ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಗ್ರೂಪ್ ಸಂಸ್ಥೆಯ ಸಿಇಒ ಡಾ. ಸುಲ್ತಾನ್ ಅಲ್ ಜಾಬರ್ ಅವರನ್ನು ಭೇಟಿಯಾದರು.

ಯು.ಎ.ಇ.ಯ ಅಧ್ಯಕ್ಷತೆಯಡಿಯಲ್ಲಿ ನಡೆಯಲಿರುವ ಯು.ಎನ್.ಎಫ್.ಸಿ.ಸಿ.ಸಿ.ಯ ಮುಂಬರುವ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಕುರಿತು ಚರ್ಚೆಗಳು ನಡೆದವು. ಈ ಮಹತ್ವದ ಸಭೆಗೆ ಯು.ಎ.ಇ. ನಡೆಸಿರುವ ಕಾರ್ಯವಿಧಾನಗಳ ಕುರಿತು ಡಾ. ಜಾಬರ್ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ಅಧ್ಯಕ್ಷತೆ ಹೊಂದಿರುವ ಯು.ಎ.ಇ.ಗೆ ಭಾರತದ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ಅವರು ತಿಳಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಅಂತರರಾಷ್ಟ್ರೀಯ ಸಿರಿಧಾನ್ಯ(ರಾಗಿ) ವರ್ಷ ಮತ್ತು ಪರಿಸರಕ್ಕಾಗಿ ಮಿಷನ್ ಜೀವನಶೈಲಿ (ಲೈಫ್) ಸೇರಿದಂತೆ ಹವಾಮಾನ ಬದಲಾವಣೆಯನ್ನು ಸಕಾರಾತ್ಮಕವಾಗಿ ಪರಿಹರಿಸಲು ಭಾರತವು ಮಾಡಿರುವ  ಪ್ರಯತ್ನಗಳು ಮತ್ತು ಮಾಡುತ್ತಿರುವ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು.

ಚರ್ಚೆಗಳು ಭಾರತ ಮತ್ತು ಯು.ಎ.ಇ. ನಡುವಿನ ಇಂಧನ ಸಹಕಾರವನ್ನು ಕೂಡಾ ಒಳಗೊಂಡಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Teachers: The artists of education

Media Coverage

Teachers: The artists of education
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಸೆಪ್ಟೆಂಬರ್ 2026
September 07, 2026

Vasudhaiva Kutumbakam in Action: Tech Hub, Border Villages, Global Leadership by PM Modi