QuoteStartups makes presentations before PM on six themes
Quote“It has been decided to celebrate January 16 as National Start-up Day to take the Startup culture to the far flung areas of the country”
Quote“Three aspects of government efforts: first, to liberate entrepreneurship, innovation from the web of government processes, and bureaucratic silos, second, creating an institutional mechanism to promote innovation; third, handholding of young innovators and young enterprises”
Quote“Our Start-ups are changing the rules of the game. That's why I believe Start-ups are going to be the backbone of new India.”
Quote“Last year, 42 unicorns came up in the country. These companies worth thousands of crores of rupees are the hallmark of self-reliant and self-confident India”
Quote“Today India is rapidly moving towards hitting the century of the unicorns. I believe the golden era of India's start-ups is starting now”
Quote“Don't just keep your dreams local, make them global. Remember this mantra

ನಮಸ್ಕಾರ,

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಜಿ, ಮನ್ಸುಖ್ ಮಾಂಡವಿಯಾ ಜಿ, ಅಶ್ವಿನಿ ವೈಷ್ಣವ್ ಜಿ, ಸರ್ಬಾನಂದ್ ಸೋನೊವಾಲ್ ಜಿ, ಪರ್ಶೋತ್ತಮ್ ರುಪಾಲ ಜಿ, ಜಿ. ಕಿಶನ್ ರೆಡ್ಡಿ ಜಿ, ಪಶುಪತಿ ಕುಮಾರ್ ಪಾರಸ್ ಜಿ, ಜಿತೇಂದ್ರ ಸಿಂಗ್ ಜಿ, ಸೋಮ್ ಪ್ರಕಾಶ್ ಜಿ, ದೇಶಾದ್ಯಂತ ಇರುವ ನವೋದ್ಯಮಗಳ ಉದ್ಯಮಶೀಲ ದಿಗ್ಗಜರೇ, ನನ್ನ ಯುವ ಸ್ನೇಹಿತರೆ, ವೇದಿಕೆಯಲ್ಲಿರುವ ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ,

ಭಾರತದ ನವೋದ್ಯಮಗಳ ಯಶಸ್ಸಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನವೋದ್ಯಮಗಳ ಪಾಲುದಾರರ ಯಶೋಗಾಥೆಯ ಪ್ರಸ್ತುತಿಗಳನ್ನು ಸಹ ಕಣ್ತುಂಬಿಕೊಂಡಿದ್ದೇವೆ. ನೀವೆಲ್ಲರೂ ಬಹುದೊಡ್ಡ, ಮಹತ್ವಪೂರ್ಣ ಕಾರ್ಯಗಳನ್ನು ಮಾಡುತ್ತಿದ್ದೀರಿ.  2022 ಹೊಸ ವರ್ಷವು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಗೆ ಇನ್ನಷ್ಟು ಅವಕಾಶಗಳು ಮತ್ತು ಸಾಧ್ಯತೆಗಳನ್ನು ತಂದಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದಲ್ಲಿ 'ಭಾರತೀಯ ನವೋದ್ಯಮ ನಾವೀನ್ಯತಾ ಸಪ್ತಾಹ' ಕಾರ್ಯಕ್ರಮವು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವ ಸಂದರ್ಭದಲ್ಲಿ ಭವ್ಯ ಭಾರತ ಕಟ್ಟುವಲ್ಲಿ ನಿಮ್ಮ ಪಾತ್ರ ಅಪಾರವಾಗಿದೆ.

ನವೋದ್ಯಮ ಜಗತ್ತಿನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುತ್ತಿರುವ ದೇಶದ ಎಲ್ಲಾ ನವೋದ್ಯಮಗಳು ಮತ್ತು ಸದಸ ಹೊಸತನ್ನು ಹುಡುಕುವ ತುಡಿತದ ಯುವ ಸಮುದಾಯವನ್ನು ನಾನಿಲ್ಲಿ ಅಭಿನಂದಿಸುತ್ತೇನೆ. ಪ್ರತಿ ವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರಿಂದ ನವೋದ್ಯಮಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳಿಗೆ, ಮೂಲೆ ಮೂಲೆಗೆ ತಲುಪುತ್ತದೆ.

ಸ್ನೇಹಿತರೆ,

ನವೋದ್ಯಮ ಭಾರತ ನಾವೀನ್ಯತಾ ಸಪ್ತಾಹವು ಕಳೆದ ವರ್ಷದ ಯಶಸ್ಸನ್ನು ಆಚರಿಸಲು ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಜತೆಗೆ, ಭವಿಷ್ಯದ ಕಾರ್ಯತಂತ್ರಗಳನ್ನು ವಿಸ್ತೃತವಾಗಿ ಚರ್ಚಿಸುವ ವೇದಿಕೆಯಾಗಿದೆ. ಈ ದಶಕವನ್ನು ‘ಭಾರತದ ತಂತ್ರಜ್ಞಾನ ದಶಕ’(ಟೆಕೇಡ್ ಆಫ್ ಇಂಡಿಯಾ) ಎಂದು ಕರೆಯಲಾಗುತ್ತಿದೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ಬಲಪಡಿಸುವ ಪ್ರಮುಖ ಮೂರು ಅಂಶಗಳಿಗೆ ಕೇಂದ್ರ ಸರ್ಕಾರವು ಈ ದಶಕದಲ್ಲಿ ಬೃಹತ್ ಬದಲಾವಣೆಗಳನ್ನು ತರುತ್ತಿದೆ.

ಮೊದಲನೆಯದಾಗಿ, ಸರ್ಕಾರಿ ಪ್ರಕ್ರಿಯೆಗಳು ಮತ್ತು ಅಧಿಕಾರಶಾಹಿ ಹಿಡಿತದಿಂದ ಉದ್ಯಮಶೀಲತೆ ಮತ್ತು ಹೊಸತನ ಶೋಧದ ಕ್ಷೇತ್ರವನ್ನು ಮುಕ್ತಗೊಳಿಸುವುದು; ಎರಡನೆಯದಾಗಿ, ನಾವೀನ್ಯತೆ  ಉತ್ತೇಜಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸುವುದು; ಮೂರನೆಯದಾಗಿ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾದಂತಹ ಕಾರ್ಯಕ್ರಮಗಳಿಗೆ ಯುವ ನವೋದ್ಯಮಿಗಳು ಮತ್ತು ಯುವ ಉದ್ಯಮಶೀಲರನ್ನು ಹಿಡಿದಿಡುವುದು ನಮ್ಮ ಪ್ರಯತ್ನಗಳ ಭಾಗವಾಗಿದೆ.

ಸ್ನೇಹಿತರೆ,

ಪ್ರೋತ್ಸಾಹಕ ಹೂಡಿಕೆ ತೆರಿಗೆ ಅಥವಾ ಧನ ಪ್ರೋತ್ಸಾಹ ತೆರಿಗೆ(ಏಂಜೆಲ್ ಟ್ಯಾಕ್ಸ್‌) ತೊಂದರೆಗಳನ್ನು ತೊಡೆದುಹಾಕುವುದು, ತೆರಿಗೆ ಸಲ್ಲಿಕೆ ಸರಳೀಕರಣ, ಸಾಲ ಲಭ್ಯತೆ ಸುಲಭಗೊಳಿಸುವಿಕೆ ಮತ್ತು ಸಾವಿರಾರು ಕೋಟಿ ರೂಪಾಯಿ ಸರ್ಕಾರದ ನಿಧಿಯನ್ನು ಖಚಿತಪಡಿಸುವ ಸರ್ಕಾರದ ಕ್ರಮಗಳು  ನಮ್ಮ ಬದ್ಧತೆಯನ್ನು ಬಿಂಬಿಸುತ್ತಿವೆ. ಸ್ಟಾರ್ಟ್-ಅಪ್ ಇಂಡಿಯಾ ಅಡಿ, 9  ಕಾರ್ಮಿಕ ಮತ್ತು 3 ಪರಿಸರ ಕಾನೂನುಗಳಿಗೆ ಸಂಬಂಧಿಸಿದ ಅನುಸರಣಾ ವಿಧಿವಿಧಾನಗಳನ್ನು ಸ್ವಯಂ-ಪ್ರಮಾಣೀಕರಿಸುವ ಸೌಲಭ್ಯವನ್ನು ನವೋದ್ಯಮಗಳಿಗೆ ನೀಡಲಾಗಿದೆ.

ದಾಖಲೆಗಳ ಸ್ವಯಂ-ದೃಢೀಕರಣದೊಂದಿಗೆ ಪ್ರಾರಂಭವಾದ ಸರ್ಕಾರಿ ಕಾರ್ಯವಿಧಾನಗಳ ಸರಳೀಕರಣ ಪ್ರಕ್ರಿಯೆಯಿಂದಾಗಿ ಇಂದು 25,000ಕ್ಕಿಂತ ಹೆಚ್ಚಿನ ಅನಗತ್ಯ ಅನುಸರಣೆಗಳನ್ನು ತೊಡೆದುಹಾಕಿದೆ. ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ವೇದಿಕೆಯು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಸರ್ಕಾರಕ್ಕೆ ಸುಲಭವಾಗಿ ಒದಗಿಸಲು ನವೋದ್ಯಮಗಳಿಗೆ ತುಂಬಾ ಉಪಯುಕ್ತವಾಗಿದೆ.

|

ಸ್ನೇಹಿತರೆ,

ಒಬ್ಬ ಯುವಕನ ಸಾಮರ್ಥ್ಯ ಮತ್ತು ಸೃಜನಶೀಲತೆ ಮೇಲಿನ ನಂಬಿಕೆಯು ಯಾವುದೇ ದೇಶದ ಪ್ರಗತಿಗೆ ಪ್ರಮುಖ ಆಧಾರವಾಗಿದೆ. ದೇಶದ ಯುವಕರ ಈ ಸಾಮರ್ಥ್ಯವನ್ನು ಗುರುತಿಸಿದ ಭಾರತ, ಇಂದು ಪ್ರಮುಖ ನೀತಿಗಳನ್ನು ರೂಪಿಸುತ್ತಿದೆ, ನಿರ್ಧಾರಗಳನ್ನು ಜಾರಿಗೆ ತರುತ್ತಿದೆ. ಭಾರತದಲ್ಲಿ 1,000ಕ್ಕಿಂತ ಹೆಚ್ಚಿನ ವಿಶ್ವವಿದ್ಯಾಲಯಗಳು, 11,000 ಅದ್ವಿತೀಯ ಶಿಕ್ಷಣ ಸಂಸ್ಥೆಗಳು, 42,000 ಕಾಲೇಜುಗಳು ಮತ್ತು ಲಕ್ಷಾಂತರ ಶಾಲೆಗಳಿವೆ. ಇದು ಭಾರತದ ಬಹುದೊಡ್ಡ ಶಕ್ತಿಯಾಗಿದೆ.

ಬಾಲ್ಯದಿಂದಲೂ ವಿದ್ಯಾರ್ಥಿಗಳಲ್ಲಿ ಹೊಸತನದ ಶೋಧದ ಆಕರ್ಷಣೆಯನ್ನು ಹುಟ್ಟುಹಾಕುವ ಮೂಲಕ ದೇಶದಲ್ಲಿ ನಾವೀನ್ಯತೆಯನ್ನು ಸಾಂಸ್ಥಿಕಗೊಳಿಸುವುದು ನಮ್ಮ ಪ್ರಯತ್ನವಾಗಿದೆ. 9,000ಕ್ಕಿಂತ ಹೆಚ್ಚಿನ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಮಕ್ಕಳಿಗೆ ಶಾಲೆಗಳಲ್ಲಿ ಹೊಸ ಆಲೋಚನೆಗಳನ್ನು ಮತ್ತು ಕೆಲಸ ಮಾಡುವ ಅವಕಾಶವನ್ನು ನೀಡುತ್ತಿವೆ. ಅಟಲ್ ಇನ್ನೋವೇಶನ್ ಮಿಷನ್ ನಮ್ಮ ಯುವಕರಿಗೆ ಅವರ ನವೀನ ಆಲೋಚನೆಗಳನ್ನು ಆನ್ವಯಿಸಿ ಕೆಲಸ ಮಾಡಲು ಹೊಸ ವೇದಿಕೆಗಳನ್ನು ಖಾತ್ರಿಪಡಿಸುತ್ತಿದೆ. ಜತೆಗೆ, ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಸಾವಿರಾರು ಪ್ರಯೋಗಾಲಯಗಳ ಜಾಲದ ಮೂಲಕ ಪ್ರತಿ ಕ್ಷೇತ್ರದಲ್ಲೂ ಹೊಸತನ ಉತ್ತೇಜಿಸಲಾಗುತ್ತಿದೆ. ದೇಶದ ಸವಾಲುಗಳನ್ನು ಎದುರಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳಿಗೆ ನಾವು ಒತ್ತು ನೀಡುತ್ತಿದ್ದೇವೆ. ನಾವು ಅನೇಕ ಹ್ಯಾಕಥಾನ್‌ಗಳನ್ನು ಆಯೋಜಿಸುವ ಮೂಲಕ ಯುವಕರನ್ನು ತೊಡಗಿಸಿಕೊಂಡಿದ್ದೇವೆ. ಅವರು ನಮಗೆ ದಾಖಲೆ ಸಮಯದಲ್ಲಿ ಅನೇಕ ನವೀನ ಪರಿಹಾರಗಳನ್ನು ನೀಡಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಯುವಕರು ಮತ್ತು ನವೋದ್ಯಮಗಳೊಂದಿಗೆ ಹೇಗೆ ಸಂಪರ್ಕದಲ್ಲಿವೆ ಮತ್ತು ಅವರ ಹೊಸ ಆಲೋಚನೆಗಳನ್ನು ಹೇಗೆ ಪ್ರೋತ್ಸಾಹಿಸುತ್ತಿವೆ ಎಂಬುದನ್ನು ನೀವೇ ನೋಡುತ್ತಿದ್ದೀರಿ, ಅನುಭವಿಸುತ್ತಿದ್ದೀರಿ. ಹೊಸ ಡ್ರೋನ್ ನಿಯಮಗಳಾಗಲಿ ಅಥವಾ ಹೊಸ ಬಾಹ್ಯಾಕಾಶ ನೀತಿಯಾಗಲಿ, ಸಾಧ್ಯವಾದಷ್ಟು ಯುವಕರಿಗೆ ನಾವೀನ್ಯತೆ, ಆವಿಷ್ಕಾರಗಳಿಗೆ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ.

ನಮ್ಮ ಸರ್ಕಾರ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್) ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನು ಕೂಡ ಸರಳಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಇಂದು ದೇಶದಲ್ಲಿ ನೂರಾರು ತಂತ್ರಜ್ಞಾನ ಪೋಷಣಾ ಕೇಂದ್ರ(ಇನ್ ಕ್ಯುಬೇಟರ್)ಗಳನ್ನು ಬೆಂಬಲಿಸುತ್ತಿವೆ. ಇಂದು, ಐಕ್ರಿಯೇಟ್ ನಂತಹ ಸಂಸ್ಥೆಗಳು ದೇಶದಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿವೆ. iCreate ಅಂದರೆ, ಅಂತಾರಾಷ್ಟ್ರೀಯ ಉದ್ಯಮಶೀಲತೆ  ಮತ್ತು ತಂತ್ರಜ್ಞಾನ ಕೇಂದ್ರ. ಇದು ಅನೇಕ ನವೋದ್ಯಮಗಳಿಗೆ ಶುಭಾರಂಭ ನೀಡುತ್ತಿದೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದೆ.

ಸ್ನೇಹಿತರೆ,

ಸರ್ಕಾರದ ಈ ಎಲ್ಲಾ ಪ್ರಯತ್ನಗಳ ಫಲವನ್ನು ನಾವು ನೋಡಬಹುದು. 2013-14ರಲ್ಲಿ 4,000 ಪೇಟೆಂಟ್‌ಗಳನ್ನು ಅನುಮೋದಿಸಿದ್ದರೆ, ಕಳೆದ ವರ್ಷ 28,000ಕ್ಕಿಂತ ಹೆಚ್ಚಿನ ಹಕ್ಕುಸ್ವಾಮ್ಯಗಳನ್ನು ನೀಡಲಾಗಿದೆ. 2013-14ರಲ್ಲಿ ಸುಮಾರು 70,000 ಟ್ರೇಡ್‌ಮಾರ್ಕ್‌ಗಳು ನೋಂದಾಯಿಸಲ್ಪಟ್ಟಿದ್ದರೆ, 2021 ರಲ್ಲಿ 2.5 ಲಕ್ಷಕ್ಕೂ ಹೆಚ್ಚು ಟ್ರೇಡ್‌ಮಾರ್ಕ್‌ಗಳು ನೋಂದಾಯಿಸಲ್ಪಟ್ಟಿವೆ. 2013-14ರಲ್ಲಿ ಕೇವಲ 4,000 ಹಕ್ಕುಸ್ವಾಮ್ಯಗಳನ್ನು ನೀಡಲಾಗಿತ್ತು. ಆದರೆ ಕಳೆದ ವರ್ಷ ಈ ಸಂಖ್ಯೆ 16,000 ದಾಟಿದೆ. ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಅಭಿಯಾನದಿಂದಾಗಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಸಾಕಷ್ಟು ಸುಧಾರಿಸಿದೆ. 2015ರಲ್ಲಿ ಭಾರತ ಈ ಶ್ರೇಯಾಂಕದಲ್ಲಿ 81ಕ್ಕೆ ಸೀಮಿತವಾಗಿತ್ತು. ಈಗ ಭಾರತವು ನಾವೀನ್ಯತೆ ಸೂಚ್ಯಂಕದಲ್ಲಿ 50ರಿಂದ 46ನೇ ಸ್ಥಾನಕ್ಕೆ ಜಿಗಿದಿದೆ.

ಸ್ನೇಹಿತರೆ,

ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಇಂದು ಇಡೀ ವಿಶ್ವದಲ್ಲೇ ಅಲೆಗಳನ್ನು ಸೃಷ್ಟಿಸುತ್ತಿದೆ. ಇದು ಉತ್ಸಾಹ, ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ತುಂಬಿದ್ದು, ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯ ಶಕ್ತಿಯಾಗಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ನಿರಂತರವಾಗಿ ತನ್ನನ್ನು ತಾನು ಸಂಶೋಧಿಸಿಕೊಳ್ಳುತ್ತಿದೆ, ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿದೆ ಮತ್ತು ಮಹಾಶಕ್ತಿಯಾಗಿ ಬೆಳೆಯುತ್ತಿದೆ. ಇದು ನಿರಂತರ ಕಲಿಕೆಯ ಕ್ರಮದಲ್ಲಿ, ಬದಲಾಗುತ್ತಿರುವ ಕ್ರಮದಲ್ಲಿ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಿದೆ. ಇಂದು ಭಾರತದ ನವೋದ್ಯಮಗಳು 55 ವಿವಿಧ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡಿದರೆ ಯಾರು ಹೆಮ್ಮೆ ಪಡುವುದಿಲ್ಲ ಹೇಳಿ? ಎಲ್ಲರೂ ಅದರ ಬಗ್ಗೆ ಹೆಮ್ಮೆಪಡುತ್ತಾರೆ. 5 ವರ್ಷಗಳ ಹಿಂದೆ ದೇಶದಲ್ಲಿ 500 ನವೋದ್ಯಮಗಳು ಇರಲಿಲ್ಲ, ಇಂದು ಈ ಸಂಖ್ಯೆ 60,000ಕ್ಕೆ ಏರಿದೆ. ನೀವು ಹೊಸತನದ ಶಕ್ತಿ ಹೊಂದಿದ್ದೀರಿ, ಹೊಸ ಆಲೋಚನೆಗಳನ್ನು ಹೊಂದಿದ್ದೀರಿ, ನೀವು ಯುವ ಶಕ್ತಿಯಿಂದ ತುಂಬಿದ್ದೀರಿ ಮತ್ತು ನೀವು ವ್ಯಾಪಾರ ಮಾಡುವ ವಿಧಾನವನ್ನು ಬದಲಾಯಿಸುತ್ತಿದ್ದೀರಿ. ನಮ್ಮ ನವೋದ್ಯಮಗಳು ಉದ್ಯಮ ವ್ಯವಹಾರಗಳ ನಿಯಮಗಳನ್ನೇ ಬದಲಾಯಿಸುತ್ತಿವೆ. ಅದಕ್ಕಾಗಿಯೇ ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಲಿವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಉದ್ಯಮಶೀಲತೆಯಿಂದ ಸಬಲೀಕರಣದವರೆಗಿನ ಈ ಸ್ಫೂರ್ತಿಯು ನಮ್ಮ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಮತ್ತು ಲಿಂಗ ಅಸಮಾನತೆ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಮೊದಲು, ದೊಡ್ಡ ವ್ಯಾಪಾರಗಳು ಬೃಹತ್ ನಗರಗಳು ಮತ್ತು ಮಹಾನಗರಗಳಲ್ಲಿ ಮಾತ್ರ ಪ್ರವರ್ಧಮಾನಕ್ಕೆ ಬಂದವು; ಇಂದು 625ಕ್ಕಿಂತ ಹೆಚ್ಚಿನ  ಜಿಲ್ಲೆಗಳಲ್ಲಿ ಹರಡಿರುವ ದೇಶದ ಪ್ರತಿ ರಾಜ್ಯದಲ್ಲಿ ಕನಿಷ್ಠ 1 ನವೋದ್ಯಮ ತಲೆಎತ್ತಿದೆ. ಇಂದು ಬಹುತೇಕ ಅರ್ಧದಷ್ಟು ನವೋದ್ಯಮಗಳು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಇವು ಸಾಮಾನ್ಯ ಮತ್ತು ಬಡ ಕುಟುಂಬದ ಯುವಕರ ಆಲೋಚನೆಗಳನ್ನು ವ್ಯವಹಾರಗಳಾಗಿ ಪರಿವರ್ತಿಸುತ್ತಿವೆ. ಇಂದು ಲಕ್ಷಾಂತರ ಯುವಕರು ಈ ನವೋದ್ಯಮಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ.

|

ಸ್ನೇಹಿತರೆ,

ಭಾರತದ ಯುವ ಸಮುದಾಯ ನವೋದ್ಯಮಗಳನ್ನು ಸ್ಥಾಪಿಸುತ್ತಿರುವ ವೇಗ ಮತ್ತು ಪ್ರಮಾಣವು ಜಾಗತಿಕ ಕೋವಿಡ್-19 ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಭಾರತೀಯರ ಬಲವಾದ ಇಚ್ಛಾಶಕ್ತಿ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ಮೊದಲು, ಕೆಲವು ಕಂಪನಿಗಳು ಮಾತ್ರ ಉತ್ತಮ ಸಮಯದಲ್ಲಿ ಬೃಹತ್ತಾಗಿ ಬೆಳೆಯಬಹುದಿತ್ತು. ಆದರೆ, ಇದೀಗ ಕಳೆದ ವರ್ಷವೊಂದರಲ್ಲೇ ನಮ್ಮ ದೇಶದಲ್ಲಿ 42 ಯುನಿಕಾರ್ನ್‌ಗಳು ಹೊರಹೊಮ್ಮಿವೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಈ ಕಂಪನಿಗಳು ಸ್ವಾವಲಂಬಿ, ಆತ್ಮವಿಶ್ವಾಸದ ಭಾರತದ ಹೆಗ್ಗುರುತಾಗಿವೆ.. ಇಂದು ಭಾರತವು 100 ಯುನಿಕಾರ್ನ್ ಗಳನ್ನು ಸ್ಥಾಪಿಸುವತ್ತ ಶರವೇಗದಲ್ಲಿ ಸಾಗುತ್ತಿದೆ. ಭಾರತದ ನವೋದ್ಯಮಗಳ  ಸುವರ್ಣಯುಗ ಈಗ ಪ್ರಾರಂಭವಾಗುತ್ತಿದೆ ಎಂದು ನಾನು ನಂಬುತ್ತೇನೆ. ಭಾರತದ ವಿವಿಧತೆಯೇ ನಮ್ಮ ದೊಡ್ಡ ಶಕ್ತಿ. ನಮ್ಮ ವೈವಿಧ್ಯವೇ ನಮ್ಮ ಜಾಗತಿಕ ಗುರುತಾಗಿದೆ.

ನಮ್ಮ ಯುನಿಕಾರ್ನ್‌ಗಳು ಮತ್ತು ನವೋದ್ಯಮಗಳು ಈ ವೈವಿಧ್ಯದ ಸಂದೇಶವಾಹಕವಾಗಿವೆ.  ಸರಳ ವಿತರಣಾ ಸೇವೆಗಳಿಂದ ಹಿಡಿದು ಪಾವತಿ ಪರಿಹಾರಗಳು ಮತ್ತು ಕ್ಯಾಬ್ ಸೇವೆಗಳ ತನಕ, ನಿಮ್ಮ ವ್ಯಾಪ್ತಿಯು ಬಹುದೊಡ್ಡದಾಗಿದೆ. ಭಾರತದಲ್ಲಿಯೇ ವೈವಿಧ್ಯಮಯ ಮಾರುಕಟ್ಟೆಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳಲ್ಲಿ ಕೆಲಸ ಮಾಡಿದ ಅನುಭವ ನಿಮಗೆ ಇದೆ. ಆದ್ದರಿಂದ, ಭಾರತದ ನವೋದ್ಯಮಗಳು ವಿಶ್ವದ ಇತರ ದೇಶಗಳಿಗೆ ಸುಲಭವಾಗಿ ತಲುಪಬಹುದು. ಹಾಗಾಗಿ ನಿಮ್ಮ ಕನಸುಗಳನ್ನು ಸ್ಥಳೀಯವಾಗಿ ಇರಿಸಬೇಡಿ, ಅವುಗಳನ್ನು ಜಾಗತಿಕವಾಗಿಸಿ. ಈ ಮಂತ್ರವನ್ನು ನೆನಪಿಡಿ - ಭಾರತಕ್ಕಾಗಿ ನಾವು ಹೊಸತನವನ್ನು ಮಾಡೋಣ, ಭಾರತದಿಂದಲೇ ಹೊಸತನವನ್ನು ಕಂಡುಕೊಳ್ಳೋಣ!

ಸ್ನೇಹಿತರೆ,

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭ ಎಲ್ಲರೂ ಸಜ್ಜುಗೊಳ್ಳಲು ಸಕಾಲ. 'ಸಬ್ಕಾ ಪ್ರಯಾಸ್ (ಸಾಮೂಹಿಕ ಪ್ರಯತ್ನಗಳು) ಮೂಲಕ ಗುರಿಗಳತ್ತ ಸಾಗುವ ಸಮಯ ಇದು. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಗೆ ಸಂಬಂಧಿಸಿದಂತೆ ಒಂದು ಗುಂಪು ಪ್ರಮುಖ ಸಲಹೆಗಳನ್ನು ನೀಡಿದಾಗ ನನಗೆ ಸಂತೋಷವಾಯಿತು. ಗತಿಶಕ್ತಿ ಯೋಜನೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಅವಕಾಶವನ್ನು ಇವಿ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು ಬಳಸಬಹುದು. ಈ ಮಾಸ್ಟರ್ ಪ್ಲಾನ್ ಅಡಿ, ಸಾರಿಗೆ, ವಿದ್ಯುತ್, ದೂರಸಂಪರ್ಕ ಸೇರಿದಂತೆ ಸಂಪೂರ್ಣ ಮೂಲಸೌಕರ್ಯ ಗ್ರಿಡ್ ಅನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ. ಬಹುಮಾದರಿ ಮತ್ತು ವಿವಿಧೋದ್ದೇಶ ಸ್ವತ್ತುಗಳ ಸೃಷ್ಟಿಯ ಈ ಅಭಿಯಾನದಲ್ಲಿ ನಿಮ್ಮ ಭಾಗವಹಿಸುವಿಕೆ ಬಹಳ ಮುಖ್ಯ.

ಇದು ನಮ್ಮ ಉತ್ಪಾದನಾ ವಲಯದಲ್ಲಿ ಹೊಸ ಚಾಂಪಿಯನ್‌ಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ. ರಕ್ಷಣಾ ಉತ್ಪನ್ನಗಳ ತಯಾರಿಕೆ, ಚಿಪ್ ತಯಾರಿಕೆ, ಸ್ವಚ್ಛ ಇಂಧನ ಮತ್ತು ಡ್ರೋನ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ದೇಶದ ಮಹತ್ವಾಕಾಂಕ್ಷೆಯ ಯೋಜನೆಗಳು ನಿಮ್ಮ ಮುಂದಿವೆ. ಇತ್ತೀಚೆಗೆ ಹೊಸ ಡ್ರೋನ್ ನೀತಿ ಜಾರಿಗೊಳಿಸಿದ ನಂತರ ದೇಶ ಮತ್ತು ವಿದೇಶಗಳ ಅನೇಕ ಹೂಡಿಕೆದಾರರು ಡ್ರೋನ್ ನವೋದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಡ್ರೋನ್ ಕಂಪನಿಗಳು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯಿಂದ ಸುಮಾರು 500 ಕೋಟಿ ರೂ. ಮೌಲ್ಯದ ಆರ್ಡರ್ ಪಡೆದಿವೆ. ಸ್ವಾಮಿತ್ವ ಯೋಜನೆಗಾಗಿ ಗ್ರಾಮಗಳ ಆಸ್ತಿಗಳನ್ನು ಮ್ಯಾಪಿಂಗ್ ಮಾಡಲು ಸರ್ಕಾರವು ಡ್ರೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದೆ. ಈಗ ಮನೆ ಮನೆಗೆ ಔಷಧಗಳ ವಿತರಣೆ ಮತ್ತು ಕೃಷಿಯಲ್ಲಿ ಡ್ರೋನ್‌ಗಳ ವ್ಯಾಪ್ತಿ ಹೆಚ್ಚುತ್ತಿದೆ. ಆದ್ದರಿಂದ ಇದು ಸಾಕಷ್ಟು ಸಾಮರ್ಥ್ಯ ಮತ್ತು ವಿಫುಲ ಅವಕಾಶಗಳನ್ನು ಹೊಂದಿದೆ.

ಸ್ನೇಹಿತರೆ,

ನಮ್ಮ ಕ್ಷಿಪ್ರ ನಗರೀಕರಣವು ಸಹ ಒಂದು ದೊಡ್ಡ ಗಮನ ಕೇಂದ್ರೀಕೃತ ವಲಯವಾಗಿದೆ. ಇಂದು,  ಅಸ್ತಿತ್ವದಲ್ಲಿರುವ ನಮ್ಮ ನಗರಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ನಗರಗಳನ್ನು ನಿರ್ಮಿಸುವ ಕೆಲಸವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ನಗರ ಯೋಜನೆಯಲ್ಲಿ ಮಾಡಬೇಕಾದ್ದು ಬಹಳಷ್ಟಿದೆ. ಸಮಗ್ರ ಕೈಗಾರಿಕಾ ವಸಾಹತುಗಳನ್ನು ನಾವು ರಚಿಸಬೇಕಾಗಿದೆ. ನಗರ ಯೋಜನೆಯಲ್ಲಿ ಹೊಸ ಸಾಧ್ಯತೆಗಳು ನಿಮಗಾಗಿ ಕಾಯುತ್ತಿವೆ. ಉದಾಹರಣೆಗೆ, ಒಂದು ಗುಂಪು ಇದೀಗ ರಾಷ್ಟ್ರೀಯ ಸೈಕ್ಲಿಂಗ್ ಯೋಜನೆ ಮತ್ತು ದೊಡ್ಡ ನಗರಗಳಿಗೆ ಕಾರ್-ಮುಕ್ತ ವಲಯಗಳ ನಿರ್ಮಾಣ ಪ್ರಸ್ತಾವನೆಯನ್ನು ಉಲ್ಲೇಖಿಸಿದೆ. ನಗರಗಳಲ್ಲಿ ಸುಸ್ಥಿರ ಜೀವನಶೈಲಿ ಉತ್ತೇಜಿಸಲು ಇದು ಬಹಳ ಮುಖ್ಯ. ನಾನು ಸಿಒಪಿ-26 ಶೃಂಗಸಭೆಗೆ ಹೋದಾಗ ನೀವು ತಿಳಿದಿರಲೇಬೇಕು, ನಾನು ಮಿಷನ್ ಲೈಫ್ ಬಗ್ಗೆ ಮಾತನಾಡಿದ್ದೇನೆ. ನನ್ನ ಪರಿಕಲ್ಪನೆಯಾದ ಜೀವನವೇ ಪರಿಸರಕ್ಕೆ ಜೀವನಶೈಲಿ(ಲೈಫ್ ಈಸ್ ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ತಂತ್ರಜ್ಞಾನವನ್ನು ಬಳಸಿಕೊಂಡು ಆ ವಸ್ತುಗಳ ಬಳಕೆಯ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕು ಎಂದು ನಾನು ನಂಬುತ್ತೇನೆ. ಉದಾಹರಣೆಗೆ, P-3 ಚಳವಳಿ ಇಂದು ಅನಿವಾರ್ಯವಾಗಿದೆ. P-3 ಚಳವಳಿ, ಅಂದರೆ, ಪೃಥ್ವಿ ಪರ ಜನರು! ನಾವು ಪರಿಸರದ ಬಗ್ಗೆ ಜನರಿಗೆ ಅರಿವು ಮೂಡಿಸದಿದ್ದರೆ ಮತ್ತು ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಅವರನ್ನು ಸೈನಿಕರನ್ನಾಗಿ ಮಾಡದಿದ್ದರೆ, ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ, ಈ ಮಿಷನ್ ಲೈಫ್‌ ಗೆ ಭಾರತವು ಅನೇಕ ದೇಶಗಳನ್ನು ಒಳಪಡಿಸುತ್ತಿದೆ.

ಸ್ನೇಹಿತರೆ,

ಸ್ಮಾರ್ಟ್ ಮೊಬಿಲಿಟಿಯು ನಗರಗಳ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಭಾರತವು ವಿಶ್ವದ ಅತಿದೊಡ್ಡ ಸಹಸ್ರಮಾನದ ಮಾರುಕಟ್ಟೆಯಾಗಿ ತನ್ನ ಗುರುತು ಬಲಪಡಿಸುವುದನ್ನು ಮುಂದುವರಿಸಿದೆ. ಇದು ಸಹಸ್ರಾರು ಕುಟುಂಬಗಳ ಏಳಿಗೆಗೆ ಹಾಗೂ ರಾಷ್ಟ್ರದ ಸ್ವಾವಲಂಬನೆಗೆ ಮೂಲಾಧಾರವಾಗಿದೆ. ನಮ್ಮ ಅಗತ್ಯಗಳು ಮತ್ತು ನಮ್ಮ ಸಾಮರ್ಥ್ಯವು ಗ್ರಾಮೀಣ ಆರ್ಥಿಕತೆಯಿಂದ ಉದ್ಯಮ 4.0ರ ವರೆಗೆ ಅಪರಿಮಿತವಾಗಿದೆ. ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಇಂದು ಸರ್ಕಾರದ ಆದ್ಯತೆಯಾಗಿದೆ. ಆದರೆ ಇದರಲ್ಲಿ ಉದ್ಯಮವೂ ತನ್ನ ಕೊಡುಗೆ ವಿಸ್ತರಿಸಿದರೆ ಉತ್ತಮ.

ಸ್ನೇಹಿತರೆ,

21ನೇ ಶತಮಾನದ ಈ ದಶಕದಲ್ಲಿ ನೀವು ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳ ಬೇಕು. ದೇಶದಲ್ಲೂ ಬೃಹತ್ ಮಾರುಕಟ್ಟೆ ತೆರೆದುಕೊಳ್ಳುತ್ತಿದೆ. ನಾವೀಗ ಡಿಜಿಟಲ್ ಜೀವನಶೈಲಿಗೆ ಕಾಲಿಟ್ಟಿದ್ದೇವೆ. ನಮ್ಮ ಜನಸಂಖ್ಯೆಯ ಅರ್ಧದಷ್ಟು ಮಾತ್ರ ಆನ್‌ಲೈನ್‌ ಸೇವೆ ಬಳಸುತ್ತಿದ್ದಾರೆ. ಬಡವರಿಗೆ ಮತ್ತು ಹಳ್ಳಿಗಳಿಗೆ ಡಿಜಿಟಲ್ ಪ್ರವೇಶ ಒದಗಿಸಲು ಸರ್ಕಾರವು ಕಾರ್ಯ ನಿರ್ವಹಿಸುತ್ತಿರುವ ವೇಗ, ಪ್ರಮಾಣ ಗಮನಿಸಿದರೆ, ಭಾರತವು ಅತಿ ಕಡಿಮೆ ಸಮಯದಲ್ಲಿ ಸುಮಾರು 100 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಲಿದೆ.

ದೂರದ ಪ್ರದೇಶಗಳಲ್ಲಿ ಕೊನೆಯ ಮೈಲಿ ವಿತರಣೆ ಸಶಕ್ತಗೊಂಡಂತೆ, ಇದು ಗ್ರಾಮೀಣ ಮಾರುಕಟ್ಟೆಯನ್ನು ಮತ್ತು ಗ್ರಾಮೀಣ ಪ್ರತಿಭೆಗಳ ದೊಡ್ಡ ಸಮೂಹವನ್ನು ಸೃಷ್ಟಿಸುತ್ತಿದೆ. ಅದಕ್ಕಾಗಿಯೇ ನಾನು ಭಾರತದ ನವೋದ್ಯಮಗಳನ್ನು ಹಳ್ಳಿಗಳತ್ತ ಸಾಗುವಂತೆ ವಿನಂತಿಸುತ್ತೇನೆ. ಇದೊಂದು ಅವಕಾಶ ಹಾಗೂ ಸವಾಲು. ಮೊಬೈಲ್ ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ಸಂಪರ್ಕ ಅಥವಾ ಭೌತಿಕ ಸಂಪರ್ಕವಿರಲಿ, ಇಂದು ಹಳ್ಳಿಗಳ ಆಕಾಂಕ್ಷೆಗಳು ಹೆಚ್ಚುತ್ತಿವೆ. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳು ವಿಸ್ತರಣೆಯ ಹೊಸ ಅಲೆಯನ್ನು ಎದುರು ನೋಡುತ್ತಿವೆ.

ನವೋದ್ಯಮ ಸಂಸ್ಕೃತಿಯು ಪರಿಕಲ್ಪನೆಯನ್ನು ಪ್ರಜಾಪ್ರಭುತ್ವಗೊಳಿಸಿದ ರೀತಿಯಲ್ಲೇ, ಇದು ಮಹಿಳೆಯರು ಮತ್ತು ಸ್ಥಳೀಯ ವ್ಯವಹಾರಗಳನ್ನು ಸಶಕ್ತಗೊಳಿಸಿದೆ. ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಹಿಡಿದು ಕರಕುಶಲ ವಸ್ತುಗಳವರೆಗೆ, ಅನೇಕ ಸ್ಥಳೀಯ ಉತ್ಪನ್ನಗಳ ವ್ಯಾಪ್ತಿಯು ಇಂದು ವ್ಯಾಪಕವಾಗಿ ವಿಸ್ತರಿಸಿದೆ. ಹೆಚ್ಚುತ್ತಿರುವ ಜಾಗೃತಿಯಿಂದಾಗಿ, ಜನರು ಸ್ಥಳೀಯರಿಗೆ ಧ್ವನಿಯಾಗುತ್ತಿದ್ದಾರೆ. ಇದೀಗ ಜೈಪುರದ ನಮ್ಮ ಸ್ನೇಹಿತ ಕಾರ್ತಿಕ್ ಸ್ಥಳೀಯ ಉತ್ಪನವನ್ನು ಜಾಗತಿಕವಾಗಿ ಮಾಡುವ ಬಗ್ಗೆ ಮಾತನಾಡಿದರು, ವರ್ಚುವಲ್ ಪ್ರವಾಸೋದ್ಯಮವನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ತಮ್ಮ ಜಿಲ್ಲೆಗಳು ಮತ್ತು ನಗರಗಳ ಇತಿಹಾಸ ಪುಟಗಳಿಗೆ ಸೇರಿರುವ ಸ್ಮಾರಕಗಳು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಘಟನೆಗಳ ವರ್ಚುವಲ್ ಸೃಜನಶೀಲ ಕೆಲಸದ ಬಗ್ಗೆ ಶಾಲಾ-ಕಾಲೇಜುಗಳ ಮಕ್ಕಳಿಗೆ ಸ್ಪರ್ಧೆ  ಆಯೋಜಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮಂತಹ ನವೋದ್ಯಮಗಳು ಇದನ್ನು ಕಲೆ ಹಾಕಬಹುದು. 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕಾಗಿ ದೇಶವನ್ನು ವರ್ಚುವಲ್ ಪ್ರವಾಸಕ್ಕೆ ಆಹ್ವಾನಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನವೋದ್ಯಮಗಳಿಂದ ಇದು ದೊಡ್ಡ ಕೊಡುಗೆಯಾಗಲಿದೆ. ನೀವು ಇಷ್ಟಪಡುವ ಪರಿಕಲ್ಪನೆಯನ್ನು ಪ್ರಾರಂಭಿಸಿದರೆ, ಆ ಕಲ್ಪನೆಯನ್ನು ಹೇಗೆ ಮತ್ತು ಯಾವ ರೂಪದಲ್ಲಿ ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬ ಆಲೋಚನೆ ಮೂಡುತ್ತದೆ ಎಂದು ನಾನು ಭಾವಿಸಿದ್ದೇನೆ.

ಸ್ನೇಹಿತರೆ,

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಸ್ಥಳೀಯ ಮಟ್ಟದಲ್ಲಿ ಸಣ್ಣ ಆವಿಷ್ಕಾರ ಮಾದರಿಗಳು ಜನರ ಜೀವನವನ್ನು ಹೇಗೆ ಸುಲಭಗೊಳಿಸಿದವು ಎಂಬುದನ್ನು ನಾವು ನೋಡಿದ್ದೇವೆ. ಸಣ್ಣ ಸ್ಥಳೀಯ ವ್ಯವಹಾರಗಳೊಂದಿಗೆ ಸಹಯೋಗಕ್ಕಾಗಿ ನವೋದ್ಯಮಗಳಿಗೆ ದೊಡ್ಡ ಅವಕಾಶಗಳಿದೆ. ನವೋದ್ಯಮಗಳು ಈ ಸ್ಥಳೀಯ ವ್ಯವಹಾರಗಳನ್ನು ಸಶಕ್ತಗೊಳಿಸಬಹುದು ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ಸಣ್ಣ ಉದ್ದಿಮೆಗಳು ದೇಶದ ಅಭಿವೃದ್ಧಿಯ ಬೆನ್ನೆಲುಬು ಮತ್ತು ನವೋದ್ಯಮಗಳು ಉದ್ಯಮ ವ್ಯವಹಾರದ ರೂಪವನ್ನೇ (ಗೇಮ್ ಚೇಂಜರ್) ಬದಲಾಯಿಸುವವರಾಗಿದ್ದಾರೆ. ಈ ಪಾಲುದಾರಿಕೆಯು ನಮ್ಮ ಸಮಾಜ ಮತ್ತು ಆರ್ಥಿಕತೆ ಎರಡನ್ನೂ ಪರಿವರ್ತಿಸುತ್ತದೆ ಮತ್ತು ಮಹಿಳೆಯರ ಉದ್ಯೋಗಕ್ಕೆ ವಿಶೇಷವಾಗಿ ಇದರಿಂದ ಹೆಚ್ಚಿನ ಶಕ್ತಿ ಬರಲಿದೆ.

ಸ್ನೇಹಿತರೆ,

ಕೃಷಿ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ಮತ್ತು ನವೋದ್ಯಮಗಳ ನಡುವಿನ ಪಾಲುದಾರಿಕೆಗೆ ಸಂಬಂಧಿಸಿದಂತೆ ಹಲವು ಸಲಹೆಗಳು ಇಲ್ಲಿ ಬಂದಿವೆ. ನಮ್ಮ ಸ್ಥಳೀಯ ಅಂಗಡಿ ವರ್ತಕರು ತಮ್ಮ ಸಾಮರ್ಥ್ಯದ ಶೇ. 50-60 ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ಸಲಹೆಯಂತೆ, ಅವರಿಗೆ ಡಿಜಿಟಲ್ ಪರಿಹಾರ ನೀಡಿದರೆ, ಯಾವ ವಸ್ತುಗಳು ಖಾಲಿಯಾಗಿವೆ, ಯಾವ ವಸ್ತುಗಳನ್ನು ಖರೀದಿಸಬೇಕು ಎಂದು ತಿಳಿಯುತ್ತದೆ. ಅಂಗಡಿ ವರ್ತಕರನ್ನು ಅವರ ಗ್ರಾಹಕರೊಂದಿಗೆ ಸಂಪರ್ಕಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ. 3 ಅಥವಾ 7 ದಿನಗಳಲ್ಲಿ ಕೆಲವು ವಸ್ತುಗಳ ದಾಸ್ತಾನು ಖಾಲಿಯಾಗಲಿದೆ ಎಂದು ಅಂಗಡಿ ವರ್ತಕ ತಮ್ಮ ಗ್ರಾಹಕರಿಗೆ ತಿಳಿಸಬಹುದು. ಅವರಿಗೆ ಸಂದೇಶವನ್ನು ಕಳುಹಿಸಿದರೆ, ಕೆಲವು ದಿನಗಳ ನಂತರ ಯಾವ ಉತ್ಪನ್ನಗಳ ಕೊರತೆಯಿದೆ ಎಂದು ನೋಡಲು ಕುಟುಂಬಗಳು ಅಡುಗೆ ಮನೆಯಲ್ಲಿ ಪೆಟ್ಟಿಗೆಗಳನ್ನು ಹುಡುಕಬೇಕಾಗಿಲ್ಲ. ಇನ್ನು 3 ದಿನಗಳಲ್ಲಿ ಅರಿಶಿಣ  ಖಾಲಿಯಾಗಲಿದೆ ಎಂದು ಅಂಗಡಿ ವರ್ತಕ ತನ್ನ ಗ್ರಾಹಕರಿಗೆ ಸಂದೇಶ ಕಳುಹಿಸಬಹುದು. ನೀವು ಅದನ್ನು ದೊಡ್ಡ ವೇದಿಕೆಯನ್ನಾಗಿ ಪರಿವರ್ತಿಸಬಹುದ ವರ್ತಕ ಮತ್ತು ಗ್ರಾಹಕರ ನಡುವೆ ನೀವು ಸಂಪರ್ಕ ಸೇತುವಾಗಬಹುದು.

ಸ್ನೇಹಿತರೆ,

ಯುವಕರ ಪ್ರತಿಯೊಂದು ಸಲಹೆ, ಪ್ರತಿ ಕಲ್ಪನೆ, ಪ್ರತಿ ಆವಿಷ್ಕಾರಗಳಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮುಂದಿನ 25 ವರ್ಷಗಳು, ದೇಶವನ್ನು ಸ್ವಾತಂತ್ರ್ಯದ 100ನೇ ವರ್ಷದತ್ತ ಕೊಂಡೊಯ್ಯುತ್ತಿದೆ, ಇದು ನಿಮಗೆ, ನಿಮ್ಮ ಸ್ನೇಹಿತರಿಗೆ  ಬಹಳ  ಮುಖ್ಯವಾಗಿದೆ. ಇದು ನಾವೀನ್ಯತೆಯ ಹೊಸ ಯುಗ, ಅಂದರೆ ಕಲ್ಪನೆಗಳು, ಉದ್ಯಮ ಮತ್ತು ಹೂಡಿಕೆ. ನಿಮ್ಮ ಕಸರತ್ತು, ಪ್ರಯತ್ನ ಮತ್ತು ಶ್ರಮ ಭಾರತಕ್ಕಾಗಿ, ನಿಮ್ಮ ಉದ್ಯಮ ಭಾರತಕ್ಕಾಗಿ. ನಿಮ್ಮ ಸಂಪತ್ತು ಸೃಷ್ಟಿ ಭಾರತಕ್ಕಾಗಿ ಮತ್ತು ಉದ್ಯೋಗ ಸೃಷ್ಟಿ ಭಾರತಕ್ಕಾಗಿ.

ಯುವಕರ ಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ಪರಿವರ್ತಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ. ಹೊಸ ರೀತಿಯಲ್ಲಿ ಯೋಚಿಸುವ ಹೊಸ ತಲೆಮಾರು ಇರುವುದರಿಂದ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಏಳು ದಿನಗಳ ಚಿಂತನ-ಮಂಥನದಿಂದ ಹೊರಹೊಮ್ಮಿದ ಆಲೋಚನೆಗಳಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಪ್ರಯೋಜನ ಪಡೆಯುತ್ತವೆ ಮತ್ತು ಸರ್ಕಾರದ ನೀತಿಗಳಲ್ಲಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತವೆ. ಅದು ಸಾಮಾಜಿಕ  ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಖಚಿತವಾಗಿ ಹೇಳುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಏಕೆಂದರೆ ನೀವು ಕಲ್ಪನೆಗಳ ಜಗತ್ತಿಗೆ ಸೇರಿದವರು ಮತ್ತು ಆ ವಿಚಾರಗಳನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳುವುದು ಬಹಳ ಮುಖ್ಯ.

ನಾನು ನಿಮಗೆ ಶುಭ ಹಾರೈಸುತ್ತೇನೆ. ಈಗಾಗಲೇ ಮಕರ ಸಂಕ್ರಾಂತಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆದರೆ ಕೊರೊನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

ಮತ್ತೊಮ್ಮೆ ತುಂಬು ಧನ್ಯವಾದಗಳು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PM Modi urges states to unite as ‘Team India’ for growth and development by 2047

Media Coverage

PM Modi urges states to unite as ‘Team India’ for growth and development by 2047
NM on the go

Nm on the go

Always be the first to hear from the PM. Get the App Now!
...
PM to visit Gujarat on 26th and 27th May
May 25, 2025
QuotePM to lay the foundation stone and inaugurate multiple development projects worth around Rs 24,000 crore in Dahod
QuotePM to lay the foundation stone and inaugurate development projects worth over Rs 53,400 crore at Bhuj
QuotePM to participate in the celebrations of 20 years of Gujarat Urban Growth Story

Prime Minister Shri Narendra Modi will visit Gujarat on 26th and 27th May. He will travel to Dahod and at around 11:15 AM, he will dedicate to the nation a Locomotive manufacturing plant and also flag off an Electric Locomotive. Thereafter he will lay the foundation stone and inaugurate multiple development projects worth around Rs 24,000 crore in Dahod. He will also address a public function.

Prime Minister will travel to Bhuj and at around 4 PM, he will lay the foundation stone and inaugurate multiple development projects worth over Rs 53,400 crore at Bhuj. He will also address a public function.

Further, Prime Minister will travel to Gandhinagar and on 27th May, at around 11 AM, he will participate in the celebrations of 20 years of Gujarat Urban Growth Story and launch Urban Development Year 2025. He will also address the gathering on the occasion.

In line with his commitment to enhancing connectivity and building world-class travel infrastructure, Prime Minister will inaugurate the Locomotive Manufacturing plant of the Indian Railways in Dahod. This plant will produce electric locomotives of 9000 HP for domestic purposes and for export. He will also flag off the first electric locomotive manufactured from the plant. The locomotives will help in increasing freight loading capacity of Indian Railways. These locomotives will be equipped with regenerative braking systems, and are being designed to reduce energy consumption, which contributes to environmental sustainability.

Thereafter, the Prime Minister will lay the foundation stone and inaugurate multiple development projects worth over Rs 24,000 crore in Dahod. The projects include rail projects and various projects of the Government of Gujarat. He will flag off Vande Bharat Express between Veraval and Ahmedabad & Express train between Valsad and Dahod stations. Thereafter, the Prime Minister will lay the foundation stone and inaugurate multiple development projects worth over Rs 24,000 crore in Dahod. The projects include rail projects and various projects of the Government of Gujarat. He will flag off Vande Bharat Express between Veraval and Ahmedabad & Express train between Valsad and Dahod stations.

Prime Minister will lay the foundation stone and inaugurate multiple development projects worth over Rs 53,400 crore at Bhuj. The projects from the power sector include transmission projects for evacuating renewable power generated in the Khavda Renewable Energy Park, transmission network expansion, Ultra super critical thermal power plant unit at Tapi, among others. It also includes projects of the Kandla port and multiple road, water and solar projects of the Government of Gujarat, among others.

Urban Development Year 2005 in Gujarat was a flagship initiative launched by the then Chief Minister Shri Narendra Modi with the aim of transforming Gujarat’s urban landscape through planned infrastructure, better governance, and improved quality of life for urban residents. Marking 20 years of the Urban Development Year 2005, Prime Minister will launch the Urban Development Year 2025, Gujarat’s urban development plan and State Clean Air Programme in Gandhinagar. He will also inaugurate and lay the foundation stone for multiple projects related to urban development, health and water supply. He will also dedicate more than 22,000 dwelling units under PMAY. He will also release funds of Rs 3,300 crore to urban local bodies in Gujarat under the Swarnim Jayanti Mukhyamantri Shaheri Vikas Yojana.