ಮುದ್ರಾ ಯೋಜನೆ ಯಾವುದೇ ನಿರ್ದಿಷ್ಟ ಗುಂಪಿಗೆ ಸೀಮಿತವಾಗಿಲ್ಲ, ಬದಲಾಗಿ ಯುವಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ: ಪ್ರಧಾನಮಂತ್ರಿ
ಮುದ್ರಾ ಯೋಜನೆ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುವಲ್ಲಿ ಪರಿವರ್ತನಾತ್ಮಕ ಪರಿಣಾಮವನ್ನು ಬೀರುತ್ತಿದೆ: ಪ್ರಧಾನಮಂತ್ರಿ
ಮುದ್ರಾ ಯೋಜನೆಯು ಉದ್ಯಮಶೀಲತೆಯ ಬಗ್ಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯೊಂದಿಗೆ ಮೌನ ಕ್ರಾಂತಿಯನ್ನು ತಂದಿದೆ: ಪ್ರಧಾನಮಂತ್ರಿ
ಮುದ್ರಾ ಯೋಜನೆಯ ಅತಿ ದೊಡ್ಡ ಫಲಾನುಭವಿಗಳು ಮಹಿಳೆಯರು: ಪ್ರಧಾನಮಂತ್ರಿ
ಯೋಜನೆಯಡಿಯಲ್ಲಿ 52 ಕೋಟಿ ಸಾಲಗಳನ್ನು ವಿತರಿಸಲಾಗಿದೆ, ಇದು ಜಾಗತಿಕವಾಗಿ ಅಭೂತಪೂರ್ವ ಸಾಧನೆಯಾಗಿದೆ: ಪ್ರಧಾನಮಂತ್ರಿ

ಫಲಾನುಭವಿ: ಸರ್, ನಾನು ಸಾಕುಪ್ರಾಣಿಗಳ ಹವ್ಯಾಸದಿಂದ ಇಂದು ಉದ್ಯಮಶೀಲನಾದ ನನ್ನ ಕಥೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ವ್ಯವಹಾರದ ಹೆಸರು ಕೆ9 ವರ್ಲ್ಡ್, ಅಲ್ಲಿ ನಾವು ಎಲ್ಲಾ ರೀತಿಯ ಸಾಕುಪ್ರಾಣಿಗಳು, ಮುದ್ದಿನ ಪ್ರಾಣಿಗಳು ಮತ್ತು ಔಷಧಗಳ ಪೂರೈಕೆ ಮಾಡುತ್ತಿದ್ದೇವೆ. ಸರ್, ಮುದ್ರಾ ಸಾಲ ಪಡೆದ ನಂತರ, ನಾವು ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದ್ದೇವೆ, ನಾವು ಸಾಕುಪ್ರಾಣಿಗಳಿಗೆ ವಸತಿ ಸೌಲಭ್ಯ ಪ್ರಾರಂಭಿಸಿದ್ದೇವೆ, ಸಾಕುಪ್ರಾಣಿ ಪೋಷಕರಾಗಿರುವ ಯಾರಾದರೂ, ಅವರು ಎಲ್ಲೋ ಹೊರಗೆ ಹೋಗುತ್ತಿದ್ದರೆ, ಅವರು ತಮ್ಮ ಸಾಕುಪ್ರಾಣಿಗಳನ್ನು ನಮ್ಮೊಂದಿಗೆ ಬಿಡಬಹುದು, ಅವರ ಸಾಕುಪ್ರಾಣಿಗಳು ನಮ್ಮೊಂದಿಗೆ ಮನೆಯ ವಾತಾವರಣದಲ್ಲಿ ಉಳಿಯುತ್ತವೆ, ಸರ್. ಪ್ರಾಣಿಗಳ ಮೇಲೆ ನನಗೆ ಇರುವ ಪ್ರೀತಿ ವಿಭಿನ್ನವಾಗಿದೆ ಸರ್, ನಾನು ಅವುಗಳನ್ನು ತಿನ್ನುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ ಅವುಗಳಿಗೆ ನಾನು ಆಹಾರ ನೀಡುತ್ತೇನೆ ಸರ್.

ಪ್ರಧಾನಮಂತ್ರಿ: ಹಾಗಾದರೆ ಮನೆಯಲ್ಲಿರುವ ಎಲ್ಲರಿಗೂ ನಿಮ್ಮಿಂದ ಬೇಸರ ಮತ್ತು ತೊದರೆಯಾಗುತ್ತಿರಬೇಕು?

ಫಲಾನುಭವಿ: ಸರ್, ಇದಕ್ಕಾಗಿ ನಾನು ನನ್ನ ಎಲ್ಲಾ ನಾಯಿಗಳೊಂದಿಗೆ ಪ್ರತ್ಯೇಕವಾಗಿ ಇರುತ್ತೇನೆ, ಪ್ರತ್ಯೇಕ ಅಂದರೆ ಪ್ರತ್ಯೇಕವಾಗಿ ನೆಲೆಸುತ್ತೇನೆ. ನಾನು ನಿಮಗೆ ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ ಸರ್, ಏಕೆಂದರೆ ನಿಮ್ಮ ಕಾರಣದಿಂದಾಗಿ ಸರ್, ಅನೇಕ ಪ್ರಾಣಿ ಪ್ರಿಯರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ತಮ್ಮ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೆ ಮುಕ್ತವಾಗಿ ಮಾಡಲು ಸಾಧ್ಯವಾಗುತ್ತಿದೆ ಸರ್. ನನ್ನ ನಿವಾಸದಲ್ಲಿ, ಅದನ್ನು ಸಂಪೂರ್ಣವಾಗಿ ಉಲ್ಲೇಖಿಸಲಾಗಿದೆ ಸರ್, ನೀವು ಪ್ರಾಣಿ ಪ್ರಿಯರಲ್ಲದಿದ್ದರೆ, ಅಂಥವರಿಗೆ ಅವಕಾಶವಿಲ್ಲ.

ಪ್ರಧಾನಮಂತ್ರಿ: ಇಲ್ಲಿಗೆ ಬಂದ ನಂತರ ನಿಮಗೆ ಸಾಕಷ್ಟು ಪ್ರಚಾರ ಸಿಗುತ್ತಿದೆಯೇ?

ಫಲಾನುಭವಿ: ಸರ್, ಸಹಜವಾಗಿ.

ಪ್ರಧಾನಮಂತ್ರಿ: ನಿಮ್ಮ ಹಾಸ್ಟೆಲ್ ತುಂಬಾ ಚಿಕ್ಕದಾಗಿದೆ.

ಫಲಾನುಭವಿ: ಮೊದಲು, ನಾನು ತಿಂಗಳಿಗೆ 20,000 ರೂ. ಗಳಿಸುತ್ತಿದ್ದೆ ಸರ್, ಈಗ ನಾನು ತಿಂಗಳಿಗೆ 40,000ದಿಂದ 50,000 ರೂ. ಗಳಿಸಲು ಸಾಧ್ಯವಾಗಿದೆ.

ಪ್ರಧಾನಮಂತ್ರಿ: ಹಾಗಾದರೆ ಈಗ ನೀವು ಒಂದು ಕೆಲಸ ಮಾಡಿ, ಬ್ಯಾಂಕಿನ ಆ ಜನರು.

ಫಲಾನುಭವಿ: ಹೇಳಿ ಸರ್.

ಪ್ರಧಾನಮಂತ್ರಿ: ನೀವು ಸಾಲ ಪಡೆದ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ, ನಿಮ್ಮ ಎಲ್ಲಾ ವಸ್ತುಗಳನ್ನು ತೋರಿಸಿ ಮತ್ತು ಅವರಿಗೆ ಧನ್ಯವಾದಗಳನ್ನು ಹೇಳಿ, ನೀವು ಈ ಕೆಲಸವನ್ನು ನಂಬಿ ಮಾಡಿರುವುದನ್ನು ನೋಡಿದ ಬ್ಯಾಂಕಿನ ಜನರು, ಅನೇಕ ಜನರು ಈ ಕೆಲಸ ಮಾಡಲು ಧೈರ್ಯ ತೋರದ ಕೆಲಸ ಮಾಡಲು ನನಗೆ ನೀವು ಸಾಲ ನೀಡಿದ್ದೀರಿ, ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ನೋಡಿ ಎಂದು ಹೇಳಿ.

 

ಫಲಾನುಭವಿ: ಖಂಡಿತ ಸರ್.

ಪ್ರಧಾನಮಂತ್ರಿ: ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಸಂತೋಷವಾಗುತ್ತದೆ.

ಫಲಾನುಭವಿ: ಪ್ರಧಾನ ಮಂತ್ರಿ ಅವರು ಆ ಮೌನದ ವಾತಾವರಣವನ್ನು ಸ್ವಲ್ಪ ಮುರಿದು, ಅವರು ನಮ್ಮೊಂದಿಗೆ ಸ್ವಲ್ಪ ಬೆರೆತರು, ಆದ್ದರಿಂದ ಅವರ ಬಗ್ಗೆ ನನಗೆ ತುಂಬಾ ಆಕರ್ಷಕವಾಗಿ ಕಂಡುಬಂದ ಒಂದು ವಿಷಯ ಇದು ಮತ್ತು ಎರಡನೆಯ ಪ್ರಮುಖ ವಿಷಯವೆಂದರೆ, ಅವರು ತುಂಬಾ ಉತ್ತಮ ಕೇಳುಗರು.

ಫಲಾನುಭವಿ: ನಾನು ಗೋಪಿಕೃಷ್ಣನ್, ಕೇರಳದಲ್ಲಿ ಮುದ್ರಾ ಸಾಲ ಪಡೆದ ಉದ್ಯಮಶೀಲ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ನನ್ನನ್ನು ಯಶಸ್ವಿ ಉದ್ಯಮಿಯನ್ನಾಗಿ ಪರಿವರ್ತಿಸಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜತೆಗೆ, ಮನೆಗಳು ಮತ್ತು ಕಚೇರಿಗಳಿಗೆ ನವೀಕರಿಸಬಹುದಾದ ಇಂಧನ ಪರಿಹಾರಗಳನ್ನು ಒದಗಿಸುವ ಮೂಲಕ ನನ್ನ ವ್ಯವಹಾರವು ಅಭಿವೃದ್ಧಿ ಹೊಂದುತ್ತಿದೆ.

ಪ್ರಧಾನಮಂತ್ರಿ: ನೀವು ದುಬೈನಿಂದ ಹಿಂತಿರುಗಿದಾಗ ನಿಮ್ಮ ಯೋಜನೆ ಏನಿತ್ತು?

ಫಲಾನುಭವಿ: ನಾನು ಹಿಂತಿರುಗಿ ಬಂದೆ, ಮುದ್ರಾ ಸಾಲದ ಬಗ್ಗೆ ನನಗೆ ಈ ಮಾಹಿತಿ ಸಿಕ್ಕಿತು, ಆದ್ದರಿಂದ ನಾನು ಆ ಕಂಪನಿಗೆ ರಾಜೀನಾಮೆ ನೀಡಿದ್ದೇನೆ.

ಪ್ರಧಾನಮಂತ್ರಿ: ಹಾಗಾದರೆ, ನೀವು ಅಲ್ಲಿರುವಾಗ ಅದರ ಬಗ್ಗೆ ತಿಳಿದುಕೊಂಡಿದ್ದೀರಾ?

ಫಲಾನುಭವಿ: ಹೌದು. ರಾಜೀನಾಮೆ ನೀಡಿದ ನಂತರ ನಾನು ಇಲ್ಲಿಗೆ ಬಂದೆ, ನಂತರ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವ ಮೂಲಕ, ನಾನು ಇದನ್ನು ಪ್ರಾರಂಭಿಸಿದೆ.

ಪ್ರಧಾನಮಂತ್ರಿ: ಒಂದು ಮನೆಯ ಮೇಲೆ ಸೂರ್ಯ ಘರ್ ಅನ್ನು ಸ್ಥಾಪಿಸಲು ಎಷ್ಟು ದಿನಗಳು ಬೇಕಾಗುತ್ತದೆ?

ಫಲಾನುಭವಿ: ಈಗ ಗರಿಷ್ಠ 2 ದಿನಗಳು.

ಪ್ರಧಾನಮಂತ್ರಿ: ನೀವು ಒಂದು ಮನೆಯ ಕೆಲಸವನ್ನು 2 ದಿನಗಳಲ್ಲಿ ಪೂರ್ಣಗೊಳಿಸುತ್ತೀರಿ.

ಫಲಾನುಭವಿ: ನಾವು ಕೆಲಸ ಮಾಡುತ್ತೇವೆ.

ಪ್ರಧಾನಮಂತ್ರಿ: ನೀವು ಸಾಲದ ಹಣ ಮರುಪಾವತಿಸಲು ಸಾಧ್ಯವಾಗದಿದ್ದರೆ, ಹೇಗೆ? ನಿಮ್ಮ ಪೋಷಕರು ಸಹ ನಿಮ್ಮನ್ನು ಆಕ್ಷೇಪಿಸುತ್ತಾರೆ, ನೀವು ದುಬೈನಿಂದ ಮನೆಗೆ ಹಿಂತಿರುಗಿದ್ದೀರಿ ಎಂದು ನೀವು ಚಿಂತಿತರಾದಿರಾ, ಏನಾಯಿತು?

ಫಲಾನುಭವಿ: ನನ್ನ ತಾಯಿ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದರು, ಆದರೆ ದೇವರ ದಯೆಯಿಂದ ಎಲ್ಲವೂ ಸರಿಯಾಯಿತು.

ಪ್ರಧಾನಮಂತ್ರಿ: ಪಿಎಂ ಸೂರ್ಯ ಘರ್‌ನಿಂದ ಈಗ ಉಚಿತ ವಿದ್ಯುತ್ ಪಡೆಯುತ್ತಿರುವ ಜನರ ಪ್ರತಿಕ್ರಿಯೆ ಏನು, ಏಕೆಂದರೆ ಕೇರಳದಲ್ಲಿ ಮನೆಗಳು ತಗ್ಗು ಪ್ರದೇಶಗಳಾಗಿವೆ, ಮರಗಳು ಎತ್ತರವಾಗಿವೆ, ಸೂರ್ಯನ ಕಿರಣ ಸಿಗುವುದು ಕಷ್ಟ. ಮಳೆಯೂ ಇದೆ, ಹಾಗಾದರೆ ಅವರು ಹೇಗೆ ಭಾವಿಸುತ್ತಿದ್ದಾರೆ?

ಫಲಾನುಭವಿ: ಇದನ್ನು ಸ್ಥಾಪಿಸಿದ ನಂತರ, ಅವರ ವಿದ್ಯುತ್ ಶುಲ್ಕ 240-250 ರೂ. ಒಳಗೆ ಬರುತ್ತಿದೆ. ಮೊದಲು, 3000 ರೂ. ಪಾವತಿಸುತ್ತಿದ್ದವರಿಗೆ ಈಗ 250 ರೂ. ಬಿಲ್ ಬರುತ್ತಿದೆ.

ಪ್ರಧಾನಮಂತ್ರಿ: ನೀವು ಈಗ ತಿಂಗಳಿಗೆ ಎಷ್ಟು ಗಳಿಸುತ್ತೀರಿ? ನಿಮ್ಮ ಖಾತೆಯಲ್ಲಿ ಎಷ್ಟಿದೆ?

ಫಲಾನುಭವಿ: ನನಗೆ ಈ ಮೊತ್ತ ಸಿಗುತ್ತಿದೆ...

ಪ್ರಧಾನಮಂತ್ರಿ: ಈ ಆದಾಯವು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ, ಭಯಪಡಬೇಡಿ, ಭಯಪಡಬೇಡಿ.

 

ಫಲಾನುಭವಿ: ನನಗೆ 2.5 ಲಕ್ಷ ರೂ. ಸಿಗುತ್ತಿದೆ.

ಪ್ರಧಾನಮಂತ್ರಿ: ಹಣಕಾಸು ಸಚಿವರು ನನ್ನ ಪಕ್ಕದಲ್ಲಿ ಕುಳಿತಿದ್ದಾರೆ. ಆದಾಯ ತೆರಿಗೆದಾರರು ನಿಮ್ಮ ಸ್ಥಳಕ್ಕೆ ಬರುವುದಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ.

ಫಲಾನುಭವಿ: 2.5 ಲಕ್ಷ ರೂ.ಗಿಂತ ಹೆಚ್ಚು ಪಡೆಯುತ್ತಿದ್ದೇನೆ.

ಫಲಾನುಭವಿ: ಕನಸುಗಳೆಂದರೆ ನಾವು ನಿದ್ದೆ ಮಾಡುವಾಗ ನೋಡುವಂಥದ್ದಲ್ಲ, ಕನಸುಗಳು ನಮ್ಮನ್ನು ಮಲಗಲು ಬಿಡಬಾರದು. ತೊಂದರೆಗಳು ಮತ್ತು ಸಂಕಷ್ಟಗಳು ಸಹ ಇರುತ್ತವೆ, ಕಷ್ಟಪಡುವವರು ಮಾತ್ರ ಯಶಸ್ಸು ಕಾಣುತ್ತಾರೆ.

ಫಲಾನುಭವಿ: ನಾನು ಹೌಸ್ ಆಫ್ ಪುಚ್ಕಾದ ಸ್ಥಾಪಕ. ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ, ರುಚಿಕರವಾಗಿ ಆಹಾರ ತಯಾರಿಸುತ್ತಿದ್ದೆ. ಆದ್ದರಿಂದ ಎಲ್ಲರೂ ನಾನು ಕೆಫೆ ಉದ್ಯಮಕ್ಕೆ ಹೋಗಬೇಕೆಂದು ಸೂಚಿಸಿದರು. ನಂತರ ಅದರ ಬಗ್ಗೆ ಸಂಶೋಧನೆ ಮಾಡಿದ ನಂತರ, ಲಾಭದ ಪ್ರಮಾಣವೂ ಉತ್ತಮವಾಗಿದೆ ಎಂದು ನಾನು ಕಂಡುಕೊಂಡೆ, ಆದ್ದರಿಂದ ನೀವು ಆಹಾರ ವೆಚ್ಚ ಇತ್ಯಾದಿಗಳನ್ನು ನಿರ್ವಹಿಸಿದರೆ, ನೀವು ಯಶಸ್ವಿ ವ್ಯವಹಾರವನ್ನು ನಡೆಸಬಹುದು.

ಪ್ರಧಾನಮಂತ್ರಿ: ಒಂದು ಪೀಳಿಗೆಯ ಯುವ ಸಮುದಾಯವಿದೆ, ಅವರು ಸ್ವಲ್ಪ ಶಿಕ್ಷಣ ಪಡೆದ ನಂತರ ನನಗೇನೂ ಬೇಡ, ನಾನೊಂದು ಕೆಲಸ ಪಡೆದು ನೆಲೆಸುತ್ತೇನೆ ಎಂದೇ ಭಾವಿಸುತ್ತಾರೆ, ನಾನು ಯಾವುದೇ ಅಪಾಯ ತೆಗೆದುಕೊಳ್ಳಲು ಸಿದ್ಧನಿಲ್ಲ ಎಂಬ ಭಾವನೆ ಅವರದ್ದಾಗಿದೆ. ಆದರೆ ನಿಮಗೆ ಅಪಾಯ ಸ್ವೀಕರಿಸುವ ಸಾಮರ್ಥ್ಯವಿದೆ.

ಫಲಾನುಭವಿ: ಹೌದು, ಸರ್.

ಪ್ರಧಾನಮಂತ್ರಿ: ಹಾಗಾದರೆ ನಿಮಗೆ ರಾಯ್‌ಪುರದ ಸ್ನೇಹಿತರು ಮತ್ತು ಕಾರ್ಪೊರೇಟ್ ಜಗತ್ತಿನ ಸ್ನೇಹಿತರು, ವಿದ್ಯಾರ್ಥಿ ಸ್ನೇಹಿತರು ಕೂಡ ಇರಬೇಕು. ಅವರಲ್ಲಿ ಇದರ ಬಗ್ಗೆ ಏನು ಚರ್ಚೆ? ಅವರು ಯಾವ ಪ್ರಶ್ನೆಗಳನ್ನು ಕೇಳುತ್ತಾರೆ? ಅವರು ಏನು ಯೋಚಿಸುತ್ತಾರೆ? ಅವರು ಇದನ್ನು ಮಾಡಬಹುದೇ? ಅವರು ಇದನ್ನು ಮಾಡಬೇಕೇ, ಅವರು ಮುಂದೆ ಬರಲು ಸಹ ಬಯಸುತ್ತಾರೆಯೇ?

ಫಲಾನುಭವಿ: ಸರ್, ಈಗ ನನ್ನ ವಯಸ್ಸು 23 ವರ್ಷ, ಆದ್ದರಿಂದ ನನಗೆ ಅಪಾಯ ಸ್ವೀಕರಿಸುವ ಸಾಮರ್ಥ್ಯ ಮತ್ತು ಸಮಯವೂ ಇದೆ. ಆದ್ದರಿಂದ ಇದು ಸಕಾಲ, ಯುವಕರು ತಮ್ಮ ಬಳಿ ಹಣವಿಲ್ಲ ಎಂದು ಭಾವಿಸುತ್ತಾರೆ, ಆದರೆ ಅವರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದಿಲ್ಲ. ಆದ್ದರಿಂದ ನನ್ನ ಕಡೆಯಿಂದ ನಾನು ಅವರಿಗೆ ಒಂದು ಸಲಹೆ ನೀಡಲು ಬಯಸುತ್ತೇನೆ, ಸ್ವಲ್ಪ ಸಂಶೋಧನೆ ಮಾಡಿ, ಮುದ್ರಾ ಸಾಲದಂತೆ, ಅದೇ ರೀತಿ ಪಿಎಂ ಇಜಿಪಿ ಸಾಲ ಯೋಜನೆಯೂ ಇದೆ, ಅಡಮಾನವಿಲ್ಲದೆ ನೀವು ಪಡೆಯಬಹುದಾದ ಅನೇಕ ಸಾಲ ಯೋಜನೆಗಳಿವೆ. ಆದ್ದರಿಂದ ನಿಮಗೆ ಸಾಮರ್ಥ್ಯವಿದ್ದರೆ ನೀವು ಕೆಲಸವನ್ನು ಬಿಡಬಹುದು, ಏಕೆಂದರೆ ಆಗಸದಲ್ಲಿ ಯಾವುದೇ ಮಿತಿಗಳಿಲ್ಲ, ನಂತರ ನೀವು ವ್ಯಾಪಾರ ಮಾಡಬಹುದು ಮತ್ತು ನೀವು ಬಯಸಿದಷ್ಟು ಬೆಳೆಯಬಹುದು.

ಫಲಾನುಭವಿ: ಛಾವಣಿಯನ್ನು ತಲುಪಲು ಬಯಸುವವರಿಗೆ ಮೆಟ್ಟಿಲುಗಳು ಇರಬೇಕು, ನಮ್ಮ ಗಮ್ಯಸ್ಥಾನ ಆಗಸವಾಗಿರಬೇಕು, ನಮ್ಮ ಮಾರ್ಗಗಳನ್ನು ನಾವೇ ಹುಡುಕಬೇಕು. ನಾನು ಬಾರಾಮುಲ್ಲಾ ಕಾಶ್ಮೀರದ ಬೇಕ್ ಮೈ ಕೇಕ್‌ನ ಎಂಡಿ ಮುದಾಸೀರ್ ನಕಸ್ಬಂದಿ. ಯಶಸ್ವಿ ವ್ಯವಹಾರದೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ನಾವು ಉದ್ಯೋಗ ಸೃಷ್ಟಿಕರ್ತರಾಗಿದ್ದೇವೆ. ಬಾರಾಮುಲ್ಲಾದ ದೂರದ ಪ್ರದೇಶಗಳಿಂದ ಬಂದ 42 ಜನರಿಗೆ ನಾವು ಸ್ಥಿರವಾದ ಉದ್ಯೋಗಗಳನ್ನು ಒದಗಿಸಿದ್ದೇವೆ.

ಪ್ರಧಾನಮಂತ್ರಿ: ನೀವು ತುಂಬಾ ವೇಗವಾಗಿ ಪ್ರಗತಿ ಹೊಂದುತ್ತಿದ್ದೀರಿ. ಬ್ಯಾಂಕ್ ನಿಮಗೆ ಸಾಲ ನೀಡುವ ಮೊದಲು ನಿಮ್ಮ ಪರಿಸ್ಥಿತಿ ಹೇಗಿತ್ತು?

ಫಲಾನುಭವಿ: ಸರ್, ಒಟ್ಟಾರೆಯಾಗಿ, ಅದು 2021. ಇದಕ್ಕೂ ಮೊದಲು, ನಾನು ಲಕ್ಷ ಅಥವಾ ಕೋಟಿಗಳಲ್ಲಿ ನನ್ನ ಸಂಪಾದನೆ ಇರಲಿಲ್ಲ, ನಾನು ಸಾವಿರಾರು ರೂ. ಮೊತ್ತದ ಸಂಪಾದನೆಯಲ್ಲಿದ್ದೆ.

 

ಪ್ರಧಾನಮಂತ್ರಿ: ನಿಮ್ಮ ಸ್ಥಳದಲ್ಲಿಯೂ ಯುಪಿಐ ಬಳಸಲಾಗುತ್ತಿದೆಯೇ?

ಫಲಾನುಭವಿ: ಸರ್, ನಾವು ಸಂಜೆ ಹೊತ್ತಿಗೆ ವ್ಯವಹಾರದ ಹಣ ಪರಿಶೀಲಿಸಿದಾಗ, 90% ವಹಿವಾಟುಗಳು ಯುಪಿಐ ಮೂಲಕ ನಡೆಯುವುದರಿಂದ ಮತ್ತು ನಮ್ಮ ಕೈಯಲ್ಲಿ ಕೇವಲ 10% ನಗದು ಇರುವುದರಿಂದ ನನಗೆ ತುಂಬಾ ನಿರಾಶೆಯಾಗುತ್ತದೆ.

ಫಲಾನುಭವಿ: ವಾಸ್ತವವಾಗಿ, ನಾನು ಅವರು ತುಂಬಾ ಸಭ್ಯ ಎಂಬುದನ್ನು ಕಂಡುಕೊಂಡೆ, ಅವರು ನಮ್ಮ ದೇಶದ ಪ್ರಧಾನ ಮಂತ್ರಿ ಅಂತಾ ಅನಿಸಲಿಲ್ಲ, ಯಾರೋ ಒಬ್ಬ ಸಾಮಾನ್ಯರು ನಮ್ಮೊಂದಿಗಿದ್ದಾರೆ ಮತ್ತು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅನಿಸಿತು, ಆದ್ದರಿಂದ ಅವರು ತಂಬಾ ವಿನಮ್ರತೆ ತೋರಿಸಿದರು.

ಪ್ರಧಾನಮಂತ್ರಿ: ಸುರೇಶ್, ನೀವು ಈ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡಿರಿ, ನೀವು ಮೊದಲು ಯಾವ ಕೆಲಸ ಮಾಡುತ್ತಿದ್ದಿರಿ, ನೀವು ಈಗಾಗಲೇ ಕುಟುಂಬದಲ್ಲಿ ಯಾವ ಕೆಲಸ ಮಾಡುತ್ತಿದ್ದೀರಿ?

ಫಲಾನುಭವಿ: ಸರ್, ನಾನು ಈಗಾಗಲೇ ಒಂದು ಕೆಲಸ ಮಾಡುತ್ತಿದ್ದೆ.

ಪ್ರಧಾನಮಂತ್ರಿ: ಎಲ್ಲಿ?

ಫಲಾನುಭವಿ: ವಾಪಿಯಲ್ಲಿ, ನಂತರ 2022ರಲ್ಲಿ ಈ ಕೆಲಸದಿಂದ ಏನೂ ಆಗುವುದಿಲ್ಲ ಎಂದು ನಾನು ಭಾವಿಸಿದೆ, ಆದ್ದರಿಂದ ನಾನು ನನ್ನ ಸ್ವಂತ ವ್ಯವಹಾರ ಪ್ರಾರಂಭಿಸಬೇಕು ಎಂದುಕೊಂಡೆ.

ಪ್ರಧಾನಮಂತ್ರಿ: ನೀವು ನಿಮ್ಮ ಜೀವನೋಪಾಯ ಗಳಿಸಲು ಪ್ರತಿದಿನ ವಾಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಿರಿ, ನೀವು ರೈಲಿನಲ್ಲಿ ಮಾಡುವ ಸ್ನೇಹ ಅದ್ಭುತವಾಗಿದೆ, ಆದ್ದರಿಂದ ಇದು....

ಫಲಾನುಭವಿ: ಸರ್, ನಾನು ಸಿಲ್ವಾಸ್ಸಾದಲ್ಲಿ ವಾಸಿಸುತ್ತಿದ್ದೇನೆ, ವಾಪಿಯಲ್ಲಿ ಕೆಲಸ ಮಾಡುತ್ತಿದ್ದೆ, ಈಗ ನನ್ನ ಕೆಲಸ ಸಿಲ್ವಾಸ್ಸಾದಲ್ಲಿ ಮಾತ್ರ.

ಪ್ರಧಾನಮಂತ್ರಿ: ಅವರೆಲ್ಲರೂ ಅಪರಾಧಿ ಗುಂಪು(ಅಪ್-ಡೌನ್ ಗ್ಯಾಂಗ್‌)ಗಳು ಎಂಬುದು ನನಗೆ ತಿಳಿದಿದೆ, ಆದರೆ ಈಗ ಅವರು ನೀವು ಹೇಗೆ ಇಷ್ಟೊಂದು ಸಂಪಾದಿಸಲು ಪ್ರಾರಂಭಿಸಿದ್ದೀರಿ ಎಂದು ಕೇಳುತ್ತಿರಬೇಕಲ್ಲವೇ, ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿರಬೇಕಲ್ಲವೇ? ಅವರಲ್ಲಿ ಯಾರಾದರೂ ಮುದ್ರಾ ಸಾಲ ತೆಗೆದುಕೊಂಡು ಏನಾದರೂ ಮಾಡಲು ಬಯಸುತ್ತಾರಾ?

ಫಲಾನುಭವಿ: ಹೌದು ಸರ್, ಇತ್ತೀಚೆಗೆ ನಾನು ಇಲ್ಲಿಗೆ ಬರುತ್ತಿದ್ದಾಗ, ನನ್ನ ಸ್ನೇಹಿತರೊಬ್ಬರು ಸಹ ನನಗೆ ಅದನ್ನೇ ಹೇಳಿದರು, ಸಾಧ್ಯವಾದರೆ ದಯವಿಟ್ಟು ಮುದ್ರಾ ಸಾಲಕ್ಕಾಗಿ ನನಗೆ ಸ್ವಲ್ಪ ಮಾರ್ಗದರ್ಶನ ನೀಡಿ.

ಪ್ರಧಾನಮಂತ್ರಿ: ಮೊದಲನೆಯದಾಗಿ, ನನ್ನ ಮನೆಗೆ ಬಂದಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ, ಮನೆಗೆ ಅತಿಥಿಗಳು ಬಂದಾಗ ಅವರ ಪಾದದ ಧೂಳು ಮನೆಯ ಮೇಲೆ ಬಿದ್ದಾಗ ಮನೆ ಶುದ್ಧವಾಗುತ್ತದೆ. ಆದ್ದರಿಂದ, ನಾನು ನಿಮ್ಮನ್ನು ತುಂಬಾ ಸ್ವಾಗತಿಸುತ್ತೇನೆ. ನಿಮ್ಮೆಲ್ಲರಿಗೂ ಕೆಲವು ಅನುಭವಗಳಿರಬೇಕು, ನಿಮ್ಮಲ್ಲಿ ಕೆಲವರು ನಿಮ್ಮ ಕೆಲಸ ಮಾಡುವಾಗ ತುಂಬಾ ಭಾವನಾತ್ಮಕ ಅನುಭವ ಪಡೆದಿರಬಹುದು. ಯಾರಾದರೂ ನನಗೆ ಏನಾದರೂ ಹೇಳಬೇಕೆಂದು ಭಾವಿಸಿದರೆ, ನಾನು ಕೇಳಲು ಇಷ್ಟಪಡುತ್ತೇನೆ.

ಫಲಾನುಭವಿ: ಸರ್, ಮೊದಲನೆಯದಾಗಿ ನಾನು ನಿಮಗೆ ಇದನ್ನು ಹೇಳಲು ಬಯಸುತ್ತೇನೆ, ನೀವು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿಕೊಡುವುದರಿಂದ ಅನೇಕರಿಗೆ ಅನುಕೂಲವಾಗಿದೆ. ರಾಯ್‌ಬರೇಲಿಯ ಒಂದು ಸಣ್ಣ ಪಟ್ಟಣದ ಮಹಿಳಾ ವ್ಯಾಪಾರಿ ನಿಮ್ಮ ಮುಂದೆ ನಿಂತಿದ್ದಾರೆ, ಇದು ನಿಮ್ಮ ಸಹಕಾರ ಮತ್ತು ಬೆಂಬಲದಿಂದ ಎಂಎಸ್ಎಂಇಗಳು ತುಂಬಾ ಪ್ರಯೋಜನ ಪಡೆಯುತ್ತಿವೆ ಎಂಬುದಕ್ಕೆ ಪುರಾವೆಯಾಗಿದೆ, ನಾನು ಇಲ್ಲಿಗೆ ಬರಲು ಇದು ತುಂಬಾ ಭಾವನಾತ್ಮಕ ಸಮಯವಾಗಿದೆ. ನಾವು ಒಟ್ಟಾಗಿ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನೀವು ಎಂಎಸ್ಎಂಇಗಳನ್ನು ಮಕ್ಕಳಂತೆ ಸಹಕರಿಸುತ್ತಿರುವ ಮತ್ತು ನೋಡಿಕೊಳ್ಳುವ ರೀತಿ, ಸರ್ಕಾರದಿಂದ ಪರವಾನಗಿಗಳನ್ನು ಪಡೆಯುವಲ್ಲಿ ನಾವು ಎದುರಿಸುವ ಸಮಸ್ಯೆಗಳು ಅಥವಾ ಹಣಕಾಸಿನ ವಿಷಯ... ಈ ರೀತಿ ಎವ್ವ ವಿಷಯಗಳಲ್ಲೂ ಅನುಕೂಲವಾಗುತ್ತಿದೆ.

 

ಪ್ರಧಾನಮಂತ್ರಿ: ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೀರಾ?

ಫಲಾನುಭವಿ: ಇಲ್ಲ ಇಲ್ಲ ಸರ್, ನನ್ನ ಮನಸ್ಸಿನಲ್ಲಿದ್ದದ್ದು ಇದನ್ನೇ ನಾನು ನಿಮಗೆ ಹೇಳಿದೆ, ಹೌದು ಹೌದು, ಏಕೆಂದರೆ ನಾನು ಮೊದಲು ಸಾಲ ಇತ್ಯಾದಿಗಳಿಗೆ ಹೋದಾಗಲೆಲ್ಲಾ ಈ ಸಮಸ್ಯೆ ಎದುರಿಸುತ್ತಿದ್ದೆ ಎಂದು ನನಗೆ ಅನಿಸಿತು. ನನಗೆ ಅದು ನಿರಾಕರಿಸುತ್ತಿತ್ತು.

ಪ್ರಧಾನಮಂತ್ರಿ: ಹೇಳಿ, ನೀವು ಏನು ಮಾಡುತ್ತೀರಿ?

ಫಲಾನುಭವಿ: ಬೇಕರಿ.

ಪ್ರಧಾನಮಂತ್ರಿ: ಬೇಕರಿ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ನೀವು ಈಗ ಎಷ್ಟು ಹಣ ಗಳಿಸುತ್ತೀರಿ?

ಫಲಾನುಭವಿ: ಸರ್, ನನ್ನ ಮಾಸಿಕ ವಹಿವಾಟು 2.5ರಿಂದ 3 ಲಕ್ಷ ರೂ.

ಪ್ರಧಾನಮಂತ್ರಿ: ಸರಿ, ನೀವು ಎಷ್ಟು ಜನರಿಗೆ ಕೆಲಸ ನೀಡುತ್ತಿದ್ದೀರಿ?

ಫಲಾನುಭವಿ: ಸರ್, ನಮ್ಮಲ್ಲಿ 7ರಿಂದ 8 ಜನರ ಗುಂಪು ಇದೆ.

ಪ್ರಧಾನಮಂತ್ರಿ: ಸರಿ.

ಫಲಾನುಭವಿ: ಹೌದು ಸರ್.

ಫಲಾನುಭವಿ: ಸರ್ ನನ್ನ ಹೆಸರು ಲವಕುಶ್ ಮೆಹ್ರಾ, ನಾನು ಭೋಪಾಲ್ ಮಧ್ಯಪ್ರದೇಶದವನು. ಮೊದಲು ನಾನು ಒಂದು ಕೆಲಸ ಮಾಡುತ್ತಿದ್ದೆ ಸರ್, ನಾನು ಕೆಲಸ ಮಾಡುತ್ತಿದ್ದಾಗ ಸೇವಕನಾಗಿದ್ದೆ ಸರ್, ನೀವು ನಮ್ಮ ಗ್ಯಾರಂಟಿ ತೆಗೆದುಕೊಂಡಿದ್ದೀರಿ ಸರ್, ಮುದ್ರಾ ಸಾಲದ ಮೂಲಕ ಇಂದು ನಾವು ಮಾಲೀಕರಾಗಿದ್ದೇವೆ. ವಾಸ್ತವವಾಗಿ, ನಾನು ಎಂಬಿಎ ಓದಿದ್ದೇನೆ. ನನಗೆ ಔಷಧ ಉದ್ಯಮದ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ನಾನು 2021ರಲ್ಲಿ ನನ್ನ ಕೆಲಸ ಪ್ರಾರಂಭಿಸಿದೆ, ಸರ್ ನಾನು ಮೊದಲು ಬ್ಯಾಂಕ್‌ಗಳನ್ನು ಸಂಪರ್ಕಿಸಿದೆ, ಅವರು ನನಗೆ ಮುದ್ರಾ ಸಾಲಕ್ಕೆ 5 ಲಕ್ಷ ರೂ. ಸಿಸಿ ಮಿತಿ ನೀಡಿದರು. ಆದರೆ ಸರ್, ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಸಾಲ ತೆಗೆದುಕೊಳ್ಳುತ್ತಿದ್ದೇನೆ, ನಾನು ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂದು ನಾನು ಹೆದರುತ್ತಿದ್ದೆ. ಹಾಗಾಗಿ, ನಾನು ಕೇವಲ ಮೂರರಿಂದ ಮೂರೂವರೆ ಲಕ್ಷ ರೂ. ಅನ್ನು ಮಾತ್ರ ಖರ್ಚು ಮಾಡುತ್ತಿದ್ದೆ. ಇದೀಗ ಸರ್, ನನ್ನ ಮುದ್ರಾ ಸಾಲ 5 ಲಕ್ಷದಿಂದ 9.5 ಲಕ್ಷ ರೂ.ಗೆ ಏರಿದೆ. ನನ್ನ ಮೊದಲ ವರ್ಷದ ವಹಿವಾಟು 12 ಲಕ್ಷ ರೂ.ಗಳಾಗಿದ್ದು, ಅದೀಗ 50 ಲಕ್ಷ ರೂ.ಗೆ ಹೆಚ್ಚಾಗಿದೆ.

ಪ್ರಧಾನಮಂತ್ರಿ: ಇದು ಸಹ ಒಂದು ಜೀವನ ವಿಧಾನ ಎಂದು ಭಾವಿಸುವ ಇತರೆ ಸ್ನೇಹಿತರು ನಿಮ್ಮಲ್ಲಿರಬಹುದು.

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಎಲ್ಲಕ್ಕಿಂತ ಮುಖ್ಯವಾಗಿ, ಮುದ್ರಾ ಯೋಜನೆ ಮೋದಿ ಅವರನ್ನು ಹೊಗಳುವುದಕ್ಕಾಗಿ ಇಲ್ಲ, ಮುದ್ರಾ ಯೋಜನೆ ನನ್ನ ದೇಶದ ಯುವಕರಿಗೆ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಮತ್ತು ಅವರ ಉತ್ಸಾಹವನ್ನು ಉನ್ನತ ಮಟ್ಟದಲ್ಲಿಡಲು ಧೈರ್ಯ ನೀಡುತ್ತದೆ, ನಾನು ಜೀವನೋಪಾಯಕ್ಕಾಗಿ ಏಕೆ ಅಲೆದಾಡಬೇಕು, ನಾನು 10 ಜನರಿಗೆ ಜೀವನೋಪಾಯ ಒದಗಿಸುತ್ತೇನೆ ಎಂಬ ಧ್ಯೇಯವನ್ನು ಇದು ಹೊಂದಿದೆ.

 

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಇದು ಒಂದು ಮನಸ್ಥಿತಿ ಸೃಷ್ಟಿಸುವುದಾಗಿದೆ, ನಿಮ್ಮ ಸುತ್ತಮುತ್ತಲಿನ ಜನರು ಇದನ್ನು ಅನುಭವಿಸುತ್ತಾರೆಯೇ?

ಫಲಾನುಭವಿ: ಹೌದು ಸರ್. ನನ್ನ ಗ್ರಾಮ ಬಚವಾನಿ, ಭೋಪಾಲ್‌ನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಕನಿಷ್ಠ 2-3 ಜನರು ಅಲ್ಲಿ ಆನ್‌ಲೈನ್ ಡಿಜಿಟಲ್ ಅಂಗಡಿಗಳನ್ನು ತೆರೆದಿದ್ದಾರೆ, ಕೆಲವರು ಫೋಟೊ ಸ್ಟುಡಿಯೋಗಳಿಗಾಗಿ ತಲಾ 1 ಅಥವಾ 2 ಲಕ್ಷ ರೂ. ಸಾಲ ಪಡೆದಿದ್ದಾರೆ, ನಾನು ಅವರಿಗೂ ಸಹಾಯ ಮಾಡಿದ್ದೇನೆ ಸರ್. ನನ್ನ ಸ್ನೇಹಿತರಿಗೂ ಸಹ...

ಪ್ರಧಾನಮಂತ್ರಿ: ಈಗ ನಿಮ್ಮಿಂದ ನನ್ನ ನಿರೀಕ್ಷೆ ಏನೆಂದರೆ, ನೀವು ಜನರಿಗೆ ಉದ್ಯೋಗ ಒದಗಿಸುವುದು ಮಾತ್ರವಲ್ಲದೆ, ಯಾವುದೇ ಗ್ಯಾರಂಟಿ ಇಲ್ಲದೆ ಅವರು ಹಣ ಪಡೆಯುತ್ತಿದ್ದಾರೆ ಎಂದು ಹೇಳಬೇಕು, ನೀವು ಮನೆಯಲ್ಲಿ ಏಕೆ ಕುಳಿತಿದ್ದೀರಿ, ಬ್ಯಾಂಕ್ ಜನರಿಗೆ ತೊಂದರೆ ಕೊಡಲು ಹೋಗಿ ಎಂದು ಸಲಹೆ ನೀಡಿ.

ಫಲಾನುಭವಿ: ಈ ಮುದ್ರಾ ಸಾಲದಿಂದಾಗಿ ನಾನು ಇತ್ತೀಚೆಗೆ 6 ತಿಂಗಳ ಹಿಂದೆ 34 ಲಕ್ಷ ರೂಪಾಯಿ ಮೌಲ್ಯದ ನನ್ನ ಸ್ವಂತ ಮನೆ ಖರೀದಿಸಿದ್ದೇನೆ.

ಪ್ರಧಾನಮಂತ್ರಿ: ಅದ್ಭುತ.

ಫಲಾನುಭವಿ: ನಾನು 60-70 ಸಾವಿರ ರೂಪಾಯಿ ದುಡಿಮೆಯ ಕೆಲಸ ಮಾಡುತ್ತಿದ್ದೆ, ಇಂದು ನಾನು ತಿಂಗಳಿಗೆ 1.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತೇನೆ ಸರ್.

ಪ್ರಧಾನಮಂತ್ರಿ: ಸರಿ, ನಿಮಗೆ ಅಭಿನಂದನೆಗಳು.

ಫಲಾನುಭವಿ: ಇದೆಲ್ಲವೂ ನಿಮ್ಮಿಂದಾಗಿ. ತುಂಬಾ ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ಸಹೋದರ, ನಿಮ್ಮ ಸ್ವಂತ ಶ್ರಮ ಫಲ ನೀಡುತ್ತಿದೆ.

ಫಲಾನುಭವಿ: ಮೋದಿ ಜಿ ಅವರೊಂದಿಗೆ ಮಾತನಾಡಿದ ನಂತರ, ನಾವು ಪ್ರಧಾನ ಮಂತ್ರಿ ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ನಮಗೆ ಅನಿಸಲಿಲ್ಲ. ನಮ್ಮ ಮನೆಯ ಯಾರೋ, ನಮ್ಮ ಕುಟುಂಬದ ಹಿರಿಯ ಸದಸ್ಯರು ನಮ್ಮೊಂದಿಗೆ ಮಾತನಾಡುತ್ತಿರುವಂತೆ ಭಾಸವಾಯಿತು. ನಡೆಯುತ್ತಿರುವ ಮುದ್ರಾ ಸಾಲ ಯೋಜನೆಯಲ್ಲಿ ನಾವು ಹೇಗೆ ಯಶಸ್ವಿಯಾಗಿದ್ದೇವೆ ಎಂಬುದರ ಸಂಪೂರ್ಣ ಯಶೋಗಾಥೆಯನ್ನು ಅವರು ಅರ್ಥ ಮಾಡಿಕೊಂಡರು. ಹೆಚ್ಚಿನ ಜನರು ಸಬಲರಾಗಲು ಮತ್ತು ಸ್ವಂತ ವ್ಯವಹಾರ ಪ್ರಾರಂಭಿಸಲು ಮುದ್ರಾ ಸಾಲದ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಮೂಡಿಸಲು ಅವರು ನಮ್ಮನ್ನು ಪ್ರೇರೇಪಿಸಿದ ರೀತಿ ಅದ್ಭುತವಾಗಿತ್ತು.

ಫಲಾನುಭವಿ: ನಾನು ಭಾವನಗರ, ಗುಜರಾತ್‌ನಿಂದ ಬಂದಿದ್ದೇನೆ.

ಪ್ರಧಾನಮಂತ್ರಿ: ನೀವು ಅತ್ಯಂತ ಕಿರಿಯವರಂತೆ ಕಾಣುತ್ತಿದ್ದೀರಾ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಈ ಇಡೀ ಗುಂಪಿನಲ್ಲಿ?

ಫಲಾನುಭವಿ: ನಾನು ಅಂತಿಮ ವರ್ಷದ ಪದವಿಯಲ್ಲಿದ್ದೇನೆ, 4 ತಿಂಗಳು ಬಾಕಿ ಉಳಿದಿವೆ....

 

ಪ್ರಧಾನಮಂತ್ರಿ: ನೀವು ಓದುತ್ತಿದ್ದೀರಾ ಮತ್ತು ಗಳಿಸುತ್ತಿದ್ದೀರಾ?

ಫಲಾನುಭವಿ: ಹೌದು.

ಪ್ರಧಾನಮಂತ್ರಿ: ಚೆನ್ನಾಗಿ ಮಾಡಿದ್ದೀರಿ!

ಫಲಾನುಭವಿ: ನಾನು ಆದಿತ್ಯ ಟೆಕ್ ಲ್ಯಾಬ್‌ನ ಸಂಸ್ಥಾಪಕ, ಇದರಲ್ಲಿ ನಾನು 3ಡಿ ಮುದ್ರಣ, ರಿವರ್ಸ್ ಎಂಜಿನಿಯರಿಂಗ್ ಮತ್ತು ಕ್ಷಿಪ್ರ ಮೂಲಮಾದರಿ ಕೆಲಸ ಮತ್ತು ಕೆಲವು ರೊಬೊಟಿಕ್ಸ್ ಕೆಲಸಗಳನ್ನು ಮಾಡುತ್ತೇನೆ. ನಾನು ಅಂತಿಮ ವರ್ಷದ ಮೆಕಾಟ್ರಾನಿಕ್ಸ್ ವಿದ್ಯಾರ್ಥಿಯಾಗಿರುವುದರಿಂದ, ನನಗೆ ಆಟೊಮೇಷನ್ ಮತ್ತು ಇತರೆ ಎಲ್ಲದರ ಬಗ್ಗೆ ಹೆಚ್ಚು ಆಸಕ್ತಿ ಇದೆ. ಆದ್ದರಿಂದ, ನಾನು ಇದನ್ನು ಮುದ್ರಾ ಸಾಲದಿಂದ ಪಡೆದುಕೊಂಡಿದ್ದೇನೆ. ಈಗ, ನನಗೆ 21 ವರ್ಷ, ನಾನು ಉದ್ಯಮ ಪ್ರಾರಂಭಿಸಿದಾಗ, ಸಾಲ ಪಡೆಯುವ ಪ್ರಕ್ರಿಯೆ ತುಂಬಾ ಸಂಕೀರ್ಣವಾಗಿತ್ತು. ಈ ವರ್ಷ ನನಗೆ ಅದು ಸಿಗದಿರಬಹುದು ಎಂದು ನಾನು ಕೇಳಿದ್ದೆ. ಅದನ್ನು ಯಾರು ನಂಬುತ್ತಾರೆ? ಮೊದಲು, 1 ಅಥವಾ 2 ವರ್ಷಗಳ ಕಾಲ ಕೆಲಸದ ಅನುಭವ ಪಡೆಯಿರಿ ಮತ್ತು ನಂತರ ನೀವು ಸಾಲ ಪಡೆಯಬಹುದು. ನಮ್ಮ ಭಾವನಗರದಲ್ಲಿ ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್ ಇರುವುದರಿಂದ, ನಾನು ಅಲ್ಲಿಗೆ ಹೋಗಿ ನನ್ನ ಐಡಿಯಾ ಹೇಳಿದೆ, ನಾನು ಏನು ಮಾಡಬೇಕೆಂದು ಬಯಸುತ್ತಿದ್ದೆನೋ ಅದಕ್ಕೆ ಅವರು ಸರಿ ಎಂದು ಹೇಳಿದರು, ನೀವು ಕಿಶೋರ್ ವಿಭಾಗದಲ್ಲಿ 50,000ದಿಂದ 5 ಲಕ್ಷ ರೂ.ವರೆಗೆ ಮುದ್ರಾ ಸಾಲ ಪಡೆಯಬಹುದು, ಆದ್ದರಿಂದ ನಾನು 2 ಲಕ್ಷ ರೂ. ಸಾಲವನ್ನು ತೆಗೆದುಕೊಂಡು 4 ತಿಂಗಳ ಹಿಂದೆ ಅದನ್ನು ಪ್ರಾರಂಭಿಸಿದೆ, ನಾನು ಸೋಮವಾರದಿಂದ ಶುಕ್ರವಾರದವರೆಗೆ ಕಾಲೇಜಿಗೆ ಹೋಗುತ್ತೇನೆ, ನಂತರ ವಾರಾಂತ್ಯದಲ್ಲಿ ನಾನು ಭಾವನಗರದಲ್ಲಿಯೇ ಇದ್ದು ನನ್ನ ಬಾಕಿ ಕೆಲಸ ಮುಗಿಸುತ್ತೇನೆ.  ಈಗ ನಾನು ತಿಂಗಳಿಗೆ 30ರಿಂದ 35,000 ರೂ. ಗಳಿಸುತ್ತಿದ್ದೇನೆ ಸರ್.

ಪ್ರಧಾನಮಂತ್ರಿ: ಸರಿ.

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಎಷ್ಟು ಜನರು ಕೆಲಸ ಮಾಡುತ್ತಾರೆ?

ಫಲಾನುಭವಿ: ಪ್ರಸ್ತುತ ನಾನು ದೂರದಿಂದಲೇ ಕೆಲಸ ಮಾಡುತ್ತೇನೆ.

ಪ್ರಧಾನಮಂತ್ರಿ: ನೀವು ವಾರದಲ್ಲಿ 2 ದಿನ ಕೆಲಸ ಮಾಡುತ್ತೀರಿ.

ಫಲಾನುಭವಿ: ನಾನು ದೂರದಿಂದಲೇ ಕೆಲಸ ಮಾಡುತ್ತೇನೆ, ನನ್ನ ಪೋಷಕರು ಮನೆಯಲ್ಲಿದ್ದಾರೆ, ಅವರು ನನಗೆ ಅರೆಕಾಲಿಕ ಸಹಾಯ ಮಾಡುತ್ತಾರೆ. ಮುದ್ರಾ ಸಾಲದ ಮೂಲಕ ನನಗೆ ಆರ್ಥಿಕ ಬೆಂಬಲ ಸಿಗುತ್ತಿದೆ, ಆದರೆ ವ್ಯವಹಾರ ಆರಂಭಿಸುವಾಗ ನಾವು ನಮ್ಮ ಮೇಲೆ ನಂಬಿಕೆ ಇಡಬೇಕು ಅಷ್ಟೆ, ಧನ್ಯವಾದಗಳು ಸರ್!

ಫಲಾನುಭವಿ: ಇದೀಗ ನಾವು ಮನಾಲಿಯಲ್ಲಿ ನಮ್ಮ ಸ್ವಂತ ವ್ಯವಹಾರ ಮಾಡುತ್ತಿದ್ದೇವೆ! ಮೊದಲು ನನ್ನ ಪತಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು, ಮದುವೆಯ ನಂತರ ನಾನು ಅವರೊಂದಿಗೆ ಹೋದಾಗ, ನಾನು ಅವರಿಗೆ ಹೇಳಿದೆ, ಯಾರಿಗಾದರೂ ಕೆಲಸ ಮಾಡುವ ಬದಲು, ನಾವಿಬ್ಬರೂ ಅಂಗಡಿ ತೆರೆಯುವುದು ಉತ್ತಮ ಎಂದು, ನಂತರ ನಾವು ತರಕಾರಿ ಅಂಗಡಿ ತೆರೆದೆವು, ಆದ್ದರಿಂದ ಸರ್ ನಾವು ತರಕಾರಿಗಳನ್ನು ಇಡುತ್ತಿದ್ದೆವು, ಕ್ರಮೇಣ ಜನರು ಹಿಟ್ಟು ಮತ್ತು ಅಕ್ಕಿಯನ್ನು ಇಟ್ಟುಕೊಳ್ಳಿ ಎಂದು ಹೇಳಲು ಪ್ರಾರಂಭಿಸಿದರು, ನಂತರ ಸರ್ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಿಬ್ಬಂದಿ ತರಕಾರಿಗಳನ್ನು ತೆಗೆದುಕೊಳ್ಳಲು ನಮ್ಮ ಅಂಗಡಿಗೆ ಬರುತ್ತಿದ್ದರು, ಹಾಗಾಗಿ ನಾನು ಅವರೊಂದಿಗೆ ಮಾತನಾಡಿದೆ, ನಾವು ಸಾಲ ಪಡೆಯಬೇಕಾದರೆ, ನಮಗೆ ಅದು ಸಿಗುತ್ತದೆಯೇ, ನಂತರ ಅವರು ಮೊದಲು ನಿರಾಕರಿಸಿದರು, ಅಂದರೆ ಇದು 2012-13ರಲ್ಲಿ, ನಂತರ ನಾನು ಹೀಗೆ ಹೇಳಿದೆ...

ಪ್ರಧಾನಮಂತ್ರಿ: ನೀವು ಇದನ್ನು 2012-2013ರ ಬಗ್ಗೆ ಹೇಳುತ್ತಿದ್ದೀರಿ, ಯಾರಾದರೂ  ಪತ್ರಕರ್ತರಿಗೆ ಇದರ ಬಗ್ಗೆ ತಿಳಿದಿದ್ದರೆ ಅವರು, ನೀವು ಹಿಂದಿನ ಸರ್ಕಾರದ ಮೇಲೆ ದೂರು ಅಥವಾ ಆರೋಪ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದರು.

ಫಲಾನುಭವಿ: ನಂತರ ಅವರು ನನ್ನ ಬಳಿ ಆಸ್ತಿ ಇದೆಯೇ ಎಂದು ಕೇಳಿದರು. ನಾನು ಇಲ್ಲ ಎಂದು ಹೇಳಿದೆ. ಈ ಮುದ್ರಾ ಸಾಲದ ಬಗ್ಗೆ ನನಗೆ ತಿಳಿದ ತಕ್ಷಣ, ಅದು 2015-16ರಲ್ಲಿ ಪ್ರಾರಂಭವಾದಾಗ, ಅದು ಹೀಗಿದೆ ಎಂದು ನಾನು ಅವರಿಗೆ ಹೇಳಿದೆ, ನೀವು ಬಯಸಿದರೆ, ಒಂದು ಯೋಜನೆ ಪ್ರಾರಂಭಿಸಲಾಗಿದೆ ಎಂದು ಅವರೇ ನಮಗೆ ಹೇಳಿದರು. ಸರ್, ನಾವು ಅದನ್ನು ಬೇಕು ಎಂದು ಹೇಳಿದೆ, ಆದ್ದರಿಂದ ಅವರು ನಮ್ಮಿಂದ ಯಾವುದೇ ದಾಖಲೆಗಳನ್ನು ಕೇಳಲಿಲ್ಲ, ಏನನ್ನೂ ಕೇಳಲಿಲ್ಲ. ಅವರು ನಮಗೆ ಮೊದಲ ಬಾರಿಗೆ 2.5 ಲಕ್ಷ ರೂ. ಸಾಲ ನೀಡಿದರು. ನಾನು ಆ ಸಾಲವನ್ನು ಹಿಂದಿರುಗಿಸಿದೆ. ಎರಡೂವರೆ ವರ್ಷಗಳಲ್ಲಿ ಅವರಿಗೆ 2.5 ಲಕ್ಷ ರೂ. ಪಾವತಿಸಿದೆ. ನಂತರ ಅವರು ನನಗೆ ಮತ್ತೆ 5 ಲಕ್ಷ ರೂ. ಸಾಲ ನೀಡಿದರು, ನಂತರ ನಾನು ರೇಷನ್ ಅಂಗಡಿ ತೆರೆದೆ, ನಂತರ ಆ 2 ಅಂಗಡಿಗಳು ನನಗೆ ಚಿಕ್ಕದಾಗಲು ಪ್ರಾರಂಭಿಸಿದವು, ಸರ್ ನನ್ನ ಕೆಲಸ ಹೆಚ್ಚಾಗಲು ಪ್ರಾರಂಭಿಸಿತು, ಅಂದರೆ, ನಾನು ಒಂದೇ ವರ್ಷದಲ್ಲಿ ಎರಡೂವರೆ ಲಕ್ಷ ರೂ. ಗಳಿಸುತ್ತಿದ್ದೆ, ಇಂದು ನಾನು ಒಂದೇ ವರ್ಷದಲ್ಲಿ 10-15 ಲಕ್ಷ ರೂ. ಗಳಿಸುತ್ತಿದ್ದೇನೆ.

ಪ್ರಧಾನಮಂತ್ರಿ: ಅದ್ಭುತ.

ಫಲಾನುಭವಿ: ನಂತರ ನಾನು 5 ಲಕ್ಷ ರೂ. ಮರುಪಾವತಿಸಿದೆ, ಆದ್ದರಿಂದ ಅವರು ನನಗೆ 10 ಲಕ್ಷ ರೂ. ನೀಡಿದರು, ಸರ್ ನಾನು ಎರಡೂವರೆ ವರ್ಷಗಳಲ್ಲಿ 10 ಲಕ್ಷ ರೂ. ಸಾಲ ಮರುಪಾವತಿಸಿದೆ, ಆದ್ದರಿಂದ ಈಗ ಅವರು 2024 ನವೆಂಬರ್ ನಲ್ಲಿ ನನಗೆ 15 ಲಕ್ಷ ರೂ. ನೀಡಿದರು. ಸರ್, ನನ್ನ ವ್ಯವಹಾರ ಬಹಳಷ್ಟು ಬೆಳೆಯುತ್ತಿದೆ. ನಮ್ಮ ಪ್ರಧಾನ ಮಂತ್ರಿ ಹೀಗೆ ಇದ್ದರೆ, ಅವರು ನಮಗೆ ಬೆಂಬಲ ನೀಡುತ್ತಿದ್ದರೆ, ನಾವು ಅವರನ್ನು ಹೀಗೆ ಬೆಂಬಲಿಸುತ್ತೇವೆ ಎಂದು ತಿಳಿದು ನನಗೆ ಸಂತೋಷವಾಗಿದೆ, ಈಗ ಬ್ಯಾಂಕ್ ನವರು 20 ಲಕ್ಷ ರೂ. ತೆಗೆದುಕೊಳ್ಳಿ ಅಂತ ಹೇಳ್ತಿದ್ದಾರೆ, ಹಾಗಾಗಿ ನಾನು ಈಗ ನಮಗೆ ಅದು ಅಗತ್ಯವಿಲ್ಲ ಅಂತ ಹೇಳಿದೆ, ಆದರೂ ಅವರು 15 ಲಕ್ಷ ರೂ. ಅಗತ್ಯವಿದ್ದರೆ ಹಿಂಪಡೆಯಿರಿ, ಬಡ್ಡಿ ಹೆಚ್ಚಾಗುತ್ತದೆ, ನೀವು ಅದನ್ನು ಹಿಂಪಡೆಯದಿದ್ದರೆ ಅದು ಹೆಚ್ಚಾಗುವುದಿಲ್ಲ ಎಂದು ಹೇಳಿದರು. ಆದರೆ ಸರ್, ನಿಮ್ಮ ಈ ಯೋಜನೆ ನನಗೆ ತುಂಬಾ ಇಷ್ಟವಾಯಿತು.

ಫಲಾನುಭವಿ: ನಾನು ಆಂಧ್ರ ಪ್ರದೇಶದಿಂದ ಬಂದಿದ್ದೇನೆ. ನನಗೆ ಹಿಂದಿ ಗೊತ್ತಿಲ್ಲ, ಆದರೆ ನಾನು ತೆಲುಗಿನಲ್ಲಿ ಮಾತನಾಡುತ್ತೇನೆ.

ಪ್ರಧಾನಮಂತ್ರಿ: ಯಾವುದೇ ಸಮಸ್ಯೆ ಇಲ್ಲ, ಈಗ ತೆಲುಗಿನಲ್ಲಿ ಮಾತನಾಡಿ.

ಫಲಾನುಭವಿ: ಹೌದು ಸರ್! ನಾನು 2009ರಲ್ಲಿ ಮದುವೆಯಾದೆ. ನಾನು 2019ರ ವರೆಗೆ ಗೃಹಿಣಿಯಾಗಿಯೇ ಇದ್ದೆ. ಸೆಣಬಿನ ಚೀಲಗಳ ತಯಾರಿಕೆಗಾಗಿ ಕೆನರಾ ಬ್ಯಾಂಕಿನ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 13 ದಿನಗಳ ಕಾಲ ತರಬೇತಿ ಪಡೆದಿದ್ದೆ. ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ನನಗೆ 2 ಲಕ್ಷ ರೂ. ಸಾಲ ಸಿಕ್ಕಿತು. ನಾನು 2019 ನವೆಂಬರ್ ನಲ್ಲಿ ನನ್ನ ವ್ಯವಹಾರ ಪ್ರಾರಂಭಿಸಿದೆ. ಕೆನರಾ ಬ್ಯಾಂಕ್ ನವರು ನನ್ನನ್ನು ನಂಬಿ 2 ಲಕ್ಷ ರೂ. ಮಂಜೂರು ಮಾಡಿದರು. ಅವರು ಯಾವುದೇ ಜಾಮೀನು ಕೇಳಲಿಲ್ಲ, ಸಾಲ ಪಡೆಯಲು ಯಾವುದೇ ಸಹಾಯದ ಅಗತ್ಯವಿರಲಿಲ್ಲ. ಯಾವುದೇ ಜಾಮೀನು ಇಲ್ಲದೆ ನಾನು ಸಾಲ ಮಂಜೂರು ಮಾಡಿದ್ದೇನೆ. ನನ್ನ ಸಾಲ ಮರುಪಾವತಿ ಇತಿಹಾಸದ ಕಾರಣ, 2022 ರಲ್ಲಿ ಕೆನರಾ ಬ್ಯಾಂಕ್ ಹೆಚ್ಚುವರಿಯಾಗಿ 9.5 ಲಕ್ಷ ರೂ. ಮಂಜೂರು ಮಾಡಿದೆ. ಈಗ 15 ಜನರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಮಂತ್ರಿ: ಅಂದರೆ, ನೀವು 2 ಲಕ್ಷ ರೂ.ಗಳಿಂದ ಪ್ರಾರಂಭಿಸಿ 9.5 ಲಕ್ಷ ರೂ.ಗೆ ತಲುಪಿದ್ದೀರಿ.

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ನಿಮ್ಮೊಂದಿಗೆ ಎಷ್ಟು ಜನರು ಕೆಲಸ ಮಾಡುತ್ತಿದ್ದೀರಿ?

ಫಲಾನುಭವಿ: 15 ಸದಸ್ಯರು ಸರ್.

ಪ್ರಧಾನಮಂತ್ರಿ: 15.

ಫಲಾನುಭವಿ: ಎಲ್ಲರೂ ಗೃಹಿಣಿಯರು ಮತ್ತು ಎಲ್ಲರೂ ಆರ್‌ಸಿಟಿ (ಗ್ರಾಮೀಣ ಸ್ವ-ಉದ್ಯೋಗ ಕೇಂದ್ರ) ತರಬೇತಿ ಪಡೆದವರು. ನಾನು ತರಬೇತಿ ಪಡೆಯುವವರಲ್ಲಿ ಒಬ್ಬನಾಗಿದ್ದೆ, ಈಗ ನಾನು ಸಹ ತರಬೇತಿ ಅಧ್ಯಾಪಕರಲ್ಲಿ ಒಬ್ಬನಾಗಿದ್ದೇನೆ. ಈ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಧನ್ಯವಾದಗಳು, ತುಂಬು ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ಧನ್ಯವಾದಗಳು, ಧನ್ಯವಾದಗಳು.

ಫಲಾನುಭವಿ: ಸರ್ ನನ್ನ ಹೆಸರು ಪೂನಂ ಕುಮಾರಿ. ಸರ್ ನಾನು ತುಂಬಾ ಬಡ ಕುಟುಂಬದಿಂದ ಬಂದವಳು, ನಮ್ಮ ಕುಟುಂಬ ತುಂಬಾ ಬಡತನದಲ್ಲಿತ್ತು...

ಪ್ರಧಾನಮಂತ್ರಿ: ನೀವು ಮೊದಲ ಬಾರಿಗೆ ದೆಹಲಿಗೆ ಬಂದಿದ್ದೀರಾ?

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಅದ್ಭುತ.

ಫಲಾನುಭವಿ: ನಾನು ವಿಮಾನದಲ್ಲಿ ಪ್ರಯಾಣಿಸಿದ್ದು ಇದೇ ಮೊದಲು ಸರ್.

ಪ್ರಧಾನಮಂತ್ರಿ: ಸರಿ.

ಫಲಾನುಭವಿ: ನನ್ನ ಕುಟುಂಬದಲ್ಲಿ ತುಂಬಾ ಬಡತನವಿತ್ತು, ನಾನು ಒಮ್ಮೆ ಊಟ ಮಾಡಿದರೆ, ಮುಂದಿನ ಬಾರಿ ಏನು ಮಾಡಬೇಕೆಂದು ಯೋಚಿಸಬೇಕಾಗಿತ್ತು, ಆದರೆ ಸರ್, ನಾನು ತುಂಬಾ ಧೈರ್ಯ ಹೊಂದಿದ್ದೇನೆ. ನಾನು ರೈತ ಕುಟುಂಬದವಳು.

ಪ್ರಧಾನಮಂತ್ರಿ: ನೀವು ಸಂಪೂರ್ಣ ಆರೋಗ್ಯವಾಗಿರುತ್ತೀರಿ.

ಫಲಾನುಭವಿ: ನಾನು ರೈತ ಕುಟುಂಬದಿಂದ ಬಂದವನಾಗಿರುವುದರಿಂದ, ನಾನು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು, ಆದ್ದರಿಂದ ನಾನು ನನ್ನ ಪತಿಯೊಂದಿಗೆ ಮಾತನಾಡಿದೆ, ನಾವು ಸಾಲ ತೆಗೆದುಕೊಂಡು ನಮ್ಮ ಸ್ವಂತ ವ್ಯವಹಾರ ಏಕೆ ಪ್ರಾರಂಭಿಸಬಾರದು, ಆಗ ನನ್ನ ಪತಿ ಹೌದು, ನೀನು ಒಳ್ಳೆಯ ಸಲಹೆ ನೀಡುತ್ತಿದ್ದೀಯಾ, ನಾವು ಅದನ್ನು ಮಾಡಬಹುದು. ಆಗ ನನ್ನ ಪತಿ ಸ್ನೇಹಿತರೊಂದಿಗೆ ಮಾತನಾಡಿದರು, ಅವರು ಮುದ್ರಾ ಸಾಲ ನಿಮಗೆ ತುಂಬಾ ಒಳ್ಳೆಯದು, ನೀವು ಅದನ್ನು ಮಾಡಬಹುದು ಎಂದು ನಮಗೆ ಹೇಳಿದರು. ನಂತರ ನಾನು ಬ್ಯಾಂಕ್ ಜನರ ಬಳಿಗೆ ಹೋದೆ, ಅಲ್ಲಿ ಎಸ್‌ಬಿಐ ಬ್ಯಾಂಕ್(ಸ್ಥಳದ ಹೆಸರು ಸ್ಪಷ್ಟವಾಗಿಲ್ಲ)ನವರು, ಹೌದು ನೀವು ಯಾವುದೇ ದಾಖಲೆಗಳಿಲ್ಲದೆ ಅದನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು. ಆದ್ದರಿಂದ, ಸರ್, ನಾನು ಅಲ್ಲಿಂದ 8 ಲಕ್ಷ ರೂ. ಸಾಲ ಪಡೆದು ವ್ಯವಹಾರ ಪ್ರಾರಂಭಿಸಿದೆ ಸರ್. ನಾನು ಅದನ್ನು 2024ರಲ್ಲಿಯೇ ತೆಗೆದುಕೊಂಡೆ ಸರ್, ಅದೀಗ ತುಂಬಾ ಬೆಳೆದಿದೆ ಸರ್.

ಪ್ರಧಾನಮಂತ್ರಿ: ನೀವು ಯಾವ ಕೆಲಸ ಮಾಡುತ್ತೀರಿ?

ಫಲಾನುಭವಿ: ಸರ್, ಬೀಜಗಳ ವ್ಯಾಪಾರ... ಇದರಲ್ಲಿ ನನ್ನ ಪತಿ ಬಹಳಷ್ಟು ಸಹಾಯ ಮಾಡುತ್ತಾರೆ, ಅವರು ಮಾರುಕಟ್ಟೆಯ ಹೆಚ್ಚಿನ ಕೆಲಸ ನೋಡಿಕೊಳ್ಳುತ್ತಾರೆ, ನಾನು ಒಬ್ಬ ಉದ್ಯೋಗಿಯನ್ನು ಸಹ ನೇಮಿಸಿಕೊಂಡಿದ್ದೇನೆ ಸರ್.

ಪ್ರಧಾನಮಂತ್ರಿ: ಒಳ್ಳೆಯದು.

ಫಲಾನುಭವಿ: ಹೌದು ಸರ್. ನಾನು ತುಂಬಾ ಚೆನ್ನಾಗಿ ಪ್ರಗತಿ ಹೊಂದುತ್ತಿದ್ದೇನೆ ಸರ್, ನಾನು ಶೀಘ್ರದಲ್ಲೇ ಸಾಲ ಮರುಪಾವತಿಸಬಲ್ಲೆ ಎಂಬುದು ನನಗೆ ಖಚಿತವಾಗಿದೆ, ನನಗೆ ತುಂಬಾ ವಿಶ್ವಾಸವಿದೆ.

ಪ್ರಧಾನಮಂತ್ರಿ: ಹಾಗಾದರೆ ನೀವು ಈಗ 1 ತಿಂಗಳಲ್ಲಿ ಎಷ್ಟು ಗಳಿಸಬಹುದು?

ಫಲಾನುಭವಿ: ಸರ್ ಇದು 60,000 ರೂ.ತನಕ ಏರಿಕೆ ಆಗುತ್ತದೆ.

ಪ್ರಧಾನಮಂತ್ರಿ: ಸರಿ 60,000 ರೂಪಾಯಿ. ಹಾಗಾದರೆ, ಕುಟುಂಬಕ್ಕೆ ಮನವರಿಕೆಯಾಗಿದೆ?

ಫಲಾನುಭವಿ: ಖಂಡಿತ ಸರ್, ಖಂಡಿತ. ಇಂದು ನಾನು ನಿಮ್ಮ ಯೋಜನೆಯಿಂದಾಗಿ ಸ್ವಾವಲಂಬಿಯಾಗಿದ್ದೇನೆ.

ಪ್ರಧಾನಮಂತ್ರಿ: ಸರಿ, ನೀವು ಉತ್ತಮ ಕೆಲಸ ಮಾಡಿದ್ದೀರಿ.

ಫಲಾನುಭವಿ: ಧನ್ಯವಾದಗಳು ಸರ್! ನಿಮ್ಮ ಜೊತೆ ಮಾತನಾಡಬೇಕು ಅಂತ ನನಗೆ ತುಂಬಾ ಆಸೆ ಇತ್ತು ಸರ್, ನಾನು ಕೂಡ ಮೋದಿ ಜಿ ಅವರನ್ನು ಭೇಟಿಯಾಗುತ್ತೇನೆ ಅಂತ ನಂಬೋಕೆ ಆಗ್ತಿಲ್ಲ, ನಂಬೋಕೆ ಆಗ್ತಿಲ್ಲ. ನಾನು ದೆಹಲಿಗೆ ಬಂದಾಗ, "ಓಹ್ ನಿಜವಾಗ್ಲೂ ನಾನು ಹೋಗ್ತಿದ್ದೇನಾ" ಅಂತ ಅಂದುಕೊಂಡೆ. ಧನ್ಯವಾದಗಳು ಸರ್, ನನ್ನ ಪತಿ ಸಹ ಬರಲು ಹೊರಟಿದ್ದರು, ನೀವು ಹೋಗ್ತಿದ್ದೀರಿ, ಹೋಗಿ ಬನ್ನಿ ಅಂತಾ ಶುಭ ಕೋರಿದರು".

ಪ್ರಧಾನಮಂತ್ರಿ: ನನ್ನ ದೇಶದ ಸಾಮಾನ್ಯ ನಾಗರಿಕರು ಪ್ರತಿಯೊಬ್ಬರ ಸಹ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬ ವಿಶ್ವಾಸ ತುಂಬಿರಬೇಕು. ಜೀವನದಲ್ಲಿ ಕಷ್ಟಗಳಿವೆ. ಆದರೆ ಅವಕಾಶ ಸಿಕ್ಕರೆ, ಕಷ್ಟಗಳನ್ನು ನಿವಾರಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಮತ್ತು ಮುದ್ರಾ ಯೋಜನೆ ಇದನ್ನೇ ಮಾಡಿದೆ.

ಫಲಾನುಭವಿ: ಹೌದು ಸರ್.

ಪ್ರಧಾನಮಂತ್ರಿ: ಕ್ರಾಂತಿ ಹೇಗೆ ಮೌನವಾಗಿ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವವರು ನಮ್ಮ ದೇಶದಲ್ಲಿ ಬಹಳ ಕಡಿಮೆ. ಇದು ಬಹಳ ದೊಡ್ಡ ಮೌನ ಕ್ರಾಂತಿ.

ಫಲಾನುಭವಿ: ಸರ್, ನಾನು ಮುದ್ರಾ ಯೋಜನೆಯ ಬಗ್ಗೆ ಇತರರಿಗೂ ಹೇಳಲು ಪ್ರಯತ್ನಿಸುತ್ತೇನೆ.

ಪ್ರಧಾನಮಂತ್ರಿ: ಇತರರಿಗೆ ವಿವರಿಸಬೇಕು.

ಫಲಾನುಭವಿ: ಖಂಡಿತ ಸರ್.

ಪ್ರಧಾನಮಂತ್ರಿ: ನೋಡಿ, ನಾವು ಚಿಕ್ಕವರಿದ್ದಾಗ ಕೃಷಿಯೇ ಉತ್ತಮ, ವ್ಯವಹಾರ ಮಧ್ಯಮ ಮತ್ತು ಉದ್ಯೋಗ ಅತ್ಯಂತ ಕೆಳಮಟ್ಟದ್ದು ಎಂದು ಕೇಳುತ್ತಿದ್ದೆವು. ನಾವು ಈ ಮಾತುಗಳನ್ನೇ ಕೇಳುತ್ತಿದ್ದೆವು. ಉದ್ಯೋಗ ಕೊನೆಯ ಆಯ್ಕೆ ಎಂದು ಪರಿಗಣಿಸಲಾಗುತ್ತಿತ್ತು. ಕ್ರಮೇಣ ಸಮಾಜದ ಮನಸ್ಥಿತಿ ಎಷ್ಟರ ಮಟ್ಟಿಗೆ ಬದಲಾಯಿತು ಎಂದರೆ ಉದ್ಯೋಗ ಮೊದಲು ಬಂದಿತು, ಮೊದಲ ಕೆಲಸ ಎಲ್ಲೋ ಒಂದು ಉದ್ಯೋಗ ಪಡೆದು ನೆಲೆಸುವುದು. ಜೀವನ ಖಚಿತವಾಗುತ್ತದೆ. ವ್ಯವಹಾರ ಮಧ್ಯಮವಾಗಿ ಉಳಿಯಿತು ಮತ್ತು ಜನರು ಕೃಷಿಯನ್ನು ಕೊನೆಯ ಆಯ್ಕೆಯಾಗಿ ಮಾಡಿಕೊಂಡರು. ಇದಷ್ಟೇ ಅಲ್ಲ, ಒಬ್ಬ ರೈತನಿಗೆ 3 ಗಂಡು ಮಕ್ಕಳಿದ್ದರೆ ಏನು ಮಾಡುತ್ತಿದ್ದ. ಒಬ್ಬನಿಗೆ ಜಮೀನು ನೋಡಿಕೊಳ್ಳಲು ಮತ್ತು ಇನ್ನೊಬ್ಬನಿಗೆ ಜೀವನ ಸಾಗಿಸಲು ಏನಾದರೂ ಕೆಲಸ ಮಾಡು ಎಂದು ಹೇಳುತ್ತಿದ್ದ. ಆದರೆ ಈಗ ವ್ಯವಹಾರವನ್ನು ಯಾವಾಗಲೂ ಮಧ್ಯಮ ಎಂದು ಪರಿಗಣಿಸಲಾಗಿರುವ ಮಾಧ್ಯಮದ ವಿಷಯವಾಗಿದೆ. ಆದರೆ ಇಂದು ಭಾರತದ ಯುವಕರು ಹೊಂದಿರುವ ಉದ್ಯಮಶೀಲ ಕೌಶಲ್ಯಗಳು, ಅವರಿಗೆ ಸ್ವಲ್ಪ ಕೈಹಿಡಿದು ಸಹಾಯ ಸಿಕ್ಕರೆ, ಅದು ಉತ್ತಮ ಫಲಿತಾಂಶಗಳನ್ನು ತರುತ್ತಿದೆ. ಈ ಮುದ್ರಾ ಯೋಜನೆಯು ಯಾವುದೇ ಸರ್ಕಾರಕ್ಕೆ ಒಂದು ಕಣ್ಣು ತೆರೆಸುವ ಸಂಗತಿಯಾಗಿದೆ. ಗರಿಷ್ಠ ಸಂಖ್ಯೆಯ ಮಹಿಳೆಯರು ಮುಂದೆ ಬರುತ್ತಿದ್ದಾರೆ, ಸಾಲಗಳಿಗೆ ಅರ್ಜಿ ಸಲ್ಲಿಸುವವರ ಅವರ ಸಂಖ್ಯೆ ಗರಿಷ್ಠವಾಗಿದೆ, ಸಾಲ ಪಡೆಯುವವರ ಅವರ ಸಂಖ್ಯೆ ಗರಿಷ್ಠವಾಗಿದೆ ಮತ್ತು ಸಾಲವನ್ನು ವೇಗವಾಗಿ ಮರುಪಾವತಿಸುವವರು ಗರಿಷ್ಠ ಮಹಿಳೆಯರೇ ಆಗಿದ್ದಾರೆ.

ಇದರರ್ಥ ಇದು ಹೊಸ ಪ್ರದೇಶ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮರ್ಥ್ಯವು ಈ ಶಕ್ತಿಯಲ್ಲಿ ಗೋಚರಿಸುತ್ತಿದೆ. ಆದ್ದರಿಂದ ನಾವು ಒಂದು ವಾತಾವರಣ ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ, ನಿಮ್ಮಂತಹ ಜನರು ಯಶಸ್ವಿಯಾಗಿದ್ದೀರಿ,  ಈಗ ನಿಮಗೆ ಯಾವುದೇ ರಾಜಕಾರಣಿಯಿಂದ ಯಾವುದೇ ಪತ್ರದ ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆ. ನೀವು ಯಾವುದೇ ಶಾಸಕರ ಅಥವಾ ಸಂಸದರ ಮನೆಗೆ ಭೇಟಿ ನೀಡಬೇಕಾಗಿಲ್ಲ, ನೀವು ಯಾರಿಗೂ ಒಂದು ರೂಪಾಯಿ ಸಹ ನೀಡಬೇಕಾಗಿಲ್ಲ ಎಂದು ನಾನು ನಂಬುತ್ತೇನೆ. ಖಾತ್ರಿ ಇಲ್ಲದೆ ಸಾಲ ಪಡೆಯುವುದು ಮತ್ತು ನೀವು ಸಾಲ ಪಡೆದ ನಂತರ, ಅದನ್ನು ಸರಿಯಾಗಿ ಬಳಸುವುದು ನಿಮ್ಮ ಜೀವನದಲ್ಲಿ ಶಿಸ್ತು ತರುತ್ತದೆ. ಇಲ್ಲದಿದ್ದರೆ, ನಾವು ಸಾಲವನ್ನು ಈಗಾಗಲೇ ತೆಗೆದುಕೊಂಡಿದ್ದೇವೆ, ಬೇರೆ ನಗರಕ್ಕೆ ಹೋಗೋಣ ಎಂದು ಯಾರಾದರೂ ಭಾವಿಸಿದರೆ, ಅಲ್ಲಿ ಆ ಬ್ಯಾಂಕರ್ ನಮ್ಮನ್ನು ಹುಡುಕುತ್ತಲೇ ಇರುತ್ತಾನೆ. ಹಾಗಾಗಿ, ಇದು ಜೀವನ ನಿರ್ಮಿಸಲು ಅವಕಾಶ ನೀಡುತ್ತದೆ. ನನ್ನ ದೇಶದ ಹೆಚ್ಚು ಹೆಚ್ಚು ಯುವಕರು ಈ ಕ್ಷೇತ್ರಕ್ಕೆ ಬರಬೇಕೆಂದು ನಾನು ಬಯಸುತ್ತೇನೆ. ನೋಡಿ, ದೇಶದ ಜನರಿಗೆ ಯಾವುದೇ ಗ್ಯಾರಂಟಿ ಇಲ್ಲದೆ 33 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ. ಇದು ಶ್ರೀಮಂತರ ಸರ್ಕಾರ ಎಂದು ನೀವು ಪತ್ರಿಕೆಯಲ್ಲಿ ಓದಿರಬೇಕು. ನೀವು ಎಲ್ಲಾ ಶ್ರೀಮಂತರ ಒಟ್ಟು ಮೊತ್ತವನ್ನು ಸೇರಿಸಿದರೆ, ಅವರಿಗೆ 33 ಲಕ್ಷ ಕೋಟಿ ಸಿಗುತ್ತಿರಲಿಲ್ಲ. ನನ್ನ ದೇಶದ ಸಾಮಾನ್ಯ ಜನರಿಗೆ, ನಿಮ್ಮಂತಹ ದೇಶದ ಭರವಸೆಯ ಯುವಕ, ಯುವತಿಯರಿಗೆ 33 ಲಕ್ಷ ಕೋಟಿ ರೂಪಾಯಿನ್ನು ನೀಡಲಾಗಿದೆ. ಅವರೆಲ್ಲರೂ ಒಬ್ಬ ವ್ಯಕ್ತಿಗೆ, ಇಬ್ಬರು ಜನರಿಗೆ, 10 ಜನರಿಗೆ, 40-50 ಜನರಿಗೆ ಉದ್ಯೋಗ ನೀಡಿದ್ದಾರೆ. ಅಂದರೆ, ಉದ್ಯೋಗ ನೀಡುವ ಬೃಹತ್ ಕೆಲಸವು ಆರ್ಥಿಕತೆಯನ್ನು ಸುಧಾರಿಸುತ್ತದೆ. ಇದರಿಂದಾಗಿ, ಉತ್ಪಾದನೆ ನಡೆಯುತ್ತಿದೆ, ಆದರೆ ಗಳಿಸುವ ಸಾಮಾನ್ಯ ಮನುಷ್ಯ, ಮೊದಲು ವರ್ಷಕ್ಕೆ ಒಂದು ಶರ್ಟ್ ಖರೀದಿಸುತ್ತಿದ್ದ, ಈಗ 2 ಖರೀದಿಸುತ್ತೇನೆ ಎಂದು ಭಾವಿಸುತ್ತಾನೆ.

ಹಿಂದೆ ಜನರು ತಮ್ಮ ಮಕ್ಕಳಿಗೆ ಕಲಿಸಲು ಹಿಂಜರಿಯುತ್ತಿದ್ದರು, ಈಗ ನಾವು ಅವರಿಗೆ ಕಲಿಸೋಣ, ಆದ್ದರಿಂದ ಅಂತಹ ಪ್ರತಿಯೊಂದು ವಿಷಯವು ಸಾಮಾಜಿಕ ಜೀವನದಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತದೆ. ಈ ಯೋಜನೆ ಜಾರಿಗೆ ಬಂದು ಈಗ 10 ವರ್ಷಗಳು ಕಳೆದಿವೆ. ಸಾಮಾನ್ಯವಾಗಿ, ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ, ಪತ್ರಿಕಾಗೋಷ್ಠಿ ನಡೆಸುತ್ತದೆ ಮತ್ತು ನಾವು ಇದನ್ನು ಮಾಡುತ್ತೇವೆ ಎಂದು ಘೋಷಿಸುತ್ತದೆ. ಅದರ ನಂತರ, ಅಧಿಕಾರಿಗಳು ಕೆಲವು ಜನರನ್ನು ಕರೆದು ಕಾರ್ಯಕ್ರಮ ಉದ್ಘಾಟಿಸುತ್ತಾರೆ, ಜನರು ಚಪ್ಪಾಳೆ ತಟ್ಟುತ್ತಾರೆ, ಪತ್ರಿಕೆಯಲ್ಲಿ ಪ್ರಕಟಿಸಲು ಅವರು ಪತ್ರಕರ್ತರ ಬಗ್ಗೆ ಚಿಂತಿಸುತ್ತಲೇ ಇರುತ್ತಾರೆ, ಅದರ ನಂತರ ಯಾರೂ ಕೇಳುವುದಿಲ್ಲ. ಆದರೆ ಈ ಸರ್ಕಾರವು 10 ವರ್ಷಗಳ ನಂತರ ಒಂದು ಯೋಜನೆಯ ಪರಾಮರ್ಶೆ ನಡೆಸುತ್ತಿದೆ, ಸರಿ ಇದೆಯೇ ಸಹೋದರ ಎಂದು ಜನರನ್ನು ಕೇಳುತ್ತಿದೆ, ಇದು ಸಂಭವಿಸಿದೆ ಎಂದು ನಾವು ಹೇಳುತ್ತಿದ್ದೇವೆ, ಆದರೆ ನೀವು ಏನಾಯಿತು ಎಂದು ನಮಗೆ ತಿಳಿಸಿ. ನಾನು ಇಂದು ನಿಮ್ಮನ್ನು ಕೇಳುತ್ತಿರುವಂತೆ, ಮುಂಬರುವ ದಿನಗಳಲ್ಲಿ, ದೇಶಾದ್ಯಂತ ನನ್ನ ಎಲ್ಲಾ ಸಹೋದ್ಯೋಗಿಗಳು ಅಂತಹ ಗುಂಪುಗಳನ್ನು ಕೇಳಲಿದ್ದಾರೆ, ಅವರನ್ನು ಭೇಟಿಯಾಗಲಿದ್ದಾರೆ, ಅವರಿಂದ ಮಾಹಿತಿ  ಪಡೆಯಲಿದ್ದಾರೆ. ಅದಕ್ಕಾಗಿಯೇ, ಅದರಲ್ಲಿ ಯಾವುದೇ ಬದಲಾವಣೆ ತರುವ ಅಗತ್ಯವಿದ್ದರೆ, ಸ್ವಲ್ಪ ಸುಧಾರಣೆ ಮಾಡಬೇಕಾಗಿದ್ದರೆ, ಆಗ ನಾವು ಆ ದಿಕ್ಕಿನಲ್ಲಿಯೂ ಸಾಗಲಿದ್ದೇವೆ. ಆದರೆ ನಮ್ಮ ಪ್ರಯತ್ನ ನೋಡಿ, ಈಗ ಮುದ್ರಾ ಸಾಲವನ್ನು ನಿರಂತರವಾಗಿ 50,000ದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಸರ್ಕಾರದ ವಿಶ್ವಾಸವನ್ನು ನೋಡಿ, ಈ ಹಿಂದೆ ಸರ್ಕಾರವ ಸಹ 5 ಲಕ್ಷಕ್ಕಿಂತ ಹೆಚ್ಚು ನೀಡಬೇಡಿ, ನಾವು ಮುಳುಗಿದರೆ ಏನು ಮಾಡುವುದು ಎಂದು ಎಲ್ಲರೂ ಮೋದಿ ಅವರ ಕೂದಲು ಎಳೆಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ನನ್ನ ದೇಶದ ಜನರು ನನ್ನ ನಂಬಿಕೆಯನ್ನು ಹುಸಿ ಮಾಡಲಿಲ್ಲ, ನೀವು ನನ್ನ ದೇಶವಾಸಿಗಳ ಮೇಲಿನ ನನ್ನ ನಂಬಿಕೆಯನ್ನು ಬಲಪಡಿಸಿದ್ದೀರಿ. ಅದರಿಂದಾಗಿ, ಅದನ್ನು 50,000ದಿಂದ 20 ಲಕ್ಷಕ್ಕೆ ಹೆಚ್ಚಿಸಲು ನನಗೆ ಧೈರ್ಯ ಬಂದಿತು. ಈ ನಿರ್ಧಾರವು ಸಣ್ಣದಲ್ಲ, ಆ ಯೋಜನೆಯ ಯಶಸ್ಸು ಮತ್ತು ಜನರ ಮೇಲಿನ ನಂಬಿಕೆ, ಈ ಎರಡೂ ವಿಷಯಗಳು ಅದರಲ್ಲಿ ಗೋಚರಿಸಿದಾಗ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಮ್ಮೆಲ್ಲರಿಗೂ ಶುಭಾಶಯಗಳು. ನಿಮ್ಮಿಂದ ನನ್ನ ನಿರೀಕ್ಷೆ ಏನೆಂದರೆ, ನೀವು 5-10 ಜನರಿಗೆ ಉದ್ಯೋಗ ನೀಡುವಂತೆಯೇ, ಮುದ್ರಾ ಯೋಜನೆ ಕೈಗೆತ್ತಿಕೊಳ್ಳುವ ಮೂಲಕ 5-10 ಜನರನ್ನು ತಮ್ಮದೇ ಆದ ಕೆಲಸ ಮಾಡಲು ಪ್ರೇರೇಪಿಸಿ, ಅವರಿಗೆ ಆತ್ಮವಿಶ್ವಾಸ ತುಂಬಲು ಧೈರ್ಯ ನೀಡಿ. ದೇಶದಲ್ಲಿ 52 ಕೋಟಿ ಸಾಲ ನೀಡಲಾಗಿದೆ, 52 ಕೋಟಿ ಜನರು ಇರುವುದಿಲ್ಲ, ಸುರೇಶ್ ಹೇಳಿದಂತೆ ನಾನು ಮೊದಲು 2.5 ಲಕ್ಷ, ನಂತರ 9 ಲಕ್ಷ, ಆದ್ದರಿಂದ 2 ಸಾಲಗಳು ಇದ್ದವು. ಆದರೆ 52 ಕೋಟಿ ಸಾಲಗಳು, ಅದು ಸ್ವತಃ ಬಹುದೊಡ್ಡ ಸಂಖ್ಯೆ. ವಿಶ್ವದ ಯಾವುದೇ ದೇಶದಲ್ಲಿ ಇದರ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಯುವ ಪೀಳಿಗೆಯನ್ನು ಸ್ವಂತವಾಗಿ ಏನನ್ನಾದರೂ ಪ್ರಾರಂಭಿಸಲು ಸಿದ್ಧಪಡಿಸಬೇಕು ಎಂದು ನಾನು ಹೇಳುತ್ತೇನೆ, ಇದರಿಂದ ಬಹಳಷ್ಟು ಪ್ರಯೋಜನಗಳಿವೆ.

ನಾನು ಗುಜರಾತ್‌ನಲ್ಲಿದ್ದಾಗ, ಗರೀಬ್ ಕಲ್ಯಾಣ್ ಮೇಳ ಎಂಬ ಕಾರ್ಯಕ್ರಮ ನಡೆಸುತ್ತಿದ್ದೆ ಎಂಬುದು ನನಗೆ ನೆನಪಿದೆ. ಆದರೆ ಮಕ್ಕಳು ನನ್ನ ಕಾರ್ಯಕ್ರಮ ಕುರಿತು "ಇಂದು ನಾನು ಬಡವನಾಗಿ ಉಳಿಯಲು ಬಯಸುವುದಿಲ್ಲ, ಜನರನ್ನು ಪ್ರೇರೇಪಿಸಲು ಈ ರೀತಿಯ ನಾಟಕ ಆಡುತ್ತಿದ್ದಾರೆ" ಎಂಬ ಬೀದಿ ನಾಟಕ ಮಾಡುತ್ತಿದ್ದರು. ನಂತರ ಕೆಲವರು ವೇದಿಕೆಯ ಮೇಲೆ ಬಂದು ತಮ್ಮ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಒಪ್ಪಿಸಿ, ನಾವು ಬಡತನದಿಂದ ಹೊರಬಂದಿದ್ದೇವೆ, ಈಗ ನಮಗೆ ಯಾವುದೇ ಸೌಲಭ್ಯಗಳು ಅಗತ್ಯವಿಲ್ಲ ಎಂದು ಹೇಳುತ್ತಿದ್ದರು. ನಂತರ ಅವರು ಪರಿಸ್ಥಿತಿಯನ್ನು ಹೇಗೆ ಬದಲಾಯಿಸಿದರು ಎಂಬುದರ ಕುರಿತು ಭಾಷಣಗಳನ್ನು ಮಾಡುತ್ತಿದ್ದರು. ಹಾಗಾಗಿ, ನಾನು ವಲ್ಸಾದ್ ಜಿಲ್ಲೆಯಲ್ಲಿದ್ದಾಗ, 8-10 ಜನರ ಗುಂಪು ಬಂದು ತಮ್ಮ ಎಲ್ಲಾ ಬಡತನದ ಸವಲತ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿತು. ನಂತರ ಅವರು ತಮ್ಮ ಅನುಭವ ಹೇಳಿದರು, ಅದು ಏನು? ಅವರು ಬುಡಕಟ್ಟು ಜನರು ಮತ್ತು ಬುಡಕಟ್ಟು ಜನಾಂಗದವರಲ್ಲಿ, ಭಗತ್‌ನ ಕೆಲಸ ಸಂಜೆ ಭಜನೆ ನುಡಿಸುವುದು ಮತ್ತು ಹಾಡುವುದು, ಆದ್ದರಿಂದ ಅವರು ಅಲ್ಲಿಂದ ಒಂದು ಅಥವಾ 2 ಲಕ್ಷ ರೂಪಾಯಿ ಸಾಲ ಪಡೆದರು, ಆ ಸಮಯದಲ್ಲಿ ಮುದ್ರಾ ಯೋಜನೆ ಇತ್ಯಾದಿ ಇರಲಿಲ್ಲ, ನನ್ನ ಸರ್ಕಾರ ಅಲ್ಲಿ ಒಂದು ಯೋಜನೆ ನಡೆಸುತ್ತಿತ್ತು. ಅವರಲ್ಲಿ ಕೆಲವರು ನುಡಿಸಲು ವಾದ್ಯಗಳನ್ನು ತಂದರು, ಅವರಿಗೆ ಸ್ವಲ್ಪ ತರಬೇತಿ ಸಿಕ್ಕಿತು, ಇದರಿಂದ ಅವರು 10-12 ಜನರ ಬ್ಯಾಂಡ್ ಕಂಪನಿ ಸ್ಥಾಪಿಸಿದರು. ನಂತರ ಅವರು ಮದುವೆಗಳಲ್ಲಿ ನುಡಿಸಲು ಪ್ರಾರಂಭಿಸಿದರು, ನಂತರ ಅವರು ತಮ್ಮದೇ ಆದ ಉತ್ತಮ ಸಮವಸ್ತ್ರಗಳನ್ನು ತಯಾರಿಸಿದರು. ಕ್ರಮೇಣ ಅವರು ಬಹಳ ಜನಪ್ರಿಯರಾದರು, ಅವರೆಲ್ಲರೂ ಉತ್ತಮ ಸ್ಥಾನಕ್ಕೆ ಬಂದರು.

ಅಲ್ಲದೆ, ಎಲ್ಲರೂ ಪ್ರತಿ ತಿಂಗಳು 50-60 ಸಾವಿರ ರೂಪಾಯಿ ಸಂಪಾದಿಸಲು ಪ್ರಾರಂಭಿಸಿದರು. ಅಂದರೆ ಒಂದು ಸಣ್ಣ ವಿಷಯ ಕೂಡ ದೊಡ್ಡ ಬದಲಾವಣೆ ತರುತ್ತದೆ, ನಾನು ನನ್ನ ಕಣ್ಣ ಮುಂದೆ ಇಂತಹ ಅನೇಕ ಘಟನೆಗಳನ್ನು ನೋಡಿದ್ದೇನೆ. ಅಲ್ಲಿಯೇ ನನಗೆ ಸ್ಫೂರ್ತಿ ಸಿಕ್ಕಿದೆ. ನಿಮ್ಮಿಂದಲೂ ನನಗೆ ಸ್ಫೂರ್ತಿ ಸಿಗುತ್ತದೆ. ಸಹೋದರರೇ ಹೌದು, ನೋಡಿ, ದೇಶದಲ್ಲಿ ಅಂತಹ ಶಕ್ತಿ ಒಬ್ಬರಲ್ಲಿ ಅಲ್ಲ, ಹಲವರಲ್ಲಿ ಇರುತ್ತದೆ, ನಾವು ಇದೇ ರೀತಿಯದ್ದನ್ನು ಮಾಡೋಣ. ದೇಶದ ಜನರನ್ನು ಕರೆದುಕೊಂಡು ಹೋಗುವ ಮೂಲಕ ದೇಶವನ್ನು ನಿರ್ಮಿಸಬಹುದು. ಅವರ ಆಶಯಗಳು ಮತ್ತು ಆಕಾಂಕ್ಷೆಗಳು, ಅವರ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವ ಮೂಲಕ ಇದನ್ನು ಮಾಡಲಾಗಿದೆ, ಈ ಮುದ್ರಾ ಯೋಜನೆ ಅದರ ಒಂದು ರೂಪವಾಗಿದೆ. ನೀವು ಈ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಮತ್ತು ಗರಿಷ್ಠ ಜನರು ಪ್ರಯೋಜನ ಪಡೆಯುತ್ತಾರೆ ಎಂಬ ವಿಶ್ವಾಸ ನನಗಿದೆ, ಸಮಾಜವು ನಿಮಗೆ ನೀಡಿದೆ, ನೀವು ಸಮಾಜಕ್ಕೂ ನೀಡಬೇಕು, ಅದು ಹಾಗೆ ಇರಬಾರದು, ಈಗ ಆನಂದಿಸೋಣ, ನಾವು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು, ಇದರಿಂದಾಗಿ ಮನಸ್ಸಿಗೆ ತೃಪ್ತಿ ಸಿಗುತ್ತದೆ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Exclusive: Just two friends in a car, says Putin on viral carpool with PM Modi

Media Coverage

Exclusive: Just two friends in a car, says Putin on viral carpool with PM Modi
NM on the go

Nm on the go

Always be the first to hear from the PM. Get the App Now!
...
India–Russia friendship has remained steadfast like the Pole Star: PM Modi during the joint press meet with Russian President Putin
December 05, 2025

Your Excellency, My Friend, राष्ट्रपति पुतिन,
दोनों देशों के delegates,
मीडिया के साथियों,
नमस्कार!
"दोबरी देन"!

आज भारत और रूस के तेईसवें शिखर सम्मेलन में राष्ट्रपति पुतिन का स्वागत करते हुए मुझे बहुत खुशी हो रही है। उनकी यात्रा ऐसे समय हो रही है जब हमारे द्विपक्षीय संबंध कई ऐतिहासिक milestones के दौर से गुजर रहे हैं। ठीक 25 वर्ष पहले राष्ट्रपति पुतिन ने हमारी Strategic Partnership की नींव रखी थी। 15 वर्ष पहले 2010 में हमारी साझेदारी को "Special and Privileged Strategic Partnership” का दर्जा मिला।

पिछले ढाई दशक से उन्होंने अपने नेतृत्व और दूरदृष्टि से इन संबंधों को निरंतर सींचा है। हर परिस्थिति में उनके नेतृत्व ने आपसी संबंधों को नई ऊंचाई दी है। भारत के प्रति इस गहरी मित्रता और अटूट प्रतिबद्धता के लिए मैं राष्ट्रपति पुतिन का, मेरे मित्र का, हृदय से आभार व्यक्त करता हूँ।

Friends,

पिछले आठ दशकों में विश्व में अनेक उतार चढ़ाव आए हैं। मानवता को अनेक चुनौतियों और संकटों से गुज़रना पड़ा है। और इन सबके बीच भी भारत–रूस मित्रता एक ध्रुव तारे की तरह बनी रही है।परस्पर सम्मान और गहरे विश्वास पर टिके ये संबंध समय की हर कसौटी पर हमेशा खरे उतरे हैं। आज हमने इस नींव को और मजबूत करने के लिए सहयोग के सभी पहलुओं पर चर्चा की। आर्थिक सहयोग को नई ऊँचाइयों पर ले जाना हमारी साझा प्राथमिकता है। इसे साकार करने के लिए आज हमने 2030 तक के लिए एक Economic Cooperation प्रोग्राम पर सहमति बनाई है। इससे हमारा व्यापार और निवेश diversified, balanced, और sustainable बनेगा, और सहयोग के क्षेत्रों में नए आयाम भी जुड़ेंगे।

आज राष्ट्रपति पुतिन और मुझे India–Russia Business Forum में शामिल होने का अवसर मिलेगा। मुझे पूरा विश्वास है कि ये मंच हमारे business संबंधों को नई ताकत देगा। इससे export, co-production और co-innovation के नए दरवाजे भी खुलेंगे।

दोनों पक्ष यूरेशियन इकॉनॉमिक यूनियन के साथ FTA के शीघ्र समापन के लिए प्रयास कर रहे हैं। कृषि और Fertilisers के क्षेत्र में हमारा करीबी सहयोग,food सिक्युरिटी और किसान कल्याण के लिए महत्वपूर्ण है। मुझे खुशी है कि इसे आगे बढ़ाते हुए अब दोनों पक्ष साथ मिलकर यूरिया उत्पादन के प्रयास कर रहे हैं।

Friends,

दोनों देशों के बीच connectivity बढ़ाना हमारी मुख्य प्राथमिकता है। हम INSTC, Northern Sea Route, चेन्नई - व्लादिवोस्टोक Corridors पर नई ऊर्जा के साथ आगे बढ़ेंगे। मुजे खुशी है कि अब हम भारत के seafarersकी polar waters में ट्रेनिंग के लिए सहयोग करेंगे। यह आर्कटिक में हमारे सहयोग को नई ताकत तो देगा ही, साथ ही इससे भारत के युवाओं के लिए रोजगार के नए अवसर बनेंगे।

उसी प्रकार से Shipbuilding में हमारा गहरा सहयोग Make in India को सशक्त बनाने का सामर्थ्य रखता है। यह हमारेwin-win सहयोग का एक और उत्तम उदाहरण है, जिससे jobs, skills और regional connectivity – सभी को बल मिलेगा।

ऊर्जा सुरक्षा भारत–रूस साझेदारी का मजबूत और महत्वपूर्ण स्तंभ रहा है। Civil Nuclear Energy के क्षेत्र में हमारा दशकों पुराना सहयोग, Clean Energy की हमारी साझा प्राथमिकताओं को सार्थक बनाने में महत्वपूर्ण रहा है। हम इस win-win सहयोग को जारी रखेंगे।

Critical Minerals में हमारा सहयोग पूरे विश्व में secure और diversified supply chains सुनिश्चित करने के लिए महत्वपूर्ण है। इससे clean energy, high-tech manufacturing और new age industries में हमारी साझेदारी को ठोस समर्थन मिलेगा।

Friends,

भारत और रूस के संबंधों में हमारे सांस्कृतिक सहयोग और people-to-people ties का विशेष महत्व रहा है। दशकों से दोनों देशों के लोगों में एक-दूसरे के प्रति स्नेह, सम्मान, और आत्मीयताका भाव रहा है। इन संबंधों को और मजबूत करने के लिए हमने कई नए कदम उठाए हैं।

हाल ही में रूस में भारत के दो नए Consulates खोले गए हैं। इससे दोनों देशों के नागरिकों के बीच संपर्क और सुगम होगा, और आपसी नज़दीकियाँ बढ़ेंगी। इस वर्ष अक्टूबर में लाखों श्रद्धालुओं को "काल्मिकिया” में International Buddhist Forum मे भगवान बुद्ध के पवित्र अवशेषों का आशीर्वाद मिला।

मुझे खुशी है कि शीघ्र ही हम रूसी नागरिकों के लिए निशुल्क 30 day e-tourist visa और 30-day Group Tourist Visa की शुरुआत करने जा रहे हैं।

Manpower Mobility हमारे लोगों को जोड़ने के साथ-साथ दोनों देशों के लिए नई ताकत और नए अवसर create करेगी। मुझे खुशी है इसे बढ़ावा देने के लिए आज दो समझौतेकिए गए हैं। हम मिलकर vocational education, skilling और training पर भी काम करेंगे। हम दोनों देशों के students, scholars और खिलाड़ियों का आदान-प्रदान भी बढ़ाएंगे।

Friends,

आज हमने क्षेत्रीय और वैश्विक मुद्दों पर भी चर्चा की। यूक्रेन के संबंध में भारत ने शुरुआत से शांति का पक्ष रखा है। हम इस विषय के शांतिपूर्ण और स्थाई समाधान के लिए किए जा रहे सभी प्रयासों का स्वागत करते हैं। भारत सदैव अपना योगदान देने के लिए तैयार रहा है और आगे भी रहेगा।

आतंकवाद के विरुद्ध लड़ाई में भारत और रूस ने लंबे समय से कंधे से कंधा मिलाकर सहयोग किया है। पहलगाम में हुआ आतंकी हमला हो या क्रोकस City Hall पर किया गया कायरतापूर्ण आघात — इन सभी घटनाओं की जड़ एक ही है। भारत का अटल विश्वास है कि आतंकवाद मानवता के मूल्यों पर सीधा प्रहार है और इसके विरुद्ध वैश्विक एकता ही हमारी सबसे बड़ी ताक़त है।

भारत और रूस के बीच UN, G20, BRICS, SCO तथा अन्य मंचों पर करीबी सहयोग रहा है। करीबी तालमेल के साथ आगे बढ़ते हुए, हम इन सभी मंचों पर अपना संवाद और सहयोग जारी रखेंगे।

Excellency,

मुझे पूरा विश्वास है कि आने वाले समय में हमारी मित्रता हमें global challenges का सामना करने की शक्ति देगी — और यही भरोसा हमारे साझा भविष्य को और समृद्ध करेगा।

मैं एक बार फिर आपको और आपके पूरे delegation को भारत यात्रा के लिए बहुत बहुत धन्यवाद देता हूँ।