ಕೃಷಿ, ನಾವೀನ್ಯತೆ ಮತ್ತು ಸುಸ್ಥಿರತೆಯೆಡೆಗೆ ರೈತರಿಗಿರುವ ಉತ್ಸಾಹ ಅತ್ಯಂತ ಶ್ಲಾಘನೀಯ: ಪ್ರಧಾನಮಂತ್ರಿ
ಭತ್ತದ ಕೃಷಿ ಕ್ಷೇತ್ರದಲ್ಲಿ ತಮಿಳುನಾಡು ಮಾಡಿರುವ ಕೆಲಸ ಜಾಗತಿಕ ಮಟ್ಟದಲ್ಲಿ ಸಾಟಿಯಿಲ್ಲದ್ದು: ಪ್ರಧಾನಮಂತ್ರಿ
ಸ್ವಚ್ಛ ಗ್ರಾಮಗಳು ಮತ್ತು ಪರಿಣಾಮಕಾರಿ ಜಾನುವಾರು ಪಾಲನೆಗಾಗಿ ಗುಜರಾತ್ನ ‘ಜಾನುವಾರು ಹಾಸ್ಟೆಲ್’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ

ಕೃಷಿಕ: ವಣಕ್ಕಂ!

ಪ್ರಧಾನಮಂತ್ರಿ: ನಮಸ್ಕಾರ! ಇವರೆಲ್ಲರೂ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆಯೇ?

ಕೃಷಿಕ: ಹೌದು, ಸರ್.

ಕೃಷಿಕ: ಇದು ಸೌರಶಕ್ತಿಯಿಂದ ಒಣಗಿಸಿದ ಬಾಳೆಹಣ್ಣು.

ಪ್ರಧಾನಮಂತ್ರಿ: ಬಾಳೆಹಣ್ಣುಗಳನ್ನು ಕೊಯ್ಲು ಮಾಡಿದ ನಂತರ...

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ನೀವು ತ್ಯಾಜ್ಯವನ್ನು ಏನು ಮಾಡುತ್ತೀರಿ?

ಕೃಷಿಕ: ಇವೆಲ್ಲವೂ ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು, ಇದು ತ್ಯಾಜ್ಯ... ಸರ್, ಇದು ಬಾಳೆಹಣ್ಣಿನ ತ್ಯಾಜ್ಯದಿಂದ ಬಂದಿದೆ; ಇದು ಬಾಳೆಹಣ್ಣಿನ ಮೌಲ್ಯವರ್ಧನೆಯಿಂದ ಬಂದಿದೆ, ಸರ್.

ಪ್ರಧಾನಮಂತ್ರಿ: ನಿಮ್ಮ ಉತ್ಪನ್ನವನ್ನು ಭಾರತದಾದ್ಯಂತ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದೀರಾ?

ಕೃಷಿಕ: ಹೌದು, ಸರ್

ಕೃಷಿಕ: ವಾಸ್ತವವಾಗಿ, ನಾವು ಇಲ್ಲಿ ಇಡೀ ತಮಿಳುನಾಡನ್ನು ಪ್ರತಿನಿಧಿಸುತ್ತಿದ್ದೇವೆ ಸರ್. ಎಲ್ಲಾ ರೈತ ಉತ್ಪಾದಕ ಕಂಪನಿಗಳು ಮತ್ತು ವೈಯಕ್ತಿಕ ರೈತರು ಸಹ ಇದರ ಭಾಗವಾಗಿದ್ದಾರೆ ಸರ್.

ಪ್ರಧಾನಮಂತ್ರಿ: ಸರಿ.

ಕೃಷಿಕ: ನಾವು ಎಲ್ಲವನ್ನೂ ಮಾಡುತ್ತೇವೆ: ಆನ್‌ಲೈನ್ ಮಾರಾಟ, ರಫ್ತು, ಮತ್ತು ಸೂಪರ್‌ಮಾರ್ಕೆಟ್‌ಗಳು ಸೇರಿದಂತೆ ಭಾರತದ ಸಂಪೂರ್ಣ ಸ್ಥಳೀಯ ಮಾರುಕಟ್ಟೆಯಲ್ಲೂ ನಾವು ಮಾರಾಟ ಮಾಡುತ್ತೇವೆ, ಸರ್.

 

ಪ್ರಧಾನಮಂತ್ರಿ: ಒಂದು ಎಫ್‌ಪಿಒನಲ್ಲಿ ಎಷ್ಟು ಜನರು ಒಟ್ಟಿಗೆ ಕೆಲಸ ಮಾಡುತ್ತಾರೆ?

ಕೃಷಿಕ: ಸಾವಿರ.

ಪ್ರಧಾನಮಂತ್ರಿ: ಒಂದು ಸಾವಿರ?

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ಓಹ್. ಇಡೀ ಪ್ರದೇಶದಲ್ಲಿ, ನೀವು ಬಾಳೆಹಣ್ಣನ್ನು ಮಾತ್ರ ಬೆಳೆಯುತ್ತೀರಾ ಅಥವಾ ನೀವು ವಿಭಿನ್ನ ಬೆಳೆಗಳನ್ನು ಬೆಳೆಯುತ್ತೀರಾ?

ಕೃಷಿಕ: ವಿವಿಧ ಪ್ರದೇಶಗಳಲ್ಲಿ, ವಿಭಿನ್ನ ವಿಶೇಷ ಬೆಳೆಗಳಿವೆ, ಸರ್. ಇದೀಗ, ನಮ್ಮಲ್ಲಿ ಜಿಐ ಉತ್ಪನ್ನಗಳಿವೆ.

ಪ್ರಧಾನಮಂತ್ರಿ: ಸರಿ, ನಿಮ್ಮ ಬಳಿಯೂ ಅದು ಇದೆ.

ಕೃಷಿಕ: 4 ವಿಧದ ಚಹಾಗಳಿವೆ. ಎಲ್ಲರಿಗೂ ಕಪ್ಪು ಚಹಾ ತಿಳಿದಿದೆ. ಇದು ಅದರಿಂದ ಬಂದಿದೆ... (ಸ್ಪಷ್ಟವಾಗಿಲ್ಲ). ನಾವು ಇದನ್ನು ಬಿಳಿ ಚಹಾ ಎಂದು ಕರೆಯುತ್ತೇವೆ. ಇದು ಊಲಾಂಗ್. ಇದು 40% ಫರ್ಮೆಂಟೆಡ್(ಹುದುಗಿಸಿದ) ಚಹಾ, ಊಲಾಂಗ್ ಚಹಾ ಮತ್ತು ಹಸಿರು ಚಹಾ.

ಪ್ರಧಾನಮಂತ್ರಿ: ಇತ್ತೀಚಿನ ದಿನಗಳಲ್ಲಿ, ಬಿಳಿ ಚಹಾವು ದೊಡ್ಡ ಮಾರುಕಟ್ಟೆ ಹೊಂದಿದೆ.

ಕೃಷಿಕ: ಹೌದು, ಹೌದು ಸರ್.

ಕೃಷಿಕ: ಬದನೆಕಾಯಿ - ಎಲ್ಲವೂ ನೈಸರ್ಗಿಕ ಕೃಷಿಯಲ್ಲಿದೆ.

ಪ್ರಧಾನಮಂತ್ರಿ: ಈ ಋತುವಿನಲ್ಲಿ, ಮಾವಿನ ಹಣ್ಣುಗಳು ಲಭ್ಯವಿದೆಯೇ...?

ಕೃಷಿಕ: ಹೌದು, ಮಾವು, ಹೌದು ಸರ್...

ಕೃಷಿಕ: ಆಫ್-ಸೀಸನ್ ಮಾವು...

ಪ್ರಧಾನಮಂತ್ರಿ: ಇತ್ತೀಚಿನ ದಿನಗಳಲ್ಲಿ, ಇದಕ್ಕೆ ದೊಡ್ಡ ಮಾರುಕಟ್ಟೆ ಇದೆಯೇ?

ಕೃಷಿಕ: ಮೊರಿಂಗ.

 

ಪ್ರಧಾನಮಂತ್ರಿ: ಮೊರಿಂಗ!

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ನೀವು ಮೊರಿಂಗ ಎಲೆಗಳನ್ನು ಏನು ಮಾಡುತ್ತೀರಿ?

ಕೃಷಿಕ: ನಾವು ಮೊರಿಂಗ ಎಲೆಯ ಪುಡಿ ತಯಾರಿಸಿ, ಅದನ್ನು ರಫ್ತು ಮಾಡುತ್ತೇವೆ ಸರ್.

ಪ್ರಧಾನಮಂತ್ರಿ: ಪುಡಿ ತುಂಬಾ...

ಕೃಷಿಕ: ಬೇಡಿಕೆಯಿದೆ.

ಪ್ರಧಾನಮಂತ್ರಿ: ಬೇಡಿಕೆ ತುಂಬಾ ಹೆಚ್ಚು.

ಕೃಷಿಕ: ಹೌದು ಸರ್.

ಪ್ರಧಾನಮಂತ್ರಿ: ಮುಖ್ಯವಾಗಿ ಯಾವ ದೇಶಗಳು ಇದನ್ನು ಖರೀದಿಸುತ್ತವೆ?

ಕೃಷಿಕ: ಅಮೆರಿಕ, ಆಫ್ರಿಕಾ ದೇಶಗಳು ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಗಳು. ನಮಗೆ ಆಗ್ನೇಯ ಏಷ್ಯಾದಿಂದಲೂ ಉತ್ತಮ ಬೇಡಿಕೆ ಸಿಗುತ್ತಿದೆ...

ಕೃಷಿಕ: ವಾಸ್ತವವಾಗಿ, ಇವೆಲ್ಲವೂ ಜಿಐ ಉತ್ಪನ್ನಗಳು. ನಾವು ಇಲ್ಲಿ ತಮಿಳುನಾಡಿನ 25 ಜಿಐ ಉತ್ಪನ್ನಗಳನ್ನು ಪ್ರದರ್ಶಿಸಿದ್ದೇವೆ. ಕುಂಭಕೋಣಂ ವೀಳ್ಯದ ಎಲೆ, ಮಧುರೈ ಮಲ್ಲಿಗೆ, ಮತ್ತು ಇದು ಕೂಡ ಮಧುರೈನದ್ದು ಸರ್. ಇದರಂತೆ, ಈ ಎಲ್ಲಾ ವಸ್ತುಗಳು ಇಲ್ಲಿವೆ...

ಪ್ರಧಾನಮಂತ್ರಿ: ಇದಕ್ಕೆ ಮಾರುಕಟ್ಟೆ ಎಲ್ಲಿದೆ?

ಕೃಷಿಕ: ಭಾರತದಾದ್ಯಂತ ಸರ್. ತಮಿಳುನಾಡಿನಲ್ಲಿ, ಇದನ್ನು ಪ್ರತಿಯೊಂದು ಕಾರ್ಯದಲ್ಲೂ ಬಳಸುತ್ತಾರೆ...

ಪ್ರಧಾನಮಂತ್ರಿ: ನನ್ನ ಕಾಶಿಯಲ್ಲಿರುವ ಜನರು ಇದನ್ನು ತೆಗೆದುಕೊಳ್ಳುತ್ತಾರೆಯೇ ಅಥವಾ ಇಲ್ಲವೇ? ಅವರು ನಿಮಗೆ ಬನಾರಸಿ ಪಾನ್ ನೀಡುತ್ತಾರೆಯೇ?

ಕೃಷಿಕ: ಹೌದು ಸರ್.

ಕೃಷಿಕ: ಇದು ಪಳನಿ ಮುರುಗ...

ಕೃಷಿಕ: ಕಡಿಮೆ... 100ಕ್ಕೂ ಹೆಚ್ಚು ಉತ್ಪನ್ನಗಳಿವೆ ಸರ್. ನಮ್ಮ ಕಡೆಯಿಂದ, ಜೇನುತುಪ್ಪದಿಂದ ಪ್ರಾರಂಭಿಸಿ...

ಪ್ರಧಾನಮಂತ್ರಿ: ಅದರ ಮಾರುಕಟ್ಟೆ?

ಕೃಷಿಕ: ತುಂಬಾ ದೊಡ್ಡದು ಸರ್. ಬೇಡಿಕೆ ತುಂಬಾ ಹೆಚ್ಚಾಗಿದೆ. ಜೇನುತುಪ್ಪಕ್ಕೆ ನಮಗೆ ಜಾಗತಿಕ ಮಾರುಕಟ್ಟೆ ಇದೆ.

ಕೃಷಿಕ: ನಮ್ಮಲ್ಲಿ ಸಾಂಪ್ರದಾಯಿಕ ತಳಿಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಭತ್ತದ ತಳಿಗಳಿವೆ... ಮೌಲ್ಯದ ದೃಷ್ಟಿಯಿಂದ ಸಿರಿಧಾನ್ಯಕ್ಕೆ ಸಮಾನ, ಸರ್...

ಪ್ರಧಾನಮಂತ್ರಿ: ಭತ್ತದಲ್ಲಿ, ತಮಿಳುನಾಡು ಏನು ಸಾಧಿಸಿದೆ...

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ಜಗತ್ತು ಇನ್ನೂ ಅದನ್ನು ಸರಿಗಟ್ಟಲು ಸಾಧ್ಯವಾಗಿಲ್ಲ.

 

ಕೃಷಿಕ: ಅದು ನಿಜ, ಸರ್.

ಪ್ರಧಾನಮಂತ್ರಿ: ಹೌದು.

ಕೃಷಿಕ: ಸರ್, ಇದರಲ್ಲಿ ನಾವು ಭತ್ತ, ಅಕ್ಕಿ ಮತ್ತು ಅದರಿಂದ ತಯಾರಿಸಿದ ಎಲ್ಲಾ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಅದೆಲ್ಲವನ್ನೂ ಈಗ ಇಲ್ಲಿ ಪ್ರದರ್ಶಿಸಲಾಗಿದೆ.

ಪ್ರಧಾನಮಂತ್ರಿ: ಯುವ ಪೀಳಿಗೆಯ ರೈತರು ತರಬೇತಿಗಾಗಿ ಬರುತ್ತಾರೆಯೇ?

ಕೃಷಿಕ: ಹೌದು, ಸರ್. ಈಗ ಸಂಖ್ಯೆ ತುಂಬಾ ಹೆಚ್ಚಾಗಿದೆ.

ಪ್ರಧಾನಮಂತ್ರಿ: ಅವರು ಪ್ರಶ್ನೆಗಳನ್ನು ಕೇಳಬೇಕು. ಅವರಿಗೆ ಮೊದಲಿಗೆ ಅರ್ಥವಾಗದಿರಬಹುದು. ಪಿಎಚ್‌ಡಿ ಮಾಡಿದ ವ್ಯಕ್ತಿ ಈ ಕೆಲಸ ಮಾಡುತ್ತಿದ್ದಾರೆ! ಅವರು ಕೃಷಿಯಲ್ಲಿರುವ ಪ್ರಯೋಜನಗಳನ್ನು ನೋಡಿದಾಗ, ನೀವು ಅವರಿಗೆ ಏನು ವಿವರಿಸುತ್ತೀರಿ?

ಕೃಷಿಕ: ಮೊದಲು, ಜನರು ಅವರನ್ನು ಹುಚ್ಚರಂತೆ ನೋಡುತ್ತಿದ್ದರು. ಆದರೆ ಈಗ ಅವರು ತಿಂಗಳಿಗೆ 2 ಲಕ್ಷ ರೂಪಾಯಿ ಗಳಿಸುತ್ತಾರೆ. ಅವರು ಕಲೆಕ್ಟರ್‌ಗಿಂತ ಹೆಚ್ಚು ಸಂಪಾದಿಸುತ್ತಾರೆ ಸರ್. ಅದಕ್ಕಾಗಿಯೇ ಜನರು ಈಗ ಅವರನ್ನು ಸ್ಫೂರ್ತಿ ಎಂದು ಪರಿಗಣಿಸುತ್ತಾರೆ.

ಪ್ರಧಾನಮಂತ್ರಿ: ಹಾಗಾದರೆ ಈಗ ಎಲ್ಲಾ ಕಲೆಕ್ಟರ್‌ಗಳು (ಕೃಷಿಗೆ) ಬರುತ್ತಾರೆ.

ಕೃಷಿಕ: ನಾವು ನಮ್ಮ ಜಮೀನಿನಲ್ಲಿ 7,000 ರೈತರಿಗೆ ತರಬೇತಿ ನೀಡಿದ್ದೇವೆ. ಇದು ನೈಸರ್ಗಿಕ ಕೃಷಿ ಯೋಜನೆ(ಟಿಎನ್‌ಎಯು) ಅಡಿ, ಗುರುತಿಸಲ್ಪಟ್ಟ ಮಾದರಿ ಕೃಷಿ ಆಗಿದೆ. 3,000 ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಪ್ರಧಾನಮಂತ್ರಿ: ನಿಮ್ಮ ಉತ್ಪನ್ನಗಳಿಗೆ ನೀವು ಮಾರುಕಟ್ಟೆ ಪಡೆಯುತ್ತೀರಾ?

ಕೃಷಿಕ: ನಾವು ನೇರವಾಗಿ ಮಾರುಕಟ್ಟೆ ಮಾಡಿ ಇತರ ದೇಶಗಳಿಗೆ ರಫ್ತು ಮಾಡುತ್ತೇವೆ. ನಂತರ ನಾವು ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುತ್ತೇವೆ - ಎಣ್ಣೆ, ಕೂದಲಿನ ಎಣ್ಣೆ, ಕೊಬ್ಬರಿ, ಸೋಪ್.

ಪ್ರಧಾನಮಂತ್ರಿ: ನಿಮ್ಮ ಕೂದಲಿನ ಎಣ್ಣೆಯನ್ನು ಯಾರು ಖರೀದಿಸುತ್ತಾರೆ?

ಪ್ರಧಾನಮಂತ್ರಿ: ನಾನು ಗುಜರಾತ್‌ನಲ್ಲಿದ್ದಾಗ, ನಾನು ಜಾನುವಾರು ವಸತಿ ನಿಲಯ ಎಂಬ ಪರಿಕಲ್ಪನೆ ಅಭಿವೃದ್ಧಿಪಡಿಸಿದ್ದೆ.

ಕೃಷಿಕ: ಹೌದು.

 

ಪ್ರಧಾನಮಂತ್ರಿ: ಎಲ್ಲಾ ಹಳ್ಳಿಯ ಜಾನುವಾರುಗಳನ್ನು ಜಾನುವಾರು ವಸತಿ ನಿಲಯದಲ್ಲಿ ಇಡಬೇಕು.

ಕೃಷಿಕ: ಹೌದು.

ಪ್ರಧಾನಮಂತ್ರಿ: ಆಗ ಗ್ರಾಮವು ಸ್ವಚ್ಛವಾಗಿರುತ್ತದೆ, ಮತ್ತು ನಿರ್ವಹಣೆಗೆ ನಿಮಗೆ ಒಬ್ಬ ವೈದ್ಯರು ಮತ್ತು 4-5 ಜನರು ಮಾತ್ರ ಬೇಕಾಗುತ್ತದೆ. ಇದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ.

ಕೃಷಿಕ: ಇದೆಲ್ಲವೂ... ನಾವು ಸಾಮೂಹಿಕ ಉತ್ಪಾದನೆ ಮಾಡಿ, ಸಮೀಪದ ರೈತರಿಗೆ ನೀಡುತ್ತೇವೆ...

ಪ್ರಧಾನಮಂತ್ರಿ: ನೀವು ಅದನ್ನು ರೈತರಿಗೆ ನೀಡಿ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre allows 100% FDI in insurance via auto route

Media Coverage

Centre allows 100% FDI in insurance via auto route
NM on the go

Nm on the go

Always be the first to hear from the PM. Get the App Now!
...
Prime Minister congratulates Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog
May 02, 2026

Prime Minister Shri Narendra Modi has congratulated Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog.

The Prime Minister noted that their rich experience and deep understanding of various issues will greatly strengthen policymaking. Shri Modi expressed confidence that their contributions will help drive innovation and growth across sectors. He also wished them a very productive and impactful tenure ahead.

The Prime Minister posted on X:

"Congratulations to Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog. Their rich experience and deep understanding of various issues will greatly strengthen policy making. I am confident their contributions will help drive innovation and growth across sectors. Wishing them a very productive and impactful tenure ahead."