ಸಮ್ಮೇಳನದ ಮುಖ್ಯ ಧ್ಯೇಯ: ಸುಲಭ ಜೀವನ
ಚರ್ಚೆಯ ಪ್ರಮುಖ ಕ್ಷೇತ್ರಗಳು: ಭೂಮಿ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಮತ್ತು ಶಾಲಾ ಶಿಕ್ಷಣ
ಸೈಬರ್ ಭದ್ರತೆ, ಮಹತ್ವಾಕಾಂಕ್ಷೆಯ ಬ್ಲಾಕ್ ಮತ್ತು ಜಿಲ್ಲಾ ಕಾರ್ಯಕ್ರಮ, ಯೋಜನೆಗಳ ತರ್ಕಬದ್ಧತೆ ಮತ್ತು ಹೊಸ ಯುಗದ ತಂತ್ರಜ್ಞಾನಗಳ ಕುರಿತು ವಿಶೇಷ ಸಮಾವೇಶಗಳು ನಡೆಯಲಿವೆ
ರಾಜ್ಯಗಳ ಉತ್ತಮ ವ್ಯವಹಾರಗಳ ಬಗ್ಗೆಯೂ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್ 28 ಮತ್ತು 29 ರಂದು ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಮೂರನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಮೂರನೇ ಸಮ್ಮೇಳನವಾಗಿದೆ, ಮೊದಲನೆಯದು ಜೂನ್ 2022 ರಲ್ಲಿ ಧರ್ಮಶಾಲಾದಲ್ಲಿ ಮತ್ತು ಎರಡನೆಯದು ಜನವರಿ 2023 ರಲ್ಲಿ ದೆಹಲಿಯಲ್ಲಿ ನಡೆದಿತ್ತು.

ಸಹಕಾರಿ ಒಕ್ಕೂಟ ತತ್ವವನ್ನು ಕಾರ್ಯರೂಪಕ್ಕೆ ತರುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸಲು ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ವರ್ಷ, ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನವು ಡಿಸೆಂಬರ್ 27 ರಿಂದ 29 ರವರೆಗೆ ನಡೆಯಲಿದೆ.

ಮೂರು ದಿನಗಳ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ 200 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಸರ್ಕಾರದ ಮಧ್ಯಸ್ಥಿಕೆಗಳ ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಉತ್ತಮ ಗುಣಮಟ್ಟದ ಜೀವನವನ್ನು ಸಾಧಿಸಲು ಸಹಕಾರಿ ಕ್ರಮಕ್ಕೆ ಇದು ಅಡಿಪಾಯವನ್ನು ಹಾಕುತ್ತದೆ.

ಈ ವರ್ಷದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದ ಪ್ರಮುಖ ಗಮನವು 'ಈಸ್ ಆಫ್ ಲಿವಿಂಗ್' ಆಗಿರುತ್ತದೆ. ಸಮ್ಮೇಳನವು ಸಾಮಾನ್ಯ ಅಭಿವೃದ್ಧಿ ಕಾರ್ಯಸೂಚಿಯ ವಿಕಸನ ಮತ್ತು ಅನುಷ್ಠಾನಕ್ಕೆ ಒತ್ತು ನೀಡುತ್ತದೆ ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ ಸುಸಂಘಟಿತ ಕ್ರಮಕ್ಕಾಗಿ ನೀಲನಕ್ಷೆ ಒದಗಿಸುವ ನಿರೀಕ್ಷೆ ಇದೆ.

ಕಲ್ಯಾಣ ಯೋಜನೆಗಳಿಗೆ ಮತ್ತು ಸೇವಾ ವಿತರಣೆಯಲ್ಲಿ ಗುಣಮಟ್ಟಕ್ಕೆ ವಿಶೇಷ ಒತ್ತು ನೀಡುವುದರೊಂದಿಗೆ, ಸಮ್ಮೇಳನದಲ್ಲಿ ಚರ್ಚಿಸಲಾಗುವ ಐದು ಉಪ-ವಿಷಯಗಳು ಎಂದರೆ ಭೂಮಿ ಮತ್ತು ಆಸ್ತಿ; ವಿದ್ಯುತ್; ಕುಡಿಯುವ ನೀರು; ಆರೋಗ್ಯ; ಮತ್ತು ಶಾಲಾ ಶಿಕ್ಷಣ. ಇವುಗಳಲ್ಲದೆ, ಸೈಬರ್ ಭದ್ರತೆ: ಉದಯೋನ್ಮುಖ ಸವಾಲುಗಳು; ಕೃತಕ ಬುದ್ಧಿಮತ್ತೆ ಮೇಲಿನ ದೃಷ್ಟಿಕೋನಗಳು, ಮಹತ್ವಾಕಾಂಕ್ಷೆಯ ಬ್ಲಾಕ್ ಮತ್ತು ಜಿಲ್ಲಾ ಕಾರ್ಯಕ್ರಮ; ರಾಜ್ಯಗಳ ಪಾತ್ರ: ಯೋಜನೆಗಳು ಮತ್ತು ಸ್ವಾಯತ್ತ ಘಟಕಗಳ ತರ್ಕಬದ್ಧಗೊಳಿಸುವಿಕೆ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸುವುದು; ಆಡಳಿತದಲ್ಲಿ ಆರ್ಟಿಫಿಯಲ್‌ ಇಂಟೆಲಿಜೆನ್ಸ್‌: ಸವಾಲುಗಳು ಮತ್ತು ಅವಕಾಶಗಳು

ಇವುಗಳ ಜೊತೆಗೆ, ಮಾದಕ ವ್ಯಸನ ಮತ್ತು ಪುನರ್ವಸತಿ ಬಗ್ಗೆ ಕೇಂದ್ರೀಕೃತ ಚರ್ಚೆಗಳನ್ನು ಸಹ ಮಾಡಲಾಗುತ್ತದೆ; ಅಮೃತ ಸರೋವರ; ಪ್ರವಾಸೋದ್ಯಮ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ರಾಜ್ಯಗಳ ಪಾತ್ರ; ಮತ್ತು PM ವಿಶ್ವಕರ್ಮ ಯೋಜನೆ ಮತ್ತು PM SVANidhi. ಪ್ರತಿಯೊಂದು ವಿಷಯಗಳ ಅಡಿಯಲ್ಲಿ ರಾಜ್ಯಗಳು/UTಗಳಿಂದ ಉತ್ತಮ ಆಡಳಿತ, ವ್ಯವಹಾರಗಳ ಹಾಗೂ ಪ್ರಕ್ರಿಯೆಗಳನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಇದರಿಂದ ಒಂದು ರಾಜ್ಯದಲ್ಲಿ ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಬಹುದು ಅಥವಾ ತಮ್ಮದೇ ಆದ ಅಗತ್ಯತೆಗಳ ಪ್ರಕಾರ ಹೆಚ್ಚಿನ ಹಾಗೂ ಇನ್ನಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Chai Pe Charcha' With Xi, Putin: Unseen Footage From BRICS Summit Show PM Modi's Moments With Leaders

Media Coverage

'Chai Pe Charcha' With Xi, Putin: Unseen Footage From BRICS Summit Show PM Modi's Moments With Leaders
NM on the go

Nm on the go

Always be the first to hear from the PM. Get the App Now!
...
Prime Minister extends greetings on Samvatsari
September 15, 2026

The Prime Minister, Shri Narendra Modi, has extended his greetings to the people on the sacred occasion of Samvatsari. Shri Modi said that Samvatsari reminds us that forgiveness and compassion strengthen every bond. He called upon everyone to embrace humility and let kindness and goodwill guide their actions.

The Prime Minister posted on X:

Samvatsari reminds us that forgiveness and compassion strengthen every bond.

On this sacred occasion, may humility guide us and may kindness and goodwill shape our every action.

Michhami Dukkadam!