ಹಿಮಾಚಲ ಪ್ರದೇಶದ 75 ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ರಾಜ್ಯದ ಜನರಿಗೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ 75 ನೇ ಸ್ಥಾಪನಾ ದಿನ ಬಂದಿರುವುದು ಸಂತೋಷದ ಕಾಕತಾಳೀಯ ಎಂದು ಅವರು ತಿಳಿಸಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಅಭಿವೃದ್ಧಿಯ ಅಮೃತವನ್ನು ಹಂಚುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಕವಿತೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, ಶ್ರಮಶೀಲ ಮತ್ತು ದೃಢನಿರ್ಧಾರದ ಜನರ ಸುಂದರ ರಾಜ್ಯದೊಂದಿಗಿನ ತಮ್ಮ ಸುದೀರ್ಘ ಸಂಬಂಧವನ್ನು ಸ್ಮರಿಸಿಕೊಂಡರು.
1948 ರಲ್ಲಿ ಅದರ ರಚನೆಯ ಸಮಯದಲ್ಲಿ ಗುಡ್ಡಗಾಡು ರಾಜ್ಯದ ಸವಾಲುಗಳನ್ನು ನೆನಪಿಸಿಕೊಂಡ ಪ್ರಧಾನಿಯವರು, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿದ ಹಿಮಾಚಲ ಪ್ರದೇಶದ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತೋಟಗಾರಿಕೆ, ಹೆಚ್ಚುವರಿ ವಿದ್ಯುತ್, ಸಾಕ್ಷರತಾ ಪ್ರಮಾಣ, ಗ್ರಾಮೀಣ ರಸ್ತೆ ಸಂಪರ್ಕ, ಪ್ರತಿ ಮನೆಗೂ ನೀರು ಮತ್ತು ವಿದ್ಯುಚ್ಛಕ್ತಿಯಲ್ಲಿ ರಾಜ್ಯದ ಸಾಧನೆಗಳನ್ನು ಪ್ರಧಾನಿಯವರು ಶ್ಲಾಘಿಸಿದರು. ಕಳೆದ 7-8 ವರ್ಷಗಳಲ್ಲಿ ಈ ಸಾಧನೆಗಳ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. "ಜೈ ರಾಮ್ ಅವರ ಯುವ ನಾಯಕತ್ವದಲ್ಲಿ, 'ಡಬಲ್ ಎಂಜಿನ್ ಸರ್ಕಾರ' ಗ್ರಾಮೀಣ ರಸ್ತೆಗಳು, ಹೆದ್ದಾರಿ, ರೈಲ್ವೆ ಜಾಲಗಳನ್ನು ವಿಸ್ತರಿಸುವ ಉಪಕ್ರಮವನ್ನು ತೆಗೆದುಕೊಂಡಿದೆ. ಅದರ ಫಲಿತಾಂಶಗಳು ಈಗ ಗೋಚರಿಸುತ್ತಿವೆ. ಸಂಪರ್ಕವು ಉತ್ತಮಗೊಳ್ಳುತ್ತಿರುವುದರಿಂದ, ಹಿಮಾಚಲ ಪ್ರವಾಸೋದ್ಯಮವು ಹೊಸ ಕ್ಷೇತ್ರಗಳು, ಹೊಸ ಪ್ರದೇಶಗಳನ್ನು ಪ್ರವೇಶಿಸುತ್ತಿದೆ "ಎಂದು ಪ್ರಧಾನಿ ಹೇಳಿದರು.
ಪ್ರವಾಸೋದ್ಯಮದ ದಾಪುಗಾಲಿನಿಂದಾಗಿ ಸ್ಥಳೀಯ ಜನರಿಗೆ ಅವಕಾಶಗಳು ಮತ್ತು ಉದ್ಯೋಗದ ಹೊಸ ಹಾದಿಗಳು ತೆರೆಯುತ್ತಿರುವ ಬಗ್ಗೆ ಪ್ರಧಾನಿಯವರು ಒತ್ತಿ ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಪರಿಣಾಮಕಾರಿ ಮತ್ತು ವೇಗದ ಲಸಿಕೆ ನೀಡುವ ಮೂಲಕ ಆರೋಗ್ಯ ವಲಯದ ವಿಶೇಷ ಪ್ರಗತಿಯನ್ನು ಅವರು ಗಮನಿಸಿದರು.
ಹಿಮಾಚಲ ಪ್ರದೇಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕಷ್ಟಪಟ್ಟು ಕೆಲಸ ಮಾಡಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು. ಅಮೃತ ಕಾಲದ ಸಮಯದಲ್ಲಿ, ಪ್ರವಾಸೋದ್ಯಮ, ಉನ್ನತ ಶಿಕ್ಷಣ, ಸಂಶೋಧನೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಸಹಜ ಕೃಷಿ ಕ್ಷೇತ್ರಗಳಲ್ಲಿ ಅಪಾರ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಈ ವರ್ಷದ ಬಜೆಡ್ ನಲ್ಲಿ ಪ್ರಕಟಿಸಿರುವ ರೋಮಾಂಚಕ ಗ್ರಾಮ ಯೋಜನೆ ಹಿಮಾಚಲ ಪ್ರದೇಶಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದರು. ಈ ಉಪಕ್ರಮಗಳಿಗೆ ಸಮೃದ್ಧ ಕಾಡುಗಳು, ಸ್ವಚ್ಛತೆ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರ ಅಗತ್ಯವನ್ನೂ ಪ್ರಧಾನಿಯವರು ಹೇಳಿದರು.
ಮುಖ್ಯಮಂತ್ರಿ ಮತ್ತು ಅವರ ತಂಡ, ವಿಶೇಷವಾಗಿ ಸಾಮಾಜಿಕ ಭದ್ರತೆಯ ಕ್ಷೇತ್ರದಲ್ಲಿ ಕೇಂದ್ರದ ಕಲ್ಯಾಣ ಯೋಜನೆಗಳನ್ನು ವಿಸ್ತರಿಸಿರುವ ಬಗ್ಗೆ ಪ್ರಧಾನಿಯವರು ಉಲ್ಲೇಖಿಸಿದರು. "ಪ್ರಾಮಾಣಿಕ ನಾಯಕತ್ವ, ಶಾಂತಿಯುತ ಪರಿಸರ, ದೇವ - ದೇವತೆಗಳ ಆಶೀರ್ವಾದ ಮತ್ತು ಹಿಮಾಚಲದ ಜನರ ಪರಿಶ್ರಮಕ್ಕೆ ಹೋಲಿಕೆಯಿಲ್ಲ. ಹಿಮಾಚಲವು ತ್ವರಿತ ಬೆಳವಣಿಗೆಗೆ ಅಗತ್ಯವಿರುವ ಎಲ್ಲವನ್ನೂ ಹೊಂದಿದೆ " ಎಂದು ಪ್ರಧಾನಿಯವರು ಸಂದೇಶವನ್ನು ಮುಕ್ತಾಯಗೊಳಿಸಿದರು.
हिमाचल दिवस पर देवभूमि के सभी लोगों को हार्दिक शुभकामनाएं।
— PMO India (@PMOIndia) April 15, 2022
ये बहुत सुखद संयोग है कि देश की आजादी के 75वें वर्ष में, हिमाचल प्रदेश भी अपना 75वां स्थापना दिवस मना रहा है: PM @narendramodi
1948 में जब हिमाचल प्रदेश का गठन हुआ था तब पहाड़ जितनी चुनौतियां सामने थीं।
— PMO India (@PMOIndia) April 15, 2022
छोटा पहाड़ी प्रदेश होने के कारण, मुश्किल परिस्थितियों, चुनौतीपूर्ण भूगोल के चलते संभावनाओं के बजाय आशंकाएं अधिक थीं।
लेकिन हिमाचल के मेहनतकश, ईमानदार, कर्मठ लोगों ने इस चुनौती को अवसरों में बदल दिया: PM
हिमाचल में जितनी संभावनाएं हैं, उनको पूरी तरह से सामने आने लाने के लिए अब हमें तेज़ी से काम करना है।
— PMO India (@PMOIndia) April 15, 2022
आने वाले 25 वर्ष में हिमाचल की स्थापना और देश की आज़ादी के 100 वर्ष पूरे होने वाले हैं।
ये हमारे लिए नए संकल्पों का अमृतकाल है: PM @narendramodi


