ಶೇರ್
 
Comments

ನಮಸ್ಕಾರ!

ನನ್ನ ಎಲ್ಲಾ ಸಂಪುಟ ಸಹೋದ್ಯೋಗಿಗಳೇ, ರಾಜ್ಯ ಸರಕಾರಗಳ ಪ್ರತಿನಿಧಿಗಳೇ, ಸಾಮಾಜಿಕ ಸಂಸ್ಥೆಗಳ,  ಅದರಲ್ಲೂ ವಿಶೇಷವಾಗಿ ಈಶಾನ್ಯದ ದೂರದ ಪ್ರದೇಶಗಳ ಪ್ರತಿನಿಧಿಗಳೇ!

ಮಹಿಳೆಯರೇ ಮತ್ತು ಮಹನೀಯರೇ,

ಬಜೆಟ್ ಮಂಡನೆಯ ನಂತರ, ಇಂದು ಎಲ್ಲಾ ಭಾಗೀದಾರರ ನಡುವೆ ನಡೆಯುತ್ತಿರುವ ಈ ಮಾತುಕತೆ, ಸಂವಾದ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಹಳ ಮಹತ್ವದ್ದಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಗಳು ನಮ್ಮ ಸರಕಾರದ ನೀತಿ ಮತ್ತು ಕ್ರಮಗಳ ಮೂಲ ಆಧಾರಗಳು. ಇಂದಿನ ವಿಷಯ ಶೀರ್ಷಿಕೆ-“ಯಾವ ನಾಗರಿಕರೂ ಹಿಂದುಳಿಯಬಾರದು” ಎಂಬುದು ಈ ಸೂತ್ರದಿಂದ ಮೂಡಿಬಂದುದಾಗಿದೆ. ಸ್ವಾತಂತ್ರ್ಯದ ’ಅಮೃತ ಕಾಲ’ದ ಸಂದರ್ಭದಲ್ಲಿ ನಾವು ಕೈಗೊಂಡ ದೃಢ ನಿರ್ಧಾರಗಳು ಎಲ್ಲರ ಪ್ರಯತ್ನ, ಸಹಕಾರದ ಮೂಲಕ ಜಾರಿಗೆ ಬರುವಂತಹವು. ಎಲ್ಲರಿಗೂ ಅಭಿವೃದ್ಧಿಯ ಅವಕಾಶ ಇದ್ದಾಗ, ಮತ್ತು ಪ್ರತೀ ವ್ಯಕ್ತಿ, ಪ್ರತೀ ವರ್ಗ, ಪ್ರತೀ ವಲಯಕ್ಕೆ ಕೂಡಾ ಅಭಿವೃದ್ಧಿಯ ಪ್ರಯೋಜನಗಳು ದಕ್ಕುವಂತಾಗುವಾಗ ಮಾತ್ರ ಅಲ್ಲಿ ಪ್ರತಿಯೊಬ್ಬರ ಪ್ರಯತ್ನಗಳೂ ಮೇಳೈಸುತ್ತವೆ. ಆದುದರಿಂದ ಕಳೆದ ಏಳು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರ ಮತ್ತು ಪ್ರತಿಯೊಂದು ವಲಯದ  ಸಾಮರ್ಥ್ಯವನ್ನು ವೃದ್ಧಿಸಲು ನಾವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಪಕ್ಕಾ ಮನೆಗಳು, ಶೌಚಾಲಯಗಳು, ಅಡುಗೆ ಅನಿಲ, ವಿದ್ಯುತ್, ನೀರು ಮತ್ತು ರಸ್ತೆ ಇತ್ಯಾದಿ ಮೂಲಸೌಕರ್ಯಗಳೊಂದಿಗೆ ದೇಶದ ಗ್ರಾಮೀಣರು ಮತ್ತು ಬಡವರನ್ನು ಬೆಸೆಯುವುದು ಈ ಯೋಜನೆ, ಕಾರ್ಯಕ್ರಮಗಳ ಉದ್ದೇಶ. ಈ ಯೋಜನೆಗಳ ಮೂಲಕ ಬಹಳ ದೊಡ್ಡ ಯಶಸ್ಸನ್ನು ದೇಶವು ನೋಡಿದೆ. ಈಗ ಈ ಯೋಜನೆಗಳು ಪೂರ್ಣವಾಗಿ ಶೇ.100 ರ ಗುರಿಯನ್ನು ಸಾಧಿಸಬೇಕಾದ ಕಾಲ ಬಂದಿದೆ. ಇದಕ್ಕೆ ನಾವು ಹೊಸ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಿಗಾ ಮತ್ತು ಉತ್ತರದಾಯಿತ್ವದ ಹೊಸ ವ್ಯವಸ್ಥೆಗಳನ್ನು ನಾವು ಅಭಿವೃದ್ಧಿ ಮಾಡಬೇಕಾಗಿದೆ. ಇದರಲ್ಲಿ ನಾವು ನಮ್ಮೆಲ್ಲಾ ಶಕ್ತಿಯನ್ನು ವಿನಿಯೋಗಿಸಬೇಕಾಗಿದೆ.

ಸ್ನೇಹಿತರೇ,

ಈ ಪೂರ್ಣ ಪ್ರಮಾಣದ ಗುರಿಯನ್ನು ಸಾಧಿಸಲು ಸರಕಾರವು ಈ ಬಜೆಟಿನಲ್ಲಿ ಸ್ಪಷ್ಟವಾದ ದಾರಿಯ ರೂಪುರೇಷೆಗಳನ್ನು ತಯಾರಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ, ಗ್ರಾಮೀಣ ಸಡಕ್ ಯೋಜನಾ, ಜಲ್ ಜೀವನ್ ಆಂದೋಲನ, ಈಶಾನ್ಯದಲ್ಲಿ ಸಂಪರ್ಕ ಮತ್ತು ಗ್ರಾಮಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಸಹಿತ ಇಂತಹ ಪ್ರತೀ ಯೋಜನೆಗಳಿಗೆ ಸಂಬಂಧಿಸಿ ಬಜೆಟಿನಲ್ಲಿ ಅವಶ್ಯ ಪ್ರಸ್ತಾವನೆಗಳನ್ನು ಮಾಡಲಾಗಿದೆ, ಅವಕಾಶಗಳನ್ನು ಒದಗಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಈಶಾನ್ಯದ ಗಡಿ ಪ್ರದೇಶಗಳಲ್ಲಿ, ಮತ್ತು ಆಶೋತ್ತರಗಳ ಜಿಲ್ಲೆಗಳಲ್ಲಿ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವ ಪ್ರಯತ್ನದ ಅಂಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಜೆಟಿನಲ್ಲಿ ಘೋಷಿಸಲಾದ  ರೋಮಾಂಚಕಾರಿ ಗ್ರಾಮ ಯೋಜನೆ ನಮ್ಮ ಗಡಿ ಗ್ರಾಮಗಳ ಅಭಿವೃದ್ಧಿಗೆ ಬಹಳ ಮುಖ್ಯ. ಈಶಾನ್ಯ ವಲಯದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಅವರ ಅಭಿವೃದ್ಧಿ ಉಪಕ್ರಮ ಅಂದರೆ-ಪಿ.ಎಂ.-ಡಿವೈನ್ ನಿಗದಿತ ಕಾಲಮಿತಿಯೊಳಗೆ ಈಶಾನ್ಯದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರತಿಶತ 100 ರಷ್ಟು ಪ್ರಯೋಜನಗಳು ಲಭಿಸುವಂತೆ ಮಾಡುವಲ್ಲಿ ಬಹಳ ದೂರ ಕೊಂಡೊಯ್ಯಲಿದೆ.

ಸ್ನೇಹಿತರೇ,

ಗ್ರಾಮಗಳ ಅಭಿವೃದ್ಧಿಗೆ ಆಸ್ತಿಯ ಸೂಕ್ತ ವಿಂಗಡಣೆ ಬಹಳ ಮುಖ್ಯ. ಸ್ವಾಮಿತ್ವ ಯೋಜನೆ ಬಹಳ ಪ್ರಯೋಜನಕಾರಿಯಾಗಿರುವುದು ಸಾಬೀತಾಗಿದೆ. ಇದುವರೆಗೆ 40 ಲಕ್ಷ ಆಸ್ತಿ ಕಾರ್ಡ್ (ಪ್ರಾಪರ್ಟಿ ಕಾರ್ಡ್) ಗಳನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗಿದೆ. ಭೂದಾಖಲೆಗಳ ನೋಂದಣೆಗೆ ರಾಷ್ಟ್ರೀಯ ವ್ಯವಸ್ಥೆ ಮತ್ತು ವಿಶಿಷ್ಟ ಭೂಮಿ ಗುರುತಿಸುವಿಕೆ ಪಿನ್  ಬಹಳ ಪ್ರಯೋಜನಕಾರಿ. ಸಾಮಾನ್ಯ ಗ್ರಾಮಸ್ಥರು ಕಂದಾಯ ಇಲಾಖೆಯ ಮೇಲೆ ಹೆಚ್ಚು ಅವಲಂಬಿತರಾಗದಂತೆ ನಾವು ಖಾತ್ರಿಪಡಿಸಬೇಕಾಗಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಭೂ ದಾಖಲೆಗಳ ಡಿಜಿಟೈಜೇಷನ್ ಮತ್ತು ಗಡಿ ಗುರುತು ಅಥವಾ ವಿಂಗಡಣೆಗೆ ಸಂಬಂಧಿಸಿದ ಸಮಗ್ರ ಪರಿಹಾರಗಳು ಈ ಹೊತ್ತಿನ ಆವಶ್ಯಕತೆಯಾಗಿವೆ. ಎಲ್ಲಾ ರಾಜ್ಯ ಸರಕಾರಗಳು ಕಾಲ ಮಿತಿಯೊಳಗೆ ಕೆಲಸ ಮಾಡಿದರೆ ಗ್ರಾಮಗಳ ಅಭಿವೃದ್ಧಿಗೆ ಬಹಳಷ್ಟು ವೇಗ ದೊರೆಯಲಿದೆ. ಈ ಸುಧಾರಣೆಗಳಿಂದ  ಗ್ರಾಮಗಳಲ್ಲಿ ಮೂಲಸೌಕರ್ಯ ಯೋಜನೆಗಳ ವೇಗದಲ್ಲಿ ಹೆಚ್ಚಳವಾಗಲಿದೆ. ಮತ್ತು ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ವ್ಯಾಪಾರೋದ್ಯಮ ಚಟುವಟಿಕೆಗಳಿಗೆ ಉತ್ತೇಜನವೂ ದೊರೆಯಲಿದೆ. ವಿವಿಧ ಯೋಜನೆಗಳಲ್ಲಿ 100% ಗುರಿಯನ್ನು ಸಾಧಿಸಲು ನಾವು ಹೊಸ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳುವುದಕ್ಕೆ ಆದ್ಯತೆ ನೀಡಬೇಕಾಗಿದೆ.

ಸ್ನೇಹಿತರೇ,

ಈ ವರ್ಷದ ಮುಂಗಡ ಪತ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನಾಕ್ಕಾಗಿ 48,000 ಕೋ.ರೂ.ಗಳ ಪ್ರಸ್ತಾವನೆಯನ್ನು ಮಾಡಲಾಗಿದೆ. ಈ ವರ್ಷದ ನಿಗದಿತ ಕಾಲಮಿತಿಯೊಳಗೆ 80 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ತಲುಪಲು ನಾವು ಕೆಲಸದ ವೇಗವನ್ನು ಹೆಚ್ಚಿಸಬೇಕಾಗಿದೆ. ದೇಶದ ಆರು ನಗರಗಳಲ್ಲಿ ಹೊಸ ತಂತ್ರಜ್ಞಾನ ಬಳಸುವ, ಕೈಗೆಟಕುವ ದರದಲ್ಲಿ ಮನೆಗಳ ನಿರ್ಮಾಣ ಸಾಧ್ಯವಾಗುವ, ಆರು ಹಗುರ ಮನೆಗಳ ಯೋಜನೆಗಳು ಪ್ರಗತಿಯಲ್ಲಿರುವುದರ ಬಗ್ಗೆ ನಿಮಗೆ ತಿಳಿದಿದೆ. ಈ ರೀತಿಯ ತಂತ್ರಜ್ಞಾನವನ್ನು ಗ್ರಾಮಗಳಲ್ಲಿ ಮನೆಗಳಿಗೆ ಹೇಗೆ ಬಳಸಬಹುದು ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ ನಿರ್ಮಾಣ ಯೋಜನೆಗಳಿಗೆ ಹೇಗೆ ಬಳಸಬಹುದು ಎಂಬ ಬಗ್ಗೆ ಅರ್ಥಪೂರ್ಣ ಮತ್ತು ಗಂಭೀರ ಚಿಂತನ ಮಂಥನ ನಡೆಯುವುದು ಅವಶ್ಯವಿದೆ. ಗ್ರಾಮಗಳಲ್ಲಿ, ಗಿರಿ ಪ್ರದೇಶಗಳಲ್ಲಿ, ಮತ್ತು ಈಶಾನ್ಯದಲ್ಲಿ ರಸ್ತೆಗಳ ನಿರ್ವಹಣೆ ಬಹಳ ದೊಡ್ದ ಸವಾಲು. ಸ್ಥಳೀಯ ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ದೀರ್ಘ ಕಾಲ ಬಾಳಿಕೆ ಬರುವ ವಸ್ತುಗಳನ್ನು ಗುರುತಿಸುವುದು ಬಹಳ ಮುಖ್ಯ.

ಸ್ನೇಹಿತರೇ,

ಜಲ್ ಜೀವನ್ ಆಂದೋಲನದಡಿಯಲ್ಲಿ ಸುಮಾರು ನಾಲ್ಕು ಕೋಟಿ (ನಳ್ಳಿ ನೀರಿನ) ಸಂಪರ್ಕಗಳನ್ನು ಒದಗಿಸುವ ಬೃಹತ್ತಾದ ಗುರಿಯನ್ನು ನಾವು ಹೊಂದಿದ್ದೇವೆ. ಈ ಗುರಿಯನ್ನು ಸಾಧಿಸಲು ನೀವು ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ. ಹಾಕಲಾಗುತ್ತಿರುವ ಕೊಳವೆ ಮಾರ್ಗದ ಮೂಲಕ ಗುಣಮಟ್ಟದ ನೀರು ಲಭಿಸುವಂತೆ ಮಾಡಲು ಬಹಳಷ್ಟು ಗಮನವನ್ನು ಕೊಡಬೇಕು ಎಂದು ನಾನು ಪ್ರತೀ ರಾಜ್ಯ ಸರಕಾರಗಳನ್ನು ಕೋರುತ್ತೇನೆ. ಗ್ರಾಮ ಮಟ್ಟದಲ್ಲಿ ಜನರು ಮಾಲಕತ್ವದ ಭಾವನೆಯನ್ನು ಮೂಡಿಸಿಕೊಳ್ಳಬೇಕು ಮತ್ತು ನೀರಿನ ಆಡಳಿತ ಜಾರಿಗೆ ಬರಬೇಕು ಎನ್ನುವುದು  ಈ ಯೋಜನೆಯ ಗುರಿಗಳಲ್ಲಿ ಒಂದಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಾವು 2024 ರೊಳಗೆ ಪ್ರತೀ ಮನೆಗೂ ಕೊಳಾಯಿ/ನಳದ ನೀರಿನ ಸಂಪರ್ಕವನ್ನು ಒದಗಿಸಬೇಕು. 

ಸ್ನೇಹಿತರೇ,

ಗ್ರಾಮಗಳಿಗೆ ಡಿಜಿಟಲ್ ಸಂಪರ್ಕ ಇಂದು ಆಶೋತ್ತರವಾಗಿ ಉಳಿದಿಲ್ಲ, ಆದರೆ ಅದು ಈ ದಿನದ ಆವಶ್ಯಕತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವು ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲ, ಅದು ಗ್ರಾಮಗಳಲ್ಲಿ ಕೌಶಲ್ಯಯುಕ್ತ ಯುವಜನತೆಯ ಬೃಹತ್ ಸಮೂಹವನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕದಿಂದಾಗಿ ಸೇವಾ ವಲಯ ವಿಸ್ತರಣೆಯಾಗಿ ದೇಶದ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಆಪ್ಟಿಕಲ್ ಫೈಬರ್ ಸಂಪರ್ಕಕ್ಕೆ ಸಂಬಂಧಿಸಿ ನಾವು ಯಾವುದೇ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರವನ್ನು ಕಂಡು ಹುಡುಕಬೇಕಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಅದರ ಸೂಕ್ತ ಬಳಕೆಯ ಬಗೆಗೂ ಎಚ್ಚರ ಮೂಡಿಸುವುದು ಅಗತ್ಯವಿದೆ. 100% ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ನಿರ್ಧಾರ ಒಂದು ಮಹತ್ವದ ಕ್ರಮ. ಈ ಕ್ರಮವು ನಾವು ಆರಂಭ ಮಾಡಿದ ಜನ ಧನ ಯೋಜನೆಯ ಹಣಕಾಸು ಸೇರ್ಪಡೆಯ ಆಂದೋಲನವನ್ನು ಪೂರ್ಣ ಮಟ್ಟಕ್ಕೆ ಕೊಂಡೊಯ್ಯಲು ವೇಗವನ್ನು ದೊರಕಿಸಿಕೊಡಲಿದೆ. 

ಸ್ನೇಹಿತರೇ,

ಗ್ರಾಮೀಣ ಆರ್ಥಿಕತೆಯ ಪ್ರಮುಖ ಮೂಲ ಎಂದರೆ ನಮ್ಮ ತಾಯಂದಿರ ಶಕ್ತಿ, ನಮ್ಮ ಮಹಿಳಾ ಶಕ್ತಿ. ಹಣಕಾಸು ಸೇರ್ಪಡೆಯು  ಮನೆ ವಾರ್ತೆಯಲ್ಲಿ ಆರ್ಥಿಕ ನಿರ್ಧಾರ ಕೈಗೊಳ್ಳುವಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸ್ವ ಸಹಾಯ ಗುಂಪುಗಳ ಮೂಲಕ ಮಹಿಳೆಯರ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳು ತೀವ್ರಗೊಳ್ಳಬೇಕಾಗಿದೆ.

ಸ್ನೇಹಿತರೇ,

ಈ ಬಜೆಟಿನಲ್ಲಿ ಘೋಷಿಸಲಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ನಿಗದಿತ ಕಾಲಮಿತಿಯಲ್ಲಿ ಹೇಗೆ ಪೂರ್ಣಗೊಳಿಸಬೇಕು ಮತ್ತು ಎಲ್ಲಾ ಸಚಿವಾಲಯಗಳು ಹಾಗು ಎಲ್ಲಾ ಭಾಗೀದಾರರು ಹೇಗೆ ಒಗ್ಗೂಡಬೇಕು ಎಂಬುದರ ಬಗ್ಗೆ ಈ ವೆಬಿನಾರಿನಲ್ಲಿ ವಿವರವಾದ ಚರ್ಚೆ ಆಗಬಹುದೆಂಬ ನಿರೀಕ್ಷೆ ಇದೆ. ಯಾವೊಬ್ಬ ನಾಗರಿಕರೂ ಹಿಂದುಳಿಯಬಾರದು ಎಂಬ ಗುರಿ ಇಂತಹ ಪ್ರಯತ್ನಗಳ ಮೂಲಕ ಸಾಕಾರಗೊಳ್ಳುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ.

ಈ ಶೃಂಗದಲ್ಲಿ ನಾವು ಸರಕಾರದ ಪರವಾಗಿ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ. ನಾವು ನಿಮ್ಮಿಂದ ಕೇಳಲು ಇಚ್ಛಿಸುತ್ತೇವೆ. ನಿಮ್ಮ ಅನುಭವಗಳನ್ನು  ತಿಳಿದುಕೊಳ್ಳಲು ಇಚ್ಛಿಸುತ್ತೇವೆ. ಮೊದಲಿಗೆ ಆಡಳಿತದ ದೃಷ್ಟಿಯಿಂದ ನಮ್ಮ ಗ್ರಾಮಗಳ ಸಾಮರ್ಥ್ಯವನ್ನು ನಾವು ಹೆಚ್ಚಿಸುವುದು ಹೇಗೆ? ಗ್ರಾಮಗಳ ಅಭಿವೃದ್ಧಿಯಲ್ಲಿ ನಿರ್ದಿಷ್ಟ ಪಾತ್ರವನ್ನು ಹೊಂದಿರುವ ಸರಕಾರಿ ಏಜೆನ್ಸಿಗಳು ಗ್ರಾಮ ಮಟ್ಟದಲ್ಲಿ ಗ್ರಾಮಸ್ಥರ ಜೊತೆ ಎರಡು-ನಾಲ್ಕು ಗಂಟೆಗಳ ಕಾಲ ಯಾವುದಾದರೂ ಚರ್ಚೆ ನಡೆಸಿವೆಯೇ ಎಂಬ ಬಗ್ಗೆ ನೀವು ಮೊದಲು ಚಿಂತಿಸಿ. ಬಹಳ ದೀರ್ಘ ಕಾಲ ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದುದರಿಂದ, ನನಗನಿಸುತ್ತದೆ ಇದು ನಮ್ಮ ಹವ್ಯಾಸವಲ್ಲ. ಒಂದು ದಿನ ಕೃಷಿ ಇಲಾಖೆಯಿಂದ ಯಾರಾದರೊಬ್ಬರು ಹೋಗುತ್ತಾರೆ, ಎರಡನೇ ದಿನ ನೀರಾವರಿ ಇಲಾಖೆಯಿಂದ ಯಾರಾದರೊಬ್ಬರು ಹೋಗುತ್ತಾರೆ, ಮೂರನೇ ದಿನ ಆರೋಗ್ಯ ಇಲಾಖೆಯಿಂದ ಮತ್ತು ನಾಲ್ಕನೇ ದಿನ ಶಿಕ್ಷಣ ಇಲಾಖೆಯಿಂದ ಯಾರಾದರೊಬ್ಬರು ಹೋಗುತ್ತಾರೆ ಮತ್ತು ಯಾರೊಬ್ಬರಿಗೂ ಪರಸ್ಪರ ಸರಿಯಾದ ಚಿಂತನೆ ಇರುವುದಿಲ್ಲ. ಗ್ರಾಮಗಳ ಜನತೆ ಮತ್ತು ಚುನಾಯಿತ ಮಂಡಳಿಗಳ ಜೊತೆ ಸಂಬಂಧಿತ ಏಜೆನ್ಸಿಗಳು ಒಟ್ಟಾಗಿ ಕುಳಿತುಕೊಂಡು ಚರ್ಚಿಸುವುದಕ್ಕಾಗಿ ಒಂದು ದಿನವನ್ನು ನಿಗದಿ ಮಾಡುವುದು ಸಾಧ್ಯವಿಲ್ಲವೇ?. ಇಂದು, ನಮ್ಮ ಗ್ರಾಮಗಳಿಗೆ ಹಣಕಾಸು ಒಂದು ಸಮಸ್ಯೆಯಾಗಿಲ್ಲ, ನಾವು ಸ್ಥಾಗಿತ್ಯವನ್ನು ನಿವಾರಿಸಿ, ಎಲ್ಲರನ್ನೂ ಒಗ್ಗೂಡಿಸಿ ಅದರ ಪ್ರಯೋಜನಗಳನ್ನು ಪಡೆಯಬೇಕು. 

ಈಗ ನೀವು ಗ್ರಾಮಾಭಿವೃದ್ಧಿಯ ಜೊತೆ ರಾಷ್ಟ್ರೀಯ ಶಿಕ್ಷಣ ನೀತಿ ಏನು ಮಾಡಲಿಕ್ಕಿದೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಸ್ಥಳೀಯ ಕೌಶಲ್ಯಗಳ ಬಗ್ಗೆ ಅರಿವು ಮೂಡಿಸುವ ವಿಷಯ ಶೀರ್ಷಿಕೆ ಇದೆ. ನೀವು ಸ್ಥಳೀಯ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳಿ. ಆಯಾ ಬ್ಲಾಕ್ ಗಳಲ್ಲಿರುವ ರೋಮಾಂಚಕಾರಿಯಾದಂತಹ ಗಡಿ ಭಾಗಗಳ ಶಾಲೆಗಳನ್ನು ಗುರುತಿಸಲು ನಮಗೆ ಸಾಧ್ಯ ಇಲ್ಲವೇ. ಆ ಕೊನೆಯ ಗ್ರಾಮಕ್ಕೆ, ಹಳ್ಳಿಗೆ ಹೋಗಿ ಎಂಟನೆ, ಒಂಭತ್ತನೇ ಮತ್ತು ಹತ್ತನೇ ತರಗತಿಗಳ ವಿದ್ಯಾರ್ಥಿಗಳೊಂದಿಗೆ ಕೆಲವು ದಿನ ಅಲ್ಲಿ ವಾಸ್ತವ್ಯ ಹೂಡಿ, ಅದು ಸಾಧ್ಯವಾಗದೇ?. ಗ್ರಾಮಗಳಿಗೆ, ಹಳ್ಳಿಗಳಿಗೆ ಹೋಗುವುದರಿಂದ ಮತ್ತು ಅಲ್ಲಿಯ ಗಿಡ ಮರಗಳನ್ನು ಹಾಗು ಜನರ ಜೀವನ ನೋಡುವುದರಿಂದ ಸ್ಪಂದನ ಆರಂಭವಾಗುತ್ತದೆ. 

ತಹಶೀಲಿನ ಮಟ್ಟದ ಮಗುವೊಂದು 40-5-100 ಕಿಲೋಮೀಟರ್ ಪ್ರಯಾಣಿಸಿ ಕೊನೆಯ ಗಡಿ ಗ್ರಾಮಕ್ಕೆ ಹೋಗಬಲ್ಲದು. ಮತ್ತು ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಗಡಿಯನ್ನು ನೋಡಬಲ್ಲದು, ಇದರಿಂದ ನಮ್ಮ ರೋಮಾಂಚಕಾರಿ ಗಡಿ ಗ್ರಾಮಗಳಿಗೆ ಬಹಳ ಉಪಯೋಗವಾಗುತ್ತದೆ. ಇಂತಹ ವ್ಯವಸ್ಥೆಯೊಂದನ್ನು ನಾವು ಅಭಿವೃದ್ಧಿ ಮಾಡುವುದು ಸಾಧ್ಯವಿಲ್ಲವೇ?

ಗಡಿ ಗ್ರಾಮಗಳಲ್ಲಿ ತಹಶೀಲ್ ಮಟ್ಟದಲ್ಲಿ ನಾವು ಹಲವು ಸ್ಪರ್ಧೆಗಳನ್ನು ಆಯೋಜಿಸಬಹುದು. ಇದರಿಂದ ಸಹಜವಾಗಿ ಅಲ್ಲಿ ಸ್ಪಂದನ ಉಂಟಾಗುತ್ತದೆ. ಅದೇ ರೀತಿ ಸರಕಾರಿ ಸಿಬ್ಬಂದಿಗಳು ಮತ್ತು ನಿವೃತ್ತರಾಗಿ ಹಳ್ಳಿಗಳಲ್ಲಿ ನೆಲೆ ನಿಂತವರು ಹಾಗು ಹತ್ತಿರದ ಪ್ರದೇಶಗಳ ಜನರನ್ನು ಒಳಗೊಂಡು ವಾರ್ಷಿಕ ಸಮ್ಮಿಲನವನ್ನು  ಆಯೋಜಿಸಬಹುದು.  ಮತ್ತು ಸರಕಾರದ ಪಿಂಚಣಿ ಹಾಗು ವೇತನದ ಬಗ್ಗೆ ಚರ್ಚಿಸಬಹುದು. “ಇದು ನನ್ನ ಹಳ್ಳಿ, ಗ್ರಾಮ. ನಾನು ಉದ್ಯೋಗಕ್ಕಾಗಿ ನಗರಕ್ಕೆ ಹೋಗಿದ್ದರೂ ಸಹ, ನಾವು ಒಟ್ಟಾಗಿ ಕುಳಿತು ಹಳ್ಳಿಗಾಗಿ ಏನಾದರೊಂದು ಯೋಜಿಸೋಣ. ನಾವು ಸರಕಾರದಲ್ಲಿದ್ದೇವೆ, ಸರಕಾರವನ್ನು ತಿಳಿದುಕೊಂಡು ಗ್ರಾಮ, ಹಳ್ಳಿಗಾಗಿ ಏನನ್ನಾದರೂ ಮಾಡೋಣ” ಎಂಬುದು ನಮ್ಮ ಹೊಸ ತಂತ್ರ. ನಾವೆಂದಾದರೂ ಗ್ರಾಮದ ಹುಟ್ಟು ಹಬ್ಬವನ್ನು ಆಚರಿಸಲು ಉದ್ದೇಶಿಸಿದ್ದೇವೆಯೇ? ಹಳ್ಳಿಯ, ಗ್ರಾಮಗಳ ಜನರು ಮುಂದೆ ಬಂದು 10-15 ದಿನಗಳ ಉತ್ಸವ ಆಚರಿಸಲು ನಿರ್ಧರಿಸಿ ಹಳ್ಳಿಗಳ, ಗ್ರಾಮಗಳ ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದಲ್ಲವೇ..   ಗ್ರಾಮಗಳ  ಈ ಸಂಘಟನೆ ಬಜೆಟಿನಲ್ಲಿರುವಂತೆ ಗ್ರಾಮಗಳನ್ನು ಶ್ರೀಮಂತಗೊಳಿಸಲಿದೆ. ಪ್ರತಿಯೊಬ್ಬರ ಪ್ರಯತ್ನಗಳ ಮೂಲಕ ಅದು ಇದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುವುದಕ್ಕೂ ಸಾಧ್ಯವಿದೆ.

ಉದಾಹರಣೆಗೆ ನಮ್ಮಲ್ಲಿ ಕೃಷಿ ವಿಜ್ಞಾನ ಕೇಂದ್ರಗಳಿವೆ. ಹೊಸ ತಂತ್ರದ ಅಂಗವಾಗಿ  ಗ್ರಾಮದ 200 ರೈತರಲ್ಲಿ 50 ಮಂದಿ ರೈತರನ್ನು ಸಾವಯವ ಕೃಷಿಗೆ ಪರಿಚಯಿಸಲು ನಾವು ನಿರ್ಧಾರ ಮಾಡಬಹುದಲ್ಲವೇ?. ಗ್ರಾಮೀಣ ಹಿನ್ನೆಲೆಯ ಬಹುತೇಕ ಮಕ್ಕಳು ಅಧ್ಯಯನಕ್ಕಾಗಿ ಕೃಷಿ ವಿಶ್ವವಿದ್ಯಾಲಯಗಳಿಗೆ ಬರುತ್ತಾರೆ. ನಾವು ಈ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದೇವೆಯೇ? ಮತ್ತು ಮಕ್ಕಳ ಜೊತೆ ಗ್ರಾಮಾಭಿವೃದ್ಧಿಯ ಇಡೀ ಚಿತ್ರಣವನ್ನು ಹಂಚಿಕೊಂಡಿದ್ದೇವೆಯೇ?. ಆ ಸ್ವಲ್ಪ ಶಿಕ್ಷಿತರಾದವರು ರಜೆಯ ಅವಧಿಯಲ್ಲಿ ಹಳ್ಳಿಗಳಿಗೆ ಹೋಗುವವರು ಸರಕಾರದ ಯೋಜನೆಗಳನ್ನು ಜನರ ಜೊತೆಗೆ ಹಂಚಿಕೊಳ್ಳುವುದು ಸಾಧ್ಯವೇ? ನಾವು ಕೆಲವು ತಂತ್ರಗಳನ್ನು ಯೋಜಿಸಬಹುದೇ?. ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಉತ್ಪಾದನೆಗಿಂತ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯ ಇದೆ ಎಂಬುದನ್ನು ನಾವು ಮನಗಾಣಬೇಕು. ಇಂದು ಹಳ್ಳಿಗಳಿಗೆ ಬಹಳಷ್ಟು ಹಣ ಹೋಗುತ್ತಿದೆ. ಆ ಹಣವನ್ನು ಸೂಕ್ತವಾಗಿ ವಿನಿಯೋಗಿಸಿದರೆ,  ನಾವು ಹಳ್ಳಿಗಳ ಪರಿಸ್ಥಿತಿಗಳನ್ನು ಬದಲಾಯಿಸಬಹುದು.

ನಾವು ಹಳ್ಳಿಗಳಲ್ಲಿ ಗ್ರಾಮ ಸಚಿವಾಲಯಗಳಂತಹದನ್ನು ರಚಿಸಬಹುದು. ಗ್ರಾಮ ಸಚಿವಾಲಯ ಎಂದರೆ ಅದೊಂದು ಕಟ್ಟಡ ಅಥವಾ ಕೊಠಡಿ ಆಗಿರಬೇಕಾಗಿಲ್ಲ. ನಾವು ಒಟ್ಟಾಗಿ ಕುಳಿತುಕೊಳ್ಳುವಂತಹ ಮತ್ತು ಶಿಕ್ಷಣದ ಬಗ್ಗೆ ಏನಾದರೂ ಯೋಜನೆ ತಯಾರಿಸುವಂತಹ ಸ್ಥಳವಾಗಿರಬಹುದು. ಅದೇ ರೀತಿ ಭಾರತ ಸರಕಾರ ಆಶೋತ್ತರಗಳ ಜಿಲ್ಲೆ ಎಂಬ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಅಲ್ಲಿ ಜಿಲ್ಲೆಗಳಲ್ಲಿ ಸ್ಪರ್ಧೆ ಇರುವುದರಿಂದ ಬಹಳ ಅದ್ಭುತ ಅನುಭವಗಳು ಲಭಿಸುತ್ತಿವೆ. ಪ್ರತೀ ಜಿಲ್ಲೆಯೂ ರಾಜ್ಯದಲ್ಲಿ ಹಿಂದುಳಿಯಲು ಬಯಸುತ್ತಿಲ್ಲ. ಅನೇಕ ಜಿಲ್ಲೆಗಳು ರಾಷ್ಟ್ರೀಯ ಸರಾಸರಿ (ಗುರಿಗಳಲ್ಲಿ )ಯಲ್ಲಿ ಗುರಿ ಮೀರಿ ಸಾಧನೆ ಮಾಡಿವೆ. ನೀವು ನಿಮ್ಮ ತಹಶೀಲ್ ಬಗ್ಗೆ ಎಂಟು ಅಥವಾ ಹತ್ತು  ಮಾನದಂಡಗಳನ್ನಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕು ಮತ್ತು ಅಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಆ ಮಾನದಂಡಗಳನ್ನು ಆಧರಿಸಿ ಸ್ಪರ್ಧೆ ಇರಬೇಕು. ಸ್ಪರ್ಧೆಯ ಫಲಿತಾಂಶದ ನಂತರ ಆ ಮಾನದಂಡಗಳಡಿಯಲ್ಲಿ ಯಾವ ಗ್ರಾಮ ಮೇಲುಗೈ ಸಾಧಿಸಿದೆ ಮತ್ತು ಯಾವ ಗ್ರಾಮಗಳು ಉತ್ತಮ ಸಾಧನೆ  ಮಾಡುತ್ತಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಅದಕ್ಕಾಗಿ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಗ್ರಾಮ ಪ್ರಶಸ್ತಿ ಲಭಿಸುವಂತೆ ಇರಬಹುದು. ಹತ್ತು ಮಾನದಂಡಗಳನ್ನು ತಹಶೀಲ್ ಮಟ್ಟದಲ್ಲಿ ನಿರ್ಧರಿಸಬಹುದು ಮತ್ತು ಆ ಬಳಿಕ 50-100-200 ಗ್ರಾಮಗಳ ನಡುವೆ ಸ್ಪರ್ಧೆ ಇರಲಿ. ಆಗ ಆ ಹತ್ತು ಮಾನದಂಡಗಳಲ್ಲಿ ಯಾವ ಗ್ರಾಮ ಅತ್ಯದ್ಭುತ ಸಾಧನೆ ಮಾಡುತ್ತದೆ ಎಂಬುದನ್ನು ನೋಡೋಣ. ಆಗ ನೀವು ಬದಲಾವಣೆಯನ್ನು ಕಾಣುತ್ತೀರಿ. ಬ್ಲಾಕ್ ಮಟ್ಟದಲ್ಲಿ ಗುರುತಿಸುವಿಕೆ ದೊರೆತಾಗ ಪರಿವರ್ತನೆ ಆರಂಭವಾಗುತ್ತದೆ. ಆದುದರಿಂದ ನಾನು ಹೇಳುತ್ತೇನೆ ಬಜೆಟ್ ಒಂದು ವಿಷಯ ಅಲ್ಲ. ಇಂದು ನಾವು ಫಲಿತಾಂಶ ಮತ್ತು ಬದಲಾವಣೆಗಾಗಿ ಶ್ರಮ ಪಡಬೇಕಾಗಿದೆ. 

ಗ್ರಾಮಗಳಲ್ಲಿ ಯಾವ ಮಗುವೂ ನ್ಯೂನ ಪೋಷಣೆಯಲ್ಲುಳಿಯಬಾರದು ಎಂಬ ಪ್ರವೃತ್ತಿಯನ್ನುಂಟು ಮಾಡಲು ಸಾಧ್ಯವಿಲ್ಲವೇ?. ನಾನು ನಿಮಗೆ ಹೇಳುತ್ತೇನೆ, ಗ್ರಾಮಗಳ ಜನರು ಸರಕಾರದ ಬಜೆಟಿನ ಬಗ್ಗೆ ಚಿಂತಿಸುವುದಿಲ್ಲ. ಆದರೆ ಅವರು ಒಮ್ಮೆ ನಿರ್ಧಾರ ಮಾಡಿದರೆಂದರೆ, ಅವರು ಯಾವ ಮಗುವೂ ನ್ಯೂನ ಪೋಷಣೆಯಲ್ಲುಳಿಯಲು ಬಿಡುವುದಿಲ್ಲ. ಈಗಲೂ ನಾವು ಈ ನೈತಿಕತೆಯನ್ನು ಹೊಂದಿದ್ದೇವೆ. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಯಾರೊಬ್ಬರೂ ಶಾಲೆ ತೊರೆಯಬಾರದು ಎಂದು ನಾವು ನಿರ್ಧಾರ ಮಾಡಿದರೆ ಹಳ್ಳಿಯ ಜನರು ಇದರ ಜೊತೆ ತಾವಾಗಿಯೇ ಸೇರಿಕೊಂಡು ಕೆಲಸ ಮಾಡುವುದನ್ನು ನೀವು ನೋಡಬಹುದು. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಅನೇಕ ನಾಯಕರು, ಪಂಚರು ಮತ್ತು ಸರಪಂಚರು ಗ್ರಾಮಗಳ, ಹಳ್ಳಿಗಳ ಶಾಲೆಗಳಿಗೆ ಎಂದೂ ಭೇಟಿ ಕೊಡದಿರುವುದನ್ನು ನಾವು ನೋಡಿದ್ದೇವೆ. ಬಹಳ ಅಪರೂಪಕ್ಕೊಮ್ಮೆ, ಅದರಲ್ಲೂ ರಾಷ್ಟ್ರಧ್ವಜ ಅರಳಿಸುವ ಸಂದರ್ಭಗಳಲ್ಲಿ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ! ಇಂತಹ ಸ್ಥಿತಿಯಲ್ಲಿ ನಾವು ಹೇಗೆ ಇದು ನನ್ನ ಗ್ರಾಮ ಮತ್ತು ನಾಯಕತ್ವ ಒದಗಿಸಲು ನಾನಲ್ಲಿಗೆ ಹೋಗಬೇಕು ಎಂಬ ಭಾವನೆಯನ್ನು ಹೇಗೆ ಬೆಳೆಸಬಹುದು?. ಬದಲಾವಣೆ ನಾವು ಚೆಕ್ ನೀಡುವುದರಿಂದ, ಸ್ವಲ್ಪ ಹಣ ಕಳುಹಿಸುವುದರಿಂದ, ಅಥವಾ ಭರವಸೆ ನೀಡುವುದರಿಂದ ಬರಲಾರದು. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಮಹಾತ್ಮಾ ಗಾಂಧಿ ಅವರ ಕೆಲವು ಆದರ್ಶಗಳಾದರೂ ಅನುಷ್ಠಾನಕ್ಕೆ ಬರುವಂತೆ ಮಾಡಲಾಗದೆ? ಮಹಾತ್ಮಾ ಗಾಂಧಿ ಅವರು ಸ್ವಚ್ಛತೆ, ಭಾರತದ ಆತ್ಮ ಹಳ್ಳಿಗಳಲ್ಲಿ ಇರುವುದರ ಬಗ್ಗೆ ಹೇಳಿದ್ದಾರೆ. ಇದು ಸಾಧ್ಯವಾಗುವಂತೆ ನಾವು ಮಾಡಲು ಸಾಧ್ಯವಿಲ್ಲವೇ?

ಸ್ನೇಹಿತರೇ,

ರಾಜ್ಯ ಸರಕಾರಗಳು, ಕೇಂದ್ರ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ನಮ್ಮ ಎಲ್ಲಾ ಇಲಾಖೆಗಳು ಬಂಧಗಳನ್ನು ಸಡಿಲಿಸಿ ಒಗ್ಗೂಡಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ದೇಶಕ್ಕೆ ಅದರ ಸ್ವಾತಂತ್ರ್ಯದ 75 ನೇ ವರ್ಷದ ಸಂದರ್ಭದಲ್ಲಿ ಏನನ್ನಾದರೂ ಮರಳಿ ಕೊಡಬೇಕು ಎಂಬ ಸ್ಪೂರ್ತಿ, ಉತ್ಸಾಹದೊಂದಿಗೆ ನಾವು ಕೆಲಸ ಮಾಡಬೇಕು. ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಬದಲಾವಣೆಗಳನ್ನು ತರಲು ಬಜೆಟಿನಲ್ಲಿ ಒದಗಿಸಲಾದ ಪ್ರತೀ ಪೈಸೆಯನ್ನೂ ಹೇಗೆ ಸಮರ್ಪಕವಾಗಿ ಬಳಸಬೇಕು ಎಂಬ ಬಗ್ಗೆ ನೀವು ಇಡೀ ದಿನ ಚರ್ಚಿಸಲಿದ್ದೀರಿ. ನಾವಿದನ್ನು ಮಾಡಬಲ್ಲೆವು ಎಂದಾದರೆ, ಯಾವ ನಾಗರಿಕರೂ ಹಿಂದೆ ಉಳಿಯುವುದಿಲ್ಲ. ನಮ್ಮ ಕನಸುಗಳು ನನಸಾಗುತ್ತವೆ. ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ!

ಬಹಳ ಧನ್ಯವಾದಗಳು!

ಮೋದಿ ಮಾಸ್ಟರ್‌ಕ್ಲಾಸ್: ಪ್ರಧಾನಿ ಮೋದಿಯವರೊಂದಿಗೆ ‘ಪರೀಕ್ಷಾ ಪೇ ಚರ್ಚಾ’
Share your ideas and suggestions for 'Mann Ki Baat' now!
Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
PM Modi creating history, places India as nodal point for preserving Buddhism

Media Coverage

PM Modi creating history, places India as nodal point for preserving Buddhism
...

Nm on the go

Always be the first to hear from the PM. Get the App Now!
...
PM addresses programme marking silver jubilee celebrations of TRAI
May 17, 2022
ಶೇರ್
 
Comments
“Self-made 5G Test-Bed is an important step toward self-reliance in critical and modern technology in the telecom sector”
“Connectivity will determine the pace of progress in 21st century India”
“5G technology is going to bring positive changes in the governance of the country, ease of living and ease of doing business”
“Coming out of the despair, frustration, corruption and policy paralysis of the 2G era, the country has moved rapidly from 3G to 4G and now 5G and 6G”
“In the last 8 years, new energy has been infused into the telecom sector with the ‘Panchamrita’ of Reach, Reform, Regulate, Respond and Revolutionise”
“Mobile manufacturing units increased from 2 to more than 200 bringing mobile phone within reach of the poorest of poor families”
“Today everyone is experiencing the need for collaborative regulation. For this it is necessary that all the regulators come together, develop common platforms and find solutions for better coordination”

Prime Minister Shri Narendra Modi addressed a programme marking the silver jubilee celebrations of the Telecom Regulatory Authority of India (TRAI) today via video conferencing. He also released a postal stamp to commemorate the occasion. Union Ministers Shri Ashwini Vaishnaw, Shri Devusinh Chauhan and Shri L. Murugan and the leaders of telecom and broadcasting sectors were among those present on the occasion.

Addressing the gathering, the Prime Minister said the self-made 5G Test Bed that he dedicated to the nation today, is an important step toward self-reliance in critical and modern technology in the telecom sector. He congratulated all those associated with this project including the IITs. “The country's own 5G standard has been made in the form of 5Gi, it is a matter of great pride for the country. It will play a big role in bringing 5G technology to the villages of the country”, he said.

The Prime Minister said that connectivity will determine the pace of progress in 21st century India. Therefore connectivity has to be modernized at every level. 5G technology, he continued, is also going to bring positive changes in the governance of the country, ease of living and ease of doing business. This will boost growth in every sector like agriculture, health, education, infrastructure and logistics. This will also increase convenience and create many employment opportunities. For rapid roll-out of 5G, efforts of both the government and industry are needed, he added.

The Prime Minister cited the telecom sector as a great example of how self-reliance and healthy competition create a multiplier effect in society and the economy. Coming out of the despair, frustration, corruption and policy paralysis of the 2G era, the country has moved rapidly from 3G to 4G and now 5G and 6G.

The Prime Minister noted that in the last 8 years, new energy was infused into the telecom sector with the ‘Panchamrita’ of Reach, Reform, Regulate, Respond and Revolutionise. He credited TRAI for playing a very important role in this. The Prime Minister said now the country is going beyond thinking in silos and moving ahead with the ‘whole of the government approach’. Today we are expanding the fastest in the world in terms of teledensity and internet users in the country, many sectors including telecom have played a role in it, he said.

The Prime Minister said to make the mobile accessible to the poorest of the poor families, emphasis was placed on the manufacturing of mobile phones in the country itself. The result was that the mobile manufacturing units increased from 2 to more than 200.

The Prime Minister noted that today India is connecting every village in the country with optical fibre. He added that before 2014, not even 100 village panchayats in India were provided with optical fibre connectivity. Today we have made broadband connectivity reach about 1.75 lakh gram panchayats. Hundreds of government services are reaching the villages because of this.

The Prime Minister said that the ‘whole of government approach’ is important for the regulators like TRAI also for meeting the present and future challenges. “Today regulation is not limited to the boundaries of just one sector. Technology is inter-connecting different sectors. That's why today everyone is experiencing the need for collaborative regulation. For this it is necessary that all the regulators come together, develop common platforms and find solutions for better coordination”, the Prime Minister said.