ಗೌರವಾನ್ವಿತ ಅಧ್ಯಕ್ಷ ಲೀ,

ಎರಡೂ ದೇಶಗಳ ಗಣ್ಯ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ,

ನಮಸ್ಕಾರ!

ಅಧ್ಯಕ್ಷ ಲೀ ಅವರನ್ನು ಭಾರತಕ್ಕೆ ಅವರ ಮೊದಲ ಭೇಟಿಯಲ್ಲಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರ ಜೀವನವು ಅಭ್ಯುದಯ, ಸೇವೆ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಉದಾಹರಣೆಯಾಗಿ ನಿಂತಿದೆ. ಅವರು ಎದುರಿಸಿದ ಪ್ರತಿಯೊಂದು ಸವಾಲು ಜನರಿಗೆ ಸೇವೆ ಸಲ್ಲಿಸುವ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ. ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿದ್ದರೂ, ನಮ್ಮ ಮೊದಲ ಭೇಟಿಯಿಂದಲೇ ಅವರ ದೇಶದ ಮೇಲಿನ ಪ್ರೀತಿ ಮತ್ತು ಬಾಂಧವ್ಯ ಸ್ಪಷ್ಟವಾಗಿದೆ.

 

ಸ್ನೇಹಿತರೇ,

ಎಂಟು ವರ್ಷಗಳ ಅಂತರದ ನಂತರ ಕೊರಿಯಾ ಅಧ್ಯಕ್ಷರ ಭಾರತ ಭೇಟಿ ಬಹಳ ಮಹತ್ವದ್ದಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳು, ಮಾರುಕಟ್ಟೆ ಆರ್ಥಿಕತೆ ಮತ್ತು ಕಾನೂನಿನ ಆಡಳಿತದ ಗೌರವವು ನಮ್ಮ ಎರಡೂ ರಾಷ್ಟ್ರಗಳ ಡಿಎನ್‌ಎಯಲ್ಲಿ ಆಳವಾಗಿ ಹುದುಗಿದೆ. ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ನಮಗೆ ಸಾಮಾನ್ಯ ಸಮಾನ ದೃಷ್ಟಿಕೋನವಿದೆ. ಈ ಹಂಚಿಕೆಯ ತತ್ವಗಳ ಆಧಾರದ ಮೇಲೆ, ಕಳೆದ ದಶಕದಲ್ಲಿ ನಮ್ಮ ಸಂಬಂಧವು ಹೆಚ್ಚು ಕ್ರಿಯಾತ್ಮಕ ಮತ್ತು ವ್ಯಾಪಕವಾಗಿದೆ.

ಮತ್ತು ಇಂದು, ಅಧ್ಯಕ್ಷ ಲೀ ಅವರ ಭೇಟಿಯೊಂದಿಗೆ, ಈ ವಿಶ್ವಾಸಾರ್ಹ ಪಾಲುದಾರಿಕೆಯನ್ನು ಭವಿಷ್ಯದ ಪಾಲುದಾರಿಕೆಯಾಗಿ ಪರಿವರ್ತಿಸಲು ನಾವು ಸಜ್ಜಾಗಿದ್ದೇವೆ. ಚಿಪ್‌ಗಳಿಂದ ಹಡಗುಗಳವರೆಗೆ, ಪ್ರತಿಭೆಯಿಂದ ತಂತ್ರಜ್ಞಾನದವರೆಗೆ ಮತ್ತು ಪರಿಸರದಿಂದ ಶಕ್ತಿಯವರೆಗೆ, ಎಲ್ಲಾ ವಲಯಗಳಲ್ಲಿ ಸಹಕಾರಕ್ಕಾಗಿ ನಾವು ಹೊಸ ಅವಕಾಶಗಳನ್ನು  ಕಂಡುಕೊಳ್ಳುತ್ತೇವೆ. ಒಟ್ಟಾಗಿ, ನಮ್ಮ ಎರಡೂ ರಾಷ್ಟ್ರಗಳ ಪ್ರಗತಿ ಮತ್ತು ಸಮೃದ್ಧಿಯನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಸ್ನೇಹಿತರೇ,

ಭಾರತ ಮತ್ತು ಕೊರಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಇಂದು ಇಪ್ಪತ್ತೇಳು ಶತಕೋಟಿ ಡಾಲರ್‌ಗಳನ್ನು ತಲುಪಿದೆ. ಇದನ್ನು 2030ರ ವೇಳೆಗೆ ಐವತ್ತು ಶತಕೋಟಿ ಡಾಲರ್‌ಗಳಿಗೆ ಕೊಂಡೊಯ್ಯಲು ನಾವು ಇಂದು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.

ಎರಡೂ ದೇಶಗಳ ನಡುವಿನ ಹಣಕಾಸಿನ ಹರಿವನ್ನು ಸುಗಮಗೊಳಿಸಲು, ನಾವು ಭಾರತ-ಕೊರಿಯಾ ಹಣಕಾಸು ವೇದಿಕೆಯನ್ನು ಪ್ರಾರಂಭಿಸಿದ್ದೇವೆ. ವ್ಯಾಪಾರ ಸಹಕಾರವನ್ನು ಬಲಪಡಿಸಲು, ನಾವು ಕೈಗಾರಿಕಾ ಸಹಕಾರ ಸಮಿತಿಯನ್ನು ಸ್ಥಾಪಿಸಿದ್ದೇವೆ. ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳಲ್ಲಿ ಸಹಯೋಗವನ್ನು ಹೆಚ್ಚಿಸಲು, ನಾವು ಆರ್ಥಿಕ ಭದ್ರತಾ ಸಂವಾದವನ್ನು ಪ್ರಾರಂಭಿಸುತ್ತಿದ್ದೇವೆ.

ಕೊರಿಯನ್ ಕಂಪನಿಗಳು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು, ಭಾರತಕ್ಕೆ ಪ್ರವೇಶಿಸಲು ಅನುಕೂಲವಾಗುವಂತೆ, ನಾವು ಕೊರಿಯನ್ ಕೈಗಾರಿಕಾ ವಸಾಹತನ್ನು (ಪಟ್ಟಣವನ್ನು)  ಸಹ ಸ್ಥಾಪಿಸುತ್ತೇವೆ. ಇದಲ್ಲದೆ, ಮುಂದಿನ ವರ್ಷದೊಳಗೆ, ನಾವು ಭಾರತ-ಕೊರಿಯಾ ವ್ಯಾಪಾರ ಒಪ್ಪಂದವನ್ನು ಮೇಲ್ದರ್ಜೆಗೇರಿಸುತ್ತೇವೆ.

 

ಸ್ನೇಹಿತರೇ,

ಇಂದು, ನಾವು ಮುಂದಿನ ದಶಕದ ಯಶೋಗಾಥೆಗಳಿಗೆ ಅಡಿಪಾಯ ಹಾಕುತ್ತಿದ್ದೇವೆ. ಎ.ಐ., ಸೆಮಿಕಂಡಕ್ಟರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು, ನಾವು ಭಾರತ-ಕೊರಿಯಾ ಡಿಜಿಟಲ್ ಸೇತುವೆಯನ್ನು ಪ್ರಾರಂಭಿಸುತ್ತಿದ್ದೇವೆ. ಹಡಗು ನಿರ್ಮಾಣ, ಸುಸ್ಥಿರತೆ, ಉಕ್ಕು ಮತ್ತು ಬಂದರುಗಳಂತಹ ಕ್ಷೇತ್ರಗಳಲ್ಲಿ ನಾವು ತಿಳುವಳಿಕಾ ಒಡಂಬಡಿಕೆಗಳಿಗೆ  ಸಹಿ ಹಾಕುತ್ತಿದ್ದೇವೆ.

ಸಂಸ್ಕೃತಿ ಮತ್ತು ಸೃಜನಶೀಲ ಕೈಗಾರಿಕೆಗಳಲ್ಲಿ ಪರಸ್ಪರ ಸಹಕಾರದ ಮೂಲಕ, ನಾವು ಚಲನಚಿತ್ರ, ಅನಿಮೇಷನ್ ಮತ್ತು ಗೇಮಿಂಗ್‌ನಲ್ಲಿಯೂ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತೇವೆ. ಇಂದಿನ ವ್ಯಾಪಾರ ವೇದಿಕೆಯು ಈ ಅವಕಾಶಗಳನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಸ್ನೇಹಿತರೇ,

ಭಾರತ ಮತ್ತು ಕೊರಿಯಾ ಸಾವಿರಾರು ವರ್ಷಗಳ ಹಿಂದಿನ ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿವೆ. ಎರಡು ಸಹಸ್ರಮಾನಗಳ ಹಿಂದಿನ ಅಯೋಧ್ಯೆಯ ರಾಜಕುಮಾರಿ ಸುರಿರತ್ನ ಮತ್ತು ಕೊರಿಯಾದ ರಾಜ ಕಿಮ್ ಸುರೋ ಅವರ ಕಥೆಯು ನಮ್ಮ ಹಂಚಿಕೆಯ ಪರಂಪರೆಯ ಭಾಗವಾಗಿದೆ.

ಇಂದು, ಕೆ-ಪಾಪ್ ಮತ್ತು ಕೆ-ನಾಟಕಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಅದೇ ರೀತಿ, ಕೊರಿಯಾದಲ್ಲಿಯೂ ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಮನ್ನಣೆ ಬೆಳೆಯುತ್ತಿದೆ. ಅಧ್ಯಕ್ಷ ಲೀ ಸ್ವತಃ ಭಾರತೀಯ ಸಿನಿಮಾದ ಅಭಿಮಾನಿಯಾಗಿರುವುದು ನಮಗೆ ಸಂತೋಷ ತಂದಿದೆ. ಈ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು, ನಾವು 2028 ರಲ್ಲಿ ಭಾರತ-ಕೊರಿಯಾ ಸ್ನೇಹ ಉತ್ಸವವನ್ನು ಆಯೋಜಿಸುತ್ತೇವೆ.

ಅದೇ ಸಮಯದಲ್ಲಿ, ಜನರಿಂದ ಜನರಿಗೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು, ನಾವು ಶಿಕ್ಷಣ, ಸಂಶೋಧನೆ ಮತ್ತು ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಉತ್ತೇಜಿಸುತ್ತೇವೆ.

ಸ್ನೇಹಿತರೇ,

ಜಾಗತಿಕ ಉದ್ವಿಗ್ನತೆಯ ಈ ಸಮಯದಲ್ಲಿ, ಭಾರತ ಮತ್ತು ಕೊರಿಯಾ ಒಟ್ಟಾಗಿ ಶಾಂತಿ ಮತ್ತು ಸ್ಥಿರತೆಯ ಸಂದೇಶವನ್ನು ರವಾನಿಸುತ್ತವೆ. ಇಂದು ಕೊರಿಯಾ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೇರುತ್ತಿರುವುದು ನಮಗೆ ಸಂತೋಷ ತಂದಿದೆ. ನಮ್ಮ ಹಂಚಿಕೆಯ ಪ್ರಯತ್ನಗಳ ಮೂಲಕ, ನಾವು ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್‌ಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ.

 

ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯವೆಂದು ನಾವು ಒಪ್ಪುತ್ತೇವೆ.

ಘನತೆವೆತ್ತರೇ,

ಸುಮಾರು ನೂರು ವರ್ಷಗಳ ಹಿಂದೆ, ಭಾರತದ ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಕೊರಿಯಾವನ್ನು "ಪೂರ್ವದ ದೀಪ" ಎಂದು ಕರೆದರು. ಇಂದು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ನಾವು ಕೆಲಸ ಮಾಡುತ್ತಿರುವಾಗ, ಕೊರಿಯಾ ಈ ಪ್ರಯಾಣದಲ್ಲಿ ಪ್ರಮುಖ ಪಾಲುದಾರನಾಗಿ ನಿಂತಿದೆ.

 

ನಮ್ಮ ಪಾಲುದಾರಿಕೆಯ ಮೂಲಕ, ನಮ್ಮ ಎರಡು ರಾಷ್ಟ್ರಗಳ ಮಾತ್ರವಲ್ಲದೆ ಇಡೀ ಪ್ರಪಂಚದ ಪ್ರಗತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡೋಣ.

ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi's record run: Assessing 12 years of governance and change

Media Coverage

PM Modi's record run: Assessing 12 years of governance and change
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಜೂನ್ 2026
June 06, 2026

Viksit Bharat Rising: PM Modi's Vision Powers Energy, Defense & Digital Dominance