ಶೇರ್
 
Comments

ರೈಲ್ವೆಯ ಪಶ್ಚಿಮ ಸರಕು ಸಾಗಣೆ ಕಾರಿಡಾರ್ (ಡಬ್ಲ್ಯುಡಿಎಫ್‌ಸಿ) ನ 306 ಕಿ.ಮೀ ಹೊಸ ರೇವಾರಿ – ಹೊಸ ಮದಾರ್ ವಿಭಾಗವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಜನವರಿ 7 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ನ್ಯೂ ಅಟೆಲಿ-ನ್ಯೂ ಕಿಶನ್‌ಗಢ ದಿಂದ ವಿಶ್ವದ ಮೊದಲ ಎರಡು ಹಂತದ (ಡಬಲ್ ಸ್ಟ್ಯಾಕ್) 1.5 ಕಿ.ಮೀ ಉದ್ದದ ವಿದ್ಯುತ್ ಚಾಲಿತ ಕಂಟೇನರ್ ರೈಲಿಗೂ ಪ್ರಧಾನಿಯವರು ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ರಾಜಸ್ಥಾನ ಮತ್ತು ಹರಿಯಾಣ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್ ಉಪಸ್ಥಿತರಿರುತ್ತಾರೆ.

ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ಹೊಸ ರೇವಾರಿ - ಹೊಸ ಮದಾರ್ ವಿಭಾಗ

ರೈಲ್ವೆಯ ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ಹೊಸ ರೇವಾರಿ - ಹೊಸ ಮದಾರ್ ವಿಭಾಗವು ಹರಿಯಾಣ (ಅಂದಾಜು 79 ಕಿ.ಮೀ, ಮಹೇಂದ್ರಗಢ ಮತ್ತು ರೇವಾರಿ ಜಿಲ್ಲೆಗಳಲ್ಲಿ) ಮತ್ತು ರಾಜಸ್ಥಾನ್ (ಅಂದಾಜು 227 ಕಿ.ಮೀ., ಜೈಪುರ, ಅಜ್ಮೀರ್, ಸಿಕಾರ್, ನಾಗೌರ್ ಮತ್ತು ಅಲ್ವಾರ್ ಜಿಲ್ಲೆಗಳಲ್ಲಿ) ಗಳಲ್ಲಿ ಬರುತ್ತದೆ. ಇದು ಹೊಸದಾಗಿ ನಿರ್ಮಿಸಲಾದ ಒಂಬತ್ತು ಡಿಎಫ್‌ಸಿ ಕೇಂದ್ರಗಳನ್ನು ಒಳಗೊಂಡಿದೆ, ಇದರಲ್ಲಿ ನ್ಯೂ ಡಬ್ಲಾ, ನ್ಯೂ ಭಾಗೇಗಾ, ನ್ಯೂ ಶ್ರೀ ಮಾಧೋಪುರ್, ನ್ಯೂ ಪಚರ್ ಮಲಿಕ್ಪುರ್, ನ್ಯೂ ಸಕುನ್ ಆರು ಕ್ರಾಸಿಂಗ್ ನಿಲ್ದಾಣಗಳು ಮತ್ತು ಇತರ ಮೂರು ಜಂಕ್ಷನ್ ನಿಲ್ದಾಣಗಲಾದ ನ್ಯೂ ಕಿಶನ್‌ಗಢ್, ನ್ಯೂ ರೇವಾರಿ, ನ್ಯೂ ಅಟೆಲಿ ಮತ್ತು ನ್ಯೂ ಫುಲೆರಾ ಬರುತ್ತವೆ.

ಈ ವಿಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸುವುದರಿಂದ ರಾಜಸ್ಥಾನ ಮತ್ತು ಹರಿಯಾಣದ ರೇವಾರಿ - ಮನೇಸರ್, ನರ್ನೌಲ್, ಫುಲೆರಾ ಮತ್ತು ಕಿಶನ್‌ಗಢ್ ಪ್ರದೇಶಗಳಲ್ಲಿನ ವಿವಿಧ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಕಥುವಾಸ್‌ನಲ್ಲಿರುವ ಕಾಂಕರ್ ಕಂಟೇನರ್ ಡಿಪೋವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ವಿಭಾಗವು ಗುಜರಾತ್‌ನಲ್ಲಿರುವ ಪಶ್ಚಿಮ ಬಂದರುಗಳಾದ ಕಾಂಡ್ಲಾ, ಪಿಪಾವವ್, ಮುಂಧ್ರಾ ಮತ್ತು ದಹೇಜ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಸಾಧಿಸುತ್ತದೆ.

ಈ ವಿಭಾಗದ ಉದ್ಘಾಟನೆಯೊಂದಿಗೆ, ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ಮತ್ತು ಪೂರ್ವ ಸರಕು ಸಾಗಣೆ ಕಾರಿಡಾರ್‌ ನಡುವೆ ತಡೆರಹಿತ ಸಂಪರ್ಕವನ್ನು ಸಾಧಿಸಲಾಗುತ್ತದೆ. ಇದಕ್ಕೂ ಮೊದಲು ಪೂರ್ವ ಸರಕು ಸಾಗಣೆ ಕಾರಿಡಾರ್‌ನ 351 ಕಿ.ಮೀ ಹೊಸ ಭೌಪುರ್- ಹೊಸ ಖುರ್ಜಾ ವಿಭಾಗವನ್ನು 2020 ರ ಡಿಸೆಂಬರ್ 29 ರಂದು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು.

ಡಬಲ್ ಸ್ಟ್ಯಾಕ್ ಲಾಂಗ್ ಹಾಲ್ ಕಂಟೇನರ್ ರೈಲು ಕಾರ್ಯಾಚರಣೆ

ಎರಡು ಹಂತದ ಕಂಟೇನರ್ ರೈಲು ಕಾರ್ಯಾಚರಣೆಯು 25 ಟನ್ ಗಳಷ್ಟು ಹೆಚ್ಚು ಆಕ್ಸಲ್ ಲೋಡ್ ಅನ್ನು ಹೊಂದಿರುತ್ತದೆ. ಇದನ್ನು ಆರ್‌ಡಿಎಸ್‌ಒನ ವ್ಯಾಗನ್ ವಿಭಾಗವು ಡಿಎಫ್‌ಸಿಸಿಐಎಲ್‌ಗಾಗಿ ವಿನ್ಯಾಸಗೊಳಿಸಿದೆ. BLCS-A ಮತ್ತು BLCS-B ವ್ಯಾಗನ್ ಮೂಲಮಾದರಿಗಳ ಪ್ರಯೋಗಾರ್ಥ ಓಡಾಟಗಳು ಪೂರ್ಣಗೊಂಡಿವೆ. ವಿನ್ಯಾಸವು ಸಾಮರ್ಥ್ಯ ಬಳಕೆ ಮತ್ತು ಏಕರೂಪದ ವಿತರಣೆ ಮತ್ತು ಪಾಯಿಂಟ್ ಲೋಡಿಂಗ್ ಅನ್ನು ಹೆಚ್ಚಿಸುತ್ತದೆ. ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ದೀರ್ಘ-ಪ್ರಯಾಣದ ಡಬಲ್ ಸ್ಟ್ಯಾಕ್ ಕಂಟೇನರ್ ರೈಲಿನಲ್ಲಿರುವ ಈ ವ್ಯಾಗನ್‌ಗಳು ಭಾರತೀಯ ರೈಲ್ವೆಯಲ್ಲಿನ ಪ್ರಸ್ತುತ ದಟ್ಟಣೆಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ಸರಕು ಸಾಗಿಸಬಲ್ಲವು.

ಭಾರತೀಯ ರೈಲ್ವೆ ಹಳಿಗಳಲ್ಲಿ ಪ್ರಸ್ತುತ ಇರುವ ಗರಿಷ್ಠ 75 ಕಿ.ಮೀ ವೇಗಕ್ಕೆ ಹೋಲಿಸಿದರೆ ಡಿಎಫ್‌ಸಿಸಿಐಎಲ್ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ ಸರಕು ರೈಲುಗಳನ್ನು ಓಡಿಸಲಿದ್ದು, ಭಾರತೀಯ ರೈಲ್ವೆ ಮಾರ್ಗಗಳಲ್ಲಿ ಈಗಿರುವ ಸರಕು ಸಾಗಣೆ ರೈಲುಗಳ 26 ಕಿ.ಮೀ ಸರಾಸರಿ ವೇಗವನ್ನು 70 ಕಿ.ಮೀ.ಗೆ ಹೆಚ್ಚಾಗಲಿದೆ.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
PM Modi's Surprise Visit to New Parliament Building, Interaction With Construction Workers

Media Coverage

PM Modi's Surprise Visit to New Parliament Building, Interaction With Construction Workers
...

Nm on the go

Always be the first to hear from the PM. Get the App Now!
...
PM expresses happiness on GeM crossing Gross Merchandise Value of ₹2 lakh crore in 2022–23
March 31, 2023
ಶೇರ್
 
Comments

The Prime Minister, Shri Narendra Modi has expressed happiness on GeM crossing Gross Merchandise Value of ₹2 lakh crore in 2022–23.

In response to a tweet by the Union Minister, Shri Piyush Goyal, the Prime Minister said;

"Excellent! @GeM_India has given us a glimpse of the energy and enterprise of the people of India. It has ensured prosperity and better markets for many citizens."