ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದೋರ್‌ನಲ್ಲಿ ನಡೆಯುತ್ತಿರುವ  17 ನೇ ಪ್ರವಾಸಿ ಭಾರತೀಯ ದಿವಸ್ (PBD) ಸಂದರ್ಭದಲ್ಲಿ ಇಂದು  ಸುರಿನಾಮ್ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರೊಂದಿಗೆ ಸಭೆ ನಡೆಸಿದರು.  ಸುರಿನಾಮ್ ಅಧ್ಯಕ್ಷರಾದ ಶ್ರಿಉ ಸಂತೋಖಿ ಅವರು 2023 ರ   ಜನವರಿ 7 ರಿಂದ  ಜನವರಿ 14  ರವರೆಗೆ  ಭಾರತದಲ್ಲಿ  ಅಧಿಕೃತ ಭೇಟಿಯಲ್ಲಿದ್ದಾರೆ.ಅಲ್ಲದೇ ಸಂತೋಖಿ ಅವರು 17 ನೇ ಪ್ರವಾಸಿ ಭಾರತೀಯ ದಿವಸ್ (PBD)ನಲ್ಲಿ ಗೌರವ ಅತಿಥಿಯಾಗಿದ್ದಾರೆ.

ಉಭಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರುಗಳು  ಇಂದಿನ  ಸಭೆಯಲ್ಲಿ  ಹೈಡ್ರೋಕಾರ್ಬನ್‌ಗಳು, ರಕ್ಷಣೆ, ಕಡಲ ಭದ್ರತೆ, ಡಿಜಿಟಲ್ ಉಪಕ್ರಮಗಳು ಮತ್ತು ಐಸಿಟಿ ಮತ್ತು ಸಾಮರ್ಥ್ಯ ನಿರ್ಮಾಣ ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು  ನೀಡುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

ಪ್ರಧಾನ ಮಂತ್ರಿಗಳು ಶ್ರೀ ಸಂತೋಖಿ ಅವರೊಂದಿಗೆ  ಭಾರತವು ಸುರಿನಾಮ್‌ನಿಂದ ಪಡೆದ ಸಾಲ ಹಾಗೂ ಪಡೆದ ಆ  ಸಾಲದಿಂದಾದ  ಉಂಟಾಗುವ ಲಾಭಗಳ ಕುರಿತು ಚರ್ಚಿಸಿದರು.ಸಭೆಯಲ್ಲಿ ಸುರಿನಾಮ್ ಅಧ್ಯಕ್ಷರಾದ ಸಂತೋಖಿ ಅವರು,  ಸುರಿನಾಮ್‌ನ ಸಾಲವನ್ನು ಭಾರತವು ಪುನರ್ರಚಿಸುವುದನ್ನು ಮೆಚ್ಚಿರುವುದಾಗಿ ಸಭೆಯಲ್ಲಿ ತಿಳಿಸಿದರು.

ಸುರಿನಾಮ್ ರಾಷ್ಟ್ರಪತಿ ಸಂತೋಖಿ ಅವರು ಭಾರತದ ರಾಷ್ಟ್ರಪತಿ  ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚಿಸಲಿದ್ದಾರೆ. ಅಲ್ಲದೇ 10 ಜನವರಿ 2023 ರಂದು ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್‌ ಸಮಾರೋಪ ಸಮಾರಂಭ  ಹಾಗೂ  ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಸಂತೋಖಿ  ಅವರು ಇಂದೋರ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿಯೂ ಭಾಗವಹಿಸಲಿದ್ದಾರೆ.  ಇದಾದ ಬಳಿಕ ಅವರು ಅಹಮದಾಬಾದ್ ಮತ್ತು ನವದೆಹಲಿಗೆ ತೆರಳಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
With HPV vaccine rollout, AIIMS oncologist says it’s the beginning of the end for cervical cancer in India

Media Coverage

With HPV vaccine rollout, AIIMS oncologist says it’s the beginning of the end for cervical cancer in India
NM on the go

Nm on the go

Always be the first to hear from the PM. Get the App Now!
...
Prime Minister congratulates Jammu and Kashmir team on their first-ever Ranji Trophy victory
February 28, 2026

The Prime Minister has congratulated the Jammu and Kashmir team for their first-ever Ranji Trophy win.

The Prime Minister stated that this historic triumph reflects the remarkable grit, discipline, and passion of the team. Highlighting that it is a proud moment for the people of Jammu and Kashmir, he noted that the victory underscores the growing sporting passion and talent in the region.

The Prime Minister expressed hope that this feat will inspire many young athletes to dream big and play more.

The Prime Minister shared on X post;

"Congratulations to the Jammu and Kashmir team for their first ever Ranji Trophy win! This historic triumph reflects remarkable grit, discipline and passion of the team. It is a proud moment for the people of Jammu and Kashmir and it highlights the growing sporting passion and talent there. May this feat inspire many young athletes to dream big and play more."