ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜನವರಿ 21-22 ರಂದು ನವದೆಹಲಿಯ ಪುಸಾದ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ ನಡೆಯಲಿರುವ ಪೊಲೀಸ್ ಮಹಾನಿರ್ದೇಶಕರು / ಇನ್ಸ್ಪೆಕ್ಟರ್ ಜನರಲ್ ಗಳ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

2023ರ ಜನವರಿ 20 ರಿಂದ 22 ರವರೆಗೆ ನಡೆಯಲಿರುವ ಮೂರು ದಿನಗಳ ಈ ಸಮ್ಮೇಳನವು ಹೈಬ್ರಿಡ್ ಸ್ವರೂಪದಲ್ಲಿ ನಡೆಯಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸುಮಾರು 100 ಆಹ್ವಾನಿತರು ಸಮ್ಮೇಳನದಲ್ಲಿ  ಭಾಗವಹಿಸುತ್ತಿದ್ದಾರೆ.

ಸೈಬರ್ ಅಪರಾಧ, ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ಭಯೋತ್ಪಾದನಾ ನಿಗ್ರಹ ಸವಾಲುಗಳು, ಎಡಪಂಥೀಯ ಉಗ್ರವಾದ, ಸಾಮರ್ಥ್ಯ ವರ್ಧನೆ, ಕಾರಾಗೃಹ ಸುಧಾರಣೆಗಳು ಸೇರಿದಂತೆ ವ್ಯಾಪಕ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಗುರುತಿಸಲಾದ ವಿಷಯಗಳ ಕುರಿತು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡ ವ್ಯಾಪಕ ಚರ್ಚೆಗಳು ಈ ಸಮ್ಮೇಳನದಲ್ಲಿ ನಡೆಯಲಿವೆ. ಪ್ರತಿಯೊಂದು ವಿಷಯದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಅಭ್ಯಾಸಗಳನ್ನು ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಾಗುವುದು, ಇದರಿಂದ ರಾಜ್ಯಗಳು ಪರಸ್ಪರ ಕಲಿಯಬಹುದಾಗಿದೆ.

2014ರಿಂದ ಡಿಜಿಪಿ ಸಮ್ಮೇಳನದಲ್ಲಿ ಪ್ರಧಾನಿ ತೀವ್ರ ಆಸಕ್ತಿ ವಹಿಸಿತ್ತಿದ್ದಾರೆ. ಈ ಹಿಂದಿನ ಪ್ರಧಾನ ಮಂತ್ರಿಗಳ ಸಾಂಕೇತಿಕ ಉಪಸ್ಥಿತಿಯಂತಲ್ಲದೆ, ಮೋದಿಯವರು ಈ ಸಮ್ಮೇಳನದ ಎಲ್ಲ ಪ್ರಮುಖ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಯವರು ಈ ಸಮ್ಮೇಳನದಲ್ಲಿ ಎಲ್ಲ ವಿಷಯಗಳನ್ನು ತಾಳ್ಮೆಯಿಂದ ಆಲಿಸುವುದಲ್ಲದೆ, ಹೊಸ ಆಲೋಚನೆಗಳನ್ನು ಹೊರತರಲು ಮುಕ್ತ ಮತ್ತು ಅನೌಪಚಾರಿಕ ಚರ್ಚೆಗಳನ್ನು ಪ್ರೋತ್ಸಾಹಿಸುತ್ತಾರೆ. ಇದು ದೇಶದ ಮೇಲೆ ಪರಿಣಾಮ ಬೀರುವ ಪ್ರಮುಖ ಪೊಲೀಸ್ ವ್ಯವಸ್ಥೆ ಮತ್ತು ಆಂತರಿಕ ಭದ್ರತಾ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯವರೊಂದಿಗೆ ನೇರ ಚರ್ಚೆಯಲ್ಲಿ ಭಾಗವಹಿಸಲು ಮತ್ತು ತಮ್ಮ ಮುಕ್ತ ಶಿಫಾರಸುಗಳನ್ನು ನೀಡಲು ದೇಶದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ.

ಇದಲ್ಲದೆ, ಪ್ರಧಾನ ಮಂತ್ರಿಯವರ ದೃಷ್ಟಿಕೋನದಲ್ಲಿ ಮಾರ್ಗದರ್ಶಿಸಲ್ಪಟ್ಟ ಈ ಸಮ್ಮೇಳನದಲ್ಲಿ ಪ್ರಸ್ತುತ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ಉದಯೋನ್ಮುಖ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪೊಲೀಸಿಂಗ್ ಮತ್ತು ಭದ್ರತೆಯ ಭವಿಷ್ಯದ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು.

ಪ್ರಧಾನಮಂತ್ರಿಯವರು 2014ರಿಂದ ದೇಶಾದ್ಯಂತ ವಾರ್ಷಿಕ ಡಿಜಿಪಿ ಸಮ್ಮೇಳನಗಳ ಆಯೋಜನೆಗೆ ಉತ್ತೇಜನ ನೀಡಿದ್ದಾರೆ. 2014ರಲ್ಲಿ ಗುವಾಹಟಿಯಲ್ಲಿ; 2015ರಲ್ಲಿ ಧೋರ್ಡೊ, ರಾನ್ ಆಫ್ ಕಚ್ ನಲ್ಲಿ; 2016ರಲ್ಲಿ ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ; 2017ರಲ್ಲಿ ಬಿಎಸ್ಎಫ್ ಅಕಾಡೆಮಿ, ತೇಕನ್ಪುರದಲ್ಲಿ; 2018ರಲ್ಲಿ ಕೆವಾಡಿಯಾದಲ್ಲಿ; 2019ರಲ್ಲಿ ಐಐಎಸ್ಇಆರ್, ಪುಣೆಯಲ್ಲಿ; ಮತ್ತು 2021ರಲ್ಲಿ ಲಕ್ನೋದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India among top nations on CEOs confidence on investment plans: PwC survey

Media Coverage

India among top nations on CEOs confidence on investment plans: PwC survey
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜನವರಿ 2025
January 21, 2025

Appreciation for PM Modi’s Effort Celebrating Culture and Technology