'ನೆರೆಹೊರೆ ಮೊದಲು' ನೀತಿಗೆ ಭಾರತ ಬದ್ಧವಾಗಿದೆ: ಪ್ರಧಾನಮಂತ್ರಿ
ನೆರೆಹೊರೆಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟುಗಳಿಗೆ ಭಾರತವು ಮೊದಲು ಸ್ಪಂದಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ– ಸ್ವಾಗತ, ಮಿತ್ರರೇ!

ಶ್ರೀಲಂಕಾದ ಆಟಗಾರ – ಧನ್ಯವಾದ, ತುಂಬಾ ಧನ್ಯವಾದ ಸರ್!

ಪ್ರಧಾನಮಂತ್ರಿ – ಸ್ವಾಗತ !

ಪ್ರಧಾನಮಂತ್ರಿ – ನಿಮ್ಮೆಲ್ಲರನ್ನೂ ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ತಂಡವನ್ನು ಭಾರತದ ಜನರು ಇನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಭಾರತೀಯ ತಂಡವನ್ನು ಸೋಲಿಸಿದ ಸಮಯವನ್ನು ರಾಷ್ಟ್ರ ಇನ್ನೂ ಮರೆತಿಲ್ಲ.

ಶ್ರೀಲಂಕಾದ ಆಟಗಾರ – ಸರ್, ಇಂದು ನಿಮ್ಮನ್ನು ನೋಡಲು ನನಗೆ ತುಂಬಾ ಗೌರವ ಮತ್ತು ಸೌಭಾಗ್ಯ ಸಿಕ್ಕಿದೆ, ಮತ್ತು ತುಂಬಾ ಧನ್ಯವಾದಗಳು. ಈ ಸಮಯ ಮತ್ತು ಅವಕಾಶವನ್ನು ನಮಗೆ ನೀಡಿದ್ದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ.

 

ಪ್ರಧಾನಮಂತ್ರಿ – ನಿಮ್ಮಲ್ಲಿ ಎಷ್ಟು ಮಂದಿ ಇನ್ನೂ ಭಾರತ್ ಜೊತೆ ಸಂಪರ್ಕವನ್ನು ಉಳಿಸಿಕೊಂಡಿದ್ದೀರಿ?

ಶ್ರೀಲಂಕಾದ ಆಟಗಾರ – ಬಹುತೇಕ ಎಲ್ಲರೂ ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ – ಓಹ್ ಹೌದಾ, ನಾನು ನೋಡಿದ್ದೇನೆ. ನೀವು ಭಾರತ, ಸನತ್ ಜತೆ ಹೇಗೆ ಸಂಪರ್ಕ ಹೊಂದಿದ್ದೀರಿ?

ಶ್ರೀಲಂಕಾದ ಆಟಗಾರ – ಸರ್, ನಾನು ಮುಂಬೈ ಇಂಡಿಯನ್ಸ್ ಜೊತೆ ಇದ್ದೆ, ಮತ್ತು ಇಲ್ಲಿರುವ ಇತರ ಹೆಚ್ಚಿನವರು ಐಪಿಎಲ್‌ನಲ್ಲಿ ಆಡಿದ್ದಾರೆ.

ಪ್ರಧಾನಮಂತ್ರಿ – ಒಳ್ಳೆಯದು, ನೀವು ಐಪಿಎಲ್ ನಲ್ಲಿ ಆಟವಾಡಿದ್ದೀರಾ.

ಶ್ರೀಲಂಕಾದ ಆಟಗಾರ – ಮತ್ತು ಕುಮಾರ ಧರ್ಮಸೇನ ಆ ಸಮಯದಲ್ಲಿ ಅಂಪೈರ್ ಆಗಿದ್ದರು.

ಪ್ರಧಾನಮಂತ್ರಿ – ಹೌದು.

ಶ್ರೀಲಂಕಾದ ಆಟಗಾರ – ಹೌದು, ಆದ್ದರಿಂದ  

ಪ್ರಧಾನಮಂತ್ರಿ – 2010ರಲ್ಲಿ ಭಾರತ ಅಹಮದಾಬಾದ್‌ನಲ್ಲಿ ಆಡಿದಾಗ ನೀವು ಅಂಪೈರ್ ಆಗಿರಬಹುದು. ನಾನು ಆ ಪಂದ್ಯವನ್ನು ವೀಕ್ಷಿಸಲು ಹೋಗಿದ್ದೆ. ಆ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಮತ್ತು 1996ರಲ್ಲಿ ನಿಮ್ಮ ತಂಡ ಅದನ್ನು ಗೆದ್ದಾಗ, ಎರಡೂ ಘಟನೆಗಳು ಕ್ರಿಕೆಟ್ ಜಗತ್ತನ್ನು ಗಮನಾರ್ಹವಾಗಿ ಪರಿವರ್ತಿಸಿದವು. 1996ರಲ್ಲಿ ನಿಮ್ಮ ತಂಡ ಆಡಿದ ರೀತಿ ಒಂದು ಅರ್ಥದಲ್ಲಿ ಟಿ20 ಶೈಲಿಯ ಕ್ರಿಕೆಟ್‌ನ ಹುಟ್ಟು ಎಂದು ನಾನು ನಂಬುತ್ತೇನೆ.

ನಾನು ಇತರರಿಂದ ಕೇಳಲು ಬಯಸುತ್ತೇನೆ - ನೀವು ಇಂದು ಏನು ಮಾಡುತ್ತಿದ್ದೀರಿ? ನೀವು ಹಂಚಿಕೊಳ್ಳಲು ಏನಾದರೂ ಬಯಸುವಿರಾ? ನೀವು ಇನ್ನೂ ಕ್ರಿಕೆಟ್‌ನೊಂದಿಗೆ ಸಂಪರ್ಕ ಹೊಂದಿದ್ದೀರಾ? ನೀವು ಪ್ರಸ್ತುತ ತರಬೇತಿ ನೀಡುತ್ತಿದ್ದೀರಾ?

 

ಶ್ರೀಲಂಕಾದ ಆಟಗಾರ – ನಮ್ಮಲ್ಲಿ ಹೆಚ್ಚಿನವರು ಇನ್ನೂ ಒಂದಲ್ಲ ಒಂದು ರೀತಿಯಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇವೆ. ಮತ್ತು ಇಂದು, ನಿಮ್ಮನ್ನು ಭೇಟಿಯಾಗುವುದು ವಿಶ್ವಕಪ್ ಫೈನಲ್‌ನಲ್ಲಿ ಆಡುವುದಕ್ಕಿಂತ ಹೆಚ್ಚಿನ ಒತ್ತಡವನ್ನು ತರುತ್ತದೆ ಎಂದು ನಾನು ನಂಬುತ್ತೇನೆ!

ಶ್ರೀಲಂಕಾದ ಆಟಗಾರ – ನಾವು 1996 ರಲ್ಲಿ ವಿಶ್ವಕಪ್ ಗೆದ್ದ ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಲು ಬಯಸುತ್ತೇವೆ ಎಂದು ನಾನು ಭಾವಿಸುತ್ತೇನೆ, ಆದರೆ ನಾವು ಗೆದ್ದ ಕಾರಣಗಳಲ್ಲಿ ಒಂದೆಂದರೆ, ಆ ಸಮಯದಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಎರಡು ವಿಷಯಗಳು ನೆರವಾಗಲಿಲ್ಲ, ನಾವು..

ಪ್ರಧಾನಮಂತ್ರಿ – ಬಾಂಬ್‌ ಸ್ಪೋಟ ನಡೆದಿತಲ್ಲವೇ!

ಶ್ರೀಲಂಕಾದ ಆಟಗಾರ – ಹೌದು, ಆಗ ಭಾರತ ನಮಗೆ ಸಹಾಯ ಮಾಡಿತು. ಭಾರತ ಸುರಕ್ಷಿತ ಸ್ಥಳ ಎಂದು ಜಗತ್ತಿಗೆ ತೋರಿಸಲು, ನಾವು ಆಟವಾಡಲು ಭಾರತವನ್ನು ಕಳುಹಿಸಿ ಮತ್ತು ಶ್ರೀಲಂಕಾ ವಿಶ್ವಕಪ್ ಗೆಲ್ಲಲು ಇದು ಒಂದು ಕಾರಣವಾಗಿದೆ. ಆದ್ದರಿಂದ ನಾವು ಭಾರತಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ.

ಪ್ರಧಾನಮಂತ್ರಿ – ಭಾರತ ತಂಡ ಶ್ರೀಲಂಕಾಕ್ಕೆ ಹೋಗಲು ನಿರ್ಧರಿಸಿದಾಗ ನನಗೆ ಚೆನ್ನಾಗಿ ನೆನಪಿದೆ, ಆ ಸಮಯದಲ್ಲಿ, ಬಾಂಬ್ ಸ್ಫೋಟದ ಕಾರಣ ಇತರ ತಂಡಗಳು ಹಿಂದೆ ಸರಿಯುತ್ತಿದ್ದವು. ನಿಮ್ಮ ಆಟಗಾರರು ಭಾರತದ ಈ ನಡೆಯನ್ನು ಎಷ್ಟು ಮೆಚ್ಚುತ್ತಾರೆಂದು ನಾನು ಕಣ್ಣಾರೆ ಕಂಡಿದ್ದೇನೆ. ಭಾರತ ಶ್ರೀಲಂಕಾದ ಜನರು ಎದುರಿಸುತ್ತಿರುವ ತೊಂದರೆಗಳನ್ನು ಗುರುತಿಸಿ ಅವರನ್ನು ಅವರ ವಿಧಿಬರಹವನ್ನು ಶಪಿಸಿ ಬಿಡಲು ನಿರಾಕರಿಸುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು. ಬದಲಾಗಿ "ಬನ್ನಿ, ನಾವೂ ಹೋಗಿ ಏನಾಗುತ್ತದೆ ಎಂದು ನೋಡೋಣ" ಎಂದು ನಾವು ಹೇಳಿದೆವು.

ಈ ಸಂಗತಿಯನ್ನು ನಿಮ್ಮ ಕ್ರೀಡಾ ಸಮುದಾಯವು ಬಹಳ ಮೆಚ್ಚಿಕೊಂಡಿತು. ಇಂದಿಗೂ, ಭಾರತದ ಜನರು ಆ ಕ್ರೀಡಾ ಮನೋಭಾವವನ್ನು ನೆನಪಿಸಿಕೊಳ್ಳುತ್ತಾರೆ. ಒಂದೆಡೆ, ಬಾಂಬ್ ಸ್ಫೋಟಗಳ ರೂಪದಲ್ಲಿ ಭಯೋತ್ಪಾದನೆ ಇತ್ತು; ಮತ್ತೊಂದೆಡೆ, ಕ್ರೀಡಾ ಮನೋಭಾವವಿತ್ತು – ಮತ್ತು ಕೊನೆಗೆ ಎರಡನೆಯದು ಜಯಗಳಿಸಿತು.

 

ಅದೇ ಮನೋಭಾವ ಇಂದಿಗೂ ಮುಂದುವರೆದಿದೆ. 1996 ರ ಬಾಂಬ್ ಸ್ಫೋಟವು ಇಡೀ ಶ್ರೀಲಂಕಾವನ್ನು ಬೆಚ್ಚಿಬೀಳಿಸಿದಂತೆಯೇ, 2019 ರಲ್ಲಿ ಅದೇ ರೀತಿಯ ದುರಂತ ಸಂಭವಿಸಿದಾಗ – ಚರ್ಚ್ ನೊಳಗೆ ಬಾಂಬ್ ಸ್ಫೋಟ - ನಂತರ ಶ್ರೀಲಂಕಾಕ್ಕೆ ಭೇಟಿ ನೀಡಿದ ಮೊದಲ ವಿಶ್ವ ನಾಯಕ ನಾನು. ಆ ಸಮಯದಲ್ಲಿ ಬಾಂಬ್ ಸ್ಫೋಟದ ಹೊರತಾಗಿಯೂ ಭಾರತ ತಂಡ ಶ್ರೀಲಂಕಾಕ್ಕೆ ಬಂದಿತು.

ಈ ಬಾರಿ, ಬಾಂಬ್ ಸ್ಫೋಟದ ನಂತರ ನಾನು ಸ್ವತಃ ಶ್ರೀಲಂಕಾಕ್ಕೆ ಬಂದಿದ್ದೇನೆ. ಇದು ಶ್ರೀಲಂಕಾದ ಸುಖ-ದುಃಖ ಎರಡರಲ್ಲೂ ಜೊತೆಯಾಗಿ ನಿಲ್ಲುವ ಮನೋಭಾವ ಮುಂದುವರಿಯುತ್ತಿರುವುದನ್ನು ಬುದನ್ನು ತೋರಿಸುತ್ತದೆ. ಇದು ಭಾರತದ ಕಾಯಂ ಮನೋಭಾವವಾಗಿದೆ.

ಶ್ರೀಲಂಕಾದ ಆಟಗಾರ – ಒಬ್ಬ ಶ್ರೀಲಂಕಾದವನಾಗಿ ನೆರೆಹೊರೆಯ ದೇಶವಾಗಿ, ನಾನು ನಿಮ್ಮ ಅಹಮದಾಬಾದ್ ಮೈದಾನದಲ್ಲಿ ವಿಶ್ವಕಪ್ ಫೈನಲ್ ಅನ್ನು ಅಂಪೈರ್ ಮಾಡಿದ್ದೇನೆ ಮತ್ತು ಅದು ಇಡೀ ವಿಶ್ವದ ಅತಿದೊಡ್ಡ ಮೈದಾನ. ವಾಸ್ತವವಾಗಿ ಅದು ಕ್ರಿಕೆಟ್‌ಗೆ ಅದ್ಭುತ ವಾತಾವರಣ ಮತ್ತು ಅತ್ಯದ್ಭುತ ಮೈದಾನವಾಗಿತ್ತು ಮತ್ತು ಎಲ್ಲರೂ ಅಲ್ಲಿ ಆಟವಾಡಲು ಮತ್ತು ಅಂಪೈರ್ ಮಾಡಲು ಇಷ್ಟಪಡುತ್ತಾರೆಂದು ನಾನು ಭಾವಿಸುತ್ತೇನೆ.

ಶ್ರೀಲಂಕಾದ ಆಟಗಾರ – ಸರ್, ಭಾರತಕ್ಕೆ ನಾನು 1990ರಲ್ಲಿ ಮೊದಲ ಪ್ರವಾಸ ಕೈಗೊಂಡೆ, ಅದು ನನ್ನ ಮೊದಲ ಪ್ರವಾಸವಾಗಿತ್ತು. ಮತ್ತು ನನಗೆ ಅದೇ ನೆನಪುಗಳಿವೆ ಏಕೆಂದರೆ ನಾನು ಭಾರತದಲ್ಲಿ ಒಂದು ತಿಂಗಳು ಇದ್ದೆ. ನಾನು ಸುಮಾರು ಐದು ದಿನಗಳ ಹಿಂದೆ ಬಂದಿದ್ದೇನೆ. ನಾವು ನಿಯಮಿತವಾಗಿ ಭಾರತಕ್ಕೆ ಭೇಟಿ ನೀಡುತ್ತೇವೆ. ಶ್ರೀಲಂಕಾ ಬಿಕ್ಕಟ್ಟಿನಲ್ಲಿದ್ದಾಗಲೆಲ್ಲಾ ವಿಶೇಷವಾಗಿ ಆರ್ಥಿಕವಾಗಿ ಭಾರತ ಸದಾ ಸಹಾಯ ಮಾಡಲು ಮತ್ತು ಆ ನೆರವು ನೀಡಲು ಮುಂದಾಗುತ್ತದೆ ಎಂದು ನಾನು ಹೇಳಬಯಸುತ್ತೇನೆ. ಆದ್ದರಿಂದ ನಾವು ಭಾರತಕ್ಕೆ ಸದಾ ಕೃತಜ್ಞರಾಗಿರುತ್ತೇವೆ, ಏಕೆಂದರೆ ಭಾರತ ನಮ್ಮ ಸಹೋದರ ರಾಷ್ಟ್ರವೆಂದು ನಾವು ಭಾವಿಸುತ್ತೇವೆ. ಹಾಗಾಗಿ ನಾವು ಭಾರತಕ್ಕೆ ಹೋದಾಗ ನಮಗೆ ತಮ್ಮ ಸ್ವತಃ ಮನೆಯಂತೆ ಭಾಸವಾಗುತ್ತದೆ. ಧನ್ಯವಾದಗಳು ಸಾರ್, ಧನ್ಯವಾದಗಳು.

ಶ್ರೀಲಂಕಾದ ಆಟಗಾರ – ರೋಮೇಶ್ ಹೇಳಿದಂತೆ, ಶ್ರೀಲಂಕಾದಲ್ಲಿ ನಮಗೆ ಅಶಾಂತಿ ಮತ್ತು ಸಮಸ್ಯೆಗಳು ಇದ್ದಾಗ ನಾವು ಪೆಟ್ರೋಲ್, ಡೀಸೆಲ್, ಇಂಧನ, ದೀಪಗಳಿಲ್ಲದೆ ಇದ್ದೆವು ಮತ್ತು ನೀವು ಮತ್ತು ಸರ್ಕಾರ ಸರ್ ನಮಗೆ ತುಂಬಾ ಸಹಾಯ ಮಾಡಿದ್ದೀರಿ. ಆದ್ದರಿಂದ ನಾವು ಸದಾ  ಕೃತಜ್ಞರಾಗಿರುತ್ತೇವೆ ಮತ್ತು ನಮ್ಮ ದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಶ್ರೀಲಂಕಾಕ್ಕೆ ಸಹಾಯ ಮಾಡಿದ್ದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ಮತ್ತುನನ್ನದು  ಒಂದು ಸಣ್ಣ ವಿನಂತಿ ಇದೆ ಸರ್. ಸದ್ಯ ಶ್ರೀಲಂಕಾ ಕ್ರಿಕೆಟ್‌ನ ತರಬೇತುದಾರನಾಗಿ ನಾವು ಜಾಫ್ನಾ ಹೊರತುಪಡಿಸಿ ಶ್ರೀಲಂಕಾದಾದ್ಯಂತ ಆಡುತ್ತೇವೆ. ಶ್ರೀಲಂಕಾ ಕ್ರಿಕೆಟ್‌ನ ತರಬೇತುದಾರನಾಗಿ ಭಾರತವು ಜಾಫ್ನಾದಲ್ಲಿ ಅಂತಾರಾಷ್ಟ್ರೀಯ ಮೈದಾನವನ್ನು ನಿರ್ಮಿಸಲು ನಮಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಅದು ಜಾಫ್ನಾದಲ್ಲಿ, ಉತ್ತರ ಮತ್ತು ಪೂರ್ವ ಭಾಗದ ಜನರಿಗೆ ದೊಡ್ಡ ಸಹಾಯವಾಗುತ್ತದೆ. ಆದ್ದರಿಂದ ನಾವು ಸದ್ಯ ಕೊರತೆಯನ್ನು ಹೊಂದಿದ್ದೇವೆ. ಆದ್ದರಿಂದ ನಾವು ಉತ್ತರ ಭಾಗವನ್ನು ಪ್ರತ್ಯೇಕಿಸುವುದಿಲ್ಲ, ಆದ್ದರಿಂದ ಅವರು ಸಹ ಬಹಳ ಹತ್ತಿರವಾಗುತ್ತಾರೆ, ಶ್ರೀಲಂಕಾ ಕ್ರಿಕೆಟ್‌ನೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಾವು ಸದ್ಯ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ, ಆದರೆ ನೀವು ಜಾಫ್ನಾದಲ್ಲಿ ಅಂತಾರಾಷ್ಟ್ರೀಯ ಆಟಗಳನ್ನು ಆಡಿದರೆ ಅದು ಹೆಚ್ಚು ಹತ್ತಿರವಾಗುತ್ತದೆ. ಆದ್ದರಿಂದ ನನಗೆ ಒಂದು ಸಣ್ಣ ವಿನಂತಿ ಇದೆ ಸರ್, ನೀವು ಏನನ್ನಾದರೂ ತರಲು ಸಹಾಯ ಮಾಡಬಹುದಾ?

 

ಪ್ರಧಾನಮಂತ್ರಿ – ಜಯಸೂರ್ಯ ಅವರಿಂದ ಇದನ್ನೆಲ್ಲಾ ಕೇಳಿ ನನಗೆ ನಿಜಕ್ಕೂ ಸಂತೋಷವಾಯಿತು. ಭಾರತವು ಸದಾ 'ನೆರೆಹೊರೆಯವರು ಮೊದಲು' ಎಂಬ ತತ್ವಕ್ಕೆ ಬದ್ಧವಾಗಿದೆ ಎಂಬುದು ನಿಜಕ್ಕೂ ಸತ್ಯ. ನಮ್ಮ ನೆರೆಯ ರಾಷ್ಟ್ರಗಳು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಭಾರತವು ಸಾಧ್ಯವಾದಷ್ಟು ಬೇಗ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತದೆ. ಉದಾಹರಣೆಗೆ ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದಾಗ ಪ್ರತಿಕ್ರಿಯಿಸಿದ ಮೊದಲ ರಾಷ್ಟ್ರ ಭಾರತವಾಗಿತ್ತು. ನಮ್ಮ ನೆರೆಯ ಮತ್ತು ಮಿತ್ರ ರಾಷ್ಟ್ರಗಳನ್ನು ನೋಡಿಕೊಳ್ಳುವುದು ಮತ್ತು ಬೆಂಬಲಿಸುವುದು ಭಾರತದ ಕರ್ತವ್ಯವೆಂದು ನಾವು ನಂಬಿದ್ದೇವೆ. ದೊಡ್ಡ ಮತ್ತು ಸಮರ್ಥ ರಾಷ್ಟ್ರವಾಗಿರುವುದರಿಂದ, ತಕ್ಷಣವೇ ಕಾರ್ಯನಿರ್ವಹಿಸುವುದು ಭಾರತಕ್ಕೆ ಜವಾಬ್ದಾರಿಯಾಗಿದೆ. ಇತ್ತೀಚೆಗೆ ಶ್ರೀಲಂಕಾಗೆ ಆರ್ಥಿಕ ಬಿಕ್ಕಟ್ಟು ಉಂಟಾದಾಗ,- ಅದು ದೊಡ್ಡ ಪ್ರಮಾಣದ ಪರಿಸ್ಥಿತಿ - ಭಾರತವು ಒಂದು ದೃಢವಾದ ನಂಬಿಕೆಯನ್ನು ಹೊಂದಿತ್ತು: ಶ್ರೀಲಂಕಾಗೆ ಆ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲ ಮತ್ತು ಸಹಾಯ ಮಾಡಿತು. ಅದನ್ನು ನಮ್ಮ ನೈತಿಕ ಕರ್ತವ್ಯವೆಂದು ನಾವು ಪರಿಗಣಿಸುವುದರಿಂದ ನಮ್ಮ ಪಾತ್ರವನ್ನು ನಿರ್ವಹಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಇಂದಿಗೂ ನೀವು ಗಮನಿಸಿದಂತೆ ನಾನು ಹಲವು ಹೊಸ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದೇನೆ. ಆದರೆ ಜಾಫ್ನಾ ಬಗ್ಗೆ ನಿಮ್ಮ ಕಾಳಜಿ ನನ್ನನ್ನು ನಿಜವಾಗಿಯೂ ಉತ್ತೇಜಿಸಿತು. ಶ್ರೀಲಂಕಾದ ಹಿರಿಯ ಕ್ರಿಕೆಟ್ ವ್ಯಕ್ತಿಯೊಬ್ಬರು ಜಾಫ್ನಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತಾರೆಂಬುದು ಪ್ರಬಲ ಮತ್ತು ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ. ಈ ಭಾವನೆಯು ಸ್ವತಃ ಸ್ಪೂರ್ತಿದಾಯಕವಾಗಿದೆ. ಜಾಫ್ನಾ ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು. ಅಂತಾರಾಷ್ಟ್ರೀಯ ಪಂದ್ಯಗಳು ಅಲ್ಲಿಯೂ ನಡೆಯಬೇಕು. ನಿಮ್ಮ ಸಲಹೆಯು ಗಮನಾರ್ಹವಾದ ತೂಕವನ್ನು ಹೊಂದಿದೆ, ಮತ್ತು ನನ್ನ ತಂಡವು ಖಂಡಿತವಾಗಿಯೂ ಈ ಪ್ರಸ್ತಾಪವನ್ನು ಗಮನಿಸುತ್ತದೆ ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಅನ್ವೇಷಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ನನ್ನನ್ನು ಭೇಟಿ ಮಾಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರೀತಿಯ ನೆನಪುಗಳನ್ನು ಮರುಕಳಿಸಲು ಮತ್ತು ನಿಮ್ಮೆಲ್ಲರ ಮುಖಗಳನ್ನು ಮತ್ತೊಮ್ಮೆ ನೋಡಲು ಸಂತೋಷವಾಯಿತು. ಭಾರತದೊಂದಿಗಿನ ನಿಮ್ಮ ಸಂಬಂಧವು ಮತ್ತಷ್ಟು ಬಲಗೊಳ್ಳಲಿ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ನೀವು ಯಾವುದೇ ದಿಟ್ಟತನ ಪ್ರದರ್ಶಿಸಿದರೂ ಮತ್ತು ನಾನು ನಿಮಗೆ ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತೇನೆ ಎಂದು ನಮಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಸದಾ ನಿಮ್ಮ ಪರವಾಗಿರುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why ‘G RAM G’ Is Essential For A Viksit Bharat

Media Coverage

Why ‘G RAM G’ Is Essential For A Viksit Bharat
NM on the go

Nm on the go

Always be the first to hear from the PM. Get the App Now!
...
PM Modi shares a Sanskrit Subhashitam urging citizens to to “Arise, Awake” for Higher Purpose
January 13, 2026

The Prime Minister Shri Narendra Modi today shared a Sanskrit Subhashitam urging citizens to embrace the spirit of awakening. Success is achieved when one perseveres along life’s challenging path with courage and clarity.

In a post on X, Shri Modi wrote:

“उत्तिष्ठत जाग्रत प्राप्य वरान्निबोधत।

क्षुरस्य धारा निशिता दुरत्यया दुर्गं पथस्तत्कवयो वदन्ति॥”