" ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ನಮ್ಮ ಪೃಥ್ವಿ ಸಂರಕ್ಷಿಸುವ ಹೋರಾಟದಲ್ಲಿ ಪ್ರಮುಖರಾಗಿದ್ದಾರೆ. ಇದು ಕಾರ್ಯಾಚರಣೆ ಜೀವನದ ತಿರುಳು"
“ಹವಾಮಾನ ಬದಲಾವಣೆಯನ್ನು ಕಾನ್ಫರೆನ್ಸ್ ಟೇಬಲ್‌ಗಳ ಮೂಲಕ ಹೋರಾಡಲು ಸಾಧ್ಯವಿಲ್ಲ. ಇದನ್ನು ಪ್ರತಿ ಮನೆಯ ಊಟದ ಮೇಜುಗಳಿಂದಲೇ ಹೋರಾಡಬೇಕು”
" ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಮಿಷನ್ ಲೈಫ್ ಪ್ರಜಾಪ್ರಭುತ್ವಗೊಳಿಸಲಿದೆ"
"ಸಾಮೂಹಿಕ ಚಳುವಳಿಗಳು ಮತ್ತು ನಡವಳಿಕೆಯ ಬದಲಾವಣೆ ವಿಷಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಭಾರತದ ಜನರು ಬಹಳಷ್ಟು ಕೆಲಸ ಮಾಡಿದ್ದಾರೆ"
"ನಡವಳಿಕೆಯ ಉಪಕ್ರಮಗಳಿಗೂ ಸಾಕಷ್ಟು ಹಣಕಾಸು ವಿಧಾನಗಳನ್ನು ರೂಪಿಸುವ ಅಗತ್ಯವಿದೆ. ಮಿಷನ್ ಲೈಫ್‌ನಂತಹ ವರ್ತನೆಯ ಉಪಕ್ರಮಗಳ ಕಡೆಗೆ ವಿಶ್ವ ಬ್ಯಾಂಕ್‌ನ ಬೆಂಬಲದ ಪ್ರದರ್ಶನವು ಗುಣಿಸುವ ಪರಿಣಾಮಗಳನ್ನು ನೀಡಲಿದೆ

 ‘ಮೇಕಿಂಗ್ ಇಟ್ ಪರ್ಸನಲ್: ಹೌ ಬಿಹೇವಿಯರಲ್ ಚೇಂಜ್ ಕ್ಯಾನ್ ಟ್ಯಾಕಲ್ ಕ್ಲೈಮೇಟ್ ಚೇಂಜ್’ ಶೀರ್ಷಿಕೆಯ ವಿಶ್ವ ಬ್ಯಾಂಕ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ನಲ್ಲಿ ಭಾಷಣ ಮಾಡಿದರು.

ಹವಾಮಾನ ಬದಲಾವಣೆ ಹತ್ತಿಕುವ ಶೀರ್ಷಿಕೆಗೆ ಪೂರಕವಾಗಿ ತಮ್ಮ ವೈಯಕ್ತಿಕ ಸಂಪರ್ಕ ಇದೆ. ಇದು ಜಾಗತಿಕ ಚಳುವಳಿಯಾಗುತ್ತಿರುವುದು ಸಂತೋಷದಾಯಕ ವಿಚಾರ ಎಂದರು. ಚಾಣಕ್ಯನನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, ಸಣ್ಣ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡಿದರೆ ದೊಡ್ಡ ಕಾರ್ಯಗಳು ಫಲಿಸುತ್ತವೆ. ಸ್ವಂತ ಗ್ರಹವನ್ನು ಸಂರಕ್ಷಿಸಲು ನಡೆಸುವ ಪ್ರತಿಯೊಂದು ಒಳ್ಳೆಯ ಕಾರ್ಯವು ಅತ್ಯಲ್ಪವೆಂದು ತೋರುತ್ತದೆ. ಆದರೆ ಪ್ರಪಂಚದಾದ್ಯಂತ ಶತಕೋಟಿ ಜನರು ಇದನ್ನು ಒಟ್ಟಾಗಿ ಮಾಡಿದಾಗ, ಪರಿಣಾಮವು ದೊಡ್ಡದಾಗಿರುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳು ನಮ್ಮ ಗ್ರಹದ ಸಂರಕ್ಷಣೆ ವಿರುದ್ಧದ ಹೋರಾಟದಲ್ಲಿ ಪ್ರಮುಖರಾಗುತ್ತಾರೆ ಎಂದು ನಾವು ನಂಬುತ್ತೇವೆ. ಇದೇ ಮಿಷನ್ ಲೈಫ್‌ನ ತಿರುಳಾಗಿದೆ. ಲೈಫ್ ಆಂದೋಲನದ ಉಗಮದ ಕುರಿತು ಮಾತನಾಡುತ್ತಾ, 2015ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ವರ್ತನೆಯ ಬದಲಾವಣೆಯ ಅಗತ್ಯತೆ ಕುರಿತ ಚರ್ಚೆ ಮತ್ತು 2022 ಅಕ್ಟೋಬರ್ ನಲ್ಲಿ  ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರು ಮಿಷನ್ ಲೈಫ್ ಪ್ರಾರಂಭಿಸಿದರು ಎಂದು ನೆನಪಿಸಿಕೊಂಡ ಪ್ರಧಾನಿ, ಸಿಒಪಿ-27ರ ಫಲಿತಾಂಶದ ದಾಖಲೆಯ ಮುನ್ನುಡಿಯು ಸುಸ್ಥಿರ ಜೀವನಶೈಲಿ ಮತ್ತು ಬಳಕೆಯ ಬಗ್ಗೆ ಹೇಳುತ್ತದೆ ಎಂದರು. ಇದು ಕೇವಲ ಸರ್ಕಾರವಲ್ಲ, ಆದರೆ ಎಲ್ಲರೂ ಕೊಡುಗೆ ನೀಡಬಹುದು ಎಂಬುದನ್ನು ಜನರು ಅರ್ಥ ಮಾಡಿಕೊಂಡರೆ, ಅವರ ಆತಂಕವು ಕಾರ್ಯರೂಪಕ್ಕೆ ತಿರುಗುತ್ತದೆ. “ಹವಾಮಾನ ಬದಲಾವಣೆಯನ್ನು ಸಮ್ಮೇಳನದ ಚರ್ಚೆ, ಸಂವಾದ ಕೋಷ್ಟಕಗಳಿಂದ ಮಾತ್ರ ಹೋರಾಡಲಾಗುವುದಿಲ್ಲ. ಪ್ರತಿ ಮನೆಯ ಊಟದ ಮೇಜುಗಳಿಂದಲೇ ಹೋರಾಡಬೇಕು. ಒಂದು ಕಲ್ಪನೆಯು ಚರ್ಚೆಯ ಮೇಜುಗಳಿಂದ ಊಟದ ಮೇಜುಗಳಿಗೆ ಚಲಿಸಿದಾಗ, ಅದು ಸಾಮೂಹಿಕ ಆಂದೋಲನವಾಗುತ್ತದೆ. ಪ್ರತಿ ಕುಟುಂಬ ಮತ್ತು ವ್ಯಕ್ತಿಯ ಆಯ್ಕೆಗಳಿಗೆ ಗ್ರಹವು ಪ್ರಮಾಣ ಮತ್ತು ವೇಗ ಒದಗಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ಮಿಷನ್ ಲೈಫ್ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಪ್ರಜಾಪ್ರಭುತ್ವಗೊಳಿಸುತ್ತದೆ. ತಮ್ಮ ದೈನಂದಿನ ಜೀವನದ ಸರಳವಾದ ಕಾರ್ಯಗಳು ಶಕ್ತಿಯುತವಾಗಿವೆ ಎಂದು ಜನರು ಜಾಗೃತರಾದಾಗ, ಪರಿಸರದ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.

 

ಶ್ರೀ ಮೋದಿ ಅವರು ತಮ್ಮ ಚಿಂತನೆಗಳನ್ನು ಭಾರತದ ಉದಾಹರಣೆಗಳೊಂದಿಗೆ ವಿವರಿಸಿದರು. ಸಾಮೂಹಿಕ ಆಂದೋಲನಗಳು ಮತ್ತು ನಡವಳಿಕೆಯ ಬದಲಾವಣೆಯ  ವಿಷಯದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಭಾರತದ ಜನರು ಬಹಳಷ್ಟು ಕೆಲಸ ಮಾಡಿದ್ದಾರೆ. ಸುಧಾರಿತ ಲಿಂಗ ಅನುಪಾತ, ಬೃಹತ್ ಸ್ವಚ್ಛತಾ ಆಂದೋಲನ, ಎಲ್ಇಡಿ ಬಲ್ಬ್ ಗಳ ಅಳವಡಿಕೆಯ ಉದಾಹರಣೆಗಳನ್ನು ನೀಡಿದರು, ಇದು ಪ್ರತಿ ವರ್ಷ ಸುಮಾರು 39 ದಶಲಕ್ಷ ಟನ್ ಇಂಗಾಲ ಹೊರಸೂಸುವಿಕೆ ತಪ್ಪಿಸಲು ಸಹಾಯ ಮಾಡುತ್ತದೆ. ಸಣ್ಣ ಅಥವಾ ಸೂಕ್ಷ್ಮ ನೀರಾವರಿ ಮೂಲಕ ಸುಮಾರು 7 ಲಕ್ಷ ಹೆಕ್ಟೇರ್ ಕೃಷಿ ಭೂಮಿ ವ್ಯಾಪ್ತಿಗೆ ನೀರನ್ನು ಉಳಿಸಲಾಗುತ್ತದೆ. ಮಿಷನ್ ಲೈಫ್ ಅಡಿ, ಸರ್ಕಾರದ ಪ್ರಯತ್ನಗಳು ಸ್ಥಳೀಯ ಸಂಸ್ಥೆಗಳನ್ನು ಪರಿಸರ ಸ್ನೇಹಿ ಮಾಡುವುದು, ನೀರಿನ ಉಳಿತಾಯ, ಇಂಧನ ಉಳಿತಾಯ, ತ್ಯಾಜ್ಯ ಮತ್ತು ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ನೈಸರ್ಗಿಕ ಕೃಷಿ ಅಳವಡಿಕೆ, ಸಿರಿಧಾನ್ಯಗಳ ಉತ್ತೇಜನ ಮುಂತಾದ ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿದೆ ಎಂದು ಮೋದಿ ತಿಳಿಸಿದರು. . ಈ ಪ್ರಯತ್ನಗಳು 22 ಶತಕೋಟಿ ಯೂನಿಟ್‌ ಇಂಧನ ಉಳಿಸುತ್ತದೆ, 9 ಟ್ರಿಲಿಯನ್ ಲೀಟರ್ ನೀರನ್ನು ಉಳಿಸುತ್ತದೆ, 375 ದಶಲಕ್ಷ ಟನ್ ತ್ಯಾಜ್ಯ ಕಡಿಮೆ ಮಾಡುತ್ತಿದೆ, ಸುಮಾರು 1 ದಶಲಕ್ಷ ಟನ್ ಇ-ತ್ಯಾಜ್ಯ ಮರುಬಳಕೆ ಮಾಡುತ್ತದೆ ಮತ್ತು ಉತ್ಪಾದಿಸುತ್ತದೆ. 2030ರ ವೇಳೆಗೆ ಸುಮಾರು 170 ದಶಲಕ್ಷ ಡಾಲರ್ ಹೆಚ್ಚುವರಿ ವೆಚ್ಚ ಉಳಿತಾಯ ಮಾಡುತ್ತದೆ. “ಇದಲ್ಲದೆ, ಇದು 15 ಶತಕೋಟಿ ಟನ್ ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಇದು ಎಷ್ಟು ದೊಡ್ಡದು ಎಂದು ತಿಳಿಯಲು ನಾನು ನಿಮಗೆ ಹೋಲಿಕೆ ನೀಡುತ್ತೇನೆ, ಆಹಾರ ಮತ್ತು ಕೃಷಿ ಸಂಘಟನೆ(FAO)ಯ ವರದಿ ಪ್ರಕಾರ, 2020 ರಲ್ಲಿ ಜಾಗತಿಕ ಪ್ರಾಥಮಿಕ ಬೆಳೆ ಉತ್ಪಾದನೆ ಸುಮಾರು 9 ಶತಕೋಟಿ ಟನ್‌ಗಳಷ್ಟಿತ್ತು” ಎಂದು ಅವರು ವಿವರಿಸಿದರು.

ವಿಶ್ವಾದ್ಯಂತ ದೇಶಗಳನ್ನು ಪ್ರೋತ್ಸಾಹಿಸುವಲ್ಲಿ ಜಾಗತಿಕ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಹವಾಮಾನ ಬದಲಾವಣೆ ಹತ್ತಿಕ್ಕಲು ವಿಶ್ವಬ್ಯಾಂಕ್ ಸಮೂಹವು ಹಣಕಾಸು ನೆರವು ಪ್ರಮಾಣವನ್ನು 26%ರಿಂದ 35%ಗೆ ಹೆಚ್ಚಿಸುವ ಪ್ರಸ್ತಾಪವನ್ನು ಉಲ್ಲೇಖಿಸಿದ ಪ್ರಧಾನಿ, ಈ ಹಣಕಾಸು ನೆರವು ಸಾಮಾನ್ಯವಾಗಿ ಸಾಂಪ್ರದಾಯಿಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಆದರೆ "ಮಾನವ ವರ್ತನೆ ಅಥವಾ ನಡವಳಿಕೆ ಬದಲಾವಣೆ ಉಪಕ್ರಮಗಳಿಗೂ ಸಾಕಷ್ಟು ಹಣಕಾಸು ಒದಗಿಸುವ ಅಗತ್ಯವಿದೆ. ಮಿಷನ್ ಲೈಫ್‌ನಂತಹ ವರ್ತನೆಯ ಉಪಕ್ರಮಗಳ ಕಡೆಗೆ ವಿಶ್ವ ಬ್ಯಾಂಕ್‌ನ ಬೆಂಬಲದ ಪ್ರದರ್ಶನವು ಗುಣಿಸುವ ಪರಿಣಾಮಗಳನ್ನು ಬೀರುತ್ತದೆ" ಎಂದು ಅವರು ಪ್ರತಿಪಾದಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'Team Bharat' At Davos 2025: How India Wants To Project Vision Of Viksit Bharat By 2047

Media Coverage

'Team Bharat' At Davos 2025: How India Wants To Project Vision Of Viksit Bharat By 2047
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಜನವರಿ 2025
January 22, 2025

Appreciation for PM Modi for Empowering Women Through Opportunities - A Decade of Beti Bachao Beti Padhao

Citizens Appreciate PM Modi’s Effort to bring Growth in all sectors