ಪಕ್ಷಾತೀತವಾಗಿ, ಹೊಸ ಪೀಳಿಗೆಯ ಸಂಸದರು ಮತ್ತು ಮೊದಲ ಬಾರಿಗೆ ಆಯ್ಕೆಯಾದ ಸಂಸದರಿಗೆ ಅರ್ಥಪೂರ್ಣ ಅವಕಾಶಗಳನ್ನು ನಾವು ಖಾತರಿಪಡಿಸಬೇಕು: ಪ್ರಧಾನಮಂತ್ರಿ
ಪ್ರಜಾಪ್ರಭುತ್ವವು ಫಲಿತಾಂಶಗಳನ್ನು ನೀಡಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ: ಪ್ರಧಾನಮಂತ್ರಿ
ಈ ಚಳಿಗಾಲದ ಅಧಿವೇಶನವು ದೇಶವನ್ನು ಮತ್ತಷ್ಟು ವೇಗವಾಗಿ ಮುನ್ನಡೆಸುವ ನಮ್ಮ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ತುಂಬಲಿದೆ: ಪ್ರಧಾನಮಂತ್ರಿ

ನಮಸ್ಕಾರ ಸ್ನೇಹಿತರೇ!

ನೀವೂ ಕೂಡ ಹವಾಮಾನವನ್ನು ಆನಂದಿಸುತ್ತಿದ್ದೀರಿ.

ಸ್ನೇಹಿತರೇ,

(ಸಂಸತ್ತಿನ) ಈ ಚಳಿಗಾಲದ ಅಧಿವೇಶನವು ಕೇವಲ ಒಂದು ಸಂಪ್ರದಾಯ ಆಚರಣೆಯಲ್ಲ. ಈ ಚಳಿಗಾಲದ ಅಧಿವೇಶನವು ರಾಷ್ಟ್ರವನ್ನು ಪ್ರಗತಿಯತ್ತ ವೇಗವಾಗಿ ಕೊಂಡೊಯ್ಯಲು ನಡೆಯುತ್ತಿರುವ ಪ್ರಯತ್ನಗಳಿಗೆ ಶಕ್ತಿ ತುಂಬುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಭಾರತವು ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಜೀವಂತಗೊಳಿಸಿದೆ. ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಬಲಗೊಳ್ಳುವ ರೀತಿಯಲ್ಲಿ ಪ್ರಜಾಪ್ರಭುತ್ವದ ಉತ್ಸಾಹ ಮತ್ತು ಚೈತನ್ಯ ಪದೇ ಪದೇ ವ್ಯಕ್ತಗೊಳ್ಳುತ್ತಿದೆ. ಇತ್ತೀಚೆಗೆ, ಬಿಹಾರದಲ್ಲಿ ನಡೆದ ಚುನಾವಣೆಗಳು ಮತ್ತು ಅಲ್ಲಿ ದಾಖಲೆಯ ಮತದಾನವು ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿದೆ. ತಾಯಂದಿರು ಮತ್ತು ಸಹೋದರಿಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಸ್ವತಃ ಹೊಸ ಭರವಸೆ ಮತ್ತು ವಿಶ್ವಾಸವನ್ನು ಸೃಷ್ಟಿಸುತ್ತದೆ. ಒಂದೆಡೆ, ಪ್ರಜಾಪ್ರಭುತ್ವವು ಬಲಗೊಳ್ಳುತ್ತಿದೆ, ಮತ್ತು ಮತ್ತೊಂದೆಡೆ, ಈ ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ, ನಮ್ಮ ಆರ್ಥಿಕತೆಯ ಬಲವರ್ಧನೆಯು ಜಗತ್ತು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಷಯವಾಗಿದೆ. ಪ್ರಜಾಪ್ರಭುತ್ವವು ತಲುಪಿಸಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ. ಭಾರತದ ಆರ್ಥಿಕ ಸ್ಥಿತಿ ಇಂದು ಹೊಸ ಎತ್ತರವನ್ನು ತಲುಪುತ್ತಿರುವ ವೇಗವು ನಮ್ಮಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತದೆ ಮತ್ತು 'ವಿಕ್ಷಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ಗುರಿಯತ್ತ ಸಾಗಲು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ.

 

ಸ್ನೇಹಿತರೇ,

ಈ ಅಧಿವೇಶನವು ಸಂಸತ್ತು ದೇಶಕ್ಕಾಗಿ ಏನು ಯೋಚಿಸುತ್ತಿದೆ, ಸಂಸತ್ತು ದೇಶಕ್ಕಾಗಿ ಏನು ಮಾಡಲು ಬಯಸುತ್ತದೆ ಮತ್ತು ಸಂಸತ್ತು ದೇಶಕ್ಕಾಗಿ ಏನು ಮಾಡಲಿದೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು. ವಿರೋಧ ಪಕ್ಷವು ತನ್ನ ಜವಾಬ್ದಾರಿಯನ್ನು ಪೂರೈಸಬೇಕು, ಚರ್ಚೆಗಳಲ್ಲಿ ಸಮಸ್ಯೆಗಳನ್ನು ಎತ್ತಬೇಕು ಮತ್ತು ಬಲವಾದ ವಿಷಯಗಳನ್ನು ಮುಂದಿಡಬೇಕು. ಅವರು ಸೋಲಿನ ಹತಾಶೆಯಿಂದ ಹೊರಬರಬೇಕು.

ದುರದೃಷ್ಟವಶಾತ್, ಒಂದು ಅಥವಾ ಎರಡು ಪಕ್ಷಗಳಿಗೆ  ತಮ್ಮ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಹಾರ ಫಲಿತಾಂಶಗಳ ನಂತರ ಸಾಕಷ್ಟು ಸಮಯ ಕಳೆದಿದೆ ಮತ್ತು ಅವರು ಚೇತರಿಸಿಕೊಂಡಿದ್ದಾರೆ ಎಂದು ನಾನು ಭಾವಿಸಿದೆ, ಆದರೆ ನಿನ್ನೆ ಅವರ ಹೇಳಿಕೆಗಳನ್ನು ಕೇಳಿದಾಗ, ಅವರ ಸೋಲು ಇನ್ನೂ ಅವರನ್ನು ಬಾಧಿಸುತ್ತಿದೆ ಎಂದು ತೋರುತ್ತದೆ. ಆದರೆ ಈ ಚಳಿಗಾಲದ ಅಧಿವೇಶನವು ಸೋಲಿನ ಹತಾಶೆಗೆ ರಣರಂಗವಾಗಬಾರದು ಎಂದು ನಾನು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಮತ್ತು ಈ ಚಳಿಗಾಲದ ಅಧಿವೇಶನವು ಗೆಲುವಿನ ನಂತರ ದುರಹಂಕಾರದ ಅಖಾಡವಾಗಿ ಬದಲಾಗಬಾರದು. ದೇಶದ ಜನರು ತಮ್ಮ ಪ್ರತಿನಿಧಿಗಳಾಗಿ ನಮ್ಮ ಮೇಲೆ ಇಟ್ಟಿರುವ ಕರ್ತವ್ಯಗಳು ಮತ್ತು ನಿರೀಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಮತೋಲನ ಮತ್ತು ಜವಾಬ್ದಾರಿಯೊಂದಿಗೆ ನಾವು ಮುಂದೆ ಯೋಚಿಸಬೇಕು. ಅಸ್ತಿತ್ವದಲ್ಲಿರುವುದನ್ನು ಹೇಗೆ ಸುಧಾರಿಸುವುದು ಮತ್ತು ಏನಾದರೂ ತಪ್ಪಾಗಿದ್ದರೆ, ದೇಶದ ನಾಗರಿಕರು ಸಹ ತಿಳುವಳಿಕೆಯನ್ನು ಪಡೆಯುವ ರೀತಿಯಲ್ಲಿ ನಾವು ನಿಖರವಾದ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳನ್ನು/ಕಾಮೆಂಟ್‌ಗಳನ್ನು ಹೇಗೆ ಮಾಡಬಹುದು ಎಂಬುದನ್ನು ನಾವು ನೋಡಬೇಕು. ಇದಕ್ಕೆ ಖಂಡಿತವಾಗಿಯೂ ಕಠಿಣ ಪರಿಶ್ರಮದ ಅಗತ್ಯವಿದೆ, ಆದರೆ ಅದನ್ನು ರಾಷ್ಟ್ರದ ಹಿತಾಸಕ್ತಿಗಾಗಿ ಮಾಡಬೇಕು.

 

ಬಹಳ ದಿನಗಳಿಂದ ನನಗೆ ತುಂಬಾ ಚಿಂತೆ ಕೊಡುತ್ತಿರುವ  ಸಂಗತಿ ಎಂದರೆ, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು ಅಥವಾ ಎಲ್ಲಾ ಪಕ್ಷಗಳಿಂದ ಕಿರಿಯ ಸಂಸದರು ತೀವ್ರ ತೊಂದರೆಗೀಡಾಗಿದ್ದಾರೆ ಮತ್ತು ದುಃಖಿತರಾಗಿದ್ದಾರೆ. ಅವರಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅಥವಾ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ದೇಶದ ಅಭಿವೃದ್ಧಿ ಪ್ರಯಾಣಕ್ಕೆ ಕೊಡುಗೆ ನೀಡಲು ಬಯಸುತ್ತಾರೆ, ಆದರೆ ಅದನ್ನು ಸಹ ನಿಲ್ಲಿಸಲಾಗುತ್ತಿದೆ. ಯಾವುದೇ ಪಕ್ಷವಾಗಿದ್ದರೂ, ನಾವು ಈ ಯುವ, ಹೊಸದಾಗಿ ಆಯ್ಕೆಯಾದ ಸಂಸದರಿಗೆ ಅವಕಾಶಗಳನ್ನು ನೀಡಬೇಕು. ಸದನವು ಅವರ ಅನುಭವಗಳಿಂದ ಪ್ರಯೋಜನ ಪಡೆಯಬೇಕು. ಸಂಸತ್ತಿನ ಮೂಲಕ, ಈ ಹೊಸ ಪೀಳಿಗೆಯ ಅನುಭವಗಳಿಂದ ರಾಷ್ಟ್ರವೂ ಪ್ರಯೋಜನ ಪಡೆಯುತ್ತದೆ. ಆದ್ದರಿಂದ, ನಾವು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ವಿನಂತಿಸುತ್ತೇನೆ. ನಾಟಕ ಪ್ರದರ್ಶಿಸಲು ಸಾಕಷ್ಟು ಸ್ಥಳಗಳಿವೆ. ನಾಟಕ ಮಾಡಲು ಬಯಸುವವರು ಅದನ್ನು ಬೇರೆಡೆ ಮಾಡಲಿ. ಇಲ್ಲಿ, ನಾಟಕವಲ್ಲ, ವಿತರಣೆ ಇರಬೇಕು. ಘೋಷಣೆಗಳನ್ನು ಕೂಗಲು ದೇಶದಲ್ಲಿ ಸಾಕಷ್ಟು ಸ್ಥಳವಿದೆ. ನೀವು ಈಗಾಗಲೇ ಎಲ್ಲಿ ಸೋತಿದ್ದೀರಿ ಎಂದು ಕೂಗಿ ಹೇಳಿದ್ದೀರಿ. ಮುಂದೆ ನೀವು ಎಲ್ಲಿ ಸೋಲುತ್ತೀರಿ ಎಂಬುದನ್ನೂ ಕೂಗಿ ಹೇಳಬಹುದು. ಆದರೆ ಇಲ್ಲಿ, ನಾವು ನೀತಿಗೆ ಒತ್ತು ನೀಡಬೇಕು, ಘೋಷಣೆಗಳಿಗಲ್ಲ. ಮತ್ತು ಅದು ನಿಮ್ಮ ಉದ್ದೇಶವಾಗಿರಬೇಕು.

ಸ್ನೇಹಿತರೇ,

ರಾಜಕೀಯದಲ್ಲಿ ನಕಾರಾತ್ಮಕತೆಯು ಸ್ವಲ್ಪ ಮಟ್ಟಿಗೆ ಉಪಯುಕ್ತವಾಗಬಹುದು, ಆದರೆ ಅಂತಿಮವಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ಕೆಲವು ಸಕಾರಾತ್ಮಕ ಚಿಂತನೆಗಳು ಸಹ ಇರಬೇಕು. ನಕಾರಾತ್ಮಕತೆಯನ್ನು ಮಿತಿಯೊಳಗೆ ಇಟ್ಟುಕೊಳ್ಳಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಮನ ನೀಡಬೇಕು ಎಂದು ನಾನು ನಿರೀಕ್ಷಿಸುತ್ತೇನೆ.

ಸ್ನೇಹಿತರೇ,

ಈ ಚಳಿಗಾಲದ ಅಧಿವೇಶನವು ಇನ್ನೊಂದು ಕಾರಣಕ್ಕಾಗಿಯೂ ಮುಖ್ಯವಾಗಿದೆ. ನಮ್ಮ ಹೊಸ ಗೌರವಾನ್ವಿತ ಸಭಾಧ್ಯಕ್ಷರು ಇಂದಿನಿಂದ ನಮ್ಮ ಮೇಲ್ಮನೆಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸುತ್ತಾರೆ. ನಾನು ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ಜಿಎಸ್‌ಟಿ ಸುಧಾರಣೆಗಳು ಮುಂದಿನ ಪೀಳಿಗೆಯ ಸುಧಾರಣೆಗಳಿಗಾಗಿ ಜನರಲ್ಲಿ ನಂಬಿಕೆಯ ವಾತಾವರಣವನ್ನು ಸೃಷ್ಟಿಸಿವೆ. ಈ ಅಧಿವೇಶನದಲ್ಲಿಯೂ ಆ ದಿಕ್ಕಿನಲ್ಲಿ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನಮ್ಮ ಕೆಲವು ಮಾಧ್ಯಮ ಸ್ನೇಹಿತರು ಇದನ್ನು ವಿಶ್ಲೇಷಿಸುವುದಾದರೆ, ನಮ್ಮ ಸಂಸತ್ತನ್ನು ಚುನಾವಣೆಗಳಿಗೆ ತಯಾರಾಗುವ ವೇದಿಕೆಯಾಗಿ ಅಥವಾ ಸೋಲಿನ ನಂತರ ಹತಾಶೆಯನ್ನು ಹೊರಹಾಕುವ ಸ್ಥಳವಾಗಿ ಬಳಸಲಾಗಿದೆ ಎಂಬುದು  ಅವರ ಗಮನಕ್ಕೆ ಬರುತ್ತದೆ.  ಕೆಲವು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ತುಂಬಾ ಇದೆ ಎಂದು ನಾನು ನೋಡಿದ್ದೇನೆ, ಅಧಿಕಾರದಲ್ಲಿರುವ ನಾಯಕರು ಜನರ ನಡುವೆ ಹೋಗಲು ಅಥವಾ ಅವರೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅವರು ಸಂಸತ್ತಿಗೆ ಬಂದು ತಮ್ಮ ಎಲ್ಲಾ ಕೋಪವನ್ನು ಇಲ್ಲಿ ಸುರಿಯುತ್ತಾರೆ. ಕೆಲವು ಪಕ್ಷಗಳು ತಮ್ಮ ರಾಜ್ಯ ಮಟ್ಟದ ರಾಜಕೀಯಕ್ಕಾಗಿ ಸಂಸತ್ತನ್ನು ಬಳಸುವ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿವೆ. ಕಳೆದ 10 ವರ್ಷಗಳಿಂದ ದೇಶವು ಈ ವಿಧಾನಗಳನ್ನು ಒಪ್ಪಿಕೊಂಡಿಲ್ಲ ಎಂಬ ಅಂಶವನ್ನು ಅವರು ಪರಿಗಣಿಸಬೇಕು. ಅವರು ಈಗ ತಮ್ಮ ವಿಧಾನವನ್ನು ಬದಲಾಯಿಸಬೇಕು, ತಮ್ಮ ತಂತ್ರವನ್ನು ಬದಲಾಯಿಸಬೇಕು. ಅವರು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ನಾನು ಅವರಿಗೆ ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ. ಆದರೆ ಕನಿಷ್ಠ ಸಂಸದರ ಹಕ್ಕುಗಳನ್ನು ಉಲ್ಲಂಘಿಸಬೇಡಿ. ಸಂಸದರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಅವಕಾಶ ನೀಡಿ. ಸಂಸದರನ್ನು ನಿಮ್ಮ ಹತಾಶೆ ಮತ್ತು ನಿಮ್ಮ ಸೋಲಿನ ಬಲಿಪಶುಗಳನ್ನಾಗಿ ಮಾಡಬೇಡಿ. ನಾವೆಲ್ಲರೂ ಈ ಜವಾಬ್ದಾರಿಗಳನ್ನು ನಿಭಾಯಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ದೇಶವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ. ರಾಷ್ಟ್ರವು ಹೊಸ ಎತ್ತರವನ್ನು ಸಾಧಿಸುವತ್ತ ಮುನ್ನಡೆಯುತ್ತಿದೆ, ಮತ್ತು ಈ ಸದನವು ಆ ಪ್ರಯಾಣಕ್ಕೆ ಹೊಸ ಬಲ ಮತ್ತು ಹೊಸ ಶಕ್ತಿಯನ್ನು ತುಂಬುತ್ತದೆ. ಈ ನಂಬಿಕೆಯೊಂದಿಗೆ, ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
PM pays homage to Parbati Giri Ji on her birth centenary
January 19, 2026

Prime Minister Shri Narendra Modi paid homage to Parbati Giri Ji on her birth centenary today. Shri Modi commended her role in the movement to end colonial rule, her passion for community service and work in sectors like healthcare, women empowerment and culture.

In separate posts on X, the PM said:

“Paying homage to Parbati Giri Ji on her birth centenary. She played a commendable role in the movement to end colonial rule. Her passion for community service and work in sectors like healthcare, women empowerment and culture are noteworthy. Here is what I had said in last month’s #MannKiBaat.”

 Paying homage to Parbati Giri Ji on her birth centenary. She played a commendable role in the movement to end colonial rule. Her passion for community service and work in sectors like healthcare, women empowerment and culture is noteworthy. Here is what I had said in last month’s… https://t.co/KrFSFELNNA

“ପାର୍ବତୀ ଗିରି ଜୀଙ୍କୁ ତାଙ୍କର ଜନ୍ମ ଶତବାର୍ଷିକୀ ଅବସରରେ ଶ୍ରଦ୍ଧାଞ୍ଜଳି ଅର୍ପଣ କରୁଛି। ଔପନିବେଶିକ ଶାସନର ଅନ୍ତ ଘଟାଇବା ଲାଗି ଆନ୍ଦୋଳନରେ ସେ ପ୍ରଶଂସନୀୟ ଭୂମିକା ଗ୍ରହଣ କରିଥିଲେ । ଜନ ସେବା ପ୍ରତି ତାଙ୍କର ଆଗ୍ରହ ଏବଂ ସ୍ୱାସ୍ଥ୍ୟସେବା, ମହିଳା ସଶକ୍ତିକରଣ ଓ ସଂସ୍କୃତି କ୍ଷେତ୍ରରେ ତାଙ୍କର କାର୍ଯ୍ୟ ଉଲ୍ଲେଖନୀୟ ଥିଲା। ଗତ ମାସର #MannKiBaat କାର୍ଯ୍ୟକ୍ରମରେ ମଧ୍ୟ ମୁଁ ଏହା କହିଥିଲି ।”