ನಾವು ದೆಹಲಿಯನ್ನು ಅಭಿವೃದ್ಧಿ ಹೊಂದುತ್ತಿರುವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುವ ಬೆಳವಣಿಗೆಯ ಮಾದರಿಯಾಗಿ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ
ಜನರ ಜೀವನವನ್ನು ಸುಗಮಗೊಳಿಸಲು ಸರಕಾರ ನಿರಂತರ ಪ್ರಯತ್ನಿಸುತ್ತಿದೆ, ಪ್ರತಿಯೊಂದು ನೀತಿ ಮತ್ತು ಪ್ರತಿಯೊಂದು ನಿರ್ಧಾರಕ್ಕೆ ಮಾರ್ಗದರ್ಶನ ನೀಡುವ ಗುರಿಯೂ ಇದೇ ಆಗಿದೆ: ಪ್ರಧಾನಮಂತ್ರಿ
ನಮಗೆ ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ: ಪ್ರಧಾನಮಂತ್ರಿ
ಮುಂದಿನ ತಲೆಮಾರಿನ ಜಿ.ಎಸ್‌.ಟಿ ಸುಧಾರಣೆಗಳು ದೇಶಾದ್ಯಂತ ನಾಗರಿಕರಿಗೆ ದ್ವಿಗುಣ ಪ್ರಯೋಜನಗಳನ್ನು ತರಲಿವೆ: ಪ್ರಧಾನಮಂತ್ರಿ
ಭಾರತವನ್ನು ಬಲಪಡಿಸಲು, ನಾವು ʻಚಕ್ರಧಾರಿ ಮೋಹನʼನಿಂದ (ಶ್ರೀ ಕೃಷ್ಣ) ಸ್ಫೂರ್ತಿ ಪಡೆಯಬೇಕು, ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ನಾವು ʻಚರಕಧಾರಿ ಮೋಹನʼ (ಮಹಾತ್ಮ ಗಾಂಧಿ) ಅವರ ಮಾರ್ಗವನ್ನು ಅನುಸರಿಸಬೇಕು: ಪ್ರಧಾನಮಂತ್ರಿ
ಸ್ಥಳೀಯರಿಗಾಗಿ ಧ್ವನಿ ಎತ್ತೋಣ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳ ಮೇಲೆ ವಿಶ್ವಾಸ ಇರಿಸೋಣ ಮತ್ತು ಅವುಗಳನ್ನೇ ಖರೀದಿಸೋಣ: ಪ್ರಧಾನಮಂತ್ರಿ

ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜೀ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜೀ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಜೀ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಅಜಯ್ ತಮ್ತಾ ಜೀ, ಹರ್ಷ ಮಲ್ಹೋತ್ರಾ ಜೀ, ದೆಹಲಿ ಮತ್ತು ಹರಿಯಾಣದ ಸಂಸದರು, ಉಪಸ್ಥಿತರಿರುವ ಸಚಿವರು, ಇತರ ಜನಪ್ರತಿನಿಧಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಎಕ್ಸ್‌ಪ್ರೆಸ್‌ವೇಯ ಹೆಸರು ದ್ವಾರಕಾ, ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಹೆಸರು ರೋಹಿಣಿ, ಇದು ಜನ್ಮಾಷ್ಟಮಿಯ ಸಂತೋಷ ಮತ್ತು ಕಾಕತಾಳೀಯವಾಗಿ ನಾನು ಕೂಡ ದ್ವಾರಕಾಧೀಶನ ಭೂಮಿಯವನು, ಇಡೀ ವಾತಾವರಣವು ಕೃಷ್ಣಮಯ (ಕೃಷ್ಣನಿಂದ ತುಂಬಿದೆ)ವಾಗಿದೆ.

ಸ್ನೇಹಿತರೇ,

ಈ ಆಗಸ್ಟ್ ತಿಂಗಳು ಸ್ವಾತಂತ್ರ್ಯ ಮತ್ತು ಕ್ರಾಂತಿಯ ಬಣ್ಣಗಳಿಂದ ಕೂಡಿದೆ. ಈ ಸ್ವಾತಂತ್ರ್ಯೋತ್ಸವದ ಮಧ್ಯೆ, ಇಂದು ದೇಶದ ರಾಜಧಾನಿ ದೆಹಲಿಯು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ, ದೆಹಲಿಗೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ನಗರ ವಿಸ್ತರಣಾ ರಸ್ತೆಯ ಸಂಪರ್ಕ ಸಿಕ್ಕಿತು. ಇದು ದೆಹಲಿ, ಗುರುಗ್ರಾಮ್ ಮತ್ತು ಇಡೀ ಎನ್.ಸಿ.ಆರ್. ಜನರ ಅನುಕೂಲತೆಯನ್ನು ಹೆಚ್ಚಿಸುತ್ತದೆ. ಕಚೇರಿ ಮತ್ತು ಕಾರ್ಖಾನೆಗೆ ಪ್ರಯಾಣ ಸುಲಭವಾಗುತ್ತದೆ, ಪ್ರತಿಯೊಬ್ಬರ ಸಮಯ ಉಳಿತಾಯವಾಗುತ್ತದೆ. ವ್ಯಾಪಾರ ವರ್ಗ ಮತ್ತು ನಮ್ಮ ರೈತರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಆಧುನಿಕ ರಸ್ತೆಗಳು ಮತ್ತು ಆಧುನಿಕ ಮೂಲಸೌಕರ್ಯಕ್ಕಾಗಿ ನಾನು ದೆಹಲಿ-ಎನ್.ಸಿ.ಆರ್. ನ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಮೊನ್ನೆ, ಆಗಸ್ಟ್ 15 ರಂದು, ಕೆಂಪು ಕೋಟೆಯಿಂದ, ನಾನು ದೇಶದ ಆರ್ಥಿಕತೆ, ದೇಶದ ಸ್ವಾವಲಂಬನೆ ಮತ್ತು ದೇಶದ ಆತ್ಮವಿಶ್ವಾಸದ ಬಗ್ಗೆ ಭರವಸೆಯಿಂದ ಮಾತನಾಡಿದೆ. ಇಂದಿನ ಭಾರತ ಏನು ಯೋಚಿಸುತ್ತಿದೆ, ಅದರ ಕನಸುಗಳೇನು, ಅದರ ನಿರ್ಣಯಗಳೇನು, ಇಡೀ ಜಗತ್ತು ಇಂದು ಇದನ್ನೆಲ್ಲ ಅನುಭವಿಸುತ್ತಿದೆ.

 

ಮತ್ತು ಸ್ನೇಹಿತರೇ,

ಜಗತ್ತು ಭಾರತದತ್ತ ನೋಡಿದಾಗ, ಮೌಲ್ಯಮಾಪನ ಮಾಡಿದಾಗ, ಅದರ ಮೊದಲ ನೋಟ ನಮ್ಮ ರಾಜಧಾನಿಯಾದ ನಮ್ಮ ದೆಹಲಿಯ ಮೇಲೆ ಬೀಳುತ್ತದೆ. ಆದ್ದರಿಂದ, ನಾವು ದೆಹಲಿಯನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಮಾಡಬೇಕು, ಅಲ್ಲಿ ಎಲ್ಲರೂ ಹೌದು, ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ರಾಜಧಾನಿ ಎಂದು ಭಾವಿಸುತ್ತಾರೆ.

ಸ್ನೇಹಿತರೇ,

ಕಳೆದ 11 ವರ್ಷಗಳಿಂದ, ಕೇಂದ್ರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರವು ವಿವಿಧ ಹಂತಗಳಲ್ಲಿ ಇದಕ್ಕಾಗಿ ನಿರಂತರವಾಗಿ ಕೆಲಸ ಮಾಡಿದೆ. ಸಂಪರ್ಕದ ಸಮಸ್ಯೆ ಇದ್ದುದರಿಂದ, ಕಳೆದ ದಶಕದಲ್ಲಿ ದೆಹಲಿ-ಎನ್‌.ಸಿ.ಆರ್‌.ನ ಸಂಪರ್ಕವು ಅಭೂತಪೂರ್ವ ಸುಧಾರಣೆಯನ್ನು ಕಂಡಿದೆ. ಇಲ್ಲಿ ಆಧುನಿಕ ಮತ್ತು ವಿಶಾಲವಾದ ಎಕ್ಸ್‌ಪ್ರೆಸ್‌ವೇಗಳಿವೆ, ದೆಹಲಿ-ಎನ್‌.ಸಿ.ಆರ್‌. ಮೆಟ್ರೋ ನೆಟ್‌ವರ್ಕ್ ವಿಷಯಕ್ಕೆ ಬಂದರೆ, ಇದು ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಪ್ರದೇಶಗಳಲ್ಲಿ ಒಂದಾಗಿದೆ. ನಮೋ ಭಾರತ್‌ನಂತಹ ಆಧುನಿಕ ಕ್ಷಿಪ್ರ ರೈಲು ವ್ಯವಸ್ಥೆ ಇಲ್ಲಿದೆ. ಅಂದರೆ, ಕಳೆದ 11 ವರ್ಷಗಳಲ್ಲಿ, ದೆಹಲಿ-ಎನ್‌.ಸಿ.ಆರ್‌.ನಲ್ಲಿ ಪ್ರಯಾಣವು ಮೊದಲಿಗಿಂತ ಸುಲಭವಾಗಿದೆ.

ಸ್ನೇಹಿತರೇ,

ದೆಹಲಿಯನ್ನು ಶ್ರೇಷ್ಠ ನಗರವನ್ನಾಗಿ ಮಾಡಲು ನಾವು ಕೈಗೊಂಡ ಕಾರ್ಯ ಮುಂದುವರೆದಿದೆ. ಇಂದಿಗೂ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಆಗಿರಲಿ ಅಥವಾ ನಗರ ವಿಸ್ತರಣಾ ರಸ್ತೆಯಾಗಿರಲಿ, ಎರಡೂ ರಸ್ತೆಗಳನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ನಂತರ, ಈಗ ನಗರ ವಿಸ್ತರಣಾ ರಸ್ತೆ ದೆಹಲಿಗೆ ಸಾಕಷ್ಟು ಸಹಾಯ ಮಾಡಲಿದೆ.

ಸ್ನೇಹಿತರೇ,

ನಗರ ವಿಸ್ತರಣಾ ರಸ್ತೆಯು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಇದು ದೆಹಲಿಯನ್ನು ಕಸದ ಬೆಟ್ಟಗಳಿಂದ ಮುಕ್ತಗೊಳಿಸುವಲ್ಲಿಯೂ ಸಹಾಯ ಮಾಡುತ್ತಿದೆ. ನಗರ ವಿಸ್ತರಣಾ ರಸ್ತೆಯ ನಿರ್ಮಾಣದಲ್ಲಿ ಲಕ್ಷಾಂತರ ಟನ್ ತ್ಯಾಜ್ಯವನ್ನು ಬಳಸಲಾಗಿದೆ. ಅಂದರೆ, ಕಸದ ಬೆಟ್ಟಗಳನ್ನು ಕಡಿಮೆ ಮಾಡುವ ಮೂಲಕ, ಆ ತ್ಯಾಜ್ಯವನ್ನು ರಸ್ತೆ ನಿರ್ಮಿಸಲು ಬಳಸಲಾಗಿದೆ ಮತ್ತು ಇದನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಭಲ್ಸ್ವಾ ಲ್ಯಾಂಡ್ ಫಿಲ್ ಅಂದರೆ ಭೂಮಿಯ ಕಂದಕ ತುಂಬಿಸುವ ಸ್ಥಳವು ಹತ್ತಿರದಲ್ಲಿದೆ. ಇಲ್ಲಿ ವಾಸಿಸುವ ಕುಟುಂಬಗಳಿಗೆ ಇದು ಎಷ್ಟು ಸಮಸ್ಯೆಯಾಗಿತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಸರ್ಕಾರ ದೆಹಲಿಯ ಜನರನ್ನು ಅಂತಹ ಪ್ರತಿಯೊಂದು ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

 

ಸ್ನೇಹಿತರೇ,

ರೇಖಾ ಗುಪ್ತಾ ಜೀ ಅವರ ನೇತೃತ್ವದಲ್ಲಿ ದೆಹಲಿಯ ಬಿಜೆಪಿ ಸರ್ಕಾರವು ಯಮುನಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂಬುದು ನನಗೆ ಸಂತೋಷ ತಂದಿದೆ. ಇಷ್ಟು ಕಡಿಮೆ ಸಮಯದಲ್ಲಿ ಯಮುನಾ ನದಿಯಿಂದ 16 ಲಕ್ಷ ಮೆಟ್ರಿಕ್ ಟನ್ ಹೂಳು ತೆಗೆಯಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅಷ್ಟೇ ಅಲ್ಲ, ಬಹಳ ಕಡಿಮೆ ಅವಧಿಯಲ್ಲಿ, ದೆಹಲಿಯಲ್ಲಿ 650 ದೇವಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಲಾಗಿದೆ ಮತ್ತು ಇದು ಮಾತ್ರವಲ್ಲದೆ, ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲಿವೆ. ಅಂದರೆ ಆಗ ಆ ಸಂಖ್ಯೆ ಸುಮಾರು ಎರಡು ಸಾವಿರವನ್ನು ದಾಟುತ್ತದೆ. ಇದು ಹಸಿರು ದೆಹಲಿ-ಸ್ವಚ್ಛ ದೆಹಲಿಯ ಮಂತ್ರವನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೇ,

ಹಲವು ವರ್ಷಗಳ ನಂತರ, ರಾಜಧಾನಿ ದೆಹಲಿಯಲ್ಲಿ ಬಿ.ಜೆ.ಪಿ ಸರ್ಕಾರ ರಚನೆಯಾಗಿದೆ. ನಾವು ದೀರ್ಘಕಾಲ ಅಧಿಕಾರದಲ್ಲಿ ಇರಲಿಲ್ಲ ಮತ್ತು ಹಿಂದಿನ ಸರ್ಕಾರಗಳು ದೆಹಲಿಯನ್ನು ಹೇಗೆ ಹಾಳುಮಾಡಿವೆ ಎಂಬುದನ್ನು ನಾವು ನೋಡುತ್ತಿದ್ದೇವೆ, ದೆಹಲಿಯನ್ನು ಎಂತಹ ಗುಂಡಿಗೆ ತಳ್ಳಲಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಬಹಳ ದೀರ್ಘಕಾಲದಿಂದ ಕಾಡುತ್ತಿರುವ ಸಮಸ್ಯೆಗಳಿಂದ ದೆಹಲಿಯನ್ನು ಹೊರತರುವುದು ಹೊಸ ಸರಕಾರಕ್ಕೆ ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಮೊದಲನೆಯದಾಗಿ, ಗುಂಡಿಯನ್ನು ತುಂಬಲು ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಮತ್ತು ನಂತರ ಬಹಳ ಕಷ್ಟದಿಂದ ಮಾಡಿದ ಕೆಲವು ಕೆಲಸಗಳು ಗೋಚರವಾಗುತ್ತವೆ. ಆದರೆ ನೀವು ದೆಹಲಿಯಲ್ಲಿ ಆಯ್ಕೆ ಮಾಡಿರುವ ತಂಡವು ಕಠಿಣ ಪರಿಶ್ರಮ ವಹಿಸಿ ದೆಹಲಿಯನ್ನು ಕಳೆದ ಹಲವಾರು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರತರುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ದೆಹಲಿ, ಹರಿಯಾಣ, ಯು.ಪಿ. ಮತ್ತು ರಾಜಸ್ಥಾನದಲ್ಲಿ ಎಲ್ಲೆಡೆ ಬಿ.ಜೆ.ಪಿ ಸರ್ಕಾರ ಇರುವಾಗ ಈ ಕಾಕತಾಳೀಯ ಮೊದಲ ಬಾರಿಗೆ ಸಂಭವಿಸಿದೆ. ಈ ಇಡೀ ಪ್ರದೇಶವು ಬಿ.ಜೆ.ಪಿಯನ್ನು, ನಮ್ಮೆಲ್ಲರನ್ನೂ ಎಷ್ಟು ಆಶೀರ್ವದಿಸಿದೆ ಎಂಬುದನ್ನು ಇದು ತೋರಿಸುತ್ತದೆ. ಆದ್ದರಿಂದ, ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು, ನಾವು ದೆಹಲಿ-ಎನ್‌.ಸಿ.ಆರ್‌. ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದಾಗ್ಯೂ, ಜನರ ಈ ಆಶೀರ್ವಾದವನ್ನು ಇನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ರಾಜಕೀಯ ಪಕ್ಷಗಳಿವೆ. ಅವರು ಜನರ ನಂಬಿಕೆ ಮತ್ತು ನೆಲದ ವಾಸ್ತವದಿಂದ ಸಂಪರ್ಕ ಕಳೆದುಕೊಂಡಿದ್ದಾರೆ; ಅವರು ದೂರ ಹೋಗಿದ್ದಾರೆ. ಕೆಲವು ತಿಂಗಳ ಹಿಂದೆ ದೆಹಲಿ ಮತ್ತು ಹರಿಯಾಣದ ಜನರನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು, ಅವರ ನಡುವೆ ದ್ವೇಷವನ್ನು ಸೃಷ್ಟಿಸಲು ಪಿತೂರಿಗಳನ್ನು ಹೇಗೆ ರೂಪಿಸಲಾಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬಲ್ಲಿರಿ. ಹರಿಯಾಣದ ಜನರು ದೆಹಲಿಯ ನೀರನ್ನು ವಿಷಪೂರಿತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ದೆಹಲಿ ಮತ್ತು ಇಡೀ ಎನ್‌.ಸಿ.ಆರ್‌. ಅನ್ನು ಅಂತಹ ನಕಾರಾತ್ಮಕ ರಾಜಕೀಯದಿಂದ ಮುಕ್ತಗೊಳಿಸಲಾಗಿದೆ. ಈಗ ನಾವು ಎನ್‌.ಸಿ.ಆರ್‌. ಪರಿವರ್ತಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದೇವೆ. ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ.

 

ಸ್ನೇಹಿತರೇ,

ಉತ್ತಮ ಆಡಳಿತವು ಬಿ.ಜೆ.ಪಿ ಸರ್ಕಾರಗಳ ಗುರುತು. ಬಿ.ಜೆ.ಪಿ ಸರ್ಕಾರಗಳಿಗೆ, ಸಾರ್ವಜನಿಕರೇ ಸರ್ವೋಚ್ಚ. ನೀವು ನಮ್ಮ ಹೈಕಮಾಂಡ್; ಜನರ ಜೀವನವನ್ನು ಸುಲಭಗೊಳಿಸುವುದು ನಮ್ಮ ನಿರಂತರ ಪ್ರಯತ್ನ. ಇದು ನಮ್ಮ ನೀತಿಗಳಲ್ಲಿ ಪ್ರತಿಫಲಿಸುತ್ತದೆ, ನಮ್ಮ ನಿರ್ಧಾರಗಳಲ್ಲಿ ಇದು ಗೋಚರಿಸುತ್ತದೆ. ಕಾಂಗ್ರೆಸ್ ಹರಿಯಾಣವನ್ನು ಆಳುತ್ತಿದ್ದ ಕಾಲವಿತ್ತು, ಆಗ ಯಾವುದೇ ಖರ್ಚಿ-ಪಾರ್ಚಿ ಇಲ್ಲದೆ (ಸ್ವಲ್ಪ ಹಣ ಅಥವಾ ಇತರ ಅನುಕೂಲಗಳನ್ನು ನೀಡದೆ) ನೇಮಕಾತಿ ಪಡೆಯುವುದು ಕಷ್ಟಕರವಾಗಿತ್ತು. ಆದರೆ ಹರಿಯಾಣದಲ್ಲಿ, ಬಿ.ಜೆ.ಪಿ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಲಕ್ಷಾಂತರ ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದೆ. ನಾಯಬ್ ಸಿಂಗ್ ಸೈನಿ ಜೀ ಅವರ ನೇತೃತ್ವದಲ್ಲಿ ಈ ಪ್ರಕ್ರಿಯೆಯು ಮುಂದುವರೆದಿದೆ.

ಸ್ನೇಹಿತರೇ,

ಇಲ್ಲಿ ದೆಹಲಿಯಲ್ಲೂ ಸಹ, ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದವರಿಗೆ, ಸ್ವಂತ ಮನೆಗಳಿಲ್ಲದವರಿಗೆ ಕಾಂಕ್ರೀಟ್ ಮನೆಗಳು ಸಿಗುತ್ತಿವೆ. ವಿದ್ಯುತ್, ನೀರು, ಅನಿಲ ಸಂಪರ್ಕವಿಲ್ಲದಿದ್ದ ಕಡೆ, ಈ ಎಲ್ಲಾ ಸೌಲಭ್ಯಗಳನ್ನು ಅಲ್ಲಿ ಒದಗಿಸಲಾಗುತ್ತಿದೆ. ಮತ್ತು ನಾನು ದೇಶದ ಬಗ್ಗೆ ಹೇಳುವುದಾದರೆ, ಕಳೆದ 11 ವರ್ಷಗಳಲ್ಲಿ, ದೇಶದಲ್ಲಿ ದಾಖಲೆ ಸಂಖ್ಯೆಯ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ನಮ್ಮ ರೈಲು ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ. ವಂದೇ ಭಾರತ್‌ನಂತಹ ಆಧುನಿಕ ರೈಲುಗಳು ನಮಗೆ ಹೆಮ್ಮೆಯನ್ನು ತರುತ್ತಿವೆ. ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಎನ್.ಸಿ.ಆರ್. ನಲ್ಲಿ ಎಷ್ಟು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ನೋಡಿ. ಈಗ ಹಿಂಡನ್ ವಿಮಾನ ನಿಲ್ದಾಣದಿಂದಲೂ ಅನೇಕ ನಗರಗಳಿಗೆ ವಿಮಾನಗಳು ಹೋಗಲು ಪ್ರಾರಂಭಿಸಿವೆ. ನೋಯ್ಡಾ ವಿಮಾನ ನಿಲ್ದಾಣವು ಶೀಘ್ರದಲ್ಲೇ ಸಿದ್ಧವಾಗಲಿದೆ.

ಸ್ನೇಹಿತರೇ,                  

ಕಳೆದ ದಶಕದಲ್ಲಿ ದೇಶವು ತನ್ನ ಹಳೆಯ ಪದ್ಧತಿಗಳನ್ನು ಬದಲಾಯಿಸಿದ್ದರಿಂದ ಮಾತ್ರ ಇದು ಸಾಧ್ಯವಾಗಿದೆ. ದೇಶಕ್ಕೆ ಅಗತ್ಯವಿರುವ ಮೂಲಸೌಕರ್ಯದ ಮಟ್ಟ, ಅದನ್ನು ನಿರ್ಮಿಸಬೇಕಾದ ವೇಗ, ಹಿಂದೆ ಇರಲಿಲ್ಲ. ಈಗ ನಮಗೆ ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಇದೆ. ದೆಹಲಿ-ಎನ್‌.ಸಿ.ಆರ್‌. ಹಲವು ದಶಕಗಳಿಂದ ಇದರ ಅಗತ್ಯವನ್ನು ಅನುಭವಿಸುತ್ತಿತ್ತು. ಯು.ಪಿ.ಎ ಸರ್ಕಾರದ ಅವಧಿಯಲ್ಲಿ, ಇದರ ಬಗ್ಗೆ ಫೈಲ್‌ಗಳು ಚಲಿಸಲು ಪ್ರಾರಂಭಿಸಿದವು. ಆದರೆ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ಕೆಲಸ ಪ್ರಾರಂಭವಾಯಿತು. ಕೇಂದ್ರದಲ್ಲಿ ಮತ್ತು ಹರಿಯಾಣದಲ್ಲಿ ಬಿಜೆಪಿ ಸರ್ಕಾರಗಳು ರಚನೆಯಾದಾಗ ಇದು ಸಾಧ್ಯವಾಯಿತು. ಇಂದು ಈ ರಸ್ತೆಗಳು ಬಹಳ ಹೆಮ್ಮೆಯಿಂದ ಸೇವೆಗಳನ್ನು ಒದಗಿಸುತ್ತಿವೆ.

 

ಸ್ನೇಹಿತರೇ,

ಅಭಿವೃದ್ಧಿ ಯೋಜನೆಗಳ ಬಗ್ಗೆ ಈ ರೀತಿಯ ಅಸಡ್ಡೆ ಪರಿಸ್ಥಿತಿ ದೆಹಲಿ-ಎನ್‌.ಸಿ.ಆರ್‌.ನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿತ್ತು. ಮೊದಲನೆಯದಾಗಿ, ಮೂಲಸೌಕರ್ಯಕ್ಕಾಗಿ ಬಜೆಟ್ ಹಿಂದೆ ತುಂಬಾ ಕಡಿಮೆ ಇತ್ತು. ಮಂಜೂರಾದ ಯೋಜನೆಗಳು ಸಹ ವರ್ಷಗಳವರೆಗೆ ಪೂರ್ಣಗೊಳ್ಳುತ್ತಿರಲಿಲ್ಲ. ಕಳೆದ 11 ವರ್ಷಗಳಲ್ಲಿ, ನಾವು ಮೂಲಸೌಕರ್ಯ ಬಜೆಟ್ 6 ಪಟ್ಟು ಹೆಚ್ಚಿಸಿದ್ದೇವೆ. ಈಗ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವತ್ತ ಒತ್ತು ನೀಡಲಾಗಿದೆ. ಅದರಿಂದಾಗಿಯೇ ಇಂದು ದ್ವಾರಕಾ ಎಕ್ಸ್‌ಪ್ರೆಸ್‌ವೇಯಂತಹ ಯೋಜನೆಗಳು ಪೂರ್ಣಗೊಳ್ಳುತ್ತಿವೆ.

ಮತ್ತು ಸಹೋದರರೇ ಮತ್ತು  ಸಹೋದರಿಯರೇ,

ಈ ಎಲ್ಲಾ ಹಣವನ್ನು ಹೂಡಿಕೆ ಮಾಡುವುದರಿಂದ, ಅದು ಸೌಲಭ್ಯಗಳನ್ನು ಸೃಷ್ಟಿಸುವುದಲ್ಲದೆ, ಈ ಯೋಜನೆಗಳು ಅಪಾರ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಇಷ್ಟೊಂದು ನಿರ್ಮಾಣ ಕಾರ್ಯಗಳು ನಡೆದಾಗ, ಕಾರ್ಮಿಕರಿಂದ ಎಂಜಿನಿಯರ್‌ಗಳವರೆಗೆ ಲಕ್ಷಾಂತರ ಜನರು ಉದ್ಯೋಗ ಪಡೆಯುತ್ತಾರೆ. ಬಳಸಿದ ನಿರ್ಮಾಣ ಸಾಮಗ್ರಿಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಉದ್ಯೋಗಗಳು ಹೆಚ್ಚಾಗುತ್ತವೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ.

ಸ್ನೇಹಿತರೇ,

ದೀರ್ಘಕಾಲ ಸರ್ಕಾರಗಳನ್ನು ನಡೆಸುತ್ತಿರುವವರಿಗೆ, ಜನರನ್ನು ಆಳುವುದು ಅತ್ಯಂತ ದೊಡ್ಡ ಗುರಿಯಾಗಿತ್ತು. ಜನರ ಜೀವನದಲ್ಲಿ ಸರ್ಕಾರದ ಒತ್ತಡ ಮತ್ತು ಹಸ್ತಕ್ಷೇಪ ಎರಡನ್ನೂ ಕೊನೆಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ದೆಹಲಿಯಲ್ಲಿ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂಬುದಕ್ಕೆ ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ಇದನ್ನು ಕೇಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ದೆಹಲಿಯಲ್ಲಿ ನಮ್ಮ ಸ್ವಚ್ಛತಾ ಮಿತ್ರರು, ಶುಚಿಗೊಳಿಸುವ ಕೆಲಸದಲ್ಲಿ ತೊಡಗಿರುವ ಸಹೋದ್ಯೋಗಿಗಳು, ಅವರೆಲ್ಲರೂ ದೆಹಲಿಯಲ್ಲಿ ಬಹಳ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಾವು ಬೆಳಿಗ್ಗೆ ಎದ್ದ ತಕ್ಷಣ, ನಾವು ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಆದರೆ ಹಿಂದಿನ ಸರ್ಕಾರಗಳು ಈ ಜನರನ್ನು ತಮ್ಮ ಗುಲಾಮರೆಂದು ಪರಿಗಣಿಸಿದ್ದವು. ನಾನು ನನ್ನ ಈ ಸಣ್ಣ ಶುಚಿಗೊಳಿಸುವ ಸಹೋದರರ ಬಗ್ಗೆ ಮಾತನಾಡುತ್ತಿದ್ದೇನೆ. ಸಂವಿಧಾನವನ್ನು ತಲೆಯ ಮೇಲೆ ಹೊತ್ತುಕೊಂಡು ನೃತ್ಯ ಮಾಡುವ ಈ ಜನರು, ಅವರು ಸಂವಿಧಾನವನ್ನು ಹೇಗೆ ಪುಡಿಮಾಡಿದರು, ಬಾಬಾ ಸಾಹೇಬರ ಭಾವನೆಗಳಿಗೆ ಅವರು ಹೇಗೆ ದ್ರೋಹ ಬಗೆದರು, ಇಂದು ನಾನು ನಿಮಗೆ ಆ ಸತ್ಯವನ್ನು ಹೇಳಲಿದ್ದೇನೆ. ನಾನು ಹೇಳುವುದನ್ನು ಕೇಳಿ ನೀವು ದಿಗ್ಭ್ರಮೆಗೊಳ್ಳುವಿರಿ. ದೆಹಲಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುವ ನನ್ನ ಸಹೋದರ ಸಹೋದರಿಯರಿಗೆ, ಈ ದೇಶದಲ್ಲಿ, ದೆಹಲಿಯಲ್ಲಿ ಅವರಿಗೆ ಅಪಾಯಕಾರಿ ಕಾನೂನು ಇತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಲ್ಲಿ ಒಂದು ವಿಷಯವನ್ನು ಬರೆಯಲಾಗಿದೆ, ನೈರ್ಮಲ್ಯ ಕಾರ್ಮಿಕರು ಮಾಹಿತಿ ನೀಡದೆ ಕೆಲಸಕ್ಕೆ ಬರದಿದ್ದರೆ, ಅವರನ್ನು ಒಂದು ತಿಂಗಳು ಜೈಲಿಗೆ ಹಾಕಬಹುದು. ನೀವೇ ಹೇಳಿ, ನೀವೇ ಯೋಚಿಸಿ, ಈ ಜನರು ಸಫಾಯಿ ಕರ್ಮಚಾರಿಗಳ ಬಗ್ಗೆ ಏನು ಯೋಚಿಸುತ್ತಿದ್ದರು. ನೀವು ಅವರನ್ನು ಜೈಲಿಗೆ ಹಾಕುತ್ತೀರಾ, ಅದೂ ಒಂದು ಸಣ್ಣ ತಪ್ಪಿಗೆ? ಇಂದು ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡದಾಗಿ ಮಾತನಾಡುವವರು ದೇಶದಲ್ಲಿ ಅಂತಹ ಅನೇಕ ನಿಯಮಗಳು ಮತ್ತು ಕಾನೂನುಗಳನ್ನು ನಿರ್ವಹಿಸುತ್ತಿದ್ದರು. ಅಂತಹ ತಪ್ಪು ಕಾನೂನುಗಳನ್ನು ಅಗೆದು ಹುಡುಕುತ್ತಿರುವವರು ಮತ್ತು ಅವುಗಳನ್ನು ತೆಗೆದುಹಾಕುತ್ತಿರುವವರು ಮೋದಿ. ನಮ್ಮ ಸರ್ಕಾರ ಈಗಾಗಲೇ ಅಂತಹ ನೂರಾರು ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು ಈ ಅಭಿಯಾನ ಮುಂದುವರೆದಿದೆ.

 

ಸ್ನೇಹಿತರೇ,

ನಮಗೆ, ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆ. ಆದ್ದರಿಂದ, ನಾವು ನಿರಂತರವಾಗಿ ಸುಧಾರಣೆಗೆ ಒತ್ತು ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ, ಜೀವನ ಮತ್ತು ವ್ಯವಹಾರ ಎರಡೂ ಎಲ್ಲವೂ ಸುಲಭವಾಗುವಂತೆ ನಾವು ಅನೇಕ ದೊಡ್ಡ ಸುಧಾರಣೆಗಳನ್ನು ಮಾಡಲಿದ್ದೇವೆ.

ಸ್ನೇಹಿತರೇ,

ಈ ಅನುಕ್ರಮದಲ್ಲಿ, ಮುಂದಿನ ಪೀಳಿಗೆಯ ಸುಧಾರಣೆ ಜಿ.ಎಸ್‌.ಟಿಯಲ್ಲಿ ಆಗಲಿದೆ. ಈ ದೀಪಾವಳಿಯಲ್ಲಿ, ದೇಶವಾಸಿಗಳು ಜಿ.ಎಸ್‌.ಟಿ ಸುಧಾರಣೆಯಿಂದ ಡಬಲ್ ಬೋನಸ್ ಪಡೆಯಲಿದ್ದಾರೆ. ನಾವು ಅದರ ಸಂಪೂರ್ಣ ಸ್ವರೂಪವನ್ನು ರಾಜ್ಯಗಳಿಗೆ ಕಳುಹಿಸಿದ್ದೇವೆ. ಭಾರತ ಸರ್ಕಾರದ ಈ ಉಪಕ್ರಮದೊಂದಿಗೆ ಎಲ್ಲಾ ರಾಜ್ಯಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಈ ದೀಪಾವಳಿ ಹೆಚ್ಚು ಅದ್ಭುತವಾಗುವಂತೆ ನಾವು ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಜಿ.ಎಸ್‌.ಟಿಯನ್ನು ಮತ್ತಷ್ಟು ಸರಳೀಕರಿಸುವುದು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸುವುದು ನಮ್ಮ ಪ್ರಯತ್ನ. ಪ್ರತಿಯೊಂದು ಕುಟುಂಬ, ಬಡವರು ಮತ್ತು ಮಧ್ಯಮ ವರ್ಗ, ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ಉದ್ಯಮಿ, ಪ್ರತಿಯೊಬ್ಬ ವ್ಯಾಪಾರಿ ಮತ್ತು ಉದ್ಯಮಿ ಇದರಿಂದ ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೇ,

ಭಾರತದ ಅತ್ಯಂತ ದೊಡ್ಡ ಶಕ್ತಿ ನಮ್ಮ ಪ್ರಾಚೀನ ಸಂಸ್ಕೃತಿ, ನಮ್ಮ ಪ್ರಾಚೀನ ಪರಂಪರೆ. ಈ ಸಾಂಸ್ಕೃತಿಕ ಪರಂಪರೆಯು ಜೀವನ ತತ್ವಶಾಸ್ತ್ರ, ಜೀವಂತ ತತ್ವಶಾಸ್ತ್ರವನ್ನು ಹೊಂದಿದೆ ಮತ್ತು ಈ ಜೀವನ ತತ್ವಶಾಸ್ತ್ರದಲ್ಲಿ ನಾವು ಚಕ್ರಧಾರಿ ಮೋಹನ ಮತ್ತು ಚರಖಾಧಾರಿ ಮೋಹನ ಇಬ್ಬರನ್ನೂ ತಿಳಿದುಕೊಳ್ಳುವ ಅವಕಾಶ ಪಡೆದಿದ್ದೇವೆ. ಕಾಲಕಾಲಕ್ಕೆ, ನಾವು ಚಕ್ರಧಾರಿ ಮೋಹನನಿಂದ ಚರಖಾಧಾರಿ ಮೋಹನರವರೆಗೆ ಇಬ್ಬರನ್ನೂ ಅನುಭವವನ್ನು ಪಡೆಯುತ್ತೇವೆ. ಚಕ್ರಧಾರಿ ಮೋಹನ ಎಂದರೆ ಸುದರ್ಶನ ಚಕ್ರವನ್ನು ಹೊತ್ತ ಶ್ರೀಕೃಷ್ಣ, ಅವರು ಜನರಿಗೆ ಸುದರ್ಶನ ಚಕ್ರದ ಶಕ್ತಿಯ ಅನುಭವವನ್ನು ನೀಡಿದರು. ಮತ್ತು ಚರಖಾಧಾರಿ ಮೋಹನ ಎಂದರೆ ಮಹಾತ್ಮ ಗಾಂಧಿ, ಅವರು ಚರಖಾವನ್ನು ತಿರುಗಿಸುವ ಮೂಲಕ ಜನರಿಗೆ ಸ್ವದೇಶಿ ಶಕ್ತಿಯ ಅನುಭವ ಲಭ್ಯವಾಗುವಂತೆ ಮಾಡಿದರು.

ಸ್ನೇಹಿತರೇ,

ಭಾರತವನ್ನು ಸಬಲೀಕರಣಗೊಳಿಸಲು, ನಾವು ಚಕ್ರಧಾರಿ ಮೋಹನರಿಂದ ಸ್ಫೂರ್ತಿ ಪಡೆದು ಮುಂದುವರಿಯಬೇಕು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ನಾವು ಚರಖಾಧಾರಿ ಮೋಹನರ ಮಾರ್ಗವನ್ನು ಅನುಸರಿಸಬೇಕು. ನಾವು ವೋಕಲ್ ಫಾರ್ ಲೋಕಲ್ ಅನ್ನು ನಮ್ಮ ಜೀವನ ಮಂತ್ರವನ್ನಾಗಿ ಮಾಡಿಕೊಳ್ಳಬೇಕು.

 

ಸ್ನೇಹಿತರೇ,

ಈ ಕೆಲಸ ನಮಗೆ ಕಷ್ಟಕರವಲ್ಲ. ನಾವು ಪ್ರತಿಜ್ಞೆ ಮಾಡಿದಾಗಲೆಲ್ಲಾ ಅದನ್ನು ಮಾಡಿದ್ದೇವೆ. ಖಾದಿಗೆ ಒಂದು ಸಣ್ಣ ಉದಾಹರಣೆ ನೀಡುತ್ತೇನೆ, ಖಾದಿ ಅಳಿವಿನ ಅಂಚಿಗೆ ತಲುಪಿತ್ತು, ಅದರ ಬಗ್ಗೆ ಕೇಳಲು ಯಾರೂ ಇರಲಿಲ್ಲ, ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ನಾನು ದೇಶಕ್ಕೆ ಮನವಿ ಮಾಡಿದೆ, ದೇಶವು ಪ್ರತಿಜ್ಞೆ ಮಾಡಿತು ಮತ್ತು ಅದರ ಫಲಿತಾಂಶವೂ ಕಂಡುಬಂದಿದೆ. ಒಂದು ದಶಕದಲ್ಲಿ ಖಾದಿ ಮಾರಾಟವು ಸುಮಾರು 7 ಪಟ್ಟು ಹೆಚ್ಚಾಗಿದೆ. ದೇಶದ ಜನರು ಸ್ಥಳೀಯರಿಗೆ ಆದ್ಯತೆ ಎಂಬ ಮಂತ್ರದೊಂದಿಗೆ ಖಾದಿಯನ್ನು ಅಳವಡಿಸಿಕೊಂಡಿದ್ದಾರೆ. ಅದೇ ರೀತಿ, ದೇಶವು ಮೇಡ್ ಇನ್ ಇಂಡಿಯಾ ಫೋನ್‌ಗಳ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದೆ. 11 ವರ್ಷಗಳ ಹಿಂದೆ, ನಮಗೆ ಅಗತ್ಯವಿರುವ ಹೆಚ್ಚಿನ ಫೋನ್‌ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು, ಹೆಚ್ಚಿನ ಭಾರತೀಯರು ಮೇಡ್ ಇನ್ ಇಂಡಿಯಾ ಫೋನ್‌ಗಳನ್ನು ಬಳಸುತ್ತಾರೆ. ಇಂದು ನಾವು ಪ್ರತಿ ವರ್ಷ 30-35 ಕೋಟಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿದ್ದೇವೆ, 30-35 ಕೋಟಿ, 30-35 ಕೋಟಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿದ್ದೇವೆ ಮತ್ತು ಅವುಗಳನ್ನು ರಫ್ತು ಮಾಡುತ್ತಿದ್ದೇವೆ.

ಸ್ನೇಹಿತರೇ,

ನಮ್ಮ ಮೇಡ್ ಇನ್ ಇಂಡಿಯಾ, ನಮ್ಮ ಯು.ಪಿ.ಐ, ಇಂದು ವಿಶ್ವದ ಅತಿದೊಡ್ಡ ನೈಜ ಸಮಯದ ಡಿಜಿಟಲ್ ಪಾವತಿ ವೇದಿಕೆಯಾಗಿದೆ, ಇದು ವಿಶ್ವದಲ್ಲಿಯೇ ಅತಿದೊಡ್ಡದಾಗಿದೆ. ರೈಲ್ವೆ ಬೋಗಿಗಳಾಗಲಿ ಅಥವಾ ಭಾರತದಲ್ಲಿ ತಯಾರಾದ ಲೋಕೋಮೋಟಿವ್‌ಗಳಾಗಲಿ, ಈಗ ಪ್ರಪಂಚದ ಇತರ ದೇಶಗಳಲ್ಲಿಯೂ ಅವುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಸ್ನೇಹಿತರೇ,

ರಸ್ತೆ ಮೂಲಸೌಕರ್ಯ, ಮೂಲಸೌಕರ್ಯ ವಿಷಯಕ್ಕೆ ಬಂದಾಗ, ಭಾರತವು ಗತಿ ಶಕ್ತಿ ವೇದಿಕೆಯನ್ನು ರಚಿಸಿದೆ, ಅದು 1600 ಪದರಗಳನ್ನು ಹೊಂದಿದೆ, ಸಾವಿರದ ಆರುನೂರು ಪದರಗಳ ದತ್ತಾಂಶವನ್ನು ಹೊಂದಿದೆ ಮತ್ತು ಯಾವುದೇ ಯೋಜನೆಯು ಯಾವ ರೀತಿಯ ಪರಿಸ್ಥಿತಿಗಳ ಮೂಲಕ ಹೋಗಬೇಕಾಗುತ್ತದೆ, ಯಾವ ನಿಯಮಗಳನ್ನು ಅನುಸರಿಸಬೇಕು, ಅದು ವನ್ಯಜೀವಿಗಳಿರಲಿ ಅಥವಾ ಅರಣ್ಯವಿರಲಿ, ಅದು ನದಿಯಾಗಿರಲಿ ಅಥವಾ ಚರಂಡಿಯಾಗಿರಲಿ, ಇವೆಲ್ಲವನ್ನೂ ನಿಮಿಷಗಳಲ್ಲಿ ಕಂಡುಕೊಳ್ಳಬಹುದು ಮತ್ತು ಯೋಜನೆಗಳು ವೇಗವಾಗಿ ಮುಂದುವರಿಯುತ್ತವೆ. ಇಂದು, ಗತಿ ಶಕ್ತಿಯ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ರಚಿಸಲಾಗಿದೆ ಮತ್ತು ಗತಿ ಶಕ್ತಿಯು ದೇಶದ ಪ್ರಗತಿಗೆ ಅತ್ಯಂತ ಶಕ್ತಿಶಾಲಿ ಮಾರ್ಗವಾಗಿದೆ.

ಸ್ನೇಹಿತರೇ,

ಒಂದು ದಶಕದ ಹಿಂದಿನವರೆಗೂ, ನಾವು ವಿದೇಶಗಳಿಂದ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ನಾವು ಭಾರತೀಯರು ಸ್ಥಳೀಯರಿಗೆ ಆದ್ಯತೆ ನೀಡಲು ಪ್ರತಿಜ್ಞೆ ಮಾಡಿದಾಗ, ಭಾರತದಲ್ಲಿ ಆಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಪ್ರಾರಂಭಿಸಿದ್ದು ಮಾತ್ರವಲ್ಲದೆ, ಇಂದು ನಾವು ಪ್ರಪಂಚದ 100 ಕ್ಕೂ ಹೆಚ್ಚು ದೇಶಗಳಿಗೆ ಆಟಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿದ್ದೇವೆ.

 

ಸ್ನೇಹಿತರೇ,

ಆದ್ದರಿಂದ, ನಾನು ನಿಮ್ಮೆಲ್ಲರನ್ನೂ, ಎಲ್ಲಾ ದೇಶವಾಸಿಗಳನ್ನು, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ನಾವು ನಂಬಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇನೆ. ನೀವು ಭಾರತೀಯರಾಗಿದ್ದರೆ, ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಖರೀದಿಸಿ, ಈಗ ಹಬ್ಬದ ಋತು ನಡೆಯುತ್ತಿದೆ. ನಿಮ್ಮ ಸ್ಥಳೀಯ ಉತ್ಪನ್ನಗಳ ಸಂತೋಷವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ, ನೀವು ನಿರ್ಧರಿಸಿ, ನೀವು ಭಾರತದಲ್ಲಿ ತಯಾರಾದ, ಭಾರತೀಯರು ತಯಾರಿಸಿದ ಉಡುಗೊರೆಗಳನ್ನು ನೀಡಬೇಕು ಎಂಬುದಾಗಿ.

ಸ್ನೇಹಿತರೇ,

ಇಂದು, ನಾನು ವ್ಯಾಪಾರಿ ಸಮುದಾಯ ಮತ್ತು ಅಂಗಡಿಯವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ; ಒಂದು ಸಮಯದಲ್ಲಿ, ನೀವು ವಿದೇಶದಲ್ಲಿ ತಯಾರಿಸಿದ ಸರಕುಗಳನ್ನು ಮಾರಾಟ ಮಾಡಿರಬಹುದು, ಇದರಿಂದ ನೀವು ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ನೀವು ಭಾವಿಸಿರಬಹುದು. ಆಗ ನೀವು ಏನೇ ಮಾಡಿದ್ದರೂ ಈಗ ಅದು ಮುಗಿದ ಅಧ್ಯಾಯ, ಆದರೆ ಈಗ ನೀವು ಸಹ ವೋಕಲ್ ಫಾರ್ ಲೋಕಲ್ ಮಂತ್ರದ ಮೇಲೆ ನನ್ನನ್ನು ಬೆಂಬಲಿಸಬೇಕು. ನಿಮ್ಮ ಈ ಒಂದು ಹೆಜ್ಜೆ ದೇಶಕ್ಕೆ ಮಾತ್ರವಲ್ಲದೆ ನಿಮ್ಮ ಕುಟುಂಬ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದು ವಸ್ತುವು ದೇಶದ ಕೆಲವು ಕಾರ್ಮಿಕರು ಅಥವಾ ಕೆಲವು ಬಡವರಿಗೆ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದಕ್ಕೂ ಬರುವ ಹಣವು ಭಾರತದಲ್ಲಿಯೇ ಉಳಿಯುತ್ತದೆ ಮತ್ತು ಅದನ್ನು ಕೆಲವು ಭಾರತೀಯರೇ ಪಡೆಯುತ್ತಾರೆ. ಅಂದರೆ ಇದು ಭಾರತೀಯರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ, ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಆದ್ದರಿಂದ ಪೂರ್ಣ ಹೆಮ್ಮೆಯಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ.

 

ಸ್ನೇಹಿತರೇ,

ಇಂದು, ನಾನು ವ್ಯಾಪಾರಿ ಸಮುದಾಯ ಮತ್ತು ಅಂಗಡಿಯವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ; ಒಂದು ಸಮಯದಲ್ಲಿ, ನೀವು ವಿದೇಶದಲ್ಲಿ ತಯಾರಿಸಿದ ಸರಕುಗಳನ್ನು ಮಾರಾಟ ಮಾಡಿರಬಹುದು, ಇದರಿಂದ ನೀವು ಸ್ವಲ್ಪ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ನೀವು ಭಾವಿಸಿರಬಹುದು. ಆಗ ನೀವು ಏನೇ ಮಾಡಿದ್ದರೂ ಈಗ ಅದು ಮುಗಿದ ಅಧ್ಯಾಯ, ಆದರೆ ಈಗ ನೀವು ಸಹ ವೋಕಲ್ ಫಾರ್ ಲೋಕಲ್ ಮಂತ್ರದ ಮೇಲೆ ನನ್ನನ್ನು ಬೆಂಬಲಿಸಬೇಕು. ನಿಮ್ಮ ಈ ಒಂದು ಹೆಜ್ಜೆ ದೇಶಕ್ಕೆ ಮಾತ್ರವಲ್ಲದೆ ನಿಮ್ಮ ಕುಟುಂಬ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದು ವಸ್ತುವು ದೇಶದ ಕೆಲವು ಕಾರ್ಮಿಕರು ಅಥವಾ ಕೆಲವು ಬಡವರಿಗೆ ಪ್ರಯೋಜನವನ್ನು ನೀಡುತ್ತದೆ. ನೀವು ಮಾರಾಟ ಮಾಡುವ ಪ್ರತಿಯೊಂದಕ್ಕೂ ಬರುವ ಹಣವು ಭಾರತದಲ್ಲಿಯೇ ಉಳಿಯುತ್ತದೆ ಮತ್ತು ಅದನ್ನು ಕೆಲವು ಭಾರತೀಯರೇ ಪಡೆಯುತ್ತಾರೆ. ಅಂದರೆ ಇದು ಭಾರತೀಯರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ, ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಆದ್ದರಿಂದ ಪೂರ್ಣ ಹೆಮ್ಮೆಯಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ.

 

ಸ್ನೇಹಿತರೇ,

ಇಂದು, ದೆಹಲಿಯು ಭಾರತದ ಭೂತಕಾಲವನ್ನು ಅದರ ಭವಿಷ್ಯದೊಂದಿಗೆ ಒಟ್ಟುಗೂಡಿಸುವ ರಾಜಧಾನಿಯಾಗುತ್ತಿದೆ. ಕೆಲವೇ ದಿನಗಳ ಹಿಂದೆ, ದೇಶವು ಹೊಸ ಕೇಂದ್ರ ಸಚಿವಾಲಯ, ಕರ್ತವ್ಯ ಭವನವನ್ನು ಪಡೆದುಕೊಂಡಿದೆ. ಹೊಸ ಸಂಸತ್ತನ್ನು ನಿರ್ಮಿಸಲಾಗಿದೆ. ಕರ್ತವ್ಯ ಮಾರ್ಗವು ಹೊಸ ರೂಪದಲ್ಲಿ ನಮ್ಮ ಮುಂದೆ ಇದೆ. ಭಾರತ್ ಮಂಟಪ ಮತ್ತು ಯಶೋಭೂಮಿಯಂತಹ ಆಧುನಿಕ ಸಮ್ಮೇಳನ ಕೇಂದ್ರಗಳು ಇಂದು ದೆಹಲಿಯ ವೈಭವವನ್ನು ಹೆಚ್ಚಿಸುತ್ತಿವೆ. ಇವು ದೆಹಲಿಯನ್ನು ವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತಮ ಸ್ಥಳವನ್ನಾಗಿ ಮಾಡುತ್ತಿವೆ. ಈ ಎಲ್ಲ ಜನರ ಶಕ್ತಿ ಮತ್ತು ಸ್ಫೂರ್ತಿಯಿಂದ ನಮ್ಮ ದೆಹಲಿ ವಿಶ್ವದ ಅತ್ಯುತ್ತಮ ರಾಜಧಾನಿಯಾಗಿ ಹೊರಹೊಮ್ಮುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಹಾರೈಕೆಯೊಂದಿಗೆ ಈ ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತೊಮ್ಮೆ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಇಡೀ ಪ್ರದೇಶವು ಅಭಿವೃದ್ಧಿ ಹೊಂದಲಿದೆ ಎಂದು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Safran’s Hyderabad engine MRO starts operations, targets 300 LEAP engines annually

Media Coverage

Safran’s Hyderabad engine MRO starts operations, targets 300 LEAP engines annually
NM on the go

Nm on the go

Always be the first to hear from the PM. Get the App Now!
...
Text of PM’s speech at the launch of ‘Nasha Mukt Yuva for Viksit Bharat Sankalp Abhiyan’ via VC
August 02, 2026


नमस्‍कार!

आज हम सभी देशवासी एक महान और महत्वपूर्ण संकल्प के लिए एकजुट हुए हैं। इस संकल्प को लेकर, इसक कार्यक्रम से जुड़े सभी पूज्य संतजन, अलग-अलग राज्यों का प्रतिनिधित्व कर रहे सभी राज्यपाल, सभी मुख्यमंत्री, अन्‍य सभी जनप्रतिनिधिगण, 28 हजार से अधिक स्थानों से जुड़े एक करोड़ से युवा साथी, मैं आज इस शुभ घड़ी पर, शुभ संकल्प के लिए करोड़ों-करोड़ों नौजवानों का विशेष रूप से अभिनंदन करता हूं। आज हम सभी जिस अभियान के साक्षी बन रहे हैं, वह अभियान व्यक्ति के लिए हैं, परिवार के लिए हैं, समाज के लिए भी है और सबसे बड़ी बात है, यह राष्‍ट्र के लिए है।

साथियों,

विकसित भारत संकल्प अभियान के लिए ‘नशा मुक्त युवा’ इस मूवमेंट का नाम ही इसके संकल्प को स्पष्ट करता है, क्योंकि आज जब देश ने विकसित भारत का लक्ष्य तय किया है, तो इसके लिए आवश्यक है, देश का युवा तन से स्वस्थ हो, मन से स्वस्थ हो, आत्‍मविश्‍वास से भरपूर हो और ड्रग्स जैसी घातक आदत से हमेशा-हमेशा दूर ही रहे, दूर हो। यही इस अभियान का उद्देश्य है। इसलिए हम सबको यह संकल्प लेना है, हमारे युवा नशे और ड्रग्स के खतरों को समझे, हर तरह से जागरूक रहे और उससे दूर रहें और इस संकल्प में अब ‘राष्‍ट्रीय नशा मुक्त युवा’ अभियान की बड़ी भूमिका है।

साथियों,

काशी का सांसद होने के नाते मुझे खुशी है कि यह अभियान का पायलट प्रोजेक्ट के तौर पर पिछले साल काशी की पवित्र धरती से शुरू हुआ था। इसलिए वैज्ञानिक स्‍पष्‍टता के साथ-साथ इसमें आध्यात्मिक ऊर्जा भी है, संतों के आशीर्वाद भी हैं और महान सांस्कृतिक विरासत भी हैं। इसमें वह सांस्कृतिक समर्पण भी है, जिसने सदियों से नशे को खारिज किया है। यही वजह है, देश के 125 से अधिक आध्यात्मिक संगठन करोड़ों-करोड़ों देशवासियों के हित के लिए आज हमारे साथ जुड़ चुके हैं। सामाजिक संगठनों ने, NGOs ने इस दिशा में संकल्प लिया है। सबने मिलकर ‘काशी डिक्लेरेशन’ के जरिए रोडमैप तैयार किया है और आज हम देख रहे हैं, काशी से उठा वो कल्याणकारी विचार अब यह एक नेशनल प्रोजेक्ट्स बन गया है। आज से देशभर में ‘नशा मुक्त युवा’ अभियान आरंभ हो रहा है।

साथियों,

कुछ काम ऐसे होते हैं, जो व्यक्तिगत रूप से कोई प्रयास करे, तो कभी-कभी निराश हो जाता है, थकान महसूस करता है, लंबी दूरी चलने में मन तैयार नहीं होता है, लेकिन जब सामूहिक अभियान बन जाता है, कंधे से कंधा मिलाकर करोड़ों लोग चल पड़ते हैं, तो ऐसे सभी जो व्यक्तिगत रूप से अपने आप कुछ नहीं कर पाते हैं, उनको भी एक नई ऊर्जा मिल जाती है। सामूहिकता की एक ताकत होती है और आज उस ताकत को लेकर के यह अभियान हर युवा मन को छूने वाला है। थोड़ी देर पहले देश के लाखों युवाओं ने नशा मुक्ति की शपथ ली है। आपने अपने जीवन को नशे से दूर रखने का संकल्प लिया है। आपने अपने स्कूल, अपने कॉलेज और अपने समाज में नशा मुक्ति का संदेश पहुंचाने का संकल्प लिया है।

साथियों,

आज लिया गया यह संकल्प आने वाले 100 सप्ताह तक लगातार ऐसे ही आगे बढ़ेगा। हर रविवार, कला, संस्‍कृति, स्पोर्ट्स, मेडिटेशन, आध्यात्म और सेवा से जुड़ी गतिविधियां होंगी। नशा मुक्ति का संदेश नए लोगों तक पहुंचेगा। आने वाले 100 रविवार नशा मुक्त भारत की दिशा में 100 मजबूत कदम होंगे, हंड्रेड मजबूत स्‍टेप्‍स।

साथियों,

आज हजारों स्कूलों, कॉलेजों और यूनिवर्सिटीज़ के लाखों विद्यार्थी इस कार्यक्रम से ऑनलाइन जुड़े हैं। माई भारत के वॉलंटियर्स भी लाखों की तादाद में आज इससे जुड़े हैं। मेरे एनएसएस के नौजवान भी आज हमारे साथ शामिल हैं। देश के अलग-अलग क्षेत्रों से, अलग-अलग संस्‍थानों से, अलग-अलग बैकग्राउंड के एक करोड़ से अधिक युवा आज एक साथ हैं। मेरा आप सभी से आग्रह है, आप सब इस बड़े मोवमेंट के लीडर हैं। आपने मेरे इस विश्वास को और मजबूत किया है कि भारत का युवा कितना जागरूक है, कितना समझदार है और अपने कर्तव्यों के प्रति कितना गंभीर है। मैं आप सभी को इस अभियान के लिए अनेक-अनेक शुभकामनाएं देता हूं।

मेरे युवा साथियों,

आप भारत की अमृत पीढ़ी हैं। आप अगले 20-25 वर्षों में अपने जीवन को भी दिशा देंगे और आप ही 2047 में देश को विकसित भारत की मंजिल तक लेकर जाएंगे और उसको शिखर पर आप ही बैठे होंगे, उसका सारा रसपान करने का अवसर आप ही को मिलने वाला है। देश को आपकी ऊर्जा, आपकी कल्पनाशक्ति और आपके टैलेंट की जरूरत है। इसलिए, देश के लिए और अपने जीवन के लिए, खुद को नशा मुक्त रखना बहुत जरूरी है। नशा फोकस को भटकाता है, और धीरे-धीरे युवा को उसके अपने सपनों से दूर ले जाता है। अभी जिन नौजवानों ने नाट्य मंचन किया, बहुत कम समय में, बहुत अच्छे तरीके से नाट्य मंचन में उन्होंने समस्या भी बताई, समस्या के कारण पैदा हुए संकट भी बताए और बाहर निकलने के सामूहिक प्रयत्न का रास्ता भी दिखाया। नाट्य मंचन छोटा था, लेकिन जैसा उन्होंने कहा, आओ हम नाटक देखें! यह नाटक नहीं था, यह हम लोगों के लिए एक बहुत बड़ा संदेश था। हमें जगा रहा था, हमें जूझने के लिए प्रेरित कर रहा था।

साथियों,

आजकल हम देखते हैं, आज के युवा स्‍टार्टअप्‍स की दुनिया में छाए हैं, AI को लीड कर रहे हैं, Sports में तिरंगा लहरा रहे हैं, स्‍पेस से लेकर Science तक नए कीर्तिमान बना रहे हैं। लेकिन साथियों, जब कोई युवा, अगर ड्रग्स के एडिक्‍शन में फंस जाए, तो केवल एक युवा नहीं हारता, एक सपना हार जाता है, एक सपने की बाल मृत्यु हो जाती है, एक परिवार हार जाता है, पूरा का पूरा परिवार टूट जाता है, समाज से भी नफरत का शिकार बन जाता है। नशा केवल शरीर को नुकसान नहीं पहुंचाता, नशा एक माँ की मुस्कान छीन लेता है। नशा एक पिता के सपनों को चूर-चूर कर देता है। एक बहन की राखी की उम्मीद को कमजोर कर देता है। एक छोटे भाई का आदर्श छीन लेता है। घर के बुजुर्ग हर दिन इस दर्द को जीते हैं कि उनका अपना बच्चा धीरे-धीरे खुद को खो रहा है, खुद को गला रहा है, तिल-तिल गल रहा है, आंखों के सामने उसे बर्बाद होते देख रहे हैं और जब परिवार में, समाज में ऐसा होता है और कहीं न कहीं, राष्ट्र की शक्ति भी कमजोर पड़ जाती है और इसलिए दुश्मन देश भी षड्यंत्र करके हमारे देश के युवाओं को इस नशे की लत में खींचने के लिए कोई कोशिश बाकी नहीं रखते हैं। ड्रग्स सप्लाई कर-करके कमाई करना और हमारे जैसे देश को तबाह करना, यह भी उनकी आतंकी साजिश का हिस्सा होता है और इसलिए हमें हर एक युवा को नशे के चंगुल में फंसने से बचाना है।

साथियों,

नशा मुक्त रहकर आपको अपने पोटेंशियल को प्रोटेक्ट करना है! आपको ध्यान रखना है, ड्रग्स कुछ समय के लिए 'High' देता है। लेकिन आपके करियर और फैमिली लाइफ को 'Low' कर देता है। हमें नशे को किसी भी तरह की स्वीकार्यता नहीं देनी है।

साथियों,

हमारे समाज में भी हमेशा नशे को एक बुराई के रूप में देखा है। हमारे संतों ने, गुरुओं ने हमें इससे बचने के लिए चेताया। श्री गुरु ग्रंथ साहिब में भी कहा गया है- "जितु पीतै मति दूरि होइ बरलु पवै विचि आइ। आपणा पराइआ न पछाणई खसमहु धके खाइ॥'' अर्थात, जिस पदार्थ के सेवन से बुद्धि और विवेक साथ छोड़ दें, इंसान अपने और पराए की पहचान भूल जाए, ऐसा नशा उसे पतन की ओर ले जाता है।

साथियों,

हमारी संस्कृति में बचाव के लिए चेतावनी भी दी गईं है और नशे की आदत लगने पर उससे निकलने के रास्ते भी बताए गए हैं। समाज का सहयोग, योग और ध्यान की ताकत, यह नशे के खिलाफ हमारे अंतर्मन को ताकत देते हैं। और आज तो हमारे पास नशा छोड़ने के लिए rehabilitation center जैसी सुविधाएं भी हैं। इसलिए, अगर कोई युवा गलती से नशे में फंस भी गया है, तो इसका ये मतलब बिल्कुल नहीं है कि उसके सारे रास्ते बंद हो गए हैं। हमें हमेशा इस बात का ध्यान रखना है, घर का कोई बच्चा अगर नशे का शिकार बन गया है, तो इसे सामाजिक प्रतिष्ठा की आड़ में छिपाएं नहीं। जिसकी जरूरत हो, उसका सहयोग मांगे, मन खोलकर के उससे बात करें, जो एक्सपर्ट्स हैं, उनका सहयोग लें। मेडिकल हेल्प से अपने बच्चे को नशे से मुक्त कराने का प्रयास करें। हमें परिवार में बच्चों से खुलकर संवाद की संस्कृति भी बनानी चाहिए, ताकि ऐसे भंवर में फंसने से पहले ही आप उसका हाथ थाम सके। आपको भनक आ जाएगी, थोड़ा ध्यान रखिए पता चलेगा, उसमें बदलाव आ रहा है, वो खोया-खोया लग रहा है, वो मुँह छुपा रहा है, कमरे में बंद हो जा रहा है, देर रात आ रहा है, पैसे अनाब-शनाब मांग रहा है, यह सारी चीजों से पता चल जाता है, भनक आ जाती है, कुछ मामला गड़बड़ है।

साथियों,

एक आवाहन मैं कॉलेज और यूनिवर्सिटीज़ के हमारे प्रोफेसर्स साथियों से भी करना चाहता हूँ, आप भी कोर्स की पढ़ाई के साथ-साथ स्टूडेंट्स के साथ ड्रग्स के खतरों पर बात करें। नशे के खिलाफ अपने कैम्पस में एक मूवमेंट चलाएं। आपके प्रयास बड़े-बड़े परिणाम ला सकते हैं। और साथियों, हमें एक और बात ध्यान रखनी है, जो युवा नशे से लड़कर बाहर निकलते हैं, वह कमजोर नहीं होते, जो नशे को परास्‍त करके निकला है न, वह असली योद्धा होता है, समाज को उनका सम्मान करना चाहिए, अपनापन देना चाहिए, उसे दूसरा अवसर देना चाहिए क्योंकि ड्रग्स से जुड़ा किसी का अतीत उसकी पहचान नहीं हो सकता, उसका साहस उसकी पहचान होता है।

साथियों,

ड्रग्स के खिलाफ अभियान में आज सरकार भी मजबूती से युवाओं के साथ खड़ी है। देश में नशे के कारोबारियों और तस्करों पर सख्ती के साथ कार्रवाई हो रही है। पहले की तुलना में कई गुना ज्यादा गिरफ्तारियां हुई हैं। हजारों करोड़ रुपए की ड्रग्स भी जब्त की गई है। यह दिखाता है कि, ड्रग्स के खिलाफ हमारी सरकार कितनी सख्त है। मुझे विश्वास है, केन्‍द्र सरकार, राज्य सरकार, हर कोई इसे मिशन मोड में करेंगे। मुझे विश्वास है, हमारे देश का युवा नशे से मुक्त रहकर अपनी युवा ऊर्जा को न केवल संरक्षित करेगा, बल्कि विकसित भारत के संकल्पों को भी आगे बढ़ाएगा। और जब मैं आज अनेक महान संतों को मेरे सामने देख रहा हूं, दूर से मैं मन से उनको प्रणाम करता हूं। मैं इन सभी सामाजिक संस्‍थाएं, आध्यात्मिक संस्‍थाएं, आध्यात्मिक गुरुजन, आपका देश के कोने-कोने में संगठन है, आपके युवा साथी डिवोटीज हैं। आने वाले 100 दिन में हर एक संगठन, एक सप्ताह अपने जिम्मे ले सकता है, पूरा सप्ताह पूरे देश में वह संगठन नेतृत्व करे, बाकी सब शक्तियां उसके साथ जुड़े और रविवार को बहुत बड़ा कार्यक्रम करें। दूसरे सप्ताह, दूसरा संगठन, दूसरी शक्ति, सप्ताह भर प्रयोग करें, कार्यक्रम करे और रविवार को बड़ा कार्यक्रम करे। अगर 100 सप्ताह हमारे देश के ऐसे आध्यात्मिक, सामाजिक संगठन, युवा संगठन एक-एक सप्ताह अपने जिम्मे ले लें और बाकी सारी शक्तियां वह जुड़े और रविवार सब मिलकर के करें, आप कल्पना कर सकते हैं, देश में कितना बड़ा आंदोलन खड़ा हो जाएगा। मैं एक बार फिर आप सबने समय निकाला, इस पवित्र कार्य में हम सबको आशीर्वाद दिए, इसके लिए संतों का, आचार्यो का, संगठन के महारथियों का हृदय से आभार व्यक्त करता हूं। मैं इन एक करोड़ से ज्यादा जुटे नौजवानों का विशेष रूप से अभिनंदन करता हूं, आपने यह बहुत बड़ा काम किया है। मैं माई भारत के वॉलंटियर्स की बधाई करता हूं, वो जो भी ठान लेते हैं, आजकल करके दिखाते हैं। अभी पिछले दिनों मुझे माई भारत के वॉलंटियर्स को मिलने का मौका मिला, वह हिन्‍दुस्‍तान के सीमावर्ती गांवों में जाकर के एक-एक सप्ताह रूक करके आए हैं। जिसे कभी देश का आखिरी गांव कहा जाता है, जाता था जिसको आज हम देश का पहला गांव कहते हैं, वहां जाकर के आए। उनके अनुभव बड़े प्रेरक थे और आज इतना बड़ा कार्यक्रम माई भारत के वॉलंटियर्स कर पाते हैं, यह अपने आप में उनकी राष्‍ट्र के प्रति जागरूक समर्पित भावना का प्रतीक है, मैं उनकी बधाई देता हूं, उनका भी अभिनंदन करता हूं। और मुझे पूरा विश्वास है कि आप सबके सामूहिक प्रयत्नों से यह हमारी मोवमेंट घर-घर पहुंचेगी, हर युवा के दिन में पहुंचेगी और यह ड्रग्स के कारोबारियों के लिए बहुत बड़ा खौफ भी बन जाएगी। आइए, हम सब मिलकर के आगे चलें, मेरी आप सबको बहुत-बहुत शुभकामनाएं!

बहुत-बहुत धन्यवाद!