ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಸ್ವಾಗತಿಸಿದ್ದಾರೆ. ಈ ಸೌರ ಮೈತ್ರಿಕೂಟ ಸೇರುವ ನಿರ್ಧಾರಕ್ಕಾಗಿ ಶ್ರೀ ಮೋದಿ ಅವರು ಅಮೆರಿಕ ಅಧ್ಯಕ್ಷ ಶ್ರೀ ಜೋ ಬೈಡೆನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹವಾಮಾನ ಕುರಿತ ವಿಶೇಷ ಅಧ್ಯಕ್ಷೀಯ ಪ್ರತಿನಿಧಿ ಶ್ರೀ ಜಾನ್ ಕೆರ್ರಿ ಅವರ ಟ್ವೀಟ್‌ಗೆ ಉತ್ತರವಾಗಿ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ: "ಅದ್ಭುತವಾದ ಸುದ್ದಿ @ClimateEnvoy! ಸೌರ ಮೈತ್ರಿಕೂಟಕ್ಕೆ @isolaralliance ಅಮೆರಿಕವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಮೆರಿಕದ ಅಧ್ಯಕ್ಷರಿಗೆ @POTUS ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇದು ಸುಸ್ಥಿರ ಭೂಮಂಡಲಕ್ಕಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಜಂಟಿ ಅನ್ವೇಷಣೆಯಲ್ಲಿ ನಮ್ಮ ಮೈತ್ರಿಯನ್ನು ಮತ್ತಷ್ಟು ಬಲಪಡಿಸುತ್ತದೆ."
Wonderful news @ClimateEnvoy! I thank @POTUS and wholeheartedly welcome the USA to the @isolaralliance. This will further strengthen the Alliance in our shared quest of harnessing solar energy for a sustainable planet. https://t.co/vWlzCmws3q
— Narendra Modi (@narendramodi) November 10, 2021


