ಇಂದಿನಿಂದ, ಭಾರತದ ವಿಮಾನಯಾನ ಕ್ಷೇತ್ರವು ಹೊಸ ಎತ್ತರಕ್ಕೆ ಹಾರಲು ಸಜ್ಜಾಗಿದೆ; ʻಸಫ್ರಾನ್ʼನ ಹೊಸ ಘಟಕವು ಜಾಗತಿಕ ʻಎಂಆರ್‌ಒʼ ಕೇಂದ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಇತ್ತೀಚಿನ ವರ್ಷಗಳಲ್ಲಿ, ಭಾರತದ ವಿಮಾನಯಾನ ಕ್ಷೇತ್ರವು ಅಭೂತಪೂರ್ವ ವೇಗದಲ್ಲಿ ಪ್ರಗತಿ ಸಾಧಿಸಿದೆ. ಇಂದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ
ನಾವು ದೊಡ್ಡ ಕನಸುಗಳನ್ನು ಕಾಣುತ್ತಿದ್ದೇವೆ, ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದೇವೆ: ಪ್ರಧಾನಮಂತ್ರಿ
ಭಾರತದಲ್ಲಿ ಹೂಡಿಕೆ ಮಾಡುವವರನ್ನು ನಾವು ಕೇವಲ ಹೂಡಿಕೆದಾರರನ್ನಾಗಿ ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರದತ್ತ ನಮ್ಮ ಪ್ರಯಾಣದ ಸಹ-ಸೃಷ್ಟಿಕರ್ತರು ಎಂದು ಪರಿಗಣಿಸುತ್ತೇವೆ: ಪ್ರಧಾನಮಂತ್ರಿ

ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಜಿ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜಿ, ಸಫ್ರಾನ್ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ನಾನು ಸಂಸತ್ತಿಗೆ ತೆರಳಬೇಕಾಗಿರುವುದರಿಂದ ನನಗಿಂದು ಸಮಯದ ಅಭಾವವಿದೆ, ಗೌರವಾನ್ವಿತ ರಾಷ್ಟ್ರಪತಿಗಳ ಜತೆ ಕಾರ್ಯಕ್ರಮವಿದೆ. ಆದ್ದರಿಂದ, ನಾನಿಲ್ಲಿ ಹೆಚ್ಚು ಮಾತನಾಡದೆ, ನಾನು ಕೆಲವೇ  ಕೆಲವು ವಿಚಾರಗಳನ್ನು ತ್ವರಿತವಾಗಿ ಹಂಚಿಕೊಂಡು ನನ್ನ ಭಾಷಣ ಮುಕ್ತಾಯಗೊಳಿಸುತ್ತೇನೆ. ಇಂದಿನಿಂದ ಭಾರತದ ವಾಯುಯಾನ ವಲಯವು ಹೊಸ ಹಾದಿ ಹಿಡಿಯಲಿದೆ. ಸಫ್ರಾನ್‌ನ ಈ ಹೊಸ ಸೌಲಭ್ಯವು ಭಾರತವು ಜಾಗತಿಕ ಮಟ್ಟದ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ(ಎಂಆರ್ ಒ)ಗಳ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಎಂಆರ್ ಒ ಸೌಲಭ್ಯವು ಹೈಟೆಕ್ ಏರೋಸ್ಪೇಸ್ ಜಗತ್ತಿನಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ನಾನು ಇತ್ತೀಚೆಗೆ ನವೆಂಬರ್ 24ರಂದು ಸಫ್ರಾನ್ ಆಡಳಿತ ಮಂಡಳಿಯನ್ನು ಭೇಟಿ ಮಾಡಿದ್ದೇನೆ, ನಾನು ಅವರನ್ನು ಮೊದಲೇ ಭೇಟಿ ಮಾಡಿದ್ದೆ. ಪ್ರತಿ ಚರ್ಚೆಯಲ್ಲೂ, ಭಾರತದ ಬಗ್ಗೆ ಅವರು ಹೊಂದಿರುವ ನಂಬಿಕೆ ಮತ್ತು ಭರವಸೆಯನ್ನು ನಾನು ನೋಡಿದ್ದೇನೆ. ಭಾರತದಲ್ಲಿ ಸಫ್ರಾನ್‌ನ ಹೂಡಿಕೆ ಅದೇ ವೇಗದಲ್ಲಿ ಮುಂದುವರಿಯುತ್ತದೆ ಎಂಬ ವಿಶ್ವಾಸ ನನಗಿದೆ. ಇಂದು ಈ ಸೌಲಭ್ಯ ಒದಗಿಸುತ್ತಿರುವ ಸಫ್ರಾನ್‌ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಭಾರತದ ವಾಯುಯಾನ ವಲಯವು ಹಿಂದೆಂದೂ ಕಾಣದ ರೀತಿಯಲ್ಲಿ ವೇಗದ ಪ್ರಗತಿ ಸಾಧಿಸಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇಂದು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶೀಯ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ನಮ್ಮ ಬಲಿಷ್ಠ ಮಾರುಕಟ್ಟೆ ಇದೀಗ ವಿಶ್ವದಲ್ಲೇ 3ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಂದು ಭಾರತದ ಜನರ ಆಕಾಂಕ್ಷೆಗಳು ಹೊಸ ಎತ್ತರವನ್ನು ತಲುಪಿವೆ. ಅಂತಹ ಸನ್ನಿವೇಶದಲ್ಲಿ, ಭಾರತದಲ್ಲಿ ವಿಮಾನ ಪ್ರಯಾಣದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ ನಮ್ಮ ವಿಮಾನಯಾನ ಸಂಸ್ಥೆಗಳು ತಮ್ಮ ಸಕ್ರಿಯ ಫ್ಲೀಟ್‌ಗಳನ್ನು ನಿರಂತರವಾಗಿ ವಿಸ್ತರಿಸುತ್ತಿವೆ. ಭಾರತೀಯ ವಿಮಾನಯಾನ ಕಂಪನಿಗಳು 1,500ಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಆರ್ಡರ್‌ಗಳನ್ನು ನೀಡಿವೆ.

 

ಸ್ನೇಹಿತರೆ,

ಭಾರತದ ವಾಯುಯಾನ ವಲಯದಲ್ಲಿನ ತ್ವರಿತ ವಿಸ್ತರಣೆಯಿಂದಾಗಿ, ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ(ಎಂಆರ್ ಒ) ಸೌಲಭ್ಯಗಳ ಅಗತ್ಯವೂ ಹೆಚ್ಚಾಗಿದೆ. ಇದಕ್ಕೂ ಮೊದಲು, ನಮ್ಮ ಎಂಆರ್ ಒ ಕೆಲಸಗಳಲ್ಲಿ ಸುಮಾರು 85 ಪ್ರತಿಶತವನ್ನು ವಿದೇಶದಲ್ಲಿ ಮಾಡಲಾಗುತ್ತಿತ್ತು. ಇದು ವೆಚ್ಚವನ್ನು ಹೆಚ್ಚಿಸಿತು, ಹೆಚ್ಚು ಸಮಯ ತೆಗೆದುಕೊಂಡಿತು ಮತ್ತು ವಿಮಾನಗಳು ದೀರ್ಘಕಾಲದವರೆಗೆ ಸ್ಥಗಿತವಾಗಿರುತ್ತಿದ್ದವು. ಈ ಪರಿಸ್ಥಿತಿ ಭಾರತದಂತಹ ದೊಡ್ಡ ವಾಯುಯಾನ ಮಾರುಕಟ್ಟೆಗೆ ಸೂಕ್ತವಲ್ಲ. ಆದ್ದರಿಂದ ಇಂದು ಭಾರತ ಸರ್ಕಾರವು ದೇಶವನ್ನು ಪ್ರಮುಖ ಜಾಗತಿಕ ಎಂಆರ್ ಒ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದೆ. ಮೊದಲ ಬಾರಿಗೆ, ಜಾಗತಿಕ “ಮೂಲ ಸಾಧನ ಸಲಕರಣೆ ತಯಾರಿಕೆ(ಒಇಎಂ)” ವ್ಯವಸ್ಥೆಯು ದೇಶದಲ್ಲಿ ಆಳವಾದ ಮಟ್ಟದ ಸೇವಾ ಸಾಮರ್ಥ್ಯವನ್ನು ಸ್ಥಾಪಿಸುತ್ತಿದೆ.

ಸ್ನೇಹಿತರೆ,

ಸಫ್ರಾನ್ ಅವರ ಜಾಗತಿಕ ತರಬೇತಿ, ಜ್ಞಾನ ವರ್ಗಾವಣೆ ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಯು ದೇಶದಲ್ಲಿ ಸದೃಢ ಕಾರ್ಯಪಡೆ ರೂಪಿಸಲು ಸಹಾಯ ಮಾಡುತ್ತದೆ, ಅದು ಮುಂಬರುವ ವರ್ಷಗಳಲ್ಲಿ ಇಡೀ ಎಂಆರ್ ಒ ಪರಿಸರ ವ್ಯವಸ್ಥೆಗೆ ಹೊಸ ವೇಗ ಮತ್ತು ನಿರ್ದೇಶನವನ್ನು ನೀಡುತ್ತದೆ. ಈ ಸೌಲಭ್ಯವು ದಕ್ಷಿಣ ಭಾರತದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಾವು ಎಂಆರ್ ಒವನ್ನು ವಿಮಾನಯಾನಕ್ಕೆ ಮಾತ್ರ ಸೀಮಿತವಾಗಿಸಲು ಬಯಸದೆ, ಬಂದರಿಗೆ ಸಂಬಂಧಿಸಿದ ಎಂಆರ್ ಒ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ನಾವು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೇವೆ.

ನಾವು ಭಾರತದಲ್ಲಿ ವಿನ್ಯಾಸವನ್ನು ಪ್ರತಿಯೊಂದು ವಲಯದಲ್ಲೂ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಭಾರತದಲ್ಲಿಯೂ ವಿಮಾನ ಎಂಜಿನ್ ಮತ್ತು ಘಟಕ ವಿನ್ಯಾಸದ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಸಫ್ರಾನ್ ತಂಡಕ್ಕೆ ನಾನು ಮನವಿ ಮಾಡುತ್ತೇನೆ. ಇದರಲ್ಲಿ ನಮ್ಮ ವಿಶಾಲವಾದ ಎಂಎಸ್ಎಂಇ ಜಾಲ ಮತ್ತು ನಮ್ಮ ಯುವ ಪ್ರತಿಭೆಗಳ ದೊಡ್ಡ ಸಮೂಹವು ನಿಮ್ಮನ್ನು ಹೆಚ್ಚು ಬೆಂಬಲಿಸುತ್ತದೆ. ಸಫ್ರಾನ್ ಏರೋಸ್ಪೇಸ್ ಪ್ರೊಪಲ್ಷನ್ ವ್ಯವಸ್ಥೆಗಳಲ್ಲಿ ವ್ಯಾಪಕವಾಗಿ ಕಾರ್ಯ ನಿರ್ವಹಿಸುತ್ತದೆ. ನೀವು ಭಾರತದ ಪ್ರತಿಭೆಯನ್ನು ಮತ್ತು ಪ್ರೊಪಲ್ಷನ್ ವಿನ್ಯಾಸ ಮತ್ತು ಉತ್ಪಾದನೆಗೆ ಇಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ.

 

ಸ್ನೇಹಿತರೆ,

ಇಂದಿನ ಭಾರತವು ಕೇವಲ ದೊಡ್ಡ ಕನಸುಗಳನ್ನು ಕಾಣುವ ಜತೆಗೆ, ಭಾರತವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ, ಇನ್ನೂ ದೊಡ್ಡ ಫಲಿತಾಂಶಗಳನ್ನು ಸಾಧಿಸುತ್ತಿದೆ. ನಾವು ದೊಡ್ಡ ಕನಸು ಕಾಣುತ್ತಿದ್ದೇವೆ, ದೊಡ್ಡದನ್ನು ಮಾಡುತ್ತಿದ್ದೇವೆ ಮತ್ತು ಅತ್ಯುತ್ತಮವಾಗಿದದ್ದನ್ನು ನೀಡುತ್ತಿದ್ದೇವೆ. ಭಾರತವು ಸುಲಭವಾಗಿ ವ್ಯಾಪಾರ ಮಾಡುವ ವ್ಯವಸ್ಥೆಯ ಬಲವಾದ ಗಮನ ಹರಿಸಿದೆ.

ಸ್ನೇಹಿತರೆ,

ಜಾಗತಿಕ ಹೂಡಿಕೆ ಮತ್ತು ಜಾಗತಿಕ ಕೈಗಾರಿಕೆಗಳನ್ನು ಆಕರ್ಷಿಸಲು ನಾವು ಸ್ವತಂತ್ರ ಭಾರತದಲ್ಲಿ ಕೆಲವು ದೊಡ್ಡ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಮೊದಲನೆಯದಾಗಿ, ನಾವು ನಮ್ಮ ಆರ್ಥಿಕತೆಯ ಬಾಗಿಲುಗಳನ್ನು ತೆರೆದಿದ್ದೇವೆ. ಎರಡನೆಯದಾಗಿ, ನಾವು ನಮ್ಮ ಮೂಲಭೂತ ಅಂಶಗಳನ್ನು ಬಲಪಡಿಸಿದ್ದೇವೆ. ಮೂರನೆಯದಾಗಿ, ನಾವು ವ್ಯಾಪಾರ ಮಾಡುವುದನ್ನು ಸುಲಭಗೊಳಿಸಿದ್ದೇವೆ.

ಸ್ನೇಹಿತರೆ,

ಇಂದು ಹೆಚ್ಚಿನ ವಲಯಗಳಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ 100 ಪ್ರತಿಶತ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗಿದೆ. ರಕ್ಷಣಾ ವಲಯದಲ್ಲೂ  ಸಹ, ಮೊದಲು ಖಾಸಗಿ ವಲಯಕ್ಕೆ ಸ್ಥಳವಿಲ್ಲದಿದ್ದಾಗ, ನಾವು ಈಗ ಸ್ವಯಂಚಾಲಿತ ಮಾರ್ಗದ ಮೂಲಕ 74 ಪ್ರತಿಶತ ವಿದೇಶಿ ನೇರ ಹೂಡಿಕೆಯನ್ನು ತೆರೆದಿದ್ದೇವೆ. ಬಾಹ್ಯಾಕಾಶ ವಲಯದಲ್ಲೂ ಒಂದು ದಿಟ್ಟ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ಕ್ರಮಗಳು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿವೆ. ಭಾರತ ಹೂಡಿಕೆಗಳನ್ನು ಸ್ವಾಗತಿಸುತ್ತದೆ, ಭಾರತ ನಾವೀನ್ಯತೆಯನ್ನು ಸ್ವಾಗತಿಸುತ್ತದೆ. ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಗಳು ಜಾಗತಿಕ ತಯಾರಕರನ್ನು ಮೇಕ್ ಇನ್ ಇಂಡಿಯಾ ಕಡೆಗೆ ಆಕರ್ಷಿಸಿವೆ. ಕಳೆದ 11 ವರ್ಷಗಳಲ್ಲಿ ನಾವು 40,000ಕ್ಕೂ ಹೆಚ್ಚು ಅನುಸರಣೆ ಅವಶ್ಯಕತೆ(ಕಟ್ಟುಪಾಡು)ಗಳನ್ನು ಕಡಿಮೆ ಮಾಡಿದ್ದೇವೆ. ಭಾರತವು ನೂರಾರು ವ್ಯವಹಾರ-ಸಂಬಂಧಿತ ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಿದೆ. ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯು ಹಲವಾರು ಅನುಮೋದನೆಗಳನ್ನು ಒಂದೇ ವೇದಿಕೆಗೆ ತಂದಿದೆ. ಜಿಎಸ್ಟಿ ಸುಧಾರಣೆಗಳು, ಮುಖರಹಿತ ಮೌಲ್ಯಮಾಪನಗಳು, ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಐಬಿಸಿ ಆಡಳಿತವನ್ನು ಹಿಂದೆಂದಿಗಿಂತಲೂ ಸರಳ ಮತ್ತು ಹೆಚ್ಚು ಪಾರದರ್ಶಕಗೊಳಿಸಿವೆ. ಈ ಎಲ್ಲಾ ಪ್ರಯತ್ನಗಳಿಂದಾಗಿ, ಭಾರತವನ್ನು ಈಗ ವಿಶ್ವಾಸಾರ್ಹ ಪಾಲುದಾರ, ಪ್ರಮುಖ ಮಾರುಕಟ್ಟೆ ಮತ್ತು ಉದಯೋನ್ಮುಖ ಉತ್ಪಾದನಾ ಕೇಂದ್ರವಾಗಿ ನೋಡಲಾಗುತ್ತಿದೆ.

 

ಸ್ನೇಹಿತರೆ,

ಭಾರತವು ತ್ವರಿತ ಬೆಳವಣಿಗೆ, ಸ್ಥಿರ ಸರ್ಕಾರ, ಸುಧಾರಣಾ-ಆಧಾರಿತ ಮನಸ್ಥಿತಿ, ವಿಶಾಲವಾದ ಯುವ ಪ್ರತಿಭಾನ್ವಿತ ಗುಂಪುಗಳಿರುವ ದೊಡ್ಡ ದೇಶೀಯ ಮಾರುಕಟ್ಟೆ ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಹೂಡಿಕೆ ಮಾಡುವವರನ್ನು ನಾವು ಹೂಡಿಕೆದಾರರಲ್ಲ, ಆದರೆ ಸಹ-ಸೃಷ್ಟಿಕರ್ತರು ಎಂದು ಪರಿಗಣಿಸುತ್ತೇವೆ. ನಾವು ಅವರನ್ನು 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ)ದ ಪ್ರಯಾಣದಲ್ಲಿ ಪಾಲುದಾರರಾಗಿ ನೋಡುತ್ತೇವೆ. ಆದ್ದರಿಂದ, ನಾನು ಎಲ್ಲಾ ಹೂಡಿಕೆದಾರರಿಗೆ ಹೇಳಲು ಬಯಸುತ್ತೇನೆ... ಭಾರತದ ಮೇಲೆ ಬೆಟ್ಟಿಂಗ್ ಮಾಡುವುದು ಈ ದಶಕದ ಅತ್ಯಂತ ಬುದ್ಧಿವಂತ ವ್ಯವಹಾರ ನಿರ್ಧಾರ ಎಂದು ಭಾರತ ಸಾಬೀತುಪಡಿಸುತ್ತಿದೆ. ಮತ್ತೊಮ್ಮೆ, ಈ ಆಧುನಿಕ ಎಂಆರ್ ಒ ಸೌಲಭ್ಯಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬು ಧನ್ಯವಾದಗಳು. ನನಗೆ ಸಮಯ ಕಡಿಮೆ ಇದೆ, ಆದ್ದರಿಂದ ನಾನು ಹೊರಡಲು ನಿಮ್ಮ ಅನುಮತಿ ಕೋರುತ್ತೇನೆ. ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
PM receives H.H. Sheikh Mohamed bin Zayed Al Nahyan, President of the UAE
January 19, 2026

Prime Minister Shri Narendra Modi received His Highness Sheikh Mohamed bin Zayed Al Nahyan, President of the UAE at the airport today in New Delhi.

In a post on X, Shri Modi wrote:

“Went to the airport to welcome my brother, His Highness Sheikh Mohamed bin Zayed Al Nahyan, President of the UAE. His visit illustrates the importance he attaches to a strong India-UAE friendship. Looking forward to our discussions.

@MohamedBinZayed”

“‏توجهتُ إلى المطار لاستقبال أخي، صاحب السمو الشيخ محمد بن زايد آل نهيان، رئيس دولة الإمارات العربية المتحدة. تُجسّد زيارته الأهمية التي يوليها لعلاقات الصداقة المتينة بين الهند والإمارات. أتطلع إلى مباحثاتنا.

‏⁦‪@MohamedBinZayed