ಗೌರವಾನ್ವಿತರೇ,

ನಮಸ್ಕಾರ !

ಮೊದಲಿಗೆ, ಜಿ 20 ಶೃಂಗಸಭೆಯ ಆಯೋಜನೆಗಾಗಿ ಮಾಡಿದ ಭವ್ಯ ವ್ಯವಸ್ಥೆಗಳಿಗಾಗಿ ಮತ್ತು ಯಶಸ್ವಿ ಜಿ 20 ಅಧ್ಯಕ್ಷತೆಗಾಗಿ ನಾನು ಅಧ್ಯಕ್ಷ ಲುಲಾ ಅವರನ್ನು ಅಭಿನಂದಿಸಲು ಬಯಸುತ್ತೇನೆ.

ಹೊಸದಿಲ್ಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ತೆಗೆದುಕೊಂಡ ಜನ ಕೇಂದ್ರಿತ ನಿರ್ಧಾರಗಳನ್ನು ಬ್ರೆಜಿಲ್ ಅಧ್ಯಕ್ಷತೆಯ ಅವಧಿಯಲ್ಲಿ ಮುನ್ನಡೆಸಲಾಗಿದೆ.

ನಾವು ಎಸ್ ಡಿಜಿ ಗುರಿಗಳಿಗೆ ಆದ್ಯತೆ ನೀಡಿದ್ದೇವೆ ಎಂಬುದು ಬಹಳ ತೃಪ್ತಿಯ ವಿಷಯವಾಗಿದೆ.

ನಾವು ಅಂತರ್ಗತ/ಎಲ್ಲರನ್ನೂ ಒಳಗೊಳ್ಳುವ  ಅಭಿವೃದ್ಧಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಯುವ ಶಕ್ತಿಯ ಮೇಲೆ ಗಮನ ಹರಿಸಿದ್ದೇವೆ.

ಮತ್ತು ಜಾಗತಿಕ ದಕ್ಷಿಣದ ಭರವಸೆಗಳು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕಗಳನ್ನು ನೀಡಿದ್ದೇವೆ.

ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ, ಎಂಬುದು ಕಳೆದ ವರ್ಷದಂತೆಯೇ ಈ ಶೃಂಗಸಭೆಯಲ್ಲಿಯೂ  ಪ್ರಸ್ತುತವಾಗಿದೆ ಎಂಬುದು ಸ್ಪಷ್ಟವಾಗಿದೆ.

ಸ್ನೇಹಿತರೇ,

ಮೊದಲ ಅಧಿವೇಶನದ ವಿಷಯಕ್ಕೆ ಸಂಬಂಧಿಸಿದಂತೆ, ಭಾರತದ ಅನುಭವಗಳು ಮತ್ತು ಯಶಸ್ಸಿನ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

ಕಳೆದ 10 ವರ್ಷಗಳಲ್ಲಿ ನಾವು 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ.

800 ದಶಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

 

ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಿಂದ 550 ಮಿಲಿಯನ್ ಜನರು ಪ್ರಯೋಜನ ಪಡೆಯುತ್ತಿದ್ದಾರೆ.

ಈಗ, 70 ವರ್ಷಕ್ಕಿಂತ ಮೇಲ್ಪಟ್ಟ 60 ಮಿಲಿಯನ್ ಹಿರಿಯ ನಾಗರಿಕರು ಉಚಿತ ಆರೋಗ್ಯ ವಿಮೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿದೆ.

ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಮೇಲೆ ನಮ್ಮ ಗಮನವನ್ನು ಸ್ಥಿರವಾಗಿ ಉಳಿಸಿಕೊಂಡು, 300 ದಶಲಕ್ಷಕ್ಕೂ ಹೆಚ್ಚು ಮಹಿಳಾ ಸೂಕ್ಷ್ಮ ಉದ್ಯಮಿಗಳನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸಲಾಗಿದೆ ಮತ್ತು ಸಾಲದ ಪ್ರವೇಶವನ್ನು ನೀಡಲಾಗಿದೆ.

ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಡಿ, 40 ದಶಲಕ್ಷಕ್ಕೂ ಹೆಚ್ಚು ರೈತರು 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಪ್ರಯೋಜನಗಳನ್ನು ಪಡೆದಿದ್ದಾರೆ.

ರೈತರ ಯೋಜನೆಯಡಿ, 110 ಮಿಲಿಯನ್ ರೈತರಿಗೆ 40 ಬಿಲಿಯನ್ ಡಾಲರ್ ಮೌಲ್ಯದ ನೆರವು ನೀಡಲಾಗಿದೆ.

ರೈತರಿಗೆ 300 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸಾಂಸ್ಥಿಕ ಸಾಲವನ್ನು ನೀಡಲಾಗುತ್ತಿದೆ.

ಭಾರತವು ಆಹಾರ ಭದ್ರತೆಯನ್ನು ಖಾತ್ರಿಪಡಿಸುವುತ್ತಿರುವುದಲ್ಲದೆ ಪೌಷ್ಠಿಕಾಂಶದ ಬಗ್ಗೆಯೂ ಗಮನ ಹರಿಸುತ್ತಿದೆ.

ಸಮಗ್ರ ಪೌಷ್ಠಿಕಾಂಶ ಬೆಂಬಲ ಕಾರ್ಯಕ್ರಮವಾದ ಸಾಕ್ಷಮ್ ಅಂಗನವಾಡಿ ಮತ್ತು ಪೌಷ್ಟಿಕಾಂಶ 2.0 ಅಭಿಯಾನವು ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದ ಹುಡುಗಿಯರಿಗೆ ಪೌಷ್ಠಿಕಾಂಶದ ಮೇಲೆ ಗಮನ ಕೇಂದ್ರೀಕರಿಸುತ್ತದೆ.

 

ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಶಾಲೆಗೆ ಹೋಗುವ ಮಕ್ಕಳ ಪೌಷ್ಠಿಕಾಂಶದ ಅಗತ್ಯಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.

ಜಾಗತಿಕ ಆಹಾರ ಭದ್ರತೆಗೂ ಭಾರತ ಕೊಡುಗೆ ನೀಡುತ್ತಿದೆ.

ನಾವು ಇತ್ತೀಚೆಗೆ ಮಲವಿ, ಜಾಂಬಿಯಾ ಮತ್ತು ಜಿಂಬಾಬ್ವೆಗೆ ಮಾನವೀಯ ನೆರವು ನೀಡಿದ್ದೇವೆ.

ಸ್ನೇಹಿತರೇ,

ನಮ್ಮ ಯಶಸ್ಸಿಗೆ ಮುಖ್ಯ ಕಾರಣವೆಂದರೆ ನಮ್ಮ ವಿಧಾನ: 'ಮೂಲಭೂತ ವಿಷಯಗಳಿಗೆ ಹಿಂತಿರುಗಿ' ಮತ್ತು 'ಭವಿಷ್ಯದತ್ತ ಸಾಗಿ'.

ನಾವು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯ ಮೇಲೆ ಮಾತ್ರವಲ್ಲದೆ ಹೊಸ ತಂತ್ರಜ್ಞಾನಗಳ ಬಗ್ಗೆಯೂ ಗಮನ ಹರಿಸಿದ್ದೇವೆ.

ನಾವು ಶ್ರೀ ಆನ್ನ ಅಥವಾ ಸಿರಿಧಾನ್ಯಗಳನ್ನು ಉತ್ತೇಜಿಸುವ ಮೂಲಕ ಸುಸ್ಥಿರ ಕೃಷಿ, ಪರಿಸರ ಸಂರಕ್ಷಣೆ, ಪೌಷ್ಠಿಕಾಂಶ ಮತ್ತು ಆಹಾರ ಭದ್ರತೆಯತ್ತ ಗಮನ ಹರಿಸಿದ್ದೇವೆ.

ನಾವು 2000 ಕ್ಕೂ ಹೆಚ್ಚು ಹವಾಮಾನ ಸ್ಥಿತಿಸ್ಥಾಪಕ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು 'ಡಿಜಿಟಲ್ ಕೃಷಿ ಮಿಷನ್' ಅನ್ನು ಪ್ರಾರಂಭಿಸಿದ್ದೇವೆ

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆಯನ್ನು ಶಕ್ತಗೊಳಿಸಿದೆ.

ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್ ಗಳ ಯೋಜನೆಯೊಂದಿಗೆ ನಾವು ದುರ್ಬಲ ಸಂಪರ್ಕವನ್ನು ಬಲಪಡಿಸುವ ಅಂತರ್ಗತ ಅಭಿವೃದ್ಧಿಗೆ ಹೊಸ ಮಾದರಿಯನ್ನು ರಚಿಸಿದ್ದೇವೆ.

ಸ್ನೇಹಿತರೇ,

 

"ಹಸಿವು ಮತ್ತು ಬಡತನದ ವಿರುದ್ಧ ಜಾಗತಿಕ ಮೈತ್ರಿ" ಗಾಗಿ ಬ್ರೆಜಿಲ್ ನ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ

ಹೊಸದಿಲ್ಲಿ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಆಹಾರ ಭದ್ರತೆಗಾಗಿ ಡೆಕ್ಕನ್ ಉನ್ನತ ಮಟ್ಟದ ತತ್ವಗಳ ಅನುಷ್ಠಾನಕ್ಕೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ

ಸ್ನೇಹಿತರೇ,

ಅಂತಿಮವಾಗಿ, ಜಾಗತಿಕ ಸಂಘರ್ಷಗಳಿಂದ ಉಂಟಾಗುವ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚು ಪ್ರತಿಕೂಲ ಪರಿಣಾಮ ಎದುರಿಸುತ್ತವೆ ಎಂದು ನಾನು ಹೇಳಲು ಬಯಸುತ್ತೇನೆ.

ಆದ್ದರಿಂದ ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ನಮ್ಮ ಚರ್ಚೆಗಳು ಯಶಸ್ವಿಯಾಗಬಹುದು.

ಮತ್ತು ಹೊಸದಿಲ್ಲಿ ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಜಿ 20 ರ ಶಾಶ್ವತ ಸದಸ್ಯತ್ವವನ್ನು ನೀಡುವ ಮೂಲಕ ನಾವು ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸಿದಂತೆಯೇ, ನಾವು ಜಾಗತಿಕ ಆಡಳಿತದ ಸಂಸ್ಥೆಗಳನ್ನು ಸುಧಾರಿಸುತ್ತೇವೆ.

ಮುಂದಿನ ಅಧಿವೇಶನದಲ್ಲಿ, ಈ ವಿಷಯದ ಬಗ್ಗೆ ಇನ್ನೂ ಹೆಚ್ಚು ವಿವರವಾದ, ಸಕಾರಾತ್ಮಕ ಚರ್ಚೆ ನಡೆಯಲಿದೆ ಎಂದು ನನಗೆ ವಿಶ್ವಾಸವಿದೆ.

ತುಂಬ ಧನ್ಯವಾದಗಳು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
GST cuts ignite car sales boom! Automakers plan to ramp up output by 40%; aim to boost supply, cut wait times

Media Coverage

GST cuts ignite car sales boom! Automakers plan to ramp up output by 40%; aim to boost supply, cut wait times
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ನವೆಂಬರ್ 2025
November 14, 2025

From Eradicating TB to Leading Green Hydrogen, UPI to Tribal Pride – This is PM Modi’s Unstoppable India