ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿವೃದ್ಧಿ ಹೊಂದಿದ ಭಾರತದೆಡೆಗಿನ ಪಯಣದಲ್ಲಿ ಮಹಿಳೆಯರು ವಹಿಸಿದ ಪರಿವರ್ತನಾತ್ಮಕ ಪಾತ್ರವನ್ನು ಬಿಂಬಿಸಿದರು, ಕಳೆದ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಸರ್ಕಾರ ನೀಡಿರುವ ಗಮನವನ್ನು ಒತ್ತಿ ಹೇಳಿದರು.
ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಪ್ರತಿ ಹಂತದಲ್ಲೂ ತೊಂದರೆಗಳನ್ನು ಎದುರಿಸಬೇಕಾದ ಸಂದರ್ಭಗಳನ್ನು ನೋಡಿದ್ದಾರೆ ಎಂದು ಪ್ರಧಾನಮಂರಿ ಹೇಳಿದರು. ಆದರೆ ಇಂದು ಅವರು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಮಾತ್ರವಲ್ಲ, ಶಿಕ್ಷಣದಿಂದ ವ್ಯವಹಾರದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ನಾರಿ ಶಕ್ತಿಯ ಯಶಸ್ಸು ಎಲ್ಲಾ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಎನ್.ಡಿ.ಎ. ಸರ್ಕಾರವು ಹಲವಾರು ಪರಿಣಾಮಕಾರಿ ಉಪಕ್ರಮಗಳ ಮೂಲಕ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಪುನರ್ ವ್ಯಾಖ್ಯಾನಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಚ್ಛ ಭಾರತ ಅಭಿಯಾನದ ಮೂಲಕ ಘನತೆಯನ್ನು ಖಾತ್ರಿಪಡಿಸುವುದು, ಜನ್ ಧನ್ ಖಾತೆಗಳ ಮೂಲಕ ಆರ್ಥಿಕ ಸೇರ್ಪಡೆ ಮತ್ತು ತಳಮಟ್ಟದಲ್ಲಿ ಸಬಲೀಕರಣ ಇವುಗಳಲ್ಲಿ ಸೇರಿವೆ.
ಉಜ್ವಲ ಯೋಜನೆಯು ಹಲವಾರು ಮನೆಗಳಿಗೆ ಹೊಗೆ ಮುಕ್ತ ಅಡುಗೆಮನೆಗಳನ್ನು ತಂದ ಮೈಲಿಗಲ್ಲು ಎಂದು ಅವರು ಉಲ್ಲೇಖಿಸಿದರು. ಮುದ್ರಾ ಸಾಲಗಳು ಲಕ್ಷಾಂತರ ಮಹಿಳೆಯರಿಗೆ ಉದ್ಯಮಿಗಳಾಗಲು ಮತ್ತು ಸ್ವತಂತ್ರವಾಗಿ ತಮ್ಮ ಕನಸುಗಳನ್ನು ಮುಂದುವರಿಸಲು ಹೇಗೆ ಅನುವು ಮಾಡಿಕೊಟ್ಟಿದೆ ಎಂಬುದನ್ನು ಅವರು ಬಿಂಬಿಸಿದರು. ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ಒದಗಿಸುವುದು ಅವರ ಸುರಕ್ಷತೆ ಮತ್ತು ಸಬಲೀಕರಣದ ಪ್ರಜ್ಞೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.
ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಇದು ಹೆಣ್ಣು ಮಗುವನ್ನು ರಕ್ಷಿಸುವ ರಾಷ್ಟ್ರೀಯ ಆಂದೋಲನ ಎಂದು ಬಣ್ಣಿಸಿದರು.
ವಿಜ್ಞಾನ, ಶಿಕ್ಷಣ, ಕ್ರೀಡೆ, ನವೋದ್ಯಮಗಳು ಮತ್ತು ಸಶಸ್ತ್ರ ಪಡೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಮತ್ತು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ಈ ಹೇಳಿಕೆಗಳನ್ನು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಹಂಚಿಕೊಂಡಿದ್ದಾರೆ;
"ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸಹ ಪ್ರತಿ ಹಂತದಲ್ಲೂ ತೊಂದರೆಗಳನ್ನು ಎದುರಿಸಬೇಕಾದ ಸಮಯವನ್ನು ನೋಡಿದ್ದಾರೆ. ಆದರೆ ಇಂದು, ಅವರು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ, ಆದರೆ ಶಿಕ್ಷಣ ಮತ್ತು ವ್ಯವಹಾರದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಮಾದರಿಯಾಗಿದ್ದಾರೆ. ಕಳೆದ 11 ವರ್ಷಗಳಲ್ಲಿ ನಮ್ಮ ನಾರಿ ಶಕ್ತಿಯ ಯಶಸ್ಸು ನಮ್ಮ ದೇಶವಾಸಿಗಳನ್ನು ಹೆಮ್ಮೆಪಡುವಂತೆ ಮಾಡಲಿದೆ.
11YearsOfSashaktNari"
हमारी माताओं-बहनों और बेटियों ने वो दौर भी देखा है, जब उन्हें कदम-कदम पर मुश्किलों का सामना करना पड़ता था। लेकिन आज वे ना सिर्फ विकसित भारत के संकल्प में बढ़-चढ़कर भागीदारी निभा रही हैं, बल्कि शिक्षा और व्यवसाय से लेकर हर क्षेत्र में मिसाल कायम कर रही हैं। बीते 11 वर्षों में… pic.twitter.com/waTFeW5M9I
— Narendra Modi (@narendramodi) June 8, 2025
"ಕಳೆದ 11 ವರ್ಷಗಳಲ್ಲಿ, ಎನ್ ಡಿಎ ಸರ್ಕಾರವು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಿದೆ.
ಸ್ವಚ್ಛ ಭಾರತದ ಮೂಲಕ ಘನತೆಯನ್ನು ಖಾತ್ರಿಪಡಿಸುವುದರಿಂದ ಹಿಡಿದು ಜನ್ ಧನ್ ಖಾತೆಗಳ ಮೂಲಕ ಆರ್ಥಿಕ ಸೇರ್ಪಡೆಯವರೆಗೆ ವಿವಿಧ ಉಪಕ್ರಮಗಳು ನಮ್ಮ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸಿವೆ. ಉಜ್ವಲ ಯೋಜನೆಯು ಹಲವಾರು ಮನೆಗಳಿಗೆ ಹೊಗೆ ಮುಕ್ತ ಅಡುಗೆಮನೆಗಳನ್ನು ತಂದಿತು. ಮುದ್ರಾ ಸಾಲಗಳು ಲಕ್ಷಾಂತರ ಮಹಿಳಾ ಉದ್ಯಮಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಕನಸುಗಳನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತು. ಪಿಎಂ ಆವಾಸ್ ಯೋಜನೆಯಲ್ಲಿ ಮಹಿಳೆಯರ ಹೆಸರಿನಲ್ಲಿರುವ ಮನೆಗಳು ಸಹ ಗಮನಾರ್ಹ ಪರಿಣಾಮ ಬೀರಿವೆ.
ಬೇಟಿ ಬಚಾವೋ ಬೇಟಿ ಪಡಾವೋ ಹೆಣ್ಣು ಮಗುವನ್ನು ರಕ್ಷಿಸಲು ರಾಷ್ಟ್ರೀಯ ಆಂದೋಲನವನ್ನು ಹುಟ್ಟುಹಾಕಿತು.
ವಿಜ್ಞಾನ, ಶಿಕ್ಷಣ, ಕ್ರೀಡೆ, ಸ್ಟಾರ್ಟ್ ಅಪ್ ಗಳು ಮತ್ತು ಸಶಸ್ತ್ರ ಪಡೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಮತ್ತು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.
11YearsOfSashaktNari"
Over the last 11 years, the NDA Government has redefined women-led development.
— Narendra Modi (@narendramodi) June 8, 2025
Various initiatives, from ensuring dignity through Swachh Bharat to financial inclusion via Jan Dhan accounts, the focus has been on empowering our Nari Shakti. Ujjwala Yojana brought smoke-free… https://t.co/FAETIjNJKk


