ಗುವಾಹಟಿಯಿಂದ ಹಲವಾರು ಪ್ರಮುಖ ಕಲ್ಯಾಣ ಮತ್ತು ಮೂಲಸೌಕರ್ಯ ಉಪಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ, ಇವು ಅಸ್ಸಾಂನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ ಮತ್ತು ರಾಜ್ಯಾದ್ಯಂತ ಜನರಿಗೆ ಪ್ರಯೋಜನವನ್ನು ನೀಡುತ್ತವೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆಯ ಸಾಧನವಾಗಿದೆ: ಪ್ರಧಾನಮಂತ್ರಿ
ಎಂ.ಎಸ್.ಪಿ., ಕೈಗೆಟುಕುವ ಸಾಲಗಳು, ಬೆಳೆ ವಿಮೆ, ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳು ರೈತರಿಗೆ ಪ್ರಮುಖ ಬೆಂಬಲವಾಗಿವೆ: ಪ್ರಧಾನಮಂತ್ರಿ
ಅಂತರರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳು ಕೃಷಿ ಮತ್ತು ಬೆಳೆಗಳ ಮೇಲೆ ಪರಿಣಾಮ ಬೀರದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ: ಪ್ರಧಾನಮಂತ್ರಿ
ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ದೇಶದ ಬದ್ಧತೆಗಳನ್ನು ಸಾಧಿಸುವಲ್ಲಿ ಅಸ್ಸಾಂ ಪ್ರಮುಖ ಪಾತ್ರ ವಹಿಸುತ್ತಿದೆ; ಲೋವರ್ ಕೊಪಿಲಿ ಜಲವಿದ್ಯುತ್ ಯೋಜನೆಯು ಅಸ್ಸಾಂ ಜೊತೆಗೆ ಇಡೀ ಈಶಾನ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ: ಪ್ರಧಾನಮಂತ್ರಿ
ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವಿಭಾಗದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ; ಈ ಮನೋಭಾವದೊಂದಿಗೆ, ಇಂದು, ಅಸ್ಸಾಂನ ಚಹಾ ತೋಟಗಳಲ್ಲಿನ ಕಾರ್ಮಿಕರಿಗಾಗಿ ಒಂದು ಪ್ರಮುಖ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ: ಪ್ರಧಾನಮಂತ್ರಿ
ಅಸ್ಸಾಂ ಇಂದು ನಮ್ಮ ಈಶಾನ್ಯದ ಹೊಸ ಭವಿಷ್ಯ, ಅಷ್ಟಲಕ್ಷ್ಮಿಗೆ ಮಾದರಿಯಾಗುತ್ತಿದೆ; ಇಲ್ಲಿನ ಪ್ರಗತಿಯು ಇಡೀ ಈಶಾನ್ಯಕ್ಕೆ ಹೊಸ ಚಲನೆಯನ್ನು ನೀಡುತ್ತಿದೆ: ಪ್ರಧಾನಮಂತ್ರಿ

ಗುವಾಹಟಿಯ ನನ್ನ ಪ್ರೀತಿಯ ನಾಗರಿಕರೆ, ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.

ಅಸ್ಸಾಂ ರಾಜ್ಯಪಾಲರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ರಾಜ್ಯ ಸರ್ಕಾರದ ಎಲ್ಲಾ ಸಚಿವರೆ, ಜನಪ್ರತಿನಿಧಿಗಳೆ, ದೇಶಾದ್ಯಂತ ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿರುವ ನಮ್ಮ ಎಲ್ಲಾ ರೈತ ಮಿತ್ರರೆ, ಚಹಾ ತೋಟಗಳಲ್ಲಿ ಕೆಲಸ ಮಾಡುವ ನನ್ನ ಸಹೋದರ ಸಹೋದರಿಯರೆ ಮತ್ತು ನಮ್ಮ ಅನೇಕ ಹಿರಿಯ ಮುಖ್ಯಮಂತ್ರಿಗಳು ಇಂದು ಈ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಯಿಂದ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ, ಎಲ್ಲರಿಗೂ ನನ್ನ ಶುಭಾಶಯಗಳು.

ಸಹೋದರ ಸಹೋದರಿಯರೆ,

ಇಂದು ನವರಾತ್ರಿಗೆ ಮುನ್ನ ಮಾತೆ ಕಾಮಾಕ್ಯಳ ಈ ಪವಿತ್ರ ಭೂಮಿಯಲ್ಲಿ ನಿಮ್ಮೆಲ್ಲರನ್ನೂ ಸ್ವೀಕರಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಮಾತೆ ಕಾಮಾಕ್ಯಳ ಆಶೀರ್ವಾದದೊಂದಿಗೆ ಸ್ವಲ್ಪ ಸಮಯದ ಹಿಂದೆ, 19.5 ಸಾವಿರ ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಇಲ್ಲಿಂದ ನಡೆಯಿತು. ಇಂಧನ ಕ್ಷೇತ್ರದಲ್ಲಿ ಅಸ್ಸಾಂ ಅನ್ನು ಸ್ವಾವಲಂಬಿಗೊಳಿಸುವ ಯೋಜನೆಗಳಿಂದ ಹಿಡಿದು ಅಸ್ಸಾಂಗೆ ಬರುವ ಜನರ ಅನುಕೂಲಕ್ಕಾಗಿ ಮಾಡಿದ ಕೆಲಸಗಳವರೆಗೆ, ಇಂದು ಅಸ್ಸಾಂಗೆ ಅನೇಕ ಯೋಜನೆಗಳನ್ನು ನೀಡಲಾಗಿದೆ. ಇಂದು ದೇಶದ ರೈತರು ಮತ್ತು ಅಸ್ಸಾಂನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಒಡನಾಡಿಗಳಿಗೆ ಬಹುದೊಡ್ಡ ದಿನವಾಗಿದೆ. ಕೆಲವು ಕ್ಷಣಗಳ ಹಿಂದೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ, ಇಡೀ ದೇಶಾದ್ಯಂತ ನಮ್ಮ ಕೋಟ್ಯಂತರ ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ಕಳುಹಿಸಲಾಗಿದೆ. ಇದಲ್ಲದೆ, ಅಸ್ಸಾಂನ ಚಹಾ ತೋಟಗಳೊಂದಿಗೆ ಸಂಬಂಧ ಹೊಂದಿರುವ ಅನೇಕ ಕುಟುಂಬಗಳಿಗೆ ಇಂದು ಭೂಮಿಯ ಹಕ್ಕುಪತ್ರಗಳನ್ನು ನೀಡಲಾಗಿದೆ. ನಾನು ಅಸ್ಸಾಂ ಜನರಿಗೆ, ಇಲ್ಲಿನ ಎಲ್ಲಾ ಕುಟುಂಬಗಳಿಗೆ ಮತ್ತು ದೇಶಾದ್ಯಂತದ ರೈತರಿಗೆ ಅನೇಕ, ಅನೇಕ ಅಭಿನಂದನೆಗಳನ್ನು ಹೇಳುತ್ತೇನೆ.

 

ಸ್ನೇಹಿತರೆ,

ಇಂದು ದೇಶಾದ್ಯಂತದ ರೈತ ಮಿತ್ರರು ಮಾತೆ ಕಾಮಾಕ್ಯಳ ಈ ಭೂಮಿಗೆ ಸಂಪರ್ಕ ಹೊಂದಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಪ್ರಧಾನ ಮಂತ್ರಿ ಕಿಸಾನ್ ನಿಧಿಯ ಕೋಟ್ಯಂತರ ರೈತರ ಖಾತೆಗಳಿಗೆ ಜಮಾ ಆಗಿರುವ ಸಂದೇಶಗಳು ಎಲ್ಲರ ಮೊಬೈಲ್‌ಗೆ ತಲುಪಿವೆ. ಈ ಯೋಜನೆ ನಿಜಕ್ಕೂ ಅದ್ಭುತವಾಗಿದೆ. ಒಂದೇ ಕ್ಲಿಕ್‌ನಲ್ಲಿ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಂತಹ ವಿಷಯ ಸಾಧ್ಯವಿಲ್ಲ. ವಿದೇಶಿ ಅತಿಥಿಗಳು ನನ್ನನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದಾಗ ಮತ್ತು ಇದೆಲ್ಲ ಹೇಗೆ ಸಾಧ್ಯವಾಗುತ್ತಿದೆ ಎಂಬ ಮಾಹಿತಿಗಾಗಿ ಕುತೂಹಲದಿಂದ ಇರುವಾಗ, ವಿಶ್ವದ ದೊಡ್ಡ ದೇಶಗಳ ದೊಡ್ಡ ನಾಯಕರಿಗೂ ಸಹ ಇದು ಒಂದು ದೊಡ್ಡ ಪವಾಡದಂತೆ ತೋರುತ್ತಿದೆ, ಇವರು ನನ್ನ ಅದೇ ರೈತ ಸಹೋದರ ಸಹೋದರಿಯರು, ಅವರಲ್ಲಿ ಹೆಚ್ಚಿನವರು 2014ರ ಮೊದಲು ಮೊಬೈಲ್ ಫೋನ್ ಅಥವಾ ಬ್ಯಾಂಕಿನಲ್ಲಿ ಯಾವುದೇ ಖಾತೆ ಹೊಂದಿರಲಿಲ್ಲ. ಇಂದು ಅಂತಹ ಕೋಟ್ಯಂತರ ರೈತರ ಖಾತೆಗಳಿಗೆ ಇಲ್ಲಿಯವರೆಗೆ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ಜಮಾ ಮಾಡಲಾಗಿದೆ. ಇದರಲ್ಲಿ, ಅಸ್ಸಾಂನ ಸುಮಾರು 19 ಲಕ್ಷ ರೈತರಿದ್ದಾರೆ, ಅವರು ಇಲ್ಲಿಯವರೆಗೆ ಸುಮಾರು 8 ಸಾವಿರ ಕೋಟಿ ರೂಪಾಯಿ ಪಡೆದಿದ್ದಾರೆ.

ಸ್ನೇಹಿತರೆ,

ನನಗೆ ಇನ್ನೂ ನೆನಪಿದೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭವಾದಾಗ, ವದಂತಿಗಳನ್ನು ಹರಡುವುದರಲ್ಲಿ ಮತ್ತು ಸುಳ್ಳು ಹೇಳುವುದರಲ್ಲಿ ಪರಿಣಿತರಾದ ಕಾಂಗ್ರೆಸ್ ಜನರು, ಮೋದಿ ಇಂದು ಈ ಯೋಜನೆಗೆ ಹಣ ನೀಡಿದರೂ, ಚುನಾವಣೆಯ ನಂತರ ಅದನ್ನು ಹಿಂತಿರುಗಿಸಬೇಕಾಗುತ್ತದೆ ಎಂದು ಹೇಳುತ್ತಿದ್ದರು. ಅವರು ಸುಳ್ಳು ಹೇಳುವುದರಲ್ಲಿ ನಿಪುಣರು. ಆದರೆ ಇಂದು ಸಮ್ಮಾನ್ ನಿಧಿಯ ಈ ಯೋಜನೆಯು ದೇಶದ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆಯ ಮಾಧ್ಯಮವಾಗಿದೆ.

ಸಹೋದರಿಯರೆ,

ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ ರೈತರ ಹಿತಾಸಕ್ತಿಗಿಂತ ದೊಡ್ಡದಲ್ಲ. ರೈತರಿಗೆ ಹಣ ನೀಡುವ ವಿಷಯ ಬಂದಾಗ, ಕಾಂಗ್ರೆಸ್ ಜನರ ಉಸಿರು ಕಟ್ಟಿ ಹಾಕುತ್ತಿತ್ತು. ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. 2014ರ ಮೊದಲು ಕೇಂದ್ರದಲ್ಲಿ 10 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿತ್ತು. ಕಾಂಗ್ರೆಸ್ ಸರ್ಕಾರದ 10 ವರ್ಷಗಳಲ್ಲಿ, ರೈತರು ಎಂಎಸ್ ಪಿ ರೂಪದಲ್ಲಿ 6.5 ಲಕ್ಷ ಕೋಟಿ ರೂಪಾಯಿ ಪಡೆದರು, 10 ವರ್ಷಗಳಲ್ಲಿ 6.5 ಲಕ್ಷ ಕೋಟಿ ರೂಪಾಯಿ ಪಡೆದರು. ಆದರೆ ನಮ್ಮ ಸರ್ಕಾರದ 10 ವರ್ಷಗಳಲ್ಲಿ, ರೈತರು ಎಂಎಸ್ ಪಿ ರೂಪದಲ್ಲಿ 20 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಪಡೆದಿದ್ದಾರೆ.

 

ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ, ಬಿಜೆಪಿ-ಎನ್‌ಡಿಎ ಸರ್ಕಾರವು ದೇಶದ ರೈತರ ಸುತ್ತಲೂ ಬಲವಾದ ಭದ್ರತಾ ಗುರಾಣಿ ಹೆಣೆದಿದೆ. ಅದು ಎಂಎಸ್ ಪಿ ಆಗಿರಲಿ, ಅಗ್ಗದ ಸಾಲಗಳಾಗಿರಲಿ, ಬೆಳೆ ವಿಮೆಯಾಗಿರಲಿ ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿಯಾಗಿರಲಿ, ಈ ಯೋಜನೆಗಳು ರೈತರಿಗೆ ಉತ್ತಮ ಬೆಂಬಲವಾಗಿ ಪರಿಣಮಿಸಿವೆ. ಇದಲ್ಲದೆ, ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಪರಿಣಾಮ ಕೃಷಿ ಮತ್ತು ವ್ಯವಸಾಯದ ಮೇಲೆ ಬೀಳದಂತೆ ನಾವು ಕಾಳಜಿ ವಹಿಸಿದ್ದೇವೆ. ಈಗ ಕೊರೊನಾ ಮತ್ತು ಅದರ ನಂತರದ ಯುದ್ಧಗಳಂತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ರಸಗೊಬ್ಬರ ಪಡೆಯುವುದು ಸಹ ಕಷ್ಟಕರವಾಗಿದೆ. ಆದರೆ ಈ ಬಿಕ್ಕಟ್ಟು ತಡೆಯಲು ಕೇಂದ್ರ ಸರ್ಕಾರವು ಸಂಪೂರ್ಣ ಪ್ರಯತ್ನಗಳನ್ನು ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3 ಸಾವಿರ ರೂಪಾಯಿಗೆ ಲಭ್ಯವಿರುವ ಯೂರಿಯಾ ಚೀಲವನ್ನು ನಮ್ಮ ಸರ್ಕಾರವು ತನ್ನ ರೈತರಿಗೆ ಕೇವಲ 300 ರೂಪಾಯಿಗೆ ನೀಡಿದೆ. ಇದಕ್ಕಾಗಿ ಸರ್ಕಾರವು ತನ್ನ ಖಜಾನೆಯಿಂದ 12 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡಿದೆ, ಆದ್ದರಿಂದ ಹೊರೆ ನನ್ನ ರೈತರ ಮೇಲೆ ಬೀಳುವುದಿಲ್ಲ. ಸರ್ಕಾರವು ಈ ಹೊರೆಯನ್ನು ತನ್ನದೇ ಹೆಗಲ ಮೇಲೆ ಹಾಕಿಕೊಂಡಿದೆ.

ಸ್ನೇಹಿತರೆ,

ಕಳೆದ ದಶಕದಲ್ಲಿ, ಬಿಜೆಪಿ-ಎನ್‌ಡಿಎ ಸರ್ಕಾರವು ಸ್ವಾವಲಂಬನೆಯ ಕುರಿತು ಮತ್ತೊಂದು ದೊಡ್ಡ ಕೆಲಸ ಮಾಡಿದೆ. ಬಾಹ್ಯ ಬಿಕ್ಕಟ್ಟುಗಳಿಂದ ಕೃಷಿಯನ್ನು ರಕ್ಷಿಸಲು ನಾವು ಸ್ವಾವಲಂಬನೆಯನ್ನು ಪ್ರೋತ್ಸಾಹಿಸಿದ್ದೇವೆ. ಸ್ವತಂತ್ರ ಭಾರತದಲ್ಲಿ ನಾವು ಪದೇಪದೆ ನೋಡಿದ್ದೇವೆ, ಪ್ರಪಂಚದ ಇತರ ಭಾಗಗಳಲ್ಲಿ ಯುದ್ಧಗಳು ನಡೆದಾಗ ಅಥವಾ ಪೂರೈಕೆ ಸರಪಳಿಯಲ್ಲಿ ತೊಂದರೆಗಳು ಉಂಟಾದಾಗ, ನಮ್ಮ ರೈತರಿಗೆ ತೊಂದರೆಯಾಗುತ್ತಿತ್ತು. ಕೆಲವೊಮ್ಮೆ ರಸಗೊಬ್ಬರ ದುಬಾರಿಯಾಗುತ್ತಿತ್ತು, ಕೆಲವೊಮ್ಮೆ ಡೀಸೆಲ್ ಮತ್ತು ಇಂಧನ ಬೆಲೆ ಹೆಚ್ಚಾಗುತ್ತಿತ್ತು. ಏಕೆಂದರೆ ದಶಕಗಳಿಂದ, ಕಾಂಗ್ರೆಸ್ ಪಕ್ಷವು ದೇಶವನ್ನು ಇತರೆ ದೇಶಗಳ ಮೇಲೆ ಅವಲಂಬಿತವಾಗಿತ್ತು. ಇದರಿಂದಾಗಿ, ಕೃಷಿ ವೆಚ್ಚವೂ ಹೆಚ್ಚಾಗುತ್ತಿತ್ತು.

 

ಸ್ನೇಹಿತರೆ,

ಕೃಷಿ ಕ್ಷೇತ್ರ ಹೊಸ ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸಬೇಕು, ರೈತರು ನೀರಾವರಿಯ ಹೊಸ ವಿಧಾನಗಳಿಗೆ ಸಂಪರ್ಕ ಹೊಂದಬೇಕು, ಬೆಳೆಗಳಿಗೂ ಪ್ರಯೋಜನ ಸಿಗಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರವು 'ಪ್ರತಿ ಹನಿಗೂ ಹೆಚ್ಚಿನ ಬೆಳೆ' ನೀತಿ ರೂಪಿಸಿತು. ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್‌ಗಳಂತಹ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲಾಗಿದೆ. ಇದರಿಂದಾಗಿ, ನೀರಾವರಿಯೂ ಸುಧಾರಿಸಿ, ವೆಚ್ಚವೂ ಕಡಿಮೆಯಾಗಿದೆ. ಇಂದು ಸರ್ಕಾರವು ನಿಮ್ಮ ಹೊಲಗಳನ್ನು ಸೌರ ಪಂಪ್‌ಗಳೊಂದಿಗೆ ಸಂಪರ್ಕಿಸಲು ಕೆಲಸ ಮಾಡುತ್ತಿದೆ, ಡೀಸೆಲ್ ಮೇಲಿನ ನಿಮ್ಮ ವೆಚ್ಚ ಸಾಧ್ಯವಾದಷ್ಟು ಕಡಿಮೆ ಇರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಕೇಂದ್ರವು ರೂಪಿಸಿರುವ ಕುಸುಮ್ ಯೋಜನೆಯು ಇದೇ ಕಾರಣಕ್ಕಾಗಿ ಇದೆ. ಇಂದು ಅನೇಕ ರೈತರು ಸೌರ ಪಂಪ್‌ಗಳನ್ನು ಅಳವಡಿಸುವ ಮೂಲಕ ನೀರಾವರಿ ಮಾಡುವುದಲ್ಲದೆ, ಅದರಿಂದ ವಿದ್ಯುತ್ ತಯಾರಿಸುವ ಮೂಲಕ ಹಣ ಗಳಿಸಲು ಸಮರ್ಥರಾಗಿದ್ದಾರೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ಆಹಾರ ಒದಗಿಸುವವರು(ಅನ್ನದಾತ) ಇಂಧನ ಪೂರೈಕೆದಾರರು (ಊರ್ಜಾದಾತ) ಆಗಲಿ.

ನಮ್ಮ ನಿರಂತರ ಪ್ರಯತ್ನದಿಂದಾಗಿ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಮೇಲಿನ ರೈತರ ಅವಲಂಬನೆಯೂ ಕಡಿಮೆಯಾಗುತ್ತದೆ. ಕಾಂಗ್ರೆಸ್ಸಿನ ತಪ್ಪು ನೀತಿಗಳಿಂದಾಗಿ, ದೇಶದ 5 ದೊಡ್ಡ ರಸಗೊಬ್ಬರ ಕಾರ್ಖಾನೆಗಳು ಮುಚ್ಚಲ್ಪಟ್ಟವು. ಆ ರಸಗೊಬ್ಬರ ಕಾರ್ಖಾನೆಗಳನ್ನು ನಾವು ಮತ್ತೆ ಪ್ರಾರಂಭಿಸಿದ್ದೇವೆ. ಇದರೊಂದಿಗೆ, ರೈತರನ್ನು ನ್ಯಾನೊ ಯೂರಿಯಾದೊಂದಿಗೆ ಸಂಪರ್ಕಿಸಲು ಅನೇಕ ಕೆಲಸಗಳನ್ನು ಸಹ ಮಾಡಲಾಗಿದೆ. ಇಂದು ದೇಶದ ರೈತರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ಬಿಜೆಪಿ-ಎನ್‌ಡಿಎ ಸರ್ಕಾರವು ದೇಶದ ರೈತರಿಗೆ ನೈಸರ್ಗಿಕ ಕೃಷಿಗಾಗಿ ಪ್ರೋತ್ಸಾಹ ನೀಡುತ್ತಿದೆ. ರೈತರು ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಕೃಷಿ ಅಳವಡಿಸಿಕೊಂಡಾಗ, ಮಣ್ಣು ಸಹ ಸುರಕ್ಷಿತವಾಗಿ ಉಳಿಯುತ್ತದೆ, ನಮ್ಮ ಆಹಾರ ಪೂರೈಕೆದಾರರು ಜಾಗತಿಕ ಬಿಕ್ಕಟ್ಟುಗಳಿಂದ ಸುರಕ್ಷಿತವಾಗಿ ಉಳಿಯುತ್ತಾರೆ.

ಸ್ನೇಹಿತರೆ,

ಒಂದು ಕಡೆ ಬಿಜೆಪಿ-ಎನ್‌ಡಿಎ ಸರ್ಕಾರ ರೈತರಿಗಾಗಿ ಕೆಲಸ ಮಾಡುತ್ತಿದೆ, ನಾವು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ನಿರತರಾಗಿದ್ದೇವೆ, ಆದರೆ ಇಂದು ಕಾಂಗ್ರೆಸ್ ಯಾವುದೇ ಪರಿಸ್ಥಿತಿಯಲ್ಲಿ ದೇಶದ ಬಗ್ಗೆ ಪ್ರಾಮಾಣಿಕವಾಗಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇಂದು ಯುದ್ಧದಿಂದ ಸೃಷ್ಟಿಯಾದ ಬಿಕ್ಕಟ್ಟುಗಳ ನಡುವೆಯೂ, ಕಾಂಗ್ರೆಸ್ ವದಂತಿಗಳು ಮತ್ತು ಅಪಪ್ರಚಾರದಲ್ಲಿ ಮಾತ್ರ ತೊಡಗಿಸಿಕೊಂಡಿದೆ. ನಾನು ಕಾಂಗ್ರೆಸ್ ನಾಯಕರಿಗೆ ಹೇಳಲು ಬಯಸುತ್ತೇನೆ, ಒಂದು ಕೆಲಸ ಮಾಡಿ, ಆಗಸ್ಟ್ 15ರಂದು ಕೆಂಪುಕೋಟೆಯಿಂದ ಪಂಡಿತ್ ನೆಹರು ಜಿ ಅವರು ನೀಡಿದ ಭಾಷಣಗಳನ್ನು ಆಲಿಸಿ, ನೀವು ಕೇಳಿದರೆ ಆಶ್ಚರ್ಯಚಕಿತರಾಗುವಿರಿ. ಒಮ್ಮೆ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಪಂಡಿತ್ ಜಿ ಅವರು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಯುದ್ಧ ನಡೆಯುತ್ತಿದೆ, ಆದ್ದರಿಂದ ಭಾರತದಲ್ಲಿ ಹಣದುಬ್ಬರ ಹೆಚ್ಚುತ್ತಿದೆ. ಈಗ ಉತ್ತರ ಕೊರಿಯಾ ಎಲ್ಲಿದೆ, ದಕ್ಷಿಣ ಕೊರಿಯಾ ಮತ್ತು ನೆಹರು ಜಿ ಇಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಬಗ್ಗೆ ಮಾತನಾಡುತ್ತಿದ್ದರು. ಇಂದು ಕಾಂಗ್ರೆಸ್ ಜನರು ದೇಶವನ್ನು ದಾರಿ ತಪ್ಪಿಸುವಲ್ಲಿ ನಿರತರಾಗಿದ್ದಾರೆ. ಜಾಗತಿಕ ಬಿಕ್ಕಟ್ಟುಗಳ ಪರಿಣಾಮ ಏನೆಂದು ಇಂದು ಜಗತ್ತು ನೋಡುತ್ತಿದೆ.

 

ಸ್ನೇಹಿತರೆ,

ಬಿಜೆಪಿ-ಎನ್‌ಡಿಎ ಸರ್ಕಾರವು ನಮ್ಮ ಸಂಸ್ಕರಣಾಗಾರಗಳ ಅಭಿವೃದ್ಧಿ ಮತ್ತು ಸಂಸ್ಕರಣಾ ಸಾಮರ್ಥ್ಯದ ವಿಸ್ತರಣೆಗಾಗಿ ಕೆಲಸ ಮಾಡಿದೆ. ಇಂದು ಭಾರತವು ತನ್ನದೇ ಆದ ಇಂಧನ ಅಗತ್ಯಗಳನ್ನು ಮಾತ್ರವಲ್ಲದೆ, ವಿಶ್ವದ ಇಂಧನ ಅಗತ್ಯಗಳನ್ನು ಸಹ ನೋಡಿಕೊಳ್ಳಬಲ್ಲ ಪ್ರಮುಖ ದೇಶವಾಗಿದೆ. ಅಸ್ಸಾಂನಲ್ಲಿರುವ ನಮ್ಮ ಸಂಸ್ಕರಣಾಗಾರಗಳನ್ನು ಕಳೆದ ವರ್ಷಗಳಲ್ಲಿ ವಿಸ್ತರಿಸಲಾಗಿದೆ. ಅಸ್ಸಾಂ ಸೇರಿದಂತೆ ಇಡೀ ಈಶಾನ್ಯದಲ್ಲಿ ಅನಿಲ ಪೈಪ್‌ಲೈನ್ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ನುಮಲಿಗಢ-ಸಿಲಿಗುರಿ ಪೈಪ್‌ಲೈನ್ ನವೀಕರಿಸುವ ಕೆಲಸವೂ ಪೂರ್ಣಗೊಂಡಿದೆ. ವಿಶ್ವದ ಮೊದಲ 2ನೇ ತಲೆಮಾರಿನ ಬಯೋ-ಎಥೆನಾಲ್ ಸ್ಥಾವರವನ್ನು ಅಸ್ಸಾಂನ ಗೋಲಾಘಾಟ್‌ನಲ್ಲಿ ಸ್ಥಾಪಿಸಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಈ ಇಡೀ ಪ್ರದೇಶವು ಬಹಳ ದೊಡ್ಡ ಪ್ರಯೋಜನ ಪಡೆಯುತ್ತದೆ.

ಸ್ನೇಹಿತರೆ,

ರೈಲ್ವೆಯು ವಿದೇಶಗಳ ಮೇಲೆ ಅವಲಂಬನೆ ಕಡಿಮೆ ಮಾಡಲು ಮತ್ತು ನಾವು ವಿದೇಶದಿಂದ ಕಡಿಮೆ ತೈಲ ಆರ್ಡರ್ ಮಾಡಲು, ಒಂದು ದಶಕದಲ್ಲೇ ಬಹುದೊಡ್ಡ ಕೆಲಸ ಆಗಿದೆ. ಕಳೆದ 10 ವರ್ಷಗಳಲ್ಲಿ ಇಂದು ದೇಶದ ಬಹುತೇಕ ಸಂಪೂರ್ಣ ರೈಲು ಜಾಲವು ವಿದ್ಯುತ್ ಮಾರ್ಗಗಳೊಂದಿಗೆ ಸಂಪರ್ಕ ಹೊಂದಿದೆ. ಶೀಘ್ರದಲ್ಲೇ ನಾವು 100 ಪ್ರತಿಶತ ವಿದ್ಯುದ್ದೀಕರಣದ ಗುರಿಯನ್ನು ಸಹ ಪೂರ್ಣಗೊಳಿಸುತ್ತಿದ್ದೇವೆ. ಈ ವಿದ್ಯುದೀಕರಣದಿಂದಾಗಿ, ದೇಶದಲ್ಲಿ ಸುಮಾರು ಒಂದೂವರೆ ಶತಕೋಟಿ ಲೀಟರ್ ಡೀಸೆಲ್ ಉಳಿತಾಯವಾಗುತ್ತಿದೆ. ಅಸ್ಸಾಂನಲ್ಲೂ ರೈಲ್ವೆ ಜಾಲದ ವಿದ್ಯುದೀಕರಣ ವೇಗವಾಗಿ ನಡೆಯುತ್ತಿದೆ. ಇಂದು ಸಹ, ರೈಲ್ವೆಗಳ ವಿದ್ಯುದೀಕರಣಕ್ಕೆ ಸಂಬಂಧಿಸಿದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಇಲ್ಲಿ ನಡೆದಿದೆ.

ಸ್ನೇಹಿತರೆ,

ದೇಶದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ನಿರ್ಣಯಗಳ ಈಡೇರಿಕೆಯಲ್ಲಿ ಅಸ್ಸಾಂ ಕೂಡ ದೊಡ್ಡ ಪಾತ್ರ ವಹಿಸುತ್ತಿದೆ. ಅಸ್ಸಾಂ ಸೇರಿದಂತೆ ಇಡೀ ಈಶಾನ್ಯವು ಲೋವರ್ ಕೊಪಿಲಿ ಜಲವಿದ್ಯುತ್ ಯೋಜನೆಯಿಂದ ಪ್ರಯೋಜನ ಪಡೆಯುತ್ತದೆ. ಅತ್ಯಂತ ದೊಡ್ಡ ವಿಷಯವೆಂದರೆ, ಅಸ್ಸಾಂನಲ್ಲಿ ಆರಂಭವಾದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಈ ಯೋಜನೆಗಳು, ಅವು ಅಸ್ಸಾಂನ ಯುವಕರಿಗೆ ಉದ್ಯೋಗಗಳ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ, ಅಸ್ಸಾಂನ ಸಮೃದ್ಧಿಯನ್ನು ಹೆಚ್ಚಿಸುತ್ತಿವೆ.

 

ಸ್ನೇಹಿತರೆ,

ಬಿಜೆಪಿ-ಎನ್‌ಡಿಎ ಡಬಲ್ ಎಂಜಿನ್ ಸರ್ಕಾರದ ಗುರುತು ಸೂಕ್ಷ್ಮತೆ ಮತ್ತು ಉತ್ತಮ ಆಡಳಿತವಾಗಿದ್ದು, ದೇಶದ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವರ್ಗದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಇದೇ ಭಾವನೆಯೊಂದಿಗೆ  ಅಸ್ಸಾಂನ ಚಹಾ ತೋಟಗಳಲ್ಲಿ ಕೆಲಸ ಮಾಡುವ ಸ್ನೇಹಿತರಿಗೆ ಇಂದು ಬಹುದೊಡ್ಡ ಉಪಕ್ರಮ ಸಂಭವಿಸಿದೆ. ಯಾರು ಕಠಿಣ ಪರಿಶ್ರಮದಿಂದ ಅಸ್ಸಾಂನ ಜಾಗತಿಕ ಗುರುತನ್ನು ಬಲಪಡಿಸಿದ್ದಾರೋ, ಯಾರು ಚಹಾ ಪರಿಮಳದಿಂದ ಭಾರತದ ಗುರುತನ್ನು ವಿಶ್ವಾದ್ಯಂತ ಸ್ಥಾಪಿಸಿದ್ದಾರೋ, ಅವರಿಗೆ ಇಂದು ಬಿಜೆಪಿ-ಎನ್‌ಡಿಎ ಸರ್ಕಾರವು ಗೌರವ ಮತ್ತು ಸಹಾಯ ಎರಡನ್ನೂ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರಗಳು ಈ ಸ್ನೇಹಿತರ ಬಗ್ಗೆ ಕೇಳಲೇ ಇಲ್ಲ, ಅವರ ಬಳಿ  ನೂನು ದಾಖಲೆಗಳೂ ಇರಲಿಲ್ಲ. ಹಿಮಂತ ಜಿ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ; ಚಹಾ ತೋಟಗಳೊಂದಿಗೆ ಸಂಬಂಧ ಹೊಂದಿರುವ ಈ ಕುಟುಂಬಗಳಿಗೆ ನೀವು ಬಹುದೊಡ್ಡ ಕೆಲಸ ಮಾಡಿದ್ದೀರಿ. ಇಂದು ಅಸ್ಸಾಂ ಸರ್ಕಾರವು ಈ ಐತಿಹಾಸಿಕ ಅನ್ಯಾಯ ಕೊನೆಗೊಳಿಸುವ ಕೆಲಸ ಮಾಡುತ್ತಿದೆ. ಈಗ ಈ ಕುಟುಂಬಗಳು ತಮ್ಮದೇ ಆದ ಭೂಮಿಯನ್ನು ಪಡೆದಿವೆ, ಅವರಿಗೆ ಶಾಶ್ವತ ಮನೆಗಳನ್ನು ಪಡೆಯುವ ಮಾರ್ಗವೂ ಸ್ಪಷ್ಟವಾಗಿದೆ. ಇದರಿಂದ, ಚಹಾ ತೋಟಗಳಲ್ಲಿ ವಾಸಿಸುವ ಸಹೋದರಿಯರು ವಿಶೇಷವಾಗಿ ಬಹಳಷ್ಟು ಪ್ರಯೋಜನ ಪಡೆಯುತ್ತಾರೆ. ಈಗ ಚಹಾ ತೋಟಗಳಲ್ಲಿ ಕೆಲಸ ಮಾಡುವ ಕುಟುಂಬಗಳ ಮಕ್ಕಳು ಸಹ ಚೆನ್ನಾಗಿ ಅಧ್ಯಯನ ಮಾಡಿ ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ಬಿಜೆಪಿ ಸರ್ಕಾರವು ಇದಕ್ಕಾಗಿ ಸಂಪೂರ್ಣ ಸೌಲಭ್ಯಗಳನ್ನು ಸೃಷ್ಟಿಸಿದೆ. ಅದಕ್ಕಾಗಿಯೇ ಪ್ರತಿಯೊಬ್ಬ ಚಹಾ ತೋಟದ ಕೆಲಸಗಾರ ಹೇಳುತ್ತಿದ್ದಾನೆ - ಮತ್ತೊಮ್ಮೆ, ಬಿಜೆಪಿ ಸರ್ಕಾರ! ನನಗೆ ನನ್ನ ಚಹಾ ತೋಟದ ಈ ಕಾರ್ಮಿಕರನ್ನು ಗೌರವಿಸುವುದು ಎಂದರೆ ನಾನು ನನ್ನ ಋಣ ತೀರಿಸುತ್ತಿದ್ದೇನೆ ಎಂದರ್ಥ, ಏಕೆಂದರೆ ನೀವು ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಚಹಾ ಎಲೆ ದೂರದ ಗುಜರಾತ್‌ನಲ್ಲಿರುವ ನನ್ನ ಹಳ್ಳಿಯನ್ನು ತಲುಪುತ್ತಿತ್ತು, ನಾನು ಚಹಾ ಮಾರಾಟ ಮಾಡುವ ಮೂಲಕ ಇಲ್ಲಿಗೆ ತಲುಪಿದ್ದೇನೆ. ಈಗ ಹೇಳಿ, ಈ ಚಹಾ ತೋಟದ ಜನರ ಆಶೀರ್ವಾದವಿಲ್ಲದಿದ್ದರೆ ನಾನು ಇಲ್ಲಿಗೆ ತಲುಪುತ್ತಿದ್ದೆನಾ? ಈ ಚಹಾ ತೋಟದ ಜನರ ಚಹಾ ನನ್ನ ಸ್ಥಳವನ್ನು ತಲುಪಿತು, ಇಂದು ನಾನು ನಿಮ್ಮ ನಡುವೆ ಇದ್ದೇನೆ. ಮಾತೆ ಕಾಮಾಕ್ಯಳು ಯಾವ ರೀತಿಯ ಅನುಗ್ರಹ ಮಾಡಿದ್ದಾಳೆ ಎಂಬುದನ್ನು ನೀವೇ ನೋಡಿ, ಇಂದು ಮಾತೆ ಕಾಮಾಕ್ಯ ದೇವಿಯು ನನ್ನ ಚಹಾ ತೋಟದ ಸಹೋದರರ ಋಣ ತೀರಿಸಲು ನನಗೆ ಅವಕಾಶ ನೀಡಿದ್ದಾಳೆ.

ಸ್ನೇಹಿತರೆ,

ಇಂದಿನಿಂದ ಪ್ರಸಿದ್ಧ ನಿಮತಿ ಘಾಟ್ ಮತ್ತು ಬಿಶ್ವನಾಥ್ ಘಾಟ್‌ನಲ್ಲಿ ಆಧುನಿಕ ಕ್ರೂಸ್ ಟರ್ಮಿನಲ್‌ಗಳನ್ನು ನಿರ್ಮಿಸುವ ಕೆಲಸವೂ ಆರಂಭವಾಗಿದೆ. ಇದು ಕೇವಲ ಮೂಲಸೌಕರ್ಯ ಯೋಜನೆಯಲ್ಲ, ಇದು ಪ್ರವಾಸೋದ್ಯಮ ಮತ್ತು ಅಸ್ಸಾಂನಲ್ಲಿ ಸ್ಥಳೀಯ ಆರ್ಥಿಕತೆಗೆ ಹೊಸ ದಿಕ್ಕು ನೀಡುವ ಕೆಲಸವಾಗಿದೆ. ಬಿಜೆಪಿ ಸರ್ಕಾರವು ಪ್ರವಾಸೋದ್ಯಮವನ್ನು ಕೇವಲ ಪ್ರೇಕ್ಷಣೀಯ ಸ್ಥಳಗಳಿಗೆ ಸೀಮಿತಗೊಳಿಸಿಲ್ಲ, ಆದರೆ ಉದ್ಯೋಗ ಮತ್ತು ಅಭಿವೃದ್ಧಿಗೆ ಇದು ಒಂದು ದೊಡ್ಡ ಅವಕಾಶವೆಂದು ನೋಡಿದೆ. ಇದೇ ಚಿಂತನೆಯೊಂದಿಗೆ, ಬ್ರಹ್ಮಪುತ್ರ ನದಿಯಲ್ಲೂ ಜಲ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಹೆಚ್ಚಿಸಲಾಗುತ್ತಿದೆ. ಕ್ರೂಸ್ ಟರ್ಮಿನಲ್ ನಿರ್ಮಾಣದೊಂದಿಗೆ, ಬ್ರಹ್ಮಪುತ್ರದಲ್ಲಿ ಕ್ರೂಸ್‌ಗಳನ್ನು ನಡೆಸುವ ಕೆಲಸ ಮುಂದುವರಿಯುತ್ತದೆ. ದೇಶ ಮತ್ತು ವಿಶ್ವದ ಪ್ರವಾಸಿಗರು ಅಸ್ಸಾಂ ತಲುಪಲು ಸುಲಭವಾಗುತ್ತದೆ. ಕ್ರೂಸ್ ಪ್ರವಾಸೋದ್ಯಮ ಹೆಚ್ಚಾದಾಗ, ಸ್ಥಳೀಯ ಯುವಕರಿಗೆ ಉದ್ಯೋಗ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಕುಶಲಕರ್ಮಿಗಳು ಮತ್ತು ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ಜನರು ಹೊಸ ಮಾರುಕಟ್ಟೆ ಪಡೆಯುತ್ತಾರೆ. ಸಣ್ಣ ವರ್ತಕರು, ದೋಣಿ ನಾವಿಕರು, ಹೋಟೆಲ್‌ಗಳು ಮತ್ತು ಸಾರಿಗೆಗೆ ಸಂಬಂಧಿಸಿದ ಜನರ ಆದಾಯವೂ ಹೆಚ್ಚಾಗುತ್ತದೆ. ಅಂದರೆ, ಅಸ್ಸಾಂನಲ್ಲಿ ಪ್ರವಾಸೋದ್ಯಮವು ಈಗ ಸುತ್ತಾಡುವುದಕ್ಕೆ ಮಾತ್ರ ಸೀಮಿತವಾಗದೆ, ಇದು ಸ್ಥಳೀಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸಮೃದ್ಧಿಯ ಹೊಸ ಎಂಜಿನ್ ಆಗುತ್ತಿದೆ.

 

ಸ್ನೇಹಿತರೆ,

ಅಸ್ಸಾಂ ಇಂದು ನಮ್ಮ ಈಶಾನ್ಯದ ಅಂದರೆ ಅಷ್ಟಲಕ್ಷ್ಮಿಯ ಹೊಸ ಭವಿಷ್ಯದ ಮಾದರಿಯಾಗುತ್ತಿದೆ. ಇಲ್ಲಿನ ಪ್ರಗತಿಯು ಇಡೀ ಈಶಾನ್ಯಕ್ಕೆ ಹೊಸ ಆವೇಗ ನೀಡುತ್ತಿದೆ. ಕಳೆದ ದಶಕದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರ ಅಸ್ಸಾಂನಲ್ಲಿ ತಂದಿರುವ ಬದಲಾವಣೆ, ಅದರ ಪರಿಣಾಮ ನೆರೆಯ ಪಶ್ಚಿಮ ಬಂಗಾಳದಲ್ಲೂ ಗೋಚರಿಸುತ್ತಿದೆ. ಅಲ್ಲಿಯೂ ಜನರು ಬಿಜೆಪಿ-ಎನ್‌ಡಿಎಯ ಇದೇ ರೀತಿಯ ಉತ್ತಮ ಆಡಳಿತ ಬಯಸುತ್ತಿದ್ದಾರೆ. ಆದ್ದರಿಂದ, ನಾನು ಅಸ್ಸಾಂನ ಪ್ರತಿಯೊಬ್ಬ ಯುವಕ ಮತ್ತು ಪ್ರತಿಯೊಂದು ಕುಟುಂಬಕ್ಕೂ ಹೇಳುತ್ತೇನೆ, ನಾವು ಅಭಿವೃದ್ಧಿ ಹೊಂದಿದ ಅಸ್ಸಾಂಗಾಗಿ ಒಟ್ಟಾಗಿ ಕೆಲಸ ಮಾಡುತ್ತಲೇ ಇರಬೇಕು. ಆದ್ದರಿಂದ ಅಸ್ಸಾಂ ದೇಶದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮುತ್ತದೆ. ಇದೇ ಉತ್ತೇಜನದೊಂದಿಗೆ, ಎಲ್ಲಾ ಗೌರವಾನ್ವಿತ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ನಮ್ಮೊಂದಿಗೆ ಸಂಪರ್ಕ ಹೊಂದಿದ್ದರೂ, ನಾನು ಅವರಿಗೆ ಒಂದು ಒತ್ತಾಯ ಮಾಡಲು ಬಯಸುತ್ತೇನೆ - ಇಲ್ಲಿ ಉದ್ಘಾಟನೆಗೊಂಡಿರುವ ಪಿಎಂ ಏಕ್ತಾ ಮಾಲ್, ನೀವು ನಿಮ್ಮ ರಾಜ್ಯದ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿ. ನೀವು ಇಲ್ಲಿ ಸ್ವಲ್ಪ ಜಾಗವನ್ನು ತೆಗೆದುಕೊಳ್ಳಿ, ಅಸ್ಸಾಂನಲ್ಲಿ ಯಾರಾದರೂ ಕೇರಳದ ವಸ್ತುಗಳನ್ನು ಬಯಸಿದರೆ, ಅದು ಇಲ್ಲೇ ಲಭ್ಯವಿರಬೇಕು. ಮಹಾರಾಷ್ಟ್ರದ ಏನಾದರೂ ಬೇಕಾದರೆ, ಅದು ಇಲ್ಲೇ ಲಭ್ಯವಿರಬೇಕು; ಗುಜರಾತ್‌ನ ಏನಾದರೂ ಬೇಕಾದರೆ, ಅದು ಇಲ್ಲೇ ಲಭ್ಯವಿರಬೇಕು. ರಾಜಸ್ಥಾನದ ವಸ್ತುಗಳು ಬೇಕಾದರೆ, ಅದು ಇಲ್ಲೇ ಲಭ್ಯವಿರಬೇಕು. ಅಂದರೆ ಇಡೀ ದೇಶದ ಏಕತೆಯ ದೃಷ್ಟಿಕೋನ ಇರಬೇಕು. ಭಾರತದ ಪ್ರತಿಯೊಂದು ರಾಜ್ಯವು ಈ ಮಾಲ್‌ನಲ್ಲಿ ಇರಬೇಕು, ಅಸ್ಸಾಂನ ಪ್ರತಿಯೊಂದು ಜಿಲ್ಲೆಯೂ ಈ ಮಾಲ್‌ನಲ್ಲಿ ಇರಬೇಕು. ಒಂದು ಜಿಲ್ಲೆ, ಒಂದು ಉತ್ಪನ್ನ ಅಂದರೆ ಒಂದು ರೀತಿಯಲ್ಲಿ ಯಾರಾದರೂ ಏಕ್ತಾ ಮಾಲ್‌ಗೆ ಹೋದರೆ, ಅವರು ಇಡೀ ಭಾರತವನ್ನು ಅಲ್ಲಿ ಕಂಡುಕೊಳ್ಳಬೇಕು. ಇಡೀ ದೇಶವು ಅಸ್ಸಾಂ ಭೂಮಿಯಿಂದ ಒಂದು ಮಾದರಿ ಪಡೆಯುತ್ತದೆ. ಈ ಏಕ್ತಾ ಮಾಲ್‌ಗಳು ದೇಶದ ಪ್ರತಿಯೊಂದು ರಾಜ್ಯದಲ್ಲೂ ಯಶಸ್ವಿಯಾಗಿ ಸಿದ್ಧವಾಗುತ್ತವೆ ಎಂಬ ವಿಶ್ವಾಸ ನನಗಿದೆ. ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮಗೆ ಅನೇಕ, ಅನೇಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ದೇಶಾದ್ಯಂತ ನಮ್ಮೊಂದಿಗೆ ಸಂಪರ್ಕ ಹೊಂದಿರುವ ರೈತ ಸ್ನೇಹಿತರಿಗೆ ನಾನು ಮತ್ತೊಮ್ಮೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲವು ದಿನಗಳ ನಂತರ ನವರಾತ್ರಿ ಆರಂಭವಾದಾಗ, ಮಾತೆ ಕಾಮಾಕ್ಯಳ ಅನುಗ್ರಹವು ಎಲ್ಲಾ ದೇಶವಾಸಿಗಳ ಮೇಲೆ ಉಳಿಯಲಿ. ನಾವು ಎಲ್ಲಾ ಬಿಕ್ಕಟ್ಟುಗಳನ್ನು ದಾಟಿ ಹೊಸ ನಂಬಿಕೆ ಮತ್ತು ಹೊಸ ಶಕ್ತಿಯೊಂದಿಗೆ ಮುಂದುವರಿಯೊಣ ಎಂದು ನಾನು ಮಾತೆ ಕಾಮಾಕ್ಯಳನ್ನು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಅನೇಕ, ಅನೇಕ ಶುಭಾಶಯಗಳು.

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India identifies 102 GWp floating solar potential, eyes new push for reservoir-based projects

Media Coverage

India identifies 102 GWp floating solar potential, eyes new push for reservoir-based projects
NM on the go

Nm on the go

Always be the first to hear from the PM. Get the App Now!
...
PM chairs 11th Governing Council Meeting of NITI Aayog
June 11, 2026
Vision of Viksit Bharat should become the collective resolve of every State, district, block and village: PM
PM calls India's 70 crore youth its asset, urges States to transform this Demographic dividend into Development dividend
PM encourages States to create opportunities for youth and MSMEs and actively attract investments from countries with which India has signed FTAs
States to strengthen ODOP and leverage opportunities in defence manufacturing: PM
PM emphasizes that AI should be viewed as an opportunity and people should be equipped with future ready skills
PM highlights the need for coordinated efforts to address emerging social challenges such as drug abuse and cyber fraud
PM draws attention to concerns arising from El Niño and urges States to conserve water and promote natural farming
CMs/LGs/Administrators congratulate PM Modi on completing 12 years in office
States express solidarity with the Centre to withstand the global geo-political crisis and to strengthen India’s resilience
All States and 5 UTs attend meeting; first time when CMs of all 28 States participate
Theme of meeting : Inclusive Human Development for Viksit Bharat@2047

Prime Minister Shri Narendra Modi chaired the 11th Governing Council Meeting of NITI Aayog at Rashtrapati Bhavan Cultural Centre, New Delhi, earlier today. This year’s theme was Inclusive Human Development for Viksit Bharat@2047. It was attended by Chief Ministers, Lt. Governors and Administrators representing 28 States and 5 UTs. This was the first time when Chief Ministers of all 28 States participated in the Governing Council Meeting of NITI Aayog.

Prime Minister noted that at a time when many major economies are facing uncertainty and economic challenges, India’s growth story continues to inspire the world. He emphasized the need to further strengthen the nation’s resolve towards self-reliance and highlighted the importance of adopting and implementing global best practices, particularly in the renewable energy sector.

Underscoring the importance of cooperative federalism, Prime Minister stated that the Centre and the States must work together to achieve the goal of a Viksit Bharat. He stressed that the vision of Viksit Bharat should become the collective resolve of every State, district, block and village.

Highlighting the strength of India’s demographic profile, Prime Minister observed that the country’s youth constitute its greatest asset, with nearly 70 crore Indians below the age of 25 years. Calling this a demographic dividend, he urged States to focus on transforming it into a development dividend through education, skilling and capacity-building initiatives that prepare young people for future opportunities and challenges.

Referring to India’s recently concluded trade agreements with several countries, Prime Minister encouraged States to create opportunities for youth and MSMEs and to equip stakeholders to effectively leverage the benefits arising from these agreements. He also urged States to actively attract investments from partner countries.

Emphasizing women-led development, Prime Minister called upon States to work towards increasing the number of Lakhpati Didis from 3 crore to 6 crore and stressed the importance of ensuring a safe and secure environment for Nari Shakti.

Prime Minister urged States to focus on One District One Product (ODOP) initiatives and develop export-oriented strategies around it. He also identified defence manufacturing as an emerging sector where India is establishing a distinct identity and encouraged States to formulate policies to leverage the opportunities arising from its growth.

Prime Minister highlighted the need for coordinated efforts to address emerging social challenges such as drug abuse and cyber fraud through preventive measures, awareness campaigns and effective governance.

Prime Minister also drew attention to concerns arising from El Niño conditions and appealed to States to promote water conservation and encourage natural and organic farming practices. He noted that the purchase of 11 lakh tonnes of organic manure by farmers during the current Kharif season reflected growing confidence in sustainable agriculture.

Prime Minister emphasized the need to evaluate progress at the district level, particularly through aspirational district parameters. Prime Minister suggested that on similar lines, 100 districts should be identified in the field of agriculture to bring positive results. He urged the States to take lead in this pursuit so that a phenomenal change can be achieved through the aspirational approach.

Prime Minister emphasised the need for a monitoring framework and targeted 100-day and five-year goals towards achieving the vision of Viksit Bharat@2047.

Highlighting the importance of good governance, transparency, and infrastructure for attracting investment, he urged States to focus on branding, ease of doing business, and emerging opportunities in sectors such as data centres and artificial intelligence. He emphasized that AI should be viewed as an opportunity and called for greater efforts to equip people with the skills required for the future economy.

The Chief Ministers/Lt. Governors/Administrators congratulated Prime Minister Modi on completing 12 years in his office. They also expressed solidarity with the Centre to withstand the global geo-political crisis and to strengthen India’s resilience with respect to energy requirements, and sustain its growth trajectory.

Prime Minister noted that the discussions were constructive and reflected the aspirations, hopes, experiences, best practices, and challenges of the States. Prime Minister expressed his gratitude to all the CMs, LGs and Administrators for participating in the meeting and expressed confidence that Together, through cooperation, innovation, and a shared commitment to development, India can accelerate its journey towards a Viksit Bharat by 2047.