ದಿಬ್ರುಗಢದ ಮೋರನ್ ಬೈಪಾಸ್‌ನಲ್ಲಿರುವ ತುರ್ತು ಲ್ಯಾಂಡಿಂಗ್ ಸೌಲಭ್ಯ (ಇ.ಎಲ್.ಎಫ್.-ELF)ದಲ್ಲಿ ಇಳಿಯಲಿದ್ದಾರೆ ಪ್ರಧಾನಮಂತ್ರಿ
ಈಶಾನ್ಯ ಭಾರತದಲ್ಲಿ ಇದೇ ಮೊದಲನೆಯದಾದ ಇ.ಎಲ್.ಎಫ್, -ಇದು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಕಾರ್ಯತಂತ್ರದ ಅವಶ್ಯಕತೆಗಳು ಮತ್ತು ತುರ್ತು ಪ್ರತಿಕ್ರಿಯೆಗೆ ನಿರ್ಣಾಯಕ ಆಸ್ತಿಯಾಗಿ ಕಾರ್ಯನಿರ್ವಹಿಸಲಿದೆ
ಗುವಾಹಟಿಯಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ ಮತ್ತು ಚಾಲನೆ ನೀಡಲಿದ್ದಾರೆ
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುಮಾರ್ ಭಾಸ್ಕರ್ ವರ್ಮಾ ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಪ್ರಧಾನಮಂತ್ರಿ
ಐಐಎಂ ಗುವಾಹಟಿ ಮತ್ತು ಈಶಾನ್ಯ ವಲಯದ ರಾಷ್ಟ್ರೀಯ ದತ್ತಾಂಶ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿ ಅವರು ದಿಬ್ರುಗಢದ ಮೋರನ್ ಬೈಪಾಸ್‌ನಲ್ಲಿರುವ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF)ದಲ್ಲಿ ಇಳಿಯಲಿದ್ದಾರೆ, ಅಲ್ಲಿ ಅವರು ಯುದ್ದ ವಿಮಾನಗಳು,  ಸಾರಿಗೆ ಮತ್ತು ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಕುಮಾರ್ ಭಾಸ್ಕರ್ ವರ್ಮಾ ಸೇತುಗೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 1:30 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ಗುವಾಹಟಿಯ ಲಚಿತ್ ಘಾಟ್‌ನಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಚಾಲನೆ ನೀಡಲಿದ್ದಾರೆ.

ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಈಶಾನ್ಯ ಭಾರತದಲ್ಲಿ ಇದೇ ಮೊದಲನೆಯ ಬಾರಿಗೆ ನಿರ್ಮಾಣವಾಗಿದೆ. ತುರ್ತು ಸಂದರ್ಭಗಳಲ್ಲಿ ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಅನ್ನು ಬೆಂಬಲಿಸಲು ಭಾರತೀಯ ವಾಯುಪಡೆಯೊಂದಿಗೆ ಸಮನ್ವಯದಿಂದ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ. ಇದು ತುರ್ತು ಪ್ರತಿಕ್ರಿಯೆಗೆ ನಿರ್ಣಾಯಕ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಈಶಾನ್ಯದಲ್ಲಿ ನೈಸರ್ಗಿಕ ವಿಕೋಪಗಳು ಅಥವಾ ಕಾರ್ಯತಂತ್ರದ ಅವಶ್ಯಕತೆಗಳ ಸಮಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. ದ್ವಿ-ಬಳಕೆಯ ಮೂಲಸೌಕರ್ಯವಾಗಿ ಕಲ್ಪಿಸಲಾಗಿರುವ ಇ.ಎಲ್.ಎಫ್.-, 40 ಟನ್‌ಗಳವರೆಗಿನ ಯುದ್ಧ ವಿಮಾನಗಳನ್ನು ನಿರ್ವಹಿಸುವ ಮತ್ತು 74 ಟನ್‌ಗಳವರೆಗಿನ ಗರಿಷ್ಠ ಟೇಕ್-ಆಫ್ ತೂಕವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಂಪರ್ಕವನ್ನು ವೇಗಗೊಳಿಸುವ, ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ, ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಾಗು ಈಶಾನ್ಯ ವಲಯದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಸುಮಾರು 3,030 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಲಿದ್ದಾರೆ. 6-ಲೇನ್‌ಗಳ ಎಕ್ಸ್‌ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಸೇತುವೆಯು ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಇದು ಈಶಾನ್ಯ ಭಾರತದ ಮೊದಲ ಎಕ್ಸ್‌ಟ್ರಾಡೋಸ್ಡ್ ಸೇತುವೆಯಾಗಿದೆ. ಇದು ಗುವಾಹಟಿ-ಉತ್ತರ ಗುವಾಹಟಿ ನಡುವಿನ ಪ್ರಯಾಣದ ಸಮಯವನ್ನು 7 ನಿಮಿಷಕ್ಕೆ ಕಡಿತಗೊಳಿಸುತ್ತದೆ. ಈ ಪ್ರದೇಶದ ಹೆಚ್ಚಿನ ಭೂಕಂಪನವನ್ನು ಪರಿಗಣಿಸಿ, ಸೇತುವೆಯನ್ನು ಘರ್ಷಣೆ ಲೋಲಕ ಬೇರಿಂಗ್‌ಗಳನ್ನು ಬಳಸಿಕೊಂಡು ಬೇಸ್ ಐಸೊಲೇಷನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರ್ಮಾಣವಾಗಿದೆ.. ಬಾಳಿಕೆ ಮತ್ತು ದೀರ್ಘಕಾಲೀನ ರಚನಾತ್ಮಕ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕಾರ್ಯಕ್ಷಮತೆಯ ಸ್ಟೇ ಕೇಬಲ್‌ಗಳನ್ನು ಬಳಸಲಾಗಿದೆ. ಸೇತುವೆಯ ನೈಜ-ಸಮಯದ ಸ್ಥಿತಿ ಮೇಲ್ವಿಚಾರಣೆ, ಮೊದಲ ಹಂತದಲ್ಲಿಯೇ ಹಾನಿ ಪತ್ತೆ ಮತ್ತು ಎಕ್ಸ್‌ಟ್ರಾಡೋಸ್ಡ್ ಸೇತುವೆಯ ಸುಧಾರಿತ ಸುರಕ್ಷತೆ ಮತ್ತು ಸೇವಾ ಜೀವಿತಾವಧಿಗಾಗಿ  ಸೇತುವೆ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆ (BHMS) ಯನ್ನು ಸಹ ಅಳವಡಿಸಲಾಗಿದೆ.

ಪ್ರಧಾನಮಂತ್ರಿಯವರು ಅಸ್ಸಾಂನ ಕಾಮರೂಪ ಜಿಲ್ಲೆಯ ಅಮಿಂಗಾಂವ್‌ನಲ್ಲಿ ಈಶಾನ್ಯ ಪ್ರದೇಶಕ್ಕಾಗಿ ರಾಷ್ಟ್ರೀಯ ದತ್ತಾಂಶ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಒಟ್ಟು 8.5 ಮೆಗಾವ್ಯಾಟ್ ಅನುಮೋದಿತ ಲೋಡ್ ಮತ್ತು ಪ್ರತಿ ರ್ಯಾಕ್‌ಗೆ ಸರಾಸರಿ 10 ಕಿಲೋವ್ಯಾಟ್ ರ್ಯಾಕ್ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ದತ್ತಾಂಶ ಕೇಂದ್ರವು ವಿವಿಧ ಸರ್ಕಾರಿ ಇಲಾಖೆಗಳ ನಿರ್ಣಾಯಕ ಅನ್ವಯಿಕೆಗಳನ್ನು ಆಯೋಜಿಸುತ್ತದೆ ಮತ್ತು ಇತರ ರಾಷ್ಟ್ರೀಯ ದತ್ತಾಂಶ ಕೇಂದ್ರಗಳಿಗೆ ವಿಪತ್ತು ಚೇತರಿಕೆ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಈಶಾನ್ಯ ರಾಜ್ಯಗಳ ಸರ್ಕಾರಗಳು ಅಗತ್ಯ ನಾಗರಿಕ-ಕೇಂದ್ರಿತ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ತಲುಪಿಸಲು ಅನುವು ಮಾಡಿಕೊಡುತ್ತದೆ. ಡಿಜಿಟಲ್ ಇಂಡಿಯಾದ ದೃಷ್ಟಿಕೋನಕ್ಕೆ ಅನುಗುಣವಾಗಿ, ಈಶಾನ್ಯ ಪ್ರದೇಶಕ್ಕಾಗಿ ರಾಷ್ಟ್ರೀಯ ದತ್ತಾಂಶ ಕೇಂದ್ರವನ್ನು ಈ ಪ್ರದೇಶದ ಐಸಿಟಿ ಹಿನ್ನೆಲೆ/ಬೆನ್ನೆಲುಬನ್ನು ಬಲಪಡಿಸಲು ಮತ್ತು ದೃಢವಾದ, ಸುರಕ್ಷಿತ ಹಾಗೂ  ಸದಾ ಲಭ್ಯವಿರುವ ಡಿಜಿಟಲ್ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಒಂದು ಕಾರ್ಯತಂತ್ರದ ಮಧ್ಯಪ್ರವೇಶವಾಗಿ  ಕಲ್ಪಿಸಲಾಗಿದೆ. ಪ್ರಧಾನಮಂತ್ರಿಯವರು ಐಐಎಂ ಗುವಾಹಟಿಯನ್ನು ಉದ್ಘಾಟಿಸಲಿದ್ದಾರೆ, ಇದು ಈಶಾನ್ಯ ಪ್ರದೇಶದಲ್ಲಿ ಉನ್ನತ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣಕ್ಕೆ ಪ್ರಮುಖ ಉತ್ತೇಜನ ನೀಡುತ್ತದೆ.

ಪ್ರಧಾನಮಂತ್ರಿಯವರು ಗುವಾಹಟಿ (100), ನಾಗ್ಪುರ (50), ಭಾವನಗರ (50) ಮತ್ತು ಚಂಡೀಗಢ (25) ಗಳಲ್ಲಿ ಪಿಎಂ-ಇ ಬಸ್ ಸೇವಾ ಯೋಜನೆಯಡಿ 225 ಎಲೆಕ್ಟ್ರಿಕ್ ಬಸ್‌ಗಳನ್ನು ಉದ್ಘಾಟಿಸಲಿದ್ದಾರೆ. ಈ ನಾಲ್ಕು ನಗರಗಳಲ್ಲಿ PM-eBus ಸೇವಾ ಯೋಜನೆಯಡಿ ಇ-ಬಸ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಿದ್ದು, ಇದರಿಂದ 50 ಲಕ್ಷಕ್ಕೂ ಹೆಚ್ಚು ನಾಗರಿಕರು ಸ್ವಚ್ಛ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಸೇವೆಗಳ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ, ಇದು ಸುಧಾರಿತ ನಗರ ಚಲನಶೀಲತೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Odisha’s Dhenkanal farmers export 3 tonne of mango to London

Media Coverage

Odisha’s Dhenkanal farmers export 3 tonne of mango to London
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2026
May 14, 2026

Kisan Kalyan to Viksit Bharat: PM Modi Delivers Jobs, Markets & Dignity Across Rural and Industrial India