ಎಲ್ಲರಿಗೂ ಶುಭಾಶಯಗಳು!
ಇದು 2020ರ ಪ್ರಥಮ ಅಧಿವೇಶನ. ಇದು ಈ ದಶಕದ ಪ್ರಥಮ ಅಧಿವೇಶನವೂ ಆಗಿದೆ. ನಾವು ಈ ಅಧಿವೇಶನವನ್ನು ಈ ದಶಕದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಿ ಪರಿವರ್ತಿಸಲು ನಾವು ಶ್ರಮಿಸಬೇಕು. ಇಂದು ಮಾನ್ಯ ರಾಷ್ಟ್ರಪತಿಯವರು ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಮತ್ತು ನಾಳೆ ಈ ವರ್ಷದ ಬಜೆಟ್ ಮಂಡನೆಯಾಗಲಿದೆ. ಈ ಅಧಿವೇಶನವು ಸಾಧ್ಯವಾದಷ್ಟೂ ಹೆಚ್ಚಿನ ಆರ್ಥಿಕ ವಿಚಾರಗಳ ಬಗ್ಗೆ ಮತ್ತು ಜಾಗತಿಕ ಆರ್ಥಿಕ ಸನ್ನಿವೇಶದ ಲಾಭವನ್ನು ಭಾರತ ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಗಮನ ಹರಿಸಲಿ. ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುವ ಮೂಲಕ ಭಾರತ ಜಾಗತಿಕ ಸನ್ನಿವೇಶದ ಗರಿಷ್ಠ ಪ್ರಯೋಜನ ಪಡೆಯುವಂತಾಗಲಿ.



ನಮ್ಮ ಸರ್ಕಾರ ಶೋಷಿತರು, ವಂಚಿತ ವರ್ಗಗಳು, ತುಳಿತಕ್ಕೊಳಗಾದವರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿ. ಈ ದಶಕದಲ್ಲಿಯೂ ಗಮನ ಹರಿಸುತ್ತೇವೆ. ನಾನು ಆರ್ಥಿಕ ವಿಚಾರಗಳು ಮತ್ತು ಜನರ ಸಬಲೀಕರಣ ಕುರಿತಂತೆ ಎರಡೂ ಸದನಗಳಲ್ಲಿ ಹೆಚ್ಚು ವಿಸ್ತೃತ ಮತ್ತು ಉತ್ತಮ ಚರ್ಚೆಯನ್ನು ನಿರೀಕ್ಷಿಸುತ್ತೇನೆ. ನಮ್ಮ ಚರ್ಚೆಯ ಗುಣಮಟ್ಟವು ಮುಂದಿನ ದಿನಗಳಲ್ಲಿ ಹೆಚ್ಚು ಸಮೃದ್ಧವಾಗಬೇಕು. ಈ ನಂಬಿಕೆಯೊಂದಿಗೆ, ನಾನು ನಿಮಗೆ ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಸ್ಕಾರ!


