ಗೌರವಾನ್ವಿತ ಪ್ರಧಾನಮಂತ್ರಿ ಹಾಗು ನನ್ನ ಸ್ನೇಹಿತ ಅನ್ವರ್ ಇಬ್ರಾಹಿಂ,
ಘನತೆವೇತ್ತ ಗಣ್ಯರೇ
ಎಲ್ಲ ಗೌರವಾನ್ವಿತರೇ,

 

ನಮಸ್ಕಾರ.


ನನ್ನ ಆಸಿಯಾನ್ ಕುಟುಂಬವನ್ನು ಮತ್ತೊಮ್ಮೆ ಸೇರಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ.
ಆಸಿಯಾನ್‌ನ ಯಶಸ್ವಿ ಅಧ್ಯಕ್ಷತೆಗಾಗಿ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತದ ದೇಶದ ಸಂಯೋಜಕತ್ವದ ಪಾತ್ರವನ್ನು ಸಮರ್ಥವಾಗಿ ಪೂರೈಸಿದ್ದಕ್ಕಾಗಿ ಫಿಲಿಪೀನ್ಸ್ ಅಧ್ಯಕ್ಷ ಮಾರ್ಕೋಸ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮತ್ತು ಆಸಿಯಾನ್‌ನ ಹೊಸ ಸದಸ್ಯರಾಗಿ ಟಿಮೋರ್-ಲೆಸ್ಟೆ ಅವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಭಾರತದ ಜನರ ಪರವಾಗಿ, ರಾಜಮಾತೆಯ ನಿಧನಕ್ಕೆ ರಾಜಮನೆತನ ಮತ್ತು ಥೈಲ್ಯಾಂಡ್ ಜನರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೇ,


ಭಾರತ ಮತ್ತು ಆಸಿಯಾನ್ ಒಟ್ಟಾಗಿ ವಿಶ್ವದ ಜನಸಂಖ್ಯೆಯ ಕಾಲು ಭಾಗದಷ್ಟನ್ನು ಪ್ರತಿನಿಧಿಸುತ್ತವೆ. ನಾವು ಭೌಗೋಳಿಕತೆಯನ್ನು ಹಂಚಿಕೊಳ್ಳುವುದಲ್ಲದೆ; ಆಳವಾದ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆಯ ಮೌಲ್ಯಗಳನ್ನೂ  ಹೊಂದಿದ್ದೇವೆ.
 

ಜಾಗತಿಕ ದಕ್ಷಿಣದಲ್ಲಿ ನಾವು ಸಹಚರರು. ನಾವು ವಾಣಿಜ್ಯ ಪಾಲುದಾರರು ಮಾತ್ರವಲ್ಲದೆ ಸಾಂಸ್ಕೃತಿಕ ಪಾಲುದಾರರು ಕೂಡ. ಆಸಿಯಾನ್ ಭಾರತದ ಆಕ್ಟ್ ಈಸ್ಟ್ ನೀತಿಯ ಮೂಲಾಧಾರವಾಗಿದೆ. ಭಾರತ ಸದಾ ಆಸಿಯಾನ್ ಕೇಂದ್ರೀಯತೆ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್‌ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬೆಂಬಲಿಸಿದೆ.
 

ಅನಿಶ್ಚಿತತೆಯ ಈ ಯುಗದಲ್ಲಿಯೂ ಸಹ, ಭಾರತ-ಆಸಿಯಾನ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಮತ್ತು ನಮ್ಮ ಈ ಬಲವಾದ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿ ಹೊರಹೊಮ್ಮುತ್ತಿದೆ.
 

ಸ್ನೇಹಿತರೇ,
 

ಈ ವರ್ಷದ ಆಸಿಯಾನ್ ಶೃಂಗಸಭೆಯ ವಿಷಯ ಶೀರ್ಷಿಕೆ "ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ." ಈ ವಿಷಯವು ನಮ್ಮ ಜಂಟಿ ಪ್ರಯತ್ನಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ, ಅದು ಡಿಜಿಟಲ್ ಸೇರ್ಪಡೆಯಾಗಿರಲಿ ಅಥವಾ ಪ್ರಸ್ತುತ ಜಾಗತಿಕ ಸವಾಲುಗಳ ನಡುವೆ ಆಹಾರ ಭದ್ರತೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳಾಗಿರಲಿ ಅದು ಜಂಟಿ ಪ್ರಯತ್ನಗಳಲ್ಲಿ ಅಡಕಗೊಂಡಿದೆ.  ಭಾರತವು ಈ ಆದ್ಯತೆಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಅವುಗಳನ್ನು ಜೊತೆಯಾಗಿ ಮುಂದುವರಿಸಲು ಬದ್ಧವಾಗಿದೆ.

 

ಸ್ನೇಹಿತರೇ,
 

ಪ್ರತಿಯೊಂದು ವಿಪತ್ತಿನ ಸಂದರ್ಭದಲ್ಲಿಯೂ ಭಾರತವು ತನ್ನ ಆಸಿಯಾನ್ ಸ್ನೇಹಿತರೊಂದಿಗೆ ದೃಢವಾಗಿ ನಿಂತಿದೆ. ಎಚ್.ಎ.ಡಿ.ಆರ್. ಕಡಲ ಭದ್ರತೆ ಮತ್ತು ನೀಲಿ ಆರ್ಥಿಕತೆಯಲ್ಲಿ ನಮ್ಮ ಸಹಕಾರವು ವೇಗವಾಗಿ ಬೆಳೆಯುತ್ತಿದೆ. ಈ ದೃಷ್ಟಿಯಿಂದ, ನಾವು 2026 ಅನ್ನು "ಆಸಿಯಾನ್-ಭಾರತ ಕಡಲ ಸಹಕಾರ ವರ್ಷ" ಎಂದು ಘೋಷಿಸುತ್ತಿದ್ದೇವೆ.
 

ಇದೇ ವೇಳೆ, ನಾವು ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ ಮತ್ತು ಸೈಬರ್ ಭದ್ರತೆಯಲ್ಲಿ ನಮ್ಮ ಸಹಕಾರವನ್ನು ಸ್ಥಿರವಾಗಿ ಮುಂದುವರಿಸುತ್ತಿದ್ದೇವೆ. ನಮ್ಮ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
 

ಸ್ನೇಹಿತರೇ,
 

21ನೇ ಶತಮಾನವು ನಮ್ಮ ಶತಮಾನ, ಭಾರತ ಮತ್ತು ಆಸಿಯಾನ್‌ನ ಶತಮಾನ. ಆಸಿಯಾನ್ ಸಮುದಾಯ ದೃಷ್ಟಿ 2045 ಮತ್ತು ವಿಕಸಿತ ಭಾರತ್ 2047ರ ಗುರಿಯು ಸರ್ವ ಮಾನವೀಯತೆಗೆ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಿಮ್ಮೆಲ್ಲರ ಜೊತೆಗೆ, ಭಾರತವು ಈ ದಿಕ್ಕಿನಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಬದ್ಧವಾಗಿದೆ.

 

ಸ್ನೇಹಿತರೇ,
 

21ನೇ ಶತಮಾನವು ನಮ್ಮ ಶತಮಾನ, ಭಾರತ ಮತ್ತು ಆಸಿಯಾನ್‌ನ ಶತಮಾನ. ಆಸಿಯಾನ್ ಸಮುದಾಯ ದೃಷ್ಟಿ 2045 ಮತ್ತು ವಿಕಸಿತ ಭಾರತ್ 2047ರ ಗುರಿಯು ಸರ್ವ ಮಾನವೀಯತೆಗೆ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಿಮ್ಮೆಲ್ಲರ ಜೊತೆಗೆ, ಭಾರತವು ಈ ದಿಕ್ಕಿನಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಬದ್ಧವಾಗಿದೆ.
 

ತುಂಬಾ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಜನವರಿ 2026
January 19, 2026

From One-Horned Rhinos to Global Economic Power: PM Modi's Vision Transforms India