುಖ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಇದು ಅನುಕೂಲ ಮಾಡಿಕೊಡಲಿದೆ.  ಎಂಎಸ್ಎಂಇ ಯಿಂದ ಲಕ್ಷಾಂತರ ಮಂದಿ ನೋಂದಣಿಯಾಗಿದ್ದು, ಇದು ಭಾರತದ ಅತಿ ದೊಡ್ಡ ಸಣ್ಣ ಪ್ರಮಾಣದ ಕೈಗಾರಿಕಾ ತಾಣವಾಗಿದೆ. ಹೊಸ ಉದ್ದಿಮೆಗಳಿಗೆ ಉತ್ತರ ಪ್ರದೇಶ ನವೋದ್ಯಮ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದೆ.  

ಸ್ನೇಹಿತರೇ,

ಇಂದು ನೇಮಕಾತಿ ಪತ್ರ ಪಡೆದವರು ಒಂದು ವಿಷಯವನ್ನು ಸದಾ ಕಾಲ ನೆನಪಿನಲ್ಲಿಡಬೇಕು. ಹೊಸ ಜವಾಬ್ದಾರಿ, ಹೊಸ ಸವಾಲುಗಳು ಮತ್ತು ಹೊಸ ಅವಕಾಶಗಳು ನಿಮ್ಮ ಬದುಕಿನಲ್ಲಿ ಬರಲಿವೆ. ಪ್ರತಿ ದಿನ ನಿಮಗೆ ಹೊಸ ಅವಕಾಶಗಳು ಅರಸಿ ಬರಲಿವೆ. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ ನಾನು ನಿಮಗೆ ವೈಯಕ್ತಿಕವಾಗಿ ಏನನ್ನಾದರೂ ಹೇಳಲು ಬಯಸುತ್ತೇನೆ ಮತ್ತು ನನ್ನ ಹಲವಾರು ವರ್ಷಗಳ ಸಾರ್ವಜನಿಕ ಜೀವನದ ಅನುಭವದಿಂದಾಗಿ ಇಂದು ನೀವು ನೇಮಕಾತಿ ಪತ್ರಗಳನ್ನು ಪಡೆದಿದ್ದರೂ ನಿಮ್ಮೊಳಗಿನ ವಿದ್ಯಾರ್ಥಿಯನ್ನು ಸಾಯಲು ಬಿಡಬೇಡಿ. ಪ್ರತಿಯೊಂದು ಸಮಯದಲ್ಲಿ ಹೊಸ ವಿಷಯಗಳನ್ನು ಕಲಿಯುವುದನ್ನು ಮುಂದುವರೆಸಿ, ನಿಮ್ಮ ಸಾಮರ್ಥ್ಯವನ್ನು ಅಭಿವೃದ್ದಿಪಡಿಸಿಕೊಳ್ಳಿ ಮತ್ತು ನಿಮ್ಮ ಸಾಮರ್ಥ್ಯವನ್ನು ನಿರ್ಮಿಸಿಕೊಳ್ಳಿ. ಈಗ ಆನ್ಲೈನ್ ಶಿಕ್ಷಣ ಸೌಲಭ್ಯಗಳು ದೊರೆಯುತ್ತಿವೆ. ನೀವು ಸಾಕಷ್ಟು ಕಲಿಯಬಹುದು!. ಇದು ನಿಮ್ಮ ಪ್ರಗತಿಗೆ ಅತ್ಯಂತ ಮುಖ್ಯವಾದದ್ದು. ನಿಮ್ಮ ಜೀವನವನ್ನು ಒಂದೆಡೆ ನಿಲ್ಲಲು ಬಿಡಬೇಡಿ. ಜೀವನ ಕ್ರಿಯಾತ್ಮಕವಾಗಿರಬೇಕು. ನೀವು ಹೊಸ ಉನ್ನತಿಗೆ ಏರಿಕೆಯಾಗುತ್ತೀರಿ!. ನಿಮ್ಮನ್ನು ಈ ಸೇವೆಗೆ ನೇಮಕಾತಿ ಮಾಡಿಕೊಂಡಿದ್ದು, ಇದು ನಿಮ್ಮ ಆರಂಭ ಎಂದು ಪರಿಗಣಿಸಿ. ನಿಮ್ಮ ವ್ಯಕ್ತಿತ್ವ ಅಭಿವೃದ್ಧಿಗೆ ನೀವು ಗಮನಹರಿಸಬೇಕು ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ನಿಮ್ಮ ನೇಮಕಾತಿ ಪತ್ರಗಳನ್ನು ನೀವು ಸ್ವೀಕರಿಸಿರುವುದರಿಂದ ನೀವು ಪೊಲೀಸ್ ಸಮವಸ್ತ್ರ ಧರಿಸಲಿದ್ದೀರಿ. ಸರ್ಕಾರ ನಿಮ್ಮ ಕೈಗೆ ಲಾಠಿ ನೀಡಿದೆ. ಆದರೆ ನಂತರ ಬಂದ ಸರ್ಕಾರ ಏನು ಮಾಡಿದೆ ಎಂಬುದನ್ನು ಮರೆಯಬಾರದು. ಮೊದಲು ದೇವರು ನಿಮಗೆ ಹೃದಯ ಕೊಟ್ಟಿದೆ. ಅದಕ್ಕಾಗಿ ನೀವು ಲಾಠಿಗಿಂತಲೂ ಹೃದಯವನ್ನು ಅರ್ಥಮಾಡಿಕೊಳ್ಳಬೇಕು. ನೀವು ಸೂಕ್ಷ್ಮವಾಗಿರಬೇಕು ಮತ್ತು ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಇಂದು ನೇಮಕಾತಿ ಪತ್ರ ಪಡೆದ ಯುವ ಸಮೂಹಕ್ಕೆ ತರಬೇತಿ ಸಂದರ್ಭದಲ್ಲಿ ಸಾಧ್ಯವಾದಷ್ಟು ಜಾಗೃತಿ ಮೂಡಿಸುವ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತರ ಪ್ರದೇಶ ಸರ್ಕಾರ ಅಸಂಖ್ಯಾತ ಬದಲಾವಣೆಗಗಳನ್ನು ಮಾಡುವ ಮೂಲಕ ಪೊಲೀಸ್ ಪಡೆಯ ತರಬೇತಿಯನ್ನು ತ್ವರಿತವಾಗಿ ಸುಧಾರಿಸುವ ಕೆಲಸ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಚತುರ ಪೊಲೀಸ್ ವ್ಯವಸ್ಥೆ, ಯುವ ಸಮೂಹವನ್ನು ಸೈಬರ್ ಅಪರಾಧ, ವಿಧಿ ವಿಜ್ಞಾನ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಿದೆ.

ಸ್ನೇಹಿತರೇ,

ಇಂದು ಯುವ ಸಮೂಹ ಉದ್ಯೋಗ ನೇಮಕಾತಿ ಪತ್ರ ಪಡೆಯುತ್ತಿದ್ದು, ಎಲ್ಲಾ ಸಾಮಾನ್ಯ ನಾಗರಿಕರ ಸುರಕ್ಷತೆಯೊಂದಿಗೆ ಸಮಾಜಕ್ಕೆ ದಿಕ್ಕು ತೋರಿಸುವ ಜವಾಬ್ದಾರಿಯನ್ನು ಹೆಚ್ಚಿಸಿದೆ. ಆಶಾದಾಯಕವಾಗಿ ನೀವು ಜನರ ಸೇವೆ ಮತ್ತು ಶಕ್ತಿ ಎರಡರ ಪ್ರತಿಬಿಂಬವಾಗುತ್ತೀರಿ. ನಿಮ್ಮ ನಿಷ್ಠೆ ಮತ್ತು ಬಲವಾದ ಸಂಕಲ್ಪದೊಂದಿಗೆ ಅಪರಾಧಿಗಳು ಭಯಪಡುವ ವಾತಾವರಣವನ್ನು ನಿರ್ಮಿಸಿ ಮತ್ತು ಕಾನೂನು ಪಾಲಿಸುವ ಜನ ಅತ್ಯಂತ ನಿರ್ಭೀತರಾಗುತ್ತಾರೆ. ನಿಮಗೆಲ್ಲರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು!. ನಿಮ್ಮ ಕುಟುಂಬ ಸದಸ್ಯರಿಗೆ ಶುಭವಾಗಲಿ!. ತುಂಬಾ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
PM Modi extends greetings to Sashastra Seema Bal personnel on Raising Day
December 20, 2025

The Prime Minister, Narendra Modi, has extended his greetings to all personnel associated with the Sashastra Seema Bal on their Raising Day.

The Prime Minister said that the SSB’s unwavering dedication reflects the highest traditions of service and that their sense of duty remains a strong pillar of the nation’s safety. He noted that from challenging terrains to demanding operational conditions, the SSB stands ever vigilant.

The Prime Minister wrote on X;

“On the Raising Day of the Sashastra Seema Bal, I extend my greetings to all personnel associated with this force. SSB’s unwavering dedication reflects the highest traditions of service. Their sense of duty remains a strong pillar of our nation’s safety. From challenging terrains to demanding operational conditions, the SSB stands ever vigilant. Wishing them the very best in their endeavours ahead.

@SSB_INDIA”