ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಚುನಾಯಿತ ಅಧ್ಯಕ್ಷ ಘನತೆವೆತ್ತ ಜೋಸೆಫ್ ಆರ್ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಚುನಾಯಿತ ಅಧ್ಯಕ್ಷ ಬೈಡನ್ ಅವರಿಗೆ ಹೃತ್ಫೂರ್ವಕ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ, ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರಜಾಪ್ರಭುತ್ವ ಸಂಪ್ರದಾಯಗಳ ಶಕ್ತಿ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಪ್ರಧಾನಮಂತ್ರಿಯವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಶುಭ ಕೋರಿದರು.
ಪ್ರಧಾನ ಮಂತ್ರಿಯವರು ಘನತೆವೆತ್ತ ಜೋಸೆಫ್ ಆರ್. ಬೈಡೆನ್ ಅವರೊಂದಿಗೆ, 2014ರಲ್ಲಿ ಮತ್ತು 2016ರಲ್ಲಿ ಅಮೆರಿಕದ ತಮ್ಮ ಅಧಿಕೃತ ಭೇಟಿ ವೇಳೆ ನಡೆಸಿದ್ದ ಮಾತುಕತೆಯನ್ನು ಸ್ಮರಿಸಿದರು. 2016ರ ತಮ್ಮ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಯು.ಎಸ್. ಕಾಂಗ್ರೆಸ್ ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದ ಸಭೆಯ ಅಧ್ಯಕ್ಷತೆಯನ್ನು ಘನತೆವೆತ್ತ ಜೋಸೆಫ್ ಆರ್. ಬೈಡೆನ್ ಅವರು ವಹಿಸಿದ್ದರು.
ಹಂಚಿಕೆಯ ಮೌಲ್ಯಗಳು ಮತ್ತು ಸಮಾನ ಹಿತಾಸಕ್ತಿಯ ಆಧಾರದ ಮೇಲೆ ನಿರ್ಮಿಸಲಾಗಿರುವ ಭಾರತ – ಅಮೆರಿಕಾ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಯೋಗವನ್ನು ಮತ್ತಷ್ಟು ಮುಂದುವರಿಸಲು ಆಪ್ತವಾಗಿ ಶ್ರಮಿಸಲು ಇಬ್ಬರೂ ನಾಯಕರು ಸಮ್ಮತಿಸಿದರು. ಕೋವಿಡ್ -19 ನಿಗ್ರಹ, ಅಗ್ಗದ ದರದ ಲಸಿಕೆಯ ಲಭ್ಯತೆ ಉತ್ತೇಜನ, ಹವಾಮಾನ ವೈಪರೀತ್ಯದ ತಡೆ ಮತ್ತು ಭಾರತ ಪೆಸಿಫಿಕ್ ವಲಯದ ಸಹಕಾರ ಸೇರಿದಂತೆ ಆದ್ಯತೆಯ ವಿಚಾರಗಳ ಬಗ್ಗೆ ನಾಯಕರು ಚರ್ಚಿಸಿದರು.
Spoke to US President-elect @JoeBiden on phone to congratulate him. We reiterated our firm commitment to the Indo-US strategic partnership and discussed our shared priorities and concerns - Covid-19 pandemic, climate change, and cooperation in the Indo-Pacific Region.
— Narendra Modi (@narendramodi) November 17, 2020
I also conveyed warm congratulations for VP-elect @KamalaHarris. Her success is a matter of great pride and inspiration for members of the vibrant Indian-American community, who are a tremendous source of strength for Indo-US relations.
— Narendra Modi (@narendramodi) November 17, 2020