ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದ ಸರ್ಕಾರದ 9 ವರ್ಷಗಳ ಕುರಿತು 2014 ರಿಂದ ಸರ್ಕಾರದ ಬಗ್ಗೆ ನಾಗರಿಕರು ಮಾಡಿದ ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;

“ಬೆಳಿಗ್ಗೆಯಿಂದ, ನಾನು ಮೋದಿ ಸರ್ಕಾರದ 9 ವರ್ಷಗಳ ಕುರಿತು ಅನೇಕ ಟ್ವೀಟ್ಗಳನ್ನು ನೋಡುತ್ತಿದ್ದೇನೆ, ಇದರಲ್ಲಿ ಜನರು 2014 ರಿಂದ ನಮ್ಮ ಸರ್ಕಾರದ ಬಗ್ಗೆ ಅವರು ಮೆಚ್ಚಿದ ಅಂಶಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ. ಅಂತಹ ಪ್ರೀತಿಯನ್ನು ಯಾವಾಗಲೂ ನಾವು  ವಿನಮ್ರವಾಗಿ ಸ್ವೀಕರಿಸುವೆವು ಮತ್ತು ಇದು ನನಗೆ  ದೇಶದ ಜನರಿಗಾಗಿ ಇನ್ನಷ್ಟು ಶ್ರಮಿಸಲು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ."

 

ನಾಗರಿಕರ ಟ್ವೀಟ್ಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಹೇಳಿದರು:

"ಕಳೆದ 9 ವರ್ಷಗಳಲ್ಲಿ ನಾವು ಬಹಳಷ್ಟನ್ನು ಮಾಡಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ನಾವು ಇನ್ನೂ ಹೆಚ್ಚಿನದನ್ನು ಮಾಡಲು ಬಯಸುತ್ತೇವೆ, ಇದರಿಂದಾಗಿ ನಾವು ಅಮೃತ ಕಾಲದಲ್ಲಿ ಬಲಿಷ್ಠ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು."

 

“ಭಾರತದ ಜನರು ಪ್ರಮುಖ ಭರವಸೆಗಳನ್ನು ಈಡೇರಿಸಲು ಸಮರ್ಥವಾಗಿರುವ ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಿರುವುದರಿಂದ ನಮ್ಮ ಸಾಧನೆಗಳು ಸಾಧ್ಯವಾಗಿದೆ. ಈ ಅಪ್ರತಿಮ ಬೆಂಬಲವೇ ದೊಡ್ಡ ಸಾಮರ್ಥ್ಯದ ಮೂಲವಾಗಿದೆ.

 

"ಎನ್‌ ಡಿ ಎ  ಸರ್ಕಾರವು ಜೀವನವನ್ನು ಉತ್ತಮವಾಗಿಸಲು  ಮತ್ತು ಭಾರತದ ಅಭಿವೃದ್ಧಿ ಪಯಣಕ್ಕೆ ಆವೇಗವನ್ನು ನೀಡಲು ಹಲವಾರು ಪ್ರಯತ್ನಗಳನ್ನು ಮಾಡಿದೆ."

 

"ನೀವು ಪ್ರಮುಖ ಮೂಲಸೌಕರ್ಯ ಮತ್ತು 'ಈಸ್ ಆಫ್ ಲಿವಿಂಗ್' ಯೋಜನೆಗಳ ಬಗ್ಗೆ ಎತ್ತಿ ತೋರಿಸಿರುವಿರಿ ಅದು ತಳಮಟ್ಟದಲ್ಲಿ ಬಹಳ ಪ್ರಭಾವಶಾಲಿಯಾಗಿದೆ."

 

"140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ಅವಕಾಶ ಸಿಕ್ಕಿರುವುದಕ್ಕೆ ನಾನು ನಿಜವಾಗಿಯೂ ಅಭಾರಿಯಾಗಿದ್ದೇನೆ."

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India can be a factor of stabilisation in global affairs: Chile backs New Delhi bid for UNSC permanent seat

Media Coverage

India can be a factor of stabilisation in global affairs: Chile backs New Delhi bid for UNSC permanent seat
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಜನವರಿ 2026
January 10, 2026

Viksit Bharat Unleashed: From Farms to Hypersonics Under PM Modi's Vision