ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17ನೇ ನಾಗರಿಕ ಸೇವಾ ದಿನದ ಅಂಗವಾಗಿ ಏಪ್ರಿಲ್ 21 ರಂದು ಬೆಳಗ್ಗೆ 11 ಗಂಟೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ನಾಗರಿಕ ಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಗಳ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಲಿದ್ದಾರೆ.
ನಾಗರಿಕರ ಹಿತಕ್ಕಾಗಿ ಭಾರತದಾದ್ಯಂತದ ನಾಗರಿಕ ಸೇವಕರು ತಮ್ಮನ್ನು ತಾವು ಅರ್ಪಿಸಿಕೊಳ್ಳುವಂತೆ ಸಾರ್ವಜನಿಕ ಸೇವೆಗೆ ಬದ್ಧರಾಗಿರುವಂತೆ ಮತ್ತು ತಮ್ಮ ಕೆಲಸದಲ್ಲಿ ಔನ್ನತ್ಯ ಸಾಧಿಸಲು ಶ್ರಮಿಸುವಂತೆ ಪ್ರಧಾನಮಂತ್ರಿಯವರು ಸದಾ ಪ್ರೋತ್ಸಾಹಿಸಿದ್ದಾರೆ. ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಮಹತ್ವಾಕಾಂಕ್ಷಿ ಬ್ಲಾಕ್ ಗಳ ಕಾರ್ಯಕ್ರಮ ಮತ್ತು ನಾವಿನ್ಯತೆ ವಿಭಾಗಗಳಲ್ಲಿ ನಾಗರಿಕ ಸೇವಕರಿಗೆ ಈ ವರ್ಷ 16 ಪ್ರಶಸ್ತಿಗಳನ್ನು ಪ್ರಧಾನಮಂತ್ರಿಯವರು ನೀಡಲಿದ್ದಾರೆ. ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಮಾಡಿದ ಕೆಲಸಕ್ಕಾಗಿ ಅವರನ್ನು ಈ ಮೂಲಕ ಗುರುತಿಸಲಾಗುತ್ತದೆ.


