ಶೇರ್
 
Comments

ಗೌರವಾನ್ವಿತ,

ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ

ನಮಸ್ಕಾರ,

ಆಯುಬೊವನ್

ವಣಕ್ಕಂ,
ಗೌರವಾನ್ವಿತರೇ,

ಈ ವರ್ಚುವಲ್ ಶೃಂಗಸಭೆಗೆ ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಎಂದಿನಂತೆ ನಿಮ್ಮ ಮೊದಲ ಅಧಿಕೃತ ಭೇಟಿಗೆ ಭಾರತಕ್ಕೆ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಆ ಆಹ್ವಾನ ನಿಮಗೆ ಎಂದಿಗೂ ಇರುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ನೀವು ಈ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಈ ಶೃಂಗಸಭೆಗೆ ನೀವು ನನ್ನ ಆಹ್ವಾನವನ್ನು ಮನ್ನಿಸಿ ಪಾಲ್ಗೊಂಡಿರುವುದಕ್ಕೆ ನಾನು ನಿಮಗೆ ತುಂಬಾ ಧನ್ಯವಾದಗಳನ್ನು ಹೇಳಬಯಸುತ್ತೇನೆ.

ಪ್ರಧಾನಮಂತ್ರಿಗಳ ಸ್ಥಾನವನ್ನು ಅಲಂಕರಿಸಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಸಂಸದೀಯ ಚುನಾವಣೆಗಳಲ್ಲಿ ಎಸ್ಎಲ್ ಪಿಪಿಗೆ ಭಾರೀ ಗೆಲುವು ತಂದುಕೊಟ್ಟ ನಿಮಗೆ ಮತ್ತೊಮ್ಮೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು ನಿಮ್ಮ ನಾಯಕತ್ವದ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ತೋರಿಸುತ್ತದೆ. ಭಾರತ ಮತ್ತು ಶ್ರೀಲಂಕಾದ ನಡುವಿನ ಬಹುಮುಖಿ ಸಂಬಂಧಗಳಿಗೆ ಸಾವಿರಾರು ವರ್ಷಗಳ ಹಿಂದಿನ ಇತಿಹಾಸವಿದೆ.

ನಮ್ಮ ನೆರೆಹೊರೆ ಮೊದಲು ನೀತಿ ಮತ್ತು ನಮ್ಮ ಸಾಗರ್ ಸಿದ್ದಾಂತದಲ್ಲಿ ನಾವು ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳಿಗೆ ವಿಶೇಷ ಹಾಗೂ ಅಗ್ರ ಆದ್ಯತೆಯನ್ನು ನೀಡಿದ್ದೇವೆ. ಭಾರತ ಮತ್ತು ಶ್ರೀಲಂಕಾ, ಬಿಮ್ ಸ್ಟೆಕ್, ಐಒಆರ್ ಎ ಮತ್ತು ಸಾರ್ಕ್ ವೇದಿಕೆಗಳಲ್ಲಿ ಅತ್ಯಂತ ನಿಕಟ ಸಹಕಾರವನ್ನು ಕಾಯ್ದುಕೊಂಡಿವೆ.

 

ನಿಮ್ಮ ಪಕ್ಷದ ಇತ್ತೀಚಿನ ಗೆಲುವಿನ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳಲ್ಲಿ ಹೊಸ ಐತಿಹಾಸಿಕ ಅಧ್ಯಾಯ ಸೇರ್ಪಡೆ ಮಾಡಲು ಅತ್ಯುತ್ತಮ ಅವಕಾಶ ಒದಗಿ ಬಂದಿದೆ. ಎರಡೂ ದೇಶಗಳ ಜನರು ಹೊಸ ಭರವಸೆ ಮತ್ತು ಉತ್ಸಾಹದಿಂದ ನಮ್ಮನ್ನು ನೋಡುತ್ತಿದ್ದಾರೆ. ನೀವು ಸ್ವೀಕರಿಸಿರುವ ಬಲಿಷ್ಠ ಜನಾದೇಶ ಮತ್ತು ನಿಮ್ಮ ನೀತಿಗಳಿಗೆ ಸಂಸತ್ತಿನಿಂದ ನೀವು ಸ್ವೀಕರಿಸುತ್ತಿರುವ ಬಲವಾದ ಬೆಂಬಲದ ನೆರವಿನಿಂದ ದ್ವಿಪಕ್ಷೀಯ ಸಹಕಾರ ಸಂಬಂಧಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಲು ನೆರವಾಗಲಿದೆ ಎಂಬ ವಿಶ್ವಾಸ ನನಗಿದೆ.

ನಾನು ಪ್ರಧಾನಮಂತ್ರಿ ರಾಜಪಕ್ಸ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಾಡಬೇಕು ಎಂದು ಮನವಿ ಮಾಡುತ್ತೇನೆ:

ದೃಢೀಕೃತ ಹೇಳಿಕೆ: ಇದು ಅಂದಾಜು ಪಕ್ಕಾ ಅನುವಾದವಲ್ಲ, ಏಕೆಂದರೆ ಪ್ರಾಸ್ತಾವಿಕ ನುಡಿಗಳು ಹಿಂದಿಯಲ್ಲಿ ಇದ್ದವು.

 

Pariksha Pe Charcha with PM Modi
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Modi releases 8th installment worth over Rs 20,000 cr for PM-Kisan scheme

Media Coverage

Modi releases 8th installment worth over Rs 20,000 cr for PM-Kisan scheme
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2021
May 14, 2021
ಶೇರ್
 
Comments

PM Narendra Modi releases 8th instalment of financial benefit under PM- KISAN today

PM Modi has awakened the country from slumber to make India a global power