ನಮೋ ಬುದ್ಧಾಯ!

ಥೈಲ್ಯಾಂಡ್‌ನಲ್ಲಿ ಸಂವಾದ ಆವೃತ್ತಿಯಲ್ಲಿ ನಿಮ್ಮೆಲ್ಲರೊಂದಿಗೆ ಭಾಗಿಯಾಗುತ್ತಿರುವುದು ನನಗೆ ಗೌರವ ತಂದಿದೆ. ಭಾರತ, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಾರೆ, ಆ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಹಾಗೂ ಭಾಗವಹಿಸಿದ ಎಲ್ಲರಿಗೂ  ಶುಭಾಶಯಗಳನ್ನು ಕೋರುತ್ತೇನೆ.

 

ಮಿತ್ರರೇ,

ಈ ಅವಕಾಶವನ್ನು ನನ್ನ ಸ್ನೇಹಿತ ಶ್ರೀ ಶಿಂಜೋ ಅವರನ್ನು ಸ್ಮರಿಸಲು ಬಳಸಿಕೊಳ್ಳುತ್ತೇನೆ ಮತ್ತು 2015ರಲ್ಲಿ ಈ ಸಂವಾದದ ಕಲ್ಪನೆಯು ಅವರ ಜತೆಗಿನ ಸಂಭಾಷಣೆಗಳಿಂದ ಹೊರಹೊಮ್ಮಿತು. ಅಂದಿನಿಂದ ಸಂವಾದ ವಿವಿಧ ದೇಶಗಳಲ್ಲಿ ಪಯಣಿಸಿ, ಚರ್ಚೆ, ಸಂವಾದ ಮತ್ತು ಆಳವಾದ ತಿಳಿವಳಿಕೆಯನ್ನು ಬೆಳೆಸಿದೆ.

ಮಿತ್ರರೇ,

ಥೈಲ್ಯಾಂಡ್‌ನಲ್ಲಿ ಸಂವಾದದ ಈ ಆವೃತ್ತಿ ನಡೆಯುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಥೈಲ್ಯಾಂಡ್ ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಅದು ಏಷ್ಯಾದ ಹಂಚಿಕೆಯ ತಾತ್ವಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಸುಂದರ ಉದಾಹರಣೆಯಾಗಿದೆ.  

ಮಿತ್ರರೇ,

ಭಾರತ ಮತ್ತು ಥೈಲ್ಯಾಂಡ್ ನಡುವೆ ಎರಡು ಸಾವಿರ ವರ್ಷಗಳ ಆಳವಾದ ಸಾಂಸ್ಕೃತಿಕ ಸಂಬಂಧವಿದೆ.ರಾಮಾಯಣ ಮತ್ತು ರಾಮಕೀರ್ತನೆಗಳು ನಮ್ಮನ್ನು ಬೆಸೆದಿವೆ. ಭಗವಾನ್ ಬುದ್ಧನ ಮೇಲಿನ ಗೌರವವು ಇಬ್ಬರನ್ನೂ ಒಗ್ಗೂಡಿಸುತ್ತದೆ. ಕಳೆದ ವರ್ಷ ಭಾರತವು ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಥೈಲ್ಯಾಂಡ್‌ಗೆ ಕಳುಹಿಸಿದಾಗ, ಲಕ್ಷಾಂತರ ಭಕ್ತರು ತಮ್ಮ ಗೌರವವನ್ನು ಸಲ್ಲಿಸಿದರು. ಅಲ್ಲದೆ ನಮ್ಮ ರಾಷ್ಟ್ರವು ಹಲವು ಕ್ಷೇತ್ರಗಳಲ್ಲಿನ ಸಕ್ರಿಯ ಪಾಲುದಾರಿಕೆಯನ್ನು ಹೊಂದಿದೆ. ಭಾರತದ 'ಆಕ್ಟ್ ಈಸ್ಟ್' (ಪೂರ್ವ ಕ್ರಿಯಾ) ನೀತಿ ಮತ್ತು ಥೈಲ್ಯಾಂಡ್‌ನ 'ಆಕ್ಟ್ ವೆಸ್ಟ್' ನೀತಿ ಪರಸ್ಪರ ಪೂರಕವಾಗಿದೆ, ಪರಸ್ಪರ ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತವೆ. ಈ ಸಮ್ಮೇಳನವು ಎರಡು ರಾಷ್ಟ್ರಗಳ ನಡುವಿನ ಸ್ನೇಹದಲ್ಲಿ ಮತ್ತೊಂದು ಯಶಸ್ವಿ ಅಧ್ಯಾಯವಾಗಲಿದೆ.

ಮಿತ್ರರೇ,

ಸಂವಾದದ ಘೋಷವಾಕ್ಯ ಏಷ್ಯಾದ ಶತಮಾನದ ಬಗ್ಗೆ ಹೇಳುತ್ತದೆ. ಜನರು ಹೆಚ್ಚಾಗಿ ಆ ಪದವನ್ನು ಬಳಸಿದಾಗ ಏಷ್ಯಾದ ಆರ್ಥಿಕ ಪ್ರಗತಿಯನ್ನು ಉಲ್ಲೇಖಿಸುತ್ತಾರೆ. ಆದರೆ ಈ ಸಮ್ಮೇಳನವು ಏಷ್ಯಾದ ಶತಮಾನವು ಕೇವಲ ಆರ್ಥಿಕ ಮೌಲ್ಯದ ಬಗ್ಗೆ ಅಲ್ಲ, ಸಾಮಾಜಿಕ ಮೌಲ್ಯಗಳ ಬಗ್ಗೆಯೂ ಕಾಳಜಿ ವಹಿಸುತ್ತದೆ. ಭಗವಾನ್ ಬುದ್ಧನ ಬೋಧನೆಗಳು ಶಾಂತಿಯುತ ಮತ್ತು ಪ್ರಗತಿಪರ ಯುಗ ಸೃಷ್ಟಿಸುವಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ಅವರ ವಿವೇಕವು ಮಾನವ ಕೇಂದ್ರಿತ ಭವಿಷ್ಯಕ್ಕೆ ಕಾರಣವಾಗುವ ಶಕ್ತಿಯನ್ನು ಹೊಂದಿದೆ

 

ಮಿತ್ರರೇ,

ಸಂವಾದದ ಪ್ರಮುಖ ವಿಷಯಗಳಲ್ಲಿ ಸಂಘರ್ಷ ತಪ್ಪಿಸುವುದು ಒಂದಾಗಿದೆ. ಒಂದೇ ಮಾರ್ಗ ಸರಿಯಾಗಿದ್ದರೆ ಇನ್ನೊಂದು ಮಾರ್ಗ ತಪ್ಪಾಗಿದೆ ಎಂಬ ನಂಬಿಕೆಯಿಂದ ಅಗ್ಗಾಗ್ಗೆ ಸಂಘರ್ಷಗಳು ಹೆಚ್ಚಾಗಿ ಉದ್ಭವಿಸುತ್ತವೆ. ಈ ವಿಷಯದ ಬಗ್ಗೆ ಭಗವಾನ್ ಬುದ್ಧನ ಒಳನೋಟ ಹೀಗಿದೆ.

इमेसु किर सज्जन्ति, एके समणब्राह्मणा |

विग्गय्ह नं विवदन्ति,

जना एकंगदस्सिनो ||

ಅದರರ್ಥ ಕೆಲವು ಜನರು ತಮ್ಮದೇ ಆದ ದೂರದೃಷ್ಟಿಗಳಿಗೆ ಅಂಟಿಕೊಳ್ಳುತ್ತಾರೆ ಮತ್ತು ವಾದಿಸುತ್ತಾರೆ, ಒಂದು ಕಡೆಯದ್ದು ಮಾತ್ರ ಸತ್ಯವೆಂದು ನೋಡುತ್ತಾರೆ. ಒಂದೇ ವಿಷಯದ ಬಗ್ಗೆ ಹಲವು ದೂರದೃಷ್ಟಿಗಳು ಅಸ್ತಿತ್ವದಲ್ಲಿರಬಹುದು. ಋಗ್ವೇದವನ್ನು ಉಲ್ಲೇಖಿಸಿದ ಇದನ್ನೇ

एकं सद्विप्रा बहु॒धा वदन्ति |

ಸತ್ಯವನ್ನು ವಿಭಿನ್ನ ಮಸೂರಗಳ ಮೂಲಕ ನೋಡಬಹುದು ಎಂದು ನಾವು ಒಪ್ಪಿಕೊಂಡಾಗ, ನಾವು ಸಂಘರ್ಷವನ್ನು ತಪ್ಪಿಸಬಹುದು . 

ಮಿತ್ರರೇ,

ಸಂಘರ್ಷಕ್ಕೆ ಮತ್ತೊಂದು ಕಾರಣ ಇತರರನ್ನು ನಮ್ಮಿಂದ ಮೂಲಭೂತವಾಗಿ ಭಿನ್ನರೆಂದು ಗ್ರಹಿಸುವುದು. ವ್ಯತ್ಯಾಸಗಳು ದೂರಕ್ಕೆ ಕಾರಣವಾಗುತ್ತವೆ ಮತ್ತು ದೂರವು ಅಪಶ್ರುತಿಯಾಗಿ ಬದಲಾಗಬಹುದು. ಅದನ್ನು ಎದುರಿಸುವ ಬಗ್ಗೆ ಧಮ್ಮಪದದ ಒಂದು ಶ್ಲೋಕ ಹೀಗೆ ಹೇಳುತ್ತದೆ.

सब्बे तसन्ति दण्डस्स, सब्बे भायन्ति मच्चुनो |

अत्तानं उपमं कत्वा, न हनेय्य न घातये ||

ಅದರರ್ಥ ಪ್ರತಿಯೊಬ್ಬರಿಗೂ ಸಾವು ಮತ್ತು ನೋವಿಗೆ ಭಯಪಡುತ್ತಾರೆ. ಇತರರು ಕೂಡ ನಮ್ಮಂತೆ ಎಂದು ಪರಿಗಣಿಸುವ ಮೂಲಕ ಯಾವುದೇ ಹಾನಿ ಅಥವಾ ಹಿಂಸೆ ಸಂಭವಿಸದಂತೆ ನಾವು ಖಾತ್ರಿಪಡಿಸಿಕೊಳ್ಳಬಹುದು. ಈ ಮಾತುಗಳನ್ನು ಪಾಲಿಸಿದರೆ, ಸಂಘರ್ಷವನ್ನು ತಪ್ಪಿಸಬಹುದು.

ಮಿತ್ರರೇ,

ಜಗತ್ತಿನ ಅನೇಕ ಸಮಸ್ಯೆಗಳು ಸಮತೋಲಿತ ವಿಧಾನಕ್ಕಿಂತ ಹೆಚ್ಚಾಗಿ ತೀವ್ರವಾದ ನಿಲುವುಗಳನ್ನು ತೆಗೆದುಕೊಳ್ಳುವುದರಿಂದ ಉದ್ಭವಿಸುತ್ತವೆ. ತೀವ್ರವಾದ ದೂರದೃಷ್ಟಿಯ ಅಭಿಪ್ರಾಯಗಳು, ಸಂಘರ್ಷಗಳು, ಪರಿಸರ ಬಿಕ್ಕಟ್ಟುಗಳು ಮತ್ತು ಒತ್ತಡ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಸವಾಲುಗಳಿಗೆ ಪರಿಹಾರವು ಭಗವಾನ್ ಬುದ್ಧನ ಬೋಧನೆಗಳಲ್ಲಿದೆ. ಅವರು ಮಧ್ಯಮ ಮಾರ್ಗವನ್ನು ಅನುಸರಿಸಲು ಮತ್ತು ವಿಪರೀತಗಳನ್ನು ತಪ್ಪಿಸಲು ಕರೆ ನೀಡಿದ್ದರು. ಮಿತವಾದ ತತ್ವವು ಇಂದಿಗೂ ಪ್ರಸ್ತುತವಾಗಿದೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮಾರ್ಗದರ್ಶನ ನೀಡುತ್ತದೆ. 

 

ಮಿತ್ರರೇ,

ಇಂದು ಸಂಘರ್ಷಗಳು ಜನರು ಮತ್ತು ರಾಷ್ಟ್ರಗಳನ್ನು ಮೀರಿ ವಿಸ್ತರಿಸುತ್ತವೆ-ಮಾನವೀಯತೆಯು ಪ್ರಕೃತಿಯೊಂದಿಗೆ ಹೆಚ್ಚು ಹೆಚ್ಚು ಸಂಘರ್ಷದಲ್ಲಿದೆ. ಇದು ನಮ್ಮ ಭೂಮಿಗೆ ಬೆದರಿಕೆ ಹಾಕುವ ಪರಿಸರ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಸವಾಲಿಗೆ ಉತ್ತರವು ಏಷ್ಯಾದ ಹಂಚಿಕೆಯ ಸಂಪ್ರದಾಯಗಳಾದ ಧಮ್ಮಗಳಲಿದೆ. ಹಿಂದೂ ಧರ್ಮ, ಬೌದ್ಧಧರ್ಮ, ಶಿಂಟೋಯಿಸಂ ಮತ್ತು ಇತರ ಏಷ್ಯಾದ ಸಂಪ್ರದಾಯಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಕಲಿಸುತ್ತವೆ. ನಾವು ನಮ್ಮನ್ನು ಪ್ರಕೃತಿಯಿಂದ ಪ್ರತ್ಯೇಕವಾಗಿ ನೋಡುವುದಿಲ್ಲ, ಬದಲಾಗಿ ಅದರ ಒಂದು ಭಾಗವಾಗಿ ನೋಡುತ್ತೇವೆ. ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಉತ್ತರದಾಯಿತ್ವ (ಟ್ರಸ್ಟೀಶಿಪ್) ಪರಿಕಲ್ಪನೆಯನ್ನು ನಂಬಿದ್ದೇವೆ. ಇಂದಿನ ಪ್ರಗತಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವಾಗ, ಭವಿಷ್ಯದ ಪೀಳಿಗೆಗೆ ನಮ್ಮ ಜವಾಬ್ದಾರಿಯನ್ನು ಸಹ ನಾವು ಪರಿಗಣಿಸಬೇಕು. ಈ ವಿಧಾನವು ಸಂಪನ್ಮೂಲಗಳನ್ನು ಪ್ರಗತಿಗೆ ಬಳಸುವುದನ್ನು ಖಾತ್ರಿಪಡಿಸುತ್ತದೆ, ದುರಾಸೆಯಿಂದಲ್ಲ.  

ಮಿತ್ರರೇ,

ನಾನು ಒಂದು ಕಾಲದಲ್ಲಿ ಬೌದ್ಧ ಕಲಿಕೆಯ ಶ್ರೇಷ್ಠ ಕೇಂದ್ರವಾಗಿದ್ದ ಪಶ್ಚಿಮ ಭಾರತದ ಸಣ್ಣ ಪಟ್ಟಣವಾದ ವಡ್ನಾಗರ ಮೂಲದಿಂದ ಬಂದಿದ್ದೇನೆ. ಭಾರತೀಯ ಸಂಸತ್ತಿನಲ್ಲಿ ನಾನು ವಾರಣಾಸಿಯನ್ನು ಪ್ರತಿನಿಧಿಸುತ್ತಿದ್ದು, ಅದರಲ್ಲಿ ಭಗವಾನ್ ಬುದ್ಧ ತನ್ನ ಮೊದಲ ಪ್ರವಚನ ನೀಡಿದ ಪವಿತ್ರ ಸ್ಥಳ ಸಾರನಾಥವೂ ಸೇರಿದೆ. ಭಗವಾನ್ ಬುದ್ಧನೊಂದಿಗೆ ಸಂಬಂಧಿಸಿದ ಸ್ಥಳಗಳು ತಮ್ಮ ಪಯಣವನ್ನು ರೂಪಿಸಿರುವುದು ಕಾಕತಾಳೀಯ.

ಮಿತ್ರರೇ,

ಭಗವಾನ್ ಬುದ್ಧನ ಮೇಲಿನ ನಮ್ಮ ಗೌರವವು ಭಾರತ ಸರ್ಕಾರದ ನೀತಿಗಳಲ್ಲಿ ಪ್ರತಿಫಲಿಸುತ್ತದೆ. ಬೌದ್ಧ ಸರ್ಕ್ಯೂಟ್‌ನ ಭಾಗವಾಗಿ ಪ್ರಮುಖ ಬೌದ್ಧ ತಾಣಗಳನ್ನು ಸಂಪರ್ಕಿಸಲು ಪ್ರವಾಸೋದ್ಯಮ ಮೂಲಸೌಕರ್ಯವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಆ ಸರ್ಕ್ಯೂಟ್‌ ನಲ್ಲಿ ಪ್ರಯಾಣವನ್ನು ಸುಗಮಗೊಳಿಸಲು 'ಬುದ್ಧ ಪೂರ್ಣಿಮಾ ಎಕ್ಸ್‌ಪ್ರೆಸ್' ವಿಶೇಷ ರೈಲನ್ನು ಆರಂಭಿಸಲಾಗಿದೆ. ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಕರಿಗೆ ಪ್ರಯೋಜನ ಕಲ್ಪಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಬೋಧಗಯಾದ ಮೂಲ ಸೌಕರ್ಯವನ್ನು ವೃದ್ಧಿಸಲು ಇತ್ತೀಚೆಗಷ್ಟೇ ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಘೋಷಿಸಲಾಗಿದೆ. ಭಗವಾನ್ ಬುದ್ಧನ ತಪೋ ಭೂಮಿಯಾದ ಭಾರತಕ್ಕೆ ಭೇಟಿ ನೀಡಲು ಜಗತ್ತಿನಾದ್ಯಂತ ಯಾತ್ರಿಕರು, ವಿದ್ವಾಂಸರು ಮತ್ತು ಬಿಕ್ಕುಗಳನ್ನು ನಾನು ಪ್ರೀತಿಯಿಂದ ಆಹ್ವಾನಿಸುತ್ತೇನೆ.

ಮಿತ್ರರೇ,

ನಳಂದ ಮಹಾವಿಹಾರವು ಇತಿಹಾಸದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅದನ್ನು ಶತಮಾನಗಳ ಹಿಂದೆ ಸಂಘರ್ಷದ ಶಕ್ತಿಗಳು ನಾಶಮಾಡಿದವು. ಭಾರತವು ಕಲಿಕೆಯ ಕೇಂದ್ರವಾಗಿ ಅದನ್ನು ಪುನರುಜ್ಜೀವನಗೊಳಿಸುವ ಮೂಲಕ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಮತ್ತು ಭಗವಾನ್ ಬುದ್ಧನ ಆಶೀರ್ವಾದದಿಂದ ನಳಂದ ವಿಶ್ವವಿದ್ಯಾಲಯವು ತನ್ನ ಹಿಂದಿನ ಗತವೈಭವ ಮರಳಿ ಪಡೆಯುತ್ತದೆ ಎಂಬ ವಿಶ್ವಾಸವನ್ನು ನನಗಿದೆ. ಭಗವಾನ್ ಬುದ್ಧ ತನ್ನ ಬೋಧನೆಗಳನ್ನು ನೀಡಿದ ಪಾಲಿ ಭಾಷೆಯ ಸಾಹಿತ್ಯದ ಸಂರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಶಾಸ್ತ್ರೀಯ ಭಾಷೆಯಾಗಿ ಘೋಷಿಸುವ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದೆ. ಅಲ್ಲದೆ, ಬೌದ್ಧಧರ್ಮದ ವಿದ್ವಾಂಸರ ಪ್ರಯೋಜನಕ್ಕಾಗಿ ಪ್ರಾಚೀನ ಹಸ್ತಪ್ರತಿಗಳನ್ನು ಗುರುತಿಸಲು ಮತ್ತು ಪಟ್ಟಿ ಮಾಡಲು, ದಾಖಲೀಕರಣ ಮತ್ತು ಡಿಜಿಟಲೀಕರಣವನ್ನು ಪ್ರೋತ್ಸಾಹಿಸಲು ಜ್ಞಾನ ಭಾರತಂ ಮಿಷನ್‌ನ ಆರಂಭಿಸಲಾಗಿದೆ.

ಮಿತ್ರರೇ,

ಕಳೆದೊಂದು ದಶಕದಲ್ಲಿ ಭಗವಾನ್ ಬುದ್ಧನ ಬೋಧನೆಗಳನ್ನು ಉತ್ತೇಜಿಸಲು ಅನೇಕ ರಾಷ್ಟ್ರಗಳೊಂದಿಗೆ ಸಹಯೋಗ ಮಾಡಿಕೊಂಡಿದ್ದೇವೆ. ಇತ್ತೀಚೆಗೆ 'ಏಷ್ಯಾವನ್ನು ಬಲಪಡಿಸುವಲ್ಲಿ ಬುದ್ಧ ಧಮ್ಮದ ಪಾತ್ರ' ಎಂಬ ವಿಷಯದ ಅಡಿಯಲ್ಲಿ ಭಾರತದಲ್ಲಿ ಮೊದಲ ಏಷ್ಯನ್ ಬೌದ್ಧ ಶೃಂಗಸಭೆ ನಡೆಸಲಾಯಿತು. ಅದಕ್ಕೂ ಮುನ್ನ, ಭಾರತವು ಮೊದಲ ಜಾಗತಿಕ ಬೌದ್ಧ ಶೃಂಗಸಭೆ ಆಯೋಜಿಸಿತ್ತು. ನೇಪಾಳದ ಲುಂಬಿನಿಯಲ್ಲಿ ಭಾರತ ಅಂತಾರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಮೂಲಕ ನಾನು ಗೌರವ ಸಲ್ಲಿಸಿದ್ದೇನೆ. ಲುಂಬಿನಿ ವಸ್ತುಸಂಗ್ರಹಾಲಯದ ನಿರ್ಮಾಣಕ್ಕೆ ಭಾರತ ಸಹ ಕೊಡುಗೆ ನೀಡಿದೆ. ಅಲ್ಲದೆ, ಮಂಗೋಲಿಯಾದ ಮಠಗಳಿಗೆ 108 ಸಂಪುಟಗಳ ಭಗವಾನ್ ಬುದ್ಧನ 'ಸಂಕ್ಷಿಪ್ತ ಆದೇಶಗಳು' (Concise Orders), ಮಂಗೋಲಿಯನ್ ಕಂಜೂರ್‌ನ ಮರುಮುದ್ರಣ ಕಾರ್ಯವನ್ನು ಭಾರತ ಮಾಡಿ ಅವುಗಳನ್ನು ವಿತರಣೆ ಮಾಡಿದೆ. ಅನೇಕ ದೇಶಗಳಲ್ಲಿನ ಸ್ಮಾರಕಗಳ ಸಂರಕ್ಷಣೆಯಲ್ಲಿ ಭಾರತದ ಪ್ರಯತ್ನಗಳು ಭಗವಾನ್ ಬುದ್ಧನ ಪರಂಪರೆಗೆ ಬದ್ಧತೆಯನ್ನು ಬಲಪಡಿಸುತ್ತವೆ.

ಮಿತ್ರರೇ,

ಈ ಸಂವಾದ ಆವೃತ್ತಿಯು ವಿವಿಧ ಧಾರ್ಮಿಕ ನಾಯಕರನ್ನು ಒಗೂಡಿಸುವ ಧಾರ್ಮಿಕ ದುಂಡುಮೇಜಿನ ಸಭೆಯನ್ನು ಆಯೋಜಿಸುತ್ತಿರುವುದು ಉತ್ತೇಜನಕಾರಿಯಾಗಿದೆ. ಈ ವೇದಿಕೆಯಿಂದ ಅಮೂಲ್ಯವಾದ ಒಳನೋಟಗಳು ಹೊರಹೊಮ್ಮುತ್ತವೆ, ಅವು ಹೆಚ್ಚು ಸಾಮರಸ್ಯದಿಂದ ಕೂಡಿದ ಜಗತ್ತನ್ನು ರೂಪಿಸುತ್ತದೆ ಎಂಬ ವಿಶ್ವಾಸ ನನಗಿದೆ.  ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಮತ್ತೊಮ್ಮೆ ನಾನು ಥೈಲ್ಯಾಂಡ್ ಸರ್ಕಾರ ಮತ್ತು ಅಲ್ಲಿನ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸ ಬಯಸುತ್ತೇನೆ. ಈ ಉದಾತ್ತ ಧ್ಯೇಯವನ್ನು ಮುನ್ನಡೆಸಲು ನೆರೆದಿರುವ ಎಲ್ಲರಿಗೂ ನಾನು ಶುಭಾಶಯಗಳನ್ನು ಕೋರುತ್ತೇನೆ. ಧಮ್ಮದ ಬೆಳಕು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಯುಗದತ್ತ ನಮ್ಮನ್ನು ಸದಾ ಮುನ್ನಡೆಸುತ್ತಲೇ ಇರುತ್ತದೆಂದು ಆಶಿಸೋಣ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI@10: How platform changed the way we pay

Media Coverage

UPI@10: How platform changed the way we pay
NM on the go

Nm on the go

Always be the first to hear from the PM. Get the App Now!
...
Prime Minister invites citizens to share their UPI experiences as UPI completes a decade
August 25, 2026

The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.

Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.

The Prime Minister posted on X:

A decade ago, UPI was rolled out, marking a major turning point in India’s digital payments journey.

The sheer scale and reach of UPI are something every Indian must be proud of.

Tell me about your UPI experience and how it impacted your life...

#10YearsOfUPI