ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆ ಎಂಬ 4 ಸ್ತಂಭಗಳು ಎಲ್ಲಾ ಕ್ಷೇತ್ರಗಳಾದ್ಯಂತ ಉತ್ತಮ ಆಡಳಿತವನ್ನು ವೃದ್ಧಿಗೊಳಿಸಲು ನಮ್ಮ ಪ್ರಯತ್ನಗಳಿಗೆ ಚಾಲನೆ ನೀಡುತ್ತವೆ
ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಗುಣಮಟ್ಟ ಅತ್ಯಗತ್ಯ
ಬುದ್ದಿಹೀನ ಅನುಸರಣೆಗಳು ಮತ್ತು ಹಳತಾದ ನಿಯಮಗಳನ್ನು ಕೊನೆಗೊಳಿಸಿ
ಪ್ರಧಾನಮಂತ್ರಿ ಗತಿಶಕ್ತಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಯಶಸ್ಸಿನ ವ್ಯೂಹಾತ್ಮಕ ಯೋಜನೆ ನಿರ್ಮಿಸಿ

ಇಂದು ಕೊನೆಗೊಂಡ ದೆಹಲಿಯಲ್ಲಿ ನಡೆದ ಎರಡು ದಿನಗಳ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.

ಪ್ರಧಾನಮಂತ್ರಿ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಂವಾದದ ಸಮಯದಲ್ಲಿ ಅವರು ಒತ್ತು ನೀಡಿದ ವ್ಯಾಪಕ ಶ್ರೇಣಿಯ ವಿಷಯದ ಬಗ್ಗೆ ತಮ್ಮ  ಟ್ವೀಟ್ ಥ್ರೆಡ್‌ನಲ್ಲಿ, ಹೀಗೆ ವಿವರಿಸಿದರು.

ಪ್ರಧಾನಮಂತ್ರಿಯವರು ಈ ರೀತಿ ಸರಣಿ ಟ್ವೀಟ್ ಮಾಡಿದ್ದಾರೆ:

"ಕಳೆದ ಎರಡು ದಿನಗಳಿಂದ, ನಾವು ದೆಹಲಿಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ವ್ಯಾಪಕವಾದ ಚರ್ಚೆಗಳಿಗೆ ಸಾಕ್ಷಿಯಾಗಿದ್ದೇವೆ. ಜನರ ಜೀವನವನ್ನು ಇನ್ನಷ್ಟು ಸುಧಾರಿಸುವ ಮತ್ತು ಭಾರತದ ಅಭಿವೃದ್ಧಿ ಪಥವನ್ನು ಬಲಪಡಿಸುವ ವ್ಯಾಪಕ ಶ್ರೇಣಿಯ ವಿಷಯಗಳಿಗೆ ಕುರಿತು ನನ್ನ ಇಂದಿನ ಹೇಳಿಕೆಗಳಲ್ಲಿ ಹೇಳಿದ್ದೇನೆ, ಈಗ ಪುನಃ ಒತ್ತು ನೀಡಿದ್ದೇನೆ.

ಪ್ರಪಂಚದ ಕಣ್ಣುಗಳು ಭಾರತದ ಮೇಲೆ ಇರುವುದರಿಂದ, ನಮ್ಮ ಯುವಜನರ ಶ್ರೀಮಂತ ಪ್ರತಿಭೆಗಳ ಸಂಗ್ರಹದೊಂದಿಗೆ, ಸಾಧನೆಗಾಗಿ ಮುಂಬರುವ ವರ್ಷಗಳು ನಮ್ಮ ರಾಷ್ಟ್ರಕ್ಕೆ ಸೇರಿವೆ. ಅಂತಹ ಸಮಯದಲ್ಲಿ, ಮೂಲಸೌಕರ್ಯ, ಹೂಡಿಕೆ, ನಾವೀನ್ಯತೆ ಮತ್ತು ಒಳಗೊಳ್ಳುವಿಕೆಗಳೆಂಬ 4 ಸ್ತಂಭಗಳು ಎಲ್ಲಾ ಕ್ಷೇತ್ರಗಳಾದ್ಯಂತ ಉತ್ತಮ ಆಡಳಿತವನ್ನು ವೃದ್ಧಿಗೊಳಿಸಲು ನಮ್ಮ ಪ್ರಯತ್ನಗಳಿಗೆ ಚಾಲನೆ ನೀಡುತ್ತವೆ.

ನಮ್ಮ ಎಂ.ಎಸ್‌.ಎಂ.ಇ. ವಲಯವನ್ನು ಬಲಪಡಿಸುವುದನ್ನು ನಾವು ಮುಂದುವರಿಸಬೇಕು ಎಂಬುದು ನನ್ನ ದೃಢವಾದ ನಂಬಿಕೆ.  ಇದು ಆತ್ಮನಿರ್ಭರ್ ಆಗಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮುಖ್ಯವಾಗಿದೆ.  ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದು ಕೂಡಾ ಅಷ್ಟೇ ಮುಖ್ಯ. ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಗುಣಮಟ್ಟ ಅತ್ಯಗತ್ಯ ಎಂಬುದನ್ನು ಮನಗಂಡು ಅದನ್ನು ಪ್ರತಿ ಹಂತದಲ್ಲೂ ನಾವು ಎತ್ತಿ ತೋರಿಸಬೇಕಾಗಿದೆ.

ಬುದ್ದಿಹೀನ ಅನುಸರಣೆಗಳು ಮತ್ತು ಪುರಾತನ ಅನಾವಶ್ಯಕ ಕಾನೂನುಗಳು ಹಾಗೂ ಹಳತಾದ ನಿಯಮಗಳನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. ಭಾರತವು ಸಾಟಿಯಿಲ್ಲದ ಸುಧಾರಣೆಗಳನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ, ಮಿತಿಮೀರಿದ ನಿಯಂತ್ರಣ ಮತ್ತು ಬುದ್ದಿಹೀನ ನಿರ್ಬಂಧಗಳಿಗೆ ಯಾವುದೇ ಅವಕಾಶ ಇರುವುದಿವಿಲ್ಲ.

ಚರ್ಚಿಸಿದ ಇತರ ಕೆಲವು ಸಮಸ್ಯೆಗಳಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ಮತ್ತು ಈ ದೃಷ್ಟಿಯನ್ನು ಅರಿತುಕೊಳ್ಳುವಲ್ಲಿ ಯಶಸ್ವೀ ವ್ಯೂಹಾತ್ಮಕ ಯೋಜನೆಗಳನ್ನು ಹೇಗೆ ನಿರ್ಮಿಸುವುದು ಎಂಬುದೂ ಕೂಡಾ ಸೇರಿದೆ.  ಮಿಷನ್ ಲೈಫ್‌ ಗೆ ಚೈತನ್ಯವನ್ನು ಸೇರಿಸಲು ಮತ್ತು ವ್ಯಾಪಕ ಪ್ರಮಾಣದ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಅಂತರರಾಷ್ಟ್ರೀಯ ಸಿರಿಧಾನ್ಯ(ರಾಗಿ) ವರ್ಷವನ್ನು ಆಚರಿಸಲು ಮುಖ್ಯ ಕಾರ್ಯದರ್ಶಿಗಳನ್ನು ಸೂಚಿಸಲಾಗಿದೆ”.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP growth likely to stay strong at 7-7.2% in FY27 despite global risks: Report

Media Coverage

India’s GDP growth likely to stay strong at 7-7.2% in FY27 despite global risks: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಆಗಸ್ಟ್ 2026
August 30, 2026

Tiranga in Tashkent, Relief in Nepal: Soft Power Meets First Responder

Vocal for Local, Nari Shakti, Real Heroes: Mann Ki Baat’s Atmanirbhar Hour